ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.
ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -10
Question 1 |
1.2016 ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಯನ್ನು ಈ ಕೆಳಗಿನ ಯಾರಿಗೆ ನೀಡಲಾಗುವುದು?
ರಘುಪತಿ | |
ಎಂ.ಸಿ.ನಾಣಯ್ಯ | |
ಬಿ.ಎ.ಮೊಹಿದ್ದೀನ್ | |
ಎಸ್.ಕೆ.ಕಾಂತ |
ರಾಜ್ಯ ಸರ್ಕಾರ ಪ್ರತಿ ವರ್ಷ ನೀಡುವ ಡಿ.ದೇವರಾಜ ಅರಸು ಪ್ರಶಸ್ತಿಗೆ 2016ನೇ ಸಾಲಿನಲ್ಲಿ ಮಾಜಿ ಸಚಿವ ಬಿ.ಎ.ಮೊಹಿದ್ದೀನ್ ಅವರನ್ನು ಆಯ್ಕೆ ಮಾಡಲಾಗಿದೆ. ಅರಸು ಪ್ರಶಸ್ತಿಗೆ ಹೆಸರು ಶಿಫಾರಸು ಮಾಡಲು ನೇಮಿಸಲಾಗಿದ್ದ ಡಾ.ಕೃಷ್ಣಮೂರ್ತಿ ಹನೂರು ನೇತೃತ್ವದ ಸಮಿತಿ ಮಾಡಿದ ಶಿಫಾರಸಿನಂತೆ ಮೊಹಿದ್ದೀನ್ ಅವರಿಗೆ ಈ ಬಾರಿಯ ಅರಸು ಪ್ರಶಸ್ತಿಯನ್ನು ಆ.20ರಂದು ನಡೆಯುವ ಜನ್ಮಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಗೆ ಮಾಜಿ ಸಚಿವರಾದ ರಘುಪತಿ, ಎಂ.ಸಿ.ನಾಣಯ್ಯ, ಎಸ್.ಕೆ.ಕಾಂತಾ, ಎಸ್ .ವಿ.ಸಿದ್ನಾಳ್, ಜೆ.ಶ್ರೀನಿವಾಸನ್ ಹಾಗೂ ಭೀಮ್ಷಿ ಕಲಾದಗಿ ಅವರ ಹೆಸರು ಪ್ರಸ್ತಾಪವಾಗಿತ್ತು. ಈ ಪೈಕಿ ಸಮಿತಿಯು ಮೊಹಿದ್ದೀನ್ ಅವರ ಹೆಸರನ್ನು ಒಮ್ಮತದಿಂದ ಶಿಫಾರಸು ಮಾಡಿದೆ.ಮೂಲತಃ ಚಿಕ್ಕಮಗಳೂರು ಜಿಲ್ಲೆಯವರಾದ ಬಿ.ಎ.ಮೊಹಿದ್ದೀನ್ ಅವರೊಂದಿಗೆ ಗೋವಿಂದೇಗೌಡ ಅವರೊಂದಿಗೆ ಸೇರಿ ಭೂರಹಿತರಿಗೆ ಭೂಮಿ ಒದಗಿಸುವ ಕಾರ್ಯ ಕೈಗೊಂಡಿದ್ದರು. 1978ರಲ್ಲಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ್ದ ಅವರು, ಜೆ.ಎಚ್.ಪಟೇಲ್ ಅವರ ಸಚಿವ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಬೆಂಗಳೂರಿನ ಸಂಜಯನಗರದಲ್ಲಿ ವಾಸವಾಗಿದ್ದಾರೆ.
Question 2 |
2.82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಾವ ಜಿಲ್ಲೆಯಲ್ಲಿ ಆಯೋಜಿಸಲಾಗುವುದು?
ಬೆಳಗಾವಿ | |
ಕೊಪ್ಪಳ | |
ರಾಯಚೂರು | |
ಮಂಡ್ಯ |
82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿಸೆಂಬರ್ 3, 4 ಮತ್ತು 5ರಂದು ರಾಯಚೂರಿನಲ್ಲಿ ನಡೆಸಲು ನಿರ್ಧರಿಸಿರುವುದಾಗಿ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷರಾದ ಮನು ಬಳಿಗಾರ್ ತಿಳಿಸಿದ್ದಾರೆ.
Question 3 |
3.ಕೆಳಗಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆ/ಹೇಳಿಕೆಗಳನ್ನು ಗುರುತಿಸಿ:
I) ಜೋಗಜಲಪಾತವನ್ನು ಸರ್ವಋತು ಜಲಪಾತವನ್ನಾಗಿ ಅಭಿವೃದ್ದಿಪಡಿಸಲು ಸಮ್ಮತಿಸಲಾಗಿದೆ
II) ಈ ಯೋಜನೆಯನ್ನು ಸ್ವತಃ ರಾಜ್ಯ ಸರ್ಕಾರವೇ ಅನುಷ್ಟಾನಗೊಳಿಸಲಿದೆ
III) ಜೋಗಜಲಪಾತ ದೇಶದ ಅತಿ ಎತ್ತರದ ಜಲಪಾತವಾಗಿದೆ
ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?
I & III ಮಾತ್ರ | |
I & II ಮಾತ್ರ | |
I ಮಾತ್ರ | |
I, II & II |
ಹೇಳಿಕೆ ಒಂದು ಸರಿಯಾಗಿದೆ ರಾಜ್ಯ ಸರ್ಕಾರ ಜೋಗಜಲಪಾತವನ್ನು ಸರ್ವಋತು ಜಲಪಾತವನ್ನಾಗಿ ಅಭಿವೃದ್ದಿಪಡಿಸಲು ಸಮ್ಮತಿ ಸೂಚಿಸಿದೆ. ಹೇಳಿಕೆ ಎರಡು ತಪ್ಪು ಏಕೆಂದರೆ ಕರ್ನಾಟಕದ ಮೂಲದ ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್. ಶೆಟ್ಟಿ ಅವರ ಸಂಸ್ಥೆ 450 ಕೋಟಿ ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳಿಸಲಿದೆ. ಹೇಳಿಕೆ ಮೂರು ತಪ್ಪು ಏಕೆಂದರೆ 831 ಅಡಿಗಳ ಮೇಲಿಂದ ಧುಮ್ಮಿಕ್ಕುವ ಜೋಗ ಜಲಪಾತ ಭಾರತದ ಎರಡನೇ ಅತಿ ಎತ್ತರದ ಜಲಪಾತವಾಗಿದೆ. ಅತಿ ಹೆಚ್ಚು ಮಳೆ ಪಡೆಯುವ ಚಿರಾಪುಂಜಿಯಲ್ಲಿರುವ ನೋಹಕಾಲಿಕೈ ಜಲಪಾತ ದೇಶದ ಅತಿ ಎತ್ತರ ಜಲಪಾತವಾಗಿದೆ (1100 ಅಡಿ).
Question 4 |
4.ಯಾವ ನದಿಯಲ್ಲಿ ಇತ್ತೀಚೆಗೆ ರಾಜ್ಯ ಪ್ರವಾಸೋದ್ಯಮ ಇಲಾಖೆ ಜಲಸಾಹಸ ಕ್ರೀಡಾ ಕೇಂದ್ರವನ್ನು ಆರಂಭಿಸಿತು?
ನೇತ್ರಾವತಿ | |
ಕಾವೇರಿ | |
ಕಾಳಿ | |
ಭೀಮಾ |
ಉತ್ತರಕನ್ನಡ ಜಿಲ್ಲೆಯ ಕಾಳಿ ನದಿಯಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಕೋಡಿಭಾಗದ ಕಾಳಿ ಸಂಗಮದ ಬಳಿ ಜಲಸಾಹಸ ಕ್ರೀಡಾ ಕೇಂದ್ರವನ್ನು ಆರಂಭಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಆರ್. ವಿ. ದೇಶಪಾಂಡೆ ಹಸಿರು ಬಾವುಟ ಹಾರಿಸುವ ಮೂಲಕ ಈ ಕೇಂದ್ರಕ್ಕೆ ಚಾಲನೆ ನೀಡಿದರು.
Question 5 |
5.ಕನ್ನಡ ಪುಸ್ತಕ ಪ್ರಾಧಿಕಾರದ ಈಗಿನ ಅಧ್ಯಕ್ಷರು ಯಾರು?
ದೇವನೂರ ಮಹಾದೇವ | |
ಬಂಜಗೆರೆ ಜಯಪ್ರಕಾಶ್ | |
ಅನುಪಮಾ ನಿರಂಜನ | |
ತ್ರಿವೇಣಿ |
ಕನ್ನಡ ಪುಸ್ತಕ ಪ್ರಾಧಿಕಾರದ ಈಗಿನ ಅಧ್ಯಕ್ಷರು ಬಂಜಗೆರೆ ಜಯಪ್ರಕಾಶ್
Question 6 |
6.ಅಸೋಚಾಮ್ (ASSOCHAM) ವರದಿ ಪ್ರಕಾರ ಕರ್ನಾಟಕ ದೇಶದಲ್ಲೇ ಐಟಿ ಬಂಡವಾಳ ಹೂಡಿಕೆಯಲ್ಲಿ ನಂ.1 ಸ್ಥಾನದಲ್ಲಿದೆ. 2015-16 ನೇ ಸಾಲಿನ ರಾಜ್ಯ ಎಷ್ಟು ಕೋಟಿ ರೂ ಹೂಡಿಕೆಯನ್ನು ಸ್ವೀಕರಿಸಿದೆ?
ರೂ 43,500 ಕೋಟಿ | |
ರೂ 53,396 ಕೋಟಿ | |
ರೂ 46,890 ಕೋಟಿ | |
ರೂ 74,300 ಕೋಟಿ |
ಅಸೋಚಾಮ್ ವರದಿ ಪ್ರಕಾರ 2015-16ನೇ ಸಾಲಿನಲ್ಲಿ ದೇಶದ ಮಾಹಿತಿ ತಂತ್ರಜ್ಞಾನ (ಐ.ಟಿ.) ಕ್ಷೇತ್ರದಲ್ಲಿ ಹೂಡಿಕೆಯಾದ ಒಟ್ಟಾರೆ ಬಂಡವಾಳದ ಪೈಕಿ ಶೇ.25ರಷ್ಟನ್ನು ಬಾಚಿಕೊಳ್ಳುವ ಮೂಲಕ ಕರ್ನಾಟಕ ಅತ್ಯುತ್ತಮ ಸಾಧನೆ ತೋರಿದೆ. ದೇಶದ ಐಟಿ ಕ್ಷೇತ್ರದಲ್ಲಿ ಕಳೆದ ವರ್ಷ 2.2 ಲಕ್ಷ ಕೋಟಿ ರೂ. ಹೂಡಿಕೆಯಾಗಿದ್ದು, ಆ ಪೈಕಿ ಕರ್ನಾಟಕವೊಂದೇ 53,396 ಕೋಟಿ ರೂ. ಹೂಡಿಕೆಯನ್ನು ಸ್ವೀಕರಿಸಿದೆ ಎಂದು ಕೈಗಾರಿಕಾ ಸಂಸ್ಥೆ ಅಸೋಚಾಮ್ನ ಐ.ಟಿ. ಕ್ಷೇತ್ರಕ್ಕೆ ಸಂಬಂಧಿಸಿದ ವಿಶ್ಲೇಷಣಾ ವರದಿ ತಿಳಿಸಿದೆ.. 2005-06ನೇ ಸಾಲಿನಲ್ಲಿ ಕರ್ನಾಟಕದಲ್ಲಿ 14,337 ಕೋಟಿ ರೂ. ಹೂಡಿಕೆಯಾಗಿತ್ತು. ಆದರೆ ಇದು 2015-16ರಲ್ಲಿ 53,396 ಕೋಟಿ ರೂ.ಗೆ ಏರಿಕೆಯಾಗಿದೆ. ಕರ್ನಾಟಕ ವಾರ್ಷಿಕ ಶೇ.14ರ ಅಭಿವೃದ್ಧಿ ವೇಗದಲ್ಲಿ ಹೂಡಿಕೆ ಆಕರ್ಷಿಸಿದೆ ಎಂದು ಹೇಳಿದೆ. ಕರ್ನಾಟಕದಷ್ಟು ಹೂಡಿಕೆ ದರ ಹೊಂದಿರುವ ರಾಜ್ಯ ಬೇರೊಂದಿಲ್ಲ ಎಂಬುದು ಗಮನಾರ್ಹ. ಹೂಡಿಕೆಯಲ್ಲಿ ಕರ್ನಾಟಕದ ಅನಂತರ ಅತಿ ಹೆಚ್ಚಿನ ಪಾಲು ಪಡೆದ ರಾಜ್ಯ ಗುಜರಾತ್ ಆಗಿದೆ. 2005-06ನೇ ಸಾಲಿನಲ್ಲಿ 700 ಕೋಟಿ ರೂ.ನಷ್ಟು ಐಟಿ ಹೂಡಿಕೆ ಕಂಡಿದ್ದ ಆ ರಾಜ್ಯ, ಕಳೆದ ವರ್ಷ 35,300 ಕೋಟಿ ರೂ. ಆಕರ್ಷಿಸುವ ಮೂಲಕ ಶೇ.48ರಷ್ಟು ಪ್ರಗತಿ ಕಾಯ್ದುಕೊಂಡಿದೆ. ಇದೇ ಅವಧಿಯಲ್ಲಿ ದೇಶದಲ್ಲಿನ ಐಟಿ ಹೂಡಿಕೆ ಪ್ರಮಾಣ 2005-06ನೇ ಸಾಲಿನಲ್ಲಿದ್ದ 46200 ಕೋಟಿ ರೂ.ನಿಂದ ಕಳೆದ ವರ್ಷ 2.2 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
Question 7 |
7.ಕನ್ನಡ ಪುಸ್ತಕ ಪ್ರಾಧಿಕಾರದ 2015ರ ಸಾಲಿನ ಡಾ. ಎಂ.ಎಂ.ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ’ಗೆ ಯಾರನ್ನು ಆಯ್ಕೆಮಾಡಲಾಗಿದೆ?
ಶಶಿಕಲಾ ಬೆಳಗಲಿ | |
ಡಾ.ಬಿ.ಶೇಷಾದ್ರಿ | |
ಡಾ.ಎಸ್.ಪಿ.ಯೋಗಣ್ಣ | |
ಡಾ.ಅನುಪಮಾ ನಿರಂಜನ್ |
ಕನ್ನಡ ಪುಸ್ತಕ ಪ್ರಾಧಿಕಾರದ 2015ರ ಸಾಲಿನ ಪ್ರಶಸ್ತಿ ಪ್ರಕಟಿಸಲಾಗಿದ್ದು, ‘ಡಾ. ಎಂ.ಎಂ.ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ’ಗೆ ಬಳ್ಳಾ ರಿಯ ಡಾ.ಬಿ.ಶೇಷಾದ್ರಿ ಮತ್ತು ‘ಡಾ. ಜಿ.ಪಿ . ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ’ಗೆ ಶಶಿಕಲಾ ಬೆಳಗಲಿ ಆಯ್ಕೆಯಾಗಿದ್ದಾರೆ. 2015 ನೇ ಸಾಲಿನ ಅತ್ಯುತ್ತಮ ಪ್ರಕಾಶನ ಪ್ರಶಸ್ತಿಗೆ ಬೆಂಗಳೂರಿನ ‘ಅನ್ವೇಷಣೆ ಪ್ರಕಾಶನ’ ಆಯ್ಕೆಯಾಗಿದೆ. ಪ್ರಶಸ್ತಿಯು ₹ 1 ಲಕ್ಷ ನಗದು ಒಳಗೊಂಡಿದೆ. ‘ಡಾ. ಅನುಪಮಾ ನಿರಂಜನ ವೈದ್ಯಕೀಯ ಮತ್ತು ವಿಜ್ಞಾನ ಸಾಹಿತ್ಯ ಪ್ರಶಸ್ತಿಗೆ ಮೈಸೂರಿನ ಡಾ.ಎಸ್.ಪಿ.ಯೋಗಣ್ಣ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ₹ 25 ಸಾವಿರ ಒಳಗೊಂಡಿದೆ.
Question 8 |
8.ಕರ್ನಾಟಕ ರಾಜ್ಯದ ಭೌಗೋಳಿಕ ಪ್ರದೇಶದ ಶೇಕಡ ಎಷ್ಟು ಭಾಗವು ಅರಣ್ಯದಿಂದ ಆವೃತವಾಗಿದೆ?
22.61 | |
19.82 | |
21.40 | |
20.06 |
ವಾರ್ಷಿಕ ವರದಿ ಪ್ರಕಾರ ರಾಜ್ಯದ ಒಟ್ಟಾರೆ ಅರಣ್ಯ ಪ್ರದೇಶವು 43,356.47 ಚದರ ಕೀಮೀ ಇದೆ. ಹೀಗಾಗಿ ರಾಜ್ಯದ ಭೌಗೋಳಿಕ ಪ್ರದೇಶದ ಶೇ 22.61 ಭಾಗವು ಅರಣ್ಯದಿಂದ ಆವೃತವಾಗಿದೆ.
Question 9 |
9.ಕರ್ನಾಟಕದಲ್ಲಿ ಇದುವರೆಗೂ ಎಷ್ಟು ಹಣಕಾಸು ಆಯೋಗಗಳನ್ನು ಸ್ಥಾಪಿಸಲಾಗಿದೆ?
ಎರಡು | |
ಮೂರು | |
ನಾಲ್ಕು | |
ಆರು |
ರಾಜ್ಯದಲ್ಲಿ ಇದುವರೆಗೂ ನಾಲ್ಕು ಹಣಕಾಸು ಆಯೋಗಗಳನ್ನು ರಚಿಸಲಾಗಿದೆ. ಸಿ.ಜಿ.ಚಿನ್ನಸ್ವಾಮಿ ರವರು ರಾಜ್ಯದ ನಾಲ್ಕನೇ ಹಣಕಾಸು ಆಯೋಗದ ಅಧ್ಯಕ್ಷರಾಗಿದ್ದಾರೆ. ರಾಜ್ಯ ಹಣಕಾಸು ಆಯೋಗವನ್ನು ರಾಜ್ಯಪಾಲರು ಸಂವಿಧಾನದ 73ನೇ ತಿದ್ದುಪಡಿ ಅನ್ವಯ ಅನುಚ್ಛೇದ 243 (ಐ) ಜಾರಿಗೆ ಬಂದ ಒಂದು ವರ್ಷದೊಳಗಾಗಿ ಮತ್ತು ಅಲ್ಲಿಂದ ಪ್ರತಿ ಐದು ವರ್ಷಗಳಿಗೊಮ್ಮೆ ಪಂಚಾಯತಿಗಳ ಹಣಕಾಸು ಸ್ಥಿತಿಗತಿ ಪರಾಮರ್ಶೆ ಮಾಡಲು ರಾಜ್ಯ ಹಣಕಾಸು ಆಯೋಗವನ್ನು ರಚಿಸಬೇಕು.
Question 10 |
10.ಕರ್ನಾಟಕ ಪ್ರಸಿದ್ದ ಐತಿಹಾಸಿಕ ಸ್ಥಳವಾದ ಬೇಲೂರು ಯಾವ ನದಿಯ ದಡದ ಮೇಲಿದೆ?
ಹೇಮಾವತಿ | |
ತುಂಗಾ | |
ಯಗಚಿ | |
ಕುಮಾರಧಾರ |
ಐತಿಹಾಸಿಕ ಪ್ರಸಿದ್ದವಾದ ಬೇಲೂರು ಯಗಚಿ ನದಿಯ ದಡದಲ್ಲಿದೆ. ಯಗಚಿ ನದಿ ಹೇಮಾವತಿ ನದಿಯ ಉಪನದಿ.
Thank u…..
ಧನ್ಯವಾದಗಳು ಸರ್
Thanks
Excellent website gor KAS/PDO/FDA/SDA/IAS aspirants
Excellent website for KAS/PDO/FDA/SDA/IAS aspirants
Super..sir
Awesome questions thanks sir
Thanks
excellent question framing sri