ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 26, 2016

Question 1

1.ಈ ಕೆಳಗಿನ ಯಾವುದು ಬೆಂಗಳೂರಿನಲ್ಲಿ ನಡೆಯಲಿರುವ 2017 ಪ್ರವಾಸಿ ಭಾರತೀಯ ದಿವಸ್ ನ ಧ್ಯೇಯ ವಾಕ್ಯ (Theme) ಆಗಿದೆ?

A

ಪ್ರವಾಸಿ ಭಾರತೀಯರ ಸಂಬಂಧಗಳ ಹೊಸ ಆಯಾಮ

B

ನಿಮ್ಮ ದೇಶ ನಿಮ್ಮ ಗೌರವ: ಅನಿವಾಸಿ ಭಾರತೀಯರೊಂದಿಗೆ ಬಾಂಧವ್ಯ

C

ಭಾರತದ ಹೊಸ ಬೆಳವಣಿಗೆಗೆ ನಿಮ್ಮ ನೆರವು

D

ಒಂದು ದೇಶ ವಿವಿದ ಸಂಬಂಧಗಳ ಆಯಾಮ

Question 1 Explanation: 
ಪ್ರವಾಸಿ ಭಾರತೀಯರ ಸಂಬಂಧಗಳ ಹೊಸ ಆಯಾಮ:

ಬೆಂಗಳೂರಿನಲ್ಲಿ 2017 ಪ್ರವಾಸಿ ಭಾರತೀಯ ದಿವಸ್ ಅನ್ನು ಜನವರಿ 7, 8 ಮತ್ತು 9ರಂದು ಆಚರಿಸಲಾಗುವುದು. ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಪ್ರವಾಸಿ ಭಾರತ್ ದಿವಸ್ ಆಚರಣೆಮಾಡಲಾಗುತ್ತಿದೆ. “ಪ್ರವಾಸಿ ಭಾರತೀಯರ ಸಂಬಂಧಗಳ ಹೊಸ ಆಯಾಮ (Redefined Engagement With Indian Diaspora)” ಎಂಬ ಶೀರ್ಷಿಕೆಯಡಿ ಈ ಬಾರಿ ಪ್ರವಾಸಿ ಭಾರತ್ ದಿವಸ್ ಅನ್ನು ಆಚರಿಲಾಗುವುದು. ಜನವರಿ 9 ರಂದು ಮಹಾತ್ಮಗಾಂಧಿಜಿ ಅವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ ದಿನವಾಗಿದ್ದು ಆ ದಿನದ ನೆನಪಿಗಾಗಿ ಮುಖ್ಯವಾಗಿ ಭಾರತದ ಅಭಿವೃದ್ಧಿಗೆ ಸಾಗರೋತ್ತರ ಭಾರತೀಯ ಸಮುದಾಯದ ಕೊಡುಗೆ ಗುರುತಿಸಲು 2003ರಿಂದ ಪ್ರತಿ ವರ್ಷ ಪ್ರವಾಸಿ ಭಾರತಿಯ ದಿವಸ್ ಆಚರಣೆಯನ್ನು ಮಾಡಲಾಗುತ್ತದೆ.

Question 2

2.ಇತ್ತೀಚೆಗೆ ಬಿಡುಗಡೆಗೊಂಡ “2016 ವರ್ಲ್ಡ್ ರಿಸ್ಕ್ ಇಂಡೆಕ್ಸ್ (World Risk Index)”ನಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?

A
55
B
66
C
77
D
112
Question 2 Explanation: 
77:

ವರ್ಲ್ಡ್ ರಿಸ್ಕ್ ರಿಪೋರ್ಟ್ನ ಭಾಗವಾದ ವರ್ಲ್ಡ್ ರಿಸ್ಕ್ ಇಂಡೆಕ್ಸ್ ನಲ್ಲಿ ಭಾರತ 77ನೇ ಸ್ಥಾನದಲ್ಲಿದೆ. ಯುನೈಟೆಡ್ ನೇಷನ್ಸ್ ಯೂನಿವರ್ಸಿಟಿ ಇನ್ಸ್ ಟಿಟ್ಯೂಟ್ ಫಾರ್ ಎನ್ವಿರ್ನಮೆಂಟ್ ಅಂಡ್ ಹ್ಯೂಮನ್ ಸೆಕ್ಯೂರಿಟಿ ಮತ್ತು ಜರ್ಮನಿಯ ಯೂನಿವರ್ಸಿಟಿ ಆಫ್ ಸ್ಟುಗ್ಗರ್ಟ್, ವರ್ಲ್ಡ್ ರಿಸ್ಕ್ ರಿಪೋರ್ಟ್ -2016ನ್ನು ಹೊರತಂದಿದ್ದು, 171 ರಾಷ್ಟ್ರಗಳ ಪೈಕಿ ಭಾರತ 77ನೇ ಸ್ಥಾನವನ್ನು ಪಡೆದುಕೊಂಡಿದೆ. ದ್ವೀಪ ರಾಜ್ಯ ವನೌಟು (Vanuatu) ಈ ಸೂಚ್ಯಂಕದಲ್ಲಿ ಮೊದಲ ಸ್ಥಾನದಲ್ಲಿದ್ದು, ವಿಪತ್ತಿನಿಂದ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ ರಾಷ್ಟ್ರವೆನಿಸಿದೆ.

Question 3

3.ಯಾವ ದೇಶ ಸಿರಿಯಾದಲ್ಲಿ ಐಎಸ್ಐಎಸ್ (ISIS)ಅನ್ನು ಮಟ್ಟಹಾಕುವ ಸಲುವಾಗಿ “ಆಪರೇಷನ್ ಯೂಪ್ರಟಿಸ್ ಶೀಲ್ಡ್ (Operation Euphrates Shield)” ಇತ್ತೀಚೆಗೆ ಆರಂಭಿಸಿದೆ?

A
ಅಮೆರಿಕಾ
B
ಇರಾನ್
C
ಟರ್ಕಿ
D
ಫ್ರಾನ್ಸ್
Question 3 Explanation: 
ಟರ್ಕಿ:

ಸಿರಿಯಾದ ಪ್ರಮುಖ ನಗರ ಜರಬ್ಲಸ್ (Jarablus)ನಿಂದ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ಐಎಸ್ಐಎಸ್) ಹೊರದೂಡುವ ಸಲುವಾಗಿ ಟರ್ಕಿ ದೇಶ ಆಪರೇಷನ್ ಯೂಪ್ರಟಿಸ್ ಶೀಲ್ಡ್ ಹೆಸರಿನಡಿ ಮಿಲಿಟರಿ ಕಾರ್ಯಾಚರಣೆಯನ್ನು ಆರಂಭಿಸಿದೆ. ಸಿರಿಯಾದಲ್ಲಿ ಐಎಸ್ಐಎಸ್ ವಿರುದ್ದ ಟರ್ಕಿ ನಡೆಸುತ್ತಿರುವ ಐದನೇ ಮಿಲಿಟರಿ ಕಾರ್ಯಾಚರಣೆ ಇದಾಗಿದೆ.

Question 4

4.“ಐ ವಾಂಟ್ ಟು ಬಿ ತೆಂಡೂಲ್ಕರ್ (I Want to Be Tendulkar)” ಪುಸ್ತಕದ ಲೇಖಕರು ಯಾರು?

A
ಅಜಿತ್ ಅಗರ್ಕರ್
B
ಮನೀಶ್ ಶರ್ಮಾ
C
ಸಂಜಯ್ ಪಾಂಡೆ
D
ಕೃಷ್ಣ ಕುಮಾರ್
Question 4 Explanation: 
ಮನೀಶ್ ಶರ್ಮಾ
Question 5

5.2015-16 ಯುರೋಪ್ UEFA ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಯಾರು ಪಡೆದುಕೊಂಡಿದ್ದಾರೆ?

A
ಲಿಯೊನೆಲ್ ಮೆಸ್ಸಿ
B
ಕ್ರಿಸ್ಟಿಯಾನೋ ರೊನಾಲ್ಡೋ
C
ಅಂಟೊನೆ ಗ್ರಿಜ್ಮನ್
D
ಗರೇಟ್ ಬೇಲ್
Question 5 Explanation: 
ಕ್ರಿಸ್ಟಿಯಾನೋ ರೊನಾಲ್ಡೋ:

ಪೋರ್ಚುಗೀಸ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಅವರು 2015-16 ಯುರೋಪ್ UEFA ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಎರಡನೇ ಬಾರಿ ರೊನಾಲ್ಡೊ ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ರಿಯಲ್ ಮ್ಯಾಡ್ರಿಡ್ ನ ಗರೇಟ್ ಬೇಲ್ ಹಾಗೂ ಅಟ್ಲೆಟಿಕೊ ಮ್ಯಾಡ್ರಿಡ್ ನ ಅಂಟೊನೆ ಗ್ರಿಜ್ಮನ್ ರನ್ನು ಹಿಂದಿಕ್ಕಿ ರೊನೊಲ್ಡೋ ಪ್ರಶಸ್ತಿ ಗಳಿಸಿದ್ದಾರೆ. ರೋನಾಲ್ಡೋ ಈ ಹಿಂದೆ 2013-14ರಲ್ಲಿ ಪ್ರಶಸ್ತಿಯನ್ನು ಗೆದಿದ್ದರು.

Question 6

6.ಯಾವ ನಗರದಲ್ಲಿ “2016 ಮದರ್ ತೆರೆಸಾ ಅಂತಾರಾಷ್ಟ್ರೀಯ ಸಿನಿಮಾ ಉತ್ಸವ”ಕ್ಕೆ ಚಾಲನೆ ನೀಡಲಾಯಿತು?

A
ಕೊಲ್ಕತ್ತ
B
ಮುಂಬೈ
C
ನವದೆಹಲಿ
D
ಚೆನ್ನೈ
Question 6 Explanation: 
ಕೊಲ್ಕತ್ತ:

4ನೇ ಮದರ್ ತೆರೆಸಾ ಅಂತಾರಾಷ್ಟ್ರೀಯ ಸಿನಿಮಾ ಉತ್ಸವ ಕೊಲ್ಕತ್ತಾದಲ್ಲಿ ಆರಂಭಗೊಂಡಿದೆ. ನಾಲ್ಕು ದಿನಗಳ ಸಿನಿಮೋತ್ಸವದಲ್ಲಿ ಮದರ್ ತೆರೆಸಾ ರವರಿಂದ ಸ್ಪೂರ್ತಿ ಪಡೆದ 23 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಿನಿಮಾಗಳನ್ನು ಪ್ರದರ್ಶಿಸಲಾಗುವುದು.

Question 7

7.ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಹುದ್ದೆಯು ಅಧಿಕಾರ ಶ್ರೇಣಿಯಲ್ಲಿ ಈ ಕೆಳಗಿನ ಯಾವ ಹುದ್ದೆಗೆ ಸಮನಾಗಿದೆ?

A
ಸಂಪುಟ ಸಚಿವರು
B
ಸಂಪುಟ ಕಾರ್ಯದರ್ಶಿ
C
ರಾಜ್ಯಪಾಲ
D
ಮುಖ್ಯಚುನಾವಣಾಧಿಕಾರಿ
Question 7 Explanation: 
ಸಂಪುಟ ಕಾರ್ಯದರ್ಶಿ:

ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಹುದ್ದೆಯು ಅಧಿಕಾರ ಶ್ರೇಣಿಯಲ್ಲಿ ಸಂಪುಟ ಕಾರ್ಯದರ್ಶಿಯ ಹುದ್ದೆಗೆ ಸಮನಾಗಿದೆ.

Question 8

8.ಇತ್ತೀಚೆಗೆ “ಪೊಸ್ಕೊ ಇ-ಬಾಕ್ಸ್” ವ್ಯವಸ್ಥೆಯನ್ನು ಜಾರಿಗೆ ತಂದ ಕೇಂದ್ರ ಸಚಿವಾಲಯ ಯಾವುದು?

A
ಹಣಕಾಸು ಸಚಿವಾಲಯ
B
ವಿದೇಶಾಂಗ ವ್ಯವಹಾರಗಳ ಸಚಿವಾಲಯ
C
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವಾಲಯ
D
ಗೃಹ ಸಚಿವಾಲಯ
Question 8 Explanation: 
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವಾಲಯ:

ಲೈಂಗಿಕ ಶೋಷಣೆಯಿಂದ ಮಕ್ಕಳನ್ನು ರಕ್ಷಿಸುವ ಸಲುವಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವಾಲಯ ಇ-ಬಾಕ್ಸ್ ವ್ಯವಸ್ಥೆಗೆ ನವದೆಹಲಿಯಲ್ಲಿ ಚಾಲನೆ ನೀಡಿದೆ. ಇ-ಬಾಕ್ಸ್ ಒಂದು ಆನ್ ಲೈನ್ ದೂರು ನಿರ್ವಹಣೆ ವ್ಯವಸ್ಥೆಯಾಗಿದ್ದು, ಮಕ್ಕಳ ಮೇಲಾಗುವ ಲೈಂಗಿಕ ಶೋಷಣೆಯ ದೂರನ್ನು ಸರಳವಾಗಿ ಮತ್ತು ನೇರವಾಗಿ ದಾಖಲಿಸಬಹುದಾಗಿದೆ. ಆ ಮೂಲಕ ಆರೋಪಿ ವಿರುದ್ದ ಪೊಸ್ಕೊ (Protection of Children from Sexual Offenses) ಕಾಯಿದೆ ಅಡಿ ಕ್ರಮ ಜರುಗಿಸಬಹುದು.

Question 9

9.19ನೇ ಸಾರ್ಕ್ (SAARC) ಸಮ್ಮೇಳನವನ್ನು ಈ ಕೆಳಗಿನ ಯಾವ ದೇಶದಲ್ಲಿ ಆಯೋಜಿಸಲಾಗುತ್ತಿದೆ?

A
ಭಾರತ
B
ಬಾಂಗ್ಲದೇಶ
C
ನೇಪಾಳ
D
ಪಾಕಿಸ್ತಾನ
Question 9 Explanation: 
ಪಾಕಿಸ್ತಾನ:

9ನೇ ಸಾರ್ಕ್‌ ಸಮ್ಮೇಳನ ನ.9 ಮತ್ತು 10ರಂದು ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆಯಲಿದೆ. ಸಾರ್ಕ್ ಸದಸ್ಯ ರಾಷ್ಟ್ರಗಳ ನಾಯಕರು ಮತ್ತು ಒಂಬತ್ತು ವೀಕ್ಷಣಾ ರಾಷ್ಟ್ರಗಳ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

Question 10

10.ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಹಿಳಾ ಸ್ವಸಹಾಯ ಸಂಘಗಳಿಗೆ (ಎಸ್ಎಚ್ಜಿ) ವಾರ್ಷಿಕ ಶೇ ಎಷ್ಟರ ಬಡ್ಡಿದರದಲ್ಲಿ ಸಾಲ ನೀಡುವಂತೆ ಬ್ಯಾಂಕುಗಳಿಗೆ ಸೂಚನೆ ನೀಡಿದೆ?

A
ಶೇ 3%
B
ಶೇ 4%
C
ಶೇ 6%
D
ಶೇ 7%
Question 10 Explanation: 
ಶೇ 7%:

ಭಾರತೀಯ ರಿಸರ್ವ್ ಬ್ಯಾಂಕ್(RBI) ದೇಶದಲ್ಲಿರುವ ಮಹಿಳಾ ಸ್ವಸಹಾಯ ಸಂಘಗಳಿಗೆ (SHG) ವಾರ್ಷಿಕ ಶೇ. 7ರ ಬಡ್ಡಿದರದಲ್ಲಿ ಸಾಲ ನೀಡುವಂತೆ ಬ್ಯಾಂಕುಗಳಿಗೆ ಸೂಚನೆ ನೀಡಿದೆ. ಕೇಂದ್ರ ಸರ್ಕಾರದ 2016-17ರ ಪರಿಷ್ಕ್ರತ ಮಾರ್ಗಸೂಚಿಯಂತೆ ದೀನ್ ದಯಾಳ ಅಂತ್ಯೋದಯ ಯೋಜನೆ ಮತ್ತು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ ಅಡಿಯಲ್ಲಿ ಎಲ್ಲಾ ಮಹಿಳಾ ಸ್ವ ಸಹಾಯ ಸಂಘಗಳು ಶೇ. 7ರ ಬಡ್ಡಿದರದಲ್ಲಿ ರೂ. 3 ಲಕ್ಷದವರೆಗೆ ಸಾಲ ಪಡೆಯಲು ಅರ್ಹವಾಗಿವೆ ಆರ್ಬಿಐ ತಿಳಿಸಿದೆ.

There are 10 questions to complete.

3 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 26, 2016”

  1. ಸಂತೋಷ್ ಗೌಡರ

    ಧನ್ಯವಾದಗಳು ಸರ್

  2. H T DASAR

    Thank you sir

  3. Adharsha bm

    Thanks sir

Leave a Comment

This site uses Akismet to reduce spam. Learn how your comment data is processed.