ಜಗತ್ತಿನ ಮೊದಲ ಕ್ವಾಂಟಮ್ ಸಂವಹನ ಉಪಗ್ರಹವನ್ನು ಉಡಾವಣೆ ಮಾಡಿದ “ಚೀನಾ”
ವಿಶ್ವದ ಮೊಲದ ಕ್ವಾಂಟಮ್ ಉಪ್ರಗಹ ಕ್ವಾಂಟಮ್ ಎಕ್ಸ್ಪೆರಿಮೆಂಟ್ಸ್ ಅಟ್ ಸ್ಪೇಸ್ ಸ್ಕೇಲ್ (QUESS)ನ್ನು ಚೀನಾ ಈಚೆಗೆ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಚೀನಾದ ಗನ್ಸುನಲ್ಲಿರುವ ಜಿಕ್ವಾನ್ ಉಪಗ್ರಹ ಉಡಾವಣ ಕೇಂದ್ರದಿಂದ ಈ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿದೆ.
ಈ ಉಪಗ್ರಹದ ಬಗ್ಗೆ:
- ಈ ಉಪಗ್ರಹಕ್ಕೆ ಮಿಸಿಯಸ್ ಎಂದು ಹೆಸರಿಡಲಾಗಿದೆ. ಮಿಸಿಯಸ್ ಚೀನಾದಲ್ಲಿ ಕ್ರಿ.ಪೂ. 5ನೇ ಶತಮಾನದಲ್ಲಿ ಬದುಕಿದ್ದ ತತ್ವಶಾಸ್ತ್ರಜ್ಞ ಹಾಗೂ ವಿಜ್ಞಾನಿ. ಮಾನವನ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಬೆಳಕಿನ ಪ್ರಯೋಗಗಳನ್ನು ನಡೆಸಿದವ ಎಂಬ ಖ್ಯಾತಿ ಇವರದು. ಬೆಳಕಿನ ವೇಗಕ್ಕಿಂತ ಮೀರಿದ ವೇಗದಲ್ಲಿ ಉಪಗ್ರಹ ಮತ್ತು ಭೂಮಿ ನಡುವೆ ಸಂದೇಶ ರವಾನೆ ಮಾಡಿ ಭೂ ಕೇಂದ್ರದಲ್ಲಿ ಸ್ವೀಕರಿಸುವ ತಂತ್ರಜ್ಞಾನ ಅಭಿವೃದ್ದಿಪಡಿಸುವ ಗುರಿಯೊಂದಿಗೆ ಈ ಉಪಗ್ರಹವನ್ನು ಅಭಿವೃದ್ದಿಪಡಿಸಲಾಗಿದೆ.
- ಈ ಉಪಗ್ರಹದಿಂದ ಸ್ವೀಕರಿಸುವ ಮಾಹಿತಿಯನ್ನು ಕದಿಯಲು ಸಾಧ್ಯವೇ ಇಲ್ಲದೆ ಹ್ಯಾಕ್ ಪ್ರೂಪ್ ತಂತ್ರಜ್ಞಾನವನ್ನು ಇದು ಹೊಂದಿದೆ ಇಂತಹ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ಮೊದಲ ದೇಶ ಚೀನಾ. ಕ್ವಾಂಟಮ್ಗಳ ಮೂಲಕ (ಫೊಟಾನ್ ಕಣ) ಮಾಹಿತಿಯನ್ನು ರವಾನಿಸುವುದರಿಂದ ನಕಲು ಮಾಡಲು ಅಥವಾ ಗೂಢಲಿಪಿ ಬಿಡಿಸಿ ಓದಲು ಸಾಧ್ಯವಿಲ್ಲ.
ಕರ್ನಾಟಕದ ಮೂವರು ಸಂಸ್ಕೃತ ವಿದ್ವಾಂಸರಿಗೆ ರಾಷ್ಟ್ರಪತಿ ಪ್ರಶಸ್ತಿ
ಕರ್ನಾಟಕದ ವ್ಯಾಕರಣ ವಿದ್ವಾಂಸ ಮಹಾಮಹೋಪಾಧ್ಯಾಯ ಸೋ.ತಿ. ನಾಗರಾಜ, ಸಂಸ್ಕೃತ ಅಷ್ಟಾವಧಾನಿ ಡಾ. ಶಂಕರ್ ರಾಜಾರಾಮನ್ ಹಾಗೂ ಸಂಸ್ಕೃತ ವಿದ್ವಾಂಸ ಪ್ರೊ. ಗುರುಪಾದ ಕೆ. ಹೆಗಡೆ ಸೇರಿದಂತೆ ಒಟ್ಟು 15 ಮಂದಿ ಸಂಸ್ಕೃತ ಪಂಡಿತರಿಗೆ ರಾಷ್ಟ್ರಪತಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಪ್ರತಿ ವರ್ಷ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ಘೋಷಿಸಲಾಗುವುದು.
- ಸೋ.ತಿ. ನಾಗರಾಜ ಅವರನ್ನು ‘ಸರ್ಟಿಫಿಕೇಟ್ ಆಫ್ ಆನರ್’ ಗೌರವಕ್ಕೆ ಆಯ್ಕೆ ಮಾಡಲಾಗಿದೆ. ಶ್ರೀ ಚಾಮರಾಜೇಂದ್ರ ಸಂಸ್ಕೃತ ಕಾಲೇಜಿನಲ್ಲಿ ವ್ಯಾಕರಣಶಾಸ್ತ್ರದ ಅಧ್ಯಾಪಕರಾಗಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ನಾಗರಾಜ್ ಕೃಷ್ಣ ಯಜುರ್ವೆದ ಸಾಯಣ ಭಾಷ್ಯದ ಕನ್ನಡಾನುವಾದ ಸೇರಿ ಹಲವು ಸಂಶೋಧನಾ ಕಾರ್ಯಗಳನ್ನು ನಡೆಸಿದ್ದಾರೆ.
- ಪ್ರೊ.ಗುರುಪಾದ ಕೆ. ಹೆಗಡೆ ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಸಂಸ್ಕೃತದಲ್ಲಿ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಶ್ಲೇಷ ಸಿದ್ಧಾಂತ ಗ್ರಂಥವನ್ನು ಇಂಗ್ಲಿಷ್ಗೆ ಅನುವಾದ ಮಾಡಿದ್ದಕ್ಕಾಗಿ ಅಮೆರಿಕದ ಮಿಸೌರಿ ಕಾಸ್ಮೋಪಲಿಟನ್ ವಿವಿ ಅವರಿಗೆ ಗೌರವ ಡಾಕ್ಟರೇಟ್ ನೀಡಿದೆ.
- ಡಾ. ಶಂಕರ್ ರಾಜಾರಾಮನ್ ಸಂಸ್ಕೃತ ಭಾಷೆಗೆ ನೀಡಿರುವ ಕೊಡುಗೆಗೆ ಮಹರ್ಷಿ ಬಾದರಾಯಣ ವ್ಯಾಸ ಸಮ್ಮಾನ್ ಪ್ರಶಸ್ತಿ ಪಡೆದಿರುವ ಇವರು ಈವರೆಗೆ 10 ಸಂಸ್ಕೃತ ಅಷ್ಟಾವಧಾನ ನಡೆಸಿಕೊಟ್ಟಿದ್ದಾರೆ. ಹಲವು ನಿಯತಕಾಲಿಕೆಗಳಲ್ಲಿ ಸಂಶೋಧನಾ ಲೇಖನ, ಪ್ರವಚನದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ.
ಮಲಯಾಳಂ ನ ಖ್ಯಾತ ಚಿತ್ರಕಥೆಗಾರ ಟಿ.ಎ.ರಸಕ್ ನಿಧನ
ಮಲಯಾಳಂ ಸಿನಿಮಾ ರಂಗದ ಖ್ಯಾತ ಚಿತ್ರಕಥೆಗಾರ ಟಿ.ಎ.ರಸಕ್ ಕೇರಳದ ಕೊಚ್ಚಿಯಲ್ಲಿ ನಿಧನರಾದರು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ 58 ವರ್ಷ ವಯಸ್ಸಾಗಿತ್ತು.
ರಸಕ್ ಬಗ್ಗೆ:
- ರಸಕ್ ಅವರು 1958ರಲ್ಲಿ ಕೇರಳದ ಮಲ್ಲಪುರಂ ಜಿಲ್ಲೆಯ ಕೊಂಡೊಟ್ಟಿಯಲ್ಲಿ ಜನಿಸಿದರು.
- ಮಲಯಾಳಂನ ಖ್ಯಾತ ನಿರ್ದೇಶಕ ಕಮಲ್ ಅವರು 1991 ರಲ್ಲಿ ನಿರ್ದೇಶಿಸಿದ ವಿಷ್ಣುಲೋಕಂ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು.
- 1996 ರಲ್ಲಿ ತೆರಕಂಡ “ಕನಕ್ಕಿನವು(Kanakkinavu)” ಚಿತ್ರದ ಅತ್ಯುತ್ತಮ ಕಥೆ ಮತ್ತು ಚಿತ್ರಕಥೆಗಾಗಿ ಕೇರಳ ರಾಜ್ಯ ಸಿನಿಮಾ ಪ್ರಶಸ್ತಿಯನ್ನು ಪಡೆದಿದ್ದರು.
- ಪುನಃ 2002 ರಲ್ಲಿ ಐರತಿಲ್ ಒರುವನ್ (Ayirathil Oruvan) ಮತ್ತು 2004 ರಲ್ಲಿ ಪೆರುಮಝಕಲ್ಲಂ (Perumazhakkalam) ಚಿತ್ರಗಳ ಅತ್ಯುತ್ತಮ ಕಥೆಗಾಗಿ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದರು.
- ಬಸ್ ಕಂಡಕ್ಟರ್, ವೆಷಂ ನದೊಡಿ, ಗಝಲ್, ಥಾಲೊಲಂ, ಸ್ನೇಹಂ ಸಫಲಯಂ ಚಿತ್ರಗಳು ರಸಕ್ ಚಿತ್ರಕಥೆ ಬರೆದಿದ್ದ ಕೆಲವು ಪ್ರಮುಖ ಚಿತ್ರಗಳು.
Thanks
Thanks
thanks for the team for your great effort. keep up the great work. it is so useful.
Its very less