ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು.
ಕ್ವೀಜ್ 11
Question 1 |
1. ಇತ್ತೀಚೆಗೆ ಸುದ್ದಿಯಲ್ಲಿದ್ದ “ಆಪರೇಶನ್ ರೆಡ್ ಸ್ಪೈಡರ್” ಯಾವುದಕ್ಕೆ ಸಂಬಂಧಿಸಿದೆ?
ನಕ್ಸಲ್ ಕಾರ್ಯಾಚರಣೆ | |
ಖಾಸಗಿ ಬ್ಯಾಂಕ್ ಗಳ ಬಿಳಿ ಹಣ ಪ್ರಕರಣ | |
ಕಲ್ಲಿದ್ದಲು ಅಕ್ರಮ ಗಣಿಗಾರಿಕೆ | |
ಇದ್ಯಾವುದೂ ಅಲ್ಲ |
Question 1 Explanation:
ಖಾಸಗಿ ಬ್ಯಾಂಕ್ ಗಳ ಬಿಳಿ ಹಣ ಪ್ರಕರಣ:(ದೇಶದ ಮೂರು ಪ್ರಮುಖ ಖಾಸಗಿ ಬ್ಯಾಂಕ್ ಗಳು ಕಪ್ಪುಹಣವನ್ನು ಬಿಳಿ ಹಣವನ್ನಾಗಿ ಪರಿವರ್ತನೆ ಮಾಡುತ್ತಿರುವ ದಂಧೆಯನ್ನು ಪತ್ತೆಹಚ್ಚಲು ಕೋಬ್ರಾ ಪೋಸ್ಟ್ ವೆಬ್ ಸೈಟ್ ನಡೆಸಿದ ಕಾರ್ಯಾಚರಣೆಯೇ “ಆಪರೇಶನ್ ರೆಡ್ ಸ್ಪೈಡರ್”. ICICI, HDFC ಮತ್ತು ಆಕ್ಸಿಸ್ ಬ್ಯಾಂಕ್ ಗಳು ಯಾವುದೇ ಪರಿಶೀಲನೆ ಇಲ್ಲದ ಹಣವನ್ನು ತೆಗೆದುಕೊಂಡು ಹೂಡಿಕೆ ಯೋಜನೆಗಳಲ್ಲಿ ತೊಡಗಿಸುವ ಮೂಲಕ ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಮಾಡುವ ಕೆಲಸದಲ್ಲಿ ಕೈಜೋಡಿಸುವೆ ಎಂಬ ಅಂಶವನ್ನು ಈ ಆಪರೇಶನ್ ಬಹಿರಂಗಗೊಳಿಸಿದೆ.)
Question 2 |
2. ಖ್ಯಾತ ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ರವರು ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದರು, ಈ ಕೆಳಗಿನ ಯಾವ ಚಿಕೆತ್ಸೆಯಿಂದ ಅವರು ಈಗ ಗುಣಮುಖರಾಗಿದ್ದಾರೆ.
ಕಿಮೋಥೆರಪಿ | |
ರೇಡಿಯೋಥೆರಪಿ | |
ಸರ್ಜರಿ | |
ಮೇಲಿನ ಎಲ್ಲವೂ |
Question 2 Explanation:
ಮೇಲಿನ ಎಲ್ಲವೂ:(ವಿವರಣೆ:-ಕಿಮೋಥೆರಪಿ, ರೇಡಿಯೋಥೆರಪಿ ಮತ್ತು ಸರ್ಜರಿ ಈ ಮೂರೂ ವಿಧಾನದ ಚಿಕಿತ್ಸೆಯ ಮೂಲಕ ಕ್ಯಾನ್ಸರ್ ರನ್ನು ಗುಣಪಡಿಸಬಹುದಾಗಿದೆ, ಮತ್ತು ಈ ವಿಧಾನಗಳನ್ನು ಒಂದಕ್ಕೊಂದು ಪೂರಕವಾಗಿ ಬಳಸಲಾಗುತ್ತದೆ.)
Question 3 |
3. ಮಣ್ಣಿನಲ್ಲಿ ಬೀಜ ಮೊಳಕೆಯೊಡೆಯಲು ಈ ಕೆಳಗಿನ ಯಾವ ಅಂಶಗಳು ತೀರಾ ಅವಶ್ಯಕವಾಗಿವೆ
a. ಶುಷ್ಕತನ
b. ಆಮ್ಲಜನಕ
c. ಉಷ್ಣತೆ
d. ಬೆಳಕು
e. ಇಂಗಾಲದ-ಡೈ-ಆಕ್ಸೈಡ್
a, c ಮತ್ತು d ಮಾತ್ರ | |
a, b ಮತ್ತು c ಮಾತ್ರ | |
c, d ಮತ್ತು e ಮಾತ್ರ | |
a, b ಮತ್ತು e ಮಾತ್ರ |
Question 3 Explanation:
a, b ಮತ್ತು c ಮಾತ್ರ
Question 4 |
4. ಒಂದು ವೇಳೆ ಈ ಭೂಮಿಯ ಮೇಲೆ ಎಲ್ಲಾ ಸಸ್ಯಜಾತಿಗಳು ನಶಿಸಿ ಹೋದರೆ, ಭೂಮಿಯ ವಾತಾವರಣದಲ್ಲಿ ಕೆಳಗಿನ ಯಾವ ಅನಿಲ ಇಲ್ಲದಂತಾಗುತ್ತದೆ.
ಇಂಗಾಲದ-ಡೈ-ಆಕ್ಸೈಡ್ | |
ಸಾರಜನಕ | |
ಜಲಜನಕ | |
ಆಮ್ಲಜನಕ |
Question 4 Explanation:
ಆಮ್ಲಜನಕ
Question 5 |
5. ಈ ಕೆಳಗಿನವುಗಳಲ್ಲಿ ಯಾವ ಒಂದು ವಸ್ತುವಿನಿಂದ ಕ್ಯಾನ್ಸರ್ ಉಂಟಾಗಬಹುದು ಹಾಗೂ ಅದರ ನಿಯಮಿತವಾದ ಬಳಕೆಯಿಂದ ಕ್ಯಾನ್ಸರ್ ರನ್ನು ಗುಣಪಡಿಸಬಹುದಾಗಿದೆ
ಅತೀ ನೇರಳೆ ಕಿರಣಗಳು | |
ಆಲ್ಕೋಹಾಲ್ | |
ಅಯನೈಸ್ಡ್ ರೇಡಿಯೇಶನ್ | |
ತಂಬಾಕು |
Question 5 Explanation:
ಅಯನೈಸ್ಡ್ ರೇಡಿಯೇಶನ್
Question 6 |
6. ಪ್ರಪಂಚದಲ್ಲಿ ಅತಿ ಹೆಚ್ಚು ಬಳಕೆಯಾಗುತ್ತಿರುವ ಶಕ್ತಿ ಮೂಲ ಯವುದು
ಪಳೆಯುಳಿಕೆ ಇಂಧನ | |
ಬಯೋ ಗ್ಯಾಸ್ | |
ಜಲ ವಿದ್ಯುತ್ | |
ಸೌರಶಕ್ತಿ |
Question 6 Explanation:
ಪಳೆಯುಳಿಕೆ ಇಂಧನ: (ವಿವರಣೆ:- ಪ್ರಪಂಚದ ಶೇ.80 ರಷ್ಟು ಶಕ್ತಿ ಪೆಟ್ರೋಲಿಯಂ ಮೂಲದ್ದಾಗಿದೆ, ಇದು ಹಲವಾರು ಶತಮಾನಗಳ ಹಿಂದೆ ಹುದುಗಿಹೋಗಿರುವ ಜೀವಿಗಳ ಪಳಯುಳಿಕೆಯಿಂದ ಪರ್ಯಾಂತರಗೊಂಡು ಶೇಖರಣೆಯಾಗಿದೆ)
Question 7 |
7. ಈ ಕೆಳಗಿನ ಓಜೋನ್ ಪದರದ ಬಗೆಗಿನ ಹೇಳಿಕೆಗಳಲ್ಲಿ ಯಾವುದು ಸತ್ಯವಲ್ಲ
ಸ್ಟ್ರಾಟೋಸ್ಪಿಯರ್ ಓಜೋನ್ ಪದರವನ್ನೊಳಗೊಂಡಿದೆ | |
ಓಜೋನ್ ಆಮ್ಲಜನಕದ ಒಂದು ರೂಪವಾಗಿದೆ | |
ಇದು ಅತಿ ನೇರಳೆ ಕಿರಣಗಳು ವಾತಾವರಣದಲ್ಲಿನ ಆಮ್ಲಜನಕದೊಂದಿಗೆ ವರ್ತಿಸಿ ಉಂಟಾಗುತ್ತದೆ | |
ಇದು ಆಮ್ಲಜನಕಕ್ಕಿಂತ ಹಗುರವಾಗಿದೆ |
Question 7 Explanation:
ಇದು ಆಮ್ಲಜನಕಕ್ಕಿಂತ ಹಗುರವಾಗಿದೆ:
Question 8 |
8. ಮಂಗಳ ಮತ್ತು ಗುರು ಗ್ರಹಗಳ ಮಧ್ಯ ಅಸಂಖ್ಯಾತ ಕ್ಷುದ್ರಗ್ರಹಗಳು ಸುತ್ತುತ್ತಿರುತ್ತವೆ ಹಾಗೂ ಇವುಗಳಲ್ಲಿ ಹಲವಾರು ಭೂಮಿಯ ಸಮೀಪದಲ್ಲಿಯೂ ಹಾದು ಹೋಗುತ್ತವೆ, ಆದರೆ ಬರಿಗಣ್ಣಿಗೆ ಕಾಣಿಸುವಂತ ಏಕೈಕ ಕ್ಷುದ್ರ ಗ್ರಹ ಯಾವುದು
ಪಲಾಸ್ | |
ವೆಸ್ಟಾ | |
ಸಿರಸ್ | |
ಅಸ್ಟ್ರಿಯ |
Question 8 Explanation:
ವೆಸ್ಟಾ
Question 9 |
9. ಕಂಪ್ಯೂಟರ್ ಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಸರಿಯಾದ ಅನುಕ್ರಮವನ್ನು ಗುರುತಿಸಿ
KB, MB, GB, PETA, TB, EXA, YOTTA, ZETTA | |
KB, MB, GB, TB, PETA, EXA, ZETTA, YOTTA | |
MB, KB, TB, EXA, GB, PETA, YOTTA, ZETTA | |
GB, KB, TB, MB, ZETTA, EXA, YOTTA, PETA |
Question 9 Explanation:
KB, MB, GB, TB, PETA, EXA, ZETTA, YOTTA: (ವಿವರಣೆ:- ಇವು ಕಂಪ್ಯೂಟರ್ ನ ದತ್ತಾಂಶ ಅಳೆಯುವ ಮಾಪನಗಳಾಗಿದ್ದು 1KB-1024 byte ಗಳನ್ನು, 1MB-1024 KB ಗಳನ್ನು, 1GB-1024 MB ಗಳನ್ನು……ಹೊಂದಿರುತ್ತವೆ)
Question 10 |
10. ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾದ ಹೇಳಿಕೆ ಅಲ್ಲ
ಸೂರ್ಯನ ಕಿರಣಗಳು ಭೂಮಿ ತಲುಪಲು 8 ನಿಮಿಷ 16 ಸೆಕೆಂಡ್ ತೆಗೆದುಕೊಳ್ಳುತ್ತದೆ | |
ಶನಿ ಗ್ರಹ ಅತೀ ಹೆಚ್ಚು ಉಪಗ್ರಹಗಳನ್ನು ಹೊಂದಿದೆ | |
ಪ್ಲೂಟೋ ಒಂದು ಗ್ರಹವಲ್ಲ | |
ಹ್ಯಾಲಿ ಧೂಮಕೇತು 65 ವರ್ಷಗಳಿಗೊಮ್ಮೆ ಭೂಮಿಗೆ ಕಾಣಿಸಿಕೊಳ್ಳುತ್ತದೆ |
Question 10 Explanation:
ಹ್ಯಾಲಿ ಧೂಮಕೇತು 65 ವರ್ಷಗಳಿಗೊಮ್ಮೆ ಭೂಮಿಗೆ ಕಾಣಿಸಿಕೊಳ್ಳುತ್ತದೆ: (ವಿವರಣೆ:- ಹ್ಯಾಲಿ ಧೂಮಕೇತು ಪ್ರತಿ 76 ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುತ್ತದೆ, 1986 ರಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿತ್ತು)
There are 10 questions to complete.