ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 18, 2016

Question 1

1.ಭಾರತದ ಮೊದಲ “ವೈದ್ಯಕೀಯ ಉಪಕರಣಗಳ ಉತ್ಪಾದನಾ ಪಾರ್ಕ್ (medical devices manufacturing park)” ಯಾವ ರಾಜ್ಯದಲ್ಲಿ ತಲೆಯತ್ತಲಿದೆ?

A
ಕೇರಳ
B
ಹಿಮಾಚಲ ಪ್ರದೇಶ್
C
ಆಂಧ್ರ ಪ್ರದೇಶ
D
ಜಾರ್ಖಂಡ್
Question 1 Explanation: 
ಆಂಧ್ರ ಪ್ರದೇಶ:

ದೇಶದ ಮೊದಲ ವೈದ್ಯಕೀಯ ಉಪಕರಣಗಳಿಗೆಂದೆ ಮೀಸಲಿಟ್ಟ “ವೈದ್ಯಕೀಯ ಉಪಕರಣಗಳ ಉತ್ಪಾದನಾ ಪಾರ್ಕ್” (AP Medical Technology Park)ಗೆ ಆಂಧ್ರಪ್ರದೇಶದಲ್ಲಿ ಶಂಕುಸ್ಥಾಪನೆ ಮಾಡಲಾಯಿತು. ಆಂಧ್ರ ಪ್ರದೇಶದ ಪೆಡ ಗಂಟ್ಯದ ಮಂಡಲ್ ನ ನುಡುಪುರುದಲ್ಲಿ 222 ಎಕರೆ ಪ್ರದೇಶದಲ್ಲಿ ಈ ಪಾರ್ಕ್ ಸ್ಥಾಪನೆಯಾಗಲಿದೆ. ದಕ್ಷಿಣ ಏಷ್ಯಾದಲ್ಲೇ ವೈದ್ಯಕೀಯ ಉಪಕರಣ ತಯಾರಿಕೆಗೆ ಮೀಸಲಿಟ್ಟಿರುವ ಮೊದಲ ಪಾರ್ಕ್ ಇದಾಗಿದ್ದು, ಇದರಿಂದ 25,000 ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಲಾಗಿದೆ.

Question 2

2.ಈ ಕೆಳಗಿನ ಯಾರು “ಹಣಕಾಸು ಸ್ಥಿರತೆ ಮತ್ತು ಅಭಿವೃದ್ದಿ ಕೌನ್ಸಿಲ್ (Financial Stability and Development Council)” ನ ಅಧ್ಯಕ್ಷರಾಗಿರುತ್ತಾರೆ?

A
RBIನ ಗವರ್ನರ್
B
ಕೇಂದ್ರ ಹಣಕಾಸು ಸಚಿವರು
C
ಆರ್ಥಿಕ ಕಾರ್ಯದರ್ಶಿ
D
SEBIಯ ಮುಖ್ಯಸ್ಥರು
Question 2 Explanation: 
ಕೇಂದ್ರ ಹಣಕಾಸು ಸಚಿವರು:

ಕೇಂದ್ರ ಹಣಕಾಸು ಸಚಿವರು ಹಣಕಾಸು ಸ್ಥಿರತೆ ಮತ್ತು ಅಭಿವೃದ್ದಿ ಕೌನ್ಸಿಲ್ ನ ಅಧ್ಯಕ್ಷರಾಗಿರುತ್ತಾರೆ. ಇದೊಂದು ಉನ್ನತ ಮಟ್ಟದ ಮಂಡಳಿಯಾಗಿದ್ದು, ದೇಶದಲ್ಲಿ ಆರ್ಥಿಕ ಸ್ಥಿರತೆಯನ್ನು ಕಾಪಾಡುವ ಜವಾಬ್ದಾರಿಯೊಂದಿಗೆ ಭಾರತ ಸರ್ಕಾರ ಸ್ಥಾಪಿಸಿದೆ. 2008 ರಘುರಾಮ್ ರಾಜನ್ ನೇತೃತ್ವದ ಸಮಿತಿ ಈ ಕೌನ್ಸಿಲ್ ಸ್ಥಾಪಿಸುವ ಬಗ್ಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಅದರಂತೆ 2010 ರಲ್ಲಿ ಅಂದಿನ ಹಣಕಾಸು ಸಚಿವರಾಗಿದ್ದ ಪ್ರಣಬ್ ಮುಖರ್ಜಿರವರು ಹಣಕಾಸು ಸ್ಥಿರತೆ ಮತ್ತು ಅಭಿವೃದ್ದಿ ಕೌನ್ಸಿಲ್ ಕಾರ್ಯರೂಪಕ್ಕೆ ತಂದಿದ್ದರು. ದೇಶದಲ್ಲಿ ಆರ್ಥಿಕ ಸ್ಥಿರತೆ ಕಾಪಾಡುವುದು, ಆರ್ಥಿಕ ವಲಯ ಅಭಿವೃದ್ದಿ ಸೇರಿದಂತೆ ಹಣಕಾಸು ನಿಯಮಗಳನ್ನು ರೂಪಿಸುವ ಕಾರ್ಯವನ್ನು ಈ ಕೌನ್ಸಿಲ್ ಮಾಡುತ್ತಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಸೇರಿದಂತೆ, ಮುಖ್ಯ ಆರ್ಥಿಕ ಸಲಹೆಗಾರರು, ಸೆಬಿ ಅಧ್ಯಕ್ಷರು, IRDA ಅಧ್ಯಕ್ಷರು, PFRDA ಅಧ್ಯಕ್ಷರು ಮತ್ತು ಪಾರ್ವಡ್ ಮಾರ್ಕೆಟಿಂಗ್ ಕಮೀಷನ್ ಅಧ್ಯಕ್ಷರುಗಳು ಈ ಕೌನ್ಸಿಲ್ ನ ಸದಸ್ಯರಾಗಿರುತ್ತಾರೆ.

Question 3

3.ಇತ್ತೀಚೆಗೆ ಬಿಡುಗಡೆಗೊಂಡ “2016 ಫಾರ್ಚೂನ್ “ಚೇಂಜ್ ದಿ ವರ್ಲ್ಡ್” ಧನಾತ್ಮಕ ಸಾಮಾಜಿಕ ಪರಿಣಾಮ ಬೀರುವ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಸಂಸ್ಥೆಗಳು ಯಾವುವು?

A
ಗೋದ್ರೆಜ್ ಮತ್ತು ಸಿಪ್ಲಾ
B
ಗೋದ್ರೆಜ್ ಮತ್ತು ಎಲ್&ಟಿ
C
ಎಲ್&ಟಿ ಮತ್ತು ರೆಡ್ಡೀಸ್ ಲ್ಯಾಬೋರೆಟರಿ
D
ರಿಲಾಯನ್ಸ್ ಸಮೂಹ ಮತ್ತು ಭಾರತಿ ಏರ್ಟೆಲ್
Question 3 Explanation: 
ಗೋದ್ರೆಜ್ ಮತ್ತು ಸಿಪ್ಲಾ:

ಉತ್ತಮ ಸಮಾಜಕ್ಕಾಗಿ ತಮ್ಮ ಚಟುವಟಿಕೆಗಳ ಮೂಲಕ ಧನಾತ್ಮಕ ಸಾಮಾಜಿಕ ಪರಿಣಾಮ ಬೀರುವ ಜಾಗತಿಕ ಸಂಸ್ಥೆಗಳ ಪಟ್ಟಿಯನ್ನು ಫಾರ್ಚೂನ್ ನಿಯತಕಾಲಿಕೆ ಹೊರತಂದಿದ್ದು, ಭಾರತದ ಔಷಧೀಯ ದೈತ್ಯ ಸಿಪ್ಲಾ ಮತ್ತು ಗ್ರಾಹಕ ವಸ್ತುಗಳ ಕಂಪನಿ ಗೋದ್ರೆಜ್ ಪಟ್ಟಿಯಲ್ಲಿ ಸ್ಥಾನಪಡೆದುಕೊಂಡಿವೆ. 2016 ಫಾರ್ಚೂನ್ “ಚೇಂಜ್ ದಿ ವರ್ಲ್ಡ್” 50 ಜಾಗತಿಕ ಸಂಸ್ಥೆಗಳ ಪಟ್ಟಿಯಲ್ಲಿ ಸಿಪ್ಲಾ 46ನೇ ಸ್ಥಾನದಲ್ಲಿದ್ದರೆ, ಗೋದ್ರೆಜ್ 48ನೇ ಸ್ಥಾನದಲ್ಲಿದೆ. ಬ್ರಿಟನ್ ನ ಔಷಧೀಯ ದಿಗ್ಗಜ ಗ್ಲಾಕ್ಸೊಸ್ಮಿತ್ ಕ್ಲೈನ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಗಳಿಸಿದೆ.

Question 4

4.ಇತ್ತೀಚೆಗೆ ನಿಧನರಾದ “ಗೋಬಿಂದ್ ತೇಜ್” ಯಾವ ಭಾಷೆಯ ಸಿನಿಮಾ ಕ್ಷೇತ್ರದಲ್ಲಿ ಪ್ರಸಿದ್ದರಾಗಿದ್ದರು?

A
ಪಂಜಾಬಿ
B
ಮರಾಠಿ
C
ಓಡಿಯಾ
D
ತಮಿಳು
Question 4 Explanation: 
ಓಡಿಯಾ:

ಖ್ಯಾತ ಓಡಿಯಾ ನಟ ಮತ್ತು ನಿರ್ದೇಶಕ ಗೋಬಿಂದ್ ತೇಜ್ ನಿಧನರಾದರು (88). ತಮ್ಮ 50 ವರ್ಷದ ವೃತ್ತಿ ಜೀವನದಲ್ಲಿ ನಟನಾಗಿ, ನಿರ್ದೇಶಕರಾಗಿ ಮತ್ತು ನಿರ್ಮಾಪಕರಾಗಿ ಓಡಿಯಾ ಸಿನಿಮಾ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದರು. 1954 ರಲ್ಲಿ ಕೇದರ್ ಗೌರಿ ಚಿತ್ರದ ಮೂಲಕ ನಟನಾಗಿ ಪಾದರ್ಪಣೆ ಮಾಡಿ, 1979 ರಲ್ಲಿ ರಾಮಾಯಣ ಚಿತ್ರದ ಮೂಲಕ ನಿರ್ದೇಶಕರಾದರು. ಕೃಷ್ಣ ಸುಧಾಮ ಬಂಧನ್, ಸ್ಕೂಲ್ ಮಾಸ್ಟರ್ ಚಿತ್ರಗಳು ಅವರ ನಿರ್ದೇಶನದ ಸಾಮರ್ಥವನ್ನು ಬಿಂಬಿಸಿದ್ದ ಚಿತ್ರಗಳಲ್ಲಿ ಕೆಲವು. ಗೋಬಿಂದ್ ಓಡಿಶಾ ರಾಜ್ಯ ಸಿನಿಮಾ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

Question 5

5.ಯಾವ ರಾಜ್ಯದ ದೇಶದ ಮೊದಲ ಸಮಗ್ರ “ಕ್ರೈಂ ಅಪರಾಧ ಪತ್ತೆ ಜಾಲ ವ್ಯವಸ್ಥೆ”ಯನ್ನು ಇತ್ತೀಚೆಗೆ ಆರಂಭಿಸಿತು?

A
ಗುಜರಾತ್
B
ಹರಿಯಾಣ್
C
ಮಹಾರಾಷ್ಟ್ರ
D
ಕರ್ನಾಟಕ
Question 5 Explanation: 
ಮಹಾರಾಷ್ಟ್ರ:

ದೇಶದ ಮೊದಲ ಸಮಗ್ರ “ಕ್ರೈಂ ಅಪರಾಧ ಪತ್ತೆ ಜಾಲ ವ್ಯವಸ್ಥೆ (Crime Criminal Tracking Network System)” ಮಹಾರಾಷ್ಟ್ರದಲ್ಲಿ ಆರಂಭಿಸಲಾಗಿದೆ. ಈ ವ್ಯವಸ್ಥೆಯಡಿ ರಾಜ್ಯದ ಎಲ್ಲಾ ಪೊಲೀಸ್ ಸ್ಟೇಷನ್ ಗಳನ್ನು ಒಂದಕ್ಕೊಂದು ಲಿಂಕ್ ಮಾಡುವ ಮೂಲಕ ಅವುಗಳ ವ್ಯಾಪ್ತಿಯಲ್ಲಾಗುವ ಅಪರಾಧಗಳ ಮಾಹಿತಿಯನ್ನು ತ್ವರಿತವಾಗಿ ರವಾನಿಸಿ ಅಪರಾಧ ಪ್ರಕರಣವನ್ನು ಸುಲಭವಾಗಿ ಪತ್ತೆಹಚ್ಚಬಹುದಾಗಿದೆ.

Question 6

6.ಇತ್ತೀಚೆಗೆ ನಿಧನರಾದ “ಗುರ್ಡಿಯಲ್ ಸಿಂಗ್ (Gurdial Singh)” ಯಾವ ಭಾಷೆಯ ಖ್ಯಾತ ಸಾಹಿತಿ?

A
ಗುಜರಾತಿ
B
ಹಿಂದಿ
C
ಪಂಜಾಬಿ
D
ತೆಲುಗು
Question 6 Explanation: 
ಪಂಜಾಬಿ:

ವಿಶ್ವ ಖ್ಯಾತಿ ಪಡೆದಿದ್ದ ಪಂಜಾಬಿ ಸಾಹಿತಿ ಗುರ್ಡಿಯಲ್ ಸಿಂಗ್ ನಿಧನರಾದರು. ಸಿಂಗ್ ಅವರು ಬರಹಗಾರರಾಗಿ, ಕಾದಂಬರಿಕಾರರಾಗಿ ಮತ್ತು ಸಣ್ಣಕಥೆಗಳ ಮೂಲಕ ಪಂಜಾಬಿ ಸಾಹಿತ್ಯ ಲೋಕಕ್ಕೆ ಶ್ಲಾಘನೀಯ ಕೊಡುಗೆ ನೀಡದ್ದರು. ಸಾಹಿತ್ಯ ಕ್ಷೇತ್ರಕ್ಕೆ ನೀಡುವ ಅತ್ಯುನ್ನತ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

Question 7

7.ಕೇಂದ್ರ ಸರ್ಕಾರ ಇತ್ತೀಚೆಗೆ ಬಿಡುಗಡೆಗೊಳಿಸಿದ “TARANG” ಮೊಬೈಲ್ ತಂತಾಂಶ್ರ ಯಾವುದಕ್ಕೆ ಸಂಬಂಧಿಸಿದೆ?

A
ಉಪಗ್ರಹ ತರಂಗ ಹಂಚಿಕೆ
B
ವಿದ್ಯುತ್ ಪ್ರಸರಣ ಯೋಜನೆ
C
ನದಿ ನೀರಿನ ಮಾಲಿನ್ಯ ಅಳೆಯಲು
D
ಕೇಂದ್ರ ಸರ್ಕಾರ ಯೋಜನೆಗಳ ನಿರ್ವಹಣೆ
Question 7 Explanation: 
ವಿದ್ಯುತ್ ಪ್ರಸರಣ ಯೋಜನೆ:

ವಿದ್ಯುತ್, ಕಲ್ಲಿದ್ದಲು, ನವೀನ ಮತ್ತು ನವೀಕರಸಬಹುದಾದ ಸಚಿವಾಲಯದ ರಾಜ್ಯ ಸಚಿವ ಪಿಯೂಷ್ ಗೋಯಲ್ ಅವರು TARANG (Transmission App for Real Time Monitoring and Growth) ಮೊಬೈಲ್ ಅಪ್ಲೀಕೇಷನ್ ಬಿಡುಗಡೆಗೊಳಿಸಿದರು. ಇದರ ಅಡಿಯಲ್ಲಿ ನಿರ್ಮಾಣ ಹಂತದಲ್ಲಿರುವ ವಿದ್ಯುತ್ ಪ್ರಸರಣ ಯೋಜನೆಗಳ ಮಾಹಿತಿ ಕಲೆಹಾಕಿ ನಿರ್ವಹಣೆ ಮಾಡಲಾಗುತ್ತದೆ. ಅಂತರ ರಾಜ್ಯ ಹಾಗೂ ಆಂತರಿಕ-ರಾಜ್ಯ ವಿದ್ಯುತ್ ಪ್ರಸರಣ ವ್ಯವಸ್ಥೆಗಳ ಪ್ರಗತಿಯನ್ನು ಇದರಡಿ ನೋಡಬಹುದಾಗಿದೆ.

Question 8

8.2016 ಸಂಗೀತ್ ಮಾರ್ತಂಡ್ ಉಸ್ತದ್ ಚಾಂದ್ ಖಾನ್ ಜೀವಮಾನ ಸಾಧನೆ ಪ್ರಶಸ್ತಿಗೆ ಯಾರಿಗೆ ನೀಡಲಾಗುವುದು?

A
ಪಂಡಿತ್ ಶಿವಕುಮಾರ್ ಶರ್ಮಾ
B
ಪಂಡಿತ್ ರವಿಶಂಕರ್ ಗುರೂಜಿ
C
ವ್ಯಾಸಮೂರ್ತಿ
D
ತರುಣ್ ಭಟ್ಟಚಾರ್ಯ
Question 8 Explanation: 
ಪಂಡಿತ್ ಶಿವಕುಮಾರ್ ಶರ್ಮಾ:

ಸಂತೂರ್ ಮಾಂತ್ರಿಕ ಪಂಡಿತ್ ಶಿವಕುಮಾರ್ ಶರ್ಮಾ ಅವರನ್ನು 2016 ಸಂಗೀತ್ ಮಾರ್ತಂಡ್ ಉಸ್ತದ್ ಚಾಂದ್ ಖಾನ್ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಪದ್ಮವಿಭೂಷಣ ಪಂಡಿತ್ ಶಿವಕುಮಾರ್ ಶರ್ಮಾ 1938 ರಲ್ಲಿ ಜಮ್ಮು ಜನಿಸಿದರು. ಜಮ್ಮು ಮತ್ತು ಕಾಶ್ಮೀರ ರಾಜ್ಯದ ಜಾನಪದ ವಾದ್ಯವಾದ ಸಂತೂರ್ ಮೂಲಕ ಭಾರತೀಯ ಶಾಸ್ತ್ರೀಯ ಸಂಗೀತ ನುಡಿಸಿದ ಮೊದಲ ಭಾರತೀಯ ಎಂದೇ ಇವರು ಪ್ರಸಿದ್ದರಾಗಿದ್ದಾರೆ. ದೆಹಲಿಯ ಸೂರ್ಸಾಗರ್ ಸೊಸೈಟಿ ಈ ಪ್ರಶಸ್ತಿಯನ್ನು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಾ ಮತ್ತು ನೃತ್ಯದಲ್ಲಿ ಸೇವೆ ಸಲ್ಲಿಸಿದವರಿಗೆ 1986 ರಿಂದ ಪ್ರತಿವರ್ಷ ನೀಡುತ್ತಿದೆ.

Question 9

9.ರಿಯೋ ಒಲಂಪಿಕ್ಸ್ನ ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ಪಂದ್ಯದಲ್ಲಿ ಪ್ರಶಸ್ತಿ ಗೆದ್ದ ಕರೋಲಿನಾ ಮರಿಯಾ ಯಾವ ದೇಶದವರು?

A
ರಷ್ಯಾ
B
ಸರ್ಬಿಯಾ
C
ಸ್ಪೇನ್
D
ಜರ್ಮನಿ
Question 9 Explanation: 
ಸ್ಪೇನ್:

ವಿಶ್ವದ ನಂ.1 ಬ್ಯಾಡ್ಮಿಂಟನ್ ಆಟಗಾರ್ತಿ ಸ್ಪೇನ್ನ ಕರೋಲಿನಾ ಮರಿಯಾ ರಿಯೋ ಒಲಂಪಿಕ್ಸ್ನ ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ಪಂದ್ಯದಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಸಾಕಷ್ಟು ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಭಾರತದ ಪಿ.ವಿ ಸಿಂಧು ಅವರನ್ನು ಮಣಿಸಿ ಪ್ರಶಸ್ತಿಯನ್ನು ಗೆದ್ದುಕೊಂಡರು. ಈ ಪಂದ್ಯದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಸಿಂಧು ಪಾತ್ರರಾಗಿದ್ದಾರೆ.

Question 10

10.2016 ತಮಿಳು ರತ್ನ ಪ್ರಶಸ್ತಿಯನ್ನು ಯಾರಿಗೆ ನೀಡಿ ಗೌರವಿಸಲಾಯಿತು?

A
ಎಂ.ಎಸ್.ಸುಬ್ಬುಲಕ್ಷಿ
B
ರಜನಿಕಾಂತ್
C
ಎ.ಆರ್.ರೆಹಮಾನ್
D
ಕಮಲ್ ಹಾಸನ್
Question 10 Explanation: 
ಎ.ಆರ್.ರೆಹಮಾನ್:

ವಿಶ್ವ ಪ್ರಸಿದ್ದ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರಿಗೆ ತಮಿಳು ರತ್ನ ಪ್ರಶಸ್ತಿಯನ್ನು ನೀಡಿ ಗೌರವಸಿಲಾಗಿದೆ. ನ್ಯೂಯಾರ್ಕ್ ಮೂಲದ ತಮಿಳು ಸಂಗಮ್ ಈ ಪ್ರಶಸ್ತಿಯನ್ನು ನೀಡುತ್ತಿದೆ. ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಖ್ಯಾತಿಯ ಎಂ.ಎಸ್.ಸುಬ್ಬುಲಕ್ಷಿ ರವರ ಜನ್ಮಶತಾಬ್ದಿ ಅನ್ವಯ ಏರ್ಪಡಿಸದ್ದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟ ಬಳಿಕ ರೆಹಮಾನ್ ಅವರಿಗೆ ಪ್ರಶಸ್ತಿಯನ್ನು ನೀಡಲಾಯಿತು.

There are 10 questions to complete.

6 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 18, 2016”

    1. Anonymous

      ಕನ್ನಡ

  1. ಸಂತೋಷ್ ಗೌಡರ

    Sir quation no 8 answer.

  2. ಸಂತೋಷ್ ಗೌಡರ

    Quation no 8 ralli answer. Explanations naili answer bere ide

    1. Karunaduexams

      We will correct it now.. thanks

  3. Vishesh Nilaji

    Increase the the number of questions Sir… Really it’s very helpful site for so many people… I just loved your site…

Leave a Comment

This site uses Akismet to reduce spam. Learn how your comment data is processed.