ದಕ್ಷಿಣಾ ಆಫ್ರಿಕಾ ಸಾಹಿತಿ ಲಿಡುಡುಮಲಿಂಗನಿ (Lidudumalingani) ಗೆ ಒಲಿದೆ 2016 ಕೈನ್ ಪ್ರಶಸ್ತಿ
ದಕ್ಷಿಣಾ ಆಫ್ರಿಕಾದ ಖ್ಯಾತಿ ಸಾಹಿತಿ, ಸಿನಿಕಾರ ಹಾಗೂ ಪೋಟೊಗ್ರಾಫರ್ ಆಗಿರುವ ಲಿಡುಡುಮಲಿಂಗನಿ ರವರಿಗೆ ಪ್ರತಿಷ್ಟಿತ 2016 ನೇ ಸಾಲಿನ ಕೈನ್ ಪ್ರಶಸ್ತಿಯನ್ನು ನೀಡಲಾಗಿದೆ.
- ಲಿಡುಡುಮಲಿಂಗನಿ ರವರ ಪ್ರಸಿದ್ದ ಸಣ್ಣ ಕಥೆ “ಮೆಮೊರೀಸ್ ವಿ ಲಾಸ್ಟ್” ಗೆ ಈ ಪ್ರಶಸ್ತಿ ಸಂದಿದೆ. ಸಾಂಪ್ರಾದಾಯಿಕ ನಂಬಿಕಗಳ ಮೂಲಕ ಸಿಝೋಪ್ರೆನಿಯಾ (Schizophrenia) ಕಾಯಿಲೆಯನ್ನು ವಾಸಿ ಮಾಡುವ ಸುತ್ತ ಬರೆಯಲಾಗಿದೆ.
ಕೈನ್ ಪ್ರಶಸ್ತಿಯ ಬಗ್ಗೆ (Caine Prize):
- ಕೈನ್ ಪ್ರಶಸ್ತಿಯು ವಾರ್ಷಿಕ ಸಾಹಿತ್ಯ ಪ್ರಶಸ್ತಿಯಾಗಿದ್ದು, ಆಫ್ರಿಕಾದ ಸಾಹಿತಿಗಳಿಗೆ ನೀಡಲಾಗುತ್ತಿದೆ. ಈ ಪ್ರಶಸ್ತಿಯನ್ನು ಆಫ್ರಿಕಾದ ಬುಕರ್ ಎಂತಲೇ ಕರೆಯಲಾಗುತ್ತಿದೆ.
- ಆಂಗ್ಲ ಭಾಷೆಯಲ್ಲಿ ಬರೆಯಲಾದ ಸಣ್ಣ ಕಥೆಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುವುದು.
- ಈ ಪ್ರಶಸ್ತಿಯನ್ನು 2010 ರಲ್ಲಿ ಯು.ಕೆ ಯಲ್ಲಿ ಸರ್ ಮೈಕಲ್ ಹ್ಯಾರಿಸ್ ಕೈನ್ ರವರ ಸ್ಮರಣಾರ್ಥ ಸ್ಥಾಪಿಸಲಾಗಿದೆ. ಕೈನ್ ರವರು ಬೂಕರ್ ಗ್ರೂಪ್ ನ ಮಾಜಿ ಅಧ್ಯಕ್ಷರು.
ಭಾರತ- ಮೊಜಾಂಬಿಕ್ ನಡುವೆ ಮೂರು ಒಪ್ಪಂದಕ್ಕೆ ಸಹಿ
ದ್ವಿದಳ ಧಾನ್ಯ ವ್ಯಾಪಾರ, ಕ್ರೀಡೆ ಹಾಗೂ ಔಷಧ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ನೀಡುವ ಸಲುವಾಗಿ ಭಾರತ ಮತ್ತು ಮೊಜಾಂಬಿಕ್ ಸಹಿ ಹಾಕಿವೆ. ಆಫ್ರಿಕಾದ ನಾಲ್ಕು ದೇಶಗಳಿಗೆ ಪ್ರಯಾಣ ಬೆಳೆಸಿರುವ ಪ್ರಧಾನಿ ಮೋದಿರವರು ತಮ್ಮ ಮೊಜಾಂಬಿಕ್ ದೇಶದ ಭೇಟಿ ವೇಳೆ ಮೊಜಾಂಬಿಕ್ ನ ಅಧ್ಯಕ್ಷರಾದ ಫಿಲಿಪೆ ಯೂಸಿ ರವರ ಸಮ್ಮುಖದಲ್ಲಿ ಸಹಿ ಹಾಕಿದರು.
ಮಹತ್ವದ ಒಪ್ಪಂದಗಳು:
- ಧಾನ್ಯಗಳ ಖರೀದಿಗೆ ಸಂಬಂಧಪಟ್ಟಂತೆ ದೀರ್ಘಾವಧಿ ಒಪ್ಪಂದ
- ಯುವ ವ್ಯವಹಾರಗಳು ಮತ್ತು ಕ್ರೀಡೆಗಳಿಗೆ ಸಂಬಂಧ ಪಟ್ಟಂತೆ ಒಪ್ಪಂದ
- ಮಾದಕ ದ್ರವ್ಯ ಸಾಗಣೆ ತಡೆ ನಿಟ್ಟಿನಲ್ಲಿ ಸಹಕಾರ ಒಪ್ಪಂದ
ಇವುಗಳ ಜೊತೆ ಮೊಜಾಂಬಿಕ್ ಜನರ ಆರೋಗ್ಯ ವ್ಯವಸ್ಥೆ ಸುಧಾರಿಸುವ ಸಲುವಾಗಿ ಬಾರತವು ಏಡ್ಸ್ ಚಿಕಿತ್ಸೆ ಸೇರಿದಂತೆ ವಿವಿಧ ಔಷಧಗಳನ್ನು ಮೊಜಾಂಬಿಕ್ಗೆ ಕೊಡುಗೆಯಾಗಿ ನೀಡಲಿದೆ.