ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು
ಕ್ವೀಜ್ 8
Question 1 |
1. “ವಾಕಿಂಗ್ ವಿಥ್ ಲಯನ್ಸ್: ಟೇಲ್ ಫ್ರಮ್ ಎ ಡಿಪ್ಲೋಮೆಟಿಕ್ ಫಾಸ್ಟ್” ಪುಸ್ತಕದ ಲೇಖಕರು ಯಾರು?
ಕುಶ್ವಂತ್ ಸಿಂಗ್ | |
ಯಶ್ವಂತ್ ಸಿಂಗ್ | |
ನಟವರ್ ಸಿಂಗ್ | |
ಹರಭಜನ್ ಸಿಂಗ್ |
Question 1 Explanation:
ನಟವರ್ ಸಿಂಗ್: (ನಟವರ್ ಸಿಂಗ್ ಬರೆದಿರುವ ಈ ಪುಸ್ತಕವನ್ನು ಭಾರತದ ಉಪರಾಷ್ಟ್ರಪತಿಗಳಾದ ಹಮೀದ್ ಅನ್ಸಾರಿಯವರು ಇತ್ತೀಚೆಗೆ ಬಿಡುಗಡೆಗೊಳಿಸಿದರು. ನಟವರ್ ಸಿಂಗ್ ರವರು ಭಾರತದ ಮಾಜಿ ವಿದೇಶಾಂಗ ಸಚಿವರು)
Question 2 |
2. ಭಾರತದ ಬಜೆಟ್ ಮಂಡನೆ ಇತಿಹಾಸದಲ್ಲಿ ಈ ಕೆಳಗಿನ ಯಾರು ಅತಿ ಹೆಚ್ಚು ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ?
ಪ್ರಣಬ್ ಮುಖರ್ಜಿ | |
ಮೊರಾರ್ಜಿ ದೇಸಾಯಿ | |
ಚಿದಂಬರಂ | |
ಕೃಷ್ಣಮಾಚಾರ್ |
Question 2 Explanation:
ಮೊರಾರ್ಜಿ ದೇಸಾಯಿ:(ಮೊರಾರ್ಜಿ ದೇಸಾಯಿಯವರು 10 ಬಾರಿ ಬಜೆಟ್ ಮಂಡಿಸುವ ಮೂಲಕ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದವರು ಎಂಬ ಹಿರಿಮೆಯನ್ನು ಹೊಂದಿದ್ದಾರೆ. 2013-14 ನೇ ಸಾಲಿನ ಬಜೆಟ್ ಚಿದಂಬರಂ ರವರ ಪಾಲಿಗೆ 8 ನೇ ವಾರ್ಷಿಕ ಬಜೆಟ್. ಭಾರತದ ಮಾಜಿ ಪ್ರಧಾನ ಮಂತ್ರಿಗಳಾದ ಮೊರಾರ್ಜಿ ದೇಸಾಯಿಯವರ ನಂತರ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಹಣಕಾಸು ಮಂತ್ರಿ ಚಿದಂಬರಂರವರು. ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿ, ವೈ.ಬಿ.ಚವಾಣ್, ಯಶ್ವಂತ್ ಸಿನ್ಹಾ ಮತ್ತು ಸಿ.ಡಿ.ದೇಶಮುಖ್ ರವರು 7 ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ)
Question 3 |
3. ಇತ್ತೀಚೆಗೆ ಈ ಕೆಳಗಿನ ಯಾವ ನಗರ ವಿಶ್ವದ “ ನವ ನವೀನ ನಗರ (Most Innovative City)” ಎಂದನಿಸಿದೆ?
ನ್ಯೂಯಾರ್ಕ್ | |
ಟೆಲ್ ಅವೀವ್ | |
ಮೆಡೆಲಿನ್ | |
ಸಿಡ್ನಿ |
Question 3 Explanation:
ಮೆಡೆಲಿನ್: (ಕೊಲಂಬಿಯಾದ ಮೆಡಿಲಿನ್ ನಗರ ವಿಶ್ವದ “ನವೀನ ಪರಿಕಲ್ಪನೆಗಳ ನಗರ” ಎಂಬ ಶ್ರೇಯಕ್ಕೆ ಪಾತ್ರವಾಗಿದೆ. ಕೊಲಂಬಿಯಾ ದೇಶದ ಎರಡನೇ ಅತಿ ದೊಡ್ಡ ನಗರವಾದ ಮೆಡಲಿನ್ ನಲ್ಲಿ ಸಾರಿಗೆ ವ್ಯವಸ್ಥೆ, ಪರಿಸರ ನಿರ್ವಹಣೆ ಮತ್ತು ಮೂಲಭೂತ ಸೌಕರ್ಯಗಳು ಅಚ್ಚುಕಟ್ಟಾಗಿರುವ ಕಾರಣ ಇದನ್ನು “ನವೀನ ಪರಿಕಲ್ಪನೆಗಳ ನಗರ” ಎಂದು ಪರಿಗಣಿಸಲಾಗಿದೆ. ನವೀನ ಪರಿಕಲ್ಪನೆಯ ವಾರ್ಷಿಕ ಸ್ಪರ್ಧೆಯಲ್ಲಿ ಈ ನಗರವು ನ್ಯೂಯಾರ್ಕ್ ಮತ್ತು ಟೆಲ್ ಅವೀವಾ ನಗರಗಳನ್ನು ಹಿಂದಿಕ್ಕಿದೆ)
Question 4 |
4. ಇತ್ತೀಚೆಗೆ ಬ್ರಿಟನ್ ನಲ್ಲಿ ನಡೆದ “ಬುದ್ದಿ ಲಬ್ದ (Intellectual Quotient)” ಪರೀಕ್ಷೆಯಲ್ಲಿ ಐನ್ ಸ್ಟೇನ್ ಮತ್ತು ಸ್ಟೀಫನ್ ಹಾಕಿನ್ಸ್ ರವರನ್ನು ಸರಿಗಟ್ಟಿದ ಭಾರತ ಮೂಲದ ಬಾಲಕಿ ಯಾರು?
ನೇಹಾ ರಾಮ್ | |
ಚಂದನ ಚಿತ್ರ | |
ಸುಶೀಲ ರಾಮ್ | |
ಸಹನ |
Question 4 Explanation:
ನೇಹಾ ರಾಮ್: (ಭಾರತ ಮೂಲದ 12 ವರ್ಷದ ಬಾಲಕಿ ನೇಹಾ ರಾಮ್ ರವರು ಬ್ರಿಟನ್ ನಲ್ಲಿ ನಡೆದ ಬುದ್ಧಿ ಲಬ್ಧ ಪರೀಕ್ಷೆಯಲ್ಲಿ ಅಸಾಮಾನ್ಯ ಪ್ರತಿಭೆ ತೋರುವ ಮೂಲಕ ಬ್ರಿಟನ್ ನಲ್ಲೇ ಅತ್ಯಂತ ಬುದ್ದಿವಂತಳು ಎನಿಸಿದ್ದಾರೆ. ಈ ಪರೀಕ್ಷೆಯಲ್ಲಿ ನೇಹಾ ರವರು 162 ಅಂಕಗಳನ್ನು ಗಳಿಸಿದ್ದಾರೆ. ಈ ಹಿಂದೆ ಐನ್ ಸ್ಟೇನ್ ಮತ್ತು ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿನ್ಸ್ ರವರು 160 ಅಂಕಗಳನ್ನು ಗಳಿಸಿದ್ದರು)
Question 5 |
5. ರಕ್ಷಣಾ ವ್ಯವಸ್ಥೆಗೆ ಸಹಕಾರಕ್ಕೆ ಸಂಬಂಧಿಸಿದಂತೆ ಆಮೆರಿಕಾ ಈ ಕೆಳಗಿನ ಯಾವ ದೇಶದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಿದೆ?
ಫ್ರಾನ್ಸ್ | |
ರಷ್ಯಾ | |
ಜಪಾನ್ | |
ಚೀನಾ |
Question 5 Explanation:
ರಷ್ಯಾ:(ಕ್ಷಿಪಣಿ ರಕ್ಷಣಾ ವ್ಯವಸ್ಥೆ ಮತ್ತು ಅವುಗಳ ಬಳಕೆಯನ್ನು ಉಭಯ ದೇಶಗಳ ನಡುವೆ ನಡೆಸದಂತೆ ಸಹಕಾರ ಕೋರುವ ಒಪ್ಪಂದಕ್ಕೆ ಆಮೆರಿಕಾ ಮತ್ತು ರಷ್ಯಾ ಪರಸ್ಪರ ಸಹಿ ಹಾಕಲು ಸಿದ್ದವಾಗಿವೆ. ಉಭಯ ದೇಶಗಳ ಅಧ್ಯಕ್ಷರು ಈ ಒಪ್ಪಂದಕ್ಕೆ ಸಹಿ ಹಾಕಲು ಸಮ್ಮತಿ ಸೂಚಿಸಿದ್ದಾರೆ)
Question 6 |
6. “ಸಾಮಾನ್ಯ ತೆರಿಗೆ ಪ್ರವೃತ್ತಿ ತಡೆ ನಿಯಮ (General Anti Avoidance Agreement Rules)” ಜಾರಿಗೆ ತರಲು ನಿಯಮಗಳನ್ನು ಶಿಫಾರಸ್ಸು ಮಾಡುವಂತೆ ರಚಿಸಲಾದ ಸಮಿತಿ ಯಾವುದು?
ಪಾರ್ಥ ಸಾರಥಿ ಶೋಮ್ ಸಮಿತಿ | |
ಧರ್ಮಾಧಿಕಾರಿ ಸಮಿತಿ | |
ಅಶೋಕ್ ಚಾವ್ಲಾ ಸಮಿತಿ | |
ಮುಕಲ್ ಮುದ್ಗಲ್ ಸಮಿತಿ |
Question 6 Explanation:
ಪಾರ್ಥ ಸಾರಥಿ ಶೋಮ್ ಸಮಿತಿ:(ಸಾಮಾನ್ಯ ತೆರಿಗೆ ಪ್ರವೃತ್ತಿ ತಡೆ ನಿಯಮಗಳಿಗೆ ಸಂಬಂಧಿಸಿದಂತೆ ಪ್ರಮುಖ ಅಂಶಗಳನ್ನು ಶಿಫಾರಸ್ಸು ಮಾಡವಂತೆ ಸರ್ಕಾರ “ಪಾರ್ಥ ಸಾರಥಿ ಶೋಮ್” ರವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದೆ. ಈ ಸಮಿತಿಯು ತನ್ನ ಶಿಫಾರಸ್ಸಿನಲ್ಲಿ GAAR ನ್ನು ಮುಂದಿನ ವರ್ಷದ ನಂತರ ಜಾರಿಗೊಳಿಸುವಂತೆ ತನ್ನ ವರದಿಯಲ್ಲಿ ಸೂಚಿಸಿದೆ. ಅದರಂತೆ GAAR ನ್ನು ಏಪ್ರಿಲ್ 2016 ರಿಂದ ಜಾರಿಗೊಳಿಸಲು ಸರ್ಕಾರ ತಿರ್ಮಾನಿಸಿದೆ)
Question 7 |
7. ಸಾಮೂಹಿಕ ಆತ್ಯಾಚಾರಕ್ಕೆ ಒಳಗಾಗಿ ನಿಧನ ಹೊಂದಿದ “ನಿರ್ಭಯ” ಗೆ ಯಾವ ದೇಶ “ವುವೆನ್ ಕರೇಜ್” ಪ್ರಶಸ್ತಿಯನ್ನು ನೀಡಿದೆ?
ಕೆನಡಾ | |
ಆಮೆರಿಕಾ | |
ಜಪಾನ್ | |
ರಷ್ಯಾ |
Question 7 Explanation:
ಆಮೆರಿಕಾ: (ದೆಹಲಿಯ ಬಸ್ಸಿನಲ್ಲಿ ಸಾಮೂಹಿಕ ಆತ್ಯಾಚಾರಕ್ಕೆ ಒಳಗಾಗಿ ಜೀವ ತೆತ್ತ ದೆಹಲಿ ಪ್ಯಾರಮೆಡಿಕಲ್ ವಿದ್ಯಾರ್ಥಿನಿ “ನಿರ್ಭಯ” ಗೆ ಆಮೆರಿಕಾದ “ಇಂಟರ್ ನ್ಯಾಷನಲ್ ವುವೆನ್ ಆಫ್ ಕರೇಜ್ ಆವಾರ್ಡ್-2013 (International Women of Courage Award)” ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ)
Question 8 |
8. ಈ ಕೆಳಗಿನ ಯಾವ ದೇಶದಲ್ಲಿ ಇತ್ತೀಚೆಗೆ ಮಹಿಳಾ ಕುಸ್ತಿ ವಿಶ್ವ ಕಪ್ ಕೂಟವನ್ನು ಆಯೋಜಿಸಲಾಗಿತ್ತು?
ಮಂಗೋಲಿಯಾ | |
ನಮೀಬಿಯಾ | |
ನೈರೋಬಿ | |
ಕೀನ್ಯಾ |
Question 8 Explanation:
ಮಂಗೋಲಿಯಾ:(ಮಹಿಳಾ ವಿಶ್ವಕುಸ್ತಿ ಕೂಟವನ್ನು ಮಂಗೋಲಿಯಾದಲ್ಲಿ ಆಯೋಜಿಸಲಾಗಿತ್ತು. ಈ ಕೂಟದಲ್ಲಿ ಭಾರತ ಮಹಿಳಾ ತಂಡದವರು ಐದನೇ ಸ್ಥಾನವನ್ನು ಪಡೆದರು. ಭಾರತದ ಪರ ಗೀತಾ ಫೊಗಟ್ ರವರನ್ನು ಹೊರತುಪಡಿಸಿ ಇತರೆ ಸ್ಫರ್ಧಿಗಳು ನಿರೀಕ್ಷಿತ ಪ್ರದರ್ಶನವನ್ನು ತೋರದ ಕಾರಣ ಭಾರತ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು)
Question 9 |
9. ಮೆಕ್ಸಿಕನ್ ಓಪನ್ ಟೆನ್ನಿಸ್ -2013 ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ನಲ್ಲಿ ವಿಜೇತರಾದ ಆಟಗಾರ ಯಾರು?
ರೋಜರ್ ಫೆಡರರ್ | |
ರಫೆಲ್ ನಡಾಲ್ | |
ನೊವಾಕ್ ಜೊಕಾವಿಕ್ | |
ಅಂಡ್ರೆ ಮುರ್ರೆ |
Question 9 Explanation:
ರಫೆಲ್ ನಡಾಲ್: (ಗಾಯದ ಸಮಸ್ಯೆಯಿಂದ ಬಳಲಿ ಚೇತರಿಸಿಕೊಂಡಿರುವ ರಾಫೆಲ್ ನಡಾಲ್ ರವರು ತಮ್ಮ ಅಮೋಘ ಪ್ರದರ್ಶನದಿಂದ ಮೆಕ್ಸಿಕನ್ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಚಾಂಪಿಯನ್ ಆದರು. ಈ ವರ್ಷದಲ್ಲಿ ಇದು ನಡಾಲ್ ಗೆಲ್ಲುತ್ತಿರುವ ಎರಡನೇ ಪ್ರಶಸ್ತಿ. ಫೈನಲ್ ಪಂದ್ಯದಲ್ಲಿ ಮಾಜಿ ನಂ.1 ಆಟಗಾರ ನಡಾಲ್ 6-0, 6-2 ನೇರ ಸೆಟ್ ಗಳಿಂದ ಮೂರು ಬಾರಿಯ ಹಾಲಿ ಚಾಂಪಿಯನ್ ತಮ್ಮದೇ ದೇಶದ ಡೇವಿಡ್ ಫೆರರ್ ರವರನ್ನು ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು)
Question 10 |
10. ಟಾಟಾ ಸ್ಟೀಲ್ ಸಂಸ್ಥೆಯ “ವರ್ಷದ ಕ್ರೀಡಾ ಪಟು” ಪ್ರಶಸ್ತಿಗೆ ಆಯ್ಕೆಯಾದ ದೀಪಿಕಾ ಕುಮಾರಿಯವರು ಯಾವ ಕ್ರೀಡೆಯಲ್ಲಿ ಪ್ರಸಿದ್ದರಾಗಿದ್ದಾರೆ?
ಬ್ಯಾಡ್ಮಿಂಟನ್ | |
ಟೆನ್ನಿಸ್ | |
ಬಿಲ್ಲುಗಾರಿಕೆ | |
ಕಬ್ಬಡಿ |
Question 10 Explanation:
ಬಿಲ್ಲುಗಾರಿಕೆ: (ಟಾಟಾ ಸ್ಟೀಲ್ ಸಂಸ್ಥೆಯ “ವರ್ಷದ ಕ್ರೀಡಾ ಪಟು” ಗೌರವಕ್ಕೆ ಪ್ರಸಿದ್ಧ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಆಯ್ಕೆಯಾಗಿದ್ದಾರೆ. ಸಂಸ್ಥೆಯ ಸ್ಥಾಪಕ ಜೆ.ಎನ್. ಟಾಟಾ ಅವರ 174 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ದೀಪಿಕಾಗೆ ಈ ಗೌರವ ನೀಡಲಾಯಿತು. ದೀಪಿಕಾ ಕುಮಾರಿ ಸತತ ಮೂರನೇ ಬಾರಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ)
There are 10 questions to complete.