ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 7, 2016
Question 1 |
1.ರಾಷ್ಟ್ರೀಯ ಕೈಮಗ್ಗ ದಿನವನ್ನು (National Handloom Day) ಯಾವ ದಿನದಂದು ಆಚರಿಸಲಾಗುತ್ತದೆ?
ಆಗಸ್ಟ್ 3 | |
ಆಗಸ್ಟ್ 5 | |
ಆಗಸ್ಟ್ 7 | |
ಆಗಸ್ಟ್ 9 |
Question 1 Explanation:
ಆಗಸ್ಟ್ 7:
ಎರಡನೇ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಗಸ್ಟ್ 7 ರಂದು ದೇಶದಾದ್ಯಂತ ಆಚರಿಸಲಾಯಿತು. ಪ್ರಧಾನಿ ಮೋದಿ ರವರು ವಾರಣಾಸಿಯಲ್ಲಿ ಆಯೋಜಿಸಲಾಗಿದ್ದ ಕೈಮಗ್ಗ ದಿನಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಭಾರತ ಸರ್ಕಾರ ಕಳೆದ ವರ್ಷ ಆಗಸ್ಟ್ 7ನ್ನು ರಾಷ್ಟ್ರೀಯ ಕೈಮಗ್ಗ ದಿನವೆಂದು ಘೋಷಿಸಿತ್ತು. ಈ ದಿನದಂದು ಸಂತ ಕಬೀರ ಪ್ರಶಸ್ತಿ ಮತ್ತು ರಾಷ್ಟ್ರೀಯ ಕೈಮಗ್ಗ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು. ದೇಶದ ಸಾಮಾಜಿಕ ಆರ್ಥಿಕ ಅಭಿವೃದ್ದಿಯಲ್ಲಿ ಕೈಮಗ್ಗಗಳ ಕೊಡುಗೆಯ ಬಗ್ಗೆ ಅರಿವು ಮೂಡಿಸುವುದು ಮತ್ತು ಕೈಮಗ್ಗ ಕ್ಷೇತ್ರವನ್ನು ಪ್ರೋತ್ಸಾಹಿಸುವ ಅಂಗವಾಗಿ ಕೈಮಗ್ಗ ದಿನವನ್ನು ಆಚರಿಸಲಾಗುತ್ತದೆ. ಭಾರತ ಸ್ವತಂತ್ರ ಹೋರಾಟದಲ್ಲಿ ಆಗಸ್ಟ್ 7 ರಂದು ಪ್ರಮುಖವಾದ ದಿನವಾಗಿದ್ದು, ಈ ದಿನದಂದು ಸ್ವದೇಶಿ ಚಳುವಳಿ ಆರಂಭಗೊಂಡಿತ್ತು. ಇದರ ಸ್ಮರಣಾರ್ಥ ಆಗಸ್ಟ್ 7ನ್ನು ಕೈಮಗ್ಗ ದಿನವಾಗಿ ಆಯ್ಕೆಮಾಡಲಾಗಿದೆ.
Question 2 |
2.ಅಂತಾರಾಷ್ಟ್ರೀಯ ಒಲಂಪಿಕ್ ಸಮಿತಿ (ಐಓಸಿ)ನ ಆಟಗಾರರ ಆಯೋಗ (Athletes Commission)ದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಂಜೆಲ ರುಗಿರೋ (Angela Ruggiero) ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
ಐಸ್ ಹಾಕಿ | |
ಸೈಕ್ಲಿಂಗ್ | |
ಶೂಟಿಂಗ್ | |
ಜಿಮ್ನಾಸ್ಟಿಕ್ |
Question 2 Explanation:
ಐಸ್ ಹಾಕಿ:
ಮಾಜಿ ಒಲಂಪಿಕ್ ಐಸ್ ಹಾಕಿ ಆಟಗಾರ್ತಿ ಹಾಗೂ ಒಲಂಪಿಕ್ ಚಿನ್ನದ ಪದಕ ವಿಜೇತೆ ಅಮೆರಿಕಾದ ಅಂಜೆಲ ರುಗಿರೋ ಅವರು ಅಂತಾರಾಷ್ಟ್ರೀಯ ಒಲಂಪಿಕ್ ಸಮಿತಿ (ಐಓಸಿ)ನ ಆಟಗಾರರ ಆಯೋಗದ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಪ್ರಸ್ತುತ ಆಯೋಗದ ಮುಖ್ಯಸ್ಥರಾಗಿರುವ ಕ್ಲಾಡಿಯಾ ಬೊಕೆಲ್ ರವರ ಅವಧಿ 2016ಕ್ಕೆ ಕೊನೆಗೊಳ್ಳಲಿದ್ದು, ಇವರ ಸ್ಥಾನವನ್ನು ರುಗಿರೋ ತುಂಬಲ್ಲಿದ್ದಾರೆ.
Question 3 |
3.2016 ವಿಶ್ವ ಮಾರ್ಷಿಯಲ್ ಆರ್ಟ್ಸ್ ಚಾಂಪಿಯನ್ ಷಿಪ್ ಪ್ರಶಸ್ತಿಯನ್ನು ಗೆದ್ದವರು ಯಾರು?
ವಿವೇಕ್ ತೇಜ | |
ಸುಂದರ್ ಮನೋಹರ್ | |
ಪೀಟರ್ ಜೇಮ್ಸ್ | |
ರಾಬಿನ್ ಸಿಂಗ್ |
Question 3 Explanation:
ವಿವೇಕ್ ತೇಜ:
ಭಾರತದ ಅಂತಾರಾಷ್ಟ್ರೀಯ ಮಾರ್ಷಿಯಲ್ ಆರ್ಟ್ಸ್ ಪರಿಣಿತ ವಿವೇಕ್ ತೇಜ ಅವರು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ವಿಶ್ವ ಮಾರ್ಷಿಯಲ್ ಆರ್ಟ್ಸ್ ಚಾಂಪಿಯನ್ ಷಿಪ್ ಪ್ರಶಸ್ತಿಯನ್ನು ಗೆದ್ದುಕೊಂಡರು. ಆ ಮೂಲಕ ವಿಶ್ವ ಕರಾಟೆ ಚಾಂಪಿಯನ್ ಅಗಿ ಹೊರಹೊಮ್ಮಿದರು. ವಿವೇಕ್ ತೇಜ ಆಸ್ಟ್ರೇಲಿಯಾದ ಮ್ಯಾಥ್ಯೂ ರೋಸ್ ಅವರನ್ನು ಮಣಿಸಿ ಪ್ರಶಸ್ತಿಗೆ ಭಾಜನರಾದರು.
Question 4 |
4.ಈ ಕೆಳಗಿನ ಯಾವ ಪರ್ವತ ಶ್ರೇಣಿ ಕೇವಲ ಒಂದೇ ಒಂದು ರಾಜ್ಯದಲ್ಲಿ ಹರಡಿಕೊಂಡಿದೆ?
ಅರಾವಳಿ | |
ಅಜಂತ | |
ಸತ್ಪುರ | |
ಸಹ್ಯಾದ್ರಿ |
Question 4 Explanation:
ಅಜಂತ:
ಅಜಂತ ಪರ್ವತ ಶ್ರೇಣಿ ಚಿಕ್ಕ ಪರ್ವತ ಶ್ರೇಣಿಯಾಗಿದ್ದು, ಕೇವಲ ಮಹರಾಷ್ಟ್ರದಲ್ಲಿ ಮಾತ್ರ ಹರಡಿದೆ. ಅರಾವಳಿ ಪರ್ವತ ಶ್ರೇಣಿ ರಾಜಸ್ಥಾನ, ಹರಿಯಾಣ ಮತ್ತು ದೆಹಲಿ ರಾಜ್ಯದಲ್ಲಿ ಹಂಚಿಕೆಯಾಗಿದೆ. ಸತ್ಪುರ ಪರ್ವತ ಶ್ರೇಣಿ ಗುಜರಾತ್ ಮತ್ತು ಮದ್ಯ ಪ್ರದೇಶ, ಸಹ್ಯಾದ್ರಿ ಪರ್ವತ ಶ್ರೇಣಿ ಗುಜರಾತ್ ನಿಂದ ಕೇರಳದವರೆಗೂ ಹಬ್ಬಿದೆ.
Question 5 |
5.ಇವುಗಳಲ್ಲಿ ಯಾವ ರಾಷ್ಟ್ರ ಅಸೋಸಿಯೇಷನ್ ಆಫ್ ಸೌತ್ ಈಸ್ಟ್ ಏಷಿಯನ್ ನೇಷನ್ಸ್ (ASEAN) ಸದಸ್ಯ ರಾಷ್ಟ್ರವಲ್ಲ?
ಭಾರತ | |
ವಿಯಟ್ನಾಂ | |
ಇಂಡೋನೇಷಿಯಾ | |
ಫಿಲಿಫೈನ್ಸ್ |
Question 5 Explanation:
ಭಾರತ:
ಅಸೋಸಿಯೇಷನ್ ಆಫ್ ಸೌತ್ ಈಸ್ಟ್ ಏಷಿಯನ್ ನೇಷನ್ಸ್ನ ಸದಸ್ಯ ರಾಷ್ಟ್ರವಲ್ಲ.
Question 6 |
6.2016 ಭಾರತ ಅಂತಾರಾಷ್ಟ್ರೀಯ ಪಾದರಕ್ಷೆ ಮೇಳ ಯಾವ ನಗರದಲ್ಲಿ ಆರಂಭಗೊಂಡಿತು?
ಮುಂಬೈ | |
ನವ ದೆಹಲಿ | |
ಪುಣೆ | |
ಮೈಸೂರು |
Question 6 Explanation:
ನವ ದೆಹಲಿ:
ಎರಡನೇ ಭಾರತ ಅಂತಾರಾಷ್ಟ್ರೀಯ ಪಾದರಕ್ಷೆ ಮೇಳ ನವದೆಹಲಿಯಲ್ಲಿ ಆರಂಭಗೊಂಡಿತು. ಕೇಂದ್ರ ಆರ್ಥಿಕ ಸಚಿವ ಅರುಣ್ ಜೇಟ್ಲಿ ರವರು ಮೇಳಕ್ಕೆ ಚಾಲನೆ ನೀಡಿದರು.
Question 7 |
7.ದೇಶದಲ್ಲಿ ಕುಟುಂಬ ಹಣಕಾಸುವಿನ (Household Finance) ವಿವಿಧ ಆಯಾಮಗಳನ್ನು ಪರಿಶೀಲಿಸುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಯಾವ ಸಮಿತಿಯನ್ನು ಇತ್ತೀಚೆಗೆ ರಚಿಸಿದೆ?
ತರುಣ್ ರಾಮದೊರೈ ಸಮಿತಿ | |
ಕಿಶೋರ್ ಚಂದ್ರ ಸಮಿತಿ | |
ಭಾರ್ಗವ ಸಮಿತಿ | |
ಅವಿನಾಶ್ ಚಂದರ್ ಸಮಿತಿ |
Question 7 Explanation:
ತರುಣ್ ರಾಮದೊರೈ ಸಮಿತಿ:
ಭಾರತದಲ್ಲಿ ಕುಟುಂಬ ಹಣಕಾಸುವಿನ ವಿವಿಧ ಆಯಾಮಗಳನ್ನು ಪರಿಶೀಲಿಸುವ ಸಲುವಾಗಿ ಮತ್ತು ಕುಟುಂಬ ಹಣಕಾಸು ಕ್ಷೇತ್ರದಲ್ಲಿ ಭಾರತ ತನ್ನ ಸಮಾನ ರಾಷ್ಟ್ರಗಳೊಂದಿಗೆ ಮತ್ತು ಮುಂದುವರೆದ ದೇಶಗಳೊಂದಿಗೆ ಯಾವ ಸ್ಥಾನದಲ್ಲಿದೆ ಎಂದು ಅಧ್ಯಯನ ನಡೆಸುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಡಾ.ತರುಣ್ ರಾಮದೊರೈ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದೆ. ತರುಣ್ ರಾಮದೊರೈ ಅವರು ಆಕ್ಸಪರ್ಡ್ ವಿವಿಯಲ್ಲಿ ಫೈನಾನ್ಸಿಯಲ್ ಎಕಾನಮಿಕ್ಸ್ ನ ಪ್ರೋಫೆಸರ್ ಆಗಿದ್ದಾರೆ.
Question 8 |
8. ಈ ಕೆಳಗಿನ ರಾಜಕೀಯ ಪಕ್ಷಗಳಲ್ಲಿ ರಾಷ್ಟ್ರೀಯ ಪಕ್ಷ ಸ್ಥಾನಮಾನ ಹೊಂದಿರುವ ಪಕ್ಷಗಳನ್ನು ಗುರುತಿಸಿ:
I) ನ್ಯಾಷನಲ್ ಕಾಂಗ್ರೆಸ್ ಪಕ್ಷ
II) ಬಹುಜನ ಸಮಾಜ ಪಕ್ಷ
III) ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ
IV) ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್
ಕೆಳಗೆ ಕೊಟ್ಟಿರುವ ಕೋಡ್ ಮೂಲಕ ಸರಿಯಾದ ಉತ್ತರವನ್ನು ಆರಿಸಿ?I & II | |
II & IV | |
I, II & III | |
ಮೇಲಿನ ಎಲ್ಲವೂ |
Question 8 Explanation:
I, II & III:
ಪ್ರಸ್ತುತ ದೇಶದಲ್ಲಿ ಆರು ರಾಜಕೀಯ ಪಕ್ಷಗಳು ರಾಷ್ಟ್ರೀಯ ಪಕ್ಷಗಳ ಸ್ಥಾನಮಾನ ಹೊಂದಿವೆ. ಅವುಗಳೆಂದರೆ ನ್ಯಾಷನಲ್ ಕಾಂಗ್ರೆಸ್ ಪಕ್ಷ, ಬಹುಜನ ಸಮಾಜ ಪಕ್ಷ, ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ, ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್), ಭಾರತೀಯ ಜನತಾ ಪಕ್ಷ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್.
Question 9 |
9.ಬಾಂಬೆ ಷೇರು ವಿನಿಮಯ ಸಂಸ್ಥೆಯು ಯಾವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯೊಂದಿಗೆ ಸೈಬರ್ ಭದ್ರತೆ ಒಪ್ಪಂದಕ್ಕೆ ಸಹಿ ಹಾಕಿದೆ?
ಐಐಟಿ ಖರಗ್ ಪುರ | |
ಐಐಟಿ ಇಂಧೋರ್ | |
ಐಐಟಿ ಮದ್ರಾಸ್ | |
ಐಐಟಿ ರಾಂಚಿ |
Question 9 Explanation:
ಐಐಟಿ ಖರಗ್ ಪುರ:
ಬಾಂಬೆ ಷೇರು ವಿನಿಮಯ ಸಂಸ್ಥೆಯು ಖರಗ್ ಪುರ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯೊಂದಿಗೆ ಸೈಬರ್ ಭದ್ರತೆ ಸಹಿ ಹಾಕಿದೆ.
Question 10 |
10.ಸಿಮ್ಲಿಪಾಲ್ ಹುಲಿ ಸಂರಕ್ಷಣಾ ಧಾಮ ಯಾವ ರಾಜ್ಯದಲ್ಲಿದೆ?
ಜಾರ್ಖಂಡ್ | |
ಪಶ್ಚಿಮ ಬಂಗಾಳ | |
ಓಡಿಶಾ | |
ಮದ್ಯ ಪ್ರದೇಶ |
Question 10 Explanation:
ಓಡಿಶಾ
There are 10 questions to complete.
Exam book for me
answer where is that sir