ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.
ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -5
Question 1 |
1.ಜರ್ಮನಿಯಲ್ಲಿ ಇತ್ತೀಚೆಗೆ ನಡೆದ 13ನೇ ಭಾರತೀಯ ಸಿನಿಮೋತ್ಸವದಲ್ಲಿ “ಜರ್ಮನ್ ಸ್ಟಾರ್ ಆಫ್ ಇಂಡಿಯಾ” ಪ್ರಶಸ್ತಿಯನ್ನು ಪಡೆದ ಚಿತ್ರ ಯಾವುದು?
ನಾನು ಅವನಲ್ಲ ಅವಳು | |
ತಿಥಿ | |
ಮೈತ್ರಿ | |
ರಂಗಿತರಂಗ |
Question 1 Explanation:
ತಿಥಿ:
ಕನ್ನಡದ ತಿಥಿ ಚಿತ್ರ ಜರ್ಮನಿಯ ಸ್ಟುಟ್ಗಾರ್ಟ್ನಲ್ಲಿ 4 ದಿನಗಳ ಕಾಲ ನಡೆದ 13ನೇ ಭಾರತೀಯ ಸಿನಿಮೋತ್ಸವದಲ್ಲಿ ‘ಜರ್ಮನ್ ಸ್ಟಾರ್ ಆಫ್ ಇಂಡಿಯಾ’ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಕಳೆದ ವರ್ಷ ಈ ಪ್ರಶಸ್ತಿಯನ್ನು ಮರಾಠಿಯ ‘ಕೋರ್ಟ್’ ಚಿತ್ರ ಪಡೆದುಕೊಂಡಿತ್ತು. ಜುಲೈ 20ರಿಂದ 24ರ ವರೆಗೆ ನಡೆದ ಚಿತ್ರೋತ್ಸವದಲ್ಲಿ ನೀರಜಾ, ತೀನ್, ಆಲಿಗಡ್, ಆಂಗ್ರಿ ಇಂಡಿಯನ್ ಗಾಡೆಸಸ್, ಜುಬಾನ್ ಮುಂತಾದ ಚಿತ್ರಗಳು ಪ್ರದರ್ಶನಗೊಂಡವು. ಅವುಗಳ ನಡುವೆ ‘ಅತ್ಯುತ್ತಮ ಚಿತ್ರ’ ಎನಿಸಿಕೊಳ್ಳುವ ಮೂಲಕ ಕನ್ನಡದ ‘ತಿಥಿ’ ಮತ್ತೆ ಎಲ್ಲರ ಗಮನ ಸೆಳೆದಿದೆ. ರಾಮರೆಡ್ಡಿ ನಿರ್ದೇಶನದ ತಿಥಿ ಚಿತ್ರ ಈಗಾಗಲೇ ಅನೇಕ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
Question 2 |
2.ಕರ್ನಾಟಕ ರಾಜ್ಯ ಇತ್ತೀಚೆಗೆ ಅಪೌಷ್ಠಿಕತೆ ನಿವಾರಿಸುವ ಸಲುವಾಗಿ ಎಷ್ಟು ವರ್ಷದ ಮಕ್ಕಳಿಗೆ ಕೆನೆಭರಿತ ಹಾಲನ್ನು ವಿತರಿಸಲು ನಿರ್ಧರಿಸಿದೆ?
6 ತಿಂಗಳಿಂದ 6 ವರ್ಷ
| |
6 ತಿಂಗಳಿಂದ 8 ವರ್ಷ | |
6 ವರ್ಷದಿಂದ 12 ವರ್ಷ | |
6 ವರ್ಷದಿಂದ 10 ವರ್ಷ |
Question 2 Explanation:
6 ತಿಂಗಳಿಂದ 6 ವರ್ಷ :
ರಾಜ್ಯದಲ್ಲಿನ 6 ತಿಂಗಳಿಂದ 6 ವರ್ಷಗಳ ವರೆಗಿನ ಅಂಗನವಾಡಿ ಮಕ್ಕಳಿಗೆ ಕೆನೆಭರಿತ ಹಾಲನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದರಿಂದ ರಾಜ್ಯದ 39 ಲಕ್ಷ ಮಕ್ಕಳಿಗೆ ಅನುಕೂಲವಾಗಲಿದೆ. ಮಕ್ಕಳಲ್ಲಿ ಅಪೌಷ್ಠಿಕತೆಯನ್ನು ನಿವಾರಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕ್ಷೀರಭಾಗ್ಯ ಯೋಜನೆಯಡಿ 1.10 ಲಕ್ಷ ಮಕ್ಕಳಿಗೆ ಹಾಲು ನೀಡಲಾಗುತ್ತಿದ್ದು, ಈ ಪೈಕಿ 39 ಲಕ್ಷ ಅಂಗನವಾಡಿ ಮಕ್ಕಳಿಗೆ ಕೆನೆರಹಿತ ಹಾಲನ್ನು ಸದ್ಯ ನೀಡಲಾಗುತ್ತಿದೆ.
Question 3 |
3.ರಿಯೋ ಒಲಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಕರ್ನಾಟಕದ ಕ್ರೀಡಾಪಟುಗಳ ಪೈಕಿ ರಾಜ್ಯದ ಯಾವ ಜಿಲ್ಲೆಯಿಂದ ಅತಿ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ?
ಬಳ್ಳಾರಿ | |
ಕೊಡಗು | |
ಮೈಸೂರು | |
ವಿಜಯಪುರ |
Question 3 Explanation:
ಕೊಡಗು:
ಕೊಡಗು ಜಿಲ್ಲೆಯ ಒಟ್ಟು ಏಳು ಮಂದಿ ಕ್ರೀಡಾಳುಗಳು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಭಾರತ ಒಲಂಪಿಕ್ಸ್ ತಂಡದಲ್ಲಿ ಒಟ್ಟು 120 ಕ್ರೀಡಾಪಟುಗಳಿದ್ದು, ಇದರಲ್ಲಿ ಕೊಡಗಿನ 7 ಜನ ಭಾಗವಹಿಸಲಿದ್ದಾರೆ. ಒಲಂಪಿಕ್ಸ್ ಹಾಕಿ ಒಂದರಲ್ಲೇ ಜಿಲ್ಲೆಯ ನಾಲ್ಕು ಆಟಗಾರರು ಪ್ರತಿನಿಧಿಸುತ್ತಿದ್ದಾರೆ.
Question 4 |
4.ಬಿಡುಗಡೆಗೆ ಸಿದ್ದಗೊಂಡಿರುವ “ನಿಜಲಿಂಗ” ಯಾವ ಸಾಹಿತಿಯ ಹೊಸ ಕಾದಂಬರಿ ಆಗಿದೆ?
ಜಿ.ಎಸ್.ಶಿವರುದ್ರಪ್ಪ | |
ಕುಂ. ವೀರಭದ್ರಪ್ಪ
| |
ಎಸ್.ಎಲ್. ಭೈರಪ್ಪ | |
ದೇವನೂರು ಮಹಾದೇವ |
Question 4 Explanation:
ಕುಂ. ವೀರಭದ್ರಪ್ಪ:
ನಿಜಲಿಂಗ ಕಾದಂಬರಿಯು ಖ್ಯಾತ ಕಾದಂಬರಿಕಾರ ಕುಂ.ವೀರಭದ್ರಪ್ಪನವರ 18 ನೇ ಕಾದಂಬರಿ ಆಗಿದೆ. ಅನುಪಮಾ ಪ್ರಕಾಶನ ಪ್ರಕಟಿಸಿರುವ ಈ ಕಾದಂಬರಿಯು ಆಗಸ್ಟ್ 14 ರಂದು ಬಿಡುಗಡೆಗೊಳ್ಳಲಿದೆ. 1980ರಲ್ಲಿ ಪ್ರಕಟಗೊಂಡ “ಕಪ್ಪು” ಕುಂ.ವೀ ರವರ ಮೊದಲ ಕಾದಂಬರಿ. ನಂತರ ಬೇಲಿ ಮತ್ತು ಹೊಲ, ಶಾಮಣ್ಣ, ಆರೋಹಣ, ಅರಮನೆ ಹೀಗೆ ನಿರಂತರವಾಗಿ ಕಾದಂಬರಿಗಳನ್ನು ಬರೆಯುತ್ತ ಬಂದಿದ್ದಾರೆ. ಭಗವತಿ ಕಾಡು, ಕೂರ್ವವತಾರ ಸೇರಿದಂತೆ ಹತ್ತಕ್ಕೂ ಹೆಚ್ಚು ಕಥಾ ಸಂಕಲನಗಳನ್ನು ನೀಡಿರುವ ಅವರು ತೆಲುಗು ಭಾಷೆಯ 300ಕ್ಕೂ ಹೆಚ್ಚು ಕಥೆಗಳನ್ನು ಅನುವಾದಿಸಿದ್ದಾರೆ. ‘ಗಾಂಧಿ ಕ್ಲಾಸು’ ಅವರ ಆತ್ಮಕಥೆ. ಅವರ ಕಥೆ, ಕಾದಂಬರಿಗಳನ್ನು ಆಧರಿಸಿ ಏಳು ಸಿನಿಮಾಗಳಾಗಿವೆ. ಅವರ ಅರಮನೆ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.
Question 5 |
5.ಯಾವ ನಗರದಲ್ಲಿ ಪ್ರಥಮ ಅಂತರರಾಷ್ಟ್ರೀಯ ತೃತೀಯಲಿಂಗಿಗಳ ಕಲಾ ಉತ್ಸವ (Transgender Art Festival)ವನ್ನು ಆಯೋಜಿಸಲಾಗಿದೆ?
ಮೈಸೂರು | |
ಮಂಗಳೂರು | |
ಬೆಂಗಳೂರು
| |
ರಾಮನಗರ |
Question 5 Explanation:
ಬೆಂಗಳೂರು:
ಬೆಂಗಳೂರಿನಲ್ಲಿ ಮೊದಲ ಅಂತರರಾಷ್ಟ್ರೀಯ ತೃತೀಯಲಿಂಗಿಗಳ ಕಲಾ ಉತ್ಸವವನ್ನು ಆಯೋಜಿಸಲಾಗಿದೆ. ಜುಲೈ 29 ರಿಂದ 31 ರವರೆಗೆ ನಡೆಯಲಿರುವ ಈ ಉತ್ಸವವನ್ನು ನ್ಯಾಷನಲ್ ಗ್ಯಾಲರಿ ಆಫ್ ಮಾರ್ಡನ್ ಆರ್ಟ್ ನಲ್ಲಿ ಏರ್ಪಡಿಸಲಾಗಿದೆ. ಈ ಉತ್ಸವದಲ್ಲಿ ಪ್ರಖ್ಯಾತ ಶಾಸ್ತ್ರೀಯ ನೃತ್ಯಪಟುಗಳಾದ ಮಾಲಿಕ ಪಣಿಕರ್, ಕುಚಿಪುಡಿ ನೃತ್ಯಪಟು ವರ್ಷ ವಂದನ ಸೇರಿದಂತೆ ಖ್ಯಾತ ಕಲಾವಿದರುಗಳು ಪಾಲ್ಗೊಳ್ಳಲಿದ್ದಾರೆ.
Question 6 |
6.ಒಂದೇ ಸೂರಿನಡಿ ನೂರು ಸಾರ್ವಜನಿಕ ಸೇವೆ ಒದಗಿಸುವ “ಪಂಚಾಯತ್-100 ಬಾಪೂಜಿ ಕೇಂದ್ರ”ಕ್ಕೆ ಯಾವ ಜಿಲ್ಲೆಯಿಂದ ಚಾಲನೆ ನೀಡಲಾಯಿತು?
ಚಾಮರಾಜನಗರ | |
ಶಿವಮೊಗ್ಗ
| |
ಹಾವೇರಿ | |
ಚಿಕ್ಕಬಳ್ಳಾಪುರ |
Question 6 Explanation:
ಹಾವೇರಿ:
ಗ್ರಾಮ ಪಂಚಾಯತಿಯಲ್ಲೇ 100 ಸಾರ್ವಜನಿಕ ಸೇವೆ ಕಲ್ಪಿಸುವ ಪಂಚಾಯತ್-100 ಬಾಪೂಜಿ ಸೇವಾ ಕೇಂದ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರವರು, ರಾಣೆಬೆನ್ನೂರು ತಾಲೂಕು ಕಾಕೋಳ ಗ್ರಾ.ಪಂ.ನಲ್ಲಿ ಲೋಕಾರ್ಪಣೆಗೊಳಿಸಿದರು. 100 ಬಾಪೂಜಿ ಕೇಂದ್ರದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ 43, ಕಂದಾಯ ಇಲಾಖೆಯ 39, ಆರ್ಟಿಸಿ, ಇನ್ನಿತರ ಖಾಸಗಿಯ 17 ಸೇವೆಗಳನ್ನು ಗ್ರಾಮ ಪಂಚಾಯತಿ ಕಚೇರಿಯಲ್ಲಿಯೇ ನೀಡಲಾಗುವುದು. ಇದರಿಂದ ಸಾರ್ವಜನಿಕರು ತಾಲ್ಲೂಕ ಕೇಂದ್ರಗಳಿಗೆ ಅಲೆದಾಡುವುದು ತಪ್ಪಲಿದೆ. ರಾಷ್ಟ್ರದಲ್ಲೇ ಮೊದಲ ಬಾರಿಗೆ ಯೋಜನೆ ಜಾರಿಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ 2000 ಬಾಪೂಜಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
Question 7 |
7.ಕರ್ನಾಟಕದ ಎಷ್ಟು ಜಿಲ್ಲೆಗಳು ಕೇಂದ್ರ ಸರ್ಕಾರ ಅನುಮೋದಿಸಿರುವ ನಕ್ಸಲ್ ಬಾಧಿತ “ರೆಡ್ ಕಾರಿಡರ್” ಪಟ್ಟಿಯಲ್ಲಿವೆ?
ಎರಡು | |
ಐದು | |
ನಾಲ್ಕು
| |
ಯಾವ ಜಿಲ್ಲೆಯು ಇಲ್ಲ |
Question 7 Explanation:
ಯಾವ ಜಿಲ್ಲೆಯು ಇಲ್ಲ :
ದೇಶದ ಹತ್ತು ರಾಜ್ಯಗಳ 106 ಜಿಲ್ಲೆಗಳನ್ನು ರೆಡ್ ಕಾರಿಡಾರ್ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ರೆಡ್ ಕಾರಿಡಾರ್ ಎಂದರೆ ನಕ್ಸಲ್ ಭಾದಿತ ಪ್ರದೇಶ ಎಂದರ್ಥ. ಕರ್ನಾಟಕದಲ್ಲಿ ನಕ್ಸಲ್ ಚಟುವಟಿಕೆ ಇದೆಯಾದರು ರಾಜ್ಯದ ಯಾವ ಜಿಲ್ಲೆಯು ರೆಡ್ ಕಾರಿಡಾರ್ ಪಟ್ಟಿಯಲ್ಲಿ ಇಲ್ಲ. ರೆಡ್ ಕಾರಿಡಾರ್ ಪಟ್ಟಿಯಲ್ಲಿರುವ ಜಿಲ್ಲೆಗಳ ಅಭಿವೃದ್ದಿಗೆ ಕೇಂದ್ರ ಸರ್ಕಾರ ವಿಶೇಷ ಆರ್ಥಿಕ ಸೌಲಭ್ಯ ನೀಡಲಿದೆ.
Question 8 |
8.ಗಂಟೆಗೆ 180 ಕಿ.ಮೀ ವೇಗದಲ್ಲಿ ಚಲಿಸುವ ಟಾಲ್ಗೊ ರೈಲಿನ ಪರೀಕ್ಷಾರ್ಥ ಸಂಚಾರವನ್ನು ರಾಜ್ಯದ ಯಾವ ರೈಲು ಮಾರ್ಗದಲ್ಲಿ ಸಂಚರಿಸುವ ಉದ್ದೇಶವನ್ನು ಹೊಂದಲಾಗಿದೆ?
ಬೆಂಗಳೂರು - ಮೈಸೂರು | |
ಬೆಂಗಳೂರು – ದಾವಣಗೆರೆ | |
ಹುಬ್ಬಳ್ಳಿ - ಬೆಂಗಳೂರು
| |
ಬೆಂಗಳೂರು – ಬಂಗಾರ ಪೇಟೆ |
Question 8 Explanation:
ಬೆಂಗಳೂರು – ಮೈಸೂರು:
ಬೆಂಗಳೂರು-ಮೈಸೂರು ನಡುವೆ ಟಾಲ್ಗೊ ರೈಲಿನ ಪರೀಕ್ಷಾರ್ಥ ಸಂಚಾರವನ್ನು ನಡೆಸುವುದಾಗಿ ರೈಲ್ವೆ ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ. ಗಂಟೆಗೆ 180 ಕಿ.ಮೀ ಚಲಿಸುವ ಟಾಲ್ಗೊ ರೈಲು ದೇಶದಲ್ಲಿ ವೇಗವಾಗಿ ಚಲಿಸುವ ಸೆಮಿ ಹೈಸ್ಪೀಡ್ ರೈಲು ಆಗಿದೆ. ಉತ್ತರ ಪ್ರದೇಶದ ಮಥುರಾ-ಪಾವಲ್ ನಗರಗಳ ನಡುವೆ ಟಾಲ್ಗೊ ರೈಲು ಗರಿಷ್ಠ ವೇಗ 180 ಕಿ.ಮೀ ತಲುಪಿತ್ತು.
Question 9 |
9.ಮಹದಾಯಿ ನದಿ ನೀರು ವಿವಾದ ನ್ಯಾಯಮಂಡಳಿಯ ಅಧ್ಯಕ್ಷರು ಯಾರು?
ನ್ಯಾ. ಆರ್.ಎಂ.ಲೋದಾ | |
ನ್ಯಾ. ಜೆ.ಎಂ. ಪಾಂಚಾಲ್ | |
ನ್ಯಾ. ವಿಕ್ರಂ ಸೇಥ್ | |
ನ್ಯಾ. ಬ್ರಿಜೇಶ್ ಪಾಟೀಲ್ |
Question 9 Explanation:
ನ್ಯಾ. ಜೆ.ಎಂ. ಪಾಂಚಾಲ್:
ಮಹದಾಯಿ ನದಿ ನೀರು ವಿವಾದ ನ್ಯಾಯಮಂಡಳಿಯನ್ನು ಕೇಂದ್ರ ಸರ್ಕಾರ ನವೆಂಬರ್ 16, 2010 ರಲ್ಲಿ ಸ್ಥಾಪಿಸಿದೆ. ಅಂತರರಾಜ್ಯ ನದಿ ನೀರು ವಿವಾದ ಕಾಯಿದೆ-1956 ರ ಅಡಿಯಲ್ಲಿ ನ್ಯಾಯಮಂಡಳಿಯನ್ನು ಸ್ಥಾಪಿಸಲಾಗಿದ್ದು, ನಿವೃತ್ತ ನ್ಯಾಯಮೂರ್ತಿ ನ್ಯಾ.ಜೆ.ಎಂ.ಪಾಂಚಾಲ್ ರವರು ಇದರ ಅಧ್ಯಕ್ಷರಾಗಿದ್ದಾರೆ.
Question 10 |
10.ಇತ್ತೀಚೆಗೆ ಈ ಕೆಳಗಿನ ಯಾವ ಸಮೂಹಕ್ಕೆ ರಾಜೀವ್ ಆರೋಗ್ಯ ಭಾಗ್ಯ ಯೋಜನೆಯನ್ನು ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ?
ಪತ್ರಕರ್ತರು | |
ಅಂಗನವಾಡಿ ಕಾರ್ಯಕರ್ತೆಯರು | |
ಲೈಂಗಿಕ ಶೋಷಿತರು | |
ವಿಧವೆಯರು |
Question 10 Explanation:
ಪತ್ರಕರ್ತರು:
ಕರ್ನಾಟಕ ಸರ್ಕಾರ ಎಪಿಎಲ್ ಪಡಿತರ ಕಾರ್ಡ್ ಹೊಂದಿರುವವರಿಗೆ ಆರೋಗ್ಯ ಸೇವೆ ಒದಗಿಸಲು ರಾಜೀವ್ ಆರೋಗ್ಯ ಭಾಗ್ಯ ಯೋಜನೆ ಜಾರಿಗೆ ತಂದಿದೆ. 2015ರ ಜನವರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀವ್ ಆರೋಗ್ಯ ಭಾಗ್ಯ ಯೋಜನೆಗೆ ಚಾಲನೆ ನೀಡಿದರು. ವಾರ್ಷಿಕ ಒಂದೂವರೆ ಲಕ್ಷ ರೂ.ಗಳ ತನಕ ಯೋಜನೆಯಡಿ ಚಿಕಿತ್ಸೆ ಲಭ್ಯವಿದೆ. ಸಾಮಾನ್ಯ ವಾರ್ಡ್ಗಳಲ್ಲಿ ಚಿಕಿತ್ಸೆ ಪಡೆಯಲು ಸರ್ಕಾರವು ಶೇ. 70 ರಷ್ಟು ಹಣವನ್ನು ಭರಿಸುತ್ತದೆ. ಉಳಿದ ಶೇ. 30 ರಷ್ಟು ಹಣವನ್ನು ಫಲಾನುಭವಿ ಭರಿಸಬೇಕಾಗುತ್ತದೆ. ವಿಶೇಷ ವಾರ್ಡ್ಗಳಲ್ಲಿ ಚಿಕಿತ್ಸೆ ಪಡೆಯಲು ಬಯಸಿದಲ್ಲಿ ಸರ್ಕಾರವು ವಾಜಪೇಯಿ ಆರೋಗ್ಯ ಶ್ರೀ ಯೋಜನೆಯ ಮೂಲ ಪ್ಯಾಕೇಜ್ ದರದ ಶೇ. 50 ರಷ್ಟನ್ನು ಮಾತ್ರ ಭರಿಸುತ್ತದೆ. ಇನ್ನುಳಿದ ಶೇ. 50 ರಷ್ಟನ್ನು ಹಾಗೂ ಆಸ್ಪತ್ರೆಯವರು ಘೋಷಿಸಿರುವ ಪ್ಯಾಕೇಜ್ ದರದ ವ್ಯತ್ಯಾಸದ ಮೊತ್ತವನ್ನು ಫಲಾನುಭವಿಯೇ ಪಾವತಿಸಬೇಕು. ಇತ್ತೀಚೆಗೆ ಸರ್ಕಾರ ರಾಜ್ಯದಲ್ಲಿನ ಮಾನ್ಯತೆ ಪಡೆದ ಪತ್ರಕರ್ತರು ಹಾಗೂ ಕಾರ್ಯನಿರತ ಪತ್ರಕರ್ತರಿಗೂ 'ರಾಜೀವ್ ಆರೋಗ್ಯ ಭಾಗ್ಯ' ಯೋಜನೆ ಸೌಲಭ್ಯ ಕಲ್ಪಿಸಲಾಗುವುದು ಎಂದು ರಾಜ್ಯ ಸರಕಾರ ಅಧಿಕೃತ ಆದೇಶವನ್ನು ಹೊರಡಿಸಿದೆ.
There are 10 questions to complete.