ಕ್ವಿಜ್ ರಾಜ್ಯ , ಕೇಂದ್ರ ಸರ್ಕಾರ ಮತ್ತು ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯಕವಾಗಿವೆ.
ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -4
Question 1 |
1. 2015-16 ನೇ ಸಾಲಿನಲ್ಲಿ ಕರ್ನಾಟಕದ ತಲಾದಾಯ ಎಷ್ಟು?
142500 | |
135250 | |
130897 | |
145300 |
Question 1 Explanation:
130897:
ಕರ್ನಾಟಕ ರಾಜ್ಯದ ತಲಾದಾಯ 2015-16 ನೇ ಸಾಲಿನಲ್ಲಿ 130897 ಇದ್ದು, ರಾಜ್ಯವು ತಲಾದಾಯದಲ್ಲಿ ಆರನೇ ಸ್ಥಾನವನ್ನು ಹೊಂದಿದೆ.
Question 2 |
2. ಈ ಕೆಳಗಿನ ಯಾವ ಮೂರು ಜಿಲ್ಲೆಗಳು ರಾಜ್ಯದಲ್ಲಿ ಕ್ರಮವಾಗಿ ಅತಿ ಹೆಚ್ಚು ನಗರೀಕರಣಗೊಳ್ಳುತ್ತಿರುವ ಜಿಲ್ಲೆಗಳಾಗಿವೆ?
ಬೆಂಗಳೂರು, ಧಾರವಾಡ, ಗುಲ್ಬರ್ಗಾ | |
ಬೆಂಗಳೂರು, ಮೈಸೂರು, ಧಾರವಾಡ | |
ಬೆಂಗಳೂರು, ಧಾರವಾಡ, ದಕ್ಷಿಣ ಕನ್ನಡ | |
ಬೆಂಗಳೂರು, ತುಮಕೂರು, ಮೈಸೂರು |
Question 2 Explanation:
ಬೆಂಗಳೂರು, ಧಾರವಾಡ, ದಕ್ಷಿಣ ಕನ್ನಡ:
ಬೆಂಗಳೂರು, ಧಾರವಾಡ ಮತ್ತು ದಕ್ಷಿಣ ಕನ್ನಡ ರಾಜ್ಯದಲ್ಲಿ ಅತಿ ಹೆಚ್ಚು ನಗರೀಕರಣವಾಗಿರುವ ಮೂರು ಜಿಲ್ಲೆಗಳು. ಬೆಂಗಳೂರಿನಲ್ಲಿ ಶೇ 90.94 ರಷ್ಟು ಜನರು ನಗರದಲ್ಲಿ ವಾಸಿಸುವ ಮೂಲಕ ರಾಜ್ಯದಲ್ಲಿ ಅತಿ ಹೆಚ್ಚು ನಗರೀಕಣಗೊಂಡ ಜಿಲ್ಲೆಯಾಗಿದೆ, ಎರಡನೇ ಸ್ಥಾನದಲ್ಲಿ ಧಾರವಾಡ (ಶೇ 56.82) ಹಾಗೂ ಮೂರನೇ ಸ್ಥಾನದಲ್ಲಿ ದಕ್ಷಿಣ ಕನ್ನಡ (ಶೇ 47.67%) ಇದೆ.
Question 3 |
3. ಸಂವಿಧಾನದ ಅನುಚ್ಛೇದ 371-ಜೆ ಅನ್ವಯ ಸ್ಥಾಪಿಸಲಾಗಿರುವ ಹೈದ್ರಾಬಾದ್-ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ ವ್ಯಾಪ್ತಿಗೆ ಎಷ್ಟು ವಿಧಾನ ಸಭಾ ಕ್ಷೇತ್ರಗಳು ಒಳಪಡುತ್ತವೆ?
51 | |
45 | |
42 | |
49 |
Question 3 Explanation:
42:
ಹೈದ್ರಾಬಾದ್-ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯಡಿ ಆರು ಜಿಲ್ಲೆಯ 42 ವಿಧಾನ ಸಭಾ ಕ್ಷೇತ್ರಗಳು ಒಳಪಡುತ್ತವೆ.
Question 4 |
4. ಇವರಲ್ಲಿ ಯಾರು ರಾಜ್ಯ ಸರ್ಕಾರದ ವಿತ್ತೀಯ ನಿರ್ವಹಣೆ ಮತ್ತು ಪರಿಶೀಲನಾ ಸಮಿತಿಯ ಅಧ್ಯಕ್ಷರಾಗಿರುತ್ತಾರೆ?
ಮುಖ್ಯಮಂತ್ರಿಗಳು | |
ಹಣಕಾಸು ಸಚಿವರು | |
ಮುಖ್ಯಕಾರ್ಯದರ್ಶಿ | |
ಗೃಹ ಸಚಿವರು |
Question 4 Explanation:
ಮುಖ್ಯಕಾರ್ಯದರ್ಶಿ:
ರಾಜ್ಯ ಸರ್ಕಾರವು ವಿತ್ತೀಯ ನಿರ್ವಹಣೆ ಮತ್ತು ಪರಿಶೀಲನಾ ಸಮಿತಿಯನ್ನು ಮುಖ್ಯಕಾರ್ಯದರ್ಶಿ ರವರ ನೇತೃತ್ವದಲ್ಲಿ ಸ್ಥಾಪಿಸಿದ್ದು, ಈ ಸಮಿತಿಯು ರಾಜ್ಯದ ಹಣಕಾಸು ಮತ್ತು ಋಣದ ಸ್ಥಿತಿಗತಿಯ ಬಗ್ಗೆ ಪುನಾರುವಲೋಕನ ಮಾಡಿ ಹಣಕಾಸು ಸಚಿವರಿಗೆ ಸಲಹೆ ನೀಡುತ್ತದೆ.
Question 5 |
5. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
i) ಕರ್ನಾಟಕ ಉದ್ಯೋಗ ಮಿತ್ರ ಸಂಸ್ಥೆಯು ರೂ 15 ಕೋಟಿಯಿಂದ 100 ಕೋಟಿ ಯೋಜನೆಗೆ ಅನುಮೋದನೆ ನೀಡುವ ಅಧಿಕಾರ ಹೊಂದಿದೆ
ii) ರಾಜ್ಯ ಉನ್ನತ ಮಟ್ಟದ ಕ್ಲಿಯರೆನ್ಸ್ ಸಮಿತಿಯು ರೂ 100 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಅನುಮೋದನೆ ನೀಡುವ ಅಧಿಕಾರ ಹೊಂದಿದೆ
ಹೇಳಿಕೆ ಒಂದು ಮಾತ್ರ ಸರಿ | |
ಹೇಳಿಕೆ ಎರಡು ಮಾತ್ರ ಸರಿ | |
ಎರಡು ಹೇಳಿಕೆಗಳು ಸರಿಯಾಗಿವೆ | |
ಎರಡು ಹೇಳಿಕೆಗಳು ತಪ್ಪಾಗಿವೆ |
Question 5 Explanation:
ಎರಡು ಹೇಳಿಕೆಗಳು ಸರಿಯಾಗಿವೆ
Question 6 |
6. ಮಹಾತ್ಮಗಾಂಧಿ ಪ್ರಾದೇಶಿಕ ಗ್ರಾಮೀಣ ಇಂಧನ ಮತ್ತು ಅಭಿವೃದ್ದಿ ಸಂಸ್ಥೆ ಎಲ್ಲಿದೆ?
ಬೆಂಗಳೂರು | |
ಬೆಳಗಾವಿ | |
ಮೈಸೂರು | |
ಹಾಸನ |
Question 6 Explanation:
ಬೆಂಗಳೂರು:
ಮಹಾತ್ಮಗಾಂಧಿ ಪ್ರಾದೇಶಿಕ ಗ್ರಾಮೀಣ ಇಂಧನ ಮತ್ತು ಅಭಿವೃದ್ದಿ ಸಂಸ್ಥೆ ಬೆಂಗಳೂರಿನ ಜಕ್ಕೂರು ಬಳಿ ಇದೆ. ಈ ಸಂಸ್ಥೆಯು ನವೀನ ಹಾಗೂ ನವೀಕರಿಸಬಹುದಾದ ಇಂಧನ ಮಂತ್ರಾಲಯ ಭಾರತ ಸರ್ಕಾರದ ಸಹಯಾನುದಾನದಿಂದ ಅಸ್ಥಿತ್ವಕ್ಕೆ ಬಂದಿದೆ. .
There are 6 questions to complete.