ಭಾರತ ಮತ್ತು ಕತಾರ್ ನಡುವೆ ಏಳು ಒಪ್ಪಂದಗಳಿಗೆ ಸಹಿ
ಪಂಚರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ಮೋದಿ ರವರು ತಮ್ಮ ಕತಾರ್ ಭೇಟಿ ವೇಳೆ ಭಾರತ ಮತ್ತು ಕತಾರ್ ರಾಷ್ಟ್ರಗಳ ನಡುವೆ ಪ್ರಮುಖ ಏಳು ಒಪ್ಪಂದಗಳಿಗೆ ಸಹಿ ಹಾಕಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಕತಾರ್ ಅಮೀರ ಶೇಖ್ ತಮಿಮ್ ಅವರ ನಡುವೆ ನಡೆದ ಮಾತುಕತೆಯ ನಂತರ ಏಳು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
ಭಾರತ – ಆಪ್ಘಾನಿಸ್ತಾನ ಸ್ನೇಹಸಂಬಂಧ ಅಣೆಕಟ್ಟು ಲೋಕಾರ್ಪಣೆ
ಭಾರತ-ಅಫ್ಘಾನಿಸ್ತಾನ ನಡುವಿನ ಸ್ನೇಹಸಂಬಂಧದ ಪ್ರತೀಕ ಎಂದೇ ಬಣ್ಣಿಸಲಾಗಿರುವ ಸಲ್ಮಾ ಅಣೆಕಟ್ಟನ್ನು ಪ್ರಧಾನಿ ನರೇಂದ್ರ ಮೋದಿ ರವರು ತಮ್ಮ ಆಪ್ಘನ್ ಪ್ರವಾಸದ ವೇಳೆ ಆಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಜೊತೆಗೂಡಿ ಉದ್ಘಾಟನೆ ಮಾಡಿದ್ದಾರೆ. ಸುಮಾರು ರೂ 1,700 ಕೋಟಿ ವೆಚ್ಚದಲ್ಲಿ ಭಾರತ ಈ ಅಣೆಕಟ್ಟೆಯನ್ನು ನಿರ್ವಿುಸಿಕೊಟ್ಟಿದೆ.
ಸ್ನೇಹಸಂಬಂಧ ಅಣೆಕಟ್ಟಿನ ಬಗ್ಗೆ:
- ಆಪ್ಘಾನಿಸ್ತಾನದ ಪಶ್ಚಿಮ ಹೇರತ್ನ ಚಿಶ್ತ್ ಎ ಶರೀಫ್ ಪ್ರದೇಶದ ಹರಿರುದ್ ನದಿಗೆ ಈ ಅಣೆಕಟ್ಟನ್ನು ನಿರ್ವಿುಸಲಾಗಿದೆ. ಇದರಿಂದ ಅಂದಾಜು 75 ಸಾವಿರ ಹೆಕ್ಟೇರ್ ಭೂಮಿಗೆ ನೀರಾವರಿ ಅನುಕೂಲ ದೊರೆಯಲಿದೆ ಹಾಗೂ 42 ಮೆ.ವಾ. ವಿದ್ಯುತ್ ಉತ್ಪಾದಿಸಲಿದೆ. ಈ ಅಣೆಕಟ್ಟಿನ ಎತ್ತರ 104.3ಮೀ, ಉದ್ದ 540 ಮೀ ಮತ್ತು ಅಗಲ 450 ಮೀ ಇದೆ.
- ಈ ಯೋಜನೆಯನ್ನು ಭಾರತ ಸರ್ಕಾರದ ಸಂಸ್ಥೆ ವ್ಯಾಪ್ಕೋಸ್ ಲಿಮಿಟೆಡ್ (WAPCOS Ltd) ನಿರ್ವಹಿಸಿದೆ. ಈ ಅಣೆಕಟ್ಟೆಗೆ ಅಗತ್ಯ ವಿರುವ ಎಲ್ಲ ಸಾಮಗ್ರಿಗಳನ್ನೂ ಭಾರತದಿಂದ ರಫ್ತು ಮಾಡ ಲಾಗಿದೆ. ಭಾರತದಿಂದ ಇರಾನ್ನ ಬಂದರ್ ಎ ಅಬ್ಬಾಸ್ ಬಂದರಿಗೆ ಸಾಗಿಸಿ ಅಲ್ಲಿಂದ ಇರಾನ್ -ಅಫ್ಘಾನ್ನ ಇಸ್ಲಾಮ್ ಕಿಲಾ ಗಡಿಯ ಮೂಲಕ 1,500 ಕಿ.ಮೀ ರಸ್ತೆ ಮಾರ್ಗದಲ್ಲಿ ಸಾಗಿಸಲಾಗಿದೆ. 1,500ಕ್ಕೂ ಹೆಚ್ಚು ಭಾರತ ಹಾಗೂ ಆಫ್ಘನ್ ಇಂಜಿನಿಯರುಗಳು ಈ ಅಣೆಕಟ್ಟೆ ನಿರ್ವಣದಲ್ಲಿ ಹಲವು ವರ್ಷಗಳವರೆಗೆ ಕೆಲಸ ಮಾಡಿದ್ದಾರೆ.
- ಕಳೆದ ಆರು ತಿಂಗಳ ಹಿಂದೆ ಮೋದಿ ಅವರು ಆಪ್ಘಾನ್ ಭೇಟಿ ನೀಡಿದ್ದ ವೇಳೆ ಆಫ್ಘನ್ನ ಸಂಸತ್ ಭವನದ ಉದ್ಘಾಟನೆ ಮಾಡಿದ್ದರು. ಈ ಸಂಸತ್ ಭವನವನ್ನೂ ಭಾರತವೇ ನಿರ್ಮಾಣ ಮಾಡಿತ್ತು. ಪ್ರಸ್ತುತ ಭಾರತ ಆಪ್ಘಾನಿಸ್ತಾನದಲ್ಲಿ 13 ಸಾವಿರ ಕೋಟಿ ರೂ. ವೆಚ್ಚದ ಯೋಜನೆಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
ನರೇಂದ್ರ ಮೋದಿಗೆ ಆಪ್ಘಾನಿಸ್ತಾನದ ಅತ್ಯುನ್ನತ ನಾಗರೀಕ “ಅಮೀರ್ ಅಮಾನುಲ್ಲಾಖಾನ್ ಪ್ರಶಸ್ತಿ”
- ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರು ಆಪ್ಘಾನಿಸ್ತಾನದ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ “ಅಮೀರ್ ಅಮಾನುಲ್ಲಾಖಾನ್” ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿಯನ್ನು ಆಪ್ಘಾನ್ ಅಧ್ಯಕ್ಷ ಅಶ್ರಪ್ ಘನಿ ರವರು ಮೋದಿ ರವರಿಗೆ ನೀಡಿ ಸನ್ಮಾಸಿದರು