ಸಾಮಾನ್ಯ ಜ್ಞಾನ ಕ್ವಿಜ್ 5: ಸಾಮಾನ್ಯ ಜ್ಞಾನ ಕ್ವಿಜ್ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯಕವಾಗಿವೆ.
ಕ್ವೀಜ್ 5
Question 1 |
1. ಇತ್ತೀಚೆಗೆ ನಾಗರಿಕ ವಿಮಾನಯಾನ ಸಚಿವಾಲಯವು ನಿಯತಕಾಲಿಕೆಯೊಂದನ್ನು (Magazine) ಹೊರತಂದಿದೆ. ಅಂದಹಾಗೆ ಈ ನಿಯತಕಾಲಿಕೆಯ ಹೆಸರೇನು?
ಶುಭ ಯಾತ್ರ | |
ಶುಭ ಭಾರತ | |
ಭಾರತ ಯಾತ್ರ | |
ಇದ್ಯಾವೂದು ಅಲ್ಲ |
Question 1 Explanation:
ಶುಭ ಯಾತ್ರ:(ನಾಗರಿಕ ವಿಮಾನಯಾನ ಸಚಿವಾಲಯವು ಶುಭಯಾತ್ರ ಎಂಬ ದ್ವಿ ಭಾಷ ನಿಯತಕಾಲಿಕೆಯನ್ನು ಹೊರತಂದಿದೆ. ಈ ನಿಯತಕಾಲಿಕೆಯು ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಪ್ರಕಟಣೆಗೊಳ್ಳಲಿದೆ.)
Question 2 |
2. ಭಾರತ ಮತ್ತು ಪಾಕಿಸ್ತಾನ ನಡುವೆ ವಿವಾದ ಸೃಷ್ಟಿಸಿರುವ “ಕಿಶನ್ ಗಂಗಾ ಯೋಜನೆಯನ್ನು” ಯಾವ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿದೆ?
ಚೀನಾಬ್ | |
ಜೀಲಂ | |
ವೂಲರ್ | |
ರಾವಿ |
Question 2 Explanation:
ಜೀಲಂ:(ಕಿಶನ್ ಗಂಗಾ ಯೋಜನೆಯನ್ನು ಭಾರತವು, ಜಮ್ಮು ಮತ್ತು ಕಾಶ್ಮೀರದಲ್ಲಿ ಜೀಲಂ ನದಿಯ ಉಪನದಿಯಾದ ಕಿಶನ್ ಗಂಗಾ ನದಿಗೆ ಅಡ್ಡವಾಗಿ ನಿರ್ಮಿಸಲಾಗುತ್ತಿದೆ. ಈ ಯೋಜನೆಯ ಮೂಲಕ 330 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಗುರಿಯನ್ನು ಭಾರತ ಹೊಂದಿದೆ.)
Question 3 |
3. “ಕೆ.ಎಂ.ಮಣಿ ಸೆಂಟರ್ ಫಾರ್ ಬಜೆಟ್ ಸ್ಟಡೀಸ್” ಸಂಸ್ಥೆಯನ್ನು ಯಾವ ರಾಜ್ಯದಲ್ಲಿ ಉದ್ಘಾಟಿಸಲಾಯಿತು?
ಕೇರಳ | |
ತಮಿಳು ನಾಡು | |
ಆಂಧ್ರ ಪ್ರದೇಶ | |
ಗುಜರಾತ್ |
Question 3 Explanation:
ಕೇರಳ:(ಕೆ.ಎಂ.ಮಣಿ ಸೆಂಟರ್ ಫಾರ್ ಬಜೆಟ್ ಸ್ಟಡೀಸ್ ನ್ನು ಇತ್ತೀಚೆಗೆ ಉಪರಾಷ್ಟ್ರಪತಿಗಳಾದ ಹಮೀದ್ ಅನ್ಸಾರಿಯವರು ಕೇರಳದ ಕೊಚ್ಚಿ “ಯೂನಿವರ್ಸಿಟಿ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ” ಯಲ್ಲಿ ಉದ್ಘಾಟಿಸಿದರು.)
Question 4 |
4. ಕರ್ನಾಟಕ ಮೂಲದ ಅರುಣ್ ಶೆಣೈರವರು ಇತ್ತೀಚೆಗೆ ಸುದ್ದಿಯಲ್ಲಿದ್ದರು, ಇವರು ಯಾವ ಕ್ಷೇತ್ರದಲ್ಲಿ ಪ್ರಸಿದ್ದಿ ಹೊಂದಿದ್ದಾರೆ?
ಕ್ರೀಡೆ | |
ಸಂಗೀತ | |
ಸಾಹಿತ್ಯ | |
ಕಲೆ |
Question 4 Explanation:
ಸಂಗೀತ: (ಕರ್ನಾಟಕ ಮೂಲದ ಅರುಣ್ ಶೆಣೈರವರು ಸಂಗೀತ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಇವರು ಸಂಗೀತ ಕ್ಷೇತ್ರದ ಪ್ರತಿಷ್ಠಿತ ಪ್ರಶಸ್ತಿಯಾದ “ಗ್ರ್ಯಾಮಿ” ಪ್ರಶಸ್ತಿಗೆ ನಾಮಕರಣಗೊಂಡಿದ್ದರು. ಇವರು ಕರ್ನಾಟಕಕ್ಕೆ ಪ್ರಥಮ ಗ್ರ್ಯಾಮಿ ಪ್ರಶಸ್ತಿ ತಂದುಕೊಡಲ್ಲಿದ್ದಾರೆ ಎಂದು ತಿಳಿಯಲಾಗಿತ್ತು. ಆದರೆ ಈ ಸ್ಪರ್ಧೆಯಲ್ಲಿ ಪರಾಭವಗೊಂಡರು. ಬೆಂಗಳೂರು ಮತ್ತು ಮಣಿಪಾಲದಲ್ಲಿ ಶಿಕ್ಷಣ ಮುಗಿಸಿ ಸಿಂಗಾಪುರದಲ್ಲಿ ನೆಲೆನಿಂತಿರುವ ಅರುಣ್ ರವರ “ರುಂಬಾಡೂಡಲ್ ಪಾಪ್ ಆಲ್ಬಂ” ಕ್ರಿಸ್ ಭಟ್ಟಿಯವರ “ಇಂಪ್ರೆಶನ್” ಎದುರು ಪರಾಭವಗೊಂಡಿದೆ. ಈ ಬಾರಿಯ ಗ್ರ್ಯಾಮಿ ಪ್ರಶಸ್ತಿಯಲ್ಲಿ ಪಂಡಿತ್ ರವಿಶಂಕರ್ ರವರ “ದಿ ಲಿವಿಂಗ್ ರೂಮ್ ಸೆಶನ್ ಪಾರ್ಟ್ 1” ಎಂಬ ಆಲ್ಬಂ ಅತ್ಯುತ್ತಮ ವಿಶ್ವ ಆಲ್ಬಂ ವಿಭಾಗದಲ್ಲಿ ಪ್ರಶಸ್ತಿ ಬಾಚಿಕೊಂಡಿದೆ. ಈಗಾಗಲೇ ರವಿ ಶಂಕರ್ ರವರಿಗೆ ಮರಣೋತ್ತರವಾಗಿ ಒಂದು ಗ್ರ್ಯಾಮಿ ಪ್ರಶಸ್ತಿಯನ್ನು ನೀಡಲಾಗಿದೆ.)
Question 5 |
5. ಈ ಕೆಳಗಿನ ಯಾರು ಬ್ರೆಜಿಲ್ ಒಪನ್ ಟೆನ್ನಿಸ್-2013 ನಲ್ಲಿ ಪುರುಷರ ಸಿಂಗಲ್ಸ್ ನಲ್ಲಿ ವಿಜೇತರಾದರು?
ರಫೆಲ್ ನಾಡಲ್ | |
ರೋಜರ್ ಫೆಡರರ್ | |
ಆಂಡ್ರೆ ಮುರ್ರೆ | |
ಡೇವಿಡ್ ನಾಲ್ಬನಾಡಿಯನ್ |
Question 5 Explanation:
ರಫೆಲ್ ನಾಡಲ್: (ವಿಶ್ವದ ಮಾಜಿ ನಂ.1 ಆಟಗಾರ ರಫೆಲ್ ನಾಡಲ್ ರವರು ಬ್ರೆಜಿಲ್ ಒಪನ್ ಟೆನ್ನಿಸ್-2013 ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡರು. ಫೈನಲ್ ಪಂದ್ಯದಲ್ಲಿ 6-2, 6-3 ರಲ್ಲಿ ನಾಡೆಲ್ ರವರು ಡೇವಿಡ್ ನಾಲ್ಬನಾಡಿಯನ್ ವಿರುದ್ದ ಜಯಗಳಿಸಿದರು. ಪುರುಷರ ಡಬಲ್ಸ್ ವಿಭಾಗದಲ್ಲಿ ಅಲೆಕ್ಸಾಂಡರ್ ಪೆಯ ಮತ್ತು ಬ್ರುನೋ ಸೋರ್ಸ್ ಜೋಡಿಯು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.)
Question 6 |
6. ಇತ್ತೀಚೆಗೆ ಕಾವೇರಿ ಐತೀರ್ಪು ಅಧಿಸೂಚನೆ ಪ್ರಕಟಗೊಂಡ ನಂತರ ಕರ್ನಾಟಕಕ್ಕೆ ಎಷ್ಟು ಟಿಎಂಸಿ ಅಡಿ ನೀರು ಲಭ್ಯವಾಗಲಿದೆ?
260 ಟಿಎಂಸಿ ಅಡಿ | |
270 ಟಿಎಂಸಿ ಅಡಿ | |
419 ಟಿಎಂಸಿ ಅಡಿ | |
300 ಟಿಎಂಸಿ ಅಡಿ |
Question 6 Explanation:
270 ಟಿಎಂಸಿ ಅಡಿ: (ಎನ್.ಎಸ್.ರಾವ್ ಮತ್ತು ಸುಧೀರ್ ನಾರಾಯಣ್ ಸದಸ್ಯರಾಗಿರುವ ನ್ಯಾಯಮಂಡಳಿಯು ಕಾವೇರಿ ನೀರಿನ ಸಂಗ್ರಹವನ್ನು 740 ಟಿಎಂಸಿ ಅಡಿ ಎಂದು ಅಂದಾಜಿಸಿದೆ. ಇದರಲ್ಲಿ ಕರ್ನಾಟಕಕ್ಕೆ 270 ಟಿಎಂಸಿ ಅಡಿ (ಕೇಳಿದ್ದು 465), ತಮಿಳುನಾಡಿಗೆ 419 ಟಿಎಂಸಿ ಅಡಿ (ಕೇಳಿದ್ದು 562), ಕೇರಳ 30 ಟಿಎಂಸಿ ಅಡಿ ಮತ್ತು ಪುದುಚೇರಿ 7 ಟಿಎಂಸಿ ಅಡಿ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಪರಿಸರ ಸಂರಕ್ಷಣೆಗಾಗಿ 10 ಟಿಎಂಸಿ ಅಡಿ ಮೀಸಲಿಡಲಾಗಿದೆ.)
Question 7 |
7. ವಿದ್ಯುತ್ ಬೆಲೆ ನಿಯಂತ್ರಣದ ಮೇಲೆ ಕಡಿವಾಣ ಹಾಕಲು ವಿಫಲರಾಗಿ ರಾಜೀನಾಮೆ ನೀಡಿದ “ಬೈಕೊ ಬೊರಿಸೊವ್” ಯಾವ ದೇಶದ ಪ್ರಧಾನಿಯಾಗಿದ್ದರು?
ಅಲ್ಜೇರಿಯಾ | |
ಈಕ್ವೇಡರ್ | |
ಬಲ್ಗೇರಿಯಾ | |
ಸೊಮಾಲಿ |
Question 7 Explanation:
ಬಲ್ಗೇರಿಯಾ: (ವಿದ್ಯುತ್ ಬೆಲೆ ಮಿತಿಮೀರಿ ಹೆಚ್ಚಿಸಿರುವುದರ ವಿರುದ್ದ ಬಲ್ಗೇರಿಯಾದ ಜನತೆ ಇತ್ತೀಚೆಗೆ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರು. ಬೆಲೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಪ್ರಧಾನಿ ಬೈಕೊ ರವರು ಮನವಿ ಮಾಡಿದ್ದರು. ಆದರೆ ಕೊಟ್ಟ ಭರವಸೆಯನ್ನು ಉಳಿಸಿಕೊಳ್ಳಲು ವಿಫಲರಾದ ಕಾರಣ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು.)
Question 8 |
8. NYSE ಯೂರೋನೆಕ್ಸ್ಟ್ ನ(Euronext) ಲಂಡನ್ ಮತ್ತು ಪ್ಯಾರಿಸ್ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟು ನಡೆಸಿದ ದೇಶದ ಮೊದಲ ಕಂಪನಿಯಾವುದು?
ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ | |
ವಿಪ್ರೋ | |
ಮಹೀಂದ್ರಾ ಸತ್ಯಂ | |
ಇನ್ಪೋಸಿಸ್ |
Question 8 Explanation:
ಇನ್ಪೋಸಿಸ್:(ದೇಶದ ಸಾಪ್ಟವೇರ್ ದಿಗ್ಗಜ ಇನ್ಪೋಸಿಸ್ ಫೆಬ್ರವರಿ 20 ರಂದು ಅಂತರ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ NYSE ಯೂರೋನೆಕ್ಸ್ ನಲ್ಲಿ (ಪ್ಯಾರಿಸ್ ಮತ್ತು ಲಂಡನ್) ವಹಿವಾಟು ನಡೆಸಲಿದೆ. ಈ ಮೂಲಕ ವಹಿವಾಟಿಗೆ ನೊಂದಣಿಯಾದ ಮೊದಲ ಭಾರತೀಯ ಕಂಪನಿ ಎಂಬ ಹಿರಿಮೆಗೂ ಕಂಪನಿ ಪಾತ್ರವಾಗಲಿದೆ.)
Question 9 |
9. “ನಾರ್ತ್ ಕರಣ್ ಪುರ ಸೂಪರ್ ಥರ್ಮಲ್ ವಿದ್ಯುತ್ ಘಟಕ” ಯಾವ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿದೆ?
ಜಾರ್ಖಂಡ್ | |
ಮಧ್ಯ ಪ್ರದೇಶ | |
ಹಿಮಾಚಲ ಪ್ರದೇಶ | |
ರಾಜಸ್ತಾನ |
Question 9 Explanation:
ಜಾರ್ಖಂಡ್:(ಜಾರ್ಖಂಡ್ ನ ಚತ್ರಾ ಜಿಲ್ಲೆಯಲ್ಲಿ ನಾರ್ತ್ ಕರಣ್ ಪುರ ಸೂಪರ್ ಥರ್ಮಲ್ ವಿದ್ಯುತ್ ಘಟಕವನ್ನು ಸ್ಥಾಪಿಸಲಾಗುತ್ತಿದೆ. ಬಂಡವಾಳ ಹೂಡಿಕೆ ಮೇಲಿನ ಕೇಂದ್ರ ಸಚಿವ ಸಂಪುಟವು ಇತ್ತೀಚೆಗೆ ಈ ಯೋಜನೆಗೆ ಸಮ್ಮಿತಿ ಸೂಚಿಸಿತು. ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಶನ್ (NTPC) ನಡಿ ಈ ಯೋಜನೆಯು ಅಸ್ತಿತ್ವಕ್ಕೆ ಬರುತ್ತಿದ್ದು, ಜಾರ್ಖಂಡ್ ನಲ್ಲಿ NTPC ಕೈಗೆತ್ತಿಕೊಳ್ಳುತ್ತಿರುವ ಮೊದಲ ಯೋಜನೆ ಇದಾಗಿದೆ. ಈ ವಿದ್ಯುತ್ ಘಟಕದಿಂದ 1980 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಗುರಿಹೊಂದಿಲಾಗಿದೆ. )
Question 10 |
10. ಮೈಸೂರಿನ ತಿರುಮಕೂಡಲ್ಲಿ ಎಷ್ಟು ವರ್ಷಗಳಿಗೊಮ್ಮೆ ಕುಂಭಮೇಳವನ್ನು ಆಯೋಜಿಸಲಾಗುತ್ತದೆ?
2 | |
3 | |
4 | |
1 |
Question 10 Explanation:
3: (ದಕ್ಷಿಣ ಕಾಶಿ ಎಂದೇ ಪ್ರಸಿದ್ದವಾಗಿರುವ ತಿರುಮಕೂಡಲ ಕ್ಷೇತ್ರದಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ಕುಂಭಮೇಳವನ್ನು ಆಯೋಜಿಸಲಾಗುತ್ತದೆ. ಕಾವೇರಿ, ಕಪಿಲ ಮತ್ತು ಸ್ಫಟಿಕ ಸರೋವರಗಳ ಸಂಗಮ ತಿರುಮಕೂಡಲು. ಈ ಬಾರಿ 9ನೇ ಮಹಾಕುಂಭಮೇಳವು ಫೆಬ್ರವರಿ 23 ರಿಂದ 24 ರವರೆಗೆ ನಡೆಯಲಿದೆ.)
There are 10 questions to complete.