ಪಿಡಿಓ ಮತ್ತು ಕಾರ್ಯದರ್ಶಿ ಸೇರಿ ಸುಮಾರು 1400ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವುದೆಂದು ತಿಳಿದು ಬಂದಿದೆ. ಕನ್ನಡದ ಮೊದಲ ಅಂತರ್ಜಾಲ ಆಧಾರಿತ ಸ್ಪರ್ಧಾತ್ಮಕ ಪರೀಕ್ಷ ತಾಣವಾಗಿರುವ ಕರುನಾಡು ಎಗ್ಸಾಂ ತಂಡ ಪಿಡಿಓ ಆಕಾಂಕ್ಷಿಗಳಿಗೆ ಅತ್ಯುತ್ತಮ ಗುಣಮಟ್ಟದ ಹಾಗೂ ಪರೀಕ್ಷೆಯಲ್ಲಿ ನಿರೀಕ್ಷಿಸಬಹುದಾದ ಪ್ರಶ್ನೋತ್ತರಗಳನ್ನು ಇಂದಿನಿಂದ ವೆಬ್ ಸೈಟ್ ನಲ್ಲಿ ಪ್ರಕಟಗೊಳ್ಳುಸುತ್ತಿದೆ.

ಗ್ರಾ ಪಂ ಅ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಕ್ವಿಜ್-2

Question 1

1.ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಬಯಸುವ ವ್ಯಕ್ತಿಯು ಯಾವ ನಮೂನೆಯಲ್ಲಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಬೇಕು?

A
ನಮೂನೆ-1
B
ನಮೂನೆ-3
C
ನಮೂನೆ-6
D
ನಮೂನೆ-8
Question 1 Explanation: 
ನಮೂನೆ-6:

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಬಯಸುವ ವ್ಯಕ್ತಿ/ಕುಟುಂಬವು ನಮೂನೆ-6 ರಲ್ಲಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಬೇಕು. ಈ ಅರ್ಜಿ ಸಲ್ಲಿಸಿದ ಕುಟುಂಬಕ್ಕೆ ಗ್ರಾಮ ಪಂಚಾಯಿತಿ 15 (ಹದಿನೈದು) ದಿನದೊಳಗೆ ಕೆಲಸವನ್ನು ನೀಡುವುದು ಕಡ್ಡಾಯವಾಗಿರುತ್ತದೆ.

Question 2

2.ಪ್ರಸ್ತುತ ಗ್ರಾಮ ಪಂಚಾಯತಿ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಮಾಸಿಕ ಗೌರವಧನ ಕ್ರಮವಾಗಿ ಎಷ್ಟಿದೆ?

A
1000 ಮತ್ತು 750
B
2000 ಮತ್ತು 1000
C
1000 ಮತ್ತು 600
D
1500 ಮತ್ತು 1000
Question 2 Explanation: 
1000 ಮತ್ತು 600:

ಪ್ರಸ್ತುತ ಗ್ರಾಮ ಪಂಚಾಯತಿ ಅಧ್ಯಕ್ಷರ ಮಾಸಿಕ ಗೌರವಧನ ರೂ 1000 ಹಾಗೂ ಉಪಾಧ್ಯಕ್ಷರ ಗೌರವಧನ ರೂ 600 ನೀಡಲಾಗುತ್ತಿದೆ. ಗ್ರಾಮ ಪಂಚಾಯತಿ ಸದಸ್ಯರ ಮಾಸಿಕ ಗೌರವಧನ ರೂ 500 ಸರ್ಕಾರ ನಿಗಧಿಪಡಿಸಿದೆ. ತಾಲ್ಲೂಕು ಪಂಚಾಯತಿಯ ಅಧ್ಯಕ್ಷರ ಗೌರವ ಧನ ರೂ 4500, ಉಪಾಧ್ಯಕ್ಷರಿಗೆ ರೂ 3000 ಮತ್ತು ಸದಸ್ಯರಿಗೆ ರೂ 1500 ನಿಗಧಿಪಡಿಸಲಾಗಿದೆ. ಜಿಲ್ಲಾ ಪಂಚಾಯತಿಯಲ್ಲಿ ಅಧ್ಯಕ್ಷರಿಗೆ ರೂ 6000, ಉಪಾಧ್ಯಕ್ಷರಿಗೆ ರೂ 4500 ಮತ್ತು ಸದಸ್ಯರಿಗೆ ರೂ 3000 ನೀಡಲಾಗುತ್ತಿದೆ.

Question 3

3.ಸುರೇಶ್ ಮತ್ತು ನಿರ್ಮಲಾ ದಂಪತಿ ವ್ಯವಸಾಯ ಮಾಡುತ್ತಿದ್ದು, ಈ ದಂಪತಿಗೆ ಮೂರು ಮಕ್ಕಳಿದ್ದಾರೆ. ಮೊದಲನೇ ಮಗ ರವಿ 20 ವರ್ಷ ತುಂಬಿದ್ದು ಕೂಲಿ ಕೆಲಸ ಮಾಡುತ್ತಿದ್ದಾನೆ. ಎರಡನೇ ಮಗ ಚಂದ್ರ ಕಾಲೇಜನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಮಗಳು ಶೃತಿ 17 ವರ್ಷ ತುಂಬಿದ್ದು ಶಾಲೆ ಬಿಟ್ಟು ಮನೆಯಲ್ಲಿ ಉಳಿದಿದ್ದಾರೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಈ ಮೇಲಿನ ಯಾರು ಉದ್ಯೋಗ ಚೀಟಿ ಪಡೆಯಲು ಅರ್ಹರಾಗಿರುತ್ತಾರೆ.

A
ಸುರೇಶ್ ಮತ್ತು ನಿರ್ಮಲಾ ಮಾತ್ರ
B
ಸುರೇಶ್, ನಿರ್ಮಲಾ ಮತ್ತು ರವಿ
C
ಸುರೇಶ್, ನಿರ್ಮಲಾ, ರವಿ ಮತ್ತು ಶೃತಿ
D
ಮೇಲಿನ ಎಲ್ಲರೂ ಅರ್ಹರು
Question 3 Explanation: 
ಸುರೇಶ್, ನಿರ್ಮಲಾ ಮತ್ತು ರವಿ:

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಸಿಲು ಬಯಸುವ ಕುಟುಂಬವು ಉದ್ಯೋಗ ಚೀಟಿ ಪಡೆಯುವುದು ಕಡ್ಡಾಯ. ಉದ್ಯೋಗ ಚೀಟಿಯಲ್ಲಿ ನೋಂದಾಯಿಸಿಕೊಳ್ಳುವ ಕುಟುಂಬದ ಸದಸ್ಯರಿಗೆ ಕಡ್ಡಾಯವಾಗಿ 18 ವರ್ಷ ತುಂಬಿರಬೇಕು ಮತ್ತು 60 ವರ್ಷ ಮೇಲ್ಪಟ್ಟವರು ಅನರ್ಹರಾಗಿರುತ್ತಾರೆ. 18 ವರ್ಷ ತುಂಬಿದ್ದು, ವಿದ್ಯಾಭ್ಯಾಸ ಮಾಡುತ್ತಿರುವ ಸದಸ್ಯರು ಉದ್ಯೋಗ ಚೀಟಿಯಲ್ಲಿ ನೋಂದಾಯಿಸಿಕೊಳ್ಳಲು ಅನರ್ಹರಾಗಿರುತ್ತಾರೆ. ಆದ್ದರಿಂದ ಮೇಲಿನ ಪ್ರಶ್ನೆಯಲ್ಲಿ ಸುರೇಶ್ ದಂಪತಿ ಮತ್ತು ಮಗ ರವಿ ಅರ್ಹರಾಗಿದ್ದಾರೆ. ಚಂದ್ರ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವುದರಿಂದ ಮತ್ತು ಶೃತಿ ಶಾಲೆ ಬಿಟ್ಟಿದ್ದರು 18 ವರ್ಷ ಆಗಿರದ ಕಾರಣ ಉದ್ಯೋಗ ಚೀಟಿಯಲ್ಲಿ ನೊಂದಾಯಿಸಿಕೊಳ್ಳಲು ಅನರ್ಹರು.

Question 4

4.ಪ್ರಸ್ತುತ MGNREGA ಯೋಜನೆಯಡಿ ಕರ್ನಾಟಕದಲ್ಲಿ ಪ್ರತಿ ದಿನಕ್ಕೆ ಪ್ರತಿ ವ್ಯಕ್ತಿಗೆ ನೀಡುತ್ತಿರುವ ಕೂಲಿ ಹಣ ಎಷ್ಟು?

A
ರೂ 220
B
ರೂ 224
C
ರೂ 256
D
ರೂ 243
Question 4 Explanation: 
ರೂ 224:

ಕರ್ನಾಟಕದಲ್ಲಿ 2016-17ನೇ ಸಾಲಿನ MGNREGA ಯೋಜನೆಯಡಿ ಕೆಲಸ ಮಾಡುವ ಪ್ರತಿ ವ್ಯಕ್ತಿಗೆ ಪ್ರತಿ ದಿನಕ್ಕೆ ರೂ 224 ಕೂಲಿ ಹಣ ನೀಡಲಾಗುತ್ತಿದೆ. ದೇಶದಲ್ಲಿ ಹರಿಯಾಣ ಅತಿ ಹೆಚ್ಚು ಅಂದರೆ ರೂ 249 ಕೂಲಿ ಹಣ ನೀಡುತ್ತಿರುವ ರಾಜ್ಯವಾಗಿದೆ. ಈ ಯೋಜನೆಯಡಿ ಕೂಲಿ ಹಣವನ್ನು ಕೇಂದ್ರ ಸರ್ಕಾರ ಬೇಕೆನಿಸಿದಾಗ ಮಾರ್ಚ್ ತಿಂಗಳಲ್ಲಿ ಪರಿಷ್ಕೃರಿಸುತ್ತದೆ.

Question 5

.ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಈ ಮೂರು ಹಂತಗಳಲ್ಲೂ ಸಾಮಾನ್ಯವಾಗಿರುವ ಸ್ಥಾಯಿ ಸಮಿತಿ ಯಾವುದು?

A
ಸಾಮಾಜಿಕ ನ್ಯಾಯ ಸಮಿತಿ
B
ಉತ್ಪಾದನ ಸಮಿತಿ
C
ಸೌಕರ್ಯ ಸಮಿತಿ
D
ಶಿಕ್ಷಣ ಮತ್ತು ಆರೋಗ್ಯ ಸಮಿತಿ
Question 5 Explanation: 
ಸಾಮಾಜಿಕ ನ್ಯಾಯ ಸಮಿತಿ :

ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ-1993, ಪ್ರಕರಣ 61 ರಡಿ ಪ್ರತಿ ಪಂಚಾಯತಿಯಲ್ಲು ಸ್ಥಾಯಿ ಸಮಿತಿ ರಚಿಸುವ ಅವಕಾಶ ಕಲ್ಪಿಸಲಾಗಿದೆ. ಗ್ರಾಮ ಪಂಚಾಯತಿಯಲ್ಲಿ ಉತ್ಪಾದನಾ ಸಮಿತಿ, ಸಾಮಾಜಿಕ ನ್ಯಾಯ ಸಮಿತಿ ಮತ್ತು ಸೌಕರ್ಯ ಸಮಿತಿ ರಚಿಸಬೇಕು. ತಾಲ್ಲೂಕ ಪಂಚಾಯತಿಯಲ್ಲಿ ಸಾಮಾನ್ಯ ಸ್ಥಾಯಿ ಸಮಿತಿ (ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷರು ಇದರ ಸಭಾಪತಿ ಮತ್ತು ಪದನಿಮಿತ ಸದಸ್ಯರಾಗಿರುತ್ತಾರೆ), ಹಣಕಾಸು, ಲೆಕ್ಕ ಪರಿಶೋಧನೆ ಮತ್ತು ಯೋಜನಾ ಸಮಿತಿ (ತಾಲ್ಲೂಕು ಪಂಚಾಯತಿ ಅಧ್ಯಕ್ಷರು ಇದರ ಸಭಾಪತಿ ಮತ್ತು ಪದನಿಮಿತ ಸದಸ್ಯರಾಗಿರುತ್ತಾರೆ) ಮತ್ತು ಸಾಮಾಜಿಕ ನ್ಯಾಯ ಸಮಿತಿ (ಸದಸ್ಯರುಗಳ ಪೈಕಿ ಒಬ್ಬನು ಅಧ್ಯಕ್ಷರಾಗಿರುತ್ತಾರೆ) ರಚಿಸಬೇಕು. ಜಿಲ್ಲಾ ಪಂಚಾಯತಿಯಲ್ಲಿ ಸಾಮಾನ್ಯ ಸ್ಥಾಯಿ ಸಮಿತಿ (ಜಿಲ್ಲಾ ಪಂಚಾಯತಿ ಉಪಾಧ್ಯಕ್ಷರು ಇದರ ಸಭಾಪತಿ ಮತ್ತು ಪದನಿಮಿತ ಸದಸ್ಯರಾಗಿರುತ್ತಾರೆ), ಹಣಕಾಸು, ಲೆಕ್ಕ ಪರಿಶೋಧನೆ ಮತ್ತು ಯೋಜನಾ ಸಮಿತಿ (ಜಿಲ್ಲಾ ಪಂಚಾಯತಿ ಅಧ್ಯಕ್ಷರು ಇದರ ಸಭಾಪತಿ ಮತ್ತು ಪದನಿಮಿತ ಸದಸ್ಯರಾಗಿರುತ್ತಾರೆ), ಸಾಮಾಜಿಕ ನ್ಯಾಯ ಸಮಿತಿ, ಶಿಕ್ಷಣ ಮತ್ತು ಆರೋಗ್ಯ ಸಮಿತಿ ಮತ್ತು ಕೃಷಿ ಮತ್ತು ಕೈಗಾರಿಕಾ ಸಮಿತಿ ರಚಿಸಬೇಕು (ಈ ಸಮಿತಿಯ ಸದಸ್ಯರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕು). ಗಮನಿಸಿ ಗ್ರಾಮ ಪಂಚಾಯತಿ ಸ್ಥಾಯಿ ಸಮಿತಿಗಳಲ್ಲಿ ಕನಿಷ್ಠ ಮೂರು ಹಾಗೂ ಗರಿಷ್ಠ ಐದು ಸದಸ್ಯರಿರಬೇಕು. ತಾಲ್ಲೂಕು ಪಂಚಾಯತಿಯಲ್ಲಿ ಕನಿಷ್ಠ ಮೂರು ಹಾಗೂ ಗರಿಷ್ಠ ಆರು ಮತ್ತು ಜಿಲ್ಲಾ ಪಂಚಾಯತಿಯಲ್ಲಿ ಗರಿಷ್ಠ ಏಳು ಸದಸ್ಯರಿರಬೇಕು.

Question 6

6.ಸರಸ್ವತಿ ಎಂಬ ಫಲಾನುಭವಿಗೆ ಬಸವ ವಸತಿ ಯೋಜನೆಯಡಿ ಮನೆ ಮಂಜೂರಾಗಿದ್ದು, ಪಾಯ ಹಂತದಲ್ಲಿ ಜಿಪಿಎಸ್ ಪೋಟೋವನ್ನು ಗ್ರಾಮ ಪಂಚಾಯತಿ ವತಿಯಿಂದ ತೆಗೆಯಲಾಗಿದೆ. ಸರಸ್ವತಿಯವರಿಗೆ ಈ ಕೆಳಗಿನ ಯಾರು ಹಣವನ್ನು ಬಿಡುಗಡೆಮಾಡುತ್ತಾರೆ?

A
ಪಂಚಾಯತ್ ಅಭಿವೃದ್ದಿ ಅಧಿಕಾರಿ
B
ಮುಖ್ಯ ಕಾರ್ಯನಿರ್ವಾಹಣಾಧಿಕಾರಿ
C
ಗ್ರಾಮೀಣಭಿವೃದ್ದಿ ಇಲಾಖೆ
D
ರಾಜೀವ್ ಗಾಂಧಿ ವಸತಿ ನಿಗಮ
Question 6 Explanation: 
ರಾಜೀವ್ ಗಾಂಧಿ ವಸತಿ ನಿಗಮ:

ಗ್ರಾಮ ಪಂಚಾಯತಿಯಲ್ಲಿ ಅನುಷ್ಟಾನಗೊಳಿಸುವ ಎಲ್ಲಾ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಸತಿ ಯೋಜನೆಗಳ ಫಲಾನುಭವಿಗಳಿಗೆ ರಾಜೀವ್ ಗಾಂಧಿ ವಸತಿ ನಿಗಮವು ವಿದ್ಯುನ್ಮಾನ ತಂತ್ರಜ್ಞಾನದ ಬಳಕೆಯಿಂದ ಹಣ ವರ್ಗಾವಣೆ ಪದ್ದತಿ (E-FMS) ಮೂಲಕ ಫಲಾನುಭವಿಗಳ ಖಾತೆಗೆ ನೇರವಾಗಿ ಅನುದಾನ ಬಿಡುಗಡೆ ಮಾಡುತ್ತದೆ. ವಸತಿ ಯೋಜನೆಯಡಿ ನಿರ್ಮಿಸಲಾಗುವ ಮನೆಗಳನ್ನು ಪಾಯ, ಗೋಡೆ, ಛಾವಣಿ ಮತ್ತು ಪೂರ್ಣಗೊಂಡ ನಾಲ್ಕು ಹಂತಗಳಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಜಿಪಿಎಸ್ ಆಧಾರಿತ ಪೋಟೋ ತೆಗೆದು ನಿಗಮದ ಸಾಪ್ಟ್ ವೇರ್ ಗೆ ಅಳವಡಿಸಬೇಕು. ಈ ಪೋಟೋಗಳನ್ನು ನಿಗಮದಲ್ಲಿ ಪರಿಶೀಲನೆ ಮಾಡಿ ಹಣ ಬಿಡುಗಡೆ ಮಾಡಲಾಗುವುದು.

Question 7

7.ಗ್ರಾಮ ಪಂಚಾಯತಿಗಳಲ್ಲಿ ಇತ್ತೀಚೆಗೆ ಅನುಷ್ಟಾನಗೊಳಿಸಲಾಗಿರುವ e-FMS ವ್ಯವಸ್ಥೆ ಎಂದರೆ _______?

A

Electronic Fund Management System

B

Electronic Fund Maintenance System

C

Electronic Fund Marginal System

D

Electronic Facility Management System

Question 7 Explanation: 
Electronic Fund Management System:

ಗ್ರಾಮ ಪಂಚಾಯತಿಯಲ್ಲಿ ಚೆಕ್ ರಹಿತ ಹಣ ಪಾವತಿ ವ್ಯವಸ್ಥೆ ತರುವ ಸಲುವಾಗಿ e-FMS ಅನ್ನು ಅನುಷ್ಟಾನಗೊಳಿಸಲಾಗಿದೆ. ಸದ್ಯ MGNREGA ಕಾರ್ಮಿಕರ ಕೂಲಿ ಹಣ ಮತ್ತು ಸ್ವಚ್ಚ ಭಾರತ ಅಭಿಯಾನದಡಿ ನಿರ್ಮಿಸಲಾಗುವ ಶೌಚಾಲಯಗಳಿಗೆ ಹಣವನ್ನು ವಿದ್ಯುನ್ಮಾನ ತಂತ್ರಜ್ಞಾನದ ಬಳಕೆಯಿಂದ ಹಣ ವರ್ಗಾವಣೆ ಪದ್ದತಿ(e-FMS) ವಿಧಾನದಿಂದ ಬಿಡುಗಡೆಮಾಡಲಾಗುತ್ತಿದೆ. ಈ ವಿಧಾನದಲ್ಲಿ ಫಲಾನುಭವಿಗಳ ಖಾತೆ ನೇರವಾಗಿ ಪಿಡಿಓ ಮತ್ತು ಅಧ್ಯಕ್ಷರ ಡಿಜಿಟಲ್ ಸಹಿ ಬಳಸಿ ಹಣ ವರ್ಗಾಯಿಸಲಾಗುವುದು.

Question 8
8.MGNREGA ಯೋಜನೆಯಡಿ ಪಾರದರ್ಶಕತೆ ತರುವ ಸಲುವಾಗಿ ದೇಶದಲ್ಲೆ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಅಭಿವೃದ್ದಿಪಡಿಸಿದ ಮೊಬೈಲ್ ಅಪ್ಲಿಕೇಷನ್ (Mobil App) ಯಾವುದು?
A
M-NREGA
B
K-NREGA
C
N-NREGA
D
S-NREGA
Question 8 Explanation: 
M-NREGA:

MGNREGA ಯೋಜನೆಯಡಿ ಕಾಮಗಾರಿಗಳ ಗುಣಮಟ್ಟ, ಪಾರದರ್ಶಕತೆ ಮತ್ತು ಅಕ್ರಮ ತಡೆಯುವ ಸಲುವಾಗಿ M-NREGA ಎಂಬ ಮೊಬೈಲ್ ಆಪ್ ಅನ್ನು ಗ್ರಾಮೀಣಭಿವೃದ್ದಿ ಆಯುಕ್ತಾಲಯ ಅಭಿವೃದ್ದಿಪಡಿಸಿದೆ. ಪ್ರಾಯೋಗಿಕವಾಗಿ ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಜಾರಿಗೆ ತರಲಾಗಿದೆ.

Question 9

9.ಗ್ರಾಮ ಪಂಚಾಯತಿ ಅಧ್ಯಕ್ಷರು ತಮ್ಮ ಹುದ್ದೆಗೆ ರಾಜೀನಾಮೆಯನ್ನು ಯಾರಿಗೆ ನೀಡಬೇಕು ಮತ್ತು ಎಷ್ಟು ದಿನದೊಳಗೆ ಅರ್ಜಿ ಹಿಂಪಡೆಯದಿದ್ದರೆ ರಾಜೀನಾಮೆ ಅಂಗೀಕಾರವಾಗುತ್ತದೆ?

A
ಉಪವಿಭಾಗಧಿಕಾರಿ (AC), 15 ದಿನ
B
ಜಿಲ್ಲಾಧಿಕಾರಿ, 15 ದಿನ
C
ಮುಖ್ಯಕಾರ್ಯನಿರ್ವಾಹಣಾಧಿಕಾರಿ, 15 ದಿನ
D
ಕಾರ್ಯನಿರ್ವಾಹಣಾಧಿಕಾರಿ, 15 ದಿನ
Question 9 Explanation: 
ಉಪವಿಭಾಗಧಿಕಾರಿ (AC), 15 ದಿನ:

ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ-1993ರ ಪ್ರಕರಣ 48 ಪ್ರಕಾರ ಗ್ರಾಮ ಪಂಚಾಯತಿ ಅಧ್ಯಕ್ಷನು, ತನ್ನ ಸಹಿ ಸಹಿತ ಉಪವಿಭಾಗಧಿಕಾರಿ ಅವರಿಗೆ ಬರಹದಲ್ಲಿ ಬರೆದು ತನ್ನ ಹುದ್ದೆಗೆ ರಾಜೀನಾಮೆ ನೀಡಬಹುದು. ಗ್ರಾಮ ಪಂಚಾಯತಿ ಉಪಾಧ್ಯಕ್ಷನು ತನ್ನ ರಾಜೀನಾಮೆಯನ್ನು ಅಧ್ಯಕ್ಷರಿಗೆ ನೀಡಬೇಕು. ಅಧ್ಯಕ್ಷನು ಇಲ್ಲದಿದ್ದಾಗ ತನ್ನ ಸಹಿತ ಅಸಿಸ್ಟೆಂಟ್ ಕಮೀಷನರ್ ಅವರಿಗೆ ನೀಡಬಹುದು. ರಾಜೀನಾಮೆಗಾಗಿ ನೀಡಿದ ಪತ್ರವನ್ನು ನೀಡಿದ ದಿನಾಂಕದಿಂದ ಐದು ದಿನದೊಳಗೆ ಆತ ಹಿಂಪಡೆಯಬೇಕು ಇಲ್ಲದಿದ್ದರೆ ಅಂಗೀಕರವಾದಂತೆ. ತಾಲ್ಲೂಕು ಪಂಚಾಯತಿ ಅಧ್ಯಕ್ಷರು ಜಿಲ್ಲಾಧಿಕಾರಿಗೆ ಮತ್ತು ಜಿಲ್ಲಾ ಪಂಚಾಯತಿ ಅಧ್ಯಕ್ಷರು ಸರ್ಕಾರಕ್ಕೆ ರಾಜೀನಾಮೆ ನೀಡಬೇಕು.

Question 10

10.ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993, ರಾಜ್ಯಪಾಲರಿಂದ ಅನುಮೋದನೆಗೊಂಡ ದಿನಾಂಕ_____?

A
ಏಪ್ರಿಲ್ 30, 1993
B
ಏಪ್ರಿಲ್ 24, 1993
C
ಏಪ್ರಿಲ್ 25, 1993
D
ಮಾರ್ಚ್30, 1993
Question 10 Explanation: 
ಏಪ್ರಿಲ್ 30, 1993:

ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993, ಏಪ್ರಿಲ್30, 1993 ರಂದು ರಾಜ್ಯಪಾಲರಿಂದ ಅನುಮೋದನೆಗೊಂಡಿದೆ.

There are 10 questions to complete.

ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

9 Thoughts to “ಗ್ರಾ ಪಂ ಅ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಕ್ವಿಜ್-2”

  1. anjaneya

    Good questions sir nice..

  2. Anonymous

    Superb Mohan sir

  3. Tippanna

    Very usefull quition sir thank u sir for qu creation

  4. Nagesh B Kamble

    Thanks sir

  5. ಸಂತೋಷ್ ಗೌಡರ

    ಧನ್ಯವಾದಗಳು ಸರ್

  6. ktv

    sir this is very good job for pdo candidates

Leave a Comment

This site uses Akismet to reduce spam. Learn how your comment data is processed.