ಕ್ವಿಜ್ ರಾಜ್ಯ , ಕೇಂದ್ರ ಸರ್ಕಾರ ಮತ್ತು ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯಕವಾಗಿವೆ.

ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -3

Question 1
1. ರಾಷ್ಟ್ರದ ಆದಾಯ ಮತ್ತು ತಲಾದಾಯ ಹೋಲಿಕೆಯಲ್ಲಿ ಕರ್ನಾಟಕ ರಾಜ್ಯದ ಆದಾಯ ಮತ್ತು ತಲಾದಾಯದಲ್ಲಿ ಕ್ರಮವಾಗಿ ಎಷ್ಟನೇ ಸ್ಥಾನದಲ್ಲಿದೆ?
A
ನಾಲ್ಕು ಮತ್ತು ಏಳು
B
ಏಳು ಮತ್ತು ನಾಲ್ಕು
C
ನಾಲ್ಕು ಮತ್ತು ಆರು
D
ಐದು ಮತ್ತು ಎಂಟು
Question 1 Explanation: 
ನಾಲ್ಕು ಮತ್ತು ಆರು: ರಾಷ್ಟ್ರದ ಆದಾಯ ಮತ್ತು ತಲಾದಾಯ ಹೋಲಿಕೆಯಲ್ಲಿ ರಾಜ್ಯ ಕ್ರಮವಾಗಿ ನಾಲ್ಕು ಮತ್ತು ಆರನೇ ಸ್ಥಾನದಲ್ಲಿದೆ.
Question 2
2. 2011 ರ ಜನಗಣತಿ ಪ್ರಕಾರ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವುದು ಸರಿಯಾಗಿ ಹೊಂದಾಣಿಕೆ ಆಗಿಲ್ಲ?
A
ಸಾಕ್ಷರತಾ ಪ್ರಮಾಣ – 95.40%
B
ಲಿಂಗ ಅನುಪಾತ – 973
C
ನಗರ ಜನಸಂಖ್ಯೆ ಪ್ರಮಾಣ – 40%
D
ಸರಾಸರಿ ಹಿಡುವಳಿ ವಿಸ್ತೀರ್ಣ – 1.55 (ಹೆಕ್ಟೇರ್)
Question 2 Explanation: 
ನಗರ ಜನಸಂಖ್ಯೆ ಪ್ರಮಾಣ – 40% : 2011 ರ ಜನಗಣತಿ ಪ್ರಕಾರ ಕರ್ನಾಟಕ ರಾಜ್ಯದ ನಗರ ಜನಸಂಖ್ಯೆಯೂ ರಾಜ್ಯದ ಓಟ್ಟು ಜನಸಂಖ್ಯೆಯ ಶೇ 38.7 ರಷ್ಟಿದೆ ಹಾಗೂ ಗ್ರಾಮೀಣ ಭಾಗದ ಜನಸಂಖ್ಯೆ ಶೇ 61.30 ರಷ್ಟಿದೆ.
Question 3
3. ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ಯಾವ ವಲಯಕ ಕೊಡುಗೆ ಅತ್ಯಂತ ಹೆಚ್ಚಾಗಿದೆ?
A
ಕೃಷಿ ವಲಯ
B
ಸೇವಾ ವಲಯ
C
ಕೈಗಾರಿಕ ವಲಯ
D
ತಯಾರಿಕ ವಲಯ
Question 3 Explanation: 
ಸೇವಾ ವಲಯ: ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ಸೇವಾ ವಲಯದ ಕೊಡುಗೆ ಶೇ 64% ರಷ್ಟಿದ್ದು ಅತ್ಯಂತ ಹೆಚ್ಚು ಕೊಡುಗೆ ನೀಡುವ ವಲಯವಾಗಿದೆ. ನಂತರದ ಸ್ಥಾನದಲ್ಲಿ ಕೈಗಾರಿಕೆ ಮತ್ತು ಕೃಷಿ ವಲಯ ಗುರುತಿಸಿಕೊಂಡಿವೆ.
Question 4
4. ಈ ಕೆಳಗಿನ ಯಾವ ಹೇಳಿಕೆ ರಾಜ್ಯಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಯಲ್ಲ?
A
ವಿಸ್ತೀರ್ಣದಲ್ಲಿ ಕರ್ನಾಟಕವೂ ದೇಶದಲ್ಲಿ ಎಂಟನೇ ಅತಿ ದೊಡ್ಡ ರಾಜ್ಯ
B
2001-11 ರ ದಶಕದಲ್ಲಿ ರಾಜ್ಯದ ಜನಸಂಖ್ಯೆ ಶೇ 15.6 ರಷ್ಟು ಬೆಳೆದಿದೆ
C
2001 ರ ಜನಗಣತಿಗೆ ಹೋಲಿಸಿದಾಗ 2011 ರಲ್ಲಿ ರಾಜ್ಯದ ಮಕ್ಕಳ ಲಿಂಗಾನುಪಾತದಲ್ಲಿ ಇಳಿಕೆಯಾಗಿದೆ
D
ಮೇಲಿನ ಎಲ್ಲಾವೂ ಸರಿಯಾಗಿವೆ
Question 4 Explanation: 
ಮೇಲಿನ ಎಲ್ಲಾವೂ ಸರಿಯಾಗಿವೆ
Question 5
5. ರಾಜ್ಯದ ಓಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಅತಿ ಹೆಚ್ಚು ವಿದ್ಯುತ್ ಬಳಕೆಯಾಗುತ್ತಿರುವ ಕ್ಷೇತ್ರ ಯಾವುದು?
A
ಗೃಹ ಬಳಕೆ
B
ಕೈಗಾರಿಕೆ
C
ಕೃಷಿ
D
ಮೇಲಿನ ಯಾವುದು ಇಲ್ಲ
Question 5 Explanation: 
ಕೃಷಿ: 2014-15 ನೇ ಸಾಲಿನ ಅಂತ್ಯಕ್ಕೆ ರಾಜ್ಯದ ಓಟ್ಟು ವಿದ್ಯುತ್ ಉತ್ಪಾದನೆ 62035 ದಶಲಕ್ಷ ಯೂನಿಟ್ ಗಳು ಹಾಗೂ ಓಟ್ಟು ಬಳಕೆ 59760 ದಶಲಕ್ಷ ಯೂನಿಟ್. ಇದರಲ್ಲಿ ಕೃಷಿ ಕ್ಷೇತ್ರ 17872 ದಶಲಕ್ಷ ಯೂನಿಟ್ ಬಳಸುವ ಮೂಲಕ ಅತಿ ಹೆಚ್ಚು ವಿದ್ಯುತ್ ಬಳಸುವ ಕ್ಷೇತ್ರವೆನಿಸಿದೆ ನಂತರದಲ್ಲಿ ಗೃಹ ಬಳಕೆ ಮತ್ತು ಕೈಗಾರಿಕೆ.
Question 6
6. ಯಾವ ಜಿಲ್ಲೆ ರಾಜ್ಯದಲ್ಲಿ ಅತಿ ಕಡಿಮೆ ನಗರೀಕರಣಗೊಳ್ಳುತ್ತಿರುವ ಜಿಲ್ಲೆಯಾಗಿದೆ?
A
ಕೊಡಗು
B
ಕೊಪ್ಪಳ
C
ಮಂಡ್ಯ
D
ಚಾಮರಾಜನಗರ
Question 6 Explanation: 
ಕೊಡಗು: ಕೊಡಗು ರಾಜ್ಯದಲ್ಲಿ ಅತಿ ಕಡಿಮೆ ನಗರೀಕಗೊಳ್ಳುತ್ತಿರುವ ಜಿಲ್ಲೆಯಾಗಿದೆ. ಕೊಡಗಿನಲ್ಲಿ ಶೇ 14.61% ರಷ್ಟು ಜನಸಂಖ್ಯೆ ಮಾತ್ರ ನಗರದಲ್ಲಿ ವಾಸಿಸುತ್ತಿದ್ದಾರೆ. ಕೊಡಗಿನ ನಂತರ ಕಡಿಮೆ ನಗರೀಕರಣಗೊಳ್ಳುತ್ತಿರುವ ಜಿಲ್ಲೆಗಳೆಂದರೆ ಕೊಪ್ಪಳ (ಶೇ 16.81%), ಮಂಡ್ಯ (ಶೇ 17.08%) ಹಾಗೂ ಚಾಮರಾಜನಗರ (ಶೇ.17.14%).
Question 7
7. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ i) ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ದಿ ಪ್ರಾಧಿಕಾರವು (BMRD) ಒಂದು ಸ್ವಾಯುತ್ತ ಸಂಸ್ಥೆ ii) ಇದನ್ನು ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ದಿ ಪ್ರಾಧಿಕಾರ ಕಾಯ್ದೆ 1987 ರ ಪ್ರಕಾರ ರಚಿಸಲಾಗಿದೆ ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
A
ಒಂದು ಮಾತ್ರ
B
ಎರಡು ಮಾತ್ರ
C
ಎರಡು ಸರಿ
D
ಎರಡು ತಪ್ಪು
Question 7 Explanation: 
ಒಂದು ಮಾತ್ರ: ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ದಿ ಪ್ರಾಧಿಕಾರವು (BMRD) ಒಂದು ಸ್ವಾಯುತ್ತ ಸಂಸ್ಥೆಯಾಗಿದೆ. ಇದನ್ನು ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ದಿ ಪ್ರಾಧಿಕಾರ ಕಾಯ್ದೆ 1985 ರ ಪ್ರಕಾರ ರಚಿಸಲಾಗಿದೆ.
Question 8
8. 2014-15 ರ ಅಂತ್ಯಕ್ಕೆ ಕರ್ನಾಟಕದಲ್ಲಿ ಶಿಶು ಮರಣ ಪ್ರಮಾಣ ಎಷ್ಟಿದೆ?
A
35
B
32
C
40
D
48
Question 8 Explanation: 
32 : ರಾಜ್ಯದಲ್ಲಿ 2014-15 ರ ಅಂತ್ಯಕ್ಕೆ ಶಿಶು ಮರಣ ಪ್ರಮಾಣ ಪ್ರತಿ ಸಾವಿರ ಜನನಗಳಿಗೆ 32 ರಷ್ಟಿದೆ.
Question 9
9. ಈ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ? i) ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಕರ್ನಾಟಕದ ಮೊದಲ ಹುಲಿ ಸಂರಕ್ಷಿತ ತಾಣ ii) ಪ್ರಸ್ತುತ ಕರ್ನಾಟಕದಲ್ಲಿ ಐದು ಹುಲಿ ಸಂರಕ್ಷಿತ ತಾಣಗಳಿವೆ iii) ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A
I & ii
B
ii & iii
C
iii ಮಾತ್ರ
D
ಎಲ್ಲವೂ ಸರಿಯಾಗಿವೆ
Question 9 Explanation: 
ii & iii: ಬಂಡೀಪುರ ರಾಷ್ಟ್ರೀಯ ಉದ್ಯಾನವನ ಕರ್ನಾಟಕದ ಮೊದಲ ಹುಲಿ ಸಂರಕ್ಷಿತ ತಾಣವಾಗಿದೆ. 1973 ರಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವನ್ನು ಹುಲಿ ಸಂರಕ್ಷಿತ ತಾಣವೆಂದು ಘೋಷಿಸಲಾಯಿತು. ಪ್ರಸ್ತುತ ಕರ್ನಾಟಕದಲ್ಲಿ ಐದು ಹುಲಿ ಸಂರಕ್ಷಿತ ತಾಣಗಳಿವೆ. ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ.
Question 10
10. “ಪಂಚಮಿತ್ರ” ಮತ್ತು “ಪಂಚತಂತ್ರ” ವೆಬ್ ತಾಣವು ರಾಜ್ಯ ಸರ್ಕಾರದ ಯಾವ ಇಲಾಖೆಗೆ ಸಂಬಂಧಿಸಿದಾಗಿದೆ?
A
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ
B
ಕಂದಾಯ ಇಲಾಖೆ
C
ಮಹಿಳಾ ಮತ್ತು ಶಿಶು ಕಲಾಣ್ಯ ಇಲಾಖೆ
D
ಸಮಾಜ ಕಲ್ಯಾಣ ಇಲಾಖೆ
Question 10 Explanation: 
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ: ಪಂಚತಂತ್ರ ಮತ್ತು ಪಂಚಮಿತ್ರ ವೆಬ್ ತಾಣವು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದಾಗಿದ್ದು, ಈ ವೆಬ್ ತಾಣದಲ್ಲಿ ರಾಜ್ಯದ ಎಲ್ಲಾ ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿಗಳ ಸಂಪೂರ್ಣ ವಿವರ, ಯೋಜನೆಗಳ ವಿವರ, ಅಧಿಕಾರಿಗಳ ವಿವರ ಒಳಗೊಂಡಿದೆ.
There are 10 questions to complete.