ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.

ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -11

Question 1

1.ಯಾವ ಜಿಲ್ಲೆಯಲ್ಲಿ ಇಂಟೆಗ್ರೇಟೆಡ್ ಮಾಡರ್ನ್ ಟೂಲ್ ಪಾರ್ಕ್ ಅನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಸಮ್ಮತಿಸಿದೆ?

A
ಚಿತ್ರದುರ್ಗ
B
ತುಮಕೂರು
C
ಬಳ್ಳಾರಿ
D
ರಾಯಚೂರು
Question 1 Explanation: 
ತುಮಕೂರು:

ತುಮಕೂರಿನ ಕೈಗಾರಿಕಾ ಪ್ರದೇಶದಲ್ಲಿ ಇಂಟೆಗ್ರೇಟೆಡ್ ಮಾಡರ್ನ್ ಟೂಲ್ ಪಾರ್ಕ್ ಸ್ಥಾಪನೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. 421 ಕೋಟಿ ರೂ. ವೆಚ್ಚದಲ್ಲಿ ಪಾರ್ಕ್ ಸ್ಥಾಪನೆಯಾಗಲಿದ್ದು, 4 ಸಾವಿರ ಮಂದಿಗೆ ಉದ್ಯೋಗ ದೊರೆಯುವ ನಿರೀಕ್ಷೆ ಇದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಸುಮಾರು 500 ಎಕರೆ ಪ್ರದೇಶ ಇದಕ್ಕೆ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.

Question 2

2.ರಾಜ್ಯದ ಮೊದಲ ಮಾವು ಅಭಿವೃದ್ದಿ ಮತ್ತು ಸಂಸ್ಕರಣ ಘಟಕವನ್ನು ಇತ್ತೀಚೆಗೆ ಎಲ್ಲಿ ಉದ್ಘಾಟಿಸಲಾಯಿತು?

A
ಕೋಲಾರ
B
ಚಿಂತಾಮಣಿ
C
ಚಿಕ್ಕಬಳ್ಳಾಪುರ
D
ಶ್ರೀನಿವಾಸಪುರ
Question 2 Explanation: 
ಚಿಂತಾಮಣಿ:

ರಾಜ್ಯದ ಮೊದಲ ಮಾವು ಅಭಿವೃದ್ದಿ ಮತ್ತು ಸಂಸ್ಕರಣ ಘಟಕವನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಬಳಿ ಇರುವ ಮಾಡಿಕೆರೆ ಕ್ರಾಸ್ ನಲ್ಲಿ ಸ್ಥಾಪಿಸಲಾಗಿದ್ದು, ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ಇದನ್ನು ಉದ್ಘಾಟಿಸಿದರು. ರಾಜ್ಯ ಮಾವು ಅಭಿವೃದ್ದಿ ಮತ್ತು ಮಾರುಕಟ್ಟೆ ಸಹಕಾರ ಈ ಘಟಕವನ್ನು ರೂ 7 ಕೋಟಿ ವೆಚ್ಚದಲ್ಲಿ ನಿರ್ಮಿಸಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರಾಜ್ಯದ ಶೇ 40 ರಷ್ಟು ಮಾವು ಬೆಳೆಯಲಾಗುತ್ತಿದ್ದು, ಈ ಭಾಗದ ರೈತರಿಗೆ ಮಾವು ಬೆಳೆಯ ಬಗ್ಗೆ ವಿಶೇಷ ತಂತ್ರಜ್ಞಾನವನ್ನು ಈ ಕೇಂದ್ರದಿಂದ ದೊರೆಯಲಿದೆ.

Question 3

3.ಈ ಕೆಳಗಿನ ಯಾವ ನ್ಯೂಸ್ ಚಾನೆಲ್ ರಾಜ್ಯದಲ್ಲಿ “ಹಳ್ಳಿ ಚಲೋ” ಎನ್ನುವ ವಿಶೇಷ ಅಭಿಯಾನವನ್ನು ಆರಂಭಿಸಿದೆ?

A
ಉದಯ ನ್ಯೂಸ್
B
ಪಬ್ಲಿಕ್ ಟಿವಿ
C
ಸುವರ್ಣ ನ್ಯೂಸ್
D
ಕಸ್ತೂರಿ ನ್ಯೂಸ್
Question 3 Explanation: 
ಸುವರ್ಣ ನ್ಯೂಸ್:

ಸುವರ್ಣನ್ಯೂಸ್ ರಾಜ್ಯದಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ವಿವಿಧ ರೀತಿಯ ಸಮಸ್ಯೆಗಳ ಬಗ್ಗೆ ಜಾಗೃತ ವರದಿ ನೀಡಿ ಸ್ಥಳದಲ್ಲೇ ಪರಿಹಾರ ಒದಗಿಸುವ ಕಾರ್ಯ 'ಹಳ್ಳಿ ಚಲೋ ಅಭಿಯಾನ' ಆರಂಭಿಸಿದೆ. ಈ ಅಭಿಯಾನದಡಿ ಸುವರ್ಣನ್ಯೂಸ್ ಸುದ್ದಿ ವಾಹಿನಿಯ ವರದಿಗಾರರು ಸ್ಥಳದಲ್ಲಿಯೇ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಪರಿಹಾರ ಒದಗಿಸುವ ಕಾರ್ಯ ಮಾಡುತ್ತಿದ್ದಾರೆ.

Question 4

4.ಯಾವ ನಗರದಲ್ಲಿ ಮೊದಲ ಬಾರಿಗೆ ಭಾರತೀಯ ಪನರೋಮಾ ಚಲನಚಿತ್ರೋತ್ಸವನ್ನು ಆಯೋಜಿಸಲಾಗಿದೆ?

A
ಬೆಂಗಳೂರು
B
ಚಿತ್ರದುರ್ಗ
C
ಶಿವಮೊಗ್ಗ
D
ಚಿಕ್ಕಮಗಳೂರು
Question 4 Explanation: 
ಶಿವಮೊಗ್ಗ:

ಶಿವಮೊಗ್ಗದಲ್ಲಿ ಮೊದಲ ಬಾರಿಗೆ ಭಾರತೀಯ ಪನೋರಮಾ ಚಲನಚಿತ್ರೋತ್ಸವವನ್ನು ಆ. 25ರಿಂದ 27ರ ವರೆಗೆ ಕರ್ನಾಟಕ ಸಂಘದಲ್ಲಿ ಏರ್ಪಡಿಸಲಾಗಿದೆ.

Question 5

5.ಮಲೆನಾಡು ಮಿತ್ರವೃಂದ ನೀಡುವ 2016-17ನೇ ಸಾಲಿನ “ಮಲೆನಾಡು ಮಿತ್ರ” ಪ್ರಶಸ್ತಿಗೆ ಯಾರನ್ನು ಆಯ್ಕೆಮಾಡಲಾಗಿದೆ?

A
ರಘುನಾಥ್ ಪೈ
B
ಡಾ. ವಿರೇಂದ್ರ ಹೆಗ್ಡೆ
C
ಕಾಗೋಡು ತಿಮ್ಮಪ್ಪ
D
ಯಡಿಯೂರಪ್ಪ
Question 5 Explanation: 
ಕಾಗೋಡು ತಿಮ್ಮಪ್ಪ:

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಮಲೆನಾಡು ಮಿತ್ರವೃಂದ ನೀಡುವ 2016-17ನೇ ಸಾಲಿನ ‘ಮಲೆನಾಡು ಮಿತ್ರ’ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ‘ಮಲೆನಾಡು ಸಾಧಕ’ ಪ್ರಶಸ್ತಿಯನ್ನು ಕೃಷಿ ವಿಭಾಗದಲ್ಲಿ ಕೆ.ವಿಶ್ವನಾಥ್, ಶಿಕ್ಷಣ- ಎಚ್.ಎಸ್. ಮಂಜುನಾಥ್, ಸಾಹಿತ್ಯ/ಕಲೆ – ಕುಂಚೂರು ಹರೀಶ್, ಉದ್ಯಮ- ಲಕ್ಷ್ಮೀ ದೇವರಾಜ್ರಿಗೆ ನೀಡಲು ನಿರ್ಧರಿಸಲಾಗಿದೆ.

Question 6

6.2015-16ರ ಸಾಲಿನ ಐಟಿ-ಬಿಟಿ ಕ್ಷೇತ್ರದಲ್ಲಿ ದೇಶದ ಒಟ್ಟಾರೆ ರಫ್ತಿನಲ್ಲಿ ಕರ್ನಾಟಕ ರಾಜ್ಯದ ಶೇ____ರಷ್ಟು ಪಾಲನ್ನು ಹೊಂದಿದೆ?

A
33.6%
B
44.5%
C
36.6%
D
22.22%
Question 6 Explanation: 

ಐಟಿ-ಬಿಟಿ ಕ್ಷೇತ್ರದಲ್ಲಿ ರಾಜ್ಯ ದಶಕಗಳಿಂದ ಮೊದಲ ಸ್ಥಾನದಲ್ಲೇ ಮುನ್ನಡೆದಿದೆ. ದೇಶದ ಒಟ್ಟಾರೆ ರಫ್ತಿನಲ್ಲಿ 2015-16ರ ಸಾಲಿಗೆ ಶೇ 36.5(60,255 ಅಮೆರಿಕನ್ ಡಾಲರ್)ರಷ್ಟು ಪಾಲು ಹೊಂದಲಾಗಿದೆ.

Question 7

7.ಇತ್ತೀಚೆಗೆ ಹದಿಮೂರು ಜನರ ಸಮಿತಿಯೊಂದು ಚಲನಚಿತ್ರ ಕರಡು ನೀತಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ಕೆಳಗಿನ ಯಾರು ಸಮಿತಿಯ ಅಧ್ಯಕ್ಷರಾಗಿದ್ದಾರೆ?

A
ರಾಕ್ ಲೈನ್ ವೆಂಕಟೇಶ್
B
ರಾಜೇಂದ್ರಸಿಂಗ್ ಬಾಬು
C
ಗಿರೀಶ್ ಕಾಸರವಳ್ಳಿ
D
ಸುರೇಶ್ ಹೆಬ್ಳೇಕರ್
Question 7 Explanation: 
ರಾಜೇಂದ್ರಸಿಂಗ್ ಬಾಬು:

ಡಾ.ರಾಜೇಂದ್ರಸಿಂಗ್ ಬಾಬು ನೇತೃತ್ವದ 13 ಜನರ ಸಮಿತಿ ತನ್ನ ಶಿಫಾರಸುಗಳನ್ನು ಚಲನಚಿತ್ರ ಕರಡು ನೀತಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಕನ್ನಡ ಚಿತ್ರರಂಗಕ್ಕೆ ಈವರೆಗೂ ತಮ್ಮದೇ ಆದ ನೀತಿ ಇರದ ಕಾರಣ ಕಳೆದ 8 ತಿಂಗಳ ಹಿಂದೆ ನಡೆದ ಸಭೆಯಲ್ಲಿ ಚರ್ಚೆಯಾದಾಗ ಮುಖ್ಯಮಂತ್ರಿಯವರು ಈ ಸಮಿತಿಯನ್ನು ರಚಿಸಿದ್ದರು. ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣವಾಗುತ್ತಿರುವ ಜಾಗದ ಸಮೀಪ ಚಲನಚಿತ್ರ ರಂಗದವರ ವಸತಿಗಾಗಿ 100 ಎಕರೆ ಜಾಗ, ಪರಭಾಷಾ ಚಿತ್ರಗಳಿಗೆ 5ರೂ. ಹೆಚ್ಚುವರಿ ತೆರಿಗೆ, ಡಾ.ರಾಜ್ಕುಮಾರ್ ಜನ್ಮ ದಿನಾಚರಣೆಯಂದೇ ಚಿತ್ರರಂಗದ ವಾರ್ಷಿಕ ಪ್ರಶಸ್ತಿ ಪ್ರದಾನ ಸೇರಿದಂತೆ ಹಲವಾರು ಮಹತ್ವದ ಶಿಫಾರಸ್ಸುಗಳನ್ನು ಮಾಡಿದೆ.

Question 8

8.ಕರ್ನಾಟಕದ ಇತಿಹಾಸ ಪೂರ್ವದ ವಿಸ್ತಾರವಾದ ಅಧ್ಯಯನ ಮಾಡಿದ ಹೆಗ್ಗಳಿಕೆ ಯಾರಿಗೆ ಸಲ್ಲುತ್ತದೆ?

A
ವಿಲಿಯಂ ಜೋನ್ಸ್
B
ರೋಬೇರ್ತ್ ಬ್ರೂಸ್-ಫೂಟೇ
C
ರೆಫರಲ್ ಕಿಟ್ಟಲ್
D
ಹೆನ್ರಿ ಸರಹುಡ್
Question 8 Explanation: 
ರೋಬೇರ್ತ್ ಬ್ರೂಸ್-ಫೂಟೇ:

ಕರ್ನಾಟಕದ ಇತಿಹಾಸ ಪೂರ್ವದ ವಿಸ್ತಾರವಾದ ಅಧ್ಯಯನ ಮಾಡಿದ ಹೆಗ್ಗಳಿಕೆ ರೋಬೇರ್ತ್ ಬ್ರೂಸ್-ಫೂಟೇ ಅವರಿಗೆ ಸಲ್ಲುತ್ತದೆ.

Question 9

9.ಕನ್ನಡದ ಮೊದಲ ಮಹಿಳಾ ಪತ್ರಿಕೆ ________?

A
ಸುಬೋಧ ನಂದಿನಿ
B
ಕರ್ನಾಟಕ ನಂದಿನಿ
C
ಜ್ಞಾನ ಸುಬೋಧಿನಿ
D
ಸನ್ಮಾರ್ಗ ದರ್ಶಿನಿ
Question 9 Explanation: 
ಕರ್ನಾಟಕ ನಂದಿನಿ:

ಕನ್ನಡದ ಮೊದಲ ಮಹಿಳಾ ಪತ್ರಿಕೆ ಕರ್ನಾಟಕ ನಂದಿನಿ. ಈ ಪತ್ರಿಕೆಯನ್ನು ನಂಜನಗೂಡು ತಿರುಮಲಾಂಬ ರವರು 1913 ರಲ್ಲಿ ಆರಂಭಿಸಿದರು. ನಂಜನಗೂಡು ತಿರುಮಲಾಂಬ ಅವರು ಸನ್ಮಾರ್ಗ ದರ್ಶಿನಿ ಪತ್ರಿಕೆ ಸಂಪಾದಕಿ ಸಹ ಆಗಿದ್ದಾರೆ.

Question 10

10.ಸ್ವರಸಾಮ್ರಾಟ್‌ ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌’ನ ಪ್ರಸಕ್ತ ಸಾಲಿನ ರಾಷ್ಟ್ರೀಯ ಪುರಸ್ಕಾರವನ್ನು ಯಾರಿಗೆ ನೀಡಲಾಗುತ್ತಿದೆ?

A
ಧನಂಜಯ ಹೆಗಡೆ
B
ರೋಹಿಣಿ ದೇಶಪಾಂಡೆ ಜೋಶಿ
C
ಉಸ್ತಾದ್ ಗುಲಾಮ್‌ ಮುಸ್ತಫಾ ಖಾನ್‌
D
ಚಂದ್ರಕಾಂತ ಬೆಲ್ಲದ
Question 10 Explanation: 

ಮುಂಬೈನ ಹಿಂದೂಸ್ತಾನಿ ಗಾಯಕ, ರಾಮಪುರ–ಸೆಹಸ್ವಾನ್‌ ಘರಾಣೆ ಖ್ಯಾತಿಯ ಉಸ್ತಾದ್ ಗುಲಾಮ್‌ ಮುಸ್ತಫಾ ಖಾನ್‌ ಅವರನ್ನು ಸ್ವರಸಾಮ್ರಾಟ್‌ ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌’ನ ಪ್ರಸಕ್ತ ಸಾಲಿನ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ₹ 1ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಯುವ ಪ್ರಶಸ್ತಿಯನ್ನು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಧನಂಜಯ ಹೆಗಡೆ ಹಾಗೂ ಗೋವಾದ ರೋಹಿಣಿ ದೇಶಪಾಂಡೆ ಜೋಶಿ ಅವರಿಗೆ ಪ್ರದಾನ ಮಾಡಲಾಗುತ್ತಿದ್ದು, ಈ ಪ್ರಶಸ್ತಿಯು ತಲಾ ₹ 25 ಸಾವಿರ ನಗದು ಹಾಗೂ ಪ್ರಶಸ್ತಿಪತ್ರ ಒಳಗೊಂಡಿದೆ.

There are 10 questions to complete.

8 Thoughts to “ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -11”

  1. Mallu odeyar at p arakeri dist vijayapur

  2. Adharsha bm

    Thanks a lot

  3. Ladappa Madari

    Thank u

  4. mahantesh bhajantri

    please keep download options sir

Leave a Comment

This site uses Akismet to reduce spam. Learn how your comment data is processed.