ವೀರ ಯೋಧ “ಹವಾಲ್ದಾರ್ ಹಂಗ್ಪನ್ ದಾದಾ” ಗೆ ಅಶೋಕ ಚಕ್ರ ಗೌರವ

ವೀರ ಯೋಧ ಹುತ್ಮಾತ ಹವಾಲ್ಡಾರ್ ಹಂಗ್ಪನ್ ದಾದಾ ರವರಿಗೆ ದೇಶದ ಅತ್ಯುನ್ನತ ಸೇನಾ ಗೌರವವಾದ ಅಶೋಕಚಕ್ರವನ್ನು ಮರಣೋತ್ತರವಾಗಿ ನೀಡಿ ಗೌರವಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆ ದಿನ ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಷ್ರಪತಿ ಪ್ರಣಬ್ ಮುಖರ್ಜಿ ಅವರು ಅಶೋಕ ಚಕ್ರ ಪ್ರಶಸ್ತಿಯನ್ನು ಮರಣೋತ್ತರವಾಗಿ ದಾದಾ ಅವರಿಗೆ ಪ್ರದಾನ ಮಾಡಲಿದ್ದಾರೆ. ಇದೇ ವೇಳೆ ಸೇನಾ ಪಡೆ ಮತ್ತು ಅರೆ ಸೇನಾ ಪಡೆಯ ಯೋಧರಿಗೆ 82 ಶೌರ್ಯ ಪ್ರಶಸ್ತಿಗಳನ್ನು ನೀಡಲಾಗುವುದು.

ದಾದಾ ತೋರಿದ ಶೌರ್ಯ:

  • ಮೇ 27 ರಂದು ಉತ್ತರ ಕಾಶ್ಮೀರದಲ್ಲಿ 13,000 ಅಡಿ ಎತ್ತರದ ಕ್ಷಿಷ್ಟಕರ ವಾತಾವರಣದಲ್ಲಿ ಕಾರ್ಯನಿರತರಾಗಿದ್ದ ದಾದಾ ಗಡಿ ನಿಯಂತ್ರಣ ರೇಖೆಯ ಬಳಿ ಭಯೋತ್ಪಾದಕರು ಒಳನುಸುಳುವದನ್ನು ತಡೆಯಲು ನಡೆಸಿದ ಗುಂಡಿನ ಕಾಳಗದಲ್ಲಿ ದಾದಾ ಹುತಾತ್ಮರಾಗಿದ್ದರು. ಸತತವಾಗಿ 24 ಗಂಟೆಗಳ ಕಾಲ ನಡೆದ ಕಾರ್ಯಚರಣೆಯಲ್ಲಿ ದಾದಾ ಮರಣ ಹೊಂದುವ ಮುನ್ನ ನಾಲ್ವರು ಭಯೋತ್ಪಾದಕರನ್ನು ಕೊಂದಿದ್ದರು. ಇವರ ಶೌರ್ಯವನ್ನು ಗುರುತಿಸಿದ ಸೇನಾ ಪಡೆ ಅಶೋಕ ಚಕ್ರ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು.

ದಾದಾ ಬಗ್ಗೆ:

  • 1997 ರಲ್ಲಿ ಸೇನೆಯ ಅಸ್ಸಾಂ ರೆಜಿಮೆಂಟ್ ಸೇರಿದ ದಾದಾ ಅವರನ್ನು, ದಂಗೆ ಹತ್ತಿಕ್ಕುವ ಸಲುವಾಗಿ ರಚಿಸಲಾಗಿರುವ 35 ರಾಷ್ಟ್ರೀಯ ರೈಪಲ್ಸ್ ಗೆ ನಿಯೋಜಿಸಲಾಗಿತ್ತು. ತಮ್ಮ ಅಪ್ರತಿಮ ಶೌರ್ಯದಿಂದ ಇವರು ತಂಡದಲ್ಲಿ ದಾದಾ ಎಂತಲೇ ಪ್ರಸಿದ್ದರಾಗಿದ್ದರು. ದಾದಾ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಲೆ.ಕರ್ಜನ್ ನಿರಂಜನ್ ಗೆ ಶೌರ್ಯ ಚಕ್ರ ಪ್ರಶಸ್ತಿ:

  • ಕಳೆದ ಜನವರಿಯಲ್ಲಿ ಪಂಜಾಬ್​ನ ಪಠಾಣ್​ಕೋಟ್ ವಾಯುನೆಲೆಯ ಮೇಲೆ ಉಗ್ರರು ದಾಳಿ ನಡೆಸಿದ್ದ ಸಂದರ್ಭದಲ್ಲಿ ಹುತಾತ್ಮರಾಗಿದ್ದ ಕನ್ನಡಿಗ ಯೋಧ ಲೆ.ಕರ್ನಲ್ ನಿರಂಜನ್ ಕುಮಾರ್ ಅವರಿಗೆ ಕೇಂದ್ರ ಸರ್ಕಾರ ‘ಶೌರ್ಯ ಚಕ್ರ’ ಪುರಸ್ಕಾರವನ್ನು ನೀಡಿದೆ. ಜನವರಿಯಲ್ಲಿ ಪಠಾಣ್ ಕೋಟ್ ವಾಯುನೆಲೆಯ ಮೇಲೆ ಪಾಕ್ ಉಗ್ರರು ದಾಳಿ ನಡೆಸಿದ ಸಂದರ್ಭದಲ್ಲಿ ನಿರಂಜನ್ ಮರಣಹೊಂದಿದ್ದರು. ಎನ್​ಎಸ್​ಜಿ ಕಮಾಂಡೋ ಪಡೆಯ ಬಾಂಬ್ ನಿಷ್ಕ್ರಿಯ ದಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನಿರಂಜನ್ ಕುಮಾರ್ ಕಾರ್ಯಾಚರಣೆ ಮುಗಿದ ನಂತರ ಮೃತ ಭಯೋತ್ಪಾದಕರನ್ನು ಪರೀಕ್ಷಿಸುತ್ತಿದ್ದಾಗ ಭಯೋತ್ಪಾದಕರು ಹೆಣೆದ ಸಂಚಿನ ಫಲವಾಗಿ ಗ್ರೆನೇಡ್ ಸ್ಪೊಟಗೊಂಡು ನಿರಂಜನ್ ಕುಮಾರ್ ತೀವ್ರವಾಗಿ ಗಾಯಗೊಂಡಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸಿದ ಕಾರಣ ಮರಣ ಹೊಂದಿದರು.

ಅಶೋಕ ಚಕ್ರದ ಬಗ್ಗೆ:

  • ಅಶೋಕ ಚಕ್ರವು ಭಾರತೀಯ ಸೇನೆ ತನ್ನ ಯೋಧರಿಗೆ ನೀಡುವ ಶೌರ್ಯ ಪ್ರಶಸ್ತಿಯಾಗಿದೆ. ಅಶೋಕ ಚಕ್ರವನ್ನು ಮೊಟ್ಟಮೊದಲಿಗೆ ಜನವರಿ 4, 1952 ರಲ್ಲಿ ಹುಟ್ಟುಹಾಕಲಾಯಿತು. ರಣರಂಗದ ಹೊರಗಡೆ ಯೋಧನೊಬ್ಬ ತನ್ನ ಅಪ್ರತಿಮ ಶೌರ್ಯ,ಸಾಹಸ ಮತ್ತು ತ್ಯಾಗಕ್ಕಾಗಿ ಪಡೆಯಬಹುದಾದ ಪದಕವಿದು. ಸಾಮಾನ್ಯವಾಗಿ ಶಾಂತಿ ಸಮಯದಲ್ಲಿ ಪ್ರದಾನ ಮಾಡುವ ಪರಮ ವೀರ ಚಕ್ರಕ್ಕೆ ಸಮಾಂತರವಾದ ಪ್ರಶಸ್ತಿ ಇದಾಗಿದೆ. ಕೀರ್ತಿ ಚಕ್ರ ಮತ್ತು ಶೌರ್ಯ ಚಕ್ರ ಪದಕಗಳು ಅಶೋಕ ಚಕ್ರದ ವಿಸ್ತರಿತಗೊಂಡ ಪ್ರಶಸ್ತಿಗಳಾಗಿವೆ.

ಖ್ಯಾತ ತಮಿಳು ಸಾಹಿತಿ ನ. ಮುತ್ತುಕುಮಾರು ನಿಧನ

ತಮಿಳು ಚಿತ್ರರಂಗದ ಖ್ಯಾತ ಸಾಹಿತಿ, ಎರಡು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ನ. ಮುತ್ತುಕುಮಾರ್ ಅವರು ನಿಧನರಾದರು. ಕೆಲವು ದಿನಗಳಿಂದ ಜಾಡೀಂಸ್ ನಿಂದ ಬಳಲುತ್ತಿದ್ದ ನ. ಮುತ್ತುಕುಮಾರ್ (41) ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.

ನ.ಮುತ್ತುಕುಮಾರ್ ಬಗ್ಗೆ:

  • ಜುಲೈ 12, 1975 ರಲ್ಲಿ ಕಾಂಚೀಪುರಂನ ಕನ್ನಿಕಾಪುರಂನಲ್ಲಿ ಜನಿಸಿದ ಮುತ್ತುಕುಮಾರ್ ನಾಲ್ಕು ವರ್ಷ ಇದ್ದಾಗಲೇ ತಾಯಿಯನ್ನು ಕಳೆದುಕೊಂಡಿದ್ದರು. ತಂದೆ ನಾಗರಾಜನ್ ಪುಸ್ತಕ ಪ್ರೇಮಿಯಾದ ಕಾರಣ ಅವರಂತೆಯೇ ಪುಸ್ತಕ ಪ್ರೀತಿಯನ್ನು ಬೆಳಸಿಕೊಂಡು ಪುಸ್ತಕದೊಂದಿಗೆ ಬೆಳೆದರು. ಮುತ್ತುಕುಮಾರ್ ಡಿಎಂಕೆ ಪಕ್ಷದ ಸಂಸ್ಥಾಪಕ ಸಿ.ಎನ್.ಅಣ್ಣದೊರೈ ಅವರ ದೂರದ ಸಂಬಂಧಿ ಆಗಿದ್ದರು.
  • ನಿರ್ದೇಶನಾಗುವ ಆಸೆಯೊಂದಿಗೆ ತಮಿಳು ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದ ಮುತ್ತುಕುಮಾರ್ ಅವರು, ಬಾಲು ಮಹೇಂದರ್ ಅವರೊಂದಿಗೆ ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದರು. ತದ ನಂತರ ಕೆಲ ಚಿತ್ರಗಳಿಗೆ ಸಂಭಾಷಣೆಕಾರರಾಗಿ ಕೆಲಸ ಮಾಡಿ, ವೀರ ನಡೈ ಚಿತ್ರಕ್ಕೆ ಸಾಹಿತ್ಯ ಬರೆಯುವ ಮೂಲಕ ಸಾಹಿತಿಯಾದರು.
  • ಇವರ ತಂಗ ಮೀಂಗಲ್ ಸಿನಿಮಾದ ಆನಂದ ಯಾಜೈ ಮತ್ತು ಸೈವಂ ಚಿತ್ರದ ಅಜಾಗೆ ಅಜಾಗು ಹಾಡಿನ ಉತ್ತಮ ಸಾಹಿತ್ಯಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ.
  • ಮುತ್ತುಕುಮಾರ್ ಅವರು ಈವರೆಗೂ 1000ಕ್ಕೂ ಹೆಚ್ಚು ಚಿತ್ರಗಳ ಹಾಡಿಗೆ ಸಾಹಿತಿ ಬರೆದಿದ್ದಾರೆ. ಸಿನಿಮಾ ಸಾಹಿತ್ಯ ಕ್ಷೇತ್ರಕ್ಕೆ ಇವರು ನೀಡಿದ ಕೊಡುಗೆಗಾಗಿ ಅನೇಕ ಪ್ರಶಸ್ತಿಗಳು ಸಂದಿವೆ. 2005 ರಲ್ಲಿ ಉತ್ತಮ ಸಾಹಿತ್ಯಕ್ಕಾಗಿ ತಮಿಳು ನಾಡು ರಾಜ್ಯ ಸಿನಿಮಾ ಪ್ರಶಸ್ತಿ, 2006 ರಲ್ಲಿ ಉತ್ತಮ ಸಾಹಿತ್ಯಕ್ಕೆ ಫಿಲ್ಮಿಫೇರ್ ಪ್ರಶಸ್ತಿ, ಸಿಮಾ ಪ್ರಶಸ್ತಿ, ವಿಜಯ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

ರೈಲ್ವೆ ಬಜೆಟ್ ಅನ್ನು ಕೇಂದ್ರ ಬಜೆಟ್ ನೊಂದಿಗೆ ವಿಲೀನಗೊಳಿಸಲು ಕೇಂದ್ರ ನಿರ್ಧಾರ

ಮುಂದಿನ ವರ್ಷದಿಂದ ಪ್ರತ್ಯೇಕ ರೈಲ್ವೆ ಬಜೆಟ್ ಮಂಡಿಸಿದೆ ಕೇಂದ್ರ ಬಜೆಟ್ ನೊಂದಿಗೆ ವಿಲೀನಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರತ್ಯೇಕ ರೈಲ್ವೆ ಬಜೆಟ್ ಮಂಡನೆ ಮಾಡುವುದು ಸೂಕ್ತವಲ್ಲವೆಂದು ಮತ್ತು ಕೇಂದ್ರ ಬಜೆಟ್ ನಲ್ಲಿ ಸೇರ್ಪಡೆಗೊಳಿಸಲು ಸಚಿವ ಸುರೇಶ್‍ಪ್ರಭು ಪ್ರಧಾನಿಯವರಿಗೆ ಮನವಿ ಮಾಡಿದ್ದರು. ರೈಲ್ವೆ ಬಜೆಟ್ ಅನ್ನು ಕೈಬಿಡುವ ಸಲುವಾಗಿ ಅಧ್ಯಯನ ನಡೆಸಿ ವರದಿ ನೀಡುವಂತೆ 5 ಮಂದಿ ಉನ್ನತಾಧಿಕಾರಿಗಳ ಸಮಿತಿ ರಚನೆ ಮಾಡಲಾಗಿತ್ತು.

ಹಿನ್ನಲೆ:

  • ಭಾರತದಲ್ಲಿ ರೈಲ್ವೆ ಬಜೆಟ್ ಅನ್ನು 1924 ರಿಂದ ಪ್ರತ್ಯೇಕವಾಗಿ ಮಂಡಿಸಲಾಗುತ್ತಿದೆ. ಬ್ರಿಟಿಷ್ ರೈಲ್ವೆ ಎಕನಾಮಿಷ್ಟ್ ಅಕ್-ವರ್ಥ್ ನೇತೃತ್ವದ 10 ಜನ ಸದಸ್ಯರನ್ನೊಳಗೊಂಡ ಸಮಿತಿ ರೈಲ್ವೆ ಬಜೆಟ್ ಅನ್ನು ಪ್ರತ್ಯೇಕ ಮಂಡಿಸುವಂತೆ ಬ್ರಿಟಿಷ್ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಅದರಂತೆ 1924ರಲ್ಲಿ ಮೊಟ್ಟ ಮೊದಲ ಬಾರಿಗೆ ರೈಲ್ವೆ ಬಜೆಟ್ ಮಂಡನೆಗೆ ಅಂದಿನ ಬ್ರಿಟಿಷ್ ಸರ್ಕಾರ ಸಮ್ಮತಿ ನೀಡಿತ್ತು.
  • ಭಾರತ ಸ್ವಾತಂತ್ರಗೊಂಡ ನಂತರವೂ ರೈಲ್ವೆ ಬಜೆಟ್ ಅನ್ನು ಸಾಮಾನ್ಯ ಬಜೆಟ್ ನಂತರವೇ ಮಂಡನೆ ಮಾಡುಲಾಗುತ್ತದೆ. ಇದು ಕಳೆದ 70 ವರ್ಷಗಳಿಂದಲೂ ಸಂಪ್ರದಾಯದಂತೆ ನಡೆದುಕೊಂಡು ಬಂದಿತ್ತು.
  • ಜಾನ್ ಮಥಾಯ್ ಅವರು ರೈಲ್ವೆ ಬಜೆಟ್ ಮಂಡಿಸಿದ ಮೊದಲಿಗರು.

ಒಲಂಪಿಕ್ಸ್ ಗೆ ವಿದಾಯ ಹೇಳಿದ ಚಿನ್ನದ ಮೀನು “ಮೈಕಲ್ ಪೆಲ್ಪ್”

ವಿಶ್ವವಿಖ್ಯಾತ ಈಜುಗಾರ ಅಮೆರಿಕದ ಮೈಕೆಲ್ ಫೆಲ್ಪ್ಸ್ ಒಲಿಂಪಿಕ್ಸ್ ಗೆ ವಿದಾಯ ಹೇಳಿದರು. ಒಲಂಪಿಕ್ಸ್ ನಲ್ಲಿ ಅತಿ ಹೆಚ್ಚು ಅಂದರೆ 23ನೇ ಚಿನ್ನದ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್ ಗೆ ವಿದ್ಯುಕ್ತ ವಿದಾಯ ಹೇಳಿದ್ದಾರೆ. ಪೆಲ್ಪ್ಸ್ ತಮ್ಮ ಯಶಸ್ವಿ ಒಲಂಪಿಕ್ಸ್ನಲ್ಲಿ 23 ಚಿನ್ನದ ಪದಕ, 3 ಬೆಳ್ಳಿ ಮತ್ತು ಎರಡು ಕಂಚಿನ ಪದಕ ಸಹಿತ ಒಟ್ಟು 28 ಪದಕಗಳನ್ನು ಗೆದ್ದಿದ್ದಾರೆ. ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಅತಿ ಹೆಚ್ಚು ಚಿನ್ನದ ಪದಕಗಳನ್ನು ಪಡೆದ ದಾಖಲೆ ಇವರದು. ರಿಯೋ ಒಲಂಪಿಕ್ಸ್ ಪೆಲ್ಪ್ಸ್ ಗೆ ಐದನೇ ಒಲಂಪಿಕ್ಸ್.

ಮೈಕಲ್ ಪೆಲ್ಪ್ಸ್ ಬಗ್ಗೆ:

  • ಫೆಲ್ಪ್ಸ್ ಜನಸಿದ್ದು ಜೂನ್ 30, 1985 ರಲ್ಲಿ. ಅಮೆರಿಕದ ಬಾಲ್ಟಿಮೋರ್ ಇವರ ಹುಟ್ಟೂರು. ಇವರ ತಾಯಿ ಶಾಲಾ ಶಿಕ್ಷಕಿ. ತಂದೆ ಭದ್ರತಾ ಅಧಿಕಾರಿ. ಹರ್ನಿಯಾ ಸಮಸ್ಯೆ ಜೊತೆಗೆ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಇವರನ್ನು ಶಾಲೆಯಿಂದ ಹೊರಹಾಕಲಾಗಿತ್ತು. ಆಗ ಅಕ್ಕಂದಿರು ಈಜು ಕಲಿಯಲು ಅಕಾಡೆಮಿಯೊಂದಕ್ಕೆ ಸೇರಿಸಿದರು.
  • ಪೆಲ್ಪ್ಸ್ ತಮ್ಮ 15ನೇ ವಯಸ್ಸಿನಲ್ಲಿ ಸಿಡ್ನಿ ಒಲಿಂಪಿಕ್ಸ್ಗೆ (2000) ಅರ್ಹತೆ ಗಿಟ್ಟಿಸಿದರು. 200 ಮೀಟರ್ ಬಟರ್ಪ್ಲೈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಆದರೆ ಪದಕ ಗೆಲ್ಲುವಲ್ಲಿ ವಿಫಲರಾದರು.
  • 2004ರಲ್ಲಿ ಅಥೆನ್ಸ್ ನಲ್ಲಿ ನಡೆದ ಒಲಿಂಪಿಕ್ಸ್ನಲ್ಲಿ ಪ್ರಥಮ ಬಾರಿಗೆ ಚಿನ್ನ ಗೆದ್ದಾಗ ಅವರಿಗೆ 18 ವರ್ಷ.
  • 2008ರ ಬೀಜಿಂಗ್ ಒಲಿಂಪಿಕ್ಸ್ನಲ್ಲಿ 8 ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದರು. ಆ ಮೂಲಕ ಅಮೆರಿಕಾದವರೇ ಆದ ಮಾರ್ಕ್ ಸ್ಪಿಟ್ಜ್ (ಮ್ಯೂನಿಕ್ ಒಲಿಂಪಿಕ್ಸ್; 7 ಚಿನ್ನ) ದಾಖಲೆ ಅಳಿಸಿ ಹಾಕಿದ್ದರು.
  • ತದ ನಂತರ 2012ರಲ್ಲಿ ಲಂಡನ್ ಒಲಿಂಪಿಕ್ಸ್ನಲ್ಲಿ ನಾಲ್ಕು ಸ್ವರ್ಣ ಪದಕ ಜಯಿಸಿದ್ದರು. ಆ ಸಂದರ್ಭದಲ್ಲೇ ವಿದಾಯ ಹೇಳುವ ತೀರ್ಮಾನ ಕೈಗೊಂಡಿದ್ದರು. ಆದರೆ ಮನ ಬದಲಿಸುವ ಮೂಲಕ 2016 ಒಲಂಪಿಕ್ಸ್ ನಲ್ಲಿ ಭಾಗವಹಿಸಲು ನಿರ್ಧರಿಸಿದ್ದರು.
  • 2016 ರಿಯೋ ಒಲಂಪಿಕ್ಸ್ ನಲ್ಲಿ ಚಿನ್ನ ಗೆಲ್ಲುವ ಮೂಲಕ ಸತತವಾಗಿ ನಾಲ್ಕು ಒಲಂಪಿಕ್ಸ್ ನಲ್ಲಿ ಚಿನ್ನ ಗೆದ್ದ ದಾಖಲೆಯನ್ನು ಅವರು ನಿರ್ಮಿಸಿದ್ದಾರೆ.

2 Thoughts to “ಪ್ರಚಲಿತ ವಿದ್ಯಮಾನಗಳು-ಆಗಸ್ಟ್ 14, 2016”

Leave a Comment

This site uses Akismet to reduce spam. Learn how your comment data is processed.