ಪಿಡಿಓ ಮತ್ತು ಕಾರ್ಯದರ್ಶಿ ಸೇರಿ ಸುಮಾರು 1400ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವುದೆಂದು ತಿಳಿದು ಬಂದಿದೆ. ಕನ್ನಡದ ಮೊದಲ ಅಂತರ್ಜಾಲ ಆಧಾರಿತ ಸ್ಪರ್ಧಾತ್ಮಕ ಪರೀಕ್ಷ ತಾಣವಾಗಿರುವ ಕರುನಾಡು ಎಗ್ಸಾಂ ತಂಡ ಪಿಡಿಓ ಆಕಾಂಕ್ಷಿಗಳಿಗೆ ಅತ್ಯುತ್ತಮ ಗುಣಮಟ್ಟದ ಹಾಗೂ ಪರೀಕ್ಷೆಯಲ್ಲಿ ನಿರೀಕ್ಷಿಸಬಹುದಾದ ಪ್ರಶ್ನೋತ್ತರಗಳನ್ನು ಇಂದಿನಿಂದ ವೆಬ್ ಸೈಟ್ ನಲ್ಲಿ ಪ್ರಕಟಗೊಳ್ಳುಸುತ್ತಿದೆ.

ಗ್ರಾ ಪಂ ಅ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಕ್ವಿಜ್-5

Question 1

1.ಕರ್ನಾಟಕ ರಾಜ್ಯದ ನಾಲ್ಕನೇ ಹಣಕಾಸು ಆಯೋಗದ ಅಧ್ಯಕ್ಷರು ಯಾರು?

A
ಸಿ.ಜಿ.ಚಿನ್ನಸ್ವಾಮಿ
B
ಅಶ್ವಥ್ ನಾರಾಯಣ
C
ಟಿ.ಎನ್.ನರಸಿಂಹಮೂರ್ತಿ
D
ಅಮರನಾಥನ್
Question 1 Explanation: 
ಸಿ.ಜಿ.ಚಿನ್ನಸ್ವಾಮಿ:

ರಾಜ್ಯದ ನಾಲ್ಕನೇ ಹಣಕಾಸು ಆಯೋಗದ ಅಧ್ಯಕ್ಷರಾಗಿದ್ದಾರೆ. ರಾಜ್ಯ ಹಣಕಾಸು ಆಯೋಗವನ್ನು ರಾಜ್ಯಪಾಲರು ಸಂವಿಧಾನದ 73ನೇ ತಿದ್ದುಪಡಿ ಅನ್ವಯ ಅನುಚ್ಛೇದ 243 (ಐ) ಜಾರಿಗೆ ಬಂದ ಒಂದು ವರ್ಷದೊಳಗಾಗಿ ಮತ್ತು ಅಲ್ಲಿಂದ ಪ್ರತಿ ಐದು ವರ್ಷಗಳಿಗೊಮ್ಮೆ ಪಂಚಾಯತಿಗಳ ಹಣಕಾಸು ಸ್ಥಿತಿಗತಿ ಪರಾಮರ್ಶೆ ಮಾಡಲು ರಾಜ್ಯ ಹಣಕಾಸು ಆಯೋಗವನ್ನು ರಚಿಸಬೇಕು. (ಪ್ರಶ್ನೆ: ರಾಜ್ಯ ಹಣಕಾಸು ಆಯೋಗ ಯಾರು ರಚಿಸುತ್ತಾರೆ, ಯಾವ ಅನುಚ್ಚೇದಡಿ ಮತ್ತು ಎಷ್ಟು ವರ್ಷಗಳಿಗೊಮ್ಮೆ, ಕೇಂದ್ರ ಹಣಕಾಸು ಆಯೋಗವನ್ನು ರಾಷ್ಟ್ರಪತಿಗಳು ಸಂವಿಧಾನದ ಅನುಚ್ಚೇದ 280 ರ ಪ್ರಕಾರ ರಚಿಸುತ್ತಾರೆ. 14ನೇ ಹಣಕಾಸು ಆಯೋಗದ ಅಧ್ಯಕ್ಷರು ವೈ ವಿ ರೆಡ್ಡಿ). ಕರ್ನಾಟಕದ ಮೊದಲ ಹಣಕಾಸು ಆಯೋಗದ ಅಧ್ಯಕ್ಷರು ಅಶ್ವಥ್ ನಾರಾಯಣ 10.6.94 ರಿಂದ 28.2.95 ನಂತರ ಡಾ. ಜಿ.ತಿಮ್ಮಯ್ಯ 95-96. ಎರಡನೇ ಆಯೋಗದ ಅಧ್ಯಕ್ಷರು ಟಿ,ಎನ್,ನರಸಿಂಹಮೂರ್ತಿ 2000-01, ಕೆ.ಪಿ.ಸುರೇಂದ್ರನಾಥ್ 28.2.2002 ರಿಂದ 23.12.2002. ಮೂರನೇ ಆಯೋಗದ ಅಧ್ಯಕ್ಷರು ಎ.ಜಿ.ಕೊಡಗಿ 2006-2008.

Question 2

2.ಭಾರತದಲ್ಲಿ ಗ್ರಾಮೀಣ ಭೂರಹಿತ ಉದ್ಯೋಗ ಭರವಸೆ ಕಾರ್ಯಕ್ರಮ ಜಾರಿಗೆ ಬಂದ ವರ್ಷ (RLEGP)______?

A
ಆಗಸ್ಟ್ 15, 1983
B
ಆಗಸ್ಟ್ 15, 1989
C
ಅಕ್ಟೋಬರ್ 2, 1980
D
ಅಕ್ಟೋಬರ್ 5, 1991
Question 2 Explanation: 
ಆಗಸ್ಟ್ 15, 1983:

ಗ್ರಾಮೀಣ ಭೂರಹಿತ ಉದ್ಯೋಗ ಭರವಸೆ ಕಾರ್ಯಕ್ರಮ (Rural Landless Employment Guarantee Programme)ವನ್ನು ಆಗಸ್ಟ್ 15, 1983 ರಂದು ಜಾರಿಗೊಳಿಸಲಾಯಿತು. ಭೂರಹಿತ ಕುಟುಂಬಗಳಿಗೆ 100 ದಿನ ಉದ್ಯೋಗ ಭರವಸೆಯನ್ನು ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. 1989 ರಲ್ಲಿ ಭೂರಹಿತ ಉದ್ಯೋಗ ಭರವಸೆ ಕಾರ್ಯಕ್ರಮ ಮತ್ತು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಕಾರ್ಯಕ್ರಮವನ್ನು ವಿಲೀನಿಗೊಳಿಸಿ ಜವಹಾರ್ ರೋಜಗಾರ್ ಯೋಜನೆಯನ್ನು ಜಾರಿಗೊಳಿಸಲಾಯಿತು.

Question 3

3.ಚಂದ್ರಪ್ಪನು ಗ್ರಾಮ ಪಂಚಾಯತಿಯಿಂದ ಅಳವಡಿಸಿರುವ ಸಾರ್ವಜನಿಕ ಕುಡಿಯುವ ನೀರಿನ ಪೈಪನ್ನು ದುರಸ್ಥಿ ಮಾಡಿಸುವಂತೆ ಸಕಾಲ ಯೋಜನೆಯಡಿ ಗ್ರಾಮ ಪಂಚಾಯತಿಗೆ ಅರ್ಜಿ ನೀಡಿದ್ದಾನೆ. ಗ್ರಾಮ ಪಂಚಾಯತಿಯು ಎಷ್ಟು ದಿನದೊಳಗೆ ದುರಸ್ಥಿಪಡಿಸಬೇಕು?

A
ಮೂರು
B
ಐದು
C
ಎಂಟು
D
ಹತ್ತು
Question 3 Explanation: 
ಮೂರು:

ಸಕಾಲ ಯೋಜನೆಯನ್ನು ಸಾರ್ವಜನಿಕರಿಗೆ ಗೊತ್ತುಪಡಿಸಿದ ದಿನದೊಳಗೆ ಸೇವೆಯನ್ನು ನೀಡಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕಾಯಿದೆ. ಈ ಕಾಯಿದೆಯಡಿ ಗ್ರಾಮ ಪಂಚಾಯತಿ 11 ಸೇವೆಗಳು ಬರಲಿದ್ದು, ಯಾವುದೇ ವ್ಯಕ್ತಿ ಬರವಣಿಗೆ ಮೂಲಕ ಅಥವಾ ದೂರವಾಣಿ ಮೂಲಕ ದೂರು ದಾಖಲಿಸಬಹುದು. ನೆನಪಿಡಿ (ಕುಡಿಯುವ ನೀರು ಮತ್ತು ಬೀದಿ ದೀಪವನ್ನು ಅರ್ಜಿ ನೀಡಿದ ಮೂರು ದಿನದೊಳಗೆ ದುರಸ್ಥಿ ಪಡಿಸಬೇಕು. ಚರಂಡಿಯನ್ನು 7 ದಿನದೊಳಗೆ ಸ್ವಚ್ಚಪಡಿಸಬೇಕು). ಉಳಿದ ಸೇವೆಗಳಿಗೆ 30 ರಿಂದ 45 ದಿನಗಳ ಕಾಲವಕಾಶವಿದೆ.

Question 4

4.ಕರ್ನಾಟಕದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯತಿ, ತಾಲ್ಲೂಕ್ ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳ ಸಂಖ್ಯೆ______?

A
6045, 176, 30
B
6020, 175, 30
C
6020, 176, 30
D
6122, 176, 30
Question 4 Explanation: 
6020, 176, 30:

ರಾಜ್ಯದಲ್ಲಿ ಒಟ್ಟು 6020 ಗ್ರಾಮ ಪಂಚಾಯತಿಗಳು, 176 ತಾಲ್ಲೂಕ ಪಂಚಾಯತಿಗಳು ಮತ್ತು 30 ಜಿಲ್ಲಾ ಪಂಚಾಯತಿಗಳು ಕಾರ್ಯನಿರ್ವಹಿಸುತ್ತಿವೆ.

Question 5

5.ಗ್ರಾಮ ಪಂಚಾಯತಿ ಪುನರ್ ವಿಂಗಡಣಾ ಸಮಿತಿಯ ಅಧ್ಯಕ್ಷರಾಗಿದ್ದವರು ಯಾರು?

A
ರಮೇಶ್ ಕುಮಾರ್
B
ಎಸ್.ವಿ. ನಂಜಯ್ಯನಮಠ
C
ಕೋಳಿವಾಡ
D
ಕಾಗೋಡು ತಿಮ್ಮಪ್ಪ
Question 5 Explanation: 
ಎಸ್.ವಿ. ನಂಜಯ್ಯನಮಠ:

ರಾಜ್ಯದಲ್ಲಿ ಗ್ರಾಮ ಪಂಚಾಯತಿಗಳ ಪುನರ್ ವಿಂಗಡಣೆ ಮಾಡುವ ಸಲುವಾಗಿ ಮಾಜಿ ಶಾಸಕ ಎಸ್.ವಿ.ನಂಜಯ್ಯಮಠ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತಿ ಪುನರ್ ವಿಂಗಡಣಾ ಸಮಿತಿಯನ್ನು ರಚಿಸಲಾಗಿತ್ತು. ಎಸ್.ಕೆ. ಭಾಗವರ್, ಅಬ್ದುಲ್ ನಜೀರ್ಸಾಬ್, ಡಾ. ದೇವಯ್ಯ ಒಡೆಯರ್ ಸಮಿತಿ ಸದಸ್ಯರಾಗಿದ್ದರು. 23 ವರ್ಷಗಳ ಹಿಂದೆ ಇದ್ದ ಜನಗಣತಿ ಆಧಾರದ ಮೇಲೆ ಸ್ಥಾಪಿಸಲಾಗಿದ್ದ ಗ್ರಾಮಪಂಚಾಯತಿಗಳನ್ನು, 2011ರ ಜನಗಣತಿ ಆಧಾರದ ಮೇಲೆ ಗ್ರಾಮಪಂಚಾಯತಿಗಳ ಪುನರ್ ವಿಂಗಡಣೆ, ಪರಿಷ್ಕರಣೆ ಹಾಗೂ ಬದಲಾವಣೆ ಮಾಡಲು ಸಮಿತಿಯನ್ನು ಕೋರಲಾಗಿತ್ತು. ಸಮಿತಿಯ ವರದಿಯಂತೆ 5,629 ಗ್ರಾಮ ಪಂಚಾಯಿತಿಗಳ ಸಂಖ್ಯೆ 6020ಕ್ಕೆ ಏರಿದೆ.

Question 6

6.ರಾಜ್ಯದ ಯಾವುದೇ ಗ್ರಾಮ ಪಂಚಾಯತಿಯ ಸಿಬ್ಬಂದಿ ವಿವರ, ತೆರಿಗೆ ಬೇಡಿಕೆ ವಸೂಲಾತಿ ಮತ್ತು ಸಭೆ ಮತ್ತಿತ್ತರ ವಿವರಗಳನ್ನು ಈ ತಂತ್ರಾಂಶದಲ್ಲಿ ಅಳವಡಿಸಬೇಕು______?

A
ಪಂಚಮಿತ್ರ
B
ವರ್ಕ್ ಸಾಪ್ಟ್
C
ಪಂಚತಂತ್ರ
D
ಎಂಡ್2ಎಂಡ್
Question 6 Explanation: 
ಪಂಚತಂತ್ರ:

ಪಂಚತಂತ್ರ ತಂತ್ರಾಂಶದಲ್ಲಿ ಪ್ರತಿ ಗ್ರಾಮ ಪಂಚಾಯತಿಯು ತನ್ನ ಸಿಬ್ಬಂದಿ ವಿವರ, ಪಂಚಾಯತಿ ಸಂಬಂಧಪಟ್ಟ ತೆರಿಗೆ ಬೇಡಿಕೆ ಮತ್ತು ವಸೂಲಾತಿ, ಗ್ರಾಮ ಪಂಚಾಯತಿಯಲ್ಲಿ ನಡೆಸಲಾಗುವ ವಾರ್ಡ್ ಸಭೆ, ಗ್ರಾಮ ಸಭೆ ಹಾಗೂ ಸಾಮಾನ್ಯ ಸಭೆ ವಿವರ, ಗ್ರಾಪ ಪಂಚಾಯತಿಗಳ ಸ್ಥಿರಾಸ್ಥಿ ಸೇರಿದಂತೆ ಹಲವು ಮಾಹಿತಿಗಳನ್ನು ಪಂಚತಂತ್ರದಲ್ಲಿ ಅಳವಡಿಸಬೇಕು. ಈ ಮಾಹಿತಿಯನ್ನು ಯಾರು ಬೇಕಾದರು ತಾವು ಕುಳಿತಲ್ಲಿಯೇ ನೋಡಬಹುದಾಗಿದೆ. ಪಂಚತಂತ್ರದಲ್ಲಿ ಲಭಿಸುವ ಮಾಹಿತಿ ನೋಡಲು ಈ ಲಿಂಕ್ ಬಳಸಿ ನೋಡಿ http://panchatantra.kar.nic.in/stat/

Question 7

7.ಗ್ರಾಮ ಪಂಚಾಯತಿ ರಚನೆಯಾದ ಮೊದಲ ಸಭೆಯನ್ನು ಯಾರು ಕರೆಯತಕ್ಕದ್ದು?

A
ಗ್ರಾಮ ಪಂಚಾಯತಿ ಅಧ್ಯಕ್ಷರು
B
ಕಾರ್ಯನಿರ್ವಹಣಾಧಿಕಾರಿ
C
ಜಿಲ್ಲಾಧಿಕಾರಿ ಗೊತ್ತುಪಡಿಸಿದ ಅಧಿಕಾರಿ
D
ಅಸಿಸ್ಟೆಂಟ್ ಕಮೀಷನರ್
Question 7 Explanation: 
ಗ್ರಾಮ ಪಂಚಾಯತಿ ಅಧ್ಯಕ್ಷರು:

ಗ್ರಾಮ ಪಂಚಾಯತಿ ರಚನೆಯಾದ ಮೇಲೆ ಮೊದಲ ಸಭೆಯನ್ನು ಜಿಲ್ಲಾಧಿಕಾರಿ ಗೊತ್ತುಪಡಿಸಿದ ಅಧಿಕಾರಿ ಕರೆಯತಕ್ಕದ್ದು. ತಾಲ್ಲೂಕು ಪಂಚಾಯತಿ ಮೊದಲ ಸಭೆಯನ್ನು ಅಸಿಸ್ಟೆಂಟ್ ಕಮೀಷನರ್, ಜಿಲ್ಲಾ ಪಂಚಾಯತಿ ಮೊದಲ ಸಭೆಯನ್ನು ಡಿವಿಜನಲ್ ಕಮೀಷನರ್ (ವಿಭಾಗಾಧಿಕಾರಿ) ಕರೆಯಬೇಕು. ಗ್ರಾಮ ಪಂಚಾಯತಿ ರಚನೆ ಅಂದರೆ ಪ್ರತಿ ಚುನಾವಣೆ ಆಗಿ ಸದಸ್ಯರು ಆಯ್ಕೆಯಾದ ಮೇಲೆ ಎಂದರ್ಥ. (ಪ್ರಶ್ನೆ: ಎಷ್ಟು ದಿನದೊಳಗೆ ಮೊದಲ ಸಭೆ ಕರೆಯಬೇಕು? ಚುನಾಯಿತ ಸದಸ್ಯರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದ ದಿನದಿಂದ ಮೂವತ್ತು ದಿನದೊಳಗಾಗಿ ಕರೆಯಬೇಕು). (ನಂತರದ ಸಭೆಯನ್ನು ಆಯಾ ಪಂಚಾಯತಿಯ ಅಧ್ಯಕ್ಷರು ಕರೆಯುತ್ತಾರೆ. ಸಭೆಯನ್ನು ಕಡ್ಡಾಯವಾಗಿ ಕೇಂದ್ರ ಕಚೇರಿ ಸ್ಥಳದಲ್ಲೇ ಕರೆಯಬೇಕು).

Question 8

8.ಗ್ರಾಮ ಪಂಚಾಯತಿಯು ಕನಿಷ್ಠ ಪಕ್ಷ ಎಷ್ಟು ತಿಂಗಳಿಗೊಮ್ಮೆ ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯನ್ನು ಕರೆಯಬೇಕು?

A
ಎರಡು ತಿಂಗಳು
B
ಮೂರು ತಿಂಗಳು
C
ಒಂದು ತಿಂಗಳು
D
ಹದಿನೈದು ದಿನಕ್ಕೊಮ್ಮೆ
Question 8 Explanation: 
ಒಂದು ತಿಂಗಳು:

ಗ್ರಾಮ ಪಂಚಾಯತಿಯು ಕಾರ್ಯಕಲಾಪವನ್ನು ನಡೆಸುವುದಕ್ಕಾಗಿ ಕಚೇರಿಯಲ್ಲಿ ಕನಿಷ್ಠಪಕ್ಷ ಒಂದು ತಿಂಗಳಿಗೊಮ್ಮೆ ಮತ್ತು ಅಧ್ಯಕ್ಷನು ನಿರ್ಧರಿಸಬಹುದಾದ ಕಾಲದಲ್ಲಿ ಸಭೆಯನ್ನು ಕರೆಯಬೇಕು. ಗ್ರಾಮ ಪಂಚಾಯತಿಯಲ್ಲಿ ಮೂರು ತರದ ಸಭೆಗಳನ್ನು ನಡೆಸಬಹುದಾಗಿದೆ ಅವುಗಳೆಂದರೆ ಸಾಮಾನ್ಯ ಸಭೆ, ವಿಶೇಷ ಸಭೆ ಮತ್ತು ತುರ್ತು ಸಭೆ. [ಸಾಮಾನ್ಯ ಸಭೆ:ಸಾಮಾನ್ಯ ಸಭೆಯನ್ನು ಕನಿಷ್ಠ ಒಂದು ತಿಂಗಳಿಗೊಮ್ಮೆ ಕರೆಯಬೇಕು. ಸಾಮಾನ್ಯ ಸಭೆ ಕರೆದಿರುವ ಬಗ್ಗೆ ಸದಸ್ಯರಿಗೆ ಏಳು ಪೂರ್ಣ ದಿವಸಗಳ ನೋಟಿಸನ್ನು ನೀಡಬೇಕು. ಸಾಮಾನ್ಯ ಸಭೆಗೆ ಕೋರಂ ಒಟ್ಟು ಸಂಖ್ಯೆಯ ಅರ್ಧದಷ್ಟು ಇರಬೇಕು ಉದಾ 18 ಜನ ಸದಸ್ಯರಿದ್ದರೆ (ಅಧ್ಯಕ್ಷನು ಸೇರಿ) 9 ಜನ ಹಾಜರಿದ್ದರೆ ಮಾತ್ರ ಸಭೆ ನಡೆಸಬೇಕು, ಒಂದು ವೇಳೆ ಕೋರಂ ಇಲ್ಲದಿದ್ದಲ್ಲಿ ಮೂವತ್ತು ನಿಮಿಷ ಕಾಯಬೇಕು ಆಗಲೂ ಇಲ್ಲದಿದ್ದಲ್ಲಿ ಮಾರನೇ ದಿನದಂದು ಅಥವಾ ತರುವಾಯ ದಿನದಂದು ನಿಗಧಿಪಡಿಸಬೇಕು]. [ವಿಶೇಷ ಸಭೆ: ಅಧ್ಯಕ್ಷನು ತಾನು ಸೂಕ್ತವೆಂದಾಗ ಮತ್ತು ಒಟ್ಟು ಸಂಖ್ಯೆಯ ಮೂರನೇ ಒಂದು ಭಾಗಕ್ಕೆ ಕಡಿಮೆ ಇಲ್ಲದಷ್ಟು ಸದಸ್ಯರು ಬರಹದಲ್ಲಿ ಕೋರಿದಾಗ ಅಂತಹ ಕೋರಿಕೆ ತಲುಪಿದ ಹದಿನೈದು ದಿನದೊಳಗೆ ವಿಶೇಷ ಸಭೆಯನ್ನು ಕರೆಯತಕ್ಕದ್ದು. ವಿಶೇಷ ಸಭೆಯ ಬಗ್ಗೆ ಮೂರು ದಿವಸಗಳ ಪೂರ್ಣ ನೋಟಿಸ್ ನೀಡಬೇಕು]. [ತುರ್ತು ಸಭೆಯನ್ನು 24 ಗಂಟೆಯೊಳಗೆ ತುರ್ತು ಪರಿಸ್ಥಿಯಲ್ಲಿ ಅಂದರೆ ಪ್ರವಾಹ ಇತ್ಯಾದಿ ಸಂದರ್ಭಗಳಲ್ಲಿ ಕರೆಯತಕ್ಕದ್ದು]. [ಪ್ರಶ್ನೆ: ಸಭೆಯಲ್ಲಿ ಚರ್ಚಿಸಬೇಕಾದ ವಿಯಷ (ಅಜೆಂಡಾ)ವನ್ನು ಸೂಚಿಸುವವರು ಯಾರು? ಅಧ್ಯಕ್ಷರು. ಒಮ್ಮೆ ಸಭೆಯಲ್ಲಿ ಕೈಗೊಳ್ಳಲಾದ ತೀರ್ಮಾನವನ್ನು ಎಷ್ಟು ತಿಂಗಳ ಕಾಲ ಬದಲಾಯಿಸುವಂತಿಲ್ಲ? ಆರು ತಿಂಗಳು.

Question 9

9.MGNREGA ಕಾಯಿದೆ ಅನ್ವಯ ರಚಿಸಲಾಗುವ ಕೇಂದ್ರ ಉದ್ಯೋಗ ಖಾತರಿ ಪರಿಷತ್ತ್ ಅಧ್ಯಕ್ಷರು ______?

A
ಪ್ರಧಾನ ಮಂತ್ರಿ
B
ಗ್ರಾಮೀಣಭಿವೃದ್ದಿ ಸಚಿವರು
C
ಗೃಹ ಸಚಿವರು
D
ಆರ್ಥಿಕ ಸಚಿವರು
Question 9 Explanation: 
ಗ್ರಾಮೀಣಭಿವೃದ್ದಿ ಸಚಿವರು:

ಮಾನ್ಯ ಗ್ರಾಮೀಣಭಿವೃದ್ದಿ ಕೇಂದ್ರ ಸಚಿವರ ಅಧ್ಯಕ್ಷತೆಯಲ್ಲಿ ಕೇಂದ್ರ ಉದ್ಯೋಗ ಖಾತರಿ ಪರಿಷತ್ತ್ ರಚನೆಗೊಂಡಿರುತ್ತದೆ. ಅದೇ ರೀತಿ ಪ್ರಕರಣ 12ರಡಿಯಲ್ಲಿ ರಾಜ್ಯ ಸರ್ಕಾರವೂ ರಾಜ್ಯ ಉದ್ಯೋಗ ಖಾತರಿ ಪರಿಷತ್ ಸ್ಥಾಪಿಸಬೇಕು. ಇದಕ್ಕೆ ಅಧ್ಯಕ್ಷರನ್ನು ರಾಜ್ಯ ಸರ್ಕಾರ ನೇಮಿಸುತ್ತದೆ. ಕಾಯ್ದೆಯ ಅನುಷ್ಟಾನಕ್ಕೆ ಬೇಕಾದ ಸಲಹೆಗಳನ್ನು ಮತ್ತು ವರದಿಯನ್ನು ನೀಡುವುದು ಪರಿಷತ್ ಮುಖ್ಯ ಕಾರ್ಯವಾಗಿರುತ್ತದೆ.

Question 10

10.ಆಶಾ (ASHA) ಕಾರ್ಯಕರ್ತೆಯಾಗಿ ಆಯ್ಕೆಯಾಗಲು ಕನಿಷ್ಠ ವಿದ್ಯಾರ್ಹತೆ _______?

A
ಏಳನೇ ತರಗತಿ
B
ಎಂಟನೇ ತರಗತಿ
C
ಹತ್ತನೇ ತರಗತಿ
D
ಪಿಯುಸಿ
Question 10 Explanation: 
ಹತ್ತನೇ ತರಗತಿ:

ಆಶಾ (Accredited Social Health Activist) ಕಾರ್ಯಕರ್ತೆಯಾಗಲು ಕನಿಷ್ಠ ಹತ್ತನೇ ತರಗತಿ ಓದಿರಬೇಕು. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ನಡಿ ಪ್ರತಿ ಹಳ್ಳಿಗೆ ಒಬ್ಬ ಆಶಾ ಕಾರ್ಯಕರ್ತೆಯನ್ನು ನೇಮಿಸಿಕೊಂಡು ಸಾರ್ವಜನಿಕರು ಮತ್ತು ವೈದ್ಯಾಧಿಕಾರಿಗಳ ಕೊಂಡಿಯಾಗಿ ಇವರು ಕೆಲಸ ನಿರ್ವಹಿಸುತ್ತಾರೆ. 25-45 ವರ್ಷದೊಳಗಿನ ವಿಧವೆ, ವಿಚ್ಚೇದಿತ ಮಹಿಳೆಗೆ ಆದ್ಯತೆ ನೀಡಲಾಗುವುದು ಹಾಗೂ ಕಡ್ಡಾಯವಾಗಿ ಹಳ್ಳಿಯಲ್ಲೇ ವಾಸವಿರಬೇಕು.

There are 10 questions to complete.

ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

18 Thoughts to “ಗ್ರಾ ಪಂ ಅ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಕ್ವಿಜ್-5”

  1. Mahadesh

    How study pdo

  2. Nagesh B Kamble

    ಸರ್ ನೀವು ನೀಡುವ ಮಾಹಿತಿ ಮುಂದಿನ ಪರೀಕ್ಷೆ ದೃಷ್ಟಿಯಿಂದ ತುಂಬಉಪಯುಕ್ತ ವಾಗಿದೆ ಸರ್ ತುಂಬಾ ತುಂಬಾ ಹೃದಯಪುರಕ ಅಭಿನಂದನೆಗಳು ಧನ್ಯವಾದಗಳು ಸರ್

  3. Anonymous

    Sir open agtha illa ?

    1. Karunaduexams

      Thank u all…plz use chrome browser if there is any problem in site opening..if problem still persist plz give ur no we will call u back

  4. shivannanaik r m

    sir tumba thanks sir.. tumba chenagide

  5. anjaneya

    Thank u sir

  6. Anonymous

    Thanks ravi sir

  7. Tammanna sahukar

    Good

  8. ಸಂತೋಷ್ ಗೌಡರ

    ಧನ್ಯವಾದಗಳು ಸರ್

  9. Salma Nadaf

    Really very useful information sir thankq

  10. Sir question 7 grama pachayti rachaneyada modala sabeyanu grama panchaytiya adyaksha karibeku anta ide but vivaraneyali jiladikari gothu padisida adikari anta ide

  11. raghav

    sir total gram panchayat 6068 alwa… but idralli 6020 ide pls confirm sir

Leave a Comment

This site uses Akismet to reduce spam. Learn how your comment data is processed.