ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು.

ಕ್ವೀಜ್ 13

Question 1

1.ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:

1.ಅಟಾರ್ನಿ ಜನರಲ್ ಹುದ್ದೆ ಭಾರತದ ಅತ್ಯುನ್ನತ ನ್ಯಾಯಾಂಗ ಅಧಿಕಾರಿ ಹುದ್ದೆಯಾಗಿರುತ್ತದೆ

2.ಅಡ್ವಕೇಟ್ ಜನರಲ್ ಹುದ್ದೆ ರಾಜ್ಯದ ಅತ್ಯುನ್ನತ ನ್ಯಾಯಾಂಗ ಅಧಿಕಾರಿ ಹುದ್ದೆಯಾಗಿರುತ್ತದೆ

ಮೇಲ್ಕಂಡ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ?

A
ಹೇಳಿಕೆ 1 ಸರಿಯಾಗಿದೆ
B
ಹೇಳಿಕೆ 2 ಸರಿಯಾಗಿದೆ
C
ಹೇಳಿಕೆ 1 ಮತ್ತು 2 ಸರಿಯಾಗಿವೆ
D
ಹೇಳಿಕೆ 1 ಮತ್ತು 2 ತಪ್ಪಾಗಿವೆ
Question 1 Explanation: 
ಹೇಳಿಕೆ 1 ಮತ್ತು 2 ಸರಿಯಾಗಿವೆ
Question 2

2.ಭಾರತದಲ್ಲಿ “ಉದ್ಯೋಗ ವಾರ್ತೆ” (Employment News) ಪತ್ರಿಕೆಯನ್ನು ಯಾವ ಸಚಿವಾಲಯವು ಪ್ರಕಟಿಸುತ್ತದೆ?

A
ಮಾಹಿತಿ ಮತ್ತು ಪ್ರಸಾರ ಸಚಿವಾಲಯ
B
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
C
ಶಿಕ್ಷಣ ಸಚಿವಾಲಯ
D
ಮೇಲಿನ ಯಾವುದೂ ಅಲ್ಲ
Question 2 Explanation: 
ಮಾಹಿತಿ ಮತ್ತು ಪ್ರಸಾರ ಸಚಿವಾಲಯ
Question 3

3.ಈ ಕೆಳಕಂಡ ಹೇಳಿಕೆಗಳನ್ನು ಗಮನಿಸಿ:

i.ಭಾರತ ಮತ್ತು ಮ್ಯಾನ್ಮರ್ ದೇಶಗಳು ಸುಮಾರು 1640 ಕಿ.ಮೀ.ಗಳಷ್ಟು ಭೂಗಡಿಯನ್ನು ಪರಸ್ಪರ ಹಂಚಿಕೊಂಡಿವೆ

ii.ಭಾರತದ ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ ಮತ್ತು ಮಿಜೋರಂ, ಮ್ಯಾನ್ಮರ್ ನೊಂದಿಗೆ ಭೂಗಡಿ ಹಂಚಿಕೊಂಡಿರುವ ರಾಜ್ಯಗಳು

iii.ಭಾರತವು ಮ್ಯಾನ್ಮರ್ ನೊಂದಿಗೆ ಕೇವಲ ಭೂಗಡಿಯನ್ನು ಮಾತ್ರ ಹಂಚಿಕೊಂಡಿದೆ, ಯಾವುದೇ ಸಮುದ್ರಗಡಿಯನ್ನು ಹಂಚಿಕೊಂಡಿಲ್ಲ

ಈ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ?

A
ಹೇಳಿಕೆ I ಮತ್ತು iii ಸರಿಯಾಗಿದೆ
B
ಹೇಳಿಕೆ I ಮತ್ತು ii ಸರಿಯಾಗಿದೆ
C
ಹೇಳಿಕೆ ii ಮತ್ತು iii ಸರಿಯಾಗಿದೆ
D
ಮೇಲಿನ ಎಲ್ಲವೂ ಸರಿಯಾಗಿದೆ
Question 3 Explanation: 

ಹೇಳಿಕೆ I ಮತ್ತು ii ಸರಿಯಾಗಿದೆ:ವಿವರಣೆ: ಭಾರತ ಅಂಡಮಾನ್ ನಲ್ಲಿ ಮ್ಯಾನ್ಮರ್ ದೇಶದೊಂದಿಗೆ ಸಮುದ್ರ ಗಡಿಯನ್ನು ಹಂಚಿಕೊಂಡಿದೆ

Question 4

4.ಹಸಿರು ಕ್ರಾಂತಿಗೆ ಸಂಬಂಧಿಸಿದಂತೆ ಈ ಕೆಳಕಂಡ ಹೇಳಿಕೆಗಳನ್ನು ಗಮನಿಸಿ

i.ನಾರ್ಮನ್ ಬೋರ್ಲಾಗ್ ರವರನ್ನು ಹಸಿರು ಕ್ರಾಂತಿಯ ಪಿತಾಮಹ ಎಂದು ಕರೆಯುತ್ತಾರೆ

ii.ಡಾ. ಎಂ.ಎಸ್. ಸ್ವಾಮಿನಾಥನ್ ರವರನ್ನು ಭಾರತದ ಹಸಿರು ಕ್ರಾಂತಿಯ ಪಿತಾಮಹ ಎನ್ನುತ್ತಾರೆ

ಮೇಲ್ಕಂಡ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ?

A
ಹೇಳಿಕೆ I ಸರಿ ii ತಪ್ಪು
B
ಹೇಳಿಕೆ i ತಪ್ಪು ii ಸರಿ
C
ಎರಡೂ ಹೇಳಿಕೆಗಳು ಸರಿ
D
ಎರಡೂ ಹೇಳಿಕೆಗಳು ತಪ್ಪು
Question 4 Explanation: 
ಎರಡೂ ಹೇಳಿಕೆಗಳು ಸರಿ
Question 5

5.“ಮಂಡಲ್ ಸಮಿತಿ”ಯನ್ನು ರಚನೆ ಮಾಡಿದ ಭಾರತದ ಪ್ರಧಾನಿ ಯಾರು ಮತ್ತು ಸಮಿತಿಯನ್ನು ಯಾವ ಅವಧಿಯಲ್ಲಿ ರಚಿಸಲಾಯಿತು?

A
ಮುರಾರ್ಜಿ ದೇಸಾಯಿ-1979
B
ಜವಾಹರ್ ಲಾಲ್ ನೆಹರು-1967
C
ರಾಜೀವ್ ಗಾಂಧಿ-1887
D
ನರಸಿಂಹ ರಾವ್-1994
Question 5 Explanation: 

ಮುರಾರ್ಜಿ ದೇಸಾಯಿ-1979:1979 ರಲ್ಲಿ ಅಂದಿನ ಪ್ರಧಾನಿ ಮುರಾರ್ಜಿ ದೇಸಾಯಿಯವರು ಸಂಸದ ಬಿ.ಪಿ. ಮಂಡಲ್ ರವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಯಿತು. ಸಮಿತಿಯು ಪ.ಜಾತಿ ಮತ್ತು ಪ.ಪಂಗಡ, ಹಿಂದುಳಿದ ವರ್ಗಗಳ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿಯುವಿಕೆಗೆ ಕಾರಣ ಮತ್ತು ಪರಿಹಾರೋಪಾಯಗಳನ್ನು ಶೋಧಿಸಲು ರಚಿಸಲಾಯಿತು. ಈ ಸಮಿತಿಯು ಸರ್ಕಾರಿ ಹುದ್ದೆಗಳಲ್ಲಿ ಮತ್ತು ಶೈಕ್ಷಣಿಕ್ ಸಂಸ್ಥೆಗಳಲ್ಲಿ ಮೇಸಲಾತಿಯನ್ನು ಶೇ.27 ರಿಂದ ಶೇ.50 ಹೆಚ್ಚಿಸಲು ಶಿಫಾರಸ್ಸು ಮಾಡಲಾಯಿತು

Question 6

6.ಭಾರತದ ಸಂವಿಧಾನದಲ್ಲಿ 11 ನೇ ಮೂಲಭೂತ ಕರ್ತವ್ಯವನ್ನು ಎಷ್ಟನೇ ತಿದ್ದುಪಡಿಯ ಮೂಲಕ ಸೇರಿಸಲಾಯಿತು?

A
ಸಂವಿಧಾನದ 82 ನೇ ತದ್ದುಪಡಿ
B
ಸಂವಿಧಾನದ 44 ನೇ ತದ್ದುಪಡಿ
C
ಸಂವಿಧಾನದ 41 ನೇ ತದ್ದುಪಡಿ
D
ಸಂವಿಧಾನದ 86 ನೇ ತದ್ದುಪಡಿ
Question 6 Explanation: 

ಸಂವಿಧಾನದ 86 ನೇ ತದ್ದುಪಡಿ: ಸಂವಿಧಾನದ 86 ನೇ ತಿದ್ದುಪಡಿಯ ಮೂಲಕ ಭಾರತೀಯ ಸಂವಿಧಾನದಲ್ಲಿ 11 ನೇ ಮೂಲಭೂತ ಕರ್ತವ್ಯವನ್ನು 2002 ರಲ್ಲಿ ಸೇರಿಸಲಾಯಿತು. 6 ರಿಂದ 14 ವರ್ಷದ ಮಕ್ಕಳಿಕೆ ಜಾತಿ ಬೇದವಿಲ್ಲದೆ ಶಿಕ್ಷಣ ಕಲ್ಪಿಸಲು ಅವಕಾಶ ನೀಡಬೇಕೆಂಬುದು ಈ ತಿದ್ದುಪಡಿಯ ಆಶಯ

Question 7

7.ಭಾರತದಲ್ಲಿ ಯಾವ ವರ್ಷದಲ್ಲಿ ಜರುಗಿದ ಸಾರ್ವತ್ರಿಕ ಚುನಾವಣೆಯಲ್ಲಿ 18 ವರ್ಷದ ಯುವಜನತೆ ಮೊದಲ ಬಾರಿಗೆ ಮತದಾನ ಮಾಡುವ ಅವಕಾಶ ಕಲ್ಪಿಸಲಾಯಿತು?

A
1990
B
1988
C
1989
D
ಮೇಲಿನ ಯಾವುದೂ ಅಲ್ಲ
Question 7 Explanation: 

1989: ಭಾರತೀಯ ಸಂವಿಧಾನದ 61 ನೇ ತಿದ್ದುಪಡಿ, 1988 ರ ಮೂಲಕ ಮತದಾನದ ವಯಸ್ಸನ್ನು 21 ರಿಂದ 18 ವರ್ಷಗಳಿಗೆ ಇಳಿಸಲಾಯಿತು

Question 8

8.ಅತಿ ಹೆಚ್ಚು ಸುದ್ದಿಯಲ್ಲಿರುವ ಡೆಂಗ್ಯೂ, ಚಿಕುನ್ ಗುನ್ಯಾ ರೋಗವನ್ನು ಹರಡುವ ಸೊಳ್ಳೆಗಳು ಹೆಚ್ಚಾಗಿ ಮನೆಗಳಲ್ಲಿನ ಸ್ವಚ್ಛ ನೀರಿನಲ್ಲೇ ತಮ್ಮ ಸಂತಾನೋತ್ಪತ್ತಿಯನ್ನು ಮಾಡುತ್ತವೆ, ಸೊಳ್ಳೆಗಳ ಮೊಟ್ಟೆ/ಲಾರ್ವಾ ವನ್ನು ನಾಶಪಡಿಸಲು ನೀರಿನ ತೊಟ್ಟಿಗಳಲ್ಲಿ ಯಾವ ಕೀಟಭಕ್ಷಕ ಮೀನನ್ನು ಬಿಡಲಾಗುತ್ತದೆ?

A
ಮೈಸ್ಟಸ್
B
ಗ್ಯಾಂಬೂಸಿಯಾ
C
ಲಾರ್ವೋ
D
ಮಸ್ಕಾಟ್
Question 8 Explanation: 
ಗ್ಯಾಂಬೂಸಿಯಾ
Question 9

9.ಸಗಟು ಮಾರುಕಟ್ಟೆಯಲ್ಲಿ ಒಂದು ಸರಕಿನ ಬೆಲೆ ಹೆಚ್ಚಾದಾಗ, ಇನ್ನೊಂದು ಸರಕಿನ ಬೇಡಿಕೆ ಕಡಿಮೆಯಾಗುತ್ತದೆ- ಇಂತಹ ಸನ್ನಿವೇಶದಲ್ಲಿ ಸರಕುಗಳು ಪರಸ್ಪರ____________ಎನ್ನಬಹುದು

A
ಪೂರಕವಾಗಿವೆ
B
ಹೆಚ್ಚಳವಾಗಿವೆ
C
ಪ್ರತಿಸ್ಪರ್ಧಿಯಾಗಿವೆ
D
ಸಹಕಾರಿಯಾಗಿವೆ
Question 9 Explanation: 
ಪೂರಕವಾಗಿವೆ
Question 10

10.ಭಾರತದ ಸಂವಿಧಾನದ ಯಾವ ಪರಿಚ್ಛೇದವು ಅಸ್ಪೃಶ್ಯತೆ ಆಚರಣೆಯನ್ನು ನಿಷೇಧಿಸಿದೆ?

A
ಪರಿಚ್ಛೇದ 12
B
ಪರಿಚ್ಛೇದ 24
C
ಪರಿಚ್ಛೇದ 18
D
ಪರಿಚ್ಛೇದ 17
Question 10 Explanation: 
ಪರಿಚ್ಛೇದ 17
There are 10 questions to complete.

3 Thoughts to “ಸಾಮಾನ್ಯ ಜ್ಞಾನ ಕ್ವೀಜ್ 13”

  1. H T DASAR

    THANK YOU SIR…

  2. Anonymous

    Nice experience. ..

Leave a Comment

This site uses Akismet to reduce spam. Learn how your comment data is processed.