ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 10, 2016

Question 1

1.ಇತ್ತೀಚೆಗೆ ಪ್ರಧಾನಿ ಮಂತ್ರಿ ಮೋದಿ ರವರು “ಆಜಾದಿ 70 ಸಾಲ್-ಯಾದ್ ಕರೋ ಕುರ್ಬಾನಿ” ಕಾರ್ಯಕ್ರಮಕ್ಕೆ ಯಾವ ರಾಜ್ಯದಲ್ಲಿ ಚಾಲನೆ ನೀಡಿದರು?

A
ಜಾರ್ಖಂಡ್
B
ಉತ್ತರ ಪ್ರದೇಶ
C
ಮಧ್ಯ ಪ್ರದೇಶ
D
ಮಹಾರಾಷ್ಟ್ರ
Question 1 Explanation: 
ಮಧ್ಯ ಪ್ರದೇಶ:

ಪ್ರಧಾನ ಮಂತ್ರಿ ನರೇದ್ರ ಮೋದಿ ಅವರು 70ನೇ ಸ್ವಾತಂತ್ರ್ಯೊತ್ಸವದ ಅಂಗವಾಗಿ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ‘ಆಜಾದಿ 70 ಸಾಲ್-ಯಾದ್ ಕರೋ ಕುರ್ಬಾನಿ’ ಕಾರ್ಯಕ್ರಮಕ್ಕೆ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ ಹುಟ್ಟೂರು ಮಧ್ಯಪ್ರದೇಶದ ಅಲಿರಾಜ್ಪುರ್ ನಲ್ಲಿ ಚಾಲನೆ ನೀಡಿದರು. ಯಾದ್ ಕರೋ ಕುರ್ಬಾನಿ 15 ದಿನಗಳ ಕಾರ್ಯಕ್ರಮವಾಗಿದ್ದು, 70ನೇ ಸ್ವಾತಂತ್ರ್ಯೊತ್ಸವ ಹಾಗೂ ಕ್ವಿಟ್ ಇಂಡಿಯಾ ಚಳವಳಿಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಕೇಂದ್ರದ ಸಚಿವರು, ಬಿಜೆಪಿಯ ಹಿರಿಯ ನಾಯಕರು ಮುಂದಿನ 15 ದಿನಗಳ ಕಾಲ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

Question 2

2.ಭಾರತೀಯ ಸ್ಟೇಟ್ ಬ್ಯಾಂಕ್ (SBI) ವ್ಯವಸ್ಥಾಪಕ ನಿರ್ದೇಶಕರಾಗಿ ಯಾರನ್ನು ನೇಮಕ ಮಾಡಲಾಗಿದೆ?

A
ಮುರಳಿ ಭಗತ್
B
ದಿನೇಶ್ ಕುಮಾರ್ ಖಾರ
C
ಹಿಮಾಂಶು ಜೋಷಿ
D
ರಾಜ್ ಕಮಲ್ ವರ್ಮಾ
Question 2 Explanation: 
ದಿನೇಶ್ ಕುಮಾರ್ ಖಾರ:

ಭಾರತೀಯ ಸ್ಟೇಟ್ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕರಾಗಿ ದಿನೇಶ್ ಕುಮಾರ್ ಖಾರ ಅವರು ನೇಮಕಗೊಂಡಿದ್ದಾರೆ. ಪ್ರಧಾನ ಮಂತ್ರಿ ಮೋದಿ ನೇತೃತ್ವದ ನೇಮಕಾತಿ ಸಮಿತಿ ಇವರ ನೇಮಕಾತಿಯನ್ನು ಅಂತಿಮಗೊಳಿಸಿದ್ದು, ಖಾರ ಮೂರು ವರ್ಷಗಳ ಕಾಲ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ. ಈ ಮುಂಚೆ ಇವರು ಭಾರತೀಯ ಸ್ಟೇಟ್ ಬ್ಯಾಂಕ್ನ ನಿಧಿ ನಿರ್ವಹಣೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.

Question 3

3.ಇತ್ತೀಚೆಗೆ ಉದ್ಘಾಟಿಸಲಾದ ಕೂಡಂಕುಳಂ ಅಣು ವಿದ್ಯುತ್ ಘಟಕವನ್ನು ಯಾವ ದೇಶದ ಸಹಯೋಗದೊಂದಿಗೆ ನಿರ್ಮಿಸಲಾಗಿದೆ?

A
ಅಮೆರಿಕಾ
B
ಜಪಾನ್
C
ರಷ್ಯಾ
D
ಫ್ರಾನ್ಸ್
Question 3 Explanation: 
ರಷ್ಯಾ:

ತಮಿಳುನಾಡಿನಲ್ಲಿ ರಷ್ಯಾದ ಸಹಯೋಗದೊಂದಿಗೆ ಸ್ಥಾಪಿಸಲಾಗಿರುವ ಕೂಡಂಕುಳಂ ಅಣುವಿದ್ಯುತ್ ಸ್ಥಾವರದ ಮೊದಲ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಹಾಗೂ ತಮಿಳು ನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಜಂಟಿಯಾಗಿ ವಿಡಿಯೋ ಸಂವಾದದ ಮೂಲಕ ಉದ್ಘಾಟಿಸಿದರು. 1000 ಮೆಗಾ ವ್ಯಾಟ್ ಸಾಮರ್ಥ್ಯದ ಈ ಅಣು ವಿದ್ಯುತ್ ಘಟಕವೂ ಭಾರತ – ರಷ್ಯಾ ನಡುವಿನ ಸಂಬಂಧವನ್ನು ಮತ್ತಷ್ಟು ವೃದ್ದಿಸಲಿದೆ ಎಂದು ಮೋದಿ ಹೇಳಿದರು.

Question 4

4.ಭಾರತದ 70ನೇ ಸ್ವಾತಂತ್ರೋತ್ಸವ ದಿನದ ಅಂಗವಾಗಿ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಈ ಕೆಳಗಿನ ಯಾರಿಗೆ ವಿಶೇಷ ಗೌರವ ಸಲ್ಲಿಸಲಾಗುವುದು?

A
ಅಮಿತಾಬ್ ಬಚ್ಚನ್
B
ಎಂ.ಎಸ್.ಸುಬ್ಬುಲಕ್ಷಿ
C
ಲತಾ ಮಂಗೇಶ್ಕರ್
D
ಶಾರೂಖ್ ಖಾನ್
Question 4 Explanation: 
ಎಂ.ಎಸ್.ಸುಬ್ಬುಲಕ್ಷಿ:

ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ಎಂ.ಎಸ್. ಸುಬ್ಬುಲಕ್ಷಿ ಅವರಿಗೆ ಭಾರತದ 70ನೇ ಸ್ವಾತಂತ್ರೋತ್ಸವ ದಿನವಾದ ಆಗಸ್ಟ್ 15 ರಂದು ವಿಶ್ವಸಂಸ್ಥೆಯ ಮುಖ್ಯ ಕಚೇರಿಯಲ್ಲಿ ನಡೆಯಲಿರುವ ಸಾಮಾನ್ಯ ಅಧಿವೇಶನದಲ್ಲಿ ವಿಶೇಷ ಗೌರವ ಸಲ್ಲಿಸಲಾಗುವುದು. ಅಂದು ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರು ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. 1966ರಲ್ಲಿ ವಿಶ್ವಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಸುಬ್ಬುಲಕ್ಷಿ ಸಂಗೀತ ಕಾರ್ಯಕ್ರಮ ನೀಡಿದ್ದರು. ಇವರ ನಂತರ ಇಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಿರುವ ಎರಡನೇ ಭಾರತೀಯ ಎ.ಆರ್.ರೆಹಮಾನ್.

Question 5

5.ಇತ್ತೀಚೆಗೆ ನಿಧನರಾದ ಕಲಿಖೊ ಪುಲ್ ಅವರು ಯಾವ ರಾಜ್ಯದ ಮಾಜಿ ಮುಖ್ಯಮಂತ್ರಿ?

A
ಅಸ್ಸಾಂ
B
ಹರಿಯಾಣ
C
ಅರುಣಾಚಲ ಪ್ರದೇಶ
D
ಮಣಿಪುರ
Question 5 Explanation: 
ಅರುಣಾಚಲ ಪ್ರದೇಶ:

ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲಿಖೊ ಪುಲ್ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಸಾವನ್ನಪ್ಪಿದರು. ಪುಲ್ ಕಾಂಗ್ರೆಸ್ನಿಂದ ಬಂಡೆದ್ದು, ಬಿಜೆಪಿ ಬೆಂಬಲದಿಂದ ಮುಖ್ಯಮಂತ್ರಿಯಾಗಿದ್ದರು. ಪುಲ್ ಸರ್ಕಾರ ವಜಾಗೊಳಿಸಿ, ನಬಾಮ್ ಟುಕಿ ಸರ್ಕಾರ ಪುನರ್ಸ್ಥಾಪಿಸಿ ಸುಪ್ರೀಂಕೋರ್ಟ್ ಕಳೆದ ತಿಂಗಳು ತೀರ್ಪು ನೀಡಿತ್ತು. ಕೇವಲ ಆರು ತಿಂಗಳ ಕಾಲ ಅವರು ಮುಖ್ಯಮಂತ್ರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

Question 6
6.ಯಾವ ರಾಜ್ಯ ಕಾಣೆಯಾಗಿರುವ ಮಕ್ಕಳನ್ನು ಪತ್ತೆ ಹಚ್ಚುವ ಸಲುವಾಗಿ “ಆಪರೇಷನ್ ಮುಸ್ಕನ್-2 (Operation Muskan) ಆರಂಭಿಸಿದೆ?
A
ಓಡಿಶಾ
B
ಪಶ್ಚಿಮ ಬಂಗಾಳ
C
ಆಂಧ್ರ ಪ್ರದೇಶ
D
ತಮಿಳು ನಾಡು
Question 6 Explanation: 
ಓಡಿಶಾ:

ಓಡಿಶಾ ಸರ್ಕಾರ ರಾಜ್ಯದಲ್ಲಿ ಕಾಣೆಯಾಗಿರುವ ಮಕ್ಕಳನ್ನು ಪತ್ತೆಹಚ್ಚುವ ಸಲುವಾಗಿ ಆಪರೇಷನ್ ಮುಸ್ಕನ್-2 ಅನ್ನು ಇತ್ತೀಚೆಗೆ ಆರಂಭಿಸಿತು. ಓಡಿಶಾ ಕ್ರೈಂ ಬ್ರಾಂಚ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಹಯೋಗದೊಂದಿಗೆ ಮೊದಲ ಹಂತದ ಆಪರೇಷನ್ ಮುಸ್ಕನ್-2 ಜುಲೈ 25 ರಂದು ಕಾರ್ಯರಂಭಿಸಿತು. ಈ ಆಪರೇಷನ್ ಅಡಿ ಓಡಿಶಾ ಪೊಲೀಸರು ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ 10 ರಾಜ್ಯಗಳಿಗೆ ತೆರಳಿ ಕಾಣೆಯಾಗಿರುವ ಓಡಿಶಾ ಮಕ್ಕಳ ಪತ್ತೆಗಾಗಿ ಕಾರ್ಯಾಚರಣೆ ಮಾಡಲಿದ್ದಾರೆ. ಈ ಆಪರೇಷನ್ ಅಡಿ ಇದುವರೆಗೆ 1531 ಮಕ್ಕಳನ್ನು ಪತ್ತೆಹಚ್ಚಲಾಗಿದೆ.

Question 7

7.“ಸೆಂಟ್ ಪೀಟರ್ಸಬರ್ಗ್ ಘೋಷಣೆ-2010 (St Petersburg Declaration)” ಯಾವುದಕ್ಕೆ ಸಂಬಂಧಿಸಿದೆ?

A
ತೇವ ಭೂಮಿ ಸಂರಕ್ಷಣೆ
B
ಹುಲಿಗಳ ಸಂರಕ್ಷಣೆ
C
ಜಲ ಸಂಪನ್ಮೂಲ ಸಂರಕ್ಷಣೆ
D
ಪ್ರವಾಸಿ ಹಕ್ಕಿಗಳ ಸಂರಕ್ಷಣೆ
Question 7 Explanation: 
ಹುಲಿಗಳ ಸಂರಕ್ಷಣೆ:

ಸೆಂಟ್ ಪೀಟರ್ಸಬರ್ಗ್ ಘೋಷಣೆಯು ಹುಲಿಗಳ ಸಂರಕ್ಷಣೆಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಘೋಷಣೆಯಾಗಿದೆ. ನವೆಂಬರ್, 2010 ರಲ್ಲಿ ಸೆಂಟ್ ಪೀಟರ್ಸಬರ್ಗ್ ನಲ್ಲಿ ನಡೆದ ಜಾಗತಿಕ ಹುಲಿ ಸಮ್ಮೇಳನದಲ್ಲಿ ಹುಲಿಗಳನ್ನು ಹೊಂದಿರುವ ಜಗತ್ತಿನ 13 ರಾಷ್ಟ್ರಗಳು ಈ ಘೋಷಣೆಗೆ ಸಹಿ ಹಾಕಿದವು. 2022ರ ಅವಧಿಗೆ ಜಾಗತಿಕ ಮಟ್ಟದಲ್ಲಿ ಈಗಿರುವ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಮಹತ್ವದ ನಿರ್ಣಯವನ್ನು ಈ ಘೋಷಣೆಯಡಿ ಕೈಗೊಳ್ಳಲಾಗಿದೆ.

Question 8

8.ಇತ್ತೀಚೆಗೆ ಸುದ್ದಿಯಲ್ಲಿದ್ದ ಕ್ಯಾನ್ಸರ್ ಚಿಕಿತ್ಸೆಗೆ ಅತ್ಯಂತ ಪ್ರಯೋಜನಕಾರಿ ಎನ್ನಲಾದ “ವಾಟ್ಸನ್ ಸೂಪರ್ ಕಂಪ್ಯೂಟರ್” ಅನ್ನು ಅಭಿವೃದ್ದಿಪಡಿಸಿರುವ ಸಂಸ್ಥೆ ಯಾವುದು?

A
ಐಬಿಎಮ್
B
ಮೈಕ್ರೋಸಾಪ್ಟ್
C
ಡೆಲ್
D
ಹೆಲ್ವಟ್ ಪ್ಯಾಕರ್ಡ್
Question 8 Explanation: 
ಐಬಿಎಮ್:

ವಾಟ್ಸನ್ ಸೂಪರ್ ಕಂಪ್ಯೂಟರ್ ಅನ್ನು ಐಬಿಎಮ್ ಸಂಸ್ಥೆ ಅಭಿವೃದ್ದಿಪಡಿಸಿದ್ದು, ಐಬಿಎಮ್ ನ ಮೊದಲ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಥಾಮ್ಸನ್ ಜೆ ವಾಟ್ಸನ್ ರವರ ಹೆಸರನ್ನು ಇದಕ್ಕೆ ಇಡಲಾಗಿದೆ. ಅರ್ಟಿಫಿಷಿಯಲ್ ಇಂಟೆಲಿಜೆನ್ಸಿ ಮತ್ತು ಅನಲಿಟಿಕಲ್ ಸಾಪ್ಟವೇರ್ ತಂತ್ರಜ್ಞಾನದಿಂದ ವಾಟ್ಸನ್ ಸೂಪರ್ ಕಂಪ್ಯೂಟರ್ ಅನ್ನು ಪ್ರಶ್ನೆಗೆ ಉತ್ತರಿಸುವ ಮಷಿನ್ನಂತೆ ಅಭಿವೃದ್ದಿಪಡಿಸಲಾಗಿದೆ. ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ 15 ಮಿಲಿಯನ್ ಹಾಳೆಗಳಷ್ಟು ಹಾಗೂ 200 ವೈದ್ಯಕೀಯ ಪುಸ್ತಕಗಳ ಮಾಹಿತಿಯನ್ನು ಈ ಸೂಪರ್ ಕಂಪ್ಯೂಟರ್ ಗೆ ಅಳವಡಿಸಲಾಗಿದೆ. ಕ್ಯಾನ್ಸರ್ ಪೀಡಿತ ರೋಗಿಯ ವಿವರವನ್ನು ಇದರಲ್ಲಿ ನಮೂದಿಸಿದರೆ ಸಾಕು ರೋಗದ ತೀವ್ರತೆ, ನೀಡಬೇಕಾಗಿರುವ ಚಿಕಿತ್ಸೆ ಸೇರಿದಂತೆ ಅನೇಕ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಇದು ಒದಗಿಸುವ ಮೂಲಕ ಕ್ಯಾನ್ಸರ್ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ವೈದ್ಯರಿಗೆ ಸಹಾಯವಾಗಲಿದೆ.

Question 9

9.ಬ್ರಾಂಡ್ ಫೈನಾನ್ಸ್ ನಡೆಸಿದ ಸಮೀಕ್ಷೆಯ ಪ್ರಕಾರ ಅಮೆರಿಕಾದ ಟಾಪ್-100 ಬ್ರಾಂಡ್ ಗಳಲ್ಲಿ ಸ್ಥಾನ ಪಡೆದ ಭಾರತದ ಸಂಸ್ಥೆ ಯಾವುದು?

A
ವಿಪ್ರೋ
B
ಇನ್ಪೋಸಿಸ್
C
ಟಾಟಾ ಕನ್ಸಲ್ಟೇನ್ಸಿ ಸರ್ವಿಸ್
D
ಭಾರತೀಯ ಸ್ಟೇಟ್ ಬ್ಯಾಂಕ್
Question 9 Explanation: 
ಟಾಟಾ ಕನ್ಸಲ್ಟೇನ್ಸಿ ಸರ್ವಿಸ್:

ಭಾರತದ ಐಟಿ ದಿಗ್ಗಜ ಸಂಸ್ಥೆ ಟಾಟಾ ಕನ್ಸಲ್ಟೇನ್ಸಿ ಸರ್ವಿಸ್ (ಟಿಸಿಎಸ್) ಅಮೆರಿಕಾದ ಟಾಪ್-100 ಬ್ರಾಂಡ್ ಗಳಲ್ಲಿ 58 ನೇ ಸ್ಥಾನಗಳಿಸಿದೆ. ಬ್ರಾಂಡ್ ಫೈನಾನ್ಸ್ ಎಂಬ ಸಂಸ್ಥೆ ನಡೆಸಿರುವ ಸಮೀಕ್ಷೆಯಲ್ಲಿ ಈ ವಿಷಯ ಬಹಿರಂಗಗೊಂಡಿದ್ದು, ಟಾಪ್-100 ಬ್ರಾಂಡ್ ಗಳ ಪಟ್ಟಿಯಲ್ಲಿ ಸ್ಥಾನಪಡೆದುಕೊಂಡಿರುವ ವಿಶ್ವದ ನಾಲ್ಕು ಐಟಿ ಕಂಪನಿಗಳಲ್ಲಿ ಟಿಸಿಎಸ್ ಸಹ ಒಂದಾಗಿದೆ. ಆರ್ಥಿಕ ಮೌಲ್ಯ, ಭೌದ್ದಿಕ ಆಸ್ತಿ ಮತ್ತು ಟ್ರೇಡ್ ಮಾರ್ಕ್ ಅನ್ನು ಮಾನದಂಡವನ್ನಾಗಿಟ್ಟುಕೊಂಡು ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ.

Question 10

10.ವಿವಾದಿತ ಸಶಸ್ತ್ರಪಡೆ ವಿಶೇಷಾಧಿಕಾರ ಕಾಯ್ದೆ (ಅ Armed Forces Special Powers Act) ಜಾರಿಗೆ ಬಂದ ವರ್ಷ?

A
ಸೆಪ್ಟೆಂಬರ್ 11, 1968
B
ಸೆಪ್ಟೆಂಬರ್ 11, 1968
C
ಸೆಪ್ಟೆಂಬರ್ 11, 1958
D
ನವೆಂಬರ್ 10, 2000
Question 10 Explanation: 
ಸೆಪ್ಟೆಂಬರ್ 11, 1968:

ಸಶಸ್ತ್ರಪಡೆ ವಿಶೇಷಾಧಿಕಾರ ಕಾಯ್ದೆ (Armed Forces Special Powers Act) ಭಾರತ ಸಂವಿಧಾನ ಸೇನಾ ಪಡೆಗಳಿಗೆ ನೀಡಿರುವ ವಿಶೇಷ ಅಧಿಕಾರ. ಈ ಕಾಯ್ದೆ ಸೆಪ್ಟೆಂಬರ್ 11, 1958ರಲ್ಲಿ ಅಸ್ಸಾಂನ ನಾಗ ಹಿಲ್ಸ್ ಪ್ರದೇಶದಲ್ಲಿ ಮಾತ್ರ ಜಾರಿಗೆ ತರಲಾಗಿತ್ತು. ತದನಂತರ ಒಂದರ ನಂತರ ಒಂದರಂತೆ ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ ಅಸ್ಸಾಂ, ಮೇಘಾಲಯ, ಮಣಿಪುರ, ಮೀಝೋರಾಂ, ನಾಗಾಲ್ಯಾಂಡ್ ಮತ್ತು ತ್ರಿಪುರಾದಲ್ಲಿ ಕಾಯ್ದೆಯನ್ನು ಜಾರಿಗೆ ತರಲಾಯಿತು. ಆದರೆ 1983 ರಲ್ಲಿ ಕಾಯಿದೆ ತಿದ್ದುಪಡಿ ತರುವ ಮೂಲಕ ಪಂಜಾಬ್ ಮತ್ತು ಛತ್ತೀಸ್ ಘಡಕ್ಕೆ ವಿಸ್ತರಿಸಲಾಯಿತು. ಆದರೆ 1997 ರಲ್ಲಿ ಇದನ್ನು ಹಿಂಪಡೆಯಲಾಯಿತು. ತದನಂತರ 1990 ರಲ್ಲಿ ಅಂಗೀಕಾರವಾದ ನಿಯಾಮವಳಿಯಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಕಾಯಿದೆ ಜಾರಿಗೆ ಬಂದಿತು, ಸದ್ಯ ಕಾಶ್ಮೀರದಲ್ಲಿ ಇಂದಿಗೂ ಜಾರಿಯಲ್ಲಿದೆ.

There are 10 questions to complete.

Leave a Comment

This site uses Akismet to reduce spam. Learn how your comment data is processed.