ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 12, 2016

Question 1

1.ಸರಕು ಮತ್ತು ಸೇವಾ ತೆರಿಗೆ (GST)ಯನ್ನು ಅನುಮೋದನೆ ಮಾಡಿದ ಮೊದಲ ರಾಜ್ಯ ಯಾವುದು?

A
ಅಸ್ಸಾಂ
B
ಜಾರ್ಖಂಡ್
C
ತಮಿಳು ನಾಡು
D
ಪಂಜಾಬ್
Question 1 Explanation: 
ಅಸ್ಸಾಂ:

ಅಸ್ಸಾಂ ರಾಜ್ಯ ಸರಕು ಮತ್ತು ಸೇವಾ ತೆರಿಗೆಯನ್ನು ಅನುಮೋದನೆ ಮಾಡಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಸ್ಸಾಂ ವಿಧಾನಸಭೆಯಲ್ಲಿ ಅವಿರೋಧವಾಗಿ ಜಿಎಸ್'ಟಿಯನ್ನು ಅನುಮೋದನೆ ಮಾಡಲಾಗಿದೆ. ಸರಕು ಮತ್ತು ಸೇವಾ ತೆರಿಗೆಯನ್ನು ಈಗಾಗಲೇ ಸಂಸತ್ತಿನಲ್ಲಿ ಅನುಮೋದಿಸಲಾಗಿದೆ. ಆದರೆ ಅದಕ್ಕೂ ಮೊದಲು 29 ರಾಜ್ಯಗಳ ಪೈಕಿ ಕನಿಷ್ಠ 15 ರಾಜ್ಯಗಳು (ಶೇ 50ರಷ್ಟು) ಮಸೂದೆಗೆ ಅನುಮೋದನೆ ನೀಡಬೇಕಿದೆ. ಅನಂತರ ರಾಷ್ಟ್ರಪತಿ ರವರು ಈ ಮಸೂದೆಗೆ ಅಂಕಿತ ಹಾಕಿದ ಮೇಲೆ ಕಾಯಿದೆಯಾಗಿ ಜಾರಿಗೆ ಬರಲಿದೆ.

Question 2

2.ಇತ್ತೀಚೆಗೆ ಆರಂಭಗೊಂಡ ಕೃಷ್ಣ-ಪುಷ್ಕರ ಮೇಳಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:

I) ಗುರುಗ್ರಹವು ಕನ್ಯಾರಾಶಿಯನ್ನು ಪ್ರವೇಶಿಸುವ ನಿಮಿತ್ತ ಪುಷ್ಕರ ಮೇಳವನ್ನು ಆಯೋಜಿಸಲಾಗುತ್ತದೆ

II) ಈ ದಿನದಂದು ಗೋದಾವರಿಯು ಕೃಷ್ಣೆಗೆ ಆಗಮಿಸುತ್ತಾಳೆ ಎನ್ನಲಾಗಿದ್ದು ಇದಕ್ಕೆ ಕನ್ಯಾಗತ ಎನ್ನುತ್ತಾರೆ

III) ಪ್ರತಿ ಆರು ವರ್ಷಕ್ಕೊಮ್ಮೆ ಈ ಕುಂಭಮೇಳವನ್ನು ಆಯೋಜಿಸಲಾಗುತ್ತದೆ.

ಈ ಮೇಲಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆ/ಹೇಳಿಕೆಗಳನ್ನು ಆರಿಸಿ:

A
ಹೇಳಿಕೆ I ಮಾತ್ರ
B
ಹೇಳಿಕೆ I & II ಮಾತ್ರ
C
ಹೇಳಿಕೆ II & III ಮಾತ್ರ
D
ಮೇಲಿನ ಎಲ್ಲವೂ ಸರಿಯಾಗಿವೆ
Question 2 Explanation: 
ಹೇಳಿಕೆ I ಮಾತ್ರ:

ಕೃಷ್ಣಾ ಪುಷ್ಕರ (ಕೃಷ್ಣಾ ಕುಂಭಮೇಳ) ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಮೇಳವಾಗಿದ್ದು, ಆಗಸ್ಟ್ 12ರಿಂದ ಆರಂಭಗೊಳ್ಳುತ್ತಿದೆ. ಕೃಷ್ಣಾ ನದಿ ಸಾಗುವ ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಈ ಪುಣ್ಯಸ್ನಾನಕ್ಕೆ ಸಿದ್ಧತೆಗಳು ನಡೆದಿದ್ದು, ಕೋಟ್ಯಂತರ ಜನರು ನದಿಯಲ್ಲಿ ಮಿಂದೇಳಲು ಸಿದ್ಧವಾಗಿದ್ದಾರೆ. ಗುರುಗ್ರಹವು ಕನ್ಯಾರಾಶಿಯನ್ನು ಈ 11 ದಿನಗಳ ಅವಧಿಯಲ್ಲಿ ಪ್ರವೇಶಿಸುತ್ತಿದ್ದು, ಈ ನಿಮಿತ್ತ ಪುಷ್ಕರ ಮೇಳವು ನಡೆಯುತ್ತಿದೆ. ಈ ಸಂದರ್ಭದಲ್ಲಿ ಗಂಗೆಯು ಕೃಷ್ಣೆಗೆ ಆಗಮಿಸುತ್ತಾಳೆ ಎಂಬ ಪ್ರತೀತಿ ಇದ್ದು, ಇದಕ್ಕೆ ಕನ್ಯಾಗತ ಎನ್ನಲಾಗುತ್ತದೆ.

Question 3

3.ಇದೇ ಮೊದಲ ಬಾರಿ ನಡೆಯುತ್ತಿರುವ “ರಾಷ್ಟ್ರೀಯ ಶಿಕ್ಷಕರ ಕಾಂಗ್ರೆಸ್ (National Teacher’s Congress)” ಯಾವ ನಗರದಲ್ಲಿ ನಡೆಯಲಿದೆ?

A
ಬೆಂಗಳೂರು
B
ಹೈದ್ರಾಬಾದ್
C
ಪುಣೆ
D
ಕೊಲ್ಕತ್ತ
Question 3 Explanation: 
ಪುಣೆ:

ಪ್ರಥಮ ರಾಷ್ಟ್ರೀಯ ಶಿಕ್ಷಕರ ಕಾಂಗ್ರೆಸ್ ಪುಣೆಯಲ್ಲಿ ಸೆಪ್ಟೆಂಬರ್ 23 ರಿಂದ 25 ವರೆಗೆ ಮೂರು ದಿನಗಳ ಕಾಲ ನಡೆಯಲಿದೆ. ಪುಣೆಯ ರಾಷ್ಟ್ರೀಯ ಶಿಕ್ಷಕರ ಫೌಂಡೇಷನ್ ಈ ಕಾಂಗ್ರೆಸ್ ಅನ್ನು ಆಯೋಜಿಸುತ್ತಿದೆ. ದೇಶದ ವಿವಿಧ ಭಾಗಗಳಿಂದ ಸುಮಾರು 8000ಕ್ಕೂ ಹೆಚ್ಚು ಶಿಕ್ಷಕರು ಇದರಲ್ಲಿ ಭಾಗವಹಿಸಲಿದ್ದಾರೆ.

Question 4

4.ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ಎಂ.ಎಸ್.ಸುಬ್ಬುಲಕ್ಷ್ಮಿ ಅವರ ಜನ್ಮ ಶತಮಾನೋತ್ಸವದ ಗೌರವಾರ್ಥ ಈ ಕೆಳಗಿನ ಯಾವುದು ವಿಶೇಷ ಅಂಚೆ ಚೀಟಿ ಹೊರ ತರಲು ನಿರ್ಧರಿಸಿದೆ?

A
ಭಾರತೀಯ ಅಂಚೆ
B
ವಿಶ್ವ ಸಂಸ್ಥೆ
C
ಅಮೆರಿಕಾ ಸಂಸತ್ತು
D
ಯುರೋಪಿಯನ್ ಒಕ್ಕೂಟ
Question 4 Explanation: 
ವಿಶ್ವ ಸಂಸ್ಥೆ:

ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ಎಂ.ಎಸ್.ಸುಬ್ಬುಲಕ್ಷ್ಮಿ ಅವರ ಜನ್ಮ ಶತಮಾನೋತ್ಸವದ ಗೌರವಾರ್ಥ ವಿಶ್ವಸಂಸ್ಥೆಯು ವಿಶೇಷ ಅಂಚೆ ಚೀಟಿ ಹೊರ ತರಲು ಮುಂದಾಗಿದೆ. ವಿಶ್ವಸಂಸ್ಥೆಯ ಭಾರತದ ಪ್ರತಿನಿಧಿ ಕಚೇರಿ ಈ ವಿಷಯವನ್ನು ಖಚಿತ ಪಡಿಸಿದೆ. ಭಾರತದ 70ನೇ ಸ್ವಾತಂತ್ರ್ಯೋತ್ಸವ ದಿನವಾದ ಆಗಸ್ಟ್ 15ರಂದು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆಯುವ ಸಾಮಾನ್ಯ ಅಧಿವೇಶನದಲ್ಲಿ ಅಂಚೆ ಚೀಟಿ ಬಿಡುಗಡೆ ಮಾಡಲಾಗುವುದು. ಸುಬ್ಬುಲಕ್ಷ್ಮಿ ಅವರು 1966ರಲ್ಲಿ ವಿಶ್ವಸಂಸ್ಥೆಯ ಮುಖ್ಯಕಚೇರಿಯಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದರು. ಈ ವರ್ಷ ಅದಕ್ಕೆ 50 ವರ್ಷ ತುಂಬುತ್ತದೆ. ಹೀಗಾಗಿ ಸುಬ್ಬುಲಕ್ಷ್ಮಿ ಅವರ ಜೀವನ ಮತ್ತು ಸಾಧನೆಯನ್ನು ಬಿಂಬಿಸುವ ಅವರ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ.

Question 5

5.ಅಮೆರಿಕಾದ ಈಜುಗಾರ ಮೈಕಲ್ ಫೆಲ್ಪ್ಸ್ ಸತತ ಎಷ್ಟು ಒಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಹೊಸ ದಾಖಲೆ ನಿರ್ಮಿಸಿದರು?

A
ಎರಡು
B
ನಾಲ್ಕು
C
ಐದು
D
ಆರು
Question 5 Explanation: 
ನಾಲ್ಕು:

ಅಮೆರಿಕದ ಈಜುಗಾರ ಮೈಕಲ್ ಫೆಲ್ಪ್ಸ್ಒಲಿಂಪಿಕ್ಸ್ನಲ್ಲಿ 22ನೆ ಚಿನ್ನದ ಪದಕವನ್ನು ಗೆದ್ದುಕೊಂಡರು. ಚಿನ್ನದ ಮೀನು ಎಂದೇ ಖ್ಯಾತರಾದ ಅಮೆರಿಕದ ಈಜುಪಟು ಮೈಕೆಲ್ ಫೆಲ್ಪ್ಸ್ 200 ಮೀಟರ್ ವೈಯಕ್ತಿಕ ಮಿಡ್ಲೆ ವಿಭಾಗದಲ್ಲಿ 1 ನಿಮಿಷ 54.66 ಸೆಕೆಂಡ್ ಗಳಲ್ಲಿ ಗುರಿ ತಲುಪಿ ಐತಿಹಾಸಿಕ ಸಾಧನೆ ಮಾಡಿದರು. ನಾಲ್ಕನೆ ಚಿನ್ನದೊಂದಿಗೆ ಸತತ ನಾಲ್ಕು ಒಲಿಂಪಿಕ್ಸ್ ಕೂಟಗಳಲ್ಲಿ ಚಿನ್ನ ಜಯಿಸಿದ ದಾಖಲೆ ನಿರ್ಮಿಸಿದರು. ರಿಯೋ ಒಲಂಪಿಕ್ಸ್ ನಲ್ಲಿ 200 ಮೀಟರ್ ಬಟರ್ ಫ್ಲೈ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಮತ್ತು 4x200 ಮೀ ಫ್ರೀಸ್ಟೈಲ್ ರಿಲೇಯಲ್ಲಿ ಚಿನ್ನ ಗೆಲ್ಲುವುದರೊಂದಿಗೆ ಒಲಿಂಪಿಕ್ಸ್ನಲ್ಲಿ ದಾಖಲೆ ಬರೆದರು. 31ರ ಹರೆಯದ ಅವರು ಈವರೆಗೆ ಒಲಿಂಪಿಕ್ಸ್ ನಲ್ಲಿ 26 ಪದಕಗಳನ್ನು ಜಯಿಸಿದ್ದಾರೆ. ಇದೊಂದು ಸಾರ್ವಕಾಲಿಕ ಒಲಿಂಪಿಕ್ಸ್ ದಾಖಲೆಯಾಗಿದೆ. ಇದರಲ್ಲಿ ಚಿನ್ನ22, ಬೆಳ್ಳಿ 2 ಮತ್ತು ಕಂಚು 2 ಸೇರಿವೆ.

Question 6

6.ಗೀತಂ ವಿಶ್ವವಿದ್ಯಾಲಯ ನೀಡುವ 'ಗೀತಂ ಸಂಸ್ಥಾಪನಾ ಪ್ರಶಸ್ತಿ'ಗೆ ಯಾರನ್ನು ಆಯ್ಕೆಮಾಡಲಾಗಿದೆ?

A
ಮಾಧವನ್ ನಾಯರ್
B
ಕಸ್ತೂರಿ ರಂಗನ್
C
ಸಿ.ಎನ್.ಆರ್.ರಾವ್
D
ಸೂರ್ಯ ನಾರಾಯಣ್
Question 6 Explanation: 
ಸಿ.ಎನ್.ಆರ್.ರಾವ್:

ಗೀತಂ ವಿಶ್ವವಿದ್ಯಾಲಯ ನೀಡುವ 'ಗೀತಂ ಸಂಸ್ಥಾಪನಾ ಪ್ರಶಸ್ತಿ'ಗೆ ಹಿರಿಯ ವಿಜ್ಞಾನಿ ಡಾ.ಸಿ.ಎನ್.ಆರ್. ರಾವ್ ಆಯ್ಕೆಯಾಗಿದ್ದಾರೆ. ವಿಶ್ವವಿದ್ಯಾಲಯದ ಪ್ರಾಂಗಣದಲ್ಲಿ ನಡೆಯಲಿರುವ 36ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಪ್ರಶಸ್ತಿಯು 10 ಲಕ್ಷ ನಗದು ಹಾಗೂ ಫಲಕವನ್ನು ಒಳಗೊಂಡಿದೆ.

Question 7

7.ಇತ್ತೀಚೆಗೆ ನಿಧನರಾದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹನೀಫ್ ಮುಹಮ್ಮದ್ ಯಾವ ಬಿರುದಿನಿಂದ ಖ್ಯಾತರಾಗಿದ್ದರು?

A
ಲಿಟ್ಲ್ ಮಾಸ್ಟರ್
B
ಶೂರ್ ಶಾಟರ್
C
ಶಾರ್ಪ್ ಹಿಟ್ಟರ್
D
ಪಾಕ್ ಎಕ್ಸಪ್ರೆಸ್
Question 7 Explanation: 
ಲಿಟ್ಲ್ ಮಾಸ್ಟರ್:

ಪಾಕಿಸ್ತಾನ ಮಾಜಿ ಕ್ರಿಕೆಟ್ ಆಟಗಾರ, 'ಲಿಟ್ಲ್ ಮಾಸ್ಟರ್' ಎಂದೇ ಖ್ಯಾತರಾಗಿದ್ದ ಹನೀಫ್ ಮುಹಮ್ಮದ್(81) ನಿಧನರಾದರು. ಹನೀಫ್ ಮುಹಮ್ಮದ್ 1954-55ರಲ್ಲಿ ಭಾರತಕ್ಕೆ ಮೊದಲ ಬಾರಿ ಪ್ರವಾಸ ಕೈಗೊಂಡ ಪಾಕಿಸ್ತಾನ ಕ್ರಿಕೆಟ್ ತಂಡದ ಸದಸ್ಯರಾಗಿದ್ದರು. 1952-53 ರಿಂದ 1969-70ರ ನಡುವಿನ ಸುದೀರ್ಘ ವೃತ್ತಿ ಜೀವನದಲ್ಲಿ 55 ಟೆಸ್ಟ್ಗಳನ್ನು ಆಡಿದ್ದಾರೆ. 1957-58ರಲ್ಲಿ ವೆಸ್ಟ್ಇಂಡೀಸ್ ವಿರುದ್ಧದ ಟೆಸ್ಟ್ನಲ್ಲಿ 337ರನ್ ದಾಖಲಿಸಿದ್ದರು. ಈ ಟೆಸ್ಟ್ನಲ್ಲಿ ಅವರು 970 ನಿಮಿಷಗಳ ಕಾಲ ಬ್ಯಾಟಿಂಗ್ ನಡೆಸಿದ್ದರು. ಇದು ಟೆಸ್ಟ್ ಹಾಗೂ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅತ್ಯಂತ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಂತು ಬ್ಯಾಟಿಂಗ್ ನಡೆಸಿದ ಅಪೂರ್ವ ದಾಖಲೆಯಾಗಿದೆ. ಹನೀಫ್ ಮುಹಮ್ಮದ್ 55 ಟೆಸ್ಟ್ಗಳಲ್ಲಿ ಅವರು 12 ಶತಕ ಮತ್ತು 15 ಅರ್ಧಶತಕಗಳನ್ನು ಒಳಗೊಂಡ 3915 ರನ್ ದಾಖಲಿಸಿ 1 ವಿಕೆಟ್ ಪಡೆದಿದ್ದರು. 238 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ 55 ಶತಕ ಮತ್ತು 66 ಅರ್ಧಶತಕಗಳನ್ನು ಒಳಗೊಂಡ 17,059 ರನ್ ಮತ್ತು 53 ವಿಕೆಟ್ ಸಂಪಾದಿಸಿದ್ದರು.

Question 8

8.ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಸ್ವಾತಂತ್ರ್ಯೋತ್ಸವದ ಭಾಗವಾಗಿ ಆಚರಿಸುತ್ತಿರುವ “ಭಾರತ ಪರ್ವ”ದಲ್ಲಿ ಯಾವ ರಾಜ್ಯ ಹಬ್ಬದ ಮುಖ್ಯ ವಿಷಯವಾಗಿದೆ?

A
ಕೇರಳ
B
ಕರ್ನಾಟಕ
C
ಹಿಮಾಚಲ ಪ್ರದೇಶ
D
ಮಣಿಪುರ
Question 8 Explanation: 

ಕರ್ನಾಟಕಕೇಂದ್ರ ಪ್ರವಾಸೋದ್ಯಮ ಇಲಾಖೆಯು ಸ್ವಾತಂತ್ರ್ಯೋತ್ಸವದ ಭಾಗವಾಗಿ ಭಾರತ ಪರ್ವ ಹಬ್ಬವನ್ನು ಆಗಸ್ಟ್ 8 ರಿಂದ ಆಗಸ್ಟ್ 18 ವರೆಗೆ ಆಯೋಜಿಸಿದೆ. ಇದೇ ಮೊದಲ ಬಾರಿ ಇಂತಹ ಹಬ್ಬವನ್ನು ಆಯೋಜಿಸಲಾಗಿದ್ದು, ಕರ್ನಾಟಕ ಈ ಬಾರಿಯ ಹಬ್ಬದ ಮುಖ್ಯ ವಿಷಯವಾಗಿದೆ. ಏಳು ದಿನಗಳ ಈ ಹಬ್ಬದ ಸಂದರ್ಭದಲ್ಲಿ ಕರ್ನಾಟಕದ ವಿವಿಧ ಕಲೆ, ಸಂಸ್ಕೃತಿ, ಪರಂಪರೆ, ಕರಕೌಶಲ ಮತ್ತು ಕೈಮಗ್ಗದ ಪ್ರದರ್ಶನ ನಡೆಯಲಿದೆ. ಬಿದರಿ ಮತ್ತು ಚನ್ನಪಟ್ಟಣ ಬೊಂಬೆಗಳ ಪ್ರದರ್ಶನ, ತಯಾರಿಸುವ ಪ್ರಾತ್ಯಕ್ಷಿಕೆಯನ್ನೂ ನೀಡಲಾಗುವುದು. ಮೈಸೂರು ರೇಷ್ಮೆ ಸೀರೆ ಪ್ರದರ್ಶನ ಮತ್ತು ಮಾರಾಟ ಹಬ್ಬದ ಮತ್ತೊಂದು ಆಕರ್ಷಣೆಯಾಗಿದೆ. ವೀರಗಾಸೆ, ಜೋಗತಿ ಕುಣಿತ, ಹಗಲು ವೇಷ, ಪೂಜಾ ಕುಣಿತವನ್ನು ಹಮ್ಮಿಕೊಳ್ಳಲಾಗಿದೆ.

Question 9

9. ವಿಶ್ವ ಆನೆ ದಿನ (World Elephant Day)________?

A
ಆಗಸ್ಟ್ 12
B
ಜೂನ್ 10
C
ಸೆಪ್ಟೆಂಬರ್ 11
D
ಅಕ್ಟೋಬರ್ 15
Question 9 Explanation: 
ಆಗಸ್ಟ್ 12:

ಪ್ರತಿ ವರ್ಷ ಆಗಸ್ಟ್ 12 ರಂದು ವಿಶ್ವ ಆನೆ ದಿನವನ್ನು ಆಚರಿಸಲಾಗುತ್ತದೆ. ಆನೆಗಳ ಸಂರಕ್ಷಣೆ ಮತ್ತು ಅವುಗಳ ಸಂತತಿಯನ್ನು ಹೆಚ್ಚಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ಆನೆಗಳ ಸಂರಕ್ಷಣೆಗಾಗಿ ಪ್ರಾಜೆಕ್ಟ್ ಎಲಿಪಾಂಟ್ ಅನ್ನು 1992 ರಂದು ಜಾರಿಗೆ ತರಲಾಗಿದೆ. ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ.

Question 10

10.ಇತ್ತೀಚೆಗೆ ಸುದ್ದಿಯಲ್ಲಿದ್ದ “ಮಿಹಿರ್ ಷಾ (Mihir Shah) ಸಮಿತಿ” ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?

A

ಕೇಂದ್ರ ಜಲ ಆಯೋಗ ಮತ್ತು ಕೇಂದ್ರ ಜಲ ಮಂಡಳಿ ಪುನರ್ರಚನೆ

B

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗಧಿ

C

ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವುದು

D

ಈಶಾನ್ಯ ರಾಜ್ಯಗಳ ಸರ್ವಾಂಗೀಣ ಅಭಿವೃದ್ದಿ

Question 10 Explanation: 
ಕೇಂದ್ರ ಜಲ ಆಯೋಗ ಮತ್ತು ಕೇಂದ್ರ ಜಲ ಮಂಡಳಿ ಪುನರ್ರಚನೆ:

ಕೇಂದ್ರ ಜಲ ಸಂಪನ್ಮೂಲ, ನದಿ ಅಭಿವೃದ್ದಿ ಮತ್ತು ಗಂಗಾ ಪುನಶ್ಚೇತನ ಸಚಿವಾಲಯವೂ ಮಿಹಿರ್ ಷಾ ಸಮಿತಿಯನ್ನು ಕೇಂದ್ರ ಜಲ ಆಯೋಗ ಮತ್ತು ಕೇಂದ್ರ ಜಲ ಮಂಡಳಿ ಪುನರ್ರಚನೆ ಸಲುವಾಗಿ ಶಿಫಾರಸ್ಸು ಮಾಡಲು ರಚಿಸಿತ್ತು. ಸಮಿತಿಯು ತನ್ನ ವರದಿಯನ್ನು ಇತ್ತೀಚೆಗೆ ಸಲ್ಲಿಸಿದ್ದು, ಈ ಸಂಸ್ಥೆಗಳನ್ನು ಪುನರ್ರಚಿಸುವುದು ಅಗತ್ಯವಿಲ್ಲವೆಂದು ಹೇಳಿದೆ. ಅಲ್ಲದೇ, ರಾಷ್ಟ್ರೀಯ ಜಲ ಆಯೋಗವನ್ನು ಸ್ಥಾಪಿಸಲು ಸಮಿತಿ ಶಿಫಾರಸ್ಸು ಮಾಡಿದೆ.

There are 10 questions to complete.

6 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 12, 2016”

  1. ಧನ್ಯವಾದಗಳು ಸರ್

  2. Karunaduexams

    Thank u santhosh

  3. Karunaduexams

    Thank u all..we will work constantly to give best..

  4. ಸಂತೋಷ್ ಗೌಡರ

    ಧನ್ಯವಾದಗಳು ಸರ್

  5. anjaneya

    Thank u sir thank u…

Leave a Comment

This site uses Akismet to reduce spam. Learn how your comment data is processed.