ಖ್ಯಾತ ಓಡಿಯಾ ನಟ ಮತ್ತು ನಿರ್ದೇಶಕ ಗೋವಿಂದ್ ತೇಜ್ ನಿಧನ
ಓಡಿಯಾ ಸಿನಿಮಾ ಕ್ಷೇತ್ರದ ಜನಪ್ರಿಯ ನಟ ಮತ್ತು ನಿರ್ದೇಶಕ ಗೋವಿಂದ್ ತೇಜ್ ಅವರು ಭುಬನೇಶ್ವರ್, ಓಡಿಶಾದಲ್ಲಿ ಕೊನೆಯುಸಿರೆಳೆದರು. 88 ವರ್ಷ ವಯಸ್ಸಿನ ತೇಜ್ ಅನಾರೋಗ್ಯದಿಂದ ಬಳಲುತ್ತಿದ್ದರು. 50 ವರ್ಷಗಳ ದೀರ್ಘಕಾಲದ ವೃತ್ತಿಜೀವನದಲ್ಲಿ ನಟ, ನಿರ್ದೇಶಕ ಅಥವಾ ನಿರ್ಮಾಪಕನಾಗಿ ಒಡಿಯಾ ಸಿನಿಮಾ ಕ್ಷೇತ್ರಕ್ಕೆ ಘಣನೀಯ ಸೇವೆ ನೀಡಿದ್ದರು.
ಗೋವಿಂದ್ ತೇಜ್:
- ಗೋಬಿಂದ್ ತೇಜ್ 1954 ರಲ್ಲಿ ತೆರೆಕಂಡ ‘ಕೇದಾರ್ ಗೌರಿ’ ಚಿತ್ರದ ಮೂಲಕ ನಟನಾಗಿ ಪಾದಾರ್ಪಣೆ ಮಾಡಿದರು. ನಂತರ 1979 ರಲ್ಲಿ ‘ರಾಮಾಯಣ’ ಸಿನಿಮಾ ಮೂಲಕ ನಿರ್ದೇಶಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು.
- ಮನ ಆಕಾಶ, ಕೃಷ್ಣ ಸುಧಾಮ, ಧರಿತ್ರಿ, ಗೌರಿ, ಮನ ಆಕಾಶ, ಸ್ಕೂಲ್ ಮಾಸ್ಟರ್, ಬಂಧು ಮೊಹಂತಿ ಸೇರಿದಂತೆ ಅನೇಕ ಚಿತ್ರಗಳನ್ನು ತೇಜ್ ನಿರ್ದೇಶಿಸಿದ್ದರು.
ಪ್ರಶಸ್ತಿಗಳು:
- ಸ್ಕೂಲ್ ಮಾಸ್ಟರ್, ಕಬೇರಿ ಚಿತ್ರಗಳ ಅತ್ಯುತ್ತಮ ನಿರ್ದೇಶನಕ್ಕಾಗಿ ಓಡಿಯಾ ರಾಜ್ಯ ಸಿನಿಮಾ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.
- “ಬಂದು ಮೊಹಂತಿ” ಚಿತ್ರದಲ್ಲಿನ ಅವೀಸ್ಮರಣೀಯ ನಟನೆಗಾಗಿ 1977 ರಲ್ಲಿ ಓಡಿಯಾ ರಾಜ್ಯ ಸಿನಿಮಾ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದರು.
- ಓಡಿಯಾ ಸಿನಿಮಾ ಕ್ಷೇತ್ರದ ಅಭಿವೃದ್ದಿಗೆ ತೇಜ್ ನೀಡಿದ್ದ ಕೊಡುಗೆಯನ್ನು ಗಮನಿಸಿ ಓಡಿಶಾ ಸಿನಿಮಾ ರಂಗದ ಅತ್ಯುನ್ನತ ಪ್ರಶಸ್ತಿಯಾದ “ಜಯದೇವ” ಪ್ರಶಸ್ತಿಯನ್ನು 1986 ರಲ್ಲಿ ನೀಡಲಾಗಿತ್ತು.
ಐದು ಸಹವರ್ತಿ ಬ್ಯಾಂಕ್ಗಳ ವಿಲೀನಕ್ಕೆ SBI ಮಂಡಳಿ ಸಮ್ಮತಿ
ಐದು ಸಹವರ್ತಿ ಬ್ಯಾಂಕಗಳು ಮತ್ತು ಭಾರತೀಯ ಮಹಿಳಾ ಬ್ಯಾಂಕ್ ವಿಲೀನಗೊಳಿಸಲು ಭಾರತೀಯ ಸ್ಟೇಟ್ ಬ್ಯಾಂಕ್ ನ ನಿರ್ದೇಶಕ ಮಂಡಳಿ ಒಪ್ಪಿಗೆ ಸೂಚಿಸಿದೆ. ಆ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಮತ್ತು ಜೈಪುರ (ಎಸ್ಬಿಬಿಜೆ), ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಎಸ್ಬಿಎಂ), ಸ್ಟೇಟ್ ಬ್ಯಾಂಕ್ ಆಫ್ ಟ್ರವಾಂಕೂರ್ (ಎಸ್ಬಿಟಿ) ಮತ್ತು ಭಾರತೀಯ ಮಹಿಳಾ ಬ್ಯಾಂಕ್ ಲಿಮಿಟೆಡ್ಗಳನ್ನು (ಬಿಎಂಬಿಎಲ್) ವಿಲೀನಗೊಳ್ಳಲಿವೆ.
- ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಬ್ಯಾಂಕ್ಗಳ ಷೇರುಗಳ ವಿನಿಮಯ ಅನುಪಾತವನ್ನೂ ಅನುಮೋದಿಸಲಾಗಿದೆ. ವಿಲೀನಗೊಳಿಸಿಕೊಳ್ಳಲು ಎಸ್ಬಿಐ ನಿರ್ದೇಶಕರ ಕೇಂದ್ರೀಯ ಮಂಡಳಿಯು ಸಮ್ಮತಿ ನೀಡಿದೆ.
- ಷೇರುಪೇಟೆಯಲ್ಲಿ ನೋಂದಾಣಿಯಾಗಾದ ಸ್ಟೇಟ್ ಬ್ಯಾಂಕ್ ಪಾಟಿಯಾಲ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್ ಅನ್ನು ವಿಲೀನಗೊಳಿಸಲು ಸಮ್ಮತಿಸಲಾಗಿದೆ.
- ವಿಲೀನ ಪ್ರಕ್ರಿಯೆಯಿಂದ ರೂ 37 ಲಕ್ಷ ಕೋಟಿ ರೂಪಾಯಿ ಮೊತ್ತದ ಜಾಗತಿಕ ಗಾತ್ರದ ಬೃಹತ್ ಬ್ಯಾಂಕ್ ಆಗಿ ರೂಪುಗೊಳ್ಳಲಿದೆ. ಆ ಮೂಲಕ ಜಾಗತಿಕ ಮಟ್ಟದ 50 ಬೃಹತ್ ಆರ್ಥಿಕ ಸಂಸ್ಥೆಗಳ ಗುಂಪಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ಸೇರ್ಪಡೆಗೊಳ್ಳಲಿದೆ.
- ವಿಲೀನದ ನಂತರ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಗಳ ಸಂಖ್ಯೆ 22,500 ಹಾಗೂ ಎಟಿಎಂಗಳ ಸಂಖ್ಯೆ 58,000 ಕ್ಕೆ ಏರಿಕೆಯಾಗಲಿದೆ.
- ಪ್ರಸ್ತುತ ಭಾರತೀಯ ಸ್ಟೇಟ್ ಬ್ಯಾಂಕ್ 36 ದೇಶಗಳಲ್ಲಿ 191 ವಿದೇಶಿ ಶಾಖೆಗಳು ಸೇರಿ ಸುಮಾರು 16,500 ಶಾಖೆಗಳನ್ನು ಹೊಂದಿದೆ. ಐದು ಸಹವರ್ತಿ ಬ್ಯಾಂಕಗಳು ಸುಮಾರು 6000 ಶಾಖೆಗಳನ್ನು ಹೊಂದಿವೆ.
ದೇಶದ ಮೊದಲ ಸಮಗ್ರ” ಕ್ರೈಂ ಅಪರಾಧ ಪತ್ತೆ ಜಾಲ ವ್ಯವಸ್ಥೆ”ಗೆ ಮಹಾರಾಷ್ಟ್ರದಲ್ಲಿ ಚಾಲನೆ
ಭಾರತದ ಮೊದಲ ಸಮಗ್ರ ಕ್ರೈಂ ಅಪರಾಧ ಪತ್ತೆ ಜಾಲ ವ್ಯವಸ್ಥೆ (Crime Criminal Tracking Network System’ (CCTNS))ಗೆ ಮಹಾರಾಷ್ಟ್ರದಲ್ಲಿ ಚಾಲನೆ ನೀಡಲಾಗಿದೆ. ಆ ಮೂಲಕ ಇಂತಹ ವ್ಯವಸ್ಥೆಯನ್ನು ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕಗೆ ಮಹಾರಾಷ್ಟ್ರ ಪಾತ್ರವಾಗಿದೆ. ತಡೆ ಇಲ್ಲದೆ ಹೆಚ್ಚುತ್ತಿರುವ ಸೈಬರ್ ಕ್ರೈಂಗಳನ್ನು ಮಟ್ಟಹಾಕುವ ಸಲುವಾಗಿ ರಾಜ್ಯದಾದ್ಯಂತ 34 ಸೈಬರ್ ಲ್ಯಾಬ್ ಗಳನ್ನು ಆರಂಭಿಸುವ ಮೂಲಕ ಈ ವ್ಯವಸ್ಥೆಯನ್ನು ಆರಂಭಿಸಲಾಯಿತು.
CCTNS ಬಗ್ಗೆ:
- ಪುಣೆ ಮೂಲದ ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ ಈ ವ್ಯವಸ್ಥೆಯನ್ನು ಅಭಿವೃದ್ದಿಪಡಿಸಿದೆ.
- ಈ ವ್ಯವಸ್ಥೆಯಡಿ ರಾಜ್ಯದ ಎಲ್ಲಾ ಆರಕ್ಷಕ ಠಾಣೆಗಳನ್ನು ಲಿಂಕ್ ಮಾಡುವ ಮೂಲಕ ಠಾಣಗಳ ವ್ಯಾಪ್ತಿಯಲ್ಲಾಗುವ ಅಪರಾಧಗಳ ಮಾಹಿತಿಯನ್ನು ಎಲ್ಲಾ ಠಾಣೆಗಳಿಗೂ ರವಾನಿಸಲಾಗುವುದು. ಇದರಿಂದ ಮಹಾರಾಷ್ಟ್ರದಲ್ಲಿ ಡಿಜಿಟಲ್ ಪೊಲೀಸ್ ವ್ಯವಸ್ಥೆಗೆ ನಾಂದಿಯಾಗಲಿದೆ.
- ಖಾಸಗಿ ಸಂಸ್ಥೆಗಳು ಹಾಗೂ ಬ್ಯಾಂಕಗಳಲ್ಲಿ ಸೈಬರ್ ಭದ್ರತೆ ಒದಗಿಸಲುವ ಸಹ ಈ ವ್ಯವಸ್ಥೆ ನೆರವಾಗಲಿದೆ.
- ಇದಕ್ಕೆಂದೆ ಮಹಾರಾಷ್ಟ್ರ ಸರ್ಕಾರ ನುರಿತ ಸೈಬರ್ ಪೊಲೀಸ್ ತಂಡವನ್ನು ರಚಿಸಲಿದೆ. ಈ ತಂಡದಲ್ಲಿ ಸೈಬರ್ ಕ್ಷೇತ್ರದಲ್ಲಿ ವಿಶೇಷ ತರಭೇತಿ ಪಡೆದ 1000ಕ್ಕೂ ಹೆಚ್ಚು ಪೊಲೀಸರು ಕಾರ್ಯನಿರ್ವಹಿಸಲಿದ್ದಾರೆ.
ಮಾಜಿ ಸಚಿವ ಬಿ.ಎ.ಮೊಯೀದ್ದಿನ್ ಅವರಿಗೆ ಡಿ ದೇವರಾಜು ಅರಸು ಪ್ರಶಸ್ತಿ
ಹಿರಿಯ ರಾಜಕೀಯ ಮುತ್ಸದ್ದಿ ಹಾಗೂ ಮಾಜಿ ಶಿಕ್ಷಣ ಸಚಿವ ಬಿ.ಎ.ಮೊಯ್ದಿನ್ ಅವರನ್ನು ಪ್ರಸಕ್ತ ಸಾಲಿನ ಪ್ರತಿಷ್ಠಿತ ‘ಡಿ.ದೇವರಾಜ ಅರಸು ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ. ಅರಸು ಪ್ರಶಸ್ತಿಗೆ ಹೆಸರು ಶಿಫಾರಸು ಮಾಡಲು ನೇಮಿಸಲಾಗಿದ್ದ ಡಾ.ಕೃಷ್ಣಮೂರ್ತಿ ಹನೂರು ನೇತೃತ್ವದ ಸಮಿತಿ ಮಾಡಿದ ಶಿಫಾರಸಿನಂತೆ ಮೊಹಿದ್ದೀನ್ ಅವರಿಗೆ ಈ ಬಾರಿಯ ಅರಸು ಪ್ರಶಸ್ತಿಯನ್ನು ಆ.20ರಂದು ನಡೆಯುವ ಜನ್ಮಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಗೆ ಮಾಜಿ ಸಚಿವರಾದ ರಘುಪತಿ, ಎಂ.ಸಿ.ನಾಣಯ್ಯ, ಎಸ್.ಕೆ.ಕಾಂತಾ, ಎಸ್ .ವಿ.ಸಿದ್ನಾಳ್, ಜೆ.ಶ್ರೀನಿವಾಸನ್ ಹಾಗೂ ಭೀಮ್ಷಿ ಕಲಾದಗಿ ಅವರ ಹೆಸರು ಪ್ರಸ್ತಾಪವಾಗಿತ್ತು. ಆದರೆ ಅಂತಿಮವಾಗಿ ಮೊಯೀದ್ದಿನ್ ಆಯ್ಕೆಯಾಗಿದ್ದಾರೆ.
ಮೊಯೀದ್ದಿನ್ ಬಗ್ಗೆ:
- 1938ರ ಮೇ 5ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಜ್ಪೆಯಲ್ಲಿ ಅಬ್ದುಲ್ ಖಾದರ್ ಮತ್ತು ಹಲೀಮಾ ದಂಪತಿಗೆ ಜನಿಸಿದರು. ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಪದವಿ ಪಡೆದರು. 1969ರಲ್ಲಿ ಕಾಂಗ್ರೆಸ್ ಸೇರಿದ ಮೊಯ್ದಿನ್ 1978ರಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು.
- 1995ರಲ್ಲಿ ಜೆ.ಎಚ್. ಪಟೇಲ್ ಸಂಪುಟದಲ್ಲಿ ಉನ್ನತ ಶಿಕ್ಷಣ ಮತ್ತು ಕೈಗಾರಿಕಾ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಹತ್ತು-ಹಲವು ಸುಧಾರಣೆಗಳನ್ನು ತರುವ ಮೂಲಕ ಅಪಾರ ಜನಮನ್ನಣೆಗೆ ಪಾತ್ರರಾಗಿದ್ದರು. ಜನಪರ ಜನಪ್ರತಿನಿಧಿ, ದಕ್ಷ ಆಡಳಿತಗಾರ, ಕಳಂಕರಹಿತ ರಾಜಕಾರಣಿಯಾಗಿರುವ ಮೊಯ್ದಿನ್ ಅವರು, ತನ್ನ ರಾಜಕೀಯ ಬದುಕನ್ನು ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಮುಡಿಪಾಗಿಟ್ಟು ಶ್ರಮಿಸಿದ ನೇತಾರರಾಗಿದ್ದಾರೆ.
- ಪ್ರಸ್ತುತ ಬೆಂಗಳೂರಿನ ಸಂಜಯನಗರದಲ್ಲಿ ವಾಸವಾಗಿದ್ದಾರೆ.
- ಆ.20ರಂದು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಏರ್ಪಡಿಸಿರುವ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 101ನೆ ಜನ್ಮ ದಿನಾಚರಣೆ ಹಾಗೂ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ನಮಾಮಿ ಗಂಗೆಯಡಿ ಉತ್ತರಪ್ರದೇಶದ ಐದು ಹಳ್ಳಿಗಳನ್ನು ದತ್ತು ಪಡೆದ “ಐಐಟಿ ಖಾನ್ಪುರ್”
ಖಾನ್ಪುರ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ನಮಾಮಿ ಗಂಗೆ ಯೋಜನೆಯಡಿ ಉತ್ತರ ಪ್ರದೇಶದ ಐದು ಹಳ್ಳಿಗಳನ್ನು ದತ್ತುಪಡೆದುಕೊಂಡಿದೆ. ಉತ್ತರ ಪ್ರದೇಶದ ರಮೆಲ್ ನಗರ್, ಪ್ರತಪುರ್, ಹರಿ ಹಿಂದ್ಪುರ್, ಕೊರ ಕತಾರಿಯ ಮತ್ತು ಕತ್ರಿ ಲದ್ವ ಖೇರ ಗ್ರಾಮಗಳನ್ನು ದತ್ತು ಪಡೆಯಲಾಗಿದೆ.
- ಈ ಕಾರ್ಯಕ್ರಮದಡಿ ಐಐಟಿ ಖಾನ್ಪುರ್ ತನ್ನ ತಂತ್ರಜ್ಞಾನ ಬಳಸಿ ಗಂಗಾನದಿಗೆ ಚರಂಡಿ ನೀರು ಸೇರ್ಪಡೆಯಾಗುವುದನ್ನು ತಡೆಯಲಿದೆ. ಈ ಕಾರ್ಯವನ್ನು ಐಐಟಿ ಖಾನ್ಪುರ್ದ ಸಿವಿಲ್ ಎಂಜನಿಯರಿಂಗ್ ವಿಭಾಗವು ಕೈಗೊಳ್ಳಲಿದೆ.
- ನದಿ ನೀರಿಗೆ ಚರಂಡಿ ನೀರು ಸೇರ್ಪಡೆಗೊಳ್ಳದಂತೆ ಹಾಗೂ ನೀರಿನ ಗುಣಮಟ್ಟ ಮತ್ತು ಸ್ವಚ್ಚತೆಗೆ ಒತ್ತು ನೀಡಲಾಗುವುದು.
- ಹಳ್ಳಿಗಳನ್ನು ದತ್ತು ಪಡೆದುಕೊಂಡು ನೈಮರ್ಲ್ಯ ಮಾದರಿ ಗ್ರಾಮಗಳನ್ನಾಗಿ ರೂಪಿಸುವಂತೆ ಕೇಂದ್ರ ಸರ್ಕಾರ 13 ಶೈಕ್ಷಣಿಕ ಸಂಸ್ಥೆಗಳಿಗೆ ನಿರ್ದೇಶಿಸಿತ್ತು. ಈ ಸಂಸ್ಥೆಗಳಲ್ಲಿ ಐಐಟಿ ಖಾನ್ಪುರ ಸಹ ಒಂದಾಗಿದೆ.
ನಮಾಮಿ ಗಂಗೆ ಯೋಜನೆ:
ಗಂಗಾ ನದಿಯನ್ನು ಶುದ್ಧೀಕರಿಸುವ ಸಲುವಾಗಿ ಕೇಂದ್ರ ಸರ್ಕಾರ ನವಾಮಿ ಗಂಗೆ ಯೋಜನೆಯನ್ನು ಜಾರಿಗೊಳಿಸಿದೆ. ನದಿ ಶುದ್ಧೀಕರಣಕ್ಕಾಗಿ ಕೊಳಚೆ ನೀರು ಸಂಸ್ಕರಣಾ ಘಟಕ ಸ್ಥಾಪನೆ ಹಾಗೂ ಅನಿಯಂತ್ರಿತ ನೀರಿನ ಹರಿವು ನಿಯಂತ್ರಣ ಸೇರಿದಂತೆ 300 ಯೋಜನೆಗಳು ‘ನಮಾಮಿ ಗಂಗೆ’ಯಲ್ಲಿ ಸೇರಿವೆ. ಯೋಜನೆಯ ಮೊದಲ ಭಾಗವಾಗಿ ಗಂಗಾ ನದಿ ಹರಿಯುವ ಐದು ರಾಜ್ಯಗಳ 104 ಸ್ಥಳಗಳಲ್ಲಿ ಏಕಕಾಲದಲ್ಲಿ ಸ್ಮಶಾನ ಹಾಗೂ ಚಿತಾಗಾರ ನಿರ್ಮಾಣ, ದುರಸ್ತಿ, ಸುಂದರ ನದಿ ತೀರ ನಿರ್ಮಾಣ ಹಾಗೂ ಕೊಳಚೆ ನೀರು ಸಂಸ್ಕರಣ ಘಟಕಗಳ ನಿರ್ಮಾಣ, ದುರಸ್ತಿ ಸೇರಿದಂತೆ ಇತರ ಅಭಿವೃದ್ಧಿ ಕೆಲಸ ಗಳನ್ನು ಆರಂಭಿಸಲಾಗುತ್ತದೆ.
Thanks
Want more information a day.it is very less