ಆತ್ಮೀಯ ಓದುಗರೇ,

ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ಕಾರ್ಯದರ್ಶಿ ಹುದ್ದೆಗೆ ನೇಮಕಾತಿ ಅಧಿಸೂಚನೆಯನ್ನು ತಾಂತ್ರಿಕ ಕಾರಣಗಳಿಂದಾಗಿ ತಾತ್ಕಲಿಕವಾಗಿ ತಡೆಹಿಡಿಯಲಾಗಿದ್ದು, ಕೆಲವು ದಿನಗಳಲ್ಲಿ ಅಧಿಸೂಚನೆ ಪ್ರಕಟಣೆಗೊಳಲ್ಲಿದೆ. ಪಿಡಿಓ ಮತ್ತು ಕಾರ್ಯದರ್ಶಿ ಸೇರಿ ಸುಮಾರು 1400ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವುದೆಂದು ತಿಳಿದು ಬಂದಿದೆ. ಕನ್ನಡದ ಮೊದಲ ಅಂತರ್ಜಾಲ ಆಧಾರಿತ ಸ್ಪರ್ಧಾತ್ಮಕ ಪರೀಕ್ಷ ತಾಣವಾಗಿರುವ ಕರುನಾಡು ಎಗ್ಸಾಂ ತಂಡ ಪಿಡಿಓ ಆಕಾಂಕ್ಷಿಗಳಿಗೆ ಅತ್ಯುತ್ತಮ ಗುಣಮಟ್ಟದ ಹಾಗೂ ಪರೀಕ್ಷೆಯಲ್ಲಿ ನಿರೀಕ್ಷಿಸಬಹುದಾದ ಪ್ರಶ್ನೋತ್ತರಗಳನ್ನು ಇಂದಿನಿಂದ ವೆಬ್ ಸೈಟ್ ನಲ್ಲಿ ಪ್ರಕಟಗೊಳ್ಳುಸುತ್ತಿದೆ. ಈ ಪ್ರಶ್ನೆಗಳನ್ನು ನುರಿತ ಪಿಡಿಓಗಳ ಮೂಲಕ ಸಿದ್ದಪಡಿಸಲಾಗುತ್ತಿದ್ದು, ಕಳೆದ ಎರಡು ನೇಮಕಾತಿ ಆಧಾರದ ಮೇಲೆ ಸಿದ್ದಪಡಿಸಲಾಗುತ್ತಿದೆ.   ಮೂಲಕಗಳ ಪ್ರಕಾರ ಈ ಬಾರಿ ಪ್ರಶ್ನೆಪತ್ರಿಕೆಯ ವಿಧಾನ ಕಳೆದ ಬಾರಿಗಿಂತ ಭಿನ್ನವಿರಲ್ಲಿದೆ ಎಂದು ತಿಳಿದು ಬಂದಿದೆ ಆದರೆ ಅಧಿಸೂಚನೆ ಬಂದ ಮೇಲಷ್ಟೆ ಖಚಿತವಾಗಲಿದೆ. ಸಾಮಾನ್ಯವಾಗಿ ಪಿಡಿಓ/ಕಾರ್ಯದರ್ಶಿ ಸ್ಪರ್ಧಾತ್ಮಕ ಪರೀಕ್ಷೆಗೆ ಅಕಾಂಕ್ಷಿಗಳು ಮೊದಲು ಓದುವುದು ಕರ್ನಾಟಕ ಪಂಚಾಯತ್ ರಾಜ್ ಕಾಯಿದೆ-1993. ಆದರೆ ಕಳೆದ ಎರಡು ಬಾರಿ ಅತಿ ಹೆಚ್ಚು ಪ್ರಶ್ನೆಗಳು ಕೇಳಿರುವುದು ಪ್ರಸ್ತುತ ಚಾಲ್ತಿಯಲ್ಲಿರುವ ಯೋಜನೆಗಳನ್ನ ಆಧಾರಿಸಿ ಕನಿಷ್ಠ ಜ್ಞಾನವನ್ನ ತಿಳಿಯುವುದಾಗಿ. ಈ ಹಿನ್ನಲೆಯಲ್ಲಿ ಕರುನಾಡುಎಗ್ಸಾಂ ತಂಡ ತನ್ನ ಓದುಗರಿಗೆ ಈ ಪ್ರಶೋತ್ತರಗಳನ್ನು ನೀಡಲು ನಿರ್ಧರಿಸಿದೆ. ಅನೇಕ ಪ್ರಶ್ನೆಗಳನ್ನ ನಾವು ಎರಡು ಅಥವಾ ಮೂರು ಸ್ಟೇಟ್ ಮೆಂಟ್ ಆಧಾರಿಸಿ ಪ್ರಕಟಿಸುತ್ತಿದ್ದೇವೆ, ಇದರ ಉದ್ದೇಶ ಒಂದೇ ಪ್ರಶ್ನೆಯಲ್ಲಿ ಪೂರ್ಣ ಮಾಹಿತಿಯನ್ನು ನೀಡುವುದಾಗಿರುತ್ತದೆ. ಓದುಗರು ದಯವಿಟ್ಟು ಉತ್ತರದ ಕೆಳಗೆ ನೀಡಿರುವ ವಿವರಣೆಯನ್ನು ಸಂಪೂರ್ಣ ಓದಿ ಅರ್ಥೈಸಿಕೊಳ್ಳಲು ಕೋರಿದೆ. ಇಲ್ಲಿ ಪ್ರಕಟವಾಗುವ ಯಾವುದೇ ಪ್ರಶ್ನೆ ಹಾಗೂ ಉತ್ತರಗಳನ್ನು ಮರು ಪ್ರಕಟಿಸುವುದು, ವಿವಿಧ ಗ್ರೂಪ್ಸ್ ಗಳಲ್ಲಿ ಹಾಕದಂತೆ ಕೋರಿದೆ.

ಧನ್ಯವಾದಗಳು

ಇಂತಿ

ಕರುನಾಡುಎಗ್ಸಾಂ ತಂಡ

ಗ್ರಾ ಪಂ ಅ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಕ್ವಿಜ್-1

Question 1

1.ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MGNREGA)ಯಡಿ ಕೂಲಿ ದರವನ್ನು ನಿಗದಿ ಮಾಡುವವರು ಯಾರು?

A
ಕೇಂದ್ರ ಸರ್ಕಾರ
B
ರಾಜ್ಯ ಸರ್ಕಾರ
C
ಜಿಲ್ಲಾ ಪಂಚಾಯತಿ
D
ಆಯಾ ರಾಜ್ಯಗಳ ಗ್ರಾಮೀಣಭಿವೃದ್ದಿ ಸಚಿವಾಲಯ
Question 1 Explanation: 
ಕೇಂದ್ರ ಸರ್ಕಾರ:

ಉದ್ಯೋಗ ಖಾತರಿ ಯೋಜನೆಯ ಕೂಲಿ ದರವನ್ನು ಕೇಂದ್ರ ಸರ್ಕಾರದ {ಗ್ರಾಮೀಣಾಭಿವೃದ್ಧಿ ಸಚಿವಾಲಯ} ನಿಗದಿಪಡಿಸುವುದು. MGNREGA ಕಾಯಿದೆ-2005 ರ ಪ್ರಕರಣ 6 (1) ರಲ್ಲಿ ಕನಿಷ್ಠ ವೇತನ ಅಧಿನಿಯಮ-1948 (1948 ರ 11) ರಲ್ಲಿ ಏನೇ ಒಳಗೊಂಡಿದ್ದರೂ, ಕೇಂದ್ರ ಸರ್ಕಾರವು, ಈ ಅಧಿನಿಯಮದ ಉದ್ದೇಶಗಳಿಗಾಗಿ ನಿರ್ದಿಷ್ಟ ಕೂಲಿ ದರವನ್ನು ಅಧಿಸೂಚನೆ ಮೂಲಕ ನಿರ್ದಿಷ್ಟಪಡಿಸಬಹುದು. ಯೋಜನೆಯಡಿ ಕೂಲಿ ದರವು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ಕರ್ನಾಟಕದಲ್ಲಿ ಪತ್ರಿ ದಿನಕ್ಕೆ ರೂ 224 ನಿಗದಿಯಾಗಿದ್ದರೆ, ಆಂಧ್ರಪ್ರದೇಶದಲ್ಲಿ ರೂ 194 ಇದೆ. ಇದಕ್ಕೆ ಮುಖ್ಯ ಕಾರಣವೆಂದರೆ ಉದ್ಯೋಗ ಖಾತರಿ ಪ್ರತಿ ರಾಜ್ಯಕ್ಕೆ ಆಯಾ ರಾಜ್ಯ ಕೃಷಿ ಕಾರ್ಮಿಕರ (ಸಿಪಿಐ-ಎಲ್) ಗ್ರಾಹಕರ ಬೆಲೆ ಸೂಚ್ಯಂಕ ಆಧಾರಿಸಿ ಪರಿಸ್ಕರಿಸಲಾಗುತ್ತದೆ.

Question 2

2.ಈ ಕೆಳಕಂಡ ವಸತಿ ಯೋಜನೆಗಳಲ್ಲಿ ಕೇಂದ್ರ ಪುರಸ್ಕೃತ ಯೋಜನೆ/ಯೋಜನೆಗಳು ಯಾವುವು?

I) ಬಸವ ವಸತಿ ಯೋಜನೆ

II) ಡಾ.ಬಿ.ಆರ್.ಅಂಬೇಡ್ಕರ್ ಯೋಜನೆ

III) ಇಂದಿರಾ ಆವಾಸ್ ಯೋಜನೆ

ಈ ಕೆಳಗೆ ಕೊಟ್ಟಿರುವ ಕೋಡ್ ಮೂಲಕ ಸರಿಯಾದ ಉತ್ತರವನ್ನು ಆರಿಸಿ:

A
II & III ಮಾತ್ರ
B
II ಮಾತ್ರ
C
III ಮಾತ್ರ
D
ಮೇಲಿನ ಎಲ್ಲವೂ
Question 2 Explanation: 
III ಮಾತ್ರ:

ಇಂದಿರಾ ಆವಾಸ್ ಯೋಜನೆ ಕೇಂದ್ರ ಪುರಸ್ಕೃತ ಯೋಜನೆಯಾಗಿದೆ. ಬಸವ ವಸತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಯೋಜನೆ ರಾಜ್ಯ ಸರ್ಕಾರದ ಯೋಜನೆಗಳಾಗಿದ್ದು, ಈ ಎರಡು ವಸತಿ ಯೋಜನೆಗಳಡಿ ವಸತಿ ನಿರ್ಮಾಣಕ್ಕೆ ತಗಲುವ ವೆಚ್ಚವನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರವೇ ಭರಿಸುತ್ತದೆ. ಗ್ರಾಮೀಣ ಆಶ್ರಯ ಯೋಜನೆಯನ್ನು ಬಸವ ವಸತಿ ಯೋಜನೆಯೆಂದು ಮರುನಾಮಕರಣ ಮಾಡಿ 2010-11 ರಿಂದ ಅನುಷ್ಟಾನಗೊಳಿಸಲಾಗುತ್ತಿದೆ.

Question 3

3.ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?

I) ನಿಗಮವು ಕಂಪನಿ ಕಾಯ್ದೆ ಪ್ರಕಾರ ನೊಂದಾಯಿತ ಸರ್ಕಾರಿ ಸ್ವಾಮ್ಯದ ಒಂದು ಉದ್ದಿಮೆಯಾಗಿದೆ.

II) ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರಿಗಾಗಿ ವಸತಿ ಸೌಲಭ್ಯವನ್ನು ಕಲ್ಪಿಸುವುದಕ್ಕಾಗಿ ಸ್ಥಾಪಿಸಲಾಗಿದೆ

III) ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿಯನ್ನು 2013-14 ರಲ್ಲಿ ಪಡೆದಿದೆ

IV) ಈ ನಿಗಮವನ್ನು 2002 ರಲ್ಲಿ ಸ್ಥಾಪಿಸಲಾಗಿದೆ.

ಈ ಕೆಳಗಿನ ಕೋಡ್ ಗಳಿಂದ ಸರಿಯಾದ ಉತ್ತರವನ್ನು ಗುರುತಿಸಿ.

A
I, II & IV
B
II, III & IV
C
I, II & III
D
I, II, III & IV
Question 3 Explanation: 
I, II & III:

ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮವು ಕಂಪನಿ ಕಾಯ್ದೆ ಪ್ರಕಾರ ನೊಂದಾಯಿತ ಸರ್ಕಾರಿ ಸ್ವಾಮ್ಯದ ಒಂದು ಉದ್ದಿಮೆಯಾಗಿದ್ದು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದವರಿಗಾಗಿ ವಸತಿ ಸೌಲಭ್ಯವನ್ನು ಕಲ್ಪಿಸುವುದಕ್ಕಾಗಿ 2000ನೇ ಇಸ್ವಿಯಲ್ಲಿ ಸ್ಥಾಪನೆಗೊಂಡಿದೆ. ಇದು ರೂ.10 ಕೋಟಿಗಳ ಅಧಿಕೃತ ಷೇರು ಬಂಡವಾಳ (Authorised Capital)ಹೊಂದಿದ್ದು, ರೂ.3 ಕೋಟಿಗಳ ಪಾವತಿಯಾದ ಷೇರು ಬಂಡವಾಳವನ್ನು (Paid up Capital)ಹೊಂದಿರುತ್ತದೆ. ಜಿಪಿಎಸ್ ಮೊಬೈಲ್ ಆಧಾರಿತ ಮತ್ತು ಆನ್ಲೈನ್ ಅನುದಾನ ಬಿಡುಗಡೆಯ ಸಿಸ್ಟಮ್ ಗೆ ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿ 2013-2014 ಪಡೆದುಕೊಂಡಿದೆ.

Question 4

4.ಗ್ರಾಮ ಪಂಚಾಯತ್ ಮಟ್ಟದಲ್ಲಿ ನಿರ್ಮಿಸಲಾಗುವ ಜೀವವೈವಿದ್ಯ ನಿರ್ವಹಣಾ ಸಮಿತಿ (Biodiversity Management Committee)ಯ ಅಧ್ಯಕ್ಷರು ಯಾರು ಆಗಿರುತ್ತಾರೆ?

A
ಗ್ರಾಮ ಪಂಚಾಯತಿ ಅಧ್ಯಕ್ಷರು
B
ಗ್ರಾಮ ಪಂಚಾಯತಿ ಉಪಾಧ್ಯಕ್ಷರು
C
ಪಂಚಾಯತ್ ಅಭಿವೃದ್ದಿ ಅಧಿಕಾರಿ
D
ಗ್ರಾಮ ಪಂಚಾಯತಿ ನೋಡಲ್ ಅಧಿಕಾರಿ
Question 4 Explanation: 
ಗ್ರಾಮ ಪಂಚಾಯತಿ ಅಧ್ಯಕ್ಷರು:

ಜೈವಿಕ ವೈವಿಧ್ಯ ಅಧಿನಿಯಮ 2002 ರ ನಿಯಮ 41 (1), ಹಾಗೂ ಜೈವಿಕ ವೈವಿಧ್ಯ ನಿಯಮಗಳು 2004 ರ ನಿಯಮ 22 ಹಾಗೂ ಕರ್ನಾಟಕ ಜೈವಿಕವೈವಿಧ್ಯ ನಿಯಮಗಳು 2005ರ ನಿಯಮ 21ರ ಪ್ರಕಾರ ಪ್ರತಿ ಗ್ರಾಮಪಂಚಾಯತಿಯಲ್ಲಿ ಜೀವವೈವಿಧ್ಯ ಸಮಿತಿಯನ್ನು ರಚಿಸುವುದು ಕಡ್ಡಾಯವಾಗಿದೆ. ಜೀವವೈವಿಧ್ಯ ಸಮಿತಿಯು 7 ಜನರನ್ನು ಒಳಗೊಂಡಿದ್ದು, ಗ್ರಾಮ ಪಂಚಾಯತಿಯ ಅಧ್ಯಕ್ಷರು ಇದರ ಅಧ್ಯಕ್ಷರಾಗಿರುತ್ತಾರೆ. ಪಿಡಿಓ ಈ ಸಮಿತಿಯ ಕಾರ್ಯದರ್ಶಿ ಆಗಿರುತ್ತಾರೆ. ಜೀವವೈವಿಧ್ಯ ಸಮಿತಿಯ ಜವಾಬ್ದಾರಿಗಳನ್ನು ಇಲ್ಲಿ ಓದಬಹುದು: http://www.kbb.kar.nic.in/BMC/GP-BMC-KAN.pdf

Question 5

5.ಯಾವುದೇ ಒಂದು ನಿರ್ದಿಷ್ಟ ಪ್ರದೇಶವನ್ನು ಗ್ರಾಮ ಪಂಚಾಯತಿ ಎಂದು ಘೋಷಿಸುವ ಅಧಿಕಾರ ಯಾರಿಗಿದೆ?

A

ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ

B

ಸರ್ಕಾರದ ಆದೇಶಕ್ಕೊಳಪಟ್ಟು ಜಿಲ್ಲಾಧಿಕಾರಿ

C
ರಾಜ್ಯ ಪಾಲರು
D

ಗ್ರಾಮೀಣಭಿವೃದ್ದಿ ಇಲಾಖೆಯ ಪ್ರಧಾನ ಕಾರ್ಯದರ್ಶಿ

Question 5 Explanation: 
ಸರ್ಕಾರದ ಆದೇಶಕ್ಕೊಳಪಟ್ಟು ಜಿಲ್ಲಾಧಿಕಾರಿ:

ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ,1993 ರ ಪ್ರಕರಣ 4 ರಡಿ ಸರ್ಕಾರದ ಸಾಮಾನ್ಯ ಅಥವಾ ವಿಶೇಷ ಆದೇಶಗಳಿಗೆ ಒಳಪಟ್ಟು ಜಿಲ್ಲಾಧಿಕಾರಿಗಳು ಐದು ಸಾವಿರಕ್ಕಿಂತ ಕಡಿಮೆ ಇಲ್ಲದ ಮತ್ತು ಏಳು ಸಾವಿರಕ್ಕಿಂತ ಹೆಚ್ಚಿಗೆ ಇಲ್ಲದೆ ಜನಸಂಖ್ಯೆಯುಳ್ಳ ಒಂದು ಗ್ರಾಮವನ್ನು ಅಥವಾ ಗ್ರಾಮಗಳ ಗುಂಪಿರುವ ಯಾವುದೇ ಪ್ರದೇಶವನ್ನು ಪಂಚಾಯಿತಿ ಎಂದು ಘೋಷಿಸುವುದು.

Question 6

6.ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ,1993 ರ ಯಾವ ಪ್ರಕರಣದಡಿ ಜೀತಗಾರಿಕೆ ಸಂಬಂಧ ವರದಿ ಸಲ್ಲಿಸುವುದು ಗ್ರಾಮ ಪಂಚಾಯತಿಯ ಕರ್ತವ್ಯವಾಗಿರುತ್ತದೆ?

A
ಪ್ರಕರಣ 61-ಎ
B
ಪ್ರಕರಣ 58-ಎ
C
ಪ್ರಕರಣ 71
D
ಪ್ರಕರಣ 70
Question 6 Explanation: 
ಪ್ರಕರಣ 58-ಎ:

ಪ್ರಕರಣ 58-ಎ ಅನ್ವಯ ಜೀತಗಾರಿಕೆ ಸಂಬಂಧ ವರದಿ ಸಲ್ಲಿಸುವುದು ಗ್ರಾಮ ಪಂಚಾಯತಿಯ ಕರ್ತವ್ಯವಾಗಿರುತ್ತದೆ. ಪಂಚಾಯತಿ ಪ್ರದೇಶದಲ್ಲಿ ಜೀತಗಾರಿಕೆ ಪದ್ದತಿ ಪ್ರವರ್ತನಗೊಂಡ ಯಾವುದೇ ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿಗಳು ಅಥವಾ ಸಂಬಂಧಿಸಿದ ಇತರೆ ಪ್ರಾಧಿಕಾರಕ್ಕೆ ವರದಿ ಸಲ್ಲಿಸುವುದು ಗ್ರಾಮ ಪಂಚಾಯತಿಯ ಕರ್ತವ್ಯವಾಗಿರುತ್ತದೆ.

Question 7

7.ಗ್ರಾಮ ಪಂಚಾಯತಿಯ ಅಧ್ಯಕ್ಷರು ಈ ಕೆಳಗಿನ ಯಾವ ಸ್ಥಾಯಿ ಸಮಿತಿಗಳಿಗೆ ಸಭಾಪತಿ ಮತ್ತು ಪದನಿಮಿತ್ತ ಸದಸ್ಯರಾಗಿರುತ್ತಾರೆ?

I) ಉತ್ಪಾದನ ಸಮಿತಿ

II) ಸಾಮಾಜಿಕ ನ್ಯಾಯ ಸಮಿತಿ

III) ಸೌಕರ್ಯಗಳ ಸಮಿತಿ

ಕೆಳಗೆ ಕೊಟ್ಟಿರುವ ಕೋಡ್ ಮೂಲಕ ಸರಿಯಾದ ಉತ್ತರವನ್ನು ಗುರುತಿಸಿ:

A
I ಮಾತ್ರ
B
I & III ಮಾತ್ರ
C
I & II ಮಾತ್ರ
D
I, II & III
Question 7 Explanation: 
I & III ಮಾತ್ರ:

ಕ.ಪಂ.ರಾಜ್ ಅಧಿನಿಯಮ 1993 ರ ಪ್ರಕರಣ 61 ರ ಪ್ರಕಾರ ಪ್ರತಿಯೊಂದ ಗ್ರಾಮ ಪಂಚಾಯತಿಯು, ಚುನಾವಣೆ ಮೂಲಕ ಉತ್ಪಾದನ ಸಮಿತಿ, ಸಾಮಾಜಿಕ ನ್ಯಾಯ ಸಮಿತಿ ಮತ್ತು ಸೌಕರ್ಯಗಳ ಸಮಿತಿಯನ್ನು ಕಡ್ಡಾಯವಾಗಿ ರಚಿಸಬೇಕು. ಪ್ರತಿಯೊಂದು ಸಮಿತಿಯು ಸಂದರ್ಭಾನುಸಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸೇರಿದಂತೆ ಕನಿಷ್ಠ ಮೂರು ಮತ್ತು ಐದಕ್ಕಿಂತ ಹೆಚ್ಚಿಲ್ಲದಷ್ಟು ಸದಸ್ಯರನ್ನು ಹೊಂದಿರಬೇಕು. ಗ್ರಾಮ ಪಂಚಾಯತಿ ಅಧ್ಯಕ್ಷರು ಉತ್ಪಾದನ ಸಮಿತಿ ಮತ್ತು ಸೌಕರ್ಯಗಳ ಸಮಿತಿಯ ಸಭಾಪತಿ ಮತ್ತು ಪದನಿಮಿತ್ತ ಸದಸ್ಯರಾಗಿರುತ್ತಾರೆ. ಉಪಾಧ್ಯಕ್ಷನು ಸಾಮಾಜಿಕ ನ್ಯಾಯ ಸಮಿತಿಯ ಸಭಾಪತಿ ಮತ್ತು ಪದನಿಮಿತ್ತ ಸದಸ್ಯರಾಗಿರುತ್ತಾರೆ. ಈ ಸಮಿತಿಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಪಂಚಾಯತ್ ರಾಜ್ ಅಧಿನಿಯಮ,1993 ರ 61 ಪ್ರಕರಣವನ್ನು ನೋಡಬಹುದು.

Question 8

8.ಸ್ವಚ್ಚ ಭಾರತ ಯೋಜನೆ ಅನುಷ್ಟಾನಕ್ಕಾಗಿ ತೆರಿಗೆ ವಿಧಿಸಲ್ಪಡುವ ಸೇವೆಗಳ ಮೇಲೆ ವಿಧಿಸಲಾಗುತ್ತಿರುವ ಸ್ವಚ್ಚ ಭಾರತ ಸೆಸ್ ಎಷ್ಟು?

A
0.3%
B
0.5%
C
1.0%
D
2.0%
Question 8 Explanation: 
0.5%:

ಸ್ವಚ್ಚ ಭಾರತ ಯೋಜನೆಯ ಅನುಷ್ಟಾನಕ್ಕಾಗಿ ಕೇಂದ್ರ ಸರ್ಕಾರ ಶೇ.0.5% ಸೆಸ್ ಅನ್ನು ವಿಧಿಸುತ್ತಿದೆ.

Question 9

9.ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಈ ಕೆಳಕಂಡ ಯಾರಿಗೆ ಕೆಲಸ ನೀಡಲು ಅವಕಾಶವಿದೆ?

A

ಬಡವರಿಗೆ ಮಾತ್ರ

B

ಗ್ರಾಮೀಣ ಭಾಗದ ಎಸ್.ಸಿ/ಎಸ್.ಟಿ/ಬಿಪಿಎಲ್ ವರ್ಗದವರಿಗೆ ಮಾತ್ರ

C

ಗ್ರಾಮೀಣ ಭಾಗದಲ್ಲಿ ವಾಸವಿರುವ ಎಲ್ಲಾ ವಯಸ್ಕರಿಗೂ

D

ರಾಜ್ಯದಲ್ಲಿ ವಾಸವಿರುವ ಎಲ್ಲಾ ವಯಸ್ಕರಿಗೂ

Question 9 Explanation: 
ಗ್ರಾಮೀಣ ಭಾಗದಲ್ಲಿ ವಾಸವಿರುವ ಎಲ್ಲಾ ವಯಸ್ಕರಿಗೂ:

ಗ್ರಾಮೀಣ ಜನರು ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಡೆಗಟ್ಟಿ ಅಕುಶಲ ದೈಹಿಕ ಕೆಲಸ ಬಯಸುವ ವಯಸ್ಕ ಸದಸ್ಯರ ಪ್ರತಿ ಕುಟುಂಬಕ್ಕೆ 1 ಆರ್ಥಿಕ ವರ್ಷದಲ್ಲಿ (ಏಪ್ರಿಲ್ 1-ಮಾರ್ಚ್ 31) 100 ದಿನಗಳ ಉದ್ಯೋಗಾವಕಾಶವನ್ನು ಕಲ್ಪಿಸಿ ಸ್ಥಳೀಯವಾಗಿ ಆಸ್ಥಿಗಳನ್ನು ಸೃಜಿಸುವ ಸಲುವಾಗಿ ಈ ಯೋಜನೆಯನ್ನು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಜಾರಿಗೆ ತಂದಿದೆ.

Question 10

10.ಸ್ವಚ್ಚ ಭಾರತ ಅಭಿಯಾನದಡಿ ಯಾವ ವರ್ಷದೊಳಗೆ ಭಾರತವನ್ನು ಸಂಪೂರ್ಣ ಬಯಲು ಮುಕ್ತ (Open Defecation Free) ದೇಶವನ್ನಾಗಿ ಮಾಡುವ ಗುರಿ ಹೊಂದಲಾಗಿದೆ?

A
2018
B
2019
C
2020
D
2022
Question 10 Explanation: 
2019:

ಸ್ವಚ್ಚ ಭಾರತ ಯೋಜನೆಗೆ ಪ್ರಧಾನಿ ಮೋದಿ ಅವರು ಅಕ್ಟೋಬರ್ 2, 2014 ರಂದು ಚಾಲನೆ ನೀಡಿದರು. ಈ ಹಿಂದೆ ಚಾಲ್ತಿಯಲ್ಲಿದ್ದ ನಿರ್ಮಲ ಗ್ರಾಮ ಪುರಸ್ಕಾರವನ್ನು ಪುನರ್ಶ್ಚೇತನಗೊಳಿಸಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ದೇಶದ ಶೌಚಾಲಯ ರಹಿತ ಎಲ್ಲಾ ಕುಟುಂಬಗಳಿಗೆ ಶೌಚಾಲಯವನ್ನು ಕಟ್ಟಿಸಿ ಬಯಲು ಮಲ ವಿಸರ್ಜನೆ ಮುಕ್ತವನ್ನಾಗಿ ಮಾಡುವ ಮಹತ್ವದ ಗುರಿ ಹೊಂದಲಾಗಿದೆ. 2019ರಲ್ಲಿ ಮಹಾತ್ಮ ಗಾಂಧಿ ರವರ 150ನೇ ಜನ್ಮದಿನಾಚರಣೆ ಆಚರಿಸಲಾಗುವ ಕಾರಣ 2019ಕ್ಕೆ ಗುರಿ ನೀಡಲಾಗಿದೆ.

There are 10 questions to complete.

ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

19 Thoughts to “ಗ್ರಾ ಪಂ ಅ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಕ್ವಿಜ್-1”

  1. It is uusefull to Pdo candidates thank u

  2. anjaneya

    Nim e prayatnakke thumbs dhanyvadagalu …….namaskara namaskara….

  3. Adireddy

    Fantastic questions and answers

  4. ಸುಭಾಸ್. ಜೋಗಿ

    ಕಾಲೇಜ್ ಕ್ಲಾಸ್ ರೂಮಿನಲ್ಲಿ ಕುಳಿತು ಕೇಳಿದ ಹಾಗಾಯಿತು ಸೂಪರ್
    ಇನ್ಫಾರ್ಮೇಶನ್ ಸರ್ ಧನ್ಯವಾದಗಳು ನಮಸ್ತೆ ಜಿ

  5. Vishwa Sasimath

    How to download this information sir

  6. HAJARATALI

    Super sir thank u

  7. suchinthana

    these questions are very useful for PDO thank you very much. karunadu team by putting your true effort you are reaching kannada medium student’s expectations.

  8. Bagura Raghava

    Thank u sir

  9. LAVANYA K N

    USEFUL SIR, THANK YOU SIR

  10. Shivu Janagond

    ನಿಮ್ಮ್ ಈ ಅದ್ಭುತ ಕೆಲಸಕ್ಕೆ ನನ್ನ ಸಾವಿರ ನಮಸ್ಕಾರಗಳು.
    .
    ಧನ್ಯವಾದಗಳು..

  11. Shivu Janagond

    ನಿಮ್ಮ್ ಈ ಅದ್ಭುತ ಕೆಲಸಕ್ಕೆ ನನ್ನ ಸಾವಿರ ನಮಸ್ಕಾರಗಳು.

    ಧನ್ಯವಾದಗಳು

  12. sangamesh antaratani

    excellent job sir ….it helps lot to crack exam.it is great helpful to pdo candidates thank you sir

  13. sangamesh antaratani

    Comment

  14. ಪಿಡಿಓ ಪರೀಕ್ಷೆ ಬರೆಯಲು ಅನುಮತಿ

  15. Pavan t r

    Hats off to you sir this is the only source I think where we are getting quality information comparing to other online source I hope this will continue

    Thank you so much sir

Leave a Comment

This site uses Akismet to reduce spam. Learn how your comment data is processed.