ಸಾಮಾನ್ಯ ಜ್ಞಾನ ಕ್ವೀಜ್ 1 ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯಕವಾಗಿವೆ.

ಕ್ವೀಜ್ 1

Question 1
1. ಈ ಕೆಳಗಿನ ಯಾರು ಇತ್ತೀಚೆಗೆ ಭಾರತದ ಮಾಹಿತಿ ಆಯೋಗದ ಮುಖ್ಯ ಕಮೀಷನರ್ ಆಗಿ ನೇಮಕಗೊಂಡಿದ್ದಾರೆ?
A
ಸಿಂಧು ಸಿಂಗ್
B
ಸುಶ್ಮಾ ಸಿಂಗ್
C
ರಶ್ಮಿ ಚಂದ್ರ
D
ಪದ್ಮನಿ ನಾಯಕ್
Question 1 Explanation: 
ಸುಶ್ಮಾ ಸಿಂಗ್: ಸುಶ್ಮಾ ಸಿಂಗ್ ಅವರು ಮಾಹಿತಿ ಆಯೋಗದ ನೂತನ ಕಮೀಷನರ್ ಆಗಿ ನೇಮಕಗೊಂಡರು. ಸಿಂಗ್ ಅವರು ಭಾರತ ಮಾಹಿತಿ ಆಯೋಗದ ಎರಡನೇ ಮಹಿಳಾ ಕಮೀಷನರ್. ಪ್ರಸ್ತುತ ಆಯೋಗದ ಕಮೀಷನರ್ ಆಗಿರುವ ದೀಪಕ್ ಸಂಧು ಅವರ ಅಧಿಕಾರ ಅವಧಿ ಈ ತಿಂಗಳಗೆ ಕೊನೆಗೊಳ್ಳಲಿದ್ದು, ಇವರ ಸ್ಥಾನವನ್ನು ಸುಶ್ಮಾ ಸಿಂಗ್ ತುಂಬಿಲ್ಲಿದ್ದಾರೆ.
Question 2
2. ಲೈಂಗಿಕ ಆರೋಪ ಹೊತ್ತಿರುವ ಭಾರತ ಸುಪ್ರೀಂಕೋರ್ಟ್ ನ ಮಾಜಿ ನ್ಯಾಯಾಧೀಶರಾದ ಎ.ಕೆ.ಗಂಗೂಲಿ ಅವರು ಪ್ರಸ್ತುತ ಯಾವ ರಾಜ್ಯದ ಮಾನವ ಹಕ್ಕು ಆಯೋಗದ ಚೇರಮನ್ ಆಗಿದ್ದಾರೆ?
A
ಕೇರಳ
B
ಪಶ್ಚಿಮ ಬಂಗಾಳ
C
ಬಿಹಾರ್
D
ಓಡಿಶಾ
Question 2 Explanation: 
ಪಶ್ಚಿಮ ಬಂಗಾಳ: ಎ.ಕೆ.ಗಂಗೂಲಿ ಅವರು ಪಶ್ಚಿಮ ಬಂಗಾಳ ಮಾನವ ಹಕ್ಕು ಆಯೋಗದ ಚೇರಮನ್ ಆಗಿದ್ದಾರೆ.
Question 3
3. ಏಷ್ಯಾದಲ್ಲೇ ಅತಿ ದೊಡ್ಡ ದನಗಳ ಜಾತ್ರೆ ಎಂದು ಪ್ರಸಿದ್ದಿ ಪಡೆದಿರುವ “ಸೋನೆಪುರ” ದನಗಳ ಜಾತ್ರೆ ಯಾವ ರಾಜ್ಯದಲ್ಲಿ ನಡೆಯುತ್ತದೆ?
A
ಮಹಾರಾಷ್ಟ್ರ
B
ಆಂಧ್ರಪ್ರದೇಶ
C
ಬಿಹಾರ್
D
ಓಡಿಶಾ
Question 3 Explanation: 
ಬಿಹಾರ್: ಏಷ್ಯಾದಲ್ಲೆ ಅತಿ ದೊಡ್ಡ ಜಾತ್ರೆ ಎಂದು ಖ್ಯಾತಿ ಹೊಂದಿರುವ ಸೋನೆಪುರ ದನ ಜಾತ್ರೆಯನ್ನು ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಆಯೋಜಿಸಲಾಗುತ್ತದೆ. ಸೋನೆಪುರ ಬಿಹಾರದಲ್ಲಿದ್ದು, ಇತಿಹಾಸ ಪ್ರಸಿದ್ದಿಯನ್ನು ಹೊಂದಿದೆ.
Question 4
4. ಇತ್ತೀಚೆಗೆ ಈ ಕೆಳಗಿನ ಯಾರು ಯುನಿಸೆಫ್ (UNICEF) ನ ದಕ್ಷಿಣ ಏಷ್ಯಾ ಪ್ರಾಂತ್ರ್ಯದ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ?
A
ಅಮಿತಾಬ್ ಬಚ್ಚನ್
B
ಅಮಿರ್ ಖಾನ್
C
ಸಚಿನ್ ತೆಂಡೂಲ್ಕರ್
D
ವಿರಾಟ್ ಕೊಹ್ಲಿ
Question 4 Explanation: 
ಸಚಿನ್ ತೆಂಡೂಲ್ಕರ್: ಇತ್ತೀಚೆಗಷ್ಟೆ ಅಂತರರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಅವರು ಯುನಿಸೆಫ್ ನ ದಕ್ಷಿಣ ಏಷ್ಯಾ ಪ್ರಾಂತ್ಯದ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ದಕ್ಷಿಣ ಏಷ್ಯಾ ಪ್ರಾಂತ್ಯದಲ್ಲಿ ಸುರಕ್ಷತೆ ಮತ್ತು ಸ್ವಚ್ಚತೆ ಬಗ್ಗೆ ಸಚಿನ್ ಅರಿವು ಮೂಡಿಸಲಿರುವರು.
Question 5
5. ಗೋವಾದ ಪಣಜಿಯಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ “ಗೋಲ್ಡನ್ ಫಿಕಾಕ್ (Golden Peacock)” ಪ್ರಶಸ್ತಿಯನ್ನು ಪಡೆದ ಚಿತ್ರ ಯಾವುದು?
A
ಅಪುರ್ ಪಂಚಾಲಿ
B
ಬಿಯಾಟ್ರಿಝ್ ವಾರ್
C
ಕ್ರಿಶ್-3
D
ಅಂಕುರ್
Question 5 Explanation: 
ಬಿಯಾಟ್ರಿಝ್ ವಾರ್: ಈಸ್ಟ್ ತೈಮೂರ್ ನ “ಬಿಯಾಟ್ರಿಝ್ ವಾರ್ (Beatriz’s War) ಸಿನಿಮಾ ಗೋಲ್ಡನ್ ಫಿಕಾಕ್ ಪ್ರಶಸ್ತಿಗೆ ಭಾಜನವಾಯಿತು.
Question 6
6. ಐಸಿಸಿ ಎಲ್.ಜಿ ಪೀಪಲ್ ಚಾಯ್ಸ್ (LG People Choice Award) ಪ್ರಶಸ್ತಿ-2013 ಈ ಕೆಳಗಿನ ಯಾರಿಗೆ ಲಭಿಸಿದೆ?
A
ಹಸೀಮ್ ಆಮ್ಲ
B
ಎಂ.ಎಸ್.ದೋನಿ
C
ರೋಹಿತ್ ಶರ್ಮಾ
D
ಕುಮಾರ ಸಂಗಕ್ಕಾರ
Question 6 Explanation: 
ಎಂ.ಎಸ್.ದೋನಿ: ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಅವರು ಐಸಿಸಿ ಎಲ್.ಜಿ ಪೀಪಲ್ ಚಾಯ್ಸ್ ಪ್ರಶಸ್ತಿ-2013 ತಮ್ಮದಾಗಿಸಿಕೊಂಡಿದ್ದಾರೆ. ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಭಾರತದ ಎರಡನೇ ಆಟಗಾರ ದೋನಿ. ಈ ಮುಂಚೆ ಸಚಿನ್ 2010 ರಲ್ಲಿ ಈ ಪ್ರಶಸ್ತಿಗೆ ಭಾಜರಾಗಿದ್ದರು. 2011 ಮತ್ತು 2012 ನೇ ಸಾಲಿನ ಪ್ರಶಸ್ತಿಯ ಶ್ರೀಲಂಕಾದ ಕ್ರಿಕೆಟ್ ಪಟು ಕುಮಾರ ಸಂಗಕ್ಕಾರ ಅವರಿಗೆ ಲಭಿಸಿದೆ,
Question 7
7. ಕಾಲು ಮತ್ತು ಬಾಯಿ ರೋಗವು ಸಾಮಾನ್ಯವಾಗಿ ಕಂಡುಬರುವುದು
A
ಜಾನುವಾರುಗಳಲ್ಲಿ
B
ಜಾನುವಾರು ಮತ್ತು ಕುರಿಗಳಲ್ಲಿ
C
ಜಾನುವಾರು ಮತ್ತು ಹಂದಿಗಳಲ್ಲಿ
D
ಜಾನುವಾರು, ಹಂದಿ ಮತ್ತು ಕುರಿಗಳಲ್ಲಿ
Question 7 Explanation: 
ಜಾನುವಾರು, ಹಂದಿ ಮತ್ತು ಕುರಿಗಳಲ್ಲಿ: ಕಾಲು ಮತ್ತು ಬಾಯಿ ರೋಗ ವೈರಸ್ ನಿಂದ ಹರಡುವ ಮಾರಕ ರೋಗ. ಈ ರೋಗವು ಜಾನುವಾರು, ಹಂದಿ ಮತ್ತು ಕುರಿಗಳಲ್ಲಿ ಕಂಡುಬರುತ್ತದೆ. ಇತ್ತೀಚಿನ ಮಾಹಿತಿ ಪ್ರಕಾರ ರಾಜ್ಯದಲ್ಲಿ ಸುಮಾರು 8,000 ಕ್ಕೂ ಹೆಚ್ಚು ಜಾನುವಾರುಗಳು ಈ ರೋಗದಿಂದ ಸಾವನ್ನಪ್ಪಿವೆ.
Question 8
8. ಆಫ್ರಿಕಾ ಖಂಡದಲ್ಲಿ ಅತ್ಯಂತ ಎತ್ತರದಲ್ಲಿರುವ ನಗರ ಯಾವುದು?
A
ಅಡಿಸ್ ಅಬಾಬಾ
B
ಕೈರೊ
C
ಟ್ರಿಪೊಲಿ
D
ಸೂಡನ್
Question 8 Explanation: 
ಅಡಿಸ್ ಅಬಾಬಾ:ಇಥಿಯೊಪಿಯಾದ ರಾಜಧಾನಿ ಅಡಿಸ್ ಅಬಾಬಾ ಆಫ್ರಿಕಾದಲ್ಲಿ ಅತ್ಯಂತ ಎತ್ತರದಲ್ಲಿರುವ ನಗರ.
Question 9
9. ವಿಶ್ವ ಪ್ರಖ್ಯಾತ “ಹಾರ್ನ್ ಬಿಲ್ (Horn Bill Festival)” ಹಬ್ಬವನ್ನು ಈ ಕೆಳಗಿನ ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ?
A
ಮಿಜೋರಂ
B
ಅಸ್ಸಾಂ
C
ನಾಗಲ್ಯಾಂಡ್
D
ತ್ರಿಪುರ
Question 9 Explanation: 
ನಾಗಲ್ಯಾಂಡ್
Question 10
10. HAART ಅಥವಾ (Highly active antiretroviral therapy) ಒಂದು ಬಹು ವಿಧದ ಲಸಿಕೆ ಇದನ್ನು ಯಾವ ರೋಗದ ತೀವ್ರತೆಯನ್ನು ಕಡಿಮೆಗೊಳಿಸಲು ಬಳಸಲಾಗುತ್ತಿದೆ?
A
ಮಲೇರಿಯಾ
B
ಹೆಚ್.ಐ.ವಿ/ಏಡ್ಸ್
C
ಕಾಲರ
D
ಈ.ಡೆಂಗ್ಯೂ
Question 10 Explanation: 
ಹೆಚ್.ಐ.ವಿ/ಏಡ್ಸ್: HAART ಲಸಿಕೆ ಹೆಚ್.ಐ.ವಿ/ಏಡ್ಸ್ ರೋಗ ಹರಡುವ ತೀವ್ರತೆಯನ್ನು ತಗ್ಗಿಸಲು ಪ್ರಸ್ತುತ ಬಳಕೆಯಲ್ಲಿರುವ ಲಸಿಕೆ.
There are 10 questions to complete.