ಪಿಡಿಓ ಮತ್ತು ಕಾರ್ಯದರ್ಶಿ ಸೇರಿ ಸುಮಾರು 1400ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವುದೆಂದು ತಿಳಿದು ಬಂದಿದೆ. ಕನ್ನಡದ ಮೊದಲ ಅಂತರ್ಜಾಲ ಆಧಾರಿತ ಸ್ಪರ್ಧಾತ್ಮಕ ಪರೀಕ್ಷ ತಾಣವಾಗಿರುವ ಕರುನಾಡು ಎಗ್ಸಾಂ ತಂಡ ಪಿಡಿಓ ಆಕಾಂಕ್ಷಿಗಳಿಗೆ ಅತ್ಯುತ್ತಮ ಗುಣಮಟ್ಟದ ಹಾಗೂ ಪರೀಕ್ಷೆಯಲ್ಲಿ ನಿರೀಕ್ಷಿಸಬಹುದಾದ ಪ್ರಶ್ನೋತ್ತರಗಳನ್ನು ಇಂದಿನಿಂದ ವೆಬ್ ಸೈಟ್ ನಲ್ಲಿ ಪ್ರಕಟಗೊಳ್ಳುಸುತ್ತಿದೆ.

ಗ್ರಾ ಪಂ ಅ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಕ್ವಿಜ್-4

Question 1

1.ಮಹಾತ್ಮಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ದಿ ಸಂಸ್ಥೆ (Mahatma Gandhi Institute of Rural Energy and Development) ಎಲ್ಲಿದೆ?

A
ಮೈಸೂರು
B
ಚಳ್ಳಕೆರೆ
C
ಬೆಂಗಳೂರು
D
ಧಾರವಾಡ
Question 1 Explanation: 
ಬೆಂಗಳೂರು:

ಮಹಾತ್ಮಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ದಿ ಸಂಸ್ಥೆಯು ಜಕ್ಕೂರು, ಬೆಂಗಳೂರಿನಲ್ಲಿದೆ. ಈ ಸಂಸ್ಥೆಯನ್ನು ಕೇಂದ್ರ ನವೀನ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಹಾಗೂ ಗ್ರಾಮೀಣಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಸಹಯೋಗದೊಂದಿಗೆ 2000ರಲ್ಲಿ ಸ್ಥಾಪಿಸಲಾಗಿದೆ. ದಕ್ಷಿಣ ಭಾರತದ ರಾಜ್ಯಗಳಾದ ಆಂಧ್ರ ಪ್ರದೇಶ, ತೆಲಂಗಣ, ಕೇರಳ ತಮಿಳುನಾಡು ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ಅವಶ್ಯಕತೆಗಳನ್ನು ಪೂರೈಸುತ್ತದೆ. ಗ್ರಾಮೀಣ ಇಂಧನ, ಅಂತರ್ಜಲ ಸಂರಕ್ಷಣೆ, ಮಳೆ ನೀರು ಕೊಯ್ಲು ಮತ್ತು ಪರಿಸರ ಕ್ಷೇತ್ರದಲ್ಲಿ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ.

Question 2

2.ಗ್ರಾಮ ಪಂಚಾಯತಿಗಳಿಗೆ ಹೆಚ್ಚು ಅಧಿಕಾರವನ್ನು ನೀಡುವ ಸಲುವಾಗಿ “ಬೇಲೂರು ಘೋಷಣೆಗೆ” ಯಾವಾಗ ಸಹಿ ಮಾಡಲಾಯಿತು?

A
ಜನವರಿ 23, 2004
B
ಜುಲೈ 14, 2004
C
ಏಪ್ರಿಲ್ 24, 2006
D
ಆಗಸ್ಟ್ 10, 2008
Question 2 Explanation: 
ಜನವರಿ 23, 2004:

ಸ್ಥಳೀಯ ಸರ್ಕಾರದಗಳಾದ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡುವ ಸಲುವಾಗಿ ಬೇಲೂರು ಘೋಷಣೆಗೆ ಜನವರಿ 23, 2004 ರಂದು ಸಹಿ ಮಾಡಲಾಯಿತು. ರಾಜ್ಯದ ಸಾವಿರಾರು ಗ್ರಾಮ ಪಂಚಾಯತಿ ಸದಸ್ಯರು ಭಾಗವಹಿಸಿದ್ದ ಈ ಸಮ್ಮೇಳನವನ್ನು ಧಾರವಾಡದ ಬೇಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರಣ ಇದಕ್ಕೆ ಬೇಲೂರು ಘೋಷಣೆ ಎನ್ನಲಾಗಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಅಂದಿನ ಕುಡಿಯುವ ನೀರು ಸಚಿವ ಕೋಳಿವಾಡ, ಅಂದಿನ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ರವರು ಈ ಘೋಷಣೆಗೆ ಸಾಕ್ಷಿಯಾಗಿದ್ದರು. [ಪ್ರಶ್ನೆಯನ್ನು ಹೀಗೂ ಕೇಳಬಹುದು ಬೇಲೂರು ಘೋಷಣೆ ಯಾವುದಕ್ಕೆ ಸಂಬಂಧಿಸಿದೆ? ಘೋಷಣೆ ಸಹಿಹಾಕಿದಾಗ ರಾಜ್ಯ ಮುಖ್ಯ ಮಂತ್ರಿಗಳು ಯಾರು? ಯಾವ ಜಿಲ್ಲೆಯಲ್ಲಿ?

Question 3

3.ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ, 2011 ಮತ್ತು (ತಿದ್ದುಪಡಿ) ಅಧಿನಿಯಮ 2014, ರಡಿ ಗ್ರಾಮ ಪಂಚಾಯತಿಯಲ್ಲಿ ಎಷ್ಟು ಸೇವೆಗಳನ್ನು ನೀಡಲಾಗುತ್ತಿದೆ?

A
ಒಂಬತ್ತು
B
ಹತ್ತು
C
ಹನ್ನೊಂದು
D
ಹದಿನೈದು
Question 3 Explanation: 
ಹನ್ನೊಂದು:

ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ, 2011 ಮತ್ತು (ತಿದ್ದುಪಡಿ) ಅಧಿನಿಯಮ 2014ನ್ನು ಕರ್ನಾಟಕ ರಾಜ್ಯದಲ್ಲಿನ ನಾಗರಿಕರಿಗೆ ಗೊತ್ತುಮಾಡಿದ ಕಾಲಮಿತಿಯೊಳಗೆ ಸೇವೆಗಳ ಖಾತರಿಗಾಗಿ ವಿತರಿಸಲು ಈ ಅಧಿನಿಯಮವನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಗ್ರಾಮೀಣಭಿವೃದ್ದಿ ಮತ್ತು ಪಂಚಾಯತ್ ರಾಜ್ 11 ಸೇವೆಗಳನ್ನು ಸೇರಿಸಲಾಗಿದೆ. ಸಕಾಲ ಬಗ್ಗೆ ತಿಳಿಯಲು http://www.sakala.kar.nic.in/kanhome.aspx ಕ್ಲಿಕ್ ಮಾಡಿ.

Question 4

4.ರಾಜ್ಯ ಸರ್ಕಾರದ ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ?

I) ಈ ಯೋಜನೆಯನ್ನು ಪರಿಶಿಷ್ಠ ಜಾತಿ/ಪಂಗಡ ಮತ್ತು ಇತರೆ ವರ್ಗದ ವಿಧವೆಯರಿಗಾಗಿ ಜಾರಿಗೆ ತಂದಿದೆ

II) ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ನಿರ್ಮಿಸುವ ಮನೆಗಳಿಗೆ ರೂ 1,24,000 ಹಾಗೂ ನಗರಗಳಲ್ಲಿ ನಿರ್ಮಿಸಲಾಗುವ ಮನೆಗಳಿಗೆ ರೂ 1,50,000 ಸಹಾಯಧನ ನೀಡಲಾಗುವುದು.

ಸರಿಯಾದ ಉತ್ತರವನ್ನು ಈ ಕೆಳಗೆ ನೀಡಿರುವ ಕೋಡ್ ಮೂಲಕ ಆರಿಸಿ:

A
ಹೇಳಿಕೆ ಒಂದು ಮಾತ್ರ
B
ಹೇಳಿಕೆ ಎರಡು ಮಾತ್ರ
C
ಎರಡು ಹೇಳಿಕೆಗಳು ಸರಿ
D
ಎರಡು ಹೇಳಿಕೆಗಳು ತಪ್ಪು
Question 4 Explanation: 
ಎರಡು ಹೇಳಿಕೆ ತಪ್ಪು:

ಮೊದಲನೇ ಹೇಳಿಕೆ ತಪ್ಪು ಏಕೆಂದರೆ ರಾಜ್ಯ ಸರ್ಕಾರವು ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯನ್ನು ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ವಸತಿ ರಹಿತರಿಗಾಗಿ ಅನುಷ್ಟಾನ ಮಾಡುತ್ತಿದೆ. ಇದರಲ್ಲಿ ಇತರೆ ವರ್ಗದ ವಿಧವೆಯರು ಸೇರಿಲ್ಲ. ಎರಡನೇ ಹೇಳಿಕೆ ಸಹ ತಪ್ಪಾಗಿದೆ ಏಕೆಂದರೆ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ನಿರ್ಮಿಸುವ ಮನೆಗಳಿಗೆ ರೂ 1,50,000 ಹಾಗೂ ನಗರಗಳಲ್ಲಿ ನಿರ್ಮಿಸಲಾಗುವ ಮನೆಗಳಿಗೆ ರೂ 1,80,000 ಸಹಾಯಧನ ನೀಡಲಾಗುವುದು. ಫಲಾನುಭವಿಗಳ ಆಯ್ಕೆಯನ್ನು ಸರ್ಕಾರ 2011 ರಲ್ಲಿ ನಡೆಸಲಾದ ಸಾಮಾಜಿಕ ಆರ್ಥಿಕ ಮತ್ತು ಜಾತಿ ಜನಗಣತಿ ಸಮೀಕ್ಷೆಯಲ್ಲಿ ಕಂಡು ಬಂದ ವಸತಿ ರಹಿತರ ಆಧಾರದ ಮೇಲೆ ಗ್ರಾಮಸಭೆಯಲ್ಲಿ ಆಯ್ಕೆ ಮಾಡಿ ಜಾಗೃತಿ ಸಮಿತಿಗೆ ಸಲ್ಲಿಸಬೇಕು.

Question 5

5.ವೆಂಕಟೇಶಪ್ಪ ಮತ್ತು ಆತನ ಕುಟುಂಬವು MGNREGA ಯೋಜನೆಯಡಿ ಉದ್ಯೋಗ ಚೀಟಿಗೆ ನೊಂದಾಯಿಸಿಕೊಂಡಿದೆ. ಆದರೆ ವೆಂಕಟೇಶಪ್ಪನು ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ಗ್ರಾಮ ಪಂಚಾಯತಿಗೆ ಸದಸ್ಯನಾಗಿ ಆಯ್ಕೆಯಾಗಿದ್ದಾನೆ, ಆದ್ದರಿಂದ _____?

A

ವೆಂಕಟೇಶಪ್ಪನ ಕುಟುಂಬದ ಉದ್ಯೋಗ ಚೀಟಿಯನ್ನು ರದ್ದುಪಡಿಸಬೇಕು

B

ಕೇವಲ ವೆಂಕಟೇಶಪ್ಪನನ್ನು ಮಾತ್ರ ಉದ್ಯೋಗ ಚೀಟಿಯಿಂದ ತೆಗೆಯಬೇಕು

C

ಉದ್ಯೋಗ ಚೀಟಿಯಲ್ಲಿ ಯಾರನ್ನು ರದ್ದು ಮಾಡಬೇಕಿಲ್ಲ

D

ಉದ್ಯೋಗ ಚೀಟಿಯಲ್ಲಿ ವೆಂಕಟೇಶಪ್ಪನ ಹೆಸರಿರಬಹುದು ಆದರೆ ಕೆಲಸ ಮಾಡುವಾಗಿಲ್ಲ

Question 5 Explanation: 
ಉದ್ಯೋಗ ಚೀಟಿಯಲ್ಲಿ ಯಾರನ್ನು ರದ್ದು ಮಾಡಬೇಕಿಲ್ಲ :

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಲು ಇಚ್ಚಿಸುವ ಎಲ್ಲಾ ಕುಟುಂಬಗಳು ಉದ್ಯೋಗ ಚೀಟಿಗೆ ತಮ್ಮ ಕುಟುಂಬದ ವಯಸ್ಕ ಸದಸ್ಯರನ್ನು ನೊಂದಾಯಿಸುವ ಮೂಲಕ ಉದ್ಯೋಗ ಚೀಟಿ ಪಡೆಯಬಹುದಾಗಿದೆ. ಉದ್ಯೋಗ ಚೀಟಿಯನ್ನು ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಸೇರಿದಂತೆ ಎಲ್ಲಾ ಚುನಾಯಿತ ಸದಸ್ಯರು ಕೆಲಸ ಮಾಡಲು ಇಚ್ಚಿಸಿದ್ದಲಿ ಪಡೆಯಬಹುದು. ಆದ್ದರಿಂದ ಸದಸ್ಯರಾಗಿ ಆಯ್ಕೆಯಾದ ಮಾತ್ರಕ್ಕೆ ಅವರ ಅಥವಾ ಕುಟುಂಬದ ನೊಂದಾಣಿ ರದ್ದಾಗುವುದಿಲ್ಲ.

Question 6

6.ಗ್ರಾಮ ಸ್ವರಾಜ್ – ಪಂಚಾಯತ್ ಸಬಲೀಕರಣ ಯೋಜನೆಯನ್ನು ಯಾವ ಸಂಸ್ಥೆಯ ಆರ್ಥಿಕ ಸಹಾಯದೊಂದಿಗೆ ಅನುಷ್ಟಾನಗೊಳಿಸಲಾಗುತ್ತಿದೆ?

A
ನಬಾರ್ಡ್
B
ವಿಶ್ವಬ್ಯಾಂಕ್
C
ಏಷ್ಯಾ ಅಭಿವೃದ್ದಿ ಬ್ಯಾಂಕ್
D
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
Question 6 Explanation: 
ವಿಶ್ವಬ್ಯಾಂಕ್:

ಗ್ರಾಮ ಸ್ವರಾಜ್ – ಪಂಚಾಯತ್ ಸಬಲೀಕರಣ ಯೋಜನೆಯನ್ನು ವಿಶ್ವಬ್ಯಾಂಕ್ ಆರ್ಥಿಕ ನೆರವಿನಿಂದ ರಾಜ್ಯದ ಅತ್ಯಂತ ಹಿಂದುಳಿದ ತಾಲ್ಲೂಕುಗಳಲ್ಲಿ ಬರುವ 1341 ಪಂಚಾಯತಿಗಳಲ್ಲಿ ಅನುಷ್ಟಾನಗೊಳಿಸಲಾಗುತ್ತಿದೆ.

Question 7

7.ನೀರು ಸರಬರಾಜು ನಿಯಮಗಳ ಪ್ರಕಾರ ಗ್ರಾಮೀಣ ಪ್ರದೇಶಗಳಲ್ಲಿ ದಿನವೊಂದಕ್ಕೆ ಪ್ರತಿ ವ್ಯಕ್ತಿಗೆ ____ ಲೀಟರ್ ಶುದ್ದ ಕುಡಿಯುವ ನೀರು ಸರಬರಾಜು ಮಾಡಬೇಕಾಗುತ್ತದೆ?

A
45
B
33
C
55
D
50
Question 7 Explanation: 
55 :

ನೀರು ಸರಬರಾಜು ನಿಯಮಗಳ ಪ್ರಕಾರ ಗ್ರಾಮೀಣ ಪ್ರದೇಶಗಳಲ್ಲಿ ದಿನವೊಂದಕ್ಕೆ ವ್ಯಕ್ತಿಯೊಬ್ಬರಿಗೆ 55 ಲೀಟರ್ ಶುದ್ದ ಕುಡಿಯುವ ನೀರನ್ನು ಸರಬರಾಜು ಮಾಡಬೇಕು.

Question 8

8.ಗ್ರಾಮ ಪಂಚಾಯತಿಗಳ ಹಾಗೂ ಸ್ಥಾಯಿ ಸಮಿತಿಗಳ ರಚನೆ ಬಗ್ಗೆ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ,1993 ಈ ಕೆಳಕಂಡ ಯಾವ ಅಧ್ಯಾಯದಲ್ಲಿ ಸ್ಪಷ್ಟಪಡಿಸಲಾಗಿದೆ?

A
ಅಧ್ಯಾಯ II
B
ಅಧ್ಯಾಯ III
C
ಅಧ್ಯಾಯ IV
D
ಅಧ್ಯಾಯ V
Question 8 Explanation: 
ಅಧ್ಯಾಯ III:

ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ,1993 ರ ಅಧ್ಯಾಯ III ರಲ್ಲಿ ಗ್ರಾಮ ಪಂಚಾಯತಿಗಳ ಹಾಗೂ ಸ್ಥಾಯಿ ಸಮಿತಿಗಳ ರಚನೆ ಕುರಿತು ಸ್ಪಷ್ಟಪಡಿಸಲಾಗಿದೆ. ಅಧ್ಯಾಯ I ರಲ್ಲಿ ಕಾಯಿದೆಯಲ್ಲಿ ಬಳಸಿರುವ ಪದಗಳ ವಿವರಣೆ ನೀಡಲಾಗಿದೆ. ಅಧ್ಯಾಯ II ರಲ್ಲಿ ಗ್ರಾಮ ಸಭೆ ಮತ್ತು ವಾರ್ಡ್ ಸಭೆಗೆ ಹೇಳಲಾಗಿದೆ, ಅಧ್ಯಾಯ IV ರಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಉಪಧ್ಯಾಕ್ಷನ ಪ್ರಕಾರ್ಯಗಳು, ಕರ್ತವ್ಯಗಳು, ಅಧಿಕಾರಿಗಳನ್ನು ಹೇಳಲಾಗಿದೆ ಮತ್ತು ಅಧ್ಯಾಯ Vರಲ್ಲಿ ಪಂಚಾಯತ್ ಸಿಬ್ಬಂದಿ ಬಗ್ಗೆ ತಿಳಿಸಲಾಗಿದೆ. ಕಾಯಿದೆಯಲ್ಲಿ ಒಟ್ಟು 18 ಅಧ್ಯಾಯಗಳಿವೆ. ಅಧ್ಯಾಯ VI ರಿಂದ ನಂತರ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿಗೆ ಸಂಬಂಧಿಸಿವೆ.

Question 9

9.ಭಾರತ ಸಂವಿಧಾನ ಯಾವ ಕಲಂ ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯತ್ ಸ್ಥಾಪಿಸಲು ಅವಕಾಶ ಕಲ್ಪಿಸಿದೆ____?

A
ಕಲಂ 39
B
ಕಲಂ 40
C
ಕಲಂ 41
D
ಕಲಂ 42
Question 9 Explanation: 
ಕಲಂ 40:

ಭಾರತದ ಸಂವಿಧಾನದ ಭಾಗ IV ರಲ್ಲಿರುವ ರಾಜ್ಯನಿರ್ದೇಶಕ ತತ್ವಗಳಡಿ ಬರುಲ ಕಲಂ 40 ರಲ್ಲಿ ರಾಜ್ಯ ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯತಿ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಲಾಗಿದೆ.

Question 10

10.MGNREGA ಕಾಯಿದೆ ಪ್ರಕಾರ, ಕೂಲಿ ವೆಚ್ಚ ಮತ್ತು ಸಾಮಾಗ್ರಿ ವೆಚ್ಚಗಳ ಅನುಪಾತವು ಈ ಕೆಳಕಂಡ ಕನಿಷ್ಠ ಮಟ್ಟಕ್ಕಿಂತ ಕಡಿಮೆ ಇರತಕ್ಕದ್ದಲ್ಲ

A
75 : 25
B
60 : 40
C
50 : 50
D
40 : 60
Question 10 Explanation: 
60 : 40:

MGNREGA ಕಾಯಿದೆಯಡಿ ಕೂಲಿ ವೆಚ್ಚ ಮತ್ತು ಸಾಮಾಗ್ರಿ ವೆಚ್ಚಗಳ ಅನುಪಾತವು 60 : 40 ಇರಬೇಕು. ಗ್ರಾಮ ಪಂಚಾಯತಿ ಮಟ್ಟದಲ್ಲಿ ನಡೆದ ಎಲ್ಲಾ ಕೆಲಸಗಳಲ್ಲೂ ಕಾರ್ಮಿಕರ ಕೂಲಿ ವೆಚ್ಚ ಮತ್ತು ಸಾಮಾಗ್ರಿಗಳ ವೆಚ್ಚ 60 : 40 ಅನುಪಾತದಂತೆ ಇರಬೇಕು. ಉದಾ: ಒಂದು ಕಾಮಗಾರಿಗೆ 1 ಲಕ್ಷ ತಗುಲಿದ್ದರೆ 60000 ರೂ ಕೂಲಿ ನೀಡಬೇಕು, ರೂ 40,000 ಸಾಮಾಗ್ರಿ ವೆಚ್ಚ ಆಗಿರಬೇಕು. (ಗಮನಿಸಿ: ಕೂಲಿ ವೆಚ್ಚವನ್ನು ಮೊದಲು ಪಾವತಿಸಬೇಕು ನಂತರ ಸಾಮಾಗ್ರಿ ವೆಚ್ಚ ಪಾವತಿಸಬೇಕು).

There are 10 questions to complete.

ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

9 Thoughts to “ಗ್ರಾ ಪಂ ಅ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಕ್ವಿಜ್-4”

  1. anjaneya

    Very helpful sir

  2. H T DASAR

    Thank u sir, helpful study source…….

  3. Sunil

    I am really appreciate this site
    This site is very useful

    1. Manjunatha

      Nice sir good information

  4. ಸಂತೋಷ್ ಗೌಡರ

    ತುಂಬಾ ಉಪಯುಕ್ತ ಮಾಹಿತಿ ಸ್ಪರ್ಧಾತ್ಮಕ ಪರೀಕ್ಷೆಗೆ ಶುಭವಾಗಲಿ

  5. anandhalembar

    Very fine

  6. mahadev

    Super thank u this group

Leave a Comment

This site uses Akismet to reduce spam. Learn how your comment data is processed.