ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು.
ಕ್ವೀಜ್ 9
Question 1 |
1. ರಾಷ್ಟ್ರೀಯ ಯೋಜನಾ ಮಂಡಳಿ ಇತ್ತೀಚೆಗೆ ಬಿಡುಗಡೆಗೊಳಿಸಿದ “ಪರಿಸರ ನಿರ್ವಹಣೆ ಸೂಚ್ಯಂಕ” ದಲ್ಲಿ ಅಗ್ರಸ್ಥಾನದಲ್ಲಿರುವ ರಾಜ್ಯ ಯಾವುದು?
ದೆಹಲಿ | |
ಆಂಧ್ರ ಪ್ರದೇಶ | |
ಸಿಕ್ಕಿಂ | |
ಕರ್ನಾಟಕ |
Question 1 Explanation:
ಆಂಧ್ರ ಪ್ರದೇಶ: (ಪರಿಸರ ನಿರ್ವಹಣೆ ಸೂಚ್ಯಂಕ ಹೊರಬಿದ್ದಿದ್ದು ರಾಷ್ಟ್ರ ರಾಜಧಾನಿ ದೆಹಲಿ ಅತ್ಯಂತ ಕಳಪೆ ಸಾಧನೆ ತೋರಿದೆ. ಯೋಜನಾ ಮಂಡಳಿ ಹೊರತಂದಿರುವ ಈ ಸೂಚ್ಯಂಕದಲ್ಲಿ ದೆಹಲಿಗೆ 32 ನೇ ಸ್ಥಾನ ದೊರೆತಿದೆ. ಕಳೆದ ಬಾರಿ ದೆಹಲಿ 26 ನೇ ಸ್ಥಾನವನ್ನು ಪಡೆದಿತ್ತು. ಆಂಧ್ರ ಪ್ರದೇಶ ಪಟ್ಟಿಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದೆ. ಒಟ್ಟಾರೆಯಾಗಿ 0.7696 ಅಂಕಗಳನ್ನು ಗಳಿಸುವ ಮೂಲಕ ಆಂಧ್ರ ಈ ಸಾಧನೆಯನ್ನು ಮಾಡಿದೆ. ಇದಕ್ಕೆ ಹೋಲಿಸಿದರೆ ದೆಹಲಿಯ ಒಟ್ಟಾರೆ ಅಂಕ ಕೇವಲ 0.4246 ಮಾತ್ರ. ಪಟ್ಟಿಯಲ್ಲಿ ಮೊದಲ ಐದು ಸ್ಥಾನದಲ್ಲಿರುವ ರಾಜ್ಯಗಳು: ಆಂಧ್ರ ಪ್ರದೇಶ (0.7696), ಸಿಕ್ಕಿಂ (0.7478), ಹಿಮಾಚಲ ಪ್ರದೇಶ (0.7414), ಮಧ್ಯಪ್ರದೇಶ (0.7334) ಮತ್ತು ಮಹಾರಾಷ್ಟ್ರ (0.7176))
Question 2 |
2. ‘’ಪ್ರಿಯದರ್ಶಿನಿ ಆವಾಸ್ ಯೋಜನೆ” ಯಾವ ರಾಜ್ಯದ ವಸತಿ ಯೋಜನೆಯಾಗಿದೆ?
ರಾಜಸ್ತಾನ | |
ಗುಜರಾತ್ | |
ಹರಿಯಾಣ | |
ಮಧ್ಯಪ್ರದೇಶ |
Question 2 Explanation:
ಹರಿಯಾಣ: (ಪ್ರಿಯದರ್ಶಿನಿ ಆವಾಸ್ ಯೋಜನೆಯು ಹರಿಯಾಣ ರಾಜ್ಯ ಸರ್ಕಾರದ ಪ್ರಮುಖ ವಸತಿ ಯೋಜನೆಯಾಗಿದ್ದು ಇತ್ತೀಚೆಗೆ ಮಂಡಿಸಿದ ಬಜೆಟ್ ನಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿ ಮುಂದಿನ ಎರಡು ವರ್ಷಗಳಲ್ಲಿ ಎರಡು ಲಕ್ಷ ಮನೆಗಳ ನಿರ್ಮಾಣ ಮಾಡುವ ಗುರಿಯನ್ನು ಹೊಂದಲಾಗಿದೆ. ಪ್ರತಿ ಮನೆ ನಿರ್ಮಾಣಕ್ಕೆ ಪ್ರತಿ ಫಲಾನುಭವಿಗೆ 1 ಲಕ್ಷ ಸಹಾಯ ಧನವನ್ನು ಈ ಯೋಜನೆಯಡಿ ನೀಡಲಾಗುವುದು. ಇದಕ್ಕಾಗಿ ಸುಮಾರು 1,350 ಕೋಟಿಯನ್ನು ಮೀಸಲಿಡಲಾಗಿದೆ)
Question 3 |
3. ದೀರ್ಘಕಾಲದ ಕ್ಯಾನ್ಸರ್ ನಿಂದ ಬಳಲಿ ಮರಣ ಹೊಂದಿದ “ಹ್ಯೂಗೋ ಷಾವೇಜ್” ರವರು ಯಾವ ದೇಶದ ಅಧ್ಯಕ್ಷರಾಗಿದ್ದರು?
ವೆನುಜುವೆಲಾ | |
ಇಟಲಿ | |
ಮಾರಿಷಸ್ | |
ಸೊಮಾಲಿಯಾ |
Question 3 Explanation:
ವೆನುಜುವೆಲಾ: (ವೆನಿಜುವೆಲಾದ ಅಧ್ಯಕ್ಷ ಹ್ಯೂಗೋ ಷಾವೇಜ್ ರವರು ದೀರ್ಘಕಾಲದ ಕ್ಯಾನ್ಸರ್ ರೋಗದಿಂದ ಬಳಲಿ ಮರಣ ಹೊಂದಿದರು. ಕಳೆದ ತಿಂಗಳು ಕ್ಯೂಬಾ ದೇಶದಲ್ಲಿ ಚಿಕತ್ಸೆ ಪಡೆದು ತಮ್ಮ ದೇಶಕ್ಕೆ ವಾಪಸ್ಸು ಆಗಿದ್ದ ಷಾವೇಜ್ ರವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಹದಗೆಟ್ಟಿತ್ತು. 58 ವರ್ಷ ವಯಸ್ಸಿನ ಷಾವೇಜ್ ರವರ ಅಕಾಲಿಕ ಮರಣ ಸುದ್ದಿಯನ್ನು ವೆನುಜಿವೆಲಾದ ಉಪಾಧ್ಯಕ್ಷರಾದ ನಿಕೊಲೊಸ್ ಮಡ್ಯುರೊ ರವರು ಖಚಿತ ಪಡಿಸಿದರು. ರಾಜಕೀಯ ದೂರ ದೃಷ್ಠಿ, ಸಮಗ್ರ ಅಭಿವೃದ್ದಿಯ ನೋಟ ಮತ್ತು ವಿಶಿಷ್ಟ ವ್ಯಕ್ತಿತ್ವದಿಂದ ಷಾವೇಜ್ ರವರು ಇಡೀ ವಿಶ್ವದ ಗಮನ ಸೆಳೆದಿದ್ದರು)
Question 4 |
4. ಹೊಂದಿಸಿ ಬರೆಯಿರಿ:
ಅ. ತ್ರಿಪುರ 1. ಮಾಣಿಕ್ ಸರ್ಕಾರ್
ಆ. ಮೇಘಾಲಯ 2. ಮುಕುಲ್ ಸಂಗ್ಮಾ
ಇ. ನಾಗಾಲ್ಯಾಂಡ್ 3. ನಿಪಿಯೊ ರಿಯೊ
ಅ-1, ಆ-2, ಇ-3 | |
ಅ-2, ಆ-1, ಇ-3 | |
ಅ-3, ಆ-2, ಇ-1 | |
ಅ-1, ಆ-3, ಇ-2 |
Question 4 Explanation:
ಅ-1, ಆ-2, ಇ-3 :
Question 5 |
5. “ಶ್ರೀ ದೇವಿ ಅಹಲ್ಯಾ ಬಾಯಿ ಪ್ರಶಸ್ತಿಯು” ಯಾವ ರಾಜ್ಯಕ್ಕೆ ಸಂಬಂಧಿಸಿದ ಪ್ರಶಸ್ತಿಯಾಗಿದೆ?
ಗುಜರಾತ್ | |
ರಾಜಸ್ತಾನ | |
ಮಧ್ಯ ಪ್ರದೇಶ | |
ಒಡಿಶಾ |
Question 5 Explanation:
ಮಧ್ಯ ಪ್ರದೇಶ: (ಶ್ರೀ ದೇವಿ ಅಹಲ್ಯಾ ಬಾಯಿ ಪ್ರಶಸ್ತಿಯು ಮಧ್ಯಪ್ರದೇಶದ ಶ್ರೀ ಅಹಿಲೋತ್ಸವ ಸಮಿತಿ ನೀಡುವ ಪ್ರಶಸ್ತಿಯಾಗಿದೆ. ಈ ಬಾರಿ ಈ ಪ್ರಶಸ್ತಿಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರಿಗೆ ನೀಡಿ ಸನ್ಮಾನಿಸಲಾಗಿದೆ. ಇಂಧೋರ್ ನಲ್ಲಿ ನಡೆದ ಸಮಾರಂಭದಲ್ಲಿ ಹೆಗ್ಗಡೆ ರವರಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು)
Question 6 |
6. ಕೇಂದ್ರ ಸರ್ಕಾರ ಇತ್ತೀಚೆಗೆ ಒಪ್ಪಿಗೆ ನೀಡಿರುವ “ಕಾಲಮಿತಿ ನಾಗರಿಕ ಸೇವಾ ಮಸೂದೆಯಡಿ” ಸೇವೆ ನೀಡಲು ವಿಳಂಬವಾದರೆ ವಿಧಿಸಬಹುದಾದ ಕನಿಷ್ಠ ಮತ್ತು ಗರಿಷ್ಟ ದಂಡ ಎಷ್ಟು?
ರೂ.250 ಮತ್ತು ರೂ.5000 | |
ರೂ.250 ಮತ್ತು ರೂ.50000 | |
ರೂ.500 ಮತ್ತು ರೂ.10000 | |
ರೂ.500 ಮತ್ತು ರೂ.20000 |
Question 6 Explanation:
ರೂ.250 ಮತ್ತು ರೂ.50000: (ದೇಶದ ನಾಗರಿಕರಿಗೆ ವಿವಿಧ ಸೇವೆಗಳನ್ನು ಕಾಲಮಿತಿಯೊಳಗೆ ನೀಡಲು ಅವಕಾಶ ಕಲ್ಪಿಸುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಪಿಂಚಣಿ, ಪಾಸ್ ಪೋರ್ಟ್, ರೇಷನ್ ಕಾರ್ಡ್ ಜಾತಿ ಪ್ರಮಾಣ ಪತ್ರ ಮತ್ತು ಮರಣ ಪ್ರಮಾಣ ಪತ್ರ ಸೇರಿದಂತೆ ವಿವಿಧ ಸೇವೆಗಳನ್ನು ನಿರ್ದಿಷ್ಟ ಸಮಯದಲ್ಲಿ ಒದಗಿಸಬೇಕಾಗಿದೆ. ಒಂದು ವೇಳೆ ನಿಗದಿತ ಸಮಯದೊಳಗೆ ಸೇವೆಯನ್ನು ಒದಗಿಸಲು ವಿಫಲವಾಗುವ ಸಂಸ್ಥೆ/ಅಧಿಕಾರಿ (ಸರ್ಕಾರಿ)ಗೆ ದಿನಕ್ಕೆ ಕನಿಷ್ಠ ರೂ.250 ರಿಂದ ಗರಿಷ್ಠ 50,000 ರೂಪಾಯಿಗಳ ವರಗೆ ದಂಡ ವಿಧಿಸಬಹುದಾಗಿದೆ)
Question 7 |
7. ವಿಶ್ವದಲ್ಲೇ ಅತಿ ದೊಡ್ಡ ಮ್ಯಾಗ್ನೇಟ್ (ಅಯಸ್ಕಾಂತವನ್ನು) ಯಾವ ಸಂಶೋಧನಾ ಸಂಸ್ಥೆಯಲ್ಲಿ ಅಭಿವೃದ್ದಿಪಡಿಸಲಾಗಿದೆ?
ಬಾಬಾ ಅಣು ಸಂಶೋಧನಾ ಕೇಂದ್ರ(BARC) | |
ಟಾಟಾ ಫಂಡಮೆಂಟಲ್ ಸೈನ್ಸ್ ಇನ್ ಸ್ಟಿಟ್ಯೂಟ್ | |
ಪ್ಲಾಸ್ಮ ರಿಸರ್ಚ್ ಇನ್ ಸ್ಟಿಟ್ಯೂಟ್ | |
ಇದ್ಯಾವುದು ಅಲ್ಲ |
Question 7 Explanation:
ಬಾಬಾ ಅಣು ಸಂಶೋಧನಾ ಕೇಂದ್ರ(BARC): (ಬಾಬಾ ಅಣು ಸಂಶೋಧನಾ ಕೇಂದ್ರ (Baba Atomic Research Centre) ವಿಶ್ವದಲ್ಲೇ ಅತ್ಯಂತ ದೊಡ್ಡ ಗಾತ್ರದ ಅಯಸ್ಕಾಂತವನ್ನು ಅಭಿವೃದ್ದಿಪಡಿಸುತ್ತಿರುವುದಾಗಿ ಹೇಳಿದೆ. ಈ ಅಯಸ್ಕಾಂತವು ಬರೊಬ್ಬರಿ 50000 ಟನ್ ತೂಕವನ್ನು ಹೊಂದಿರುವುದಾಗಿ BARC ನ ಮುಖ್ಯಸ್ಥರು ತಿಳಿಸಿದ್ದಾರೆ. ಜಿನಿವಾದ CERN ನ ಕಂಪಾಕ್ಟ್ ಮ್ಯೂನ್ ಸೊಲೆನೈಡ್ (Compact Muon Solenoid) ನಲ್ಲಿರುವ ಅಯಸ್ಕಾಂತ ಸದ್ಯ ವಿಶ್ವದ ಅತಿ ದೊಡ್ಡ ಅಯಸ್ಕಾಂತವೆನಿಸಿದೆ. ಇದರ ತೂಕ ಸುಮಾರು 4000 ದಿಂದ 5000 ಟನ್ ಗಳ ಮಾತ್ರ)
Question 8 |
8. ಇತ್ತೀಚೆಗೆ ಸುದ್ದಿಯಲ್ಲಿದ “ದೆಬೋರಾ” ರವರು ಯಾವ ಕ್ರೀಡೆಯಲ್ಲಿ ಪ್ರಸಿದ್ದರಾಗಿದ್ದಾರೆ?
ಸೈಕ್ಲಿಂಗ್ | |
ಈಜು | |
ಶೂಟಿಂಗ್ | |
ಬೇಸ್ ಬಾಲ್ |
Question 8 Explanation:
ಸೈಕ್ಲಿಂಗ್: (ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಏಷ್ಯನ್ ಸೈಕ್ಲಿಂಗ್ ಚಾಂಪಿಯನ್ ಷಿಪ್ ನಲ್ಲಿ ದೆಬೋರಾ ರವರು ಕಂಚಿನ ಪದಕವನ್ನು ಗೆದ್ದರು.)
Question 9 |
9. ಈ ಕೆಳಗಿನವರಲ್ಲಿ ಯಾರಿಗೆ ಇತ್ತೀಚೆಗೆ ಪ್ರಥಮ “ಟಾಗೋರ್” ಪ್ರಶಸ್ತಿಯನ್ನು ಮರೋಣತ್ತರವಾಗಿ ನೀಡಲಾಯಿತು?
ಭೀಮಾ ಸೇನ್ ಜೋಶಿ | |
ಉಸ್ತಾದ್ ಬಿಸ್ಮಿಲ್ಲಾ ಖಾನ್ | |
ಶ್ರೀ ಪಂಡಿತ್ ರವಿ ಶಂಕರ್ | |
ಗಂಗೂಬಾಯಿ ಹಾನಗಲ್ಲ |
Question 9 Explanation:
ಶ್ರೀ ಪಂಡಿತ್ ರವಿ ಶಂಕರ್: (ಸಿತಾರ್ ಮಾಂತ್ರಿಕ ರವಿ ಶಂಕರ್ ರವರಿಗೆ ಸಾಂಸ್ಕೃತಿಕ ಸಾಮರಸ್ಯಕ್ಕೆ ನೀಡಲಾಗುವ ಟಾಗೋರ್ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಗಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ರವರು ಈ ಪ್ರಶಸ್ತಿಯನ್ನು ರವಿ ಶಂಕರ್ ರವರ ಧರ್ಮಪತ್ನಿ ಸುಕನ್ಯಾ ಶಂಕರ್ ರವರಿಗೆ ಪ್ರದಾನ ಮಾಡಿದರು. ಪ್ರಧಾನ ಮಂತ್ರಿ ಮನ ಮೋಹನ್ ಸಿಂಗ್ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಈ ಸಂದರ್ಭದಲ್ಲಿ ಹಾಜರಿದ್ದರು. ಈ ಪ್ರಶಸ್ತಿಯು ರೂ.2 ಕೋಟಿ ನಗದನ್ನು ಒಳಗೊಂಡಿದೆ)
Question 10 |
10. ಇವರಲ್ಲಿ ಯಾರು ಕರ್ನಾಟಕ ಹೈಕೋರ್ಟನ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ?
ನ್ಯಾ. ಎಂ.ಡಿ. ವಘೇಲಾ | |
ನ್ಯಾ. ಕೆ. ಶ್ರೀಧರ್ ರಾವ್ | |
ನ್ಯಾ. ಸುಭಾಷ್ ಅಡಿ | |
ನ್ಯಾ. ಭಾಸ್ಕರ್ ರಾವ್ |
Question 10 Explanation:
ನ್ಯಾ. ಎಂ.ಡಿ. ವಘೇಲಾ: (ರಾಜ್ಯ ಹೈಕೋರ್ಟ್ ನ ನೂತನ ಮುಖ್ಯ ನ್ಯಾಯಾಧೀಶರಾಗಿ ಡಿ. ಎನ್. ವಘೇಲಾ ರವರು ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ವಘೇಲಾ ರವರು ಭಗವಂತನ ಹೆಸರಿನಲ್ಲಿ ಗೌಪ್ಯತೆಯ ಪ್ರತಿಜ್ಞಾ ವಿಧಿಯನ್ನು ರಾಜ್ಯಪಾಲರಿಂದ ಸ್ವೀಕರಿಸಿದರು)
There are 10 questions to complete.