ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 4, 2016

Question 1
1.ಈ ಕೆಳಗಿನ ಯಾರನ್ನು 23ನೇ ರಾಜೀವ್ ಗಾಂಧೀ ರಾಷ್ಟ್ರೀಯ ಸದ್ಭಾವನ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ?
A
ಅಣ್ಣಾ ಹಜಾರೆ
B
ನಂದಿತಾ ದಾಸ್
C
ಶುಭಾ ಮುದ್ಗಲ್
D
ಅರವಿಂದ್ ಪಗಾರಿಯ
Question 1 Explanation: 
ಶುಭಾ ಮುದ್ಗಲ್: ಪ್ರಸಿದ್ದ ಗಾಯಕಿ ಶುಭಾ ಮುದ್ಗಲ್ ರವರನ್ನು ಪ್ರತಿಷ್ಠಿತ 23ನೇ ರಾಜೀವ್ ಗಾಂಧೀ ರಾಷ್ಟ್ರೀಯ ಸದ್ಭಾವನ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಕೋಮು ಸೌಹರ್ದತೆ, ಶಾಂತಿ ಮತ್ತು ಅಭಿಮಾನ ಪ್ರಚಾರಕ್ಕಾಗಿ ಶುಭಾ ರವರು ನೀಡಿದ ಮಹೋನ್ನತ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ರಾಜೀವ್ ಗಾಂಧೀ ರಾಷ್ಟ್ರೀಯ ಸದ್ಭಾವನ ಪ್ರಶಸ್ತಿಯನ್ನು ಪ್ರತಿ ವರ್ಷ ಆಗಸ್ಟ್ 20 ರಂದು ಭಾರತದ ಮಾಜಿ ಪ್ರಧಾನಿಯಾದ ದಿವಂಗತ ರಾಜೀವ್ ಗಾಂಧೀ ರವರ ಹುಟ್ಟುಹಬ್ಬದ ಸ್ಮರಣಾರ್ಥ ನೀಡಲಾಗುತ್ತಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಲ್ ಇಂಡಿಯಾ ಕಾಂಗ್ರೆಸ್ ಸಮಿತಿ ಈ ಪ್ರಶಸ್ತಿಯನ್ನು 1992 ರಲ್ಲಿ ಸ್ಥಾಪಿಸಿದೆ. ಪ್ರಶಸ್ತಿಯು 10 ಲಕ್ಷ ನಗದು ಮತ್ತು ಫಲಕವನ್ನು ಒಳಗೊಂಡಿದೆ.
Question 2
2.ಗುಜರಾತ್ ನ ನೂತನ ಮುಖ್ಯಮಂತ್ರಿಯಾಗಿ ಯಾರು ಆಯ್ಕೆಯಾಗಿದ್ದಾರೆ?
A
ಅಮಿತ್ ಷಾ
B
ವಿಜಯ್ ರೂಪಾನಿ
C
ನಿತಿನ್ ಪಟೇಲ್
D
ವಿಜಯ್ ಕುಲಕುರ್ಣಿ
Question 2 Explanation: 
ವಿಜಯ್ ರೂಪಾನಿ: ಗುಜರಾತ್ನ ನೂತನ ಮುಖ್ಯಮಂತ್ರಿಯಾಗಿ ವಿಜಯ್ ರೂಪಾನಿ ಅವರು ಆಯ್ಕೆಯಾಗಿದ್ದಾರೆ. ನಿತಿನ್ ಪಟೇಲ್ ಅವರು ರಾಜ್ಯನ ಉಪ ಮುಖ್ಯಮಂತ್ರಿಯಾಗಲಿದ್ದಾರೆ.ಇತ್ತೀಚೆಗೆ ಗುಜರಾತ್ನ ಮುಖ್ಯಮಂತ್ರಿಯಾಗಿದ್ದ ಆನಂದಿಬೆನ್ ರವರು ರಾಜೀನಾಮೆ ನೀಡಿದ್ದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸ್ಥಾನ ತೆರವಾಗಿತ್ತು. ವಿಜಯ್ ರೂಪಾನಿ ಅವರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದು, ಆನಂದಿಬೆನ್ ಅವರ ಸಂಪುಟದಲ್ಲಿ ಸಾರಿಗೆ, ನೀರು ಸರಬರಾಜು, ಕಾರ್ಮಿಕ ಮತ್ತು ಉದ್ಯೋಗ ಸಚಿವರಾಗಿದ್ದರು.
Question 3
3.ಈ ಕೆಳಗಿನ ಯಾವ ಕ್ರೀಡೆ/ಕ್ರೀಡೆಗಳನ್ನು 2020ರ ಟೊಕಿಯೋ ಒಲಂಪಿಕ್ಸ್ ನಲ್ಲಿ ಸೇರ್ಪಡೆಗೊಳಿಸಲು ಅಂತರರಾಷ್ಟ್ರೀಯ ಒಲಂಪಿಕ್ ಸಮಿತಿ ಸಮ್ಮತಿ ಸೂಚಿಸಿದೆ?

I) ಬೇಸ್ ಬಾಲ್

II) ಕರಾಟೆ

III)ಸರ್ಫಿಂಗ್

IV) ಕ್ಲೈಂಬಿಂಗ್

ಈ ಕೆಳಗಿನ ಕೊಟ್ಟಿರುವ ಕೋಡ್ ಗಳಲ್ಲಿ ಸರಿಯಾದ ಉತ್ತರವನ್ನು ಗುರುತಿಸಿ?
A
I & II ಮಾತ್ರ
B
I & III ಮಾತ್ರ
C
II & IV ಮಾತ್ರ
D
ಮೇಲಿನ ಎಲ್ಲವೂ
Question 3 Explanation: 
ಮೇಲಿನ ಎಲ್ಲವೂ : ಜಪಾನ್ ನ ಟೊಕಿಯೋದಲ್ಲಿ 2020 ರಲ್ಲಿ ನಡೆಯಲಿರುವ ಒಲಂಪಿಕ್ಸ್ ಗೆ 5 ಹೊಸ ಕ್ರೀಡೆಗಳನ್ನು ಸೇರಿಸಲು ಅಂತರರಾಷ್ಟ್ರೀಯ ಒಲಂಪಿಕ್ಸ್ ಸಮಿತಿ ಒಪ್ಪಿಗೆ ಸೂಚಿಸಿದೆ. ಬೇಸ್ಬಾಲ್/ಸಾಪ್ಟ್ ಬಾಲ್, ಕರಾಟೆ, ಸ್ಕೇಟ್ಬೋರ್ಡ್ (Skateboard), ಕ್ಲೈಂಬಿಂಗ್ (Climbing) ಹಾಗೂ ಸರ್ಫಿಂಗ್ (Surfing) ಕ್ರೀಡೆಗಳನ್ನು ಸೇರ್ಪಡೆಗೊಳಿಸಲು ಬ್ರೆಜಿಲ್ ನ ರಿಯೋ ಡಿ ಜನೈರೊದಲ್ಲಿ ನಡೆದ ಅಂತರರಾಷ್ಟ್ರೀಯ ಒಲಂಪಿಕ್ ಸಮಿತಿಯ 129ನೇ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
Question 4
4.ದೇಶದ ಮೊದಲ “ಟೈಗರ್ ಸೆಲ್ (Tiger Cell)” ಯಾವ ರಾಜ್ಯದಲ್ಲಿ ಸ್ಥಾಪನೆಯಾಗಲಿದೆ?
A
ಉತ್ತರ ಪ್ರದೇಶ
B
ಉತ್ತರಖಂಡ
C
ಮಧ್ಯ ಪ್ರದೇಶ
D
ಗುಜರಾತ್
Question 4 Explanation: 
ಉತ್ತರಖಂಡ: ದೇಶದ ಮೊದಲ ಟೈಗರ್ ಸೆಲ್ ಉತ್ತರಾಖಂಡದ ಡೆಹರಾಡೂನ್ನಲ್ಲಿರುವ ಭಾರತೀಯ ವನ್ಯಜೀವಿ ಸಂಸ್ಥೆಯ ಆವರಣದಲ್ಲಿ ಸ್ಥಾಪನೆಯಾಗಲಿದೆ. ಈ ಸಂಬಂಧ ಉತ್ತರಖಂಡ ಸರ್ಕಾರ ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ಟಿಸಿಎ) ಒಪ್ಪಂದಕ್ಕೆ ಸಹಿ ಹಾಕಿವೆ. ಟೈಗರ್ ಸೆಲ್ ನಲ್ಲಿ ಹುಲಿ ಸಂತತಿಗೆ ಸಂಬಂಧಿಸಿದ ಎಲ್ಲಾ ರೀತಿಯ ಅಂಕಿ-ಅಂಶಗಳ ದಾಖಲೆಗಳು ಸಿಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ದೇಶವ್ಯಾಪ್ತಿ ಇರುವ 50 ಹುಲಿಧಾಮಗಳಲ್ಲಿನ ಹುಲಿಗಳ ಡಿಎನ್ಎ ಸ್ಯಾಂಪಲ್ಗಳು ಇಲ್ಲಿ ಲಭ್ಯವಿರಲಿದೆ. ದೇಶದಲ್ಲಿ ಎಲ್ಲಿಯೇ ಹುಲಿ ಬೇಟೆ ಆದರೂ ಇಲ್ಲಿ ದಾಖಲಾಗಿರುವಂತೆ ಮತ್ತು ಕೃತ್ಯಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ವ್ಯವಸ್ಥೆ ಮಾಡಲಾಗುತ್ತಿದೆ.
Question 5
5.ಅಂತಾರಾಷ್ಟ್ರೀಯ ಒಲಂಪಿಕ್ ಸಮಿತಿಗೆ ಸದಸ್ಯೆಯಾಗಿ ಆಯ್ಕೆಯಾದ ಪ್ರಥಮ ಭಾರತೀಯ ಮಹಿಳೆ ಯಾರು?
A
ಸಾವಿತ್ರಿ ಜಿಂದಾಲ್
B
ನೀತಾ ಅಂಬಾನಿ
C
ಸ್ಮೃತಿ ಇರಾನಿ
D
ಪಿ.ಟಿ.ಉಷಾ
Question 5 Explanation: 
ನೀತಾ ಅಂಬಾನಿ: ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಸದಸ್ಯೆಯಾಗಿ ನೀತಾ ಅಂಬಾನಿ ಆಯ್ಕೆಯಾಗಿದ್ದಾರೆ. ಆ ಮೂಲಕ ಭಾರತದಿಂದ ಆಯ್ಕೆಯಾದ ಪ್ರಥಮ ಮಹಿಳೆ ಎಂಬ ಕೀರ್ತಿಗೆ ನೀತಾ ಅಂಬಾನಿ ಪಾತ್ರರಾಗಿದ್ದಾರೆ. ಬ್ರೆಜಿಲ್ ನ ರಿಯೋದಲ್ಲಿ ನಡೆದ 129 ನೇ ಐಓಸಿ ಸಭೆಯಲ್ಲಿ ನೀತಾ ಆಯ್ಕೆಗೊಂಡಿದ್ದಾರೆ. ತಮ್ಮ 70 ನೇ ವರ್ಷದವರೆಗೂ ಐಓಸಿ ಸದಸ್ಯೆಯಾಗಿ ನೀತಾ ಮುಂದುವರೆಯಲಿದ್ದಾರೆ. ನೀತಾಗೂ ಮುನ್ನ ಸರ್ ದೊರಬ್ಜಿ ಟಾಟಾ ಐಓಸಿ ಪ್ರತಿನಿಧಿಸಿದ್ದ ಪ್ರಥಮ ಭಾರತೀಯನಾಗಿದ್ದರು, ನಂತರ ರಾಜಾ ರಣಧೀರ್ ಸಿಂಗ್ 2000-14 ರವರೆಗೆ ಸದಸ್ಯರಾಗಿ ಇದೀಗ ಗೌರವ ಸದಸ್ಯರಾಗಿ ಸಮಿತಿಯಲ್ಲಿದ್ದಾರೆ.
Question 6
6.ಭಾರತದ ಕಬಡ್ಡಿ ರಾಜಧಾನಿ (Kabaddi Capital of India) ಎಂದು ಈ ಕೆಳಗಿನ ಯಾವುದನ್ನು ಕರೆಯಲಾಗುತ್ತಿದೆ?
A
ನಿಜಾಂಪುರ
B
ಖರಗ್ಪುರ
C
ಲೂಧಿಯಾನ
D
ಜಲಂದರ್
Question 6 Explanation: 
ನಿಜಾಂಪುರ: ದೆಹಲಿಯ ನೈರುತ್ಯ ಭಾಗದಲ್ಲಿರುವ ಸಣ್ಣ ಗ್ರಾಮ ನಿಜಾಂಪುರವನ್ನು ಭಾರತದ ಕಬಡ್ಡಿ ರಾಜಧಾನಿ ಎನ್ನಲಾಗುತ್ತದೆ. ಹಲವಾರು ದಶಕಗಳಿಂದ ಕಬಡ್ಡಿ ಆಟ ಈ ಗ್ರಾಮದ ಪ್ರಸಿದ್ದ ಕ್ರೀಡೆಯಾಗಿದ್ದು, ನೂರಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರರು ಈ ಗ್ರಾಮದವರಾಗಿದ್ದಾರೆ.
Question 7
7.ಇತ್ತೀಚೆಗೆ ಯಾವ ರಾಜ್ಯ “ಚರಂಡಿ ಮತ್ತು ತ್ಯಾಜ್ಯ ನೀರು ನಿಯಮ (Sewage and waste water policy)”ವನ್ನು ಅನುಮೋದಿಸಿದ ದೇಶದ ಮೊದಲ ರಾಜ್ಯ ಎನಿಸಿದೆ?
A
ಗುಜರಾತ್
B
ತೆಲಂಗಣ
C
ರಾಜಸ್ಥಾನ
D
ಮಹರಾಷ್ಟ್ರ
Question 7 Explanation: 
ರಾಜಸ್ಥಾನ: ರಾಜಸ್ಥಾನ ಸರ್ಕಾರ ಚರಂಡಿ ಮತ್ತು ತ್ಯಾಜ್ಯ ನೀರು ನಿಯಮ (Sewage and waste water policy)”ವನ್ನು ಅನುಮೋದಿಸಿದ್ದು, ಈ ನಿಯಮವನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯ ಎನಿಸಿದೆ. ಈ ನಿಯಮವೂ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳು, ಪಾರಂಪರಿಕ ತಾಣಗಳು ಮತ್ತು ಒಂದು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಿಗೆ ಅನ್ವಯವಾಗಲಿದೆ. ನಿಯಮದಡಿ ತ್ಯಾಜ್ಯ ನೀರನ್ನು ಕೃಷಿ ಮತ್ತು ನೀರಾವರಿಗೆ ಬಳಕೆ ಮಾಡಲಾಗುವುದು. ನಿಯಮದಡಿ ಬರುವ ನಗರದಲ್ಲಿರುವ ಮನೆಗಳು ಚರಂಡಿ ವ್ಯವಸ್ಥೆಗೆ ಸಂಪರ್ಕ ಕಲ್ಪಿಸುವುದು ಕಡ್ಡಾಯವಾಗಿದೆ.
Question 8
8.ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರ ನೂತನ ಕಾರ್ಯದರ್ಶಿಯಾಗಿ ಯಾರು ನೇಮಕಗೊಂಡಿದ್ದಾರೆ?
A
ಕಿರಣ್ ಜೋಶಿ
B
ಭಾಸ್ಕರ್ ಕುಲ್ಬೆ
C
ರವೀಂದ್ರ ತ್ರಿವೇದಿ
D
ಪ್ರಹ್ಲಾದ್ ಠಾಗೋರ್
Question 8 Explanation: 
ಭಾಸ್ಕರ್ ಕುಲ್ಬೆ: ಪ್ರಧಾನ ಮಂತ್ರಿ ಕಚೇರಿಯ ಹೆಚ್ಚುವರಿ ಕಾರ್ಯದರ್ಶಿಯಾಗಿದ್ದ, ಐಎಎಸ್ ಅಧಿಕಾರಿ ಭಾಸ್ಕರ್ ಕುಲ್ಬೆ ರವರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿರವರ ನೂತನ ಕಾರ್ಯದರ್ಶಿಯಾಗಿ ನೇಮಕಮಾಡಲಾಗಿದೆ.
Question 9
9.17ನೇ ಏಷ್ಯಯನ್ ಜೂನಿಯರ್ ಜುಡೋ ಚಾಂಪಿಯನ್ ಷಿಪ್ ಯಾವ ನಗರದಲ್ಲಿ ನಡೆಯಲಿದೆ?
A
ಕೊಚ್ಚಿ
B
ಬೆಂಗಳೂರು
C
ಚೆನ್ನೈ
D
ವಿಶಾಖಪಟ್ಟಣ
Question 9 Explanation: 
ಕೊಚ್ಚಿ: 10ನೇ ಏಷ್ಯಯನ್ ಕ್ಯಾಡೆಟ್ ಜುಡೋ ಚಾಂಪಿಯನ್ ಷಿಪ್ ಮತ್ತು 17ನೇ ಏಷ್ಯಯನ್ ಜೂನಿಯರ್ ಜುಡೋ ಚಾಂಪಿಯನ್ ಷಿಪ್ ಕೇರಳದ ಕೊಚ್ಚಿಯಲ್ಲಿ ಸೆಪ್ಟೆಂಬರ್ 7-11, 2016 ರಂದು ನಡೆಯಲಿದೆ.
Question 10
10.ನ್ಯಾ.ಲೋಧಾ ಸಮಿತಿ ಶಿಫಾರಸ್ಸುಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡುವ ಸಲುವಾಗಿ ಬಿಸಿಸಿಐ ಯಾರನ್ನು ಸಲಹೆಗಾರರನ್ನಾಗಿ ನೇಮಕಮಾಡಿದೆ?
A
ನ್ಯಾ. ಬ್ರಿಜೇಶ್ ಪಾಟೀಲ್
B
ನ್ಯಾ. ಬಾಲಕೃಷ್ಣ
C
ನ್ಯಾ. ಮಾರ್ಕಂಡೇಯ ಖಟ್ಜು
D
ನ್ಯಾ. ಗೋಪಾಲ್ ದಾಸ್
Question 10 Explanation: 
ನ್ಯಾ. ಮಾರ್ಕಂಡೇಯ ಖಟ್ಜು: ಆಡಳಿತ ಸುಧಾರಣೆಗಾಗಿ ನ್ಯಾ.ಲೋಧಾ ಸಮಿತಿ ನೀಡಿರುವ ಶಿಫಾರಸುಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಸೂಕ್ತ ಮಾರ್ಗದರ್ಶನದ ಉದ್ದೇಶಕ್ಕಾಗಿ ಸುಪ್ರೀಂಕೋರ್ಟ್ನಲ್ಲಿ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರನ್ನು ಬಿಸಿಸಿಐ ತನ್ನ ಸಲಹೆಗಾರರನ್ನಾಗಿ ನೇಮಿಸಿಕೊಳ್ಳಲು ನಿರ್ಧರಿಸಿದೆ. ಶಿಫಾರಸುಗಳ ಸಮರ್ಪಕ ಅನುಷ್ಠಾನ ಕುರಿತಂತೆ ನಡೆದ ಬಿಸಿಸಿಐನ ಮಹಾಧಿವೇಶನದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಖಟ್ಜು ರವರು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷರಾಗಿಯೂ ಸೇವೆಸಲ್ಲಿಸಿದ್ದಾರೆ.
There are 10 questions to complete.

Leave a Comment

This site uses Akismet to reduce spam. Learn how your comment data is processed.