ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 6, 2016
Question 1 |
1.2016 ರಿಯೋ ಒಲಂಪಿಕ್ಸ್ನ ಮೊದಲ ಚಿನ್ನದ ಪದಕ ಗೆದ್ದ ವಿರ್ಜಿನಿಯಾ ಜಿನ್ನಿ ಥ್ರಾಶರ್ ಯಾವ ದೇಶದವರು?
ಜಪಾನ್ | |
ಅಮೆರಿಕಾ | |
ಚೀನಾ | |
ದಕ್ಷಿಣ ಕೊರಿಯಾ |
Question 1 Explanation:
ಅಮೆರಿಕಾ:
ವಿರ್ಜಿನಿಯಾ ಜಿನ್ನಿ ಥ್ರಾಶರ್ ಅಮೆರಿಕದ ಶೂಟರ್ ಕ್ರೀಡಾಪಟು. 19 ವರ್ಷದ ಜಿನ್ನಿ ಥ್ರಾಷರ್ ಮಹಿಳೆಯರ 10 ಮೀ. ಏರ್ ರೈಫಲ್ನಲ್ಲಿ ವಿಜೇತರಾಗುವ ಮೂಲಕ ರಿಯೋ ಒಲಿಂಪಿಕ್ಸ್ನ ಮೊದಲ ಚಿನ್ನದ ಪದಕ ಗೆದ್ದ ಕ್ರೀಡಾಪಟು ಎನಿಸಿಕೊಂಡಿದ್ದಾರೆ. ಜಿನ್ನಿ ಥ್ರಾಷರ್ ಚೀನಾದ ಹಾಲಿ ಚಾಂಪಿಯನ್ ಯಿ ಸಿಲಿಂಗ್ ಹಾಗೂ 2004ರ ಅಥೆನ್ಸ್ ಒಲಿಂಪಿಕ್ಸ್ ಚಾಂಪಿಯನ್ ಡು ಲಿಯನ್ನು ಸೋಲಿಸಿ ಪದಕವನ್ನು ತನ್ನದಾಗಿಸಿಕೊಂಡರು. ಈ ವಿಭಾಗದ ಸ್ಪರ್ಧೆಯಲ್ಲಿದ್ದ ಭಾರತದ ಶೂಟರ್ಗಳಾದ ಅಪೂರ್ವಿ ಚಾಂಡೆಲಾ ಮತ್ತು ಅಯೋನಿಕಾ ಪೌಲ್ ಕ್ರಮವಾಗಿ 34 ಮತ್ತು 47ನೇ ಸ್ಥಾನದೊಂದಿಗೆ ತೀವ್ರ ನಿರಾಸೆ ಮೂಡಿಸಿದರು.
Question 2 |
2.ಭಾರತೀಯ ರೈಲ್ವೇ ಇತ್ತೀಚೆಗೆ ಅನಾವರಣಗೊಳಿಸಿದ ರೈಲು ಗೀತೆ “ಇಂಡಿಯನ್ ರೈಲ್ವೇಸ್, ವಿ ಲವ್ ಇಂಡಿಯನ್ ರೈಲ್ವೇಸ್”ನ ಸಂಗೀತಾ ಸಂಯೋಜಕರು ಯಾರು?
ಎ.ಆರ್.ರೆಹಮಾನ್ | |
ಶ್ರವಣ್ | |
ಎಸ್.ಎಸ್.ಥಮನ್ | |
ದೇವಾ |
Question 2 Explanation:
ಶ್ರವಣ್:
ಭಾರತೀಯ ರೈಲ್ವೇ “ಇಂಡಿಯನ್ ರೈಲ್ವೇಸ್, ವಿ ಲವ್ ಇಂಡಿಯನ್ ರೈಲ್ವೇಸ್” ಎಂಬ ರೈಲು ಗೀತೆಯನ್ನು ಅನಾವರಣಗೊಳಿಸಿದೆ. ಖ್ಯಾತ ಗಾಯಕರಾದ ಉದಿತ್ ನಾರಾಯಣ್ ಮತ್ತು ಕವಿತ ಕೃಷ್ಣಮೂರ್ತಿ ಈ ಗೀತೆಯನ್ನು ಹಾಡಿದ್ದು, ಖ್ಯಾತ ಸಂಗೀತಾ ನಿರ್ದೇಶಕ ಶ್ರವಣ್ ಸಂಗೀತಾ ಸಂಯೋಜನೆ ಮಾಡಿದ್ದಾರೆ. ಮೂರು ನಿಮಿಷಗಳ ಈ ಗೀತೆ ಇನ್ನುಮುಂದೆ ರೈಲ್ವೇ ಇಲಾಖೆ ಎಲ್ಲಾ ಕಾರ್ಯಕ್ರಮಗಳಲ್ಲಿ ಮೊಳಗಲಿದೆ. ಈ ಗೀತೆಯು ಭಾರತೀಯ ರೈಲ್ವೆಯ ಸಾರವನ್ನು ಸಾರಲಿದೆ. ರೈಲ್ವೆ ಉದ್ಯೋಗಿಗಳಿಗೆ ಉತ್ತೇಜನ ನೀಡಲು ಮತ್ತು ರೈಲ್ವೆ ಅಭಿವೃದ್ಧಿಗಾಗಿ ಗೀತೆ ರಚಿಸಲಾಗಿದೆ.
Question 3 |
3.ಕೆರಿಬಿಯನ್ ಪ್ರಿಮೀಯರ್ ಲೀಗ್ನಲ್ಲಿ ಕೇವಲ 42 ಬಾಲುಗಳಿಂದ ಶತಕ ಬಾರಿಸಿ ದಾಖಲೆ ನಿರ್ಮಿಸಿದವರು ಯಾರು?
ಕ್ರಿಸ್ ಗೇಲ್ | |
ಆಂಡ್ರೆ ರಸೆಲ್ | |
ಆಶಿಮ್ ಹಮ್ಲ | |
ಜೆಪಿ ಡುಮಿನಿ |
Question 3 Explanation:
ಆಂಡ್ರೆ ರಸೆಲ್:
ವೆಸ್ಟ್ಇಂಡೀಸ್ನ ಶ್ರೇಷ್ಠ ಆಟಗಾರ ಆಂಡ್ರೆ ರಸೆಲ್ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ (ಸಿಪಿಎಲ್) 42 ಬಾಲುಗಳಲ್ಲಿ 100 ರನ್ ಗಳಿಸಿ ಹೊಸ ದಾಖಲೆ ಬರೆದಿದ್ದಾರೆ. ಆಲ್ರೌಂಡರ್ ಆಟಗಾರ ರಸೆಲ್ ಸಿಪಿಎಲ್ನ 20 ಓವರ್ಗಳ ಚುಟುಕು ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಜಮೈಕನ್ ತಲ್ಲವಾಹ್ಸ್ ತಂಡದ ಪರ ಆಡುವ ರಸೆಲ್ ಶತಕದಾಟದಲ್ಲಿ 11 ಸಿಕ್ಸರ್, 3 ಬೌಂಡರಿಗಳೊಂದಿಗೆ ಶತಕ ಸಿಡಿಸಿದರು.
Question 4 |
4.ಯಾವ ದೇಶ ಇತ್ತೀಚೆಗೆ ವಿಶ್ವದ ಮೊಟ್ಟ ಮೊದಲ “ಟ್ರಾನ್ಸಿಟ್ ಎಲಿವೇಟೆಡ್ ಬಸ್” ನ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿತು?
ಅಮೆರಿಕಾ | |
ಜಪಾನ್ | |
ಚೀನಾ | |
ಸ್ವಿಟ್ಜರ್ಲ್ಯಾಂಡ್ |
Question 4 Explanation:
ಚೀನಾ:
ಚೀನಾ ವಿಶ್ವದ ಮೊದಲ ಟ್ರಾನ್ಸಿಟ್ ಎಲಿವೇಟೆಡ್ ಬಸ್ (TEB) ಅಭಿವೃದ್ದಿಪಡಿಸಿದ್ದು, ಇದರ ಪ್ರಾಯೋಗಿಕ ಪರೀಕ್ಷೆಯನ್ನು ಇತ್ತೀಚೆಗೆ ನಡೆಸಿದೆ. ಈಶಾನ್ಯ ಚೀನಾದ ಹೆಬೇಯಿ ಪ್ರಾಂತ್ಯದ ಕಿನ್ಹುವಾಂಗ್ಡೋ ನಗರದಲ್ಲಿ ಪ್ರಾಯೋಗಿಕವಾಗಿ ಈ ವಿನೂತನ ಬಸ್ ರಸ್ತೆಗಿಳಿದಿದೆ. 300 ಮೀಟರ್ ಉದ್ದದ ನಿಯಂತ್ರಿತ ಹಳಿಯ ಈ ಬಸ್ ಗಂಟೆಗೆ 60 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಸಾಮಾನ್ಯ ರಸ್ತೆಯ ಎರಡೂ ಅಂಚುಗಳಲ್ಲಿ ಟ್ರಾಮ್ ಮಾದರಿ ಹಳಿಗಳಿದ್ದು, ಅವುಗಳ ಮೇಲೆ ಟ್ರಾನ್ಸಿಟ್ ಇಲವೇಟೆಡ್ ಬಸ್ಗಳು ಸಂಚರಿಸುತ್ತವೆ. ಬಸ್ 72 ಅಡಿ ಉದ್ದವಿದ್ದು, 25 ಅಡಿ ಅಗಲವಿದೆ. ರಸ್ತೆಯಿಂದ 2 ಮೀಟರ್ ಎತ್ತರದಲ್ಲಿದೆ. ಅರ್ಥಾತ್ ಬೇರೆ ವಾಹನಗಳು ಬಸ್ ಅಡಿಯಲ್ಲಿ ಸಲೀಸಾಗಿ ಸಂಚರಿಸುತ್ತವೆ. ಒಂದು ಬಾರಿಗೆ ಒಮ್ಮೆ 300 ಪ್ರಯಾಣಿಕರು ಇದರಲ್ಲಿ ಪ್ರಯಾಣಿಸಬಹುದಾಗಿದೆ. 1 ಟಿಇಬಿ 40 ಸಾಮಾನ್ಯ ಬಸ್ಗಳಿಗೆ ಸಮವಾಗಿದ್ದು ಸಂಚಾರ ದಟ್ಟಣೆ ಕಡಿತದಲ್ಲಿ ಗಮನಾರ್ಹ ಕೊಡುಗೆಯಾಗಿದೆ.
Question 5 |
5.ಈ ಕೆಳಗಿನ ಯಾವ ಬ್ಯಾಂಕ್ ರಕ್ಷಣಾ ಇಲಾಖೆ ಸಿಬ್ಬಂದಿಗಳಿಗೆ “ಶೌರ್ಯ ಹೋಮ್ ಲೋನ್” ಎಂಬ ಗೃಹಸಾಲ ಯೋಜನೆ ಜಾರಿಗೆ ತಂದಿದೆ?
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ | |
ಐಸಿಐಸಿಐ ಬ್ಯಾಂಕ್ | |
ಕೆನರಾ ಬ್ಯಾಂಕ್ | |
ಸಿಂಡಿಕೇಟ್ ಬ್ಯಾಂಕ್ |
Question 5 Explanation:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ:
ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ SBI ಪ್ರಿವಿಲೇಜ್ ಹೋಮ್ ಲೋನ್ ಮತ್ತು SBI ಶೌರ್ಯ ಹೋಮ್ ಲೋನ್ ಎಂಬ ಎರಡು ಗೃಹಸಾಲ ಯೋಜನೆ ಬಿಡುಗಡೆಗೊಳಿಸಿದೆ. SBI ಪ್ರಿವಿಲೇಜ್ ಹೋಮ್ ಲೋನ್ ಸರ್ಕಾರಿ ನೌಕರರಿಗೆ ಅನ್ವಯವಾದರೆ, ಶೌರ್ಯ ಹೋಮ್ ಲೋನ್ ರಕ್ಷಣಾ ಸಿಬ್ಬಂದಿಗಳಿಗೆ ಅನ್ವಯಿಸಲಿದೆ. ಈ ಹೊಸ ಯೋಜನೆಯಡಿ ಸಾಲ ಮರು ಪಾವತಿ ಅವಧಿ 75 ವರ್ಷ ತನಕ ಇರಲಿದೆ.
Question 6 |
6.ಯೂಸೆಫ್ ಚಾಹೆದ್ (Youssef Chahed) ರವರು ಯಾವ ದೇಶದ ಪ್ರಧಾನಿಯಾಗಿ ಇತ್ತೀಚೆಗೆ ನೇಮಕಗೊಂಡರು?
ಚೆಡ್ಡಾ | |
ಟ್ಯುನೀಷಿಯಾ | |
ನೈಜೀರಿಯಾ | |
ಜಿಂಬಾಂಬ್ವೆ |
Question 6 Explanation:
ಟ್ಯುನೀಷಿಯಾ:
ಯೂಸೆಫ್ ಚಾಹೆದ್ ರವರನ್ನು ಟ್ಯುನೀಷಿಯಾದ ನೂತನ ಪ್ರಧಾನಿಯಾಗಿ ಟ್ಯುನೀಷಿಯಾದ ಅಧ್ಯಕ್ಷರಾದ ಬೆಜಿ ಕೈದ್ ಎಸ್ಸೆಬಿ ನೇಮಕಮಾಡಿದ್ದಾರೆ. ಟ್ಯುನೀಷಿಯಾದ ಪ್ರಧಾನಿಯಾಗಿದ್ದ ಹಬೀಬ್ ಎಸ್ಸಿದ್ ರವರು ಅವಿಶ್ವಾಸ ಗೊತ್ತುವಳಿ ಹಿನ್ನಲೆಯಲ್ಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರಿಂದ, ಇವರ ಉತ್ತರಾಧಿಕಾರಿಯಾಗಿ ಚಾಹೆದ್ ನೇಮಕಗೊಂಡಿದ್ದಾರೆ. ಚಾಹೆದ್ ರವರು ಸಂಸತ್ತಿನ ಬೆಂಬಲ ಪಡೆದುಕೊಂಡರೆ ಟ್ಯುನೀಷಿಯಾದ ಕಿರಿಯ ಪ್ರಧಾನಿ ಎನಿಸಲಿದ್ದಾರೆ.
Question 7 |
7.ರಿಯೋ ಒಲಂಪಿಕ್ಸ್ನ ಉದ್ಘಾಟನ ಪೆರೆಡ್ನಲ್ಲಿ ಭಾರತದ ಧ್ವಜ ಸಾರಥ್ಯ ವಹಿಸಿದ್ದವರು ಯಾರು?
ಅಭಿನವ್ ಬಿಂದ್ರಾ | |
ನರಸಿಂಗ್ ಯಾದವ್ | |
ಲಿಯಾಂಡರ್ ಪೇಸ್ | |
ದೀಪಾ ಕಮರ್ಕರ್ |
Question 7 Explanation:
ಅಭಿನವ್ ಬಿಂದ್ರಾ:
ಭಾರತದ ಶೂಟರ್ ಅಭಿನವ್ ಬಿಂದ್ರಾ ರವರು 2016 ರಿಯೋ ಒಲಂಪಿಕ್ಸ್ನ ಉದ್ಘಾಟನ ಪೆರೆಡ್ನಲ್ಲಿ ಭಾರತದ ಧ್ವಜ ಸಾರಥ್ಯ ವಹಿಸಿದ್ದರು. 2008 ಬೀಜಿಂಗ್ ಒಲಂಪಿಕ್ಸ್ನಲ್ಲಿ ಬಿಂದ್ರಾ ಚಿನ್ನದ ಪದಕ ಗೆದ್ದಿದ್ದರು. ಬಿಂದ್ರಾರವರಿಗೆ ಇದು 5ನೇ ಒಲಂಪಿಕ್ಸ್ ಆಗಿದೆ. 2016 ರಿಯೋ ಒಲಂಪಿಕ್ಸ್ ಬಿಂದ್ರಾ ಭಾರತದ ರಾಯಭಾರಿ ಸಹ ಆಗಿದ್ದಾರೆ.
Question 8 |
8.ದೇಶದಲ್ಲೇ ಮೊದಲ ಬಾರಿಗೆ “ಪಡಿತರ ಕೂಪನ್” ವ್ಯವಸ್ಥೆಯನ್ನು ಜಾರಿಗೊಳಿಸಿದ ರಾಜ್ಯ ಯಾವುದು?
ರಾಜಸ್ಥಾನ | |
ಕರ್ನಾಟಕ | |
ಗುಜರಾತ್ | |
ಮದ್ಯ ಪ್ರದೇಶ |
Question 8 Explanation:
ಕರ್ನಾಟಕ:
ದೇಶದಲ್ಲೇ ಮೊದಲ ಬಾರಿಗೆ ಪಡಿತರ ಕೂಪನ್ ವ್ಯವಸ್ಥೆಯನ್ನು ಕರ್ನಾಟಕದಲ್ಲಿ ಜಾರಿಗೆ ತರಲಾಗುತ್ತಿದೆ. ಬೆಂಗಳೂರು ನಗರ ಪಡಿತರ ಪ್ರದೇಶದಲ್ಲಿರುವ ಎಲ್ಲ ಮತ್ತು ಪ್ರತೀ ಜಿಲ್ಲಾ ಕೇಂದ್ರಗಳಲ್ಲಿ ಆಯ್ದ 10 ನ್ಯಾಯಬೆಲೆ ಅಂಗಡಿಗಳಲ್ಲಿ ಆಗಸ್ಟ್ ತಿಂಗಳಿನಿಂದ ಕೂಪನ್ ವ್ಯವಸ್ಥೆ ಕಡ್ಡಾಯಗೊಳಿಸಲಾಗಿದೆ. ಮುಂದೆ ಇಡೀ ರಾಜ್ಯಕ್ಕೆ ವಿಸ್ತರಿಸಲು ಉದ್ದೇಶಿಸಲಾಗಿದೆ. ಬೆಂಗಳೂರು ನಗರ ಪ್ರದೇಶದಲ್ಲಿ 54 'ಬೆಂಗಳೂರು ಒನ್' ಮತ್ತು ವಿಶೇಷವಾಗಿ ತೆರೆಯಲಾದ 153 ಸೇರಿ ಒಟ್ಟು 207 ಕೇಂದ್ರಗಳಲ್ಲಿ ಕೂಪನ್ ವಿತರಣೆ ನಡೆಯುತ್ತಿದೆ. 'ಪಡಿತರ ವಿತರಣೆ ಪದ್ಧತಿಯಲ್ಲಿ ಸೋರಿಕೆ, ವಂಚನೆ ತಡೆಯುವ ಜೊತೆಗೆ ಆಹಾರ ಭದ್ರತೆ ಒದಗಿಸುವ ಉದ್ದೇಶದಿಂದ ಇಲಾಖೆ ಇಂತಹ ವ್ಯವಸ್ಥೆ ತಂದಿದೆ.
Question 9 |
9.ಭಾರತದ ಮೊದಲ ಭೂಅಡಿಯ ಮ್ಯೂಸಿಯಂ (Underground Museum) ಯಾವ ನಗರದಲ್ಲಿ ಸ್ಥಾಪನೆಯಾಗಲಿದೆ?
ಬೆಂಗಳೂರು | |
ಕೊಲ್ಕತ್ತ | |
ಭೂಪಾಲ್ | |
ನವ ದೆಹಲಿ |
Question 9 Explanation:
ನವ ದೆಹಲಿ:
ದೇಶದ ಪ್ರಥಮ ಭೂಅಡಿಯ ಮ್ಯೂಸಿಯಂ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ತಲೆ ಎತ್ತಲಿದೆ. ಅಕ್ಟೋಬರ್ 2, 2016 ರಂದು ಈ ಮ್ಯೂಸಿಯಂ ಉದ್ಘಾಟನೆಗೊಳ್ಳಲಿದೆ. ಎರಡು ವರ್ಷ ಅವಧಿಯಲ್ಲಿ ನಿರ್ಮಾಣಗೊಂಡಿರುವ ಈ ಮ್ಯೂಸಿಯಂ ರೂ 80 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಭಾರತದ ಮಾಜಿ ರಾಷ್ಟ್ರಪತಿಗಳಿಗೆ ಸಂಬಂಧಿಸಿದ ಪ್ರಮುಖ ವಸ್ತುಗಳು ಹಾಗೂ ಭಾರತ ಸ್ವಾತಂತ್ರ ಹೋರಾಟ ಮೇಲೆ ಬೆಳಕು ಚೆಲ್ಲುವ ವಸ್ತುಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ.
Question 10 |
10.ಯಾವ ರಾಜ್ಯದಲ್ಲಿ ವಿಶ್ವದ ಅತಿ ಎತ್ತರದ ಸರಕಟ್ಟು (girder) ರೈಲು ಸೇತುವೆ ನಿರ್ಮಾಣಗೊಳ್ಳಲಿದೆ?
ಜಮ್ಮು ಮತ್ತು ಕಾಶ್ಮೀರ | |
ಕರ್ನಾಟಕ | |
ಮಣಿಪುರ | |
ಅಸ್ಸಾಂ |
Question 10 Explanation:
ಮಣಿಪುರ:
ದೇಶದ ಅತಿ ದೊಡ್ಡ ರೈಲ್ವೇ ಸುರಂಗ ಹಾಗೂ ವಿಶ್ವದ ಅತಿ ಎತ್ತರದ ಸರಕಟ್ಟು ರೈಲು ಸೇತುವೆ ಮಣಿಪುರದ ಜಿರಿಬಮ್-ಟುಪುಲ್-ಇಂಪಾಲ್ ರೈಲು ಹಳಿ ಮೇಲೆ ನಿರ್ಮಿಸಲು ರೈಲ್ವೇ ಇಲಾಖೆ ನಿರ್ಧರಿಸಿದೆ. ಹೊಸದಾಗಿ ನಿರ್ಮಾಣಗೊಳ್ಳಲಿರುವ ಸುರಂಗವು 11.5 ಕಿ.ಮೀ ಉದ್ದವಿರಲಿದ್ದು, ಪಿರ್ ಪಂಜಲ್ ಸುರಂಗಕ್ಕಿಂತಲೂ ಉದ್ದವಿರಲಿದೆ. ಉದ್ದೇಶಿತ ರೈಲ್ವೇ ಸೇತುವೆ 141 ಮೀ ಎತ್ತರವಿರಲಿದ್ದು, ಪ್ರಸ್ತುತ ಯುರೋಪ್ನಲ್ಲಿರುವ 139 ಮೀ ಎತ್ತರದ ರೈಲು ಸೇತುವೆಯನ್ನು ಮೀರಿಸಲಿದೆ.
There are 10 questions to complete.