ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.
ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -6
Question 1 |
1.ಬೆಂಗಳೂರನ್ನು ಜಾಗತಿಕ ಪ್ರವಾಸಿ ಕೇಂದ್ರವನ್ನಾಗಿ ರೂಪಿಸುವ ಸಲುವಾಗಿ ಸಲಹೆ ನೀಡುವಂತೆ ಯಾರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ?
ಪ್ರಿಯಾಂಕ ಖರ್ಗೆ | |
ರಾಮಲಿಂಗ ರೆಡ್ಡಿ | |
ಕೌಶಿಕ್ ಮುಖರ್ಜಿ | |
ವಿಜಯ ಭಾಸ್ಕರ್ |
Question 1 Explanation:
ಪ್ರಿಯಾಂಕ ಖರ್ಗೆ:
ಐಟಿ ರಾಜಧಾನಿ ಎಂದೇ ಖ್ಯಾತಿ ಹೊಂದಿರುವ ಬೆಂಗಳೂರನ್ನು ಜಾಗತಿಕ ಪ್ರವಾಸಿ ಕೇಂದ್ರವನ್ನಾಗಿ ರೂಪಿಸಲು ಸಲಹೆ ನೀಡುವಂತೆ ರಾಜ್ಯ ಸರ್ಕಾರ 10 ಜನ ಸದಸ್ಯರನ್ನು ಒಳಗೊಂಡ ಬೆಂಗಳೂರು ಪ್ರವಾಸೋದ್ಯಮ ಸಲಹಾ ಸಮಿತಿಯನ್ನು ರಚಿಸಿದ್ದು, ಐಟಿ/ಬಿಟಿ ಹಾಗೂ ರಾಜ್ಯ ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ ರವರು ಸಮಿತಿಯ ಅಧ್ಯಕ್ಷರಾಗಿದ್ದಾರೆ. ಸಮಿತಿಯು ಮೂರು ತಿಂಗಳೊಳಗೆ ಈ ಸಂಬಂಧ ಕ್ರಿಯಾ ಯೋಜನೆಯನ್ನು ಸಲ್ಲಿಸಲಿದೆ. ಮಾಜಿ ಮುಖ್ಯ ಕಾರ್ಯದರ್ಶಿ ಸುಬೀರ್ ಹರಿ ಸಿಂಗ್, ಅರ್ಬಲ್ ಎಕ್ಸಪರ್ಟ್ ವಿ ರವಿಚಂದರ್, ವಾಸ್ತುಶಿಲ್ಪಿಗಳಾದ ನರೇಶ್ ವಿ ನರಸಿಂಹನ್ ಹಾಗೂ ನರೇಂದ್ರ ಪಿರ್ಗಲ್, ಕಾನೂನು ತಜ್ಞ ಸಿದ್ದಾರ್ಥ್ ರಾಜು, ಆತಿಥ್ಯ ತಜ್ಞ ಸುಂದರ ರಾಜು ಮತ್ತು ಸಂರಕ್ಷಕ ಸತ್ಯ ಪ್ರಕಾಶ್ ವಾರಣಾಸಿ ಸಮಿತಿಯ ಇತರೆ ಸದಸ್ಯರು.
Question 2 |
2.ಈ ಕೆಳಗಿನ ಯಾವ ಹುಲಿ ಸಂರಕ್ಷಣಾ ಧಾಮದ ರಕ್ಷಣಾ ಕಾರ್ಯಕ್ಕೆ ಕರ್ನಾಟಕ 12 ಆನೆಗಳನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿದೆ?
ಕಾರ್ಬೆಟ್ ಹುಲಿ ಸಂರಕ್ಷಣ ಧಾಮ | |
ಮಾನಸ್ ಹುಲಿ ಸಂರಕ್ಷಣ ಧಾಮ | |
ಮೇಲ್ಗಾಟ್ ಹುಲಿ ಸಂರಕ್ಷಣ ಧಾಮ | |
ಕನ್ಹಾ ಹುಲಿ ಸಂರಕ್ಷಣ ಧಾಮ |
Question 2 Explanation:
ಕಾರ್ಬೆಟ್ ಹುಲಿ ಸಂರಕ್ಷಣ ಧಾಮ:
ಕರ್ನಾಟಕದ 12 ಆನೆಗಳನ್ನು ಉತ್ತರಖಂಡದ ಜಿಮ್ ಕಾರ್ಬೆಟ್ ಹುಲಿ ಸಂರಕ್ಷಣಾ ಧಾಮದ ರಕ್ಷಣಾ ಕಾರ್ಯಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಉತ್ತರಾಖಂಡ ಸರ್ಕಾರ ಈಗಾಗಲೇ ಕರ್ನಾಟಕ ಸರ್ಕಾರದಿಂದ ಈ ಬಗ್ಗೆ ಅನುಮತಿ ಪಡೆದಿದೆ. ಭಾರತ ಮೃಗಾಲಯ ಪ್ರಾಧಿಕಾರ, ಅರಣ್ಯಮತ್ತು ಪರಿಸರ ಮಂತ್ರಾಲಯವೂ ಹಸಿರು ನಿಶಾನೆ ತೋರಿಸಿದೆ. ಕಾರ್ಬೆಟ್ನ ದಕ್ಷಿಣ ಭಾಗದಲ್ಲಿ ಭದ್ರತಾ ಸಮಸ್ಯೆ ಕಂಡುಬಂದಿದ್ದು, ಕರ್ನಾಟಕದ ಆನೆಗಳನ್ನು ಈ ಸ್ಥಳದ ಕಾವಲು ಪಡೆಗೆ ಸಹಕರಿಸಲು ಬಳಕೆ ಮಾಡಿಕೊಳ್ಳುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
Question 3 |
3.ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಮಾನದಂಡ ರಚಿಸುವ ಸಲುವಾಗಿ ಯಾರ ನೇತೃತ್ವದಲ್ಲಿ ರಾಜ್ಯ ಸರ್ಕಾರ ವಿಶೇಷ ಸಮಿತಿಯನ್ನು ರಚಿಸಿದೆ?
ಬರಗೂರು ರಾಮಚಂದ್ರಪ್ಪ | |
ನಾಗತಿಹಳ್ಳಿ ಚಂದ್ರಶೇಖರ್ | |
ನ್ಯಾ. ನಾಗಮೋಹನ್ ದಾಸ್ | |
ನಾಗಭರಣ |
Question 3 Explanation:
ನ್ಯಾ. ನಾಗಮೋಹನ್ ದಾಸ್:
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಮಾನದಂಡ ರಚನೆಗಾಗಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ದಾಸ್ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರ ವಿಶೇಷ ಸಮಿತಿಯನ್ನು ರಚಿಸಿದೆ. ಸಮಿತಿಯು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 22 ಗಣ್ಯರನ್ನು ಒಳಗೊಂಡಿದೆ. 60 ವರ್ಷಗಳಿಂದ ಸರಿಯಾದ ಮಾನದಂಡಗಳಿಲ್ಲದೆ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಧಾನ ಮಾಡುತ್ತಿರುವುದಕ್ಕೆ ವಿರೋಧ ವ್ಯಕ್ತವಾಗಿತ್ತು.
Question 4 |
4.ಈ ಕೆಳಗಿನ ಯಾವ ಸಂಸ್ಥೆ ಜುಲೈ ತಿಂಗಳಲ್ಲಿ 100 ವರ್ಷ ಪೂರೈಸುವ ಮೂಲಕ ಶತಮಾನೋತ್ಸವವನ್ನು ಆಚರಿಸಿಕೊಂಡಿತು?
ಮಂಡ್ಯ ಸಕ್ಕರೆ ಕಾರ್ಖಾನೆ | |
ಮೈಸೂರು ಸ್ಯಾಂಡಲ್ಸ್ | |
ಭದ್ರಾವತಿ ಉಕ್ಕಿನ ಕಾರ್ಖಾನೆ | |
ಮೈಸೂರು ಸಿಲ್ಕ್ಸ್ |
Question 4 Explanation:
ಮೈಸೂರು ಸ್ಯಾಂಡಲ್ಸ್:
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ(ಕೆಎನ್ ಡಿಎಲ್) ತನ್ನ ಶತಮಾನೋತ್ಸವನ್ನು ಇತ್ತೀಚೆಗೆ ಆಚರಿಸಿಕೊಂಡಿತು. ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯರವರು 1916ರಲ್ಲಿ ಸರ್ಕಾರಿ ಶ್ರೀಗಂಧದೆಣ್ಣೆ ಕಾರ್ಖಾನೆ ಸ್ಥಾಪಸಿದರು. ನಂತರದ ದಿನಗಳಲ್ಲಿ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯ ಫಲವಾಗಿ ಮೈಸೂರು ಸ್ಯಾಂಡಲ್ಸ್ ಈಗ 'ಭಾರತದ ಸುಗಂಧ ರಾಯಭಾರಿ' ಎನಿಸಿಕೊಂಡಿದೆ. 1980 ರಲ್ಲಿ ಮೈಸೂರು ಸ್ಯಾಂಡಲ್ಸ್ ಅನ್ನು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ(ಕೆಎನ್ ಡಿಎಲ್) ಎಂದು ಮರುನಾಮಕರಣ ಮಾಡಲಾಯಿತು. ಪ್ರಸ್ತುತ ಈ ಸಂಸ್ಥೆಯು ಸೋಪು, ಡಿಟರ್ಜೆಂಟ್,ಕಾಸ್ಮೆಟಿಕ್, ಅಗರಬತ್ತಿ, ಶ್ರೀಗಂಧದೆಣ್ಣೆ ಸೇರಿದಂತೆ 38ಕ್ಕೂ ಅಧಿಕ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಹೊಂದಿದೆ.
Question 5 |
5.ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗದ ಈಗಿನ ಅಧ್ಯಕ್ಷರು ಯಾರು?
ಮೀರಾ ಸಿ ಸಕ್ಸೆನಾ | |
ಹೆಚ್. ಸಿ. ಹುನಗುಂದ | |
ನರ್ಗೀಸ್ ಭಾನು | |
ಮನೋಜ್ ಕುಮಾರ್ |
Question 5 Explanation:
ಮೀರಾ ಸಿ ಸಕ್ಸೆನಾ :
ಪ್ರಸ್ತುತ ಮೀರಾ ಸಿ ಸಕ್ಸೆನಾ ರವರು ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷರಾಗಿದ್ದಾರೆ. ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗವನ್ನು 28 ಜೂನ್ 2005 ರಂದು ಸ್ಥಾಪಿಸಲಾಗಿದೆ. ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನು ರಾಜ್ಯಪಾಲರು ನೇಮಕ ಮಾಡುತ್ತಾರೆ.
Question 6 |
6.2016-ಭಾರತ ಒಲಂಪಿಕ್ಸ್ ತಂಡದ ಭದ್ರತಾ ಸಲಹಗಾರರಾಗಿ ನೇಮಕಗೊಂಡಿರುವ ಕರ್ನಾಟಕದ ನಿವೃತ ಪೊಲೀಸ್ ಅಧಿಕಾರಿ ಯಾರು?
ಶಂಕರ್ ಬಿದರಿ | |
ಸಾಂಗ್ಲಿಯಾನ | |
ಗೋಪಾಲ್ ಬಿ ಹೊಸೂರು | |
ಬಿ ಶಿವರಾಂ |
Question 6 Explanation:
ಗೋಪಾಲ್ ಬಿ ಹೊಸೂರು:
ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಗೋಪಾಲ್ ಬಿ ಹೊಸೂರು ರವರನ್ನು 2016 ರಿಯೋ ಒಲಂಪಿಕ್ಸ್ ನಲ್ಲಿ ಪ್ರತಿನಿಧಿಸಲಿರುವ 119 ಕ್ರೀಡಾಪಟುಗಳನ್ನ ಒಳಗೊಂಡ ಭಾರತ ತಂಡದ ಭದ್ರತಾ ಸಲಹೆಗಾರರನ್ನಾಗಿ ಆಯ್ಕೆಮಾಡಲಾಗಿದೆ. ಇದೇ ಮೊದಲ ಬಾರಿಗೆ ರಾಜ್ಯದ ಅಧಿಕಾರಿಯೊಬ್ಬರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.
Question 7 |
7.2016-17 ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದಿನವೊಂದಕ್ಕೆ ಪಾವತಿಸಲಾಗುತ್ತಿರುವ ಕೂಲಿ ಮೊತ್ತ ಎಷ್ಟು?
ರೂ 204 | |
ರೂ 224 | |
ರೂ 216 | |
ರೂ 250 |
Question 7 Explanation:
ರೂ 224:
2016-17 ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದಿನವೊಂದಕ್ಕೆ ರೂ 224 ಕೂಲಿ ಮೊತ್ತವನ್ನು ಪಾವತಿಸಲಾಗುತ್ತಿದೆ. ಮ.ಗಾ.ರಾ.ಗ್ರಾ.ಉ.ಖಾತ್ರಿ ಕಾಯಿದೆ ಅಡಿ ಮಹಿಳೆ ಮತ್ತು ಪುರುಷರಿಗೆ ಸಮಾನ ವೇತನವನ್ನು ಪಾವತಿಸಬೇಕು.
Question 8 |
8.ಇತ್ತೀಚೆಗೆ ಚಾಲನೆ ನೀಡಲಾದ “ಕರ್ನಾಟಕ ಪ್ರಾದೇಶಿಕ ಆರ್ಥಿಕ ವ್ಯಾಪಾರ ಸಂಸ್ಥೆ (KRETO)ದ ಅಧ್ಯಕ್ಷರು ಯಾರು?
ಶಬೀನಾ ಸುಲ್ತಾನ | |
ಎಸ್, ಕೃಷ್ಣ ಕುಮಾರ್ | |
ಆಸಿಪ್ ಇಕ್ಬಾಲ್ | |
ಕ್ರಿಸ್ಟಿ ವಿಜಯನ್ ಪೌಲ್ |
Question 8 Explanation:
ಎಸ್, ಕೃಷ್ಣ ಕುಮಾರ್:
ಕರ್ನಾಟಕ ಪ್ರಾದೇಶಿಕ ಆರ್ಥಿಕ ವ್ಯಾಪಾರ ಸಂಸ್ಥೆಗೆ ಬೆಂಗಳೂರಿನಲ್ಲಿ ಇತ್ತೀಚೆಗೆ ಚಾಲನೆ ನೀಡಿದರು. ರಾಜ್ಯದಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ಆರಂಭಿಸಲು ಬಯಸುವ ದೇಶಿಯ ಮತ್ತು ವಿದೇಶಿ ಕಂಪೆನಿಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಸುವ ಕೆಲಸವನ್ನು ಕರ್ನಾಟಕ ಪ್ರಾದೇಶಿಕ ಆರ್ಥಿಕ ವ್ಯಾಪಾರ ಸಂಸ್ಥೆ ಮಾಡಲಿದೆ. ಮಾಜಿ ಐಎಎಸ್ ಅಧಿಕಾರಿ ಎಸ್ ಕೃಷ್ಣಕುಮಾರ್ ಸಂಸ್ಥೆಯ ಅಧ್ಯಕ್ಷರು ಹಾಗೂ ಶಬೀನಾ ಸುಲ್ತಾನ್ ಇದರ ಉಪಾಧ್ಯಕ್ಷರು.
Question 9 |
9.2015 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ವಿಭಾಗದಲ್ಲಿ ಡಾ.ರಾಜ್ ಕುಮಾರ್ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?
ಭಾರತಿ ವಿಷ್ಣುವರ್ದನ್ | |
ಹರಿಣಿ | |
ಅರುಂದತಿ ನಾಗ್ | |
ಸುಮಿತ್ರ ದೇವಿ |
Question 9 Explanation:
ಹರಿಣಿ:
ಹಿರಿಯ ನಟಿ ಹರಿಣಿ ರವರನ್ನು 2015 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಯ ಡಾ.ರಾಜ್ ಕುಮಾರ್ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. 1950 ರಿಂದ 1970 ರವರೆಗೆ 29ಕ್ಕೂ ಹೆಚ್ಚು ಚಿತ್ರಗಳಲ್ಲಿ ಹರಿಣಿರವರು ನಟಿಸಿದ್ದಾರೆ. ಜಗನ್ಮೋಹಿನಿ ಚಿತ್ರ ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿತ್ತು. ಪ್ರಶಸ್ತಿಯು 2 ಲಕ್ಷ ನಗದು ಮತ್ತು 50 ಗ್ರಾಂ ಚಿನ್ನದ ನಾಣ್ಯವನ್ನು ಒಳಗೊಂಡಿದೆ.
Question 10 |
10.ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿರುವ ಹುಲಿ ಸಂರಕ್ಷಣಾ ಧಾಮಗಳ ಸಂಖ್ಯೆ ಎಷ್ಟು?
ಎರಡು | |
ಐದು | |
ಎಂಟು | |
ಏಳು |
Question 10 Explanation:
ಐದು:
ಕರ್ನಾಟಕದಲ್ಲಿ ಐದು ಹುಲಿ ಸಂರಕ್ಷಣಾ ಧಾಮಗಳಿವೆ ಅವುಗಳೆಂದರೆ ಬಂಡೀಪುರ, ಭದ್ರಾ, ದಾಂಡೇಲಿ-ಅಂಶಿ, ನಾಗರಹೊಳೆ, ಬಿಳಿಗಿರಿ ರಂಗನಬೆಟ್ಟ.
There are 10 questions to complete.