ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 14, 2016
Question 1 |
1.ದೇಶದ ಮೊದಲ ನಿಕ್ಕಲ್ (Nickel) ಉತ್ಪಾದನ ಸೌಲಭ್ಯವನ್ನು ಯಾವ ರಾಜ್ಯದಲ್ಲಿ ಇತ್ತೀಚೆಗೆ ಸ್ಥಾಪಿಸಲಾಗಿದೆ?
ಚತ್ತೀಸ್ ಘರ್ | |
ಜಾರ್ಖಂಡ್ | |
ಓಡಿಶಾ | |
ಪಶ್ಚಿಮ ಬಂಗಾಳ |
ದೇಶದ ಮೊದಲ ನಿಕ್ಕಲ್ ಉತ್ಪಾದನ ಸೌಲಭ್ಯವನ್ನು ಚತ್ತೀಸ್ ಘರ್ ನಲ್ಲಿ ಆರಂಭಿಸಲಾಯಿತು. ಹಿಂದೂಸ್ತಾನ್ ಕಾಪರ್ ಲಿಮಿಟೆಡ್ ಈ ಸೌಲಭ್ಯವನ್ನು ಚತ್ತೀಸ್ ಘರ್ದ ಘಾಟ್ ಶಿಲ ಬಳಿ ಇರುವ ತನ್ನ ಇಂಡಿಯನ್ ಕಾಪರ್ ಕಾಂಪ್ಲೆಕ್ಸ್ನಲ್ಲಿ ಆರಂಭಿಸಿದೆ. ಭಾರತದ ಪ್ರಥಮ “ನಿಕ್ಕಲ್, ಕಾಪರ್ ಮತ್ತು ಆಸಿಡ್” ಉತ್ಪಾದನ ಘಟಕ ಇದಾಗಿದ್ದು ಲಂಡನ್ ಮೆಟಲ್ ಎಕ್ಸಚೆಂಜ್ ಗುಣಮಟ್ಟದ ನಿಕ್ಕಲ್ ಅನ್ನು ತಯಾರಿಸಲಾಗುವುದು. ಪ್ರಥಮ ಹಂತದಲ್ಲಿ ಈ ಘಟಕವು ವಾರ್ಷಿಕ 50 ಟನ್ ನಿಕ್ಕಲ್ ಉತ್ಪಾದಿಸುವ ಸಾಮರ್ಥ ಹೊಂದಿದ್ದು, ಮುಂದಿನ ದಿನಗಳಲ್ಲಿ ಎಂಟು ಪಟ್ಟು ಹೆಚ್ಚು ಉತ್ಪಾದಿಸಲಿದೆ.
Question 2 |
2.ಈ ಕೆಳಗಿನ ಯಾವ ರಾಜ್ಯ “ಸ್ಟೂಡೆಂಟ್ ಕ್ರೆಡಿಟ್ ಕಾರ್ಡ್” ಯೋಜನೆ ಜಾರಿಗೆ ತರಲು ನಿರ್ಧರಿಸಿದೆ?
ಮಣಿಪುರ | |
ಓಡಿಶಾ | |
ಬಿಹಾರ | |
ಪಶ್ಚಿಮ ಬಂಗಾಳ |
ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡಲು ಬಿಹಾರ ಸರ್ಕಾರ “ಸ್ಟೂಡೆಂಟ್ ಕ್ರೆಡಿಟ್ ಕಾರ್ಡ್” ಯೋಜನೆಯನ್ನು ಜಾರಿಗೆ ತರಲಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ 70ನೇ ಸ್ವಾತಂತ್ರ ದಿನಾಚರಣೆ ದಿನ ಈ ಯೋಜನೆಯನ್ನು ಘೋಷಸಿದ್ದಾರೆ. ಯೋಜನೆಯು ಅಕ್ಟೋಬರ್ 2 ರಿಂದ ಜಾರಿಗೆ ಬರಲಿದೆ. ಯೋಜನೆಯಡಿ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳಿಗೆ ರೂ ನಾಲ್ಕು ಲಕ್ಷಗಳ ವರೆಗೆ ಬಡ್ಡಿ ರಹಿತ ಆರ್ಥಿಕ ಸಹಾಯ ನೀಡಲಾಗುವುದು.
Question 3 |
3.ಒಲಂಪಿಕ್ಸ್ ಗೆ ವಿದಾಯ ಹೇಳಿದ ಮೈಕಲ್ ಪೆಲ್ಪ್ಸ್ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಒಟ್ಟು ಎಷ್ಟು ಪದಕಗಳನ್ನು ಗೆದ್ದಿದ್ದಾರೆ?
24 | |
26 | |
28 | |
29 |
ವಿಶ್ವವಿಖ್ಯಾತ ಈಜುಗಾರ ಅಮೆರಿಕದ ಮೈಕೆಲ್ ಫೆಲ್ಪ್ಸ್ ಒಲಿಂಪಿಕ್ಸ್ ಗೆ ವಿದಾಯ ಹೇಳಿದರು. ಒಲಂಪಿಕ್ಸ್ ನಲ್ಲಿ ಅತಿ ಹೆಚ್ಚು ಅಂದರೆ 23ನೇ ಚಿನ್ನದ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್ ಗೆ ವಿದ್ಯುಕ್ತ ವಿದಾಯ ಹೇಳಿದ್ದಾರೆ. ಪೆಲ್ಪ್ಸ್ ತಮ್ಮ ಯಶಸ್ವಿ ಒಲಂಪಿಕ್ಸ್ನಲ್ಲಿ 23 ಚಿನ್ನದ ಪದಕ, 3 ಬೆಳ್ಳಿ ಮತ್ತು ಎರಡು ಕಂಚಿನ ಪದಕ ಸಹಿತ ಒಟ್ಟು 28 ಪದಕಗಳನ್ನು ಗೆದ್ದಿದ್ದಾರೆ. ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಅತಿ ಹೆಚ್ಚು ಚಿನ್ನದ ಪದಕಗಳನ್ನು ಪಡೆದ ದಾಖಲೆ ಇವರದು. ರಿಯೋ ಒಲಂಪಿಕ್ಸ್ ಪೆಲ್ಪ್ಸ್ ಗೆ ಐದನೇ ಒಲಂಪಿಕ್ಸ್.
Question 4 |
4.ಉದ್ದೇಶಿತ “ಕಾಳೇಶ್ವರಂ ನೀರಾವರಿ” ಯೋಜನೆಯು ಯಾವ ರಾಜ್ಯಕ್ಕೆ ಸಂಬಂಧಿಸಿದೆ?
ಆಂಧ್ರ ಪ್ರದೇಶ | |
ಮಹಾರಾಷ್ಟ್ರ | |
ತೆಲಂಗಣ | |
ತಮಿಳು ನಾಡು |
ಕಾಳೇಶ್ವರಂ ನೀರಾವರಿ ಯೋಜನೆಯು ತೆಲಂಗಣ ರಾಜ್ಯದ ಉದ್ದೇಶಿತ ನೀರಾವರಿ ಯೋಜನೆಯಾಗಿದೆ. ಈ ಯೋಜನೆಯನ್ನು ಗೋದಾವರಿ ನದಿಯ ಮೇಲೆ ನಿರ್ಮಿಸಲಾಗುತ್ತಿದೆ. ಯೋಜನೆಯು ತೆಲಂಗಣದ ಜನರಿಗೆ ವರದಾನವಾಗಲಿದೆ ಎಂದು ಹೇಳಲಾಗಿದೆ. ಸುಮಾರು 11.2 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೇರಿದಂತೆ ಹೈದ್ರಾಬಾದ್ ಗೆ 30 ಟಿಎಂಸಿ ನೀರನ್ನು ಕುಡಿಯಲು ಸರಬರಾಜು ಮಾಡಲಾಗುವುದು. ಜೊತೆಗೆ ಈ ಯೋಜನೆಯ ಅಸುಪಾಸಿನ ಹಳ್ಳಿಗಳಿಗೂ 10 ಟಿಎಂಸಿ ನೀರು ಹಾಗೂ ಕೈಗಾರಿಕೆಗೆ 16 ಟಿಎಂಸಿ ನೀರನ್ನು ಸರಬರಾಜು ಮಾಡುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.
Question 5 |
5.ದೇಶದ ಮೊದಲ ಬಯೋ-ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (Bio-CNG) ಉತ್ಪಾದನ ಘಟಕಕ್ಕೆ ಎಲ್ಲಿ ಚಾಲನೆ ನೀಡಲಾಯಿತು?
ಪುಣೆ | |
ಭೂಪಾಲ್ | |
ಚೆನ್ನೈ | |
ಕೊಚ್ಚಿ |
ಕೃಷಿ ತ್ಯಾಜ್ಯ ಬಳಸಿ ಬಯೋ-ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ ಉತ್ಪಾದಿಸುವ ಘಟಕವನ್ನು ಪುಣೆಯಲ್ಲಿ ಪ್ರಾರಂಭಿಸಲಾಗಿದೆ. ದೇಶದಲ್ಲೇ ಮೊದಲೆನಿಸಿರುವ ಈ ಘಟಕವನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪಣಿಕ್ಕರ್ ರವರು ಜಂಟಿಯಾಗಿ ಲೋಕಾರ್ಪಣೆ ಮಾಡಿದರು. ಪುಣೆ ಮೂಲದ ಪ್ರೈಮೊವ್ ಎಂಜನಿಯರಿಂಗ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆ ಈ ಘಟಕವನ್ನು ನಿರ್ಮಿಸಿದೆ. ಕೃಷಿ ತ್ಯಾಜ್ಯವನ್ನು ಬ್ಯಾಕ್ಟೀರಿಯಾದಿಂದ ಕೊಳಸುವ ಮೂಲಕ ಅನಿಲವನ್ನು ಉತ್ಪಾದಿಸಿ, ಅನಂತರ ಅನಿಲವನ್ನು ಶುದ್ದೀಕರಿಸಿ, ಕಂಪ್ರೆಸ್ ಮಾಡುವ ಮೂಲಕ ವಾಹನಗಳಲ್ಲಿ ಬಳಸಲಾಗುವುದು.
Question 6 |
6.ಇತ್ತೀಚೆಗೆ ನಿಧನರಾದ ನ.ಮುತ್ತುಕುಮಾರ್ ಯಾವ ಸಿನಿಮಾ ಕ್ಷೇತ್ರದಲ್ಲಿ ಪ್ರಸಿದ್ದ ಸಾಹಿತಿಯಾಗಿದ್ದರು?
ಮಲಯಾಳಂ | |
ತಮಿಳು | |
ತೆಲುಗು | |
ಮರಾಠಿ |
ತಮಿಳು ಚಿತ್ರರಂಗದ ಖ್ಯಾತ ಸಾಹಿತಿ, ಎರಡು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ನ. ಮುತ್ತುಕುಮಾರ್ ಅವರು ನಿಧನರಾದರು. ನಿರ್ದೇಶನಾಗುವ ಆಸೆಯೊಂದಿಗೆ ತಮಿಳು ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದ ಮುತ್ತುಕುಮಾರ್ ಅವರು, ಬಾಲು ಮಹೇಂದರ್ ಅವರೊಂದಿಗೆ ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದರು. ತದ ನಂತರ ಕೆಲ ಚಿತ್ರಗಳಿಗೆ ಸಂಭಾಷಣೆಕಾರರಾಗಿ ಕೆಲಸ ಮಾಡಿ, ವೀರ ನಡೈ ಚಿತ್ರಕ್ಕೆ ಸಾಹಿತ್ಯ ಬರೆಯುವ ಮೂಲಕ ಸಾಹಿತಿಯಾದರು. ಇವರ ತಂಗ ಮೀಂಗಲ್ ಸಿನಿಮಾದ ಆನಂದ ಯಾಜೈ ಮತ್ತು ಸೈವಂ ಚಿತ್ರದ ಅಜಾಗೆ ಅಜಾಗು ಹಾಡಿನ ಉತ್ತಮ ಸಾಹಿತ್ಯಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಮುತ್ತುಕುಮಾರ್ ಅವರು ಈವರೆಗೂ 1000ಕ್ಕೂ ಹೆಚ್ಚು ಚಿತ್ರಗಳ ಹಾಡಿಗೆ ಸಾಹಿತಿ ಬರೆದಿದ್ದಾರೆ.
Question 7 |
7.ಪಿಎಸ್ಎ ಆಸ್ಟ್ರೇಲಿಯಾ ಸ್ಕ್ವಾಷ್ ಓಪನ್-2016 ಪ್ರಶಸ್ತಿ ಗೆದ್ದವರು ಯಾರು?
ದೀಪಿಕಾ ಪಳ್ಳಿಕಲ್ | |
ಮಯರ್ ಹನಿ | |
ಜೋಶ್ನ ಚಿನ್ನಪ್ಪ | |
ಸೌರವ್ ಘೋಷಲ್ |
ಭಾರತದ ಅಗ್ರ ಶೇಯಾಂಕಿತ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಅವರು ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ನಡೆದ ಪಿಎಸ್ಎ ಆಸ್ಟ್ರೇಲಿಯಾ ಒಪನ್ ಟೈಟಲ್ ನಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡರು. ಫೈನಲ್ ಪಂದ್ಯದಲ್ಲಿ ದೀಪಿಕಾ ಈಜಿಪ್ಟ್ ನ ಮಯರ್ ಹನಿ ಅವರನ್ನು 10-12, 11-5, 11-6, 11-4 ರಲ್ಲಿ ಸೋಲಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
Question 8 |
8.ಈ ಕೆಳಗಿನ ಯಾವ ನದಿ ಗೋದಾವರಿ ನದಿಯ ಉಪನದಿ ಆಗಿಲ್ಲ?
ಪ್ರಣಹಿತ | |
ಇಂದ್ರಾವತಿ | |
ತಪತಿ | |
ಪೆನ್ ಗಂಗಾ |
ಗೋದಾವರಿ ನದಿ ಮಹಾರಾಷ್ಟ್ರ ರಾಜ್ಯದ ನಾಸಿಕ್ ಜಿಲ್ಲೆಯ ತ್ರ್ಯಂಬಕೇಶ್ವರ ಬಳಿ ಹುಟ್ಟಿ ಆಂಧ್ರ ಪ್ರದೇಶ ರಾಜ್ಯದ ಮೂಲಕ ಹರಿದು ಬಂಗಾಳ ತಲುಪುತ್ತದೆ. 1465 ಕಿಮೀ ಉದ್ದದ, ಇದು ಗಂಗಾನದಿಯ ನಂತರದ ಅತೀದೊಡ್ಡ ನದಿಯಾಗಿದ್ದು ಭಾರತದ ಎರಡನೇ ದೊಡ್ದನದಿಯೂ ಮತ್ತು ದಕ್ಷಿಣ ಭಾರತದ ಅತ್ಯಂತ ದೊಡ್ಡ ನದಿಯೂ ಆಗಿದೆ. ಇದನ್ನು ದಕ್ಷಿಣದ ಗಂಗೆ (ದಕ್ಷಿಣಗಂಗಾ) ಎಂದು ಕರೆಯುತ್ತಾರೆ. ಇದು ಆದಿಲಾಬಾದ್ ಜಿಲ್ಲೆಯ ಬಸರಾದಲ್ಲಿ ಆಂಧ್ರ ಪ್ರದೇಶವನ್ನು ಪ್ರವೇಶಿಸುತ್ತದೆ. ಪ್ರಣಹಿತ, ಇಂದ್ರಾವತಿ, ಪೆನ್ ಗಂಗಾ, ವೆನ್ ಗಂಗಾ, ವಾರ್ದ, ಮಂಜಿರಾ, ತಲಿಪೆರು ಈ ನದಿಯ ಪ್ರಮುಖ ಉಪನದಿಗಳು.
Question 9 |
9.ರಿಯೋ ಒಲಂಪಿಕ್ಸ್ನ 3000 ಮೀಟರ್ ಸ್ಟೀಪಲ್ ಚೇಸ್ ನಲ್ಲಿ 32 ವರ್ಷಗಳ ನಂತರ ಫೈನಲ್ ತಲುಪಿದ ಭಾರತದ ಮಹಿಳಾ ಕ್ರೀಡಾಪಟು ಯಾರು?
ಅಂಕಿತಾ ಶರ್ಮ | |
ಲಲಿತಾ ಬಾಬರ್ | |
ದೀಪಾ ಕಮರ್ಕರ್ | |
ಮಮತಾ ಕುಮಾರಿ |
ಮಹಾರಾಷ್ಟ್ರದ ಲಲಿತಾ ಬಾಬರ್ ರಿಯೋ ಒಲಂಪಿಕ್ಸ್ನ 3000 ಮೀಟರ್ ಸ್ಟೀಪಲ್ ಚೇಸ್ ಕ್ವಾಲಿಫೈಯಿಂಗ್ ಸುತ್ತಿನಲ್ಲಿ 4ನೇಯವರಾಗಿ ಗುರಿ ಮುಟ್ಟಿ 32 ವರ್ಷಗಳ ನಂತರ ಸ್ಟೀಪಲ್ ಚೇಸ್ನ್ ಫೈನಲ್ಸ್ಗೆ ಲಗ್ಗೆ ಇಟ್ಟ ಭಾರತದ ಪ್ರಥಮ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. 1984 ರ ಒಲಿಂಪಿಕ್ಸ್ನಲ್ಲಿ ಪಿ ಟಿ ಉಷಾ ಓಟದ ಸ್ಪರ್ಧೆಯಲ್ಲಿ ಫೈನಲ್ ತಲುಪಿ ಸಾಧನೆ ಮಾಡಿದ್ದರು. ಲಲಿತಾ ಬಾಬರ್ ದಕ್ಷಿಣ ಕೊರಿಯಾದಲ್ಲಿ ಎರಡು ವರ್ಷದ ಹಿಂದೆ ನಡೆದ ಏಷಿಯನ್ ಗೇಮ್ಸ್ನಲ್ಲಿ ಕಂಚಿನ ಪದಕದ ಸಾಧನೆ ಮಾಡಿದ್ದರು.
Question 10 |
10.70ನೇ ಸ್ವಾತಂತ್ರ ದಿನದ ಅಂಗವಾಗಿ ಅಶೋಕ ಚಕ್ರ ಗೌರವವನ್ನು ಮರೋಣತ್ತರವಾಗಿ ಯಾರಿಗೆ ನೀಡಲಾಯಿತು?
ಲೇ. ಕರ್ನಲ್ ನಿರಂಜನ್ | |
ಹವಾಲ್ಡಾರ್ ಹಂಗ್ಪನ್ ದಾದಾ | |
ಪುರುಷೋತ್ತಮ್ ಸಿಂಗ್ | |
ಹನುಮಂತಪ್ಪ ಕೊಪ್ಪದ್ |
ವೀರ ಯೋಧ ಹುತ್ಮಾತ ಹವಾಲ್ಡಾರ್ ಹಂಗ್ಪನ್ ದಾದಾ ರವರಿಗೆ ದೇಶದ ಅತ್ಯುನ್ನತ ಸೇನಾ ಗೌರವವಾದ ಅಶೋಕಚಕ್ರವನ್ನು ಮರಣೋತ್ತರವಾಗಿ ನೀಡಿ ಗೌರವಿಸಲಾಗಿದೆ. ಮೇ 27 ರಂದು ಉತ್ತರ ಕಾಶ್ಮೀರದಲ್ಲಿ 13,000 ಅಡಿ ಎತ್ತರದ ಕ್ಷಿಷ್ಟಕರ ವಾತಾವರಣದಲ್ಲಿ ಕಾರ್ಯನಿರತರಾಗಿದ್ದ ದಾದಾ ಗಡಿ ನಿಯಂತ್ರಣ ರೇಖೆಯ ಬಳಿ ಭಯೋತ್ಪಾದಕರು ಒಳನುಸುಳುವದನ್ನು ತಡೆಯಲು ನಡೆಸಿದ ಗುಂಡಿನ ಕಾಳಗದಲ್ಲಿ ದಾದಾ ಹುತಾತ್ಮರಾಗಿದ್ದರು. ಸತತವಾಗಿ 24 ಗಂಟೆಗಳ ಕಾಲ ನಡೆದ ಕಾರ್ಯಚರಣೆಯಲ್ಲಿ ದಾದಾ ಮರಣ ಹೊಂದುವ ಮುನ್ನ ನಾಲ್ವರು ಭಯೋತ್ಪಾದಕರನ್ನು ಕೊಂದಿದ್ದರು. ಇವರ ಶೌರ್ಯವನ್ನು ಗುರುತಿಸಿದ ಸೇನಾ ಪಡೆ ಅಶೋಕ ಚಕ್ರ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು.
Thanks
Thank Q
Thanks alot sir
nice
thanks
ಧನ್ಯವಾದಗಳು ಸರ್
thank u sir
thaks