ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 20, 2016

Question 1

1.ಕೆನಡ ಹೌಸ್ ಆಫ್ ಕಾಮನ್ಸ್ ನಲ್ಲಿ ಸರ್ಕಾರದ ನೂತನ ನಾಯಕಿಯಾಗಿ ನೇಮಕಗೊಂಡು, ಈ ಹುದ್ದೆಯನ್ನು ಅಲಂಕರಿಸಿದೆ ಮೊದಲ ಮಹಿಳೆ ಎನಿಸಿದ ಭಾರತ ಮೂಲದ ಸಿಖ್ ಮಹಿಳೆ ಯಾರು?

A
ಬರ್ದಿಶ್ ಚಗ್ಗರ್
B
ಅಮೃತ ಸಿಂಗ್
C
ರೂಪಾಲಿ ಕೌರ್
D
ಸೋನಾಲಿ ಕೊಚ್ಚರ್
Question 1 Explanation: 
ಬರ್ದಿಶ್ ಚಗ್ಗರ್:

ಭಾರತ ಮೂಲದ ಸಿಖ್ ಮಹಿಳೆ ಕೆನಡ ಸಂಸತ್ ಸದಸ್ಯೆ ಬರ್ದಿಶ್ ಚಗ್ಗರ್ ಅವರು ಕೆನಡದ ಹೌಸ್ ಆಫ್ ಕಾಮನ್ಸ್ನಲ್ಲಿ ಸರ್ಕಾರದ ನೂತನ ನಾಯಕಿಯಾಗಿ ನೇಮಕಗೊಂಡಿದ್ದಾರೆ. ಆ ಮೂಲಕ ಕೆನಡಾದ ಇತಿಹಾಸದಲ್ಲೇ ಈ ಹುದ್ದೆಗೆ ನೇಮಕಗೊಂಡಿರುವ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬರ್ದಿಶ್ ಚಗ್ಗರ್ ವಾಟರ್ಲೂ ಕ್ಷೇತ್ರದ ಸಂಸತ್ ಸದಸ್ಯೆ ಹಾಗೂ ಸಣ್ಣ ವ್ಯವಹಾರ ಮತ್ತು ಪ್ರವಾಸೋದ್ಯಮ ಸಚಿವೆಯಾಗಿದ್ದಾರೆ. ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಜಯಗಳಿಸಿದ 19 ಮಂದಿ ಭಾರತೀಯ ಮೂಲದ ಅಭ್ಯರ್ಥಿಗಳ ಪೈಕಿ ಒಬ್ಬರಾಗಿದ್ದಾರೆ.

Question 2

2.2016 “ಯುವ ಮತದಾರರ ಹಬ್ಬ (Youth Voters Festival)” ಯಾವ ರಾಜ್ಯದಲ್ಲಿದೆ ನಡೆಯಲಿದೆ?

A
ಅರುಣಾಚಲ ಪ್ರದೇಶ
B
ಸಿಕ್ಕಿಂ
C
ನಾಗಾಲ್ಯಾಂಡ್
D
ಜಾರ್ಖಂಡ್
Question 2 Explanation: 
ನಾಗಾಲ್ಯಾಂಡ್:

2016 ಯುವ ಮತದಾರರ ಹಬ್ಬ ನಾಗಾಲ್ಯಾಂಡ್ ನಲ್ಲಿ ಸೆಪ್ಟೆಂಬರ್ 5 ರಿಂದ 9 ರವರೆಗೆ ನಡೆಯಲಿದೆ. ಭಾರತ ಚುನಾವಣಾ ಆಯೋಗ ಪ್ರೇರಣೆಯಡಿ ಯುವ ಮತದಾರರ ಹಬ್ಬವನ್ನು ಆಯೋಜಿಸಲಾಗುತ್ತಿದೆ. ಮತದಾರರನ್ನು ನೋಂದಾಯಿಸಿಕೊಳ್ಳುವ ಮೂಲಕ ಚುನಾವಣೆಯಲ್ಲಿ ಗುಣಾತ್ಮಕವಾಗಿ ಭಾಗವಹಿಸಲು ಉತ್ತೇಜಿಸುವುದು ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಪ್ರಾಮುಖ್ಯತೆಯನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಈ ಹಬ್ಬವನ್ನು ಹಮ್ಮಿಕೊಳ್ಳಲಾಗುತ್ತಿದೆ.

Question 3

3.ಯಾವ ನಗರದಲ್ಲಿ “2016 ಮೌಂಟೇನ್ ಎಕೋಸ್ ಸಾಹಿತ್ಯ ಉತ್ಸವ (Mountain Echoes Literary Festival)” ನಡೆಯಲಿದೆ?

A
ಥಿಂಪು
B
ಢಾಕಾ
C
ಗುವಾಹಟಿ
D
ಲಾಸಾ
Question 3 Explanation: 
ಥಿಂಪು:

ಮೌಂಟೇನ್ ಎಕೋಸ್ ಸಾಹಿತ್ಯ ಉತ್ಸವದ 7ನೇ ಆವೃತ್ತಿ ಭೂತಾನ್ ಥಿಂಪುವಿನಲ್ಲಿ ಆಗಸ್ಟ್ 26 ರಿಂದ 28 ವರೆಗೆ ನಡೆಯಲಿದೆ. ಹವಾಮಾನ ಬದಲಾವಣೆ, ಮಹಿಳೆಪರ ಧ್ವನಿ ಮತ್ತು ಪ್ರವಾಸ ಬರವಣೆಗೆ ಮೇಲೆ ಈ ವರ್ಷದ ಉತ್ಸವದ ತಿರುಳಾಗಿದೆ. ಈ ಸಾಹಿತ್ಯ ಉತ್ಸವನ್ನು ಭಾರತ-ಭೂತಾನ್ ಫೌಂಡೇಷನ್ ಮತ್ತು ಸಿಯಾಹಿ ಸಾಹಿತ್ಯ ಸಂಸ್ಥೆ ಆಶ್ರಯದಲ್ಲಿ ಆಯೋಜಿಸಲಾಗುತ್ತಿದೆ.

Question 4

4.ಪೆಟ್ರೋಲಿಯಂ ಸರಕುಗಳನ್ನು ಸಾಗಿಸುವ ಸಲುವಾಗಿ ಯಾವ ದೇಶದೊಂದಿಗೆ ಭಾರತ ಅಲ್ಪಾವಧಿಯ ಮಾರ್ಗ ಒಪ್ಪಂದಕ್ಕೆ ಇತ್ತೀಚೆಗೆ ಸಹಿ ಹಾಕಿತು?

A
ನೇಪಾಳ
B
ಭೂತಾನ್
C
ಬಾಂಗ್ಲದೇಶ್
D
ಮಯನ್ಮಾರ್
Question 4 Explanation: 
ಬಾಂಗ್ಲದೇಶ್:

ಪೆಟ್ರೋಲಿಯಂ ಸರಕುಗಳನ್ನು ಸಾಗಿಸುವ ಸಲುವಾಗಿ ಅಲ್ಪಾವಧಿಯ ಮಾರ್ಗ ಒಪ್ಪಂದಕ್ಕೆ ಭಾರತ-ಬಾಂಗ್ಲದೇಶ ಇತ್ತೀಚೆಗೆ ಸಹಿಹಾಕಿದವು. ಒಪ್ಪಂದದ ಅನ್ವಯ ಅಸ್ಸಾಂನಿಂದ ತ್ರಿಪುರಗೆ ಪೆಟ್ರೋಲಿಯಂ ಸರಕುಗಳನ್ನು ಬಾಂಗ್ಲದೇಶದ ಗಡಿ ಮೂಲಕ ಸಾಗಿಸಲಾಗುವುದು. ಇತ್ತೀಚೆಗೆ ಬಿದ್ದ ಭಾರಿ ಮಳೆಯಿಂದ ತೀವ್ರ ಪ್ರವಾಹ ಉಂಟಾದ ಕಾರಣ NH44 ರಸ್ತೆ ಸಂಪೂರ್ಣ ಹಾಳಾಗಿದ್ದ ಕಾರಣ ಸಂಚಾರಕ್ಕೆ ತೀವ್ರ ಅಡ್ಡಿಯಾಗಿತ್ತು. ಒಪ್ಪಂದದಡಿ ಅಸ್ಸಾಂನಿಂದ ಬಾಂಗ್ಲದೇಶ ಗಡಿ ಮೂಲಕ ತ್ರಿಪುರಗೆ ಪೆಟ್ರೋಲಿಯಂ ಸರಕುಗಳನ್ನು ಸಾಗಿಸಲಾಗುವುದು.

Question 5

5.ರಿಯೋ ಒಲಂಪಿಕ್ಸ್ನಲ್ಲಿ ಬ್ರೆಜಿಲ್ ತಂಡ ಯಾವ ದೇಶವನ್ನು ಮಣಿಸಿ ಪುಟ್ಬಾಲ್ ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿತು?

A
ಅಮೆರಿಕಾ
B
ಅಂರ್ಜೇಟಿನಾ
C
ಜರ್ಮನಿ
D
ಫ್ರಾನ್ಸ್
Question 5 Explanation: 
ಜರ್ಮನಿ:

ರಿಯೋ ಒಲಂಪಿಕ್ಸ್ ಫುಟ್ಬಾಲ್ ಪಂದ್ಯದಲ್ಲಿ ಆತಿಥೇಯ ಬ್ರೆಜಿಲ್ ತಂಡ ಜರ್ಮನಿ ತಂಡವನ್ನು ಮಣಿಸಿ ಪ್ರಸಕ್ತ ಸಾಲಿನ ಚಾಂಪಿಯನ್ ಪಟ್ಟದ ಜತೆಗೆ ಸ್ವರ್ಣ ಪದಕವನ್ನು ಗೆದ್ದುಕೊಂಡಿದೆ. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿಗೆ ಬ್ರೆಜಿಲ್ ಸ್ವರ್ಣ ಪದಕ ಗೆದ್ದು ಸಂಭ್ರಮಿಸಿದೆ.

Question 6

6.ಇತ್ತೀಚಿನ ವರದಿ ಪ್ರಕಾರ ತಂತ್ರಜ್ಞಾನ ಆಧಾರಿತ ಸ್ಟಾರ್ಟ್ ಆಪ್ ಉದ್ಯಮದಲ್ಲಿ ವಿಶ್ವದಲ್ಲಿ ಭಾರತ ಎಷ್ಟನೇ ಸ್ಥಾನವನ್ನು ಗಳಿಸಿದೆ?

A
ಮೊದಲ ಸ್ಥಾನ
B
ಎರಡನೇ ಸ್ಥಾನ
C
ಮೂರನೇ ಸ್ಥಾನ
D
ನಾಲ್ಕನೇ ಸ್ಥಾನ
Question 6 Explanation: 
ಮೂರನೇ ಸ್ಥಾನ:

ಅಸ್ಸೋಚಾಮ್ ಅಸೋಷಿಯೇಶನ್ ಅರ್ಬಿಟ್ರೇಜ್ ಸಂಶೋಧನಾ ಸಂಸ್ಥೆ ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ತಂತ್ರಜ್ಞಾನ ಆಧಾರಿತ ಸ್ಟಾರ್ಟ್ ಅಪ್ ಉದ್ಯಮದ ಹುಟ್ಟಿನಲ್ಲಿ ಭಾರತ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಸಮೀಕ್ಷೆಯಲ್ಲಿ ಅಮೆರಿಕಾ ಪ್ರಥಮ ಮತ್ತು ಬ್ರಿಟನ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿವೆ. ದೇಶದ ಶೇ 26% ಸ್ಟಾರ್ಟ್ ಆಪ್ ಗಳು ಬೆಂಗಳೂರಿನಲ್ಲಿದ್ದು ದೇಶದ ಅತಿಹೆಚ್ಚು ತಂತ್ರಜ್ಞಾನ ಆಧಾರಿತ ಸ್ಟಾರ್ಟ್ ಅಪ್ ಹೊಂದಿರುವ ನಗರವಾಗಿ ಹೊರಹೊಮ್ಮಿದೆ. ನಂತರದ ಸ್ಥಾನದಲ್ಲಿ ದೆಹಲಿ, ಮುಂಬೈ ಹಾಗೂ ಹೈದರಾಬಾದ್ ಕಾಣಿಸಿಕೊಂಡಿವೆ. ಅಮೆರಿಕದಲ್ಲಿ 47 ಸಾವಿರ ಸ್ಟಾರ್ಟ್ ಅಪ್ಗಳಿದ್ದರೆ, ಬ್ರಿಟನ್ನಲ್ಲಿ 4,500 ಸ್ಟಾರ್ಟ್ ಅಪ್ಗಳಿವೆ. ತೀವ್ರ ಪೈಪೋಟಿ ನೀಡುತ್ತಿರುವ ಭಾರತದಲ್ಲಿ 4200 ತಾಂತ್ರಿಕ ಉದ್ಯಮದ ಸ್ಟಾರ್ಟ್ ಅಪ್ ಕಂಪನಿಗಳು ಉದಯಿಸಿವೆ.

Question 7

7.ಇತ್ತೀಚೆಗೆ 8ನೇ ಭಾರತ-ಚೀನಾ ಹಣಕಾಸು ಮತ್ತು ಆರ್ಥಿಕ ಮಾತುಕತೆ (Financial and Economic Dialogue) ಎಲ್ಲಿ ನಡೆಯಿತು?

A
ಬೀಜಿಂಗ್
B
ನವದೆಹಲಿ
C
ಶಾಂಘೈ
D
ಮುಂಬೈ
Question 7 Explanation: 
ಬೀಜಿಂಗ್:

ಚೀನಾದ ಬೀಜಿಂಗ್ ನಲ್ಲಿ 8ನೇ ಭಾರತ-ಚೀನಾ ಹಣಕಾಸು ಮತ್ತು ಆರ್ಥಿಕ ಮಾತುಕತೆ ಆಯೋಜಿಸಲಾಗಿತ್ತು. ಉಭಯ ದೇಶಗಳ ನಡುವೆ ಪರಸ್ಪರ ವ್ಯಾಪಾರ ಮತ್ತು ಆರ್ಥಿಕ ಸಹಕಾರ ವೃದ್ದಿಸುವ ಸಲುವಾಗಿ ಮಾತುಕತೆಯಲ್ಲಿ ಹೆಚ್ಚು ಒತ್ತುನೀಡಲಾಯಿತು. ಭಾರತದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಮತ್ತು RBI ಹಾಗೂ ಹಣಕಾಸು ಸಚಿವಾಲಯದ ಪ್ರತಿನಿಧಿಗಳ ತಂಡ ಈ ಮಾತುಕತೆಯಲ್ಲಿ ಭಾಗವಹಿಸಿದ್ದರು.

Question 8

8.ಈ ಕೆಳಗಿನ ಯಾವುದು ವಿಶ್ವದ ಅತಿ ದೊಡ್ಡ ತೇವಭೂಮಿ (Largest Wetland) ಆಗಿದೆ?

A
ಪಂಟಾನಲ್
B
ಚಿಲ್ಕಾ
C
ಎವರ್ ಗ್ಲೇಡ್ಸ್
D
ಒಕವಾಂಗೊ
Question 8 Explanation: 
ಪಂಟಾನಲ್:

ದಕ್ಷಿಣ ಅಮೆರಿಕಾದಲ್ಲಿರುವ ಪಂಟಾನಲ್ ವಿಶ್ವದ ಅತಿದೊಡ್ಡ ತೇವಭೂಮಿ. ಸುಮಾರು 2,00,000 ಚದರ ಕಿ.ಮೀ ವಿಸ್ತೀರ್ಣ ಹೊಂದಿರುವ ಇದು ಬ್ರೆಜಿಲ್, ಪೆರುಗ್ವೆ ಮತ್ತು ಬೊಲಿವಿಯಾ ರಾಷ್ಟ್ರಗಳಲ್ಲಿ ಹರಡಿಕೊಂಡಿದೆ. ಶೇ 80% ರಷ್ಟು ವಿಸ್ತೀರ್ಣ ಬ್ರೆಜಿಲ್ ನಲ್ಲಿದೆ.

Question 9

9.ಭಾರತದಲ್ಲಿ ಪರಿಸರ (ರಕ್ಷಣೆ) ಕಾಯಿದೆಯನ್ನು ಜಾರಿಗೆ ತಂದ ವರ್ಷ_____?

A
1982
B
1976
C
1986
D
1990
Question 9 Explanation: 
1986:

ಪರಿಸರದ ರಕ್ಷಣೆ ಮತ್ತು ಅಭಿವೃದ್ದಿ ಪಡಿಸುವ ಉದ್ದೇಶದಿಂದ ಪರಿಸರ (ರಕ್ಷಣೆ) ಕಾಯಿದೆಯನ್ನು 1986 ರಲ್ಲಿ ಜಾರಿಗೆ ತರಲಾಗಿದೆ. ಈ ಕಾಯಿದೆಯನ್ನು ಭಾರತ ಸಂವಿಧಾನದ 253ನೇ ಅನುಚ್ಚೇದ ಅನ್ವಯ ಅಳವಡಿಸಿಕೊಳ್ಳಲಾಗಿದೆ.

Question 10

10.ಇತ್ತೀಚೆಗೆ “ಪಸಿಘಾಟ್ ಸುಧಾರಿತ ವಿಮಾನ ಇಳಿದಾಣ (Pasighat Advanced Landing Ground)” ಅನ್ನು ಯಾವ ರಾಜ್ಯದಲ್ಲಿ ಉದ್ಘಾಟಿಸಲಾಯಿತು?

A
ಅರುಣಾಚಲ ಪ್ರದೇಶ
B
ಅಸ್ಸಾಂ
C
ತ್ರಿಪುರ
D
ಮಣಿಪುರ
Question 10 Explanation: 
ಅರುಣಾಚಲ ಪ್ರದೇಶ:

ಕೇಂದ್ರ ಸರ್ಕಾರ ಇತ್ತೀಚೆಗೆ ಅರುಣಾಚಲ ಪ್ರದೇಶದ ಪಸಿಘಾಟ್ನಲ್ಲಿ ಅಡ್ವಾನ್ಸಡ್ ಲ್ಯಾಂಡಿಂಗ್ ಗ್ರೌಂಡ್ನ್ನು (ಎಎಲ್ಜಿ) ಉದ್ಘಾಟಿಸಿದೆ. ಸುಖೋಯ್-30 ಯುದ್ಧ ವಿಮಾನವನ್ನು ಯಶಸ್ವಿ ಯಾಗಿ ಇಳಿಸಿದೆ. 1962ರ ಚೀನಾ-ಭಾರತದ ಯುದ್ಧದ ಬಳಿಕ ಪಸಿಘಾಟ್ನಲ್ಲಿ ಭಾರತ ಯುದ್ಧ ವಿಮಾನ ಲ್ಯಾಂಡಿಂಗ್ ಆಗಿರುವುದು ಇದೇ ಮೊದಲು. ಪಸಿಘಾಟ್ ಎಎಲ್ಜಿ, ಗಡಿ ಪ್ರದೇಶದಿಂದ 100 ಕಿ.ಮೀ. ದೂರದಲ್ಲಿದೆ. ಗಡಿಯಲ್ಲಿ ಚೀನಾ ನಡೆಸುವ ಚಟುವಟಿಕೆಗಳ ಮೇಲೆ ಸುಖೋಯ್ ಯುದ್ಧ ವಿಮಾನದ ಮೂಲಕ ಕಣ್ಣಿಡಬಹುದಾಗಿದೆ.

There are 10 questions to complete.

One Thought to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 20, 2016”

  1. ಸಂತೋಷ್ ಗೌಡರ

    ಧನ್ಯವಾದಗಳು ಸರ್

Leave a Comment

This site uses Akismet to reduce spam. Learn how your comment data is processed.