ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 16, 2016

Question 1

1.ಇತ್ತೀಚೆಗೆ ಬಿಡುಗಡೆಗೊಂಡ ಗ್ಲೋಬಲ್ ಇನೊವೇಶನ್ ಸೂಚ್ಯಂಕದಲ್ಲಿ (Global Innovation Index) ಭಾರತ ಎಷ್ಟನೇ ಸ್ಥಾನ ಪಡೆದುಕೊಂಡಿದೆ?

A
61
B
63
C
66
D
78
Question 1 Explanation: 
66:

ಇತ್ತೀಚಿಗೆ ಬಿಡುಗಡೆಗೊಳಿಸಲಾದ ಗ್ಲೋಬಲ್ ಇನೋವೇಷನ್ ಸೂಚ್ಯಂಕ(ಜಿಐಐ)ದಲ್ಲಿ ಭಾರತ 66ನೇ ಸ್ಥಾನವನ್ನು ಗಳಿಸಿದೆ. 2015ರ ಸೂಚ್ಯಂಕಕ್ಕೆ ಹೋಲಿಸಿದಾಗ ಭಾರತ ಉತ್ತಮ ಸಾಧನೆ ಮಾಡಿದ್ದು, 14 ಸ್ಥಾನಗಳ ಏರಿಕೆ ಕಂಡು 66ನೇ ಸ್ಥಾನಕ್ಕೇರಿದೆ. ಕಳೆದ ವರ್ಷ ಭಾರತ 81ನೇ ಸ್ಥಾನದಲ್ಲಿತ್ತು. ಉನ್ನತ ಶಿಕ್ಷಣ, ಮಾಹಿತಿ, ಸಂವಹನ ತಂತ್ರಜ್ಞಾನ ರಫ್ತಿನಲ್ಲಿ ಉತ್ತಮ ಸಾಧನೆ ಮಾಡಿರುವ ಕಾರಣ ಸೂಚ್ಯಂಕದಲ್ಲಿ ಭಾರತ ಮೇಲೆರಿದೆ. ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ (ಡಬ್ಲ್ಯುಐಪಿಒ), ಕಾರ್ನೆಲ್ ವಿಶ್ವವಿದ್ಯಾಲಯ ಮತ್ತು ಇನ್ಸಿಯಾಡ್(ಅಂತಾರಾಷ್ಟ್ರೀಯ ಬ್ಯುಸಿನೆಸ್ ಸ್ಕೂಲ್) ಸೂಚ್ಯಂಕವನ್ನು ತಯಾರಿಸಿದ್ದು, ಸ್ವಿಟ್ಜ್ರ್ ಲ್ಯಾಂಡ್ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಸ್ವೀಡನ್, ಯು.ಕೆ. ಯುಎಸ್ಎ ಇವೆ. ಬ್ರಿಕ್ಸ್ ದೇಶಗಳ ಪೈಕಿ ಚೀನಾ (25), ರಷ್ಯಾ (43), ದಕ್ಷಿಣ ಆಫ್ರಿಕಾ (54), ಬ್ರೆಜಿಲ್ (69) ಇವೆ.

Question 2

2.ಇತ್ತೀಚೆಗೆ ವಿರೇಂದ್ರ ಸೆಹ್ವಾಗ್ ಅವರು ಮೆಲ್ಬೋರ್ನ್ ಕ್ರಿಕೆಟ್ ಕ್ಲಬ್ (ಎಂಸಿಸಿ)ನ ಗೌರವ ಸದಸ್ಯತ್ವ ಪಡೆದಿದ್ದಾರೆ. ಸೆಹ್ವಾಗ್ ಈ ಸದಸ್ಯತ್ವವನ್ನು ಪಡೆದ ಭಾರತದ ಎಷ್ಟನೇ ಕ್ರಿಕೆಟ್ ಆಟಗಾರ?

A
ನಾಲ್ಕನೇಯವರು
B
ಐದನೇಯವರು
C
ಮೂರನೇಯವರು
D
ಆರನೇಯವರು
Question 2 Explanation: 
ಐದನೇಯವರು :

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್, ಎಂಸಿಸಿಯ ಗೌರವ ಸದಸ್ಯತ್ವ ಪಡೆದಿದ್ದಾರೆ. ಆ ಮೂಲಕ ಭಾರತದ ಸ್ಟಾರ್ ಆಟಗಾರರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ನಂತರ ಈ ಗೌರವ ಸದಸ್ಯತ್ವವನ್ನು ಪಡೆದ ಭಾರತದ ಐದನೇ ಆಟಗಾರ. 37 ವರ್ಷ ವಯಸ್ಸಿನ ಸೆಹ್ವಾಗ್ ವೃತ್ತಿ ಜೀವನದಲ್ಲಿ ಭಾರತದ ಪರ 104 ಟೆಸ್ಟ್, 251 ಏಕದಿನ ಮತ್ತು 19 ಟಿ20 ಪಂದ್ಯಗಳನ್ನಾಡಿದ್ದಾರೆ. ಸ್ಫೋಟಕ ಬ್ಯಾಟ್ಸ್ಮನ್ ಎಂದೇ ಹೆಸರಾಗಿದ್ದ ಸೆಹ್ವಾಗ್ ಟೆಸ್ಟ್ನಲ್ಲಿ 49.34ರ ಸರಾಸರಿಯಲ್ಲಿ 8,586 ರನ್ ಗಳಿಸಿದ್ದರೆ, ಏಕದಿನ ಕ್ರಿಕೆಟ್ನಲ್ಲಿ 35.05ರ ಸರಾಸರಿಯಲ್ಲಿ 8273 ರನ್ ಕಲೆಹಾಕಿದ್ದಾರೆ.

Question 3

3.ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವಿಶ್ವ ಸಾಂಸ್ಕೃತಿಕ ಉತ್ಸವದಿಂದ ಯಮುನ ನದಿ ತೀರ ಹಾಗೂ ಪರಿಸರಕ್ಕೆ ಹಾನಿಯಾಗಿರುವುದನ್ನು ಪರಿಶೀಲಿಸಲು ರಾಷ್ಟ್ರೀಯ ಹಸಿರು ಮಂಡಳಿ ನೇಮಿಸಿದ್ದ ತಜ್ಞರ ಸಮಿತಿಯ ಅಧ್ಯಕ್ಷರು ಯಾರು?

A
ನರಸಿಂಹ ಮೂರ್ತಿ
B
ಶಶಿ ಶೇಖರ್
C
ಗಿರೀಶ್ ಮನೋಹರ್
D
ಶಶಿಧರ್ ಕಾಂತ್
Question 3 Explanation: 
ಶಶಿ ಶೇಖರ್:

ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಯಮುನಾ ನದಿ ತೀರದಲ್ಲಿ ಆಯೋಜಿಸಿದ್ದ ಬೃಹತ್ ವಿಶ್ವ ಸಾಂಸ್ಕೃತಿಕ ಉತ್ಸವದಿಂದ ನದಿ ತೀರ ಹಾಗೂ ಪರಿಸರಕ್ಕೆ ಹಾನಿಯಾಗಿರುವುದರ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಲು ರಾಷ್ಟ್ರೀಯ ಹಸಿರು ಮಂಡಳಿ (NGT) ಏಳು ಮಂದಿ ತಜ್ಞರ ಸಮಿತಿಯನ್ನು ರಚಿಸಿತ್ತು. ಕೇಂದ್ರ ಜಲ ಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಶಶಿ ಶೇಖರ್ ಸಮಿತಿಯ ಅಧ್ಯಕ್ಷರಾಗಿದ್ದರು. ಸಮಿತಿಯು ಇಂದು ತನ್ನ ವರದಿಯನ್ನು ಸಲ್ಲಿಸಿದ್ದು, ನದಿ ತಟವು ಈಗ ಸಂಪೂರ್ಣವಾಗಿ ಸಮತಟ್ಟಾಗಿದೆ ಹಾಗೂ ಗಟ್ಟಿಯಾಗಿದೆ ಹಾಗೂ ಅಲ್ಲಿ ಯಾವುದೇ ಗಿಡ ಮರಗಳಿಲ್ಲ ಎಂದು ತಂಡ ತನ್ನ 47 ಪುಟಗಳ ವರದಿಯಲ್ಲಿ ತಿಳಿಸಿದೆ. ಈ ಮೂರು ದಿನಗಳ ಕಾರ್ಯಕ್ರಮದಿಂದ ಪರಿಸರ ವೈವಿಧ್ಯತೆಗೆ ಆದ ಹಾನಿ ಅಪಾರ ಎಂದು ಹೇಳಿರುವ ತಜ್ಞರ ತಂಡ ಈ ಹಾನಿಯನ್ನು ಸರಿಪಡಿಸುವುದು ಅಸಾಧ್ಯ ಎಂದಿದೆ.

Question 4

4.17 ನೇ ಆಲಿಪ್ತ ಚಳುವಳಿ ಶೃಂಗಸಭೆ (Non-Aligned Movement Summit) ಯಾವ ದೇಶದಲ್ಲಿ ನಡೆಯಲಿದೆ?

A
ಈಜಿಪ್ಟ್
B
ಭಾರತ
C
ವಿಯೆಟ್ನಂ
D
ವೆನೆಜುವೆಲಾ
Question 4 Explanation: 
ವೆನೆಜುವೆಲಾ:

17 ನೇ ಆಲಿಪ್ತ ಚಳುವಳಿ ಶೃಂಗಸಭೆಯು ಸೆಪ್ಟೆಂಬರ್ 17-18 ರಂದು ವೆನೆಜುವೆಲಾದಲ್ಲಿ ನಡೆಯಲಿದೆ. ಪ್ರಧಾನಿ ಮೋದಿ ಅವರು ಈ ಶೃಂಗಸಭೆಯಲ್ಲಿ ಭಾಗವಹಿಸುವುದು ಅನುಮಾನವೆಂದು ಹೇಳಲಾಗಿದೆ. ಅಲಿಪ್ತ ಚಳವಳಿಯ ಜನಕ ಎಂದೇ ಪರಿಚಿತರಾದ ಜವಾಹರ ಲಾಲ್ ನೆಹರೂ ಅವರ ಕಾಲದಿಂದ ಆರಂಭವಾದ ಅಲಿಪ್ತ ಚಳವಳಿ ಶೃಂಗದಲ್ಲಿ ಭಾರತದ ಪ್ರಧಾನಿ ಪಾಲ್ಗೊಳ್ಳದೇ ಇದ್ದುದು 1979ರಲ್ಲಿ ಮಾತ್ರ. ಆಗ ಚರಣ್ ಸಿಂಗ್ ಅವರು ಹಂಗಾಮೀ ಪ್ರಧಾನಿಯಾಗಿದ್ದರು. ಅಲಿಪ್ತ ಚಳವಳಿ 1961ರಲ್ಲಿ ಬೆಲ್ಗ್ರೇಡ್ನಲ್ಲಿ ಆರಂಭವಾಗಿತ್ತು. ವಿಶ್ವದ ಪ್ರಮುಖ ಶಕ್ತಿಗಳಾಗಿದ್ದ ಅಮೆರಿಕ ಮತ್ತು ಹಿಂದಿನ ಯುಎಸ್ಎಸ್ಆರ್ ಜೊತೆ ಸೇರದ ಇತರ ರಾಷ್ಟ್ರಗಳು ಅಲಿಪ್ತ ಚಳವಳಿ ಹೆಸರಿನಲ್ಲಿ ಒಂದಾಗಿದ್ದವು. ಯುಎಸ್ಎಸ್ಆರ್ ವಿಭಜನೆಯ ಬಳಿಕ ಚಳವಳಿ ತನ್ನ ಮಹತ್ವ ಕಳೆದುಕೊಂಡಿತ್ತು.

Question 5

5.ಉನ್ನತ ಶಿಕ್ಷಣದಲ್ಲಿ ಶ್ಲಾಘನೀಯ ಸೇವೆ ನೀಡಿದಕ್ಕಾಗಿ ಕೊಡಲಾಗುವ ಎ.ಪಿ.ಜೆ.ಕಲಾಂ ಪ್ರಶಸ್ತಿಯನ್ನು ಈಚೆಗೆ ಯಾರಿಗೆ ನೀಡಲಾಗಿದೆ?

A
ಪಿ ಷಣ್ಮುಗಂ
B
ರಾಜಶೇಖರ್ ಸಿಂಗ್
C
ಎನ್ ಸುಬ್ಬಯನ್
D
ಹಂಸರಾಜ್ ವರ್ಮಾ
Question 5 Explanation: 
ಪಿ ಷಣ್ಮುಗಂ:

ಕೇಂದ್ರ ಚರ್ಮ ಸಂಶೋಧನಾ ಸಂಸ್ಥೆ (Central Leather Research Institute)ಯ ವಿಜ್ಞಾನಿ ಪಿ. ಷಣ್ಮುಗಂ ಅವರಿಗೆ ಉನ್ನತ ಶಿಕ್ಷಣದಲ್ಲಿ ಶ್ಲಾಘನೀಯ ಸೇವೆ ನೀಡಿದಕ್ಕಾಗಿ ಕೊಡಲಾಗುವ ಎ.ಪಿ.ಜೆ ಕಲಾಂ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 70 ನೇ ಸ್ವಾತಂತ್ರ ದಿನಾಚರಣೆ ಸಂಭ್ರಮದಲ್ಲಿ ಮುಖ್ಯಮಂತ್ರಿ ಜಯಲಲಿತಾ ಅವರು ಪ್ರಶಸ್ತಿಯನ್ನು ನೀಡಿದರು. ಪ್ರಶಸ್ತಿಯು 5 ಲಕ್ಷ ನಗದು, ಸರ್ಟಿಫಿಕೇಟ್ ಮತ್ತು 8 ಗ್ರಾಂ ತೂಕದ ಚಿನ್ನದ ಪದಕವನ್ನು ಹೊಂದಿದೆ.

Question 6

6.ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿದ ಮೊದಲ ಹಂತದ 10 ಸ್ಮಾರ್ಟ್ ಗಂಗಾ ನಗರ ಯೋಜನೆಯಲ್ಲಿ ಕೆಳಗಿನ ಯಾವ ನಗರ ಆಯ್ಕೆಯಾಗಿಲ್ಲ?

A
ಮಥುರಾ
B
ಕೊಲ್ಕತ್ತ
C
ರಿಷಿಕೇಶ್
D
ಹರಿದ್ವಾರ್
Question 6 Explanation: 
ಕೊಲ್ಕತ್ತ:

ಮೊದಲ ಹಂತದ ಸ್ಮಾರ್ಟ್ ಗಂಗಾ ನಗರ ಯೋಜನೆಯನ್ನು ಗಂಗಾ ನದಿಯ ದಡದ ಮೇಲಿರುವ 10 ನಗರಗಳಾದ ಹರಿದ್ವಾರ, ರಿಷಿಕೇಶ್, ಮಥುರಾ, ವಾರಾಣಾಸಿ, ಕಾನ್ಪುರ, ಅಲಹಬಾದ್, ಲಕ್ನೋ, ಪಾಟ್ನಾ, ಸಾಹೀಬ್ ಗಂಜ್ ಮತ್ತು ಬಾರಕ್ ಪುರನಲ್ಲಿ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಕೇಂದ್ರ ನಗರಾಭಿವೃದ್ದಿ ಸಚಿವ ವೆಂಕಯ್ಯನಾಯ್ಡು ಮತ್ತು ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿ ಮೊದಲ ಹಂತದ ಕಾರ್ಯಕ್ರಮವನ್ನು ಜಂಟಿಯಾಗಿ ಉದ್ಘಾಟಿಸಿದರು.

Question 7

7.ಕೇಂದ್ರ ಮಾಜಿ ಸಚಿವೆ ನಜ್ಮಾ ಹೆಪ್ತುಲ್ಲಾ ಅವರು ಯಾವ ರಾಜ್ಯದ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ?

A
ಮಣಿಪುರ
B
ಸಿಕ್ಕಿಂ
C
ಅಸ್ಸಾಂ
D
ತ್ರಿಪುರ
Question 7 Explanation: 
ಮಣಿಪುರ:

ಕೇಂದ್ರ ಮಾಜಿ ಸಚಿವೆ ನಮ್ಜಾ ಹೆಪ್ತುಲ್ಲಾ ಅವರನ್ನು ಮಣಿಪುರ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ. ಅಸ್ಸಾಂ ರಾಜ್ಯಪಾಲರಾಗಿ ಬನ್ವರಿಲಾಲ್ ಪುರೋಹಿತ್, ಪಂಜಾಬ್ ರಾಜ್ಯಪಾಲರಾಗಿ ವಿ.ಪಿ.ಸಿಂಗ್ ಹಾಗೂ ಅಂಡಮಾನ್ ಮತ್ತು ನಿಕೋಬರ್ ಲೆಫ್ಟಿನೆಂಟ್ ಗವರ್ನರ್ ಆಗಿ ಜಗದಿಶ್ ಮುಖಿ ಅವರನ್ನು ನೇಮಕ ಮಾಡಲಾಗಿದೆ.

Question 8

8.ಪ್ರಸ್ತುತ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರ ನಿವೃತ್ತಿ ವಯಸ್ಸು ಕ್ರಮವಾಗಿ ಎಷ್ಟು?

A
65, 62
B
62, 60
C
65, 63
D
63, 60
Question 8 Explanation: 
65, 62:

ಪ್ರಸ್ತುತ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರ ನಿವೃತ್ತಿ ವಯಸ್ಸು ಕ್ರಮವಾಗಿ 65 ಮತ್ತು 62.

Question 9

9.ಇತ್ತೀಚೆಗೆ ನಿಧನರಾದ ಫಿಫಾ (FIFA)ದ ಮಾಜಿ ಅಧ್ಯಕ್ಷ ಯಾರು?

A
ಸೆಫ್ ಬ್ಲಾಟರ್
B
ಜಾವೊ ಹ್ಯಾವಲೆಂಜ್
C
ಇಸಾ ಹಯಾಟೊ
D
ರಾಬರ್ಟ್ ಗುಯಾರಿನ್
Question 9 Explanation: 
ಜಾವೊ ಹ್ಯಾವಲೆಂಜ್:

ಅನಾರೋಗ್ಯದಿಂದ ಬಳಲುತ್ತಿದ್ದ ಫಿಫಾ ಮಾಜಿ ಅಧ್ಯಕ್ಷ ಜಾವೊ ಹ್ಯಾವಲೆಂಜ್‌ ನಿಧನರಾಗಿದ್ದಾರೆ. ಹ್ಯಾವಲೆಂಜ್‌ ಅವರು 1974ರಿಂದ 1998ರವರೆಗೆ ಫಿಫಾ ಅಧ್ಯಕ್ಷರಾಗಿದ್ದರು. ಅವರ ಅವಧಿಯಲ್ಲಿ ಒಟ್ಟು ಆರು ವಿಶ್ವಕಪ್‌ ಟೂರ್ನಿಗಳು ಆಯೋಜನೆಯಾಗಿದ್ದವು. ಹ್ಯಾವಲೆಂಜ್‌ ಅವರು ತಮ್ಮ ಆಡಳಿತಾವಧಿಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡಿದ್ದರು. ಮಹಿಳಾ ವಿಶ್ವಕಪ್‌ ಆರಂಭ ಮತ್ತು ಪುರುಷರ ವಿಭಾಗದ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ತಂಡಗಳ ಸಂಖ್ಯೆಯನ್ನು 16ರಿಂದ 32ಕ್ಕೆ ಹೆಚ್ಚಿಸಿದ್ದು ಅವುಗಳಲ್ಲಿಬಹುಮುಖ್ಯವಾದುವು. 1963ರಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ ಸದಸ್ಯತ್ವ ಪಡೆದಿದ್ದ ಅವರು 2011ರ ಡಿಸೆಂಬರ್‌ ನಲ್ಲಿ ಈ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 1974ರಲ್ಲಿ ಹ್ಯಾವಲೆಂಜ್‌ ಅವರು ಫಿಫಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ವಿಶ್ವದ ವಿವಿಧ ಫುಟ್‌ಬಾಲ್‌ ಫೆಡರೇಷನ್‌ಗಳ ಜೊತೆ ನಿಕಟ ಸಂಬಂಧ ಹೊಂದಿದ್ದ ಅವರು ಸತತ ಆರು ಬಾರಿ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದರು. ಹ್ಯಾವಲೆಂಜ್‌ ಅವರು ಸುಮಾರು 20 ವರ್ಷಗಳ ಕಾಲ ಬ್ರೆಜಿಲ್‌ ಕಾನ್ಫೆಡರೇಷನ್‌ನ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಇವರ ಅವಧಿಯಲ್ಲಿ ಬ್ರೆಜಿಲ್‌ ತಂಡ ಮೂರು ಬಾರಿ (1958, 1962 ಮತ್ತು 1970) ವಿಶ್ವಕಪ್‌ನಲ್ಲಿ ಚಾಂಪಿಯನ್‌ ಆಗಿತ್ತು.

Question 10

10.ನ್ಯಾಷನಲ್ ಅಕಾಡೆಮಿ ಆಫ್ ಇಂಡಿಯನ್ ರೈಲ್ವೇಸ್ ಎಲ್ಲಿದೆ?

A
ವಡೋದರ
B
ಅಹಮದಬಾದ್
C
ಪುಣೆ
D
ಕೊಲ್ಕತ್ತ
Question 10 Explanation: 
ವಡೋದರ:

ನ್ಯಾಷನಲ್ ಅಕಾಡೆಮಿ ಆಫ್ ಇಂಡಿಯನ್ ರೈಲ್ವೇಸ್ ಗುಜರಾತ್, ವಡೋದರದಲ್ಲಿದೆ. 1930 ರಲ್ಲಿ ಮೊದಲಿಗೆ ಡೆಹ್ರಾಡೂನ್ ನಲ್ಲಿ ಇದನ್ನು ಸ್ಥಾಪಿಸಲಾಗಿತ್ತು, ಆದರೆ 1952 ರಲ್ಲಿ ವಡೋದರಕ್ಕೆ ಸ್ಥಳಾಂತರ ಮಾಡಲಾಯಿತು. ರೈಲ್ವೆ ಇಲಾಖೆಯ ಪ್ರೋಬೇಷನರ್ಸ್ ನಿಂದ ಮ್ಯಾನೇಜರ್ ವೃಂದದ ಸಿಬ್ಬಂದಿಗೆ ಇಲ್ಲಿ ತರಭೇತಿ ನೀಡಲಾಗುತ್ತದೆ.

There are 10 questions to complete.

4 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 16, 2016”

  1. mahesh

    Thanks very nice question

  2. ಸಂತೋಷ್ ಗೌಡರ

    ಧನ್ಯವಾದಗಳು ಸರ್

Leave a Comment

This site uses Akismet to reduce spam. Learn how your comment data is processed.