ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 13, 2016
Question 1 |
1.ಗ್ರಾಹಕರಿಗೆ ಉತ್ಕೃಷ್ಟ ಸೇವೆಯನ್ನು ಒದಗಿಸುವ ಸಲುವಾಗಿ ಯಾವ ಬ್ಯಾಂಕ್ ಇತ್ತೀಚೆಗೆ “ಅನನ್ಯ ಯೋಜನೆ (Project Ananya)”ಆರಂಭಿಸಿದೆ?
ಕೆನರಾ ಬ್ಯಾಂಕ್ | |
ವಿಜಯಾ ಬ್ಯಾಂಕ್ | |
ಸಿಂಡಿಕೇಟ್ ಬ್ಯಾಂಕ್ | |
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು |
ಗ್ರಾಹಕರಿಗೆ ಉತ್ಕೃಷ್ಟ ಸೇವೆಯನ್ನು ಒದಗಿಸುವ ಸಲುವಾಗಿ ಮತ್ತು ಡಿಜಿಟಲ್ ಬ್ಯಾಂಕಿಂಗ್ ಸೇವೆಯನ್ನು ಉತ್ತಮಪಡಿಸುವ ಸಲುವಾಗಿ ಸಿಂಡಿಕೇಟ್ ಬ್ಯಾಂಕ್ ಅನನ್ಯ ಯೋಜನೆಯನ್ನು ಜಾರಿಗೊಳಿಸಿದೆ. ಬೆಂಗಳೂರಿನ ಇಂದಿರನಗರ ಶಾಖೆಯಲ್ಲಿ ಈ ಯೋಜನೆಗೆ ಚಾಲನೆ ನೀಡಲಾಯಿತು. ಮುಂದಿನ ಆರು ತಿಂಗಳಲ್ಲಿ ಶೇ 10 ರಷ್ಟು ಶಾಖೆಗಳನ್ನು ಈ ಯೋಜನೆಯಡಿ ತರಲು ಬ್ಯಾಂಕ್ ನಿರ್ಧರಿಸಿದೆ. ಇದೇ ವೇಳೆ ಇಂಟರ್ನೆಟ್ ಸಂಪರ್ಕವಿಲ್ಲದ ಮೊಬೈಲ್ನಿಂದ NUUP ಸಹಾಯದ ಮೂಲಕ ಹಣ ವರ್ಗಾವಣೆ ಪದ್ಧತಿಯನ್ನು ಪರಿಚಯಿಸಿದೆ. ಈ ಸೇವೆಯನ್ನು ಪರಿಚಯಿಸಿದ ಸಾರ್ವಜನಿಕ ವಲಯದ ಪ್ರಥಮ ಬ್ಯಾಂಕ್ ಸಿಂಡಿಕೇಟ್ ಬ್ಯಾಂಕ್ ಆಗಿದೆ.
Question 2 |
2.ಕನ್ನಡತಿ ಮಂಜುಳಾ ಚೆಲ್ಲೂರು ರವರು ಯಾವ ಹೈಕೋರ್ಟನ ಮುಖ್ಯನ್ಯಾಯಾಧೀಶೆ ಆಗಿ ನೇಮಕಗೊಂಡಿದ್ದಾರೆ?
ಮುಂಬೈ ಹೈಕೋರ್ಟ್ | |
ದೆಹಲಿ ಹೈಕೋರ್ಟ್ | |
ಮದ್ರಾಸ್ ಹೈಕೋರ್ಟ್ | |
ಮಧ್ಯಪ್ರದೇಶ ಹೈಕೋರ್ಟ್ |
ಕನ್ನಡತಿ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರು ಅವರನ್ನು ಮುಂಬೈ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶೆಯಾಗಿ ನೇಮಕ ಮಾಡಲಾಗಿದ್ದು, ಮಂಜುಳಾ ಅವರು ಆಗಸ್ಟ್ 24ರಂದು ಅಧಿಕಾರ ಸ್ವೀಕರಿಸಲ್ಲಿದ್ದಾರೆ. ಸದ್ಯ ಮಂಜುಳಾ ಕೊಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಾಧೀಶೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಲಿ ಮುಂಬೈ ಹೈಕೋರ್ಟ್ ಸಿಜೆ ಆಗಿದ್ದ ಹಿರಾಲಾಲ್ ವಘೇಲಾ ಅವರು ಆ.10ರಂದು ನಿವೃತ್ತರಾಗಿರುವ ಹಿನ್ನೆಲೆಯಲ್ಲಿ ಚೆಲ್ಲೂರು ಅವರನ್ನು ಈ ಹುದ್ದೆಗೆ ನೇಮಕ ಮಾಡಲಾಗಿದೆ. ಮುಂಬೈ ಹೈಕೋರ್ಟ್ ಇತಿಹಾಸದಲ್ಲೇ ಎರಡನೇ ಮಹಿಳಾ ಮುಖ್ಯ ನ್ಯಾಯಮೂರ್ತಿ ಎಂಬ ಕೀರ್ತಿಗೆ ಮಂಜುಳಾ ಪಾತ್ರರಾಗಲಿದ್ದಾರೆ.
Question 3 |
3.ಅಂತರಾಷ್ಟ್ರೀಯ ಯುವ ದಿನ (International Youth Day)ವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
ಆಗಸ್ಟ್ 10 | |
ಆಗಸ್ಟ್ 12 | |
ಆಗಸ್ಟ್ 13 | |
ಆಗಸ್ಟ್ 14 |
ಅಂತರಾಷ್ಟ್ರೀಯ ಯುವ ದಿನ (International Youth Day)ವನ್ನು ಪ್ರತಿ ವರ್ಷ ಆಗಸ್ಟ್ 12 ರಂದು ಆಚರಿಸಲಾಗುತ್ತದೆ. The Road to 2030: Eradicating Poverty and Achieving Sustainable Consumption and Production ಇದು ಈ ವರ್ಷದ ಅಂತಾರಾಷ್ಟ್ರೀಯ ಯುವ ದಿನದ ಧ್ಯೇಯವಾಕ್ಯ.
Question 4 |
ಥಾಮಸ್ ಬಾಚ್ | |
ಡೇವಿಡ್ ಮಿಲ್ಲರ್ | |
ಜೆಸ್ಸಿ ಥಾಮ್ಸನ್ | |
ಸಿಸೊಡಿಯಾ ಸಿಂಗ್ |
ಥಾಮಸ್ ಬಾಷ್ ಅವರು ಒಲಂಪಿಕ್ ಸಮಿತಿಯ ಈಗಿನ ಅಧ್ಯಕ್ಷರಾಗಿದ್ದಾರೆ. ಅಂತಾರಾಷ್ಟ್ರೀಯ ಒಲಂಪಿಕ್ ಸಮಿತಿಯ ಕೇಂದ್ರ ಕಚೇರಿಯು ಲುಸನ್ನೆ, ಸ್ವಿಟ್ಜರ್ಲ್ಯಾಂಡ್ ನಲ್ಲಿದೆ.
Question 5 |
ಕ್ರೀಡೆ | |
ಶಿಕ್ಷಣ | |
ವಿಜ್ಞಾನ ಮತ್ತು ತಂತ್ರಜ್ಞಾನ | |
ಪತ್ರಿಕೋದ್ಯಮ |
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡುವ ವ್ಯಕ್ತಿಗಳಿಗೆ ಕಳಿಂಗಾ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಭಾರತ ಸರ್ಕಾರದ ವಿಜ್ಞಾನ-ತಂತ್ರಜ್ಞಾನ ಸಚಿವಾಲಯ, ಒಡಿಸ್ಸಾ ರಾಜ್ಯ ಸರ್ಕಾರ ಮತ್ತು ಕಳಿಂಗಾ ಫೌಂಡೇಷನ್ ಜಂಟಿಯಾಗಿ ಆರ್ಥಿಕ ಸಹಾಯ ನೀಡುತ್ತಿವೆ, ಇತ್ತೀಚೆಗೆ ಪ್ರಶಸ್ತಿ ಮೊತ್ತವನ್ನು 20000 ಅಮೆರಿಕನ್ ಡಾಲರ್ ಗಳಿಂದ 40000 ಅಮೆರಿಕನ್ ಡಾಲರ್ ಗಳಿಗೆ ಹೆಚ್ಚಿಸಲಾಯಿತು.
Question 6 |
6.ರಾಷ್ಟ್ರೀಯ ಈ-ವಿಧಾನ ಅಕಾಡಮಿ ಎಂಬ ಸಂಸ್ಥೆಯನ್ನು ಭಾರತದ ಯಾವ ರಾಜ್ಯದಲ್ಲಿ ಸ್ಥಾಪಿಸಲಾಗಿದೆ?
ದೆಹಲಿ | |
ಸಿಕ್ಕಿಂ | |
ಕೇರಳ | |
ಹಿಮಾಚಲ ಪ್ರದೇಶ |
ರಾಷ್ಟ್ರೀಯ ಈ-ವಿಧಾನ ಅಕಾಡಮಿ ಎಂಬ ಸಂಸ್ಥೆಯನ್ನು ಹಿಮಾಚಲ ಪ್ರದೇಶದ ತಪೋವನ ಎಂಬಲ್ಲಿ ಸ್ಥಾಪಿಸಲಾಗಿದೆ. ಹಿಮಾಚಲ ಪ್ರದೇಶದ ವಿಧಾನಸಭೆ ಕೂಡ ಇದೇ ಧರ್ಮಶಾಲಾದಲ್ಲಿ ಸ್ಥಾಪಿತಗೊಂಡಿದೆ. ಈ ಅಕಾಡಮಿಯಲ್ಲಿ ಭಾರತದ ವಿವಿಧ ರಾಜ್ಯಗಳ ವಿಧಾನಸಭಾ ಸದಸ್ಯರಿಗೆ ಮತ್ತು ಲೋಕಸಭಾ ಸದಸ್ಯರಿಗೆ ತರಬೇತಿಯನ್ನು ನೀಡಲಾಗುತ್ತದೆ.
Question 7 |
7.ವಿದ್ಯಾರ್ಥಿಗಳು ಸ್ಟಾರ್ಟಪ್ ಪ್ರಾರಂಭಿಸಲು ಅನುಕೂಲ ಮಾಡಿಕೊಡಲು ಜಗತ್ತಿನ ಪ್ರಥಮ ಡಿಜಿಟಲ್ ಇನ್ಕೂಬೇಟರ್ (Digital Incubator) “SV.CO” ನ್ನು ಯಾವ ರಾಜ್ಯದಲ್ಲಿ ಪ್ರಾರಂಭಿಸಲಾಯಿತು?
ಕರ್ನಾಟಕ | |
ಕೇರಳ | |
ಮಹಾರಾಷ್ಟ್ರ | |
ಹರಿಯಾಣ |
ವಿಶ್ವದ ಪ್ರಥಮ ಡಿಜಿಟಲ್ ಇನ್ಕೂಬೇಟರ್ (Digital Incubator) “SV.CO” ನ್ನು ಕೇರಳ ರಾಜ್ಯದ ತಿರುವನಾಂತಪುರದಲ್ಲಿ ಉದ್ಘಾಟಿಸಲಾಯಿತು. ವಿದ್ಯಾರ್ಥಿಗಳು ತಂಡಗಳನ್ನು ಮಾಡಿಕೊಂಡು ಇನ್ಕೂಬೇಟರ್ ನಲ್ಲಿ ಪ್ರವೇಶಾವಕಾಶವನ್ನು ಪಡೆಯಬಹುದಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸ್ಟಾರ್ಟಪ್ ಪ್ರಾರಂಭಿಸಲು ಮಾರ್ಗದರ್ಶನದೊಂದಿಗೆ ನಂತರದ 6 ತಿಂಗಳು ಎಲ್ಲಾ ರೀತಿಯ ಸಲಹೆಗಳನ್ನು ನೀಡಲಿದೆ.
Question 8 |
8.ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ ಭೂಮಿ ಮೇಲೆ ಅತಿ ಹೆಚ್ಚು ವರ್ಷಗಳ ಕಾಲ ಬದುಕುವ ಕಶೇರುಕ (Vertebrate)ಯಾವುದು?
ನೀಲಿ ತಿಮಿಂಗಲ | |
ಗ್ರೀನ್ ಲ್ಯಾಂಡ್ ಶಾರ್ಕ್ | |
ಹಿಮ ನರಿ | |
ಆಫ್ರಿಕನ್ ಆನೆ |
ಗ್ರೀನ್ಲ್ಯಾಂಡ್ನ ಶಾರ್ಕ್ಗಳು ಸರಾಸರಿ 400 ವರ್ಷ ಆಯುಷ್ಯ ಹೊಂದಿರುತ್ತವೆ ಎಂದು ವಿಜ್ಞಾನಿಗಳ ತಂಡವೊಂದು ಪತ್ತೆಹಚ್ಚಿದೆ. ಉತ್ತರ ಅಂಟ್ಲಾಟಿಕ್ನಲ್ಲಿ ಸಂಶೋಧಕರಿಗೆ ಸಿಕ್ಕಿರುವ ಮೇ ಫ್ಲವರ್ ಹೆಸರಿನ ಶಾರ್ಕ್ ಮೀನು 1624ರಲ್ಲಿ ಜನ್ಮತಾಳಿದೆ ಎನ್ನಲಾಗಿದೆ. ಉತ್ತರ ಅಮೆರಿಕದಿಂದ ತಂದೆ ಜತೆಗೆ ಇಲ್ಲಿಗೆ ವಲಸೆ ಬಂದಿದೆ ಎಂಬುದು ವಿಜ್ಞಾನಿಗಳ ಅಭಿಪ್ರಾಯ. ನೀರಿನಲ್ಲಿದ್ದುಕೊಂಡೇ ಎರಡು ಜಾಗತಿಕ ಯುದ್ಧಗಳಿಗೂ ಇದು ಸಾಕ್ಷಿಯಾಗಿದೆ. 21 ಅಡಿ ಉದ್ದವಿರುವ ಇದು ಭೂಮಿಯಲ್ಲಿ ಬದುಕಿರುವ ಕಶೇರುಕಗಳಲ್ಲಿಯೇ ಅತೀ ಹಿರಿಯ ಜೀವಿ ಎಂದು ಪರಿಗಣಿಸಲಾಗಿದೆ. ನೀರಿನಲ್ಲಿ ನಿಧಾನವಾಗಿ ಈಜಾಡುವ ಈ ಶಾರ್ಕ್ಗಳು ಸಣ್ಣ ಮೀನು ಹಾಗೂ ಚಿಕ್ಕದಾದ ಶಾರ್ಕ್ಗಳನ್ನು ತಿಂದು ಜೀವಿಸುತ್ತವೆ.
Question 9 |
9.ಏಸ್ ಎಗನೆಸ್ಟ್ ಆಡ್ಸ್” (Ace against Odds) ಎಂಬ ಪುಸ್ತಕ ಯಾವ ಭಾರತೀಯ ಕ್ರೀಡಾಪಟುವಿನ ಆತ್ಮ ಚರಿತ್ರೆಯಾಗಿದೆ?
ಲಿಯಾಂಡರ್ ಪೇಸ್ | |
ಸೈನಾ ನೆಹ್ವಾಲ್ | |
ಸಾನಿಯಾ ಮಿರ್ಜಾ | |
ಜ್ವಾಲಾ ಗುಟ್ಟಾ |
ಏಸ್ ಎಗನೆಸ್ಟ್ ಆಡ್ಸ್” ಇದು ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರು ಆತ್ಮ ಚರಿತ್ರೆ.
Question 10 |
10.ಈ ಕೆಳಗಿನ ಯಾವ ಸಮಿತಿಯ ಶಿಫಾರಸ್ಸಿನ ಮೇರೆಗೆ ಭಾರತದಲ್ಲಿ ರೈಲ್ವೆ ಬಜೆಟ್ ಅನ್ನು ಕೇಂದ್ರ ಬಜೆಟ್ ನಿಂದ ಬೇರ್ಪಡಸಿ ಪ್ರತ್ಯೇಕವಾಗಿ ಮಂಡಿಸಲಾಗುತ್ತಿದೆ?
ಅಕ್-ವರ್ಥ್ ಸಮಿತಿ | |
ಥಾಮಸ್ ರೋ ಸಮಿತಿ | |
ದಾದಬಾಯಿ ನರೋಜಿ ಸಮಿತಿ | |
ಸರ್ ಹೆನ್ರಿ ಸಮಿತಿ |
ಭಾರತದಲ್ಲಿ ರೈಲ್ವೆ ಬಜೆಟ್ ಅನ್ನು 1924 ರಿಂದ ಕೇಂದ್ರ ಬಜೆಟ್ ನಿಂದ ಬೇರ್ಪಡಿಸಿ ಪ್ರತ್ಯೇಕವಾಗಿ ಮಂಡಿಸಲಾಗುತ್ತಿದೆ. ಬ್ರಿಟಿಷ್ ರೈಲ್ವೆ ಎಕನಾಮಿಷ್ಟ್ ಅಕ್-ವರ್ಥ್ ನೇತೃತ್ವದ 10 ಜನ ಸದಸ್ಯರನ್ನೊಳಗೊಂಡ ಸಮಿತಿ ರೈಲ್ವೆ ಬಜೆಟ್ ಅನ್ನು ಪ್ರತ್ಯೇಕ ಮಂಡಿಸುವಂತೆ ಬ್ರಿಟಿಷ್ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಅಂದಿನಿಂದ ಇಲ್ಲಿವರೆಗೂ ರೈಲ್ವೆ ಬಜೆಟ್ ಅನ್ನು ಪ್ರತ್ಯೇಕವಾಗಿ ಮಂಡಿಸಲಾಗುತ್ತಿದೆ. ಆದರೆ 92 ವರ್ಷಗಳ ಇತಿಹಾಸವಿರುವ ಭಾರತದ ರೈಲ್ವೇ ಬಜೆಟ್ಗೆ 2017ರಿಂದ ತೆರೆಬೀಳಲಿದೆ. ಹೌದು,ಮುಂದಿನ ಆರ್ಥಿಕ ವರ್ಷದಿಂದ ರೈಲ್ವೆ ಮುಂಗಡಪತ್ರವನ್ನು ಪ್ರತ್ಯೇಕವಾಗಿ ಮಂಡಿಸದೆ ಕೇಂದ್ರ ಬಜೆಟ್ನೊಂದಿಗೆ ಮಂಡನೆ ಮಾಡಲು ಆರ್ಥಿಕ ಸಚಿವಾಲಯ ಈಗಾಗಲೇ ಒಪ್ಪಿಗೆ ಸೂಚಿಸಿದೆ. ಇದಕ್ಕಾಗಿ ಸಚಿವಾಲಯ ಐದು ಸದಸ್ಯರನ್ನೊಳಗೊಂಡ ಸಮಿತಿಯನ್ನೂ ರಚಿಸಿದೆ. ರೈಲ್ವೆಮುಂಗಡಪತ್ರವನ್ನು ಸಾಮಾನ್ಯ ಮುಂಗಡಪತ್ರದೊಂದಿಗೆ ಸೇರಿಸುವಂತೆ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಕಳೆದ ಜುಲೈ ತಿಂಗಳಲ್ಲೇ ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ಪತ್ರ ಬರೆದಿದ್ದರು.
ಶುಭೋದಯ ಸರ್ ಧನ್ಯವಾದಗಳು.
ಶುಭೋದಯ ಸರ್ ಧನ್ಯವಾದಗಳು.
Good questions super sir
Comment
Thanks..