ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 2, 2016
Question 1 |
1.“ಕೇಂದ್ರ ನೇರ ತೆರಿಗೆ ಮಂಡಳಿ (Central Board of Direct Tax)” ನ ನೂತನ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?
ಸುರೇಶ್ ಅಗರವಾಲ್ | |
ಕಿರಣ್ ಕಪಾಡಿಯಾ | |
ರಾಣಿ ಸಿಂಗ್ ನಾಯರ್ | |
ಕೇಶವ್ ಜೊಂಡಲೆ |
Question 1 Explanation:
ರಾಣಿ ಸಿಂಗ್ ನಾಯರ್:
ಹಿರಿಯ ಭಾರತೀಯ ಕಂದಾಯ ಸೇವೆ (IRS) ಅಧಿಕಾರಿ ರಾಣಿ ಸಿಂಗ್ ನಾಯರ್ ರವರನ್ನು ಕೇಂದ್ರ ನೇರ ತೆರಿಗೆ ಮಂಡಳಿ (Central Board of Direct Tax) ಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ನೇಮಕಾತಿ ಸಮಿತಿ ನಾಯರ್ ರವರ ನೇಮಕಾತಿಯನ್ನು ಧೃಡೀಕರಿಸಿದೆ. ನಾಯರ್ ರವರು 31 ಅಕ್ಟೋಬರ್ 2016 ರವರೆಗೆ ಅಧಿಕಾರದಲ್ಲಿರಲಿದ್ದಾರೆ. ಹಾಲಿ ಅಧ್ಯಕ್ಷರಾಗಿದ್ದ ಅತುಲೇಶ್ ಜಿಂದಾಲ್ ರವರು ಜುಲೈ 30 ರಂದು ನಿವೃತ್ತಿ ಹೊಂದಿದ ಕಾರಣ ಈ ಹುದ್ದೆ ತೆರವಾಗಿತ್ತು.
Question 2 |
2.ಇತ್ತೀಚೆಗೆ ಮುಕ್ತಾಯಗೊಂಡ (ಜುಲೈ, 2016) ಪ್ರೋ-ಕಬಡ್ಡಿ ಲೀಗ್ ನಲ್ಲಿ ಪ್ರಶಸ್ತಿ ಗೆದ್ದ ತಂಡ ಯಾವುದು?
ಪಾಟ್ನಾ ಪೈರೇಟ್ಸ್ | |
ಯೂ ಮುಂಬಾ | |
ಜೈಪುರ ಪಿಂಕ್ ಪ್ಯಾಂಥರ್ಸ್ | |
ತೆಲುಗು ಟೈಟಾನ್ಸ್ |
Question 2 Explanation:
ಪಾಟ್ನಾ ಪೈರೇಟ್ಸ್:
ಕಳೆದ ವರ್ಷ ಚಾಂಪಿಯನ್ ಆಗಿದ್ದ ಪಾಟ್ನಾ ಪೈರೇಟ್ಸ್ ತಂಡ 4ನೇ ಆವೃತ್ತಿಯ ಪ್ರೋ ಕಬಡ್ಡಿ ಲೀಗ್ ನಲ್ಲಿ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಎರಡನೇ ಬಾರಿ ಕಿರೀಟವನ್ನು ಮುಡಿಗೇರಿಸಿಕೊಂಡಿತು. ಫೈನಲ್ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು 37-29 ರ ಅಂತರದಲ್ಲಿ ಸೋಲಿಸುವ ಮೂಲಕ ಪಾಟ್ನಾ ಪೈರೇಟ್ಸ್ ಗೆಲುವಿನ ನಗೆ ಬೀರಿತು. ಇದೇ ಮೊದಲ ಬಾರಿ ನಡೆದ ಮಹಿಳಾ ಕಬಡ್ಡಿ ಚಾಂಪಿಯನ್ ಷಿಪ್ ನಲ್ಲಿ ಕರ್ನಾಟಕದ ತೇಜಸ್ವಿನಿ ಬಾಯಿ ನೇತೃತ್ವದ ಸ್ಟೋರ್ಮ್ ಕ್ವೀನ್ ತಂಡ ಮಮತ ಪೂಜರಿ ನೇತೃತ್ವದ ಫೈರ್ ಬರ್ಡ್ಸ್ ತಂಡವನ್ನು 24-23 ಅಂತರದಲ್ಲಿ ಸೋಲಿಸುವ ಮೂಲಕ ಚಾಂಪಿಯನ್ ಆಯಿತು.
Question 3 |
3.2014-15ನೇ ಸಾಲಿನ ರಾಷ್ಟ್ರೀಯ ಪ್ರವಾಸೋದ್ಯಮ ಪ್ರಶಸ್ತಿಯಲ್ಲಿ ಪ್ರಥಮ ಸ್ಥಾನ ಪಡೆದ ರಾಜ್ಯ ಯಾವುದು?
ಕರ್ನಾಟಕ | |
ಮಧ್ಯಪ್ರದೇಶ | |
ಆಂಧ್ರಪ್ರದೇಶ | |
ತಮಿಳುನಾಡು |
Question 3 Explanation:
ಮಧ್ಯಪ್ರದೇಶ:
ಮಧ್ಯಪ್ರದೇಶ 2014-15ನೇ ಸಾಲಿನ ರಾಷ್ಟ್ರೀಯ ಪ್ರವಾಸೋದ್ಯಮ ಪ್ರಶಸ್ತಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಗುಜರಾತ್ ರಾಜ್ಯ ಎರಡನೇ ಸ್ಥಾನ ಹಾಗೂ ಕರ್ನಾಟಕ ರಾಜ್ಯ ಮೂರನೇ ಸ್ಥಾನವನ್ನು ಪಡೆದುಕೊಂಡಿವೆ. ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಜನ್ ರವರು ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿಯನ್ನು ವಿತರಿಸಿದರು.
Question 4 |
4.ಯಾವ ರಾಜ್ಯ ದೇಶದಲ್ಲೇ ಮೊದಲ ಬಾರಿಗೆ “ಭ್ರಷ್ಟಚಾರ ನಿಗ್ರಹ ಸೂಚ್ಯಂಕ”ವನ್ನು ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ?
ಕೇರಳ | |
ಪಂಜಾಬ್ | |
ಗೋವಾ | |
ತೆಲಂಗಣ |
Question 4 Explanation:
ಕೇರಳ:
ಕೇರಳದ ಆಡಳಿತಾರೂಢ ಎಲ್ಡಿಎಫ್ ಸರ್ಕಾರದ ಭ್ರಷ್ಟಾಚಾರ ತಡೆ ನೀತಿಯ ಅಂಗವಾಗಿ ದೇಶದಲ್ಲೇ ಮೊದಲ ಬಾರಿಗೆ ಕೇರಳವು ಭ್ರಷ್ಟಾಚಾರ ನಿಗ್ರಹ ಸೂಚ್ಯಂಕವನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದೆ. ಕೇರಳದ ಭ್ರಷ್ಟಾಚಾರ ನಿಗ್ರಹ ಹಾಗೂ ಜಾಗೃತ ಆಯೋಗವು ಈ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದ್ದು, ಭ್ರಷ್ಟಾಚಾರದ ಪ್ರಮಾಣವನ್ನು ಪ್ರತಿ ತಿಂಗಳು ದಾಖಲಿಸಲಿದೆ. ಭ್ರಷ್ಟಾಚಾರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಿರುವ ಈ ಯೋಜನೆ ಇನ್ನೂ ಅಭಿವೃದ್ಧಿ ಹಂತದಲ್ಲಿದೆ. ಸುಮಾರು 20ರಿಂದ 25 ಸೂಚಕಗಳು ಇದರಲ್ಲಿದ್ದು, ಇವು ಜನರು ಕೇಳಿದ, ನೋಡಿದ ಅಥವಾ ಅನುಭವಿಸಿದ ಭ್ರಷ್ಟಾಚಾರದ ಹಲವು ಮುಖಗಳನ್ನು ಸೂಚಿಸುತ್ತವೆ ಎಂದು ಆಯೋಗದ ನಿರ್ದೇಶಕ ಡಿಜಿಪಿ ಜಾಕೊಬ್ ಥಾಮಸ್ ತಿಳಿಸಿದ್ದಾರೆ. ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ಇದು ಅಸ್ತಿತ್ವಕ್ಕೆ ಬರಲಿದ್ದು, ಭ್ರಷ್ಟಾಚಾರ ತಡೆಗೆ ನೆರವಾಗಲಿದೆ.
Question 5 |
5.ರಾಷ್ಟ್ರೀಯ ಡೈರಿ ಅಭಿವೃದ್ದಿ ಮಂಡಳಿ (NDDB) ಯ ನೂತನ ಅಧ್ಯಕ್ಷರಾಗಿ ಯಾರು ಅಧಿಕಾರವಹಿಸಿಕೊಂಡರು?
ದಿಲೀಪ್ ರಾಥ್ | |
ಸುಜಯ್ ಬಂಗ್ಲ | |
ಮಮತಾ ಜೋಶಿ | |
ಪ್ರದೀಪ್ ರಾಥೋಡ್ |
Question 5 Explanation:
ದಿಲೀಪ್ ರಾಥ್:
ದಿಲೀಪ್ ರಾಥ್ ರವರು ರಾಷ್ಟ್ರೀಯ ಡೈರಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷರಾಗಿ ನೇಮಿಸಲಾಗಿದೆ. ರಾಥ್ ರವರು ರಾಷ್ಟ್ರೀಯ ಡೈರಿ ಅಭಿವೃದ್ದಿ ಮಂಡಳಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Question 6 |
6.2016 ಸಾರ್ಕ್ (SAARC) ರಾಷ್ಟ್ರಗಳ ಗೃಹ ಸಚಿವರುಗಳ ಸಮ್ಮೇಳನದ ಆತಿಥ್ಯವನ್ನು ಯಾವ ನಗರ ವಹಿಸಲಿದೆ?
ನವದೆಹಲಿ | |
ಇಸ್ಲಮಾಬಾದ್ | |
ಕೊಲೊಂಬೊ | |
ಥಿಂಪು |
Question 6 Explanation:
ಇಸ್ಲಮಾಬಾದ್:
2016 ಸಾರ್ಕ್ ದೇಶಗಳ ಗೃಹ ಸಚಿವರುಗಳ ಸಮ್ಮೇಳನವೂ ಪಾಕಿಸ್ತಾನದ ಇಸ್ಲಮಾಬಾದ್ ನಲ್ಲಿ ನಡೆಯಲಿದೆ. ಭಾರತದ ಗೃಹ ಸಚಿವರಾದ ರಾಜನಾಥ್ ಸಿಂಗ್ ರವರು ಭಾರತವನ್ನು ಪ್ರತಿನಿಧಿಸಲಿದ್ದಾರೆ. ಸಮ್ಮೇಳನದಲ್ಲಿ ಭಯೋತ್ಪಾದನೆ, ಮಾದಕ ವಸ್ತುಗಳ ಕಳ್ಳಸಾಗಣೆ ಕುರಿತಂತೆ ಚರ್ಚೆ ನಡೆಯಲಿದೆ.
Question 7 |
7.ಟೊರೊಂಟೊ ಮಾಸ್ಟರ್ಸ್ ಟೆನ್ನಿಸ್ ಟೂರ್ನಿ-2016 ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ನಲ್ಲಿ ಪ್ರಶಸ್ತಿ ಗೆದ್ದವರಾರು?
ನೊವಾಕ್ ಜೊಕೊವಿಕ್, ಸಿಮೊನ ಹಲೆಪ್ | |
ರೋಜರ್ ಫೆಡರರ್, ಸಿಮೊನ ಹಲೆಪ್ | |
ಆಂಡ್ರ್ಯೂ ಮುರ್ರೆ, ಎಕಟೆರಿನ ಮಕರೋವ | |
ನೊವಾಕ್ ಜೊಕೊವಿಕ್, ಎಕಟೆರಿನ ಮಕರೋವ |
Question 7 Explanation:
ನೊವಾಕ್ ಜೊಕೊವಿಕ್, ಸಿಮೊನ ಹಲೆಪ್:
ಸರ್ಬಿಯಾದ ನೊವಾಕ್ ಜೊಕೊವಿಕ್ ರವರು ಟೊರಾಂಟೊ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್ನಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ವಿಶ್ವದ ನಂ.1 ಆಟಗಾರ ಜೊಕೊವಿಕ್ ರವರು ಫೈನಲ್ ಪಂದ್ಯದಲ್ಲಿ ಆರನೇ ಶ್ರೇಯಾಂಕಿತ ಕೀ ನಿಶಕೋರಿರವರನ್ನು 6-3, 7-5 ಅಂತರದಿಂದ ಮಣಿಸುವ ಮೂಲಕ ವಿಜೇತರಾದರು. ಮಹಿಳೆಯರ ಸಿಂಗಲ್ಸ್ ನಲ್ಲಿ ವಿಶ್ವದ ನಂ.5 ಆಟಗಾರ್ತಿ ಸಿಮೊನ ಹಲೆಪ್ ರವರು ಅಮೆರಿಕಾದ ಮಡಿಸನ್ ಕೀ ರವರನ್ನು ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡರು.
Question 8 |
8.ಇತ್ತೀಚೆಗೆ ಆಂಧ್ರಪ್ರದೇಶ ಸರ್ಕಾರವು ರಾಜ್ಯದಲ್ಲಿ ಆಹಾರ ಮೌಲ್ಯ ಸರಪಳಿ (Food Value Chain) ಅಭಿವೃದ್ದಿ ಪಡಿಸುವ ಸಲುವಾಗಿ ಯಾವ ದೇಶದೊಂದಿಗೆ ಒಪ್ಪಂದಕ್ಕೆ ಸಹಿಹಾಕಿದೆ?
ಜಪಾನ್ | |
ಚೀನಾ | |
ಶ್ರೀಲಂಕಾ | |
ಜರ್ಮನಿ |
Question 8 Explanation:
ಜಪಾನ್:
ಆಂಧ್ರಪ್ರದೇಶ ಸರ್ಕಾರವು ರಾಜ್ಯದಲ್ಲಿ ಆಹಾರ ಮೌಲ್ಯ ಸರಪಳಿ (Food Value Chain) ಅಭಿವೃದ್ದಿ ಪಡಿಸುವ ಸಲುವಾಗಿ ಜಪಾನ್ ದೇಶದೊಂದಿಗೆ ಒಪ್ಪಂದಕ್ಕೆ ಸಹಿಹಾಕಿದೆ. ಒಪ್ಪಂದದ ಅನ್ವಯ ಜಪಾನ್ ನ ಕೃಷಿ, ಅರಣ್ಯ ಮತ್ತು ಮೀನುಗಾರಿಕೆ ಇಲಾಖೆಯು ಆಂಧ್ರಪ್ರದೇಶದ ಕೃಷಿ ಮತ್ತು ಆಹಾರ ಸಂಬಂಧಿತ ಕ್ಷೇತ್ರದಲ್ಲಿ ಬಂಡವಾಳ ಹೂಡುವಂತೆ ಜಪಾನ್ ಕಂಪನಿಗಳನ್ನು ಪ್ರೋತ್ಸಾಹಿಸಲಿದೆ.
Question 9 |
9.ಪ್ಯಾರಾಚೂಟ್ ನ ಸಹಾಯವಿಲ್ಲದೇ 25 ಸಾವಿರ ಅಡಿಗಳ ಮೇಲಿಂದ ಧುಮುಕಿ ಹೊಸ ಇತಿಹಾಸ ಬರೆದ ಸ್ಕೈಡ್ರೈವರ್ ಯಾರು?
ಡೇವಿಡ್ ಕ್ರೆಗ್ | |
ಲೂಕ್ ಐಕಿನ್ಸ್ | |
ಕ್ರಿಸ್ಟ್ ಬರ್ಗರ್ | |
ಆಸ್ಕರ್ ಜೇಮ್ಸ್ |
Question 9 Explanation:
ಲ್ಯೂಕ್ ಐಕಿನ್ಸ್:
ಅಮೆರಿಕಾದ ಖ್ಯಾತ ಸ್ಕೈಡ್ರೈವರ್ ಲೂಕ್ ಐಕಿನ್ಸ್ ರವರು 25 ಸಾವಿರ ಅಡಿಗಳ ಮೇಲಿಂದ ಧುಮುಕಿ ಹೊಸ ಇತಿಹಾಸ ಬರೆದರು. ಆ ಮೂಲಕ ಪ್ಯಾರಾಚೂಟ್ ಸಹಾಯವಿಲ್ಲದೇ ಧುಮುಕುವ ಮೂಲಕ ಸ್ಕೈಡೈವಿಂಗ್ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆದರು. 18 ಸಾವಿರ ಸಾಹಸಗಳನ್ನು ಯಶಸ್ವಿಯಾಗಿ ಪೂರೈಸಿದ್ದ ಅನುಭವಿ ಲ್ಯೂಕ್, 100 ಅಡಿ ಉದ್ದ 100 ಅಡಿ ಅಗಲದ ಬಲೆಯ ಮಧ್ಯಭಾಗಕ್ಕೆ ಹಾರುವ ಮೂಲಕ ಇಡೀ ವಿಶ್ವವೇ ಬೆರಗಾಗುವ ಸಾಧನೆ ಮಾಡಿದರು.
Question 10 |
10.ಈ ಕೆಳಗಿನ ಯಾರನ್ನು ಪ್ರತಿಷ್ಠಿತ 2016 ರೇಮನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ?
ನವೀನ್ ಕೃಷ್ಣ ಮತ್ತು ಬೆಜ್ವಾಡ ವಿಲ್ಸನ್ | |
ಇವಾನ್ ಶರ್ಮಿಳಾ ಮತ್ತು ಟಿ.ಎಂ.ಕೃಷ್ಣ | |
ಬೆಜ್ವಾಡ ವಿಲ್ಸನ್ ಮತ್ತು ಟಿ.ಎಂ.ಕೃಷ್ಣ | |
ವಿಜಯೇಂದ್ರ ಸಿಂಗ್ ಮತ್ತು ಚರಣ್ ಚಂದ್ರ |
Question 10 Explanation:
ಬೆಜ್ವಾಡ ವಿಲ್ಸನ್ ಮತ್ತು ಟಿ.ಎಂ.ಕೃಷ್ಣ :
ಮಾನವ ಹಕ್ಕು ಹೋರಾಟಗಾರ ಬೇಜ್ವಾಡ ವಿಲ್ಸನ್ ಹಾಗೂ ಪ್ರಸಿದ್ದ ಕರ್ನಾಟಕ ಶಾಸ್ತ್ರೀಯ ಸಂಗೀತಗಾರ ಟಿ.ಎಂ.ಕೃಷ್ಣ ಪ್ರತಿಷ್ಠಿತ ರೇಮನ್ ಮ್ಯಾಗ್ಸೆಸೆ-2016 ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಏಷ್ಯಾದ ನೊಬೆಲ್ ಎಂದೇ ಪ್ರಸಿದ್ದಿ ಹೊಂದಿರುವ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಈ ಬಾರಿ ಆರು ಜನರನ್ನು ಆಯ್ಕೆಮಾಡಲಾಗಿದ್ದು, ಭಾರತದಿಂದ ಈ ಇಬ್ಬರನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ.
There are 10 questions to complete.
super questions