ಗ್ಲೋಬಲ್ ಇನೋವೇಶನ್ ಸೂಚ್ಯಂಕ (Global Innovation Index) ಭಾರತಕ್ಕೆ 66 ನೇ ಸ್ಥಾನ

ಗ್ಲೋಬಲ್ ಇನೋವೇಶನ್ ಸೂಚ್ಯಂಕವನ್ನು ಬಿಡುಗಡೆಗೊಳಿಸಲಾಗಿದ್ದು, ಕಳೆದ ಬಾರಿಗಿಂತ ಭಾರತ ಉತ್ತಮ ಸಾಧನೆ ಮಾಡುವ ಮೂಲಕ 66ನೇ ಸ್ಥಾನವನ್ನು ಪಡೆದುಕೊಂಡಿದೆ. 2015ರ ಗ್ಲೋಬಲ್ ಇನೋವೇಶನ್ ಸೂಚ್ಯಂಕದಲ್ಲಿ ಭಾರತ 81 ನೇ ಸ್ಥಾನವನ್ನು ಪಡೆದುಕೊಂಡಿತ್ತು. ಉನ್ನತ ಶಿಕ್ಷಣ, ಸಾಪ್ಟ್ ವೇರ್ ರಫ್ತು ಮತ್ತು ಕಾರ್ಪೋರೆಟ್ ಆರ್ & ಡಿ ಕ್ಷೇತ್ರದಲ್ಲಿ ಪ್ರಗತಿ ಆಗಿರುವುದು ಭಾರತದ ಸ್ಥಾನ ಮೇಲೆರಲು ಕಾರಣವಾಗಿದೆ. ಇನೋವೇಶನ್ ಗುಣಮಟ್ಟದಲ್ಲಿ ಮಧ್ಯಮ ಆದಾಯ ದೇಶಗಳ ಪೈಕಿ ಭಾರತ 27 ಸ್ಥಾನದಲ್ಲಿದ್ದರೆ, ಚೀನಾ 25ನೇ ಸ್ಥಾನದಲ್ಲಿದೆ.

ಅಗ್ರ ಐದು ಸ್ಥಾನದಲ್ಲಿರುವ ದೇಶಗಳು:

  • ಸ್ವಿಟ್ಜರ್ಲ್ಯಾಂಡ್, ಸ್ವೀಡನ್, ಯು.ಕೆ, ಯುಎಸ್, ಫಿನ್ ಲ್ಯಾಂಡ್ ಟಾಪ್ ಐದರಲ್ಲಿರುವ ದೇಶಗಳು

ಇನೋವೇಶನ್ ಗುಣಮಟ್ಟದಲ್ಲಿ:

  • ಜಪಾನ್, ಯು.ಎಸ್, ಉಕ್ರೇನ್, ಜರ್ಮನಿ ಮತ್ತು ಸ್ವಿಟ್ಜರ್ಲ್ಯಾಂಡ್

ಬ್ರಿಕ್ಸ್ (BRICS) ದೇಶಗಳ ಪೈಕಿ:

  • ಚೀನಾ (25), ರಷ್ಯಾ (43), ದಕ್ಷಿಣ ಆಫ್ರಿಕಾ (54), ಭಾರತ (66) ಮತ್ತು ಬ್ರೆಜಿಲ್ (69).

ಸೂಚ್ಯಂಕದ ಬಗ್ಗೆ:

ವಿಶ್ವ ಭೌಧಿಕ ಹಕ್ಕು ಸಂಸ್ಥೆ (ಡಬ್ಲ್ಯುಐಪಿಒ) ಕಾರ್ನೆಲ್ ವಿಶ್ವವಿದ್ಯಾಲಯ ಮತ್ತು ಇನ್ಸಿಯಾಡ್(ಅಂತಾರಾಷ್ಟ್ರೀಯ ಬ್ಯುಸಿನೆಸ್ ಸ್ಕೂಲ್)  ಜೊತೆಯಾಗಿ ಈ ಸೂಚ್ಯಂಕವನ್ನು 2007 ರಿಂದ ಬಿಡುಗಡೆ ಮಾಡುತ್ತಿವೆ. ಸಮೀಕ್ಷೆಯಲ್ಲಿ ಶಿಕ್ಷಣ, ಆರ್ & ಡಿ, ಪೇಟೆಂಟ್ ಅರ್ಜಿ ಹಾಕಿರುವುದು ಸೇರಿದಂತೆ 80 ಕ್ಕೂ ಹೆಚ್ಚು ಮಾನದಂಡಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು.

ಮಣಿಪುರದ ನೂತನ ರಾಜ್ಯಪಾಲರಾಗಿ ನೆಮ್ಜಾ ಹೆಪ್ತುಲ್ಲಾ

ಕೇಂದ್ರ ಮಾಜಿ ಸಚಿವೆ ನೆಮ್ಜಾ ಹೆಪ್ತುಲ್ಲಾ ಸೇರಿದಂತೆ ನಾಲ್ವರು ನೂತನ ರಾಜ್ಯಪಾಲರನ್ನು ನೇಮಕಮಾಡಲಾಗಿದೆ.

ನೆಮ್ಜಾ ಹೆಪ್ತುಲ್ಲಾ: ಮಣಿಪುರದ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.

ವಿ.ಪಿ ಸಿಂಗ್ ಬದ್ನೋರ್: ಬಿಜೆಪಿ ಮುಖಂಡ ಮತ್ತು ರಾಜ್ಯಸಭಾ ಮಾಜಿ ಸದಸ್ಯ ವಿ.ಪಿ.ಸಿಂಗ್ ಬದ್ನೋರ್ ಪಂಜಾಬ್ ನ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.

ಬನ್ವರಿಲಾಲ್ ಪುರೋಹಿತ್: ಬಿಜೆಪಿ ನಾಯಕ ಮತ್ತು ನಾಗ್ಪುರದ ಮಾಜಿ ಸಂಸದ ಪುರೋಹಿತ್ ಅವರನ್ನು ಅಸ್ಸಾಂ ರಾಜ್ಯಪಾಲರಾಗಿ ನೇಮಕಮಾಡಲಾಗಿದೆ.

ಜಗದೀಶ್ ಮುಖಿ: ದೆಹಲಿಯ ಬಿಜೆಪಿ ಮುಖಂಡ ಜಗದೀಶ್ ಮುಖಿ ರವರು ಅಂಡಮಾನ್ ಮತ್ತು ನಿಕೋಬರ್ ನ ಲೆಪ್ಟಿನೆಂಟ್ ಗವರ್ನರ್ ಆಗಿ ನೇಮಕ ಆಗಿದ್ದಾರೆ.

ಫಿಫಾದ ಮಾಜಿ ಅಧ್ಯಕ್ಷ ಜಾವೋ ಹ್ಯಾವಲೆಂಜ್ ವಿಧಿವಶ

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಫಿಫಾ ಮಾಜಿ ಅಧ್ಯಕ್ಷ ಜಾವೊ ಹ್ಯಾವಲೆಂಜ್‌ ನಿಧನರಾದರು. ಅವರಿಗೆ 100 ವರ್ಷ ವಯಸ್ಸಾಗಿತ್ತು. ಹ್ಯಾವಲೆಂಜ್ ಅವರು 1974 ರಲ್ಲಿ ಮೊದಲ ಬಾರಿಗೆ ಫಿಫಾದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಬಳಿಕ ಸತತವಾಗಿ ಆರು ಅವಧಿಗೆ ಅಧ್ಯಕ್ಷರಾಗಿ ಸೇವೆ ನಿರ್ವಹಿಸಿದ್ದರು.

  • 1974 ರಿಂದ 1998 ರವರೆಗೆ ಸತತವಾಗಿ ಆರು ಬಾರಿ ಅಧ್ಯಕ್ಷರಾಗಿದ್ದರು. ಇವರ ಅಧ್ಯಕ್ಷ ಅವಧಿಯಲ್ಲಿ ಒಟ್ಟು ಆರು ವಿಶ್ವಕಪ್‌ ಟೂರ್ನಿಗಳು ಆಯೋಜನೆಯಾಗಿದ್ದವು.
  • ಮಹಿಳಾ ವಿಶ್ವಕಪ್‌ ಆರಂಭ ಮತ್ತು ಪುರುಷರ ವಿಭಾಗದ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ತಂಡಗಳ ಸಂಖ್ಯೆಯನ್ನು 16ರಿಂದ 32ಕ್ಕೆ ಹೆಚ್ಚಿಸಿದ್ದು ಸೇರಿದಂತೆ ಅನೇಕ ಮಹತ್ವದ ನಿರ್ಣಯಗಳನ್ನು ಕೈಗೊಂಡಿದ್ದರು. 2013ರಲ್ಲಿ ಫಿಫಾದಲ್ಲಿ ನಡೆದಿದ್ದ ಭ್ರಷ್ಟಾಚಾರ ಹಗರಣದಲ್ಲಿ ಹ್ಯಾವಲೆಂಜ್‌ ಅವರ ಹೆಸರೂ ಕೇಳಿಬಂದಿತ್ತು. ಆದರೆ ಅವರಿಗೆ ಯಾವುದೇ ಶಿಕ್ಷೆಯಾಗಿರಲಿಲ್ಲ. ಹೀಗಿದ್ದರೂ ಅವರು ಫಿಫಾದ ಗೌರವಾ ಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
  • 1963ರಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ ಸದಸ್ಯತ್ವ ಪಡೆದಿದ್ದ ಅವರು 2011ರ ಡಿಸೆಂಬರ್‌ ನಲ್ಲಿ ಈ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
  • ಸುಮಾರು 20 ವರ್ಷಗಳ ಕಾಲ ಬ್ರೆಜಿಲ್‌ ಕಾನ್ಫೆಡರೇಷನ್‌ನ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಇವರ ಅವಧಿಯಲ್ಲಿ ಬ್ರೆಜಿಲ್‌ ತಂಡ ಮೂರು ಬಾರಿ (1958, 1962 ಮತ್ತು 1970) ವಿಶ್ವಕಪ್‌ನಲ್ಲಿ ಚಾಂಪಿಯನ್‌ ಆಗಿತ್ತು.

ಮಾಜಿ ಕ್ರಿಕೆಟ್ ಆಟಗಾರ ವಿರೇಂದ್ರ ಸೆಹ್ವಾಗ್ ಗೆ ಮೆಲ್ಬೋರ್ನ್ ಕ್ರಿಕೆಟ್ ಕ್ಲಬ್ ಗೌರವ ಸದಸ್ಯತ್ವ

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಮೆಲ್ಬೋರ್ನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಗೌರವ ಸದಸ್ಯತ್ವ ಪಡೆದಿದ್ದಾರೆ. ಕ್ರಿಕೆಟ್ ಆಟಕ್ಕೆ ನೀಡಿರುವ ಕೊಡುಗೆಯನ್ನು ಗುರುತಿಸಿ ಎಂಸಿಸಿ ಸದಸ್ಯತ್ವನ್ನು ವಿಸ್ತರಿಸಲಾಗುತ್ತದೆ. ವಿರೇಂದ್ರ ಸೆಹ್ವಾಗ್ ಎಂಸಿಸಿ ಸದಸ್ಯತ್ವ ಪಡೆದ 23ನೇ ಆಟಗಾರ ಮತ್ತು ಭಾರತದ ಐದನೇ ಆಟಗಾರ ಎನಿಸಿದ್ದಾರೆ. ಈ ಹಿಂದೆ ಭಾರತದ ಕ್ರಿಕೆಟ್ ದಿಗ್ಗಜರುಗಳಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ಸದಸ್ಯತ್ವನ್ನು ಪಡೆದುಕೊಂಡಿದ್ದಾರೆ.

ವಿರೇಂದ್ರ ಸೆಹ್ವಾಗ್:

  • ಭಾರತ ಕಂಡ ಅಪ್ರತಿಮ ಒಪನಿಂಗ್ ಬ್ಯಾಟ್ಸಮನ್.
  • 37 ವರ್ಷ ವಯಸ್ಸಿನ ಸೆಹ್ವಾಗ್ ವೃತ್ತಿ ಜೀವನದಲ್ಲಿ ಭಾರತದ ಪರ 104 ಟೆಸ್ಟ್, 251 ಏಕದಿನ ಮತ್ತು 19 ಟಿ20 ಪಂದ್ಯಗಳನ್ನಾಡಿದ್ದಾರೆ.
  • ಸ್ಫೋಟಕ ಬ್ಯಾಟ್ಸ್ಮನ್ ಎಂದೇ ಹೆಸರಾಗಿದ್ದ ಸೆಹ್ವಾಗ್ ಟೆಸ್ಟ್ನಲ್ಲಿ 49.34ರ ಸರಾಸರಿಯಲ್ಲಿ 8,586 ರನ್ ಗಳಿಸಿದ್ದರೆ, ಏಕದಿನ ಕ್ರಿಕೆಟ್ನಲ್ಲಿ 35.05ರ ಸರಾಸರಿಯಲ್ಲಿ 8273 ರನ್ ಕಲೆಹಾಕಿದ್ದಾರೆ. ಒಟ್ಟಾರೆ 16,892 ರನ್ ಗಳಿಸಿ ವಿಶ್ವದ ಅತ್ಯುತ್ತಮ ಕ್ರಿಕೆಟ್ ಆಟಗಾರರಲ್ಲಿ ಒಬ್ಬರಾಗಿದ್ದಾರೆ.

Leave a Comment

This site uses Akismet to reduce spam. Learn how your comment data is processed.