ಕ್ವಿಜ್ ರಾಜ್ಯ , ಕೇಂದ್ರ ಸರ್ಕಾರ ಮತ್ತು ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯಕವಾಗಿವೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಏಪ್ರಿಲ್-3, 4
Question 1 |
1. ವಿಶ್ವ ಸ್ವಲೀನತೆ ದಿನ (World Autism Day)ವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
ಏಪ್ರಿಲ್ 1 | |
ಏಪ್ರಿಲ್ 2 | |
ಏಪ್ರಿಲ್ 3 | |
ಏಪ್ರಿಲ್ 4 |
Question 1 Explanation:
ಏಪ್ರಿಲ್ 2:
ವಿಶ್ವ ಸ್ವಲೀನತೆ ದಿನವನ್ನು ಪ್ರತಿ ವರ್ಷ ಏಪ್ರಿಲ್ 2 ರಂದು ಆಚರಿಸಲಾಗುತ್ತಿದೆ. ಡಿಸೆಂಬರ್ 18, 2007 ರಲ್ಲಿ ವಿಶ್ವಸಂಸ್ಥೆ ಏಪ್ರಿಲ್ 2 ಅನ್ನು ವಿಶ್ವ ಸ್ವಲೀನತೆ ದಿನವೆಂದು ಆಚರಿಸಲು ಮೊದಲ ಬಾರಿಗೆ ನಿರ್ಣಯಿಸುವ ಮೂಲಕ ಸ್ವಲೀನತೆ ಕಾಯಲೆ ಬಗ್ಗೆ ವಿಶ್ವವ್ಯಾಪ್ತಿ ಅರಿವು ಮೂಡಿಸುವ ಧ್ಯೇಯವನ್ನು ಹೊಂದಿದೆ.
Question 2 |
2. ದೇಶದ ಮೊದಲ ಉದ್ದೇಶಿತ ಬುಲೆಟ್ ರೈಲು ಈ ಯಾವ ಎರಡು ನಗರಗಳ ನಡುವೆ ಸಂಚಾರ ಮಾಡಲಿದೆ?
ಮುಂಬೈ-ಅಹಮದಬಾದ್ | |
ಮುಂಬೈ-ಪುಣೆ | |
ದೆಹಲಿ-ಕೊಲ್ಕತ್ತ | |
ಕೊಲ್ಕತ್ತ-ರಾಂಚಿ |
Question 2 Explanation:
ಮುಂಬೈ-ಅಹಮದಬಾದ್:
ಭಾರತದ ಮೊದಲ ಬುಲೆಟ್ ರೈಲು ಮುಂಬೈ-ಅಹಮದಬಾದ್ ನಡುವೆ ಸಂಚರಿಸಲಿದೆ. ಬುಲೆಟ್ ರೈಲು ಯೋಜನೆಯ ಅಂದಾಜು ಮೊತ್ತ ಸುಮಾರು ರೂ 97,386 ಕೋಟಿ ಆಗಿದ್ದು, ಇದರಲ್ಲಿ ಯೋಜನೆಯ ಶೇ 81% ರಷ್ಟು ಮೊತ್ತವನ್ನು ಜಪಾನ್ ನಿಂದ ಭಾರತ ಸಾಲವಾಗಿ ಪಡೆಯಲಿದೆ. ಮುಂಬೈ-ಅಹಮದಬಾದ್ ನಡುವೆ ಇರುವ 508 ಕಿ.ಮೀ ಅಂತರವನ್ನು ಈ ರೈಲು ಕೇವಲ ಎರಡು ಗಂಟೆ ಅವಧಿಯಲ್ಲಿ ಕ್ರಮಿಸಲಿದೆ. ಸದ್ಯ ಈ ಎರಡು ನಗರಗಳ ನಡುವೆ ಸಂಚರಿಸುತ್ತಿರುವ ಡ್ಯುರಂಟ್ ರೈಲು 7 ಗಂಟೆ ಅವಧಿಯಲ್ಲಿ ಮುಂಬೈ-ಅಹಮದಬಾದ್ ನಡುವೆ ಸಂಚರಿಸುತ್ತಿದೆ.
Question 3 |
3. ವಿಶ್ವದಲ್ಲೇ ಮೊದಲೆನಿಸಿರುವ “ಬಿಳಿ ಹುಲಿ ಸಫಾರಿ (White Tiger Safari)” ಅನ್ನು ಯಾವ ರಾಜ್ಯದಲ್ಲಿ ತೆರೆಯಲಾಗಿದೆ?
ಕರ್ನಾಟಕ | |
ತಮಿಳುನಾಡು | |
ಮಧ್ಯಪ್ರದೇಶ | |
ಕೇರಳ |
Question 3 Explanation:
ಮಧ್ಯಪ್ರದೇಶ:
ವಿಶ್ವದ ಮೊದಲ ಬಿಳಿ ಹುಲಿ ಸಫಾರಿ ಯನ್ನು ಮಧ್ಯಪ್ರದೇಶದ ಸಾತ್ನ ಜಿಲ್ಲೆಯ ಮುಕುಂದಪುರದಲ್ಲಿ ಇತ್ತೀಚೆಗೆ ತೆರೆಯಲಾಯಿತು. ಸುಮಾರು ರೂ 50 ಕೋಟಿ ವೆಚ್ಚದಲ್ಲಿ ಹಾಗೂ 25 ಹೆಕ್ಟೇರ್ ವಿಸ್ತೀರ್ಣದಲ್ಲಿ ಈ ಸಫಾರಿಯನ್ನು ಅಭಿವೃದ್ದಿಪಡಿಸಲಾಗಿದೆ. ಈ ಸಫಾರಿಯಲ್ಲಿ ಮೂರು ಬಿಳಿ ಹುಲಿಗಳನ್ನು ಮತ್ತು ಎರಡು ಬೆಂಗಾಳ ಹುಲಿಗಳು ಸಾರ್ವಜನಿಕರಿಗೆ ಮುಕ್ತವಾಗಿದ್ದು, ನೋಡಿ ಆನಂದಿಸಬಹುದಾಗಿದೆ.
Question 4 |
4. ಈ ಕೆಳಗಿನ ಯಾರು ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಅಧ್ಯಕ್ಷರಾಗಲು ಅರ್ಹರಾಗಿದ್ದಾರೆ?
ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರು | |
ನಿವೃತ್ತ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು | |
ನಿವೃತ್ತ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಾಧೀಶರು | |
ಹಾಲಿ ಸುಪ್ರೀಂಕೋರ್ಟ್ ಮುಖ್ಯನ್ಯಾಯಾಧೀಶರು |
Question 4 Explanation:
ನಿವೃತ್ತ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಾಧೀಶರು:
ರಾಷ್ಟ್ರೀಯ ಮಾನವ ಹಕ್ಕು ಆಯೋಗ ಶಾಸನಬದ್ದ ಸಂಸ್ಥೆಯಾಗಿದ್ದು, 12 ನೇ ಅಕ್ಟೋಬರ್ 1993 ರಲ್ಲಿ ಸ್ಥಾಪಿಸಲಾಗಿದೆ. ಆಯೋಗದ ಅಧ್ಯಕ್ಷರು ಖಡ್ಡಾಯವಾಗಿ ನಿವೃತ್ತ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಾಧೀಶರಾಗಿದ್ದು, ಪ್ರಸ್ತುತ ಎಚ್, ಎಲ್, ದತ್ತು ರವರು ಆಯೋಗದ ಅಧ್ಯಕ್ಷರಾಗಿದ್ದಾರೆ. ಉಳಿದಂತೆ ಓಬ್ಬ ನಿವೃತ್ತ ಅಥವಾ ಹಾಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರು, ಓಬ್ಬ ನಿವೃತ್ತ ಅಥವಾ ಹಾಲಿ ಹೈಕೋರ್ಟ್ ನ ಮುಖ್ಯನ್ಯಾಯಾಧೀಶರು ಹಾಗೂ ಮಾನವ ಹಕ್ಕು ಕ್ಷೇತ್ರದಲ್ಲಿ ನಿಪುಣತೆಹೊಂದಿರುವ ಇಬ್ಬರನ್ನು ಆಯೋಗದ ಸದಸ್ಯರಾಗಿರುತ್ತಾರೆ.
Question 5 |
5. ಸೌದಿ ಅರೇಬಿಯಾದ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ “ದಿ ಕಿಂಗ್ ಅಬ್ದುಲಝೀಜ್ ಸಶ್” ಅನ್ನು ಇತ್ತೀಚೆಗೆ ಯಾರಿಗೆ ನೀಡಲಾಯಿತು
ನರೇಂದ್ರ ಮೋದಿ | |
ಬರಾಕ್ ಓಬಾಮ | |
ಮನಮೋಹನ್ ಸಿಂಗ್ | |
ಸೋನಿಯಾ ಗಾಂಧಿ |
Question 5 Explanation:
ನರೇಂದ್ರ ಮೋದಿ:
ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರಿಗೆ ಸೌದಿ ಅರೇಬಿಯಾ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ “ದಿ ಕಿಂಗ್ ಅಬ್ದುಲಝೀಜ್ ಸಶ್” ಅನ್ನು ನೀಡಿ ಗೌರವಿಸಲಾಯಿತು. ಆಧುನಿಕ ಸೌದಿ ರಾಜ್ಯದ ಸಂಸ್ಥಾಪಕ ಅಬ್ದುಲಝೀಜ್ ಅಲ್ ಸಾದ್ ಸ್ಮರಣಾರ್ಥ ಸ್ಥಾಪಿಸಿರುವ ಈ ಪ್ರಶಸ್ತಿಯನ್ನು ಸೌದಿ ದೊರೆ ಸಲ್ಮಾನ್ ಬಿನ್ ಅಬ್ದುಲಝೀಜ್ ರವರು ಮೋದಿರವರಿಗೆ ನೀಡಿ ಗೌರವಿಸಿದರು.
Question 6 |
6. ಯುನೈಟೆಡ್ ನೇಷನ್ಸ್ ಇಂಡಸ್ಟ್ರೀಯಲ್ ಡೆವಲಪ್ ಮೆಂಟ್ ಆರ್ಗನೈಸಷನ್ (UNIDO) ವರದಿ ಪ್ರಕಾರ ಯಾವ ದೇಶ ವಿಶ್ವದ ಅತಿ ದೊಡ್ಡ ಉತ್ಪಾದನ ರಾಷ್ಟ್ರ ಎನಿಸಿದೆ?
ಭಾರತ | |
ಚೀನಾ | |
ಕೆನಡಾ | |
ಜಪಾನ್ |
Question 6 Explanation:
ಚೀನಾ:
ಯುನೈಟೆಡ್ ನೇಷನ್ಸ್ ಇಂಡಸ್ಟ್ರೀಯಲ್ ಡೆವಲಪ್ ಮೆಂಟ್ ಆರ್ಗನೈಸಷನ್ (UNIDO) ಇತ್ತೀಚಗೆ ಬಿಡುಗಡೆ ಮಾಡಿದ ವರದಿ ಪ್ರಕಾರ ಚೀನಾ ವಿಶ್ವದ ಅತಿ ದೊಡ್ಡ ಉತ್ಪಾದನ ರಾಷ್ಟ್ರವಾಗಿ ಹೊರಹೊಮ್ಮಿದೆ. ಭಾರತ ಈ ಪಟ್ಟಿಯಲ್ಲಿ 6 ನೇ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಪಟ್ಟಿಯಲ್ಲಿ ಚೀನಾ ನಂತರ ಅಮೇರಿಕಾ, ಜಪಾನ್, ಜರ್ಮನಿ ಮತ್ತು ಕೊರಿಯಾ ಟಾಪ್ ಐದು ಸ್ಥಾನದಲ್ಲಿವೆ.
Question 7 |
7. ಭಾರತ ಸಂವಿಧಾನದ ಯಾವ ತಿದ್ದುಪಡಿ ಹೈದ್ರಾಬಾದ್-ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವುದಕ್ಕೆ ಸಂಬಂಧಿಸಿರುವುದಾಗಿದೆ?
119 ನೇ ತಿದ್ದುಪಡಿ | |
118 ನೇ ತಿದ್ದುಪಡಿ | |
120 ನೇ ತಿದ್ದುಪಡಿ | |
121 ನೇ ತಿದ್ದುಪಡಿ |
Question 7 Explanation:
118 ನೇ ತಿದ್ದುಪಡಿ:
ಹೈದ್ರಾಬಾದ್-ಕರ್ನಾಟಕ ಪ್ರದೇಶದ ಆರು ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ನೀಡುವ ಅನುಚ್ಛೇದ 371 (ಜೆ) ಒಳಗೊಂಡ ಸಂವಿಧಾನದ 118ನೇ ತಿದ್ದುಪಡಿಗೆ ಲೋಕಸಭೆ ಡಿಸೆಂಬರ್ 18, 2012 ರಂದು ಅನುಮೋದನೆ ನೀಡಿತು. ಮರುದಿನ ಅಂದರೆ ಡಿಸೆಂಬರ್ 19, 2012 ರಲ್ಲಿ ರಾಜ್ಯಸಭೆ ಅನುಮೋದನೆ ನೀಡಿತು.
Question 8 |
8. ಯಾವ ವರ್ಷದಿಂದ ಭಾರತ ಸರ್ಕಾರ ಪಂಚವಾರ್ಷಿಕ ಕೃಷಿ ಗಣತಿಯನ್ನು ಕೈಗೊಳ್ಳಲಾಗುತ್ತಿದೆ?
1947-48 | |
1960-61 | |
1970-71 | |
1980-81 |
Question 8 Explanation:
1970-71:
1970-71 ರಿಂದ ಭಾರತ ಸರ್ಕಾರ ಐದು ವರ್ಷಕ್ಕೊಮ್ಮೆ ಕೃಷಿ ಗಣತಿಯನ್ನು ಕೈಗೊಳ್ಳಲಾಗುತ್ತಿದೆ. ಕೃಷಿ ತಗುಲುವ ವೆಚ್ಚವನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರ ನೀಡುತ್ತಿದ್ದು, ಗಣತಿಯನ್ನು ನಡೆಸುವ ಹೊಣೆ ರಾಜ್ಯ ಸರ್ಕಾರದಗಿರುತ್ತದೆ.
Question 9 |
9. 2016 ರ ಮಿಯಾಮಿ ಓಪನ್ ಸಿಂಗಲ್ಸ್ ನಲ್ಲಿ ಪ್ರಶಸ್ತಿ ಗೆದ್ದ ಪುರುಷ ಮತ್ತು ಮಹಿಳಾ ಆಟಗಾರರು ಕ್ರಮವಾಗಿ_____?
ನೊವಾಕ್ ಜೊಕೊವಿಕ್ ಮತ್ತು ವಿಕ್ಟೊರಿಕ ಅಝರೆಕಾ | |
ರಫೆಲ್ ನಡಲ್ ಮತ್ತು ಸ್ವೆಟಲನಾ ಕುಜ್ಞೆಸ್ಟೊವ | |
ಡೆವಿಡ್ ಫೆರರ್ ಮತ್ತು ವಿಕ್ಟೊರಿಕ ಅಝರೆಕಾ | |
ರಫೆಲ್ ನಡಲ್ ಮತ್ತು ಮಾರ್ಟಿನ ಹಿಂಗೀಸ್ |
Question 9 Explanation:
ನೊವಾಕ್ ಜೊಕೊವಿಕ್ ಮತ್ತು ವಿಕ್ಟೊರಿಕ ಅಝರೆಕಾ:
ನೊವಾಕ್ ಜೊಕೊವಿಕ್ ಮಿಯಾಮಿ ಓಪನ್ ಸಿಂಗಲ್ಸ್ ನಲ್ಲಿ ಜಪಾನ್ ಕೀ ನಿಷಿಕೊರಿ ಅವರನ್ನು 6-3, 6-3 ರಲ್ಲಿ ಮಣಿಸುವ ಮೂಲಕ ವಿಜೇತರಾದರು. ಇನ್ನು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಬೆಲಾರಸ್ ನ ವಿಕ್ಟೋರಿಯಾ ಅಝರೆಕಾ ರಷ್ಯಾದ ಸ್ವೆಟಲನಾ ಕುಜ್ಞೆಸ್ಟೊವ ಅವರನ್ನು ಸೋಲಿಸಿ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡರು.
Question 10 |
10. ದೇಶದ ಮೊದಲ ಆಧಾರ್ ಕಾರ್ಡ್ ಆಧಾರಿತ ಎಟಿಎಮ್ ಅನ್ನು ಈ ಕೆಳಗಿನ ಯಾವ ಬ್ಯಾಂಕ್ ಇತ್ತೀಚೆಗೆ ಚಾಲನೆ ನೀಡಿತು?
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು | |
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ | |
ಡಿಸಿಬಿ ಬ್ಯಾಂಕ್ | |
ದೇನಾ ಬ್ಯಾಂಕ್ |
Question 10 Explanation:
ಡಿಸಿಬಿ ಬ್ಯಾಂಕ್:
ದೇಶದ ಮೊದಲ ಆಧಾರ್ ಕಾರ್ಡ್ ಆಧಾರಿತ ಎಟಿಎಮ್ ಸೇವೆಯನ್ನು ಡಿಸಿಬಿ ಬ್ಯಾಂಕ್ ಅನಾವರಣಗೊಳಿಸಿತು. ಎಟಿಎಮ್/ಡೆಬಿಟ್ ಕಾರ್ಡ್ ಬಳಕೆ ಹೊರತಾಗಿ ಈ ಎಟಿಎಮ್ ಆಧಾರ್ ನಂಬರ್ ಮತ್ತು ಆಧಾರ್ ಬೆರಳಚ್ಚನ್ನು ಬಳಸಿ ಹಣ ಪಡೆಯಬಹುದಾಗಿದೆ. ಈ ಸೇವೆಗೆ ಯಾವುದೇ ಕಾರ್ಡ್ ಅಥವಾ ಪಿನ್ ಬಳಕೆಯ ಅಗತ್ಯವಿಲ್ಲ.
There are 10 questions to complete.