ಜಲ ಸಂಪನ್ಮೂಲ ಮಾಹಿತಿ ವ್ಯವಸ್ಥೆ ಆರಂಭಿಸಿದ ತೆಲಂಗಣ

ರಾಜ್ಯದ ಸಮಗ್ರ ಜಲ ಸಂಪನ್ಮೂಲದ ಮಾಹಿತಿಯನ್ನು ಕಲೆ ಹಾಕುವ ಸಲುವಾಗಿ ತೆಲಂಗಣ ಸರ್ಕಾರ ಮಹತ್ವದ ಜಲ ಸಂಪನ್ಮೂಲ ಮಾಹಿತಿ ವ್ಯವಸ್ಥೆಯನ್ನು (Water Resource Information System) ಆರಂಭಿಸಿದೆ. ಈ ಸಂಬಂಧ ತೆಲಂಗಣ ನೀರಾವರಿ ಇಲಾಖೆ ಮತ್ತು ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಒಡಂಬಡಿಕೆಗೆ ಸಹಿಹಾಕಿವೆ. ಒಡಂಬಡಿಕೆ ಅನ್ವಯ ಇಸ್ರೋದ ರಾಷ್ಟ್ರೀಯ ದೂರಸಂವೇದಿ ಕೇಂದ್ರವೂ ಈ ವ್ಯವಸ್ಥೆಯನ್ನು ಸ್ಥಾಪಿಸಲಿದ್ದು, ಉಪಗ್ರಹದ ಮೂಲಕ ಮಾಹಿತಿಗ ಹಂಚಲಿದೆ.

  • ಈ ವ್ಯವಸ್ಥೆಯ ಮೂಲಕ ಕೆರೆ ಮತ್ತು ಜಲಾಶಯಗಳಲ್ಲಿ ಶೇಖರಣೆಯಾಗಿರುವ ನೀರಿನ ಮಟ್ಟವನ್ನು ಮೌಲ್ಯಮಾಪನ ಮಾಡುವ ಮೂಲಕ ಜಲ ಸಂಪನ್ಮೂಲದ ನಿಖರ ಮಾಹಿತಿಯನ್ನು ಒದಗಿಸಲಿದೆ.
  • ವ್ಯವಸ್ಥೆಯಡಿ ಆಕಾಶದಿಂದ ರಾಜ್ಯದ ಜಲ ಮೂಲಗಳ ಮೇಲೆ ನಿಗಾ ಇಡಲಾಗುತ್ತದೆ. ಜೊತೆಗೆ, ಇಸ್ರೋ ಎಲ್ಲಾ ಜಲಾಶಯಗಳಲ್ಲಿರುವ ನೀರಿನ ಮಾಹಿತಿಯನ್ನು ಪ್ರತಿ ಹದಿನೈದು ದಿನಕ್ಕೊಮ್ಮೆ ಉಪಗ್ರಹದ ಮೂಲಕ ಚಿತ್ರಿಸಿ ಒದಗಿಸಲಿದೆ.
  • ಈ ವ್ಯವಸ್ಥೆಯೂ ರಾಜ್ಯದಲ್ಲಿ ಹೊಸ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಹಾಯವಾಗಲಿದೆ. ಅಲ್ಲದೇ ಇತರೆ ರಾಜ್ಯಗಳು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಅನುಕೂಲವಾಗಲಿದೆ.

ಪ್ರಖ್ಯಾತ ಯೋಗ ಗುರು ಟಿ.ಕೆ.ವಿ.ದೇಸಿಕಚಾರ್ ನಿಧನ

ಪ್ರಸಿದ್ದ ಯೋಗ ಗುರು ಟಿ.ಕೆ.ವಿ ದೇಸಿಕಚಾರ್ ಅವರು ಅನಾರೋಗ್ಯದ ಕಾರಣ ನಿಧನರಾದರು. ಮೂಲತಃ ಮೈಸೂರಿನವರಾದ ಇವರು 1960ರಲ್ಲಿ ಚೆನ್ನೈಗೆ ಸ್ಥಳಾಂತರಗೊಂಡಿದ್ದರು. ವೃತ್ತಿಯಲ್ಲಿ ಇಂಜನಿಯರ್ ಆಗಿದ್ದ ದೇಸಿಕಚಾರ್ ತಮ್ಮ ತಂದೆಯವರಿಂದ ಪ್ರೇರಣೆಗೊಂಡು ಯೋಗ ಅಭ್ಯಾಸದ ಕಡೆಗೆ ಆಕರ್ಷಣೆಗೊಂಡಿದ್ದರು.

  • ದೇಸಿಕಚಾರ್ ಅವರು ಆಧುನಿಕ ಯೋಗದ ಪಿತಾಮಹ ಎಂದೇ ಖ್ಯಾತರಾಗಿದ್ದ ಟಿ.ಕೃಷ್ಣಮಚಾರ್ಯರ ಮಗ.
  • ದೇಶದ ಪ್ರಸಿದ್ದ ಯೋಗ ಮಂದಿರಗಳಲ್ಲಿ ಒಂದಾದ ಕೃಷ್ಣಮಚಾರ್ಯ ಯೋಗ ಮಂದಿರವನ್ನು ತನ್ನ ತಂದೆಯವರ ಸ್ಮರಣಾರ್ಥ ಇವರು ಸ್ಥಾಪಿಸಿದ್ದರು. ಇಂದು ಈ ಯೋಗ ಮಂದಿರದಲ್ಲಿ 1000 ಕ್ಕೂ ಹೆಚ್ಚು ಜನ ಯೋಗ ಅಭ್ಯಾಸ ಮಾಡುತ್ತಿದ್ದಾರೆ.
  • “ವಿನಿಯೋಗ” ದೇಸಿಕಚಾರ್ ರವರು ಕರಗತ ಮಾಡಿಕೊಂಡಿದ್ದ ಯೋಗ ಶೈಲಿಯ ಹೆಸರು.
  • “ದಿ ಹಾರ್ಟ್ ಆಫ್ ಯೋಗ” ದೇಸಿಕಚಾರ್ ರವರು ಯೋಗ ಕುರಿತು ಬರೆದಿರುವ ಪುಸ್ತಕ.

ತೆಲಂಗಣದಲ್ಲಿ “ಮಿಷನ್ ಭಗೀರಥ”ಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಪ್ರತಿಯೊಬ್ಬರಿಗೂ ಶುದ್ದ ಕುಡಿಯುವ ನೀರನ್ನು ಪೂರೈಸುವ ಉದ್ದೇಶ ಹೊಂದಿರುವ ತೆಲಂಗಣ ರಾಜ್ಯದ ಮಹತ್ವಕಾಂಕ್ಷಿ ಯೋಜನೆ “ಮಿಷನ್ ಭಗೀರಥ”ಗೆ ಪ್ರಧಾನಿ ಮೋದಿ ಅವರು ಚಾಲನೆ ನೀಡಿದರು. ತೆಲಂಗಣ ಮುಖ್ಯಮಂತ್ರಿ ಚಂದ್ರಶೇಖರ್ ಅವರ ಕನಸಿನ ಕೂಸು ಎಂದೇ ಬಿಂಬಿತವಾಗಿರುವ ಈ ಯೋಜನೆಗೆ ತೆಲಂಗಣದ ಮೇಡಕ್ ಜಿಲ್ಲೆಯ ಗಜ್ವೆಲ್ ಬಳಿ ಚಾಲನೆ ನೀಡಲಾಯಿತು.

  • ಮಿಷನ್ ಭಗೀರಥ ಯೋಜನೆಯು ಜಲ ಸಂಪರ್ಕ ಕಲ್ಪಿಸುವ ಯೋಜನೆಯಾಗಿದ್ದು, ರಾಜ್ಯದ ಪ್ರತಿ ಕುಟುಂಬಕ್ಕೂ ಶುದ್ದ ಕುಡಿಯುವ ನೀರನ್ನು ಪೂರೈಸುವ ಗುರಿಯೊಂದಿಗೆ ಅನುಷ್ಟಾನಗೊಳಿಸಲಾಗುತ್ತಿದೆ.
  • ಯೋಜನೆಯಡಿ ಪ್ರತಿ ವ್ಯಕ್ತಿಗೆ 100 ಲೀಟರ್ ಶುದ್ದ ಕುಡಿಯುವ ನೀರನ್ನು ಹಾಗೂ ನಗರ ಪ್ರದೇಶದಲ್ಲಿ ಪ್ರತಿ ವ್ಯಕ್ತಿಗೆ 150 ಲೀಟರ್ ಶುದ್ದ ಕುಡಿಯುವ ನೀರನ್ನು ಒದಗಿಸಲಾಗುವುದು.
  • ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿರುವ ಸುಮಾರು 25000 ವಾಸಸ್ಥಳಗಳಿಗೆ ಮತ್ತು 67 ನಗರ ಭಾಗದ ವಾಸಸ್ಥಳಗಳಿಗೆ ಶುದ್ದ ಕುಡಿಯುವ ನೀರನ್ನು ಪೂರೈಸಲಾಗುವುದು.
  • ಇದರ ಜೊತೆಗೆ ಕುಡಿಯುವ ನೀರಿನ ಸಮಸ್ಯೆಗಳಿಗೆ ಸುಸ್ಥಿರ ಮತ್ತು ಶಾಶ್ವತ ಪರಿಹಾರ ಒದಗಿಸುವ ಸಲುವಾಗಿ 45000ಕ್ಕೂ ಹೆಚ್ಚು ಸಂಪ್ರದಾಯಿಕ ನೀರಿನ ಮೂಲಗಳಾದ ಕೆರೆ, ಕುಂಟೆಗಳನ್ನು ಪುನರ್ಜ್ಜೀವನಗೊಳಿಸಲಾಗುವುದು.

ಬಹು ಭಾಷೆ ನಟಿ, ಡ್ಯಾನ್ಸರ್ ಜ್ಯೋತಿ ಲಕ್ಷಿ ಇನ್ನಿಲ್ಲ

ಬಹು ಭಾಷೆ ನಟಿ ಮತ್ತು ಕ್ಯಾಬರೆ ಡ್ಯಾನ್ಸರ್ ಜ್ಯೋತಿ ಲಕ್ಷಿರವರು ಸಾವನ್ನಪ್ಪಿದ್ದರು. ಜ್ಯೋತಿ ಲಕ್ಷಿ ಎಪ್ಪತ್ತರ ದಶಕದಲ್ಲಿ ತಮ್ಮ ಡ್ಯಾನ್ಸ್ ಮೂಲಕ ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿದ್ದರು.  ಅವರಿಗೆ 70 ವರ್ಷ ವಯಸ್ಸಾಗಿತ್ತು.

  • ಜ್ಯೋತಿ ಲಕ್ಷಿ ಅವರು ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಅಭಿನಯಿಸಿದ್ದಾರೆ.
  • ಬಾಲ ನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಲಕ್ಷ್ಮೀ 300ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಕ್ಯಾಬರೆ ಡ್ಯಾನ್ಸ್ ಮೂಲಕ ಸಿನಿಮಾ ಲೋಕದಲ್ಲಿ ಮಿಂಚು ಮೂಡಿಸಿದ್ದರು.
  • ಕನ್ನಡದಲ್ಲಿ ಕುಳ್ಳ ಏಜೆಂಟ್ 000 (1965), ಬೆಂಗಳೂರು ಮೇಲ್ (1966), ಪ್ರತಿಧ್ವನಿ (1969), ಚೆಲ್ಲಿದ ರಕ್ತ (1982), ವಿಜಯದಶಮಿ (2001) ಹಾಗೂ ರಕ್ತ ಕಣ್ಣೀರು (2004)ಚಿತ್ರಗಳಲ್ಲಿ ಜ್ಯೋತಿ ಲಕ್ಷ್ಮೀ ಅಭಿನಯಿಸಿದ್ದಾರೆ.
  • ಹಿಂದಿಯಲ್ಲಿ ರಾಣಿ ಔರ್ ಜಾನಿ, ಜವಾಬ್ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

2 Thoughts to “ಪ್ರಚಲಿತ ವಿದ್ಯಮಾನಗಳು-ಆಗಸ್ಟ್ 8, 2016”

  1. Mallikarjun marol

    ಒಳ್ಳೆಯ ಪ್ರಯತ್ನ
    ಅಭಿನಂದನೆಗಳು

  2. kamaresha d

    it is the use full thanks to all

Leave a Comment

This site uses Akismet to reduce spam. Learn how your comment data is processed.