ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.

ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -7

Question 1
1.ಕೇಂದ್ರ ಸರ್ಕಾರ ಇತ್ತೀಚೆಗೆ ಬಿಡುಗಡೆಗೊಳಿಸದ 100 ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಸ್ಥಾನ ಪಡೆದ ಕರ್ನಾಟಕದ ನಗರಗಳನ್ನು ಗುರುತಿಸಿ?
A
ಶಿವಮೊಗ್ಗ, ಮಂಗಳೂರು, ದಾವಣಗೆರೆ, ಬೆಳಗಾವಿ
B
ಬೆಂಗಳೂರು, ಮಂಗಳೂರು, ದಾವಣಗೆರೆ, ಬೆಳಗಾವಿ
C
ಶಿವಮೊಗ್ಗ, ಬೆಂಗಳೂರು, ದಾವಣಗೆರೆ, ಬೆಳಗಾವಿ
D
ಧಾರಾವಾಡ ಮಂಗಳೂರು, ದಾವಣಗೆರೆ, ಬೆಳಗಾವಿ
Question 1 Explanation: 
ಶಿವಮೊಗ್ಗ, ಮಂಗಳೂರು, ದಾವಣಗೆರೆ, ಬೆಳಗಾವಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆಯ 100 ನಗರಗಳ ಆಯ್ಕೆ ಪಟ್ಟಿಹೊರಬಿದ್ದಿದೆ. ರಾಜ್ಯದ ಶಿವಮೊಗ್ಗ, ಮಂಗಳೂರು, ಬೆಳಗಾವಿ, ದಾವಣಗೆರೆ ಸೇರಿ ನಾಲ್ಕು ನಗರಗಳು 48 ಸಾವಿರ ಕೋಟಿಗಳ ಬೃಹತ್ ಯೋಜನೆಯಲ್ಲಿ ಸ್ಥಾನ ಗಿಟ್ಟಿಸಿವೆ. ಆದರೆ ಕರ್ನಾಟಕದ ರಾಜಧಾನಿ ಬೆಂಗಳೂರು ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲವಾಗಿದೆ.
Question 2
2.ಕರ್ನಾಟಕದ ಕದ್ರ (Kadra) ಜಲವಿದ್ಯುತ್ ಉತ್ಪಾದನೆ ಯೋಜನೆಯನ್ನು ಯಾವ ನದಿಯ ಮೇಲೆ ನಿರ್ಮಿಸಲಾಗಿದೆ?
A
ಕಾಳಿನದಿ
B
ಹೇಮಾವತಿ
C
ಮಲಪ್ರಭಾ
D
ಭೀಮಾ
Question 2 Explanation: 
ಕಾಳಿನದಿ: ಕದ್ರ (Kadra)ಜಲವಿದ್ಯುತ್ ಉತ್ಪಾದನೆ ಯೋಜನೆ ಉತ್ತರಕನ್ನಡ ಜಿಲ್ಲೆಯಲ್ಲಿದ್ದು, ಕಾಳಿನದಿ ಮೇಲೆ ನಿರ್ಮಿಸಲಾಗಿದೆ. ಈ ಯೋಜನೆಯ ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯ 150 ಮೆಗಾ ವ್ಯಾಟ್.
Question 3
3.ಈ ಕೆಳಗಿನ ಯಾವ ಚರ್ಚ್ ಗೆ ಇತ್ತೀಚೆಗೆ ಬೆಸಿಲಿಕಾ ಸ್ಥಾನವನ್ನು ನೀಡಲಾಯಿತು?
A
ಸೆಂಟ್ ಫಿಲೋಮಿನ ಕ್ಯಾಥಡ್ರೆಲ್, ಮೈಸೂರು
B
ಸಂತ ಲಾರೆನ್ಸ್, ಅತ್ತೂರು, ಉಡುಪಿ
C
ಇನ್ ಪ್ಯಾಂಟ್ ಜೆಸಸ್ ಚರ್ಚ್, ಬೆಂಗಳೂರು
D
ಸೆಂಟ್ ಮೈಕಲ್ ಚರ್ಚ್, ಮಡಿಕೇರಿ
Question 3 Explanation: 
ಸಂತ ಲಾರೆನ್ಸ್, ಅತ್ತೂರು, ಉಡುಪಿ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅತ್ತೂರಿನ ಸಂತ ಲಾರೆನ್ಸರ ಚರ್ಚನ್ನು ಬೆಸಿಲಿಕಾ ಎಂದು ಘೋಷಿಸಲಾಗಿದೆ. ಆ ಮೂಲಕ ಕರ್ನಾಟಕದ 2ನೇ ಬೆಸಿಲಿಕಾ ಇದಾಗಿದೆ. ವ್ಯಾಟಿಕನ್ನಲ್ಲಿರುವ ಜಗದ್ಗುರು ಪೋಪ್ ಫ್ರಾನ್ಸಿಸ್ ರವರು ಸಂತ ಲಾರೆನ್ಸ್ ಚರ್ಚ್ ಗೆ ಬೆಸಿಲಿಕಾ ಸ್ಥಾನವನ್ನು ನೀಡಿದ್ದಾರೆ. ಸೆಂಟ್ ಮೆರಿಸ್, ಬೆಂಗಳೂರು ರಾಜ್ಯದ ಮೊದಲ ಬೆಸಿಲಿಕಾ.
Question 4
4.ದೇಶದ ಎರಡನೇ “ನ್ಯಾನೋ ಮತ್ತು ಮೃದು ಪದಾರ್ಥಗಳ ವಿಜ್ಞಾನ ಕೇಂದ್ರ” ರಾಜ್ಯದ ಯಾವ ಪ್ರದೇಶದಲ್ಲಿ ತಲೆ ಎತ್ತಲಿದೆ?
A
ಮೈಸೂರು
B
ಹೊಸದುರ್ಗ
C
ನೆಲಮಂಗಲ
D
ತುಮಕೂರು
Question 4 Explanation: 
ನೆಲಮಂಗಲ: ದೇಶದ ಎರಡನೇ “ನ್ಯಾನೋ ಮತ್ತು ಮೃದು ಪದಾರ್ಥಗಳ ವಿಜ್ಞಾನ ಕೇಂದ್ರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಶಿವನಪುರದ ಬಳಿ ಸ್ಥಾಪನೆಯಾಗಲಿದೆ. ಕೇಂದ್ರ ಸರ್ಕಾರ ನಾಲ್ಕು ನ್ಯಾನೋ ಕೇಂದ್ರಗಳ ಸ್ಥಾಪನೆಗೆ ಅನುಮತಿ ನೀಡಿದ್ದು, ಮೊಹಾಲಿಯಲ್ಲಿ ಈಗಾಗಲೇ ಒಂದು ಕಾರ್ಯನಿರ್ವಹಿಸುತ್ತಿದೆ.
Question 5
5.ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಈಗಿನ ಅಧ್ಯಕ್ಷರು ಯಾರು?
A
ಲಕ್ಷೀ ಹೆಬ್ಬಳ್ಕರ್
B
ಮಂಜುಳಾ ಮಾನಸ
C
ಜಯಶ್ರೀ ಚಂದ್ರ
D
ರಾಣಿ ಸತೀಶ್
Question 5 Explanation: 
ಮಂಜುಳಾ ಮಾನಸ: ಮಂಜುಳಾ ಮಾನಸ ರವರು ಈಗಿನ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾಗಿದ್ದಾರೆ. ಜೂನ್ 2014 ರಲ್ಲಿ ಇವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಇವರ ಅಧಿಕಾರ ಅವಧಿ ಮೂರು ವರ್ಷ.
Question 6
6.ನವಿಲುಗಳ ಸಂರಕ್ಷಣೆಗಾಗಿ ಮೀಸಲಿಟ್ಟಿರುವ ರಾಜ್ಯದ ಅಭಯಾರಣ್ಯ ಯಾವುದು?
A
ಬಂಕಾಪುರ ಅಭಯಾರಣ್ಯ
B
ರಂಗನತಿಟ್ಟು ಪಕ್ಷಿಧಾಮ
C
ಮಂಡಗದ್ದೆ ಪಕ್ಷಿಧಾಮ
D
ಬೊನಲ್ ಪಕ್ಷಿಧಾಮ
Question 6 Explanation: 
ಬಂಕಾಪುರ ಅಭಯಾರಣ್ಯ: ಹಾವೇರಿ ಜಿಲ್ಲೆಯ ಬಂಕಾಪುರ ಅಭಯಾರಣ್ಯ ನವಿಲುಗಳ ಸಂರಕ್ಷಣೆ ಮತ್ತು ಸಂತಾನೋತ್ಪಾತಿ ಏಳಿಗೆಗಾಗಿ ಮೀಸಲಿಟ್ಟಿರುವ ಅಭಯಾರಣ್ಯವಾಗಿದೆ. ಸುಮಾರು 139 ಎಕರೆ ವಿಸ್ತೀರ್ಣವನ್ನು ಹೊಂದಿರುವ ಈ ಪ್ರದೇಶವನ್ನು ಭಾರತ ಸರ್ಕಾರ ಜೂನ್ 9, 2006 ರಂದು ನವಿಲು ಅಭಯಾರಣ್ಯವೆಂದು ಘೋಷಿಸಿದೆ.
Question 7
7.ರಾಜ್ಯದಲ್ಲಿ ನವಜಾತ ಶಿಶು ಹಾಗೂ ಬಾಣಂತಿಯರ ಸಾವನ್ನು ತಪ್ಪಿಸುವ ಸಲುವಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಾವ ದೇಶದೊಂದಿಗೆ ಯೋಜನೆ ಜಾರಿಗೊಳಿಸಿದೆ?
A
ಸಿಂಗಾಪುರ
B
ಜಪಾನ್
C
ಅಮೆರಿಕಾ
D
ಸ್ವಿಟ್ಜರ್ಲ್ಯಾಂಡ್
Question 7 Explanation: 
ಸಿಂಗಾಪುರ: ರಾಜ್ಯದಲ್ಲಿನ ನವಜಾತ ಶಿಶು ಹಾಗೂ ಬಾಣಂತಿಯರ ಸಾವನ್ನು ತಪ್ಪಿಸುವ ನಿಟ್ಟಿನಲ್ಲಿ ಸಿಂಗಾಪುರ ಅಂತಾರಾಷ್ಟ್ರೀಯ ಫೌಂಡೇಷನ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಭಾಗಿತ್ವದ ವಿನೂತನ ಯೋಜನೆಗೆ ಚಾಲನೆ ನೀಡಲಾಯಿತು. ವಿಕಾಸಸೌಧ ಸಮ್ಮೇಳನ ಸಭಾಂಗಣದಲ್ಲಿ ಆರೋಗ್ಯ ಸಚಿವ ಕೆ.ಆರ್. ರಮೇಶ್ ಕುಮಾರ್ ಅನುಪಸ್ಥಿತಿ ಯಲ್ಲಿ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್, ಸಿಂಗಾಪುರ ಅಂತಾರಾಷ್ಟ್ರೀಯ ಫೌಂಡೇಷನ್ ಗವರ್ನರ್ ಲಿಯಾನ್ ವಿ. ಚ್ಯೊ ಉಪಸ್ಥಿತಿಯಲ್ಲಿ ಯೋಜನೆ ಯನ್ನು ಉದ್ಘಾಟಿಸಲಾಯಿತು.
Question 8
8.ಸಿಂದಗಿ ಸಾರಂಗಮಠದ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ ನೀಡುತ್ತಿರುವ ಮೊದಲ 'ಭಾಸ್ಕರ' ಪ್ರಶಸ್ತಿಗೆ ಯಾರನ್ನು ಆಯ್ಕೆಮಾಡಲಾಗಿದೆ?
A
ಕಿರಣ್ ಕುಮಾರ್
B
ಪ್ರೊ.ಸಿ.ಎನ್.ಆರ್ ರಾವ್
C
ಮಾಧವನ್ ನಾಯರ್
D
ಸತೀಶ್ ಕುಮಾರ್
Question 8 Explanation: 
ಪ್ರೊ.ಸಿ.ಎನ್.ಆರ್ ರಾವ್: ಗಣಿತತಜ್ಞ, ಖಗೋಳವಿಜ್ಞಾನಿ ಭಾಸ್ಕರಾಚಾರ್ಯರ (ಭಾಸ್ಕರ-2) ಸ್ಮರಣಾರ್ಥ, ಸಿಂದಗಿ ಸಾರಂಗಮಠದ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ ನೀಡುತ್ತಿರುವ ಮೊದಲ 'ಭಾಸ್ಕರ' ಪ್ರಶಸ್ತಿಗೆ ಪ್ರೊ.ಸಿ.ಎನ್.ಆರ್ ರಾವ್ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ರೂ 1ಲಕ್ಷ ನಗದು ಹಾಗೂ ಫಲಕವನ್ನು ಒಳಗೊಂಡಿದೆ. ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರತಿ ವರ್ಷ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನ ತಿಳಿಸಿದೆ.
Question 9
9.ಇತ್ತೀಚೆಗೆ ನಿಧನರಾದ ಕೆ.ಸಿ.ರೆಡ್ಡಿರವರು ಯಾವ ಕ್ಷೇತ್ರದಲ್ಲಿ ಪ್ರಸಿದ್ದಿ ಹೊಂದಿದ್ದರು?
A
ನೀರಾವರಿ
B
ಸಾಹಿತಿ
C
ಸಂಗೀತಾ
D
ಸಿನಿಮಾ
Question 9 Explanation: 
ನೀರಾವರಿ: ಕೆ.ಸಿ.ರೆಡ್ಡಿ ರವರು ಕರ್ನಾಟಕ ರಾಜ್ಯದ ಖ್ಯಾತ ನೀರಾವರಿ ತಜ್ಞ. 1950ರಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜನಿಯರ್ ಆಗಿ ಸೇವೆ ಆರಂಭಿಸಿದ ರೆಡ್ಡಿ, ಕರ್ನಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕರಾಗಿ, ಇಂಧನ , ಲೋಕೋಪಯೋಗಿ ಹಾಗೂ ನೀರಾವರಿ ಇಲಾಖೆಗಳ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದರು. ರೆಡ್ಡಿರವರ ಕಾರ್ಯದಕ್ಷತೆಯನ್ನು ಗಮನಿಸಿದ ಸರ್ಕಾರ ಇವರನ್ನು 1994 ರಿಂದ 2004ರವರೆಗೆ ನೀರಾವರಿ ಯೋಜನೆಗಳ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿತ್ತು. 2013 ರಿಂದ 2016ರವರೆಗೂ ಅವರು ಕೃಷ್ಣ ಜಲಭಾಗ್ಯ ನಿಗಮದ ತಾಂತ್ರಿಕ ಉಪಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ರೆಡ್ಡಿರವರಿಗೆ ಕನ್ನಡರಾಜ್ಯೋತ್ಸವ ಪ್ರಶಸ್ತಿ, ಪದ್ಮಶ್ರಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಸಂದಿವೆ.
Question 10
10.ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:

I) ದೇಶದಲ್ಲಿ ಫೆಲ್ಸೈಟ್ ಕಲ್ಲು (Felsite Rocks) ದೊರೆಯುವ ಏಕೈಕ ರಾಜ್ಯ ಕರ್ನಾಟಕ

II) ಕರ್ನಾಟಕದ ಶ್ರೀರಂಗಪಟ್ಟಣ ಮತ್ತು ಮೈಸೂರುನಲ್ಲಿ ಫೆಲ್ಸೈಟ್ ಕಲ್ಲು ಹೆಚ್ಚಾಗಿ ದೊರೆಯುತ್ತದೆ

ಮೇಲಿನ ಹೇಳಿಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ?
A
ಹೇಳಿಕೆ ಒಂದು ಮಾತ್ರ
B
ಹೇಳಿಕೆ ಎರಡು ಮಾತ್ರ
C
ಎರಡು ಹೇಳಿಕೆ ಸರಿಯಾಗಿವೆ
D
ಎರಡು ಹೇಳಿಕೆ ತಪ್ಪಾಗಿವೆ
Question 10 Explanation: 
ಎರಡು ಹೇಳಿಕೆ ಸರಿಯಾಗಿವೆ
There are 10 questions to complete.

9 Thoughts to “ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -7”

  1. Mahendra.s

    Use full.thanks

  2. mukambika sagar

    Nice… Thank u so much..

  3. channabasappa

    Very nice

Leave a Comment

This site uses Akismet to reduce spam. Learn how your comment data is processed.