ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 5, 2016

Question 1
1.15ನೇ “ಪ್ರವಾಸಿ ಭಾರತೀಯ ದಿವಸ್-2017” ಯಾವ ನಗರದಲ್ಲಿ ನಡೆಯಲಿದೆ?
A
ಚೆನ್ನೈ
B
ಬೆಂಗಳೂರು
C
ಹೈದ್ರಾಬಾದ್
D
ಭೂಪಾಲ್
Question 1 Explanation: 
ಬೆಂಗಳೂರು: 2017ರ ಜನವರಿ 7ರಿಂದ ಮೂರು ದಿನಗಳ ಕಾಲ 'ಪ್ರವಾಸಿ ಭಾರತೀಯ ದಿವಸ್' ಬೆಂಗಳೂರಿನಲ್ಲಿ ನಡೆಯಲಿದೆ. ನಗರದ ತುಮಕೂರು ರಸ್ತೆಯಲ್ಲಿರುವ ವಸ್ತು ಪ್ರದರ್ಶನ ಕೇಂದ್ರದಲ್ಲಿ ವಿದೇಶಾಂಗ ಇಲಾಖೆ ಹಾಗೂ ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಆಚರಿಸಲಾಗುವುದು. ಹದಿನೈದನೇ ಪ್ರವಾಸಿ ದಿವಸ್ ಇದಾಗಿದ್ದು, ಬೆಂಗಳೂರಿನಲ್ಲಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ.
Question 2
2.ಈ ಕೆಳಗಿನ ಯಾವ ಕಾಯಿಲೆ/ಕಾಯಿಲೆಗಳು ಈಡೀಸ್ ಏಜಿಪ್ಟಿ(Aedes aegypti) ಸೊಳ್ಳೆಯಿಂದ ಹರಡಬಲ್ಲದಾಗಿವೆ?

i) ಡೆಂಗ್ಯೂ

II) ಚಿಕನ್ ಗುನ್ಯಾ

III) ಹಳದಿ ಜ್ವರ

IV) ಝಿಕಾ ಜ್ವರ

ಈ ಕೆಳಗೆ ನೀಡಿರುವ ಕೋಡ್ ಮೂಲಕ ಸರಿಯಾದ ಉತ್ತರವನ್ನು ಗುರುತಿಸಿ:
A
I & II
B
II & IV
C
II & III
D
I, II, III & IV
Question 2 Explanation: 
I, II, III & IV: ಡೆಂಗ್ಯೂ, ಚಿಕನ್ ಗುನ್ಯಾ, ಹಳದಿ ಜ್ವರ ಮತ್ತು ಝಿಕಾ ಜ್ವರ ಈಡೀಸ್ ಏಜಿಪ್ಟಿ ಸೊಳ್ಳೆ ಕಚ್ಚುವ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುವ ಕಾಯಿಲೆಗಳಾಗಿವೆ.
Question 3
3.ಇತ್ತೀಚೆಗೆ ನಿಧನರಾದ ಮಹೀಮ್ ಬೋರಾ ರವರು ಯಾವ ಭಾಷೆಯ ಪ್ರಸಿದ್ದ ಸಾಹಿತಿಯಾಗಿದ್ದರು?
A
ಅಸ್ಸಾಮಿ
B
ಗುಜರಾತಿ
C
ಮರಾಠಿ
D
ಬಂಗಾಳಿ
Question 3 Explanation: 
ಅಸ್ಸಾಮಿ: ಮಹೀಮ್ ಬೋರಾ ಖ್ಯಾತ ಅಸ್ಸಾಮಿ ಸಾಹಿತಿ ಮತ್ತು ಶಿಕ್ಷಣ ತಜ್ಞ. ಬೋರಾ ಅವರು ತಮ್ಮ ಸಣ್ಣಕಥೆ ಮತ್ತು ಕವಿತೆಗಳ ಮೂಲಕ ಪ್ರಸಿದ್ದರಾಗಿದ್ದರು. ಇದಾನಿ ಮಹೀರ್ ಹನ್ನಿ ಕೃತಿಗೆ 2001ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದ ಬೋರಾ, ಅಸ್ಸಾಂ ವ್ಯಾಲಿ ಲಿಟರೇಚರ್ ಅವಾರ್ಡ್ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದರು., 2011ರಲ್ಲಿ ಇವರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿತ್ತು.
Question 4
4.ಯಾವ ದೇಶ “ಟಿಯಾನ್ ಟಾಂಗ್-1 (Tiantong-1)” ಹೆಸರಿನ ಮೊಬೈಲ್ ದೂರಸಂಪರ್ಕ ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಿತು?
A
ದಕ್ಷಿಣ ಕೊರಿಯಾ
B
ಚೀನಾ
C
ಜಪಾನ್
D
ಮೆಕ್ಸಿಕೊ
Question 4 Explanation: 
ಚೀನಾ: ಚೀನಾ ದೇಶ ಇತ್ತೀಚೆಗೆ ಟಿಯಾನ್ ಟಾಂಗ್-1 (Tiantong-1)” ಹೆಸರಿನ ಮೊಬೈಲ್ ದೂರಸಂಪರ್ಕ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಚೀನಾದ ಮೊದಲ ಮೊಬೈಲ್ ಉಪಗ್ರಹ ಇದಾಗಿದ್ದು, ಲಾಂಗ್ ಮಾರ್ಚ್-3ಬಿ ರಾಕೆಟ್ ಮೂಲಕ ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಿದೆ. ಈ ಉಪಗ್ರಹವು ಭೂಸ್ಥಾಯೀ ಕಕ್ಷೆ (Geosynchronous)ಯಲ್ಲಿ ಕಾರ್ಯನಿರ್ವಹಿಸಲಿದ್ದು, ಚೀನಾ, ಮಧ್ಯಪ್ರಾಚ್ಯ, ಆಫ್ರಿಕಾ ಮತ್ತು ಇತರ ಪ್ರದೇಶಗಳಿಗೆ ಮೊಬೈಲ್ ನೆಟ್ವರ್ಕ್ ಸೇವೆಗಳನ್ನು ಒದಗಿಸಲಿದೆ.
Question 5
5.ಗಂಗಾ ನದಿಯಲ್ಲಿ ಹೂಳು ತೆಗೆಯುವ (desiltation) ಸಲುವಾಗಿ ಮಾರ್ಗಸೂಚಿ ತಯಾರಿಸಲು ಕೇಂದ್ರ ಸರ್ಕಾರ ಯಾರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದೆ?
A
ಮಾಧವ್ ಚಿತಾಲೆ
B
ಶಶಿ ಶೇಖರ್
C
ಅಜಯ್ ನಾರಾಯಣ್ ಝಾ
D
ಮುಖೇಶ್ ಸಿನ್ಹಾ
Question 5 Explanation: 
ಮಾಧವ್ ಚಿತಾಲೆ: ಉತ್ತರಖಂಡದ ಭಿಮ್ಗೌಡ್ ನಿಂದ ಪಶ್ಚಿಮ ಬಂಗಾಳದ ಫರಕ್ಕವರೆಗೆ ಗಂಗಾ ನದಿಯಲ್ಲಿ ಹೂಳು ತೆಗೆಯುವ ಸಲುವಾಗಿ ಮಾರ್ಗಸೂಚಿಗಳನ್ನು ಸಿದ್ದಪಡಿಸುವ ಸಲುವಾಗಿ ಕೇಂದ್ರ ಜಲ ಸಂಪನ್ಮೂಲ, ನದಿ ಅಭಿವೃದ್ದಿ ಮತ್ತು ಗಂಗಾ ಪುನರ್ಜೀವನ ಸಚಿವಾಲಯ ಸಮಿತಿಯನ್ನು ರಚಿಸಿದೆ. ರಾಷ್ಟ್ರೀಯ ಗಂಗಾನದಿ ಜಲಾನಯನ ಪ್ರಾಧಿಕಾರದ ಸದಸ್ಯರಾದ ಮಾಧವ್ ಚಿತಾಲೆ ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಶಶಿ ಶೇಖರ್, ಅಜಯ್ ನಾರಾಯಣ್ ಝಾ ಮತ್ತು ಮುಖೇಶ್ ಸಿನ್ಹಾ ಸಮಿತಿಯ ಇತರೆ ಸದಸ್ಯರು. ಸಮಿತಿಯು ಮೂರು ತಿಂಗಳೊಳಗೆ ತನ್ನ ವರದಿಯನ್ನು ಸಲ್ಲಿಸಲಿದೆ.
Question 6
6.ಇತ್ತೀಚೆಗೆ ನಿಧನರಾದ “ವಿಯೆಟ್ನಂ ವೀಡು ಸುಂದರಂ” ಯಾವ ಕ್ಷೇತ್ರದಲ್ಲಿ ಪ್ರಸಿದ್ದಿ ಹೊಂದಿದ್ದರು?
A
ಸಿನಿಮಾ
B
ಪತ್ರಿಕೋದ್ಯಮ
C
ಶಾಸ್ತ್ರೀಯ ಸಂಗೀತ
D
ಸಾಹಿತ್ಯ
Question 6 Explanation: 
ಸಿನಿಮಾ: ವಿಯೆಟ್ನಂ ವೀಡು ಸುಂದರಂ ಪ್ರಸಿದ್ದ ತಮಿಳು ಸಿನಿಮಾ ನಿರ್ದೇಶಕ ಮತ್ತು ಚಿತ್ರಕಥೆಗಾರ. ತಮಿಳಿನ ಖ್ಯಾತ ನಟ ಶಿವಾಜಿ ಗಣೇಶನ್ ಸೇರಿದಂತೆ ಸರಿಸುಮಾರು ಎಲ್ಲಾ ತಮಿಳು ನಾಯಕರ ಚಿತ್ರಗಳಿಗೆ ಇವರು ಚಿತ್ರಕಥೆಯನ್ನು ಬರೆದಿದ್ದರು. ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಇವರು ಪಡೆದುಕೊಂಡಿದ್ದರು.
Question 7
7.ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಅತಿ ಹೆಚ್ಚು ಬುಡಕಟ್ಟು ಜನಾಂಗಗಳನ್ನು ಹೊಂದಿರುವ ರಾಜ್ಯ ಯಾವುದು?
A
ಜಾರ್ಖಂಡ್
B
ಓಡಿಶಾ
C
ಪಶ್ಚಿಮ ಬಂಗಾಳ
D
ತೆಲಂಗಣ
Question 7 Explanation: 
ಓಡಿಶಾ: ಓಡಿಶಾ ರಾಜ್ಯ ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಅತಿ ಹೆಚ್ಚು ಬುಡಕಟ್ಟು ಜನಾಂಗಗಳನ್ನು ಹೊಂದಿದೆ. ಓಡಿಶಾದಲ್ಲಿ ಒಟ್ಟು 62 ಬುಡಕಟ್ಟು ಜನಾಂಗಗಳು ಇದ್ದು, 2011 ಜನಗಣತಿಯ ಒಟ್ಟು ಜನಸಂಖ್ಯೆಯ ಶೇ 22.85ರಷ್ಟಿದೆ. 62 ಬುಡಕಟ್ಟು ಜನಾಂಗಗಳ ಪೈಕಿ 13 ಬುಡಕಟ್ಟು ಜನಾಂಗಗಳನ್ನು ವಿಶೇಷವಾಗಿ ದುರ್ಬಲಗೊಂಡಿರುವ ಬುಡಕಟ್ಟು ಜನಾಂಗಗಳು ಎಂದು ಗುರುತಿಸಲಾಗಿದೆ.
Question 8
8.ಕೇರಳ ಸರ್ಕಾರದ ನಾಲ್ಕನೇ ಆಡಳಿತ ಸುಧಾರಣೆ ಆಯೋಗದ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?
A
ಸಿ.ಪಿ.ನಾಯರ್
B
ವಿ.ಎಸ್.ಅಚುತಾನಂದನ್
C
ನೀಲಾ ಗಂಗಾಧರನ್
D
ಈ.ಕೆ.ನಾರಾಯಣ್
Question 8 Explanation: 
ವಿ.ಎಸ್.ಅಚುತಾನಂದನ್: ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್.ಅಚುತಾನಂದನ್ ರವರನ್ನು ಕೇರಳದ ನಾಲ್ಕನೇ ಆಡಳಿತ ಸುಧಾರಣೆ ಆಯೋಗದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಕೇರಳದ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ಪಿ.ನಾಯರ್ ಮತ್ತು ನೀಲಾ ಗಂಗಾಧರನ್ ರವರು ಆಯೋಗದ ಸದಸ್ಯರಾಗಿದ್ದಾರೆ.
Question 9
9.ಕೇಂದ್ರ ಸರ್ಕಾರ ಇತ್ತೀಚೆಗೆ ಚಾಲನೆ ನೀಡಿದ “ರಾಷ್ಟ್ರವ್ಯಾಪ್ತಿ ಸ್ತನಪಾನ ಕಾರ್ಯಕ್ರಮ”ಕ್ಕೆ ಯಾರನ್ನು ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ?
A
ವಿದ್ಯಾ ಬಾಲನ್
B
ಸುಮನ್ ರಂಗನಾಥ್
C
ಮಾಧುರಿ ದೀಕ್ಷಿತ್
D
ಕರೀನಾ ಕಪೂರ್
Question 9 Explanation: 
ಮಾಧುರಿ ದೀಕ್ಷಿತ್: ಕೇಂದ್ರ ಸರ್ಕಾರ ರಾಷ್ಟ್ರವ್ಯಾಪ್ತಿ ಸ್ತನಪಾನ ಕಾರ್ಯಕ್ರಮ “ಮಾ” (MAA Mother Absolute Affection)ಗೆ ಚಾಲನೆ ನೀಡಿದೆ. ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಈ ಕಾರ್ಯಕ್ರಮದ ರಾಯಭಾರಿಯಾಗಿದ್ದಾರೆ. ದೇಶದಲ್ಲಿ ಸ್ತನಪಾನದ ಬಗ್ಗೆ ಸೂಕ್ತ ಅರಿವು ಮೂಡಿಸುವ ಗುರಿಯೊಂದಿಗೆ ಈ ಕಾರ್ಯಕ್ರಮವನ್ನು ಆರಂಭಿಸಲಾಗಿದೆ.
Question 10
10.ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ಯಾವ ದೇಶವನ್ನು “ದಡಾರ ಮುಕ್ತ (Measles Free)” ರಾಷ್ಟ್ರವೆಂದು ಘೋಷಿಸಿತು?
A
ಕೆನಡಾ
B
ನಾರ್ವೆ
C
ಬ್ರೆಜಿಲ್
D
ಪೊಲ್ಯಾಂಡ್
Question 10 Explanation: 
ಬ್ರೆಜಿಲ್: ವಿಶ್ವ ಆರೋಗ್ಯ ಸಂಸ್ಥೆ ಬ್ರೆಜಿಲ್ ದೇಶವನ್ನು ದಡಾರ (Measles) ಮುಕ್ತ ರಾಷ್ಟ್ರವೆಂದು ಅಧಿಕೃತವಾಗಿ ಘೋಷಿಸಿದೆ. ಕಳೆದ ವರ್ಷ ಅಂದರೆ 2015 ರಲ್ಲಿ ಬ್ರೆಜಿಲ್ ನಲ್ಲಿ ಯಾವುದೇ ದಡಾರ ಪ್ರಕರಣ ಕಂಡು ಬಂದಿರದ ಕಾರಣ ದಡಾರ ಮುಕ್ತವೆಂದು ಘೋಷಿಸಿದೆ.
There are 10 questions to complete.

One Thought to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 5, 2016”

Leave a Comment

This site uses Akismet to reduce spam. Learn how your comment data is processed.