ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 27, 2016
Question 1 |
1.ಇಸ್ರೋ ಇತ್ತೀಚೆಗೆ ಪರೀಕ್ಷಿಸಿದ ಸ್ಕ್ರಾಮ್ ಜೆಟ್ ಎಂಜಿನ್ ಗೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿಯಾಗಿದೆ?
i) ಈ ಎಂಜಿನ್ ವಾತಾವರಣದ ಆಮ್ಲಜನಕ ಬಳಸಿ ಕಾರ್ಯನಿರ್ವಹಿಸಲಿದೆ
ii) ಇದರಿಂದ ರಾಕೆಟ್ ಉಡಾವಣೆಯ ವೆಚ್ಚದಲ್ಲಿ ಸಾಕಷ್ಟು ಇಳಿಕೆಯಾಗಲಿದೆ
ಕೆಳಗೆ ನೀಡಿರುವ ಕೋಡ್ ಗಳಿಂದ ಸರಿಯಾದ ಉತ್ತರವನ್ನು ಆರಿಸಿ:
ಹೇಳಿಕೆ ಒಂದು ಮಾತ್ರ ಸರಿ | |
ಹೇಳಿಕೆ ಎರಡು ಮಾತ್ರ ಸರಿ | |
ಎರಡು ಹೇಳಿಕೆ ಸರಿಯಾಗಿವೆ | |
ಎರಡು ಹೇಳಿಕೆ ತಪ್ಪಾಗಿವೆ |
ಎಂಜಿನ್ ಇಂಧನವನ್ನು ಉರಿಸಲು ವಾತಾವರಣದ ಆಮ್ಲಜನಕವನ್ನು ಬಳಸುವ ಎಂಜಿನ್ ಆದ ಸ್ವದೇಶಿ ನಿರ್ಮಿತ ಸ್ಕ್ರೇಮ್ ಜೆಟ್ ನ ಪರೀಕಾರ್ಥ ಉಡಾವಣೆಯನ್ನು ಇಸ್ರೋ ಯಶಸ್ವಿಯಾಗಿ ಪೂರೈಸಿದೆ. ರಾಕೆಟ್ ವಿಮಾನದ ವಾತಾವರಣ ಹಂತದಲ್ಲಿ ಮಾತ್ರ ಇದನ್ನು ಬಳಸಲಾಗುತ್ತಿದ್ದು, ಆಕ್ಸಿಡೀಕರಣದ ಅಂಶವನ್ನು ಕಡಿಮೆ ಮಾಡಿ ಉಡ್ಡಯನ ವೆಚ್ಚವನ್ನು ಕಡಿಮೆ ಮಾಡುತ್ತದೆ. ಇಸ್ರೋದ ಮರುಬಳಕೆ ಉಡ್ಡಯನ ವಾಹಕಕ್ಕೆ ಶಬ್ದಾತೀತ ವೇಗದಲ್ಲಿ ವಿದ್ಯುತ್ ಪೂರೈಸಲು ಕೂಡ ಸ್ಕ್ರಾಪ್ ಜೆಟ್ ಎಂಜಿನ್ ನ್ನು ಬಳಸಲಾಗುತ್ತದೆ. ಈ ಎಂಜಿನ್ ವಾತಾವರಣದ ಆಮ್ಲಜನಕವನ್ನು ಬಳಸಿಕೊಂಡು ವಾಹಕವನ್ನು ಉಡಾಯಿಸುವಾಗ ಅದರ ಅರ್ಧದಷ್ಟು ತೂಕವನ್ನು ಕಡಿಮೆ ಮಾಡುತ್ತದೆ. ಕಕ್ಷೆಗೆ ಹೆಚ್ಚಿನ ತೂಕದ ಉಪಕರಣಗಳನ್ನು ಹೊತ್ತೊಯ್ಯಲು ಸಹಾಯ ಮಾಡುತ್ತದೆ. ಶಬ್ದಾತೀತ ವೇಗದಲ್ಲಿ ವಾಹಕಗಳನ್ನು ಉಡಾಯಿಸಲು ಸ್ಕ್ರಾಮ್ ಜೆಟ್ ಎಂಜಿನ್ ಸಹಾಯ ಮಾಡುತ್ತದೆ.
Question 2 |
2.ವಿಶ್ವದ ಅತಿದೊಡ್ಡ “ಸಾಗರ ಸಂರಕ್ಷಿತ ಪ್ರದೇಶ (Marine Protected Area)”ವನ್ನು ಯಾವ ದೇಶ ಇತ್ತೀಚೆಗೆ ರಚಿಸಿದೆ?
ಅಮೆರಿಕಾ | |
ಇಂಡೋನೇಷಿಯಾ | |
ರಷ್ಯಾ | |
ನ್ಯೂಜಿಲ್ಯಾಂಡ್ |
ಜಗತ್ತಿನ ಅತಿದೊಡ್ಡ ಸಾಗರ ಸಂರಕ್ಷಿತ ಪ್ರದೇಶ ಪಾಪಾನೊಮ್ಮೌವ್ಕುಕಿ ಸಾಗರ ರಾಷ್ಟ್ರೀಯ ಸ್ಮಾರಕ (Papahanaumokuakea Marine National Monument)ವನ್ನು ಅಮೆರಿಕಾದಲ್ಲಿ ರಚಿಸಲಾಗಿದೆ. ಪ್ರಸ್ತುತ ಇರುವ ಹವಾಯಿ ರಾಷ್ಟ್ರೀಯ ಸ್ಮಾರಕದ ಪ್ರದೇಶವನ್ನು ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮರವರು ವಿಸ್ತರಿಸಿದ್ದು, ಪಾಪಾನೊಮ್ಮೌವ್ಕುಕಿ ಸಾಗರ ರಾಷ್ಟ್ರೀಯ ಸ್ಮಾರಕ ವಿಶ್ವದ ಅತಿದೊಡ್ಡ ಸಾಗರ ಸಂರಕ್ಷಿತ ಪ್ರದೇಶವೆನಿಸಿದೆ. ಈ ಪ್ರದೇಶದ ಒಟ್ಟು ವಿಸ್ತೀರ್ಣ 5,82,578 ಚದರ ಮೀಟರ್ ಗಳಿದ್ದು, ಫ್ರಾನ್ಸ್ ದೇಶದ ವಿಸ್ತೀರ್ಣಕ್ಕಿಂತಲೂ ದೊಡ್ಡದಿದೆ ಎನ್ನಲಾಗಿದೆ. ಸುಮಾರು 7000ಕ್ಕೂ ಹೆಚ್ಚು ಪ್ರಭೇದಗಳು ಈ ಸಂರಕ್ಷಿತ ಪ್ರದೇಶದಲ್ಲಿ ರಕ್ಷಣೆ ಪಡೆಯಲಿವೆ. ಅಲ್ಲದೇ ಹವಳದ ಬಂಡೆಗಳಿಗೆ, ಅಪರೂಪದ ತಿಮಿಂಗಿಲಗಳಿಗೆ ಮತ್ತು ಸಮುದ್ರ ಆಮೆಗಳಿಗೆ ಶಾಶ್ವತವಾಗಿ ನೆಲೆ ಕಲ್ಪಿಸಲಿದೆ. 2006ರಲ್ಲಿ ಮೊದಲ ಬಾರಿಗೆ ಜಾರ್ಜ್ ಬುಷ್ ಅವರು ಈ ಪ್ರದೇಶವನ್ನು ಸಾಗರ ಸಂರಕ್ಷಿತ ಪ್ರದೇಶವೆಂದು ಘೋಷಿಸಿದ್ದರು. ಆಗ ಇದನ್ನು ನಾರ್ಥ್ ವೆಸ್ಟರ್ನ್ ಐಲ್ಯಾಂಡ್ಸ್ ಮೆರೈನ್ ನ್ಯಾಷನಲ್ ಮೊನುಮೆಂಟ್ ಎಂದು ಹೆಸರಿಡಲಾಗಿತ್ತು.
Question 3 |
3.ಕನೆಕ್ವಿಕಟ್ ಓಪನ್ (Connecticut Open) ಟೂರ್ನಿಯ ಮಹಿಳೆಯರ ಡಬಲ್ಸ್ ನಲ್ಲಿ ಪ್ರಶಸ್ತಿಯನ್ನು ಗೆದ್ದ ಜೋಡಿ ಯಾವುದು?
ಸಾನಿಯಾ ಮಿರ್ಝಾ, ಮೋನಿಕಾ ನಿಕ್ಯೂಲೆಸ್ಕೋ | |
ಕ್ಯಾಥೆರ್ನಾ ಬೊಂಡಾರೆಂಕೊ, ಚುಯಂಗ್ ಚಿಯಾ | |
ಕ್ಯಾಥೆರ್ನಾ ಬೊಂಡಾರೆಂಕೊ, ಸಾನಿಯಾ ಮಿರ್ಝಾ | |
ಚುಯಂಗ್ ಚಿಯಾ, ಮಾರ್ಟೀನಾ ಹಿಂಗೀಸ್ |
ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಝಾ ಅವರು ತನ್ನ ಜೊತೆಗಾರ್ತಿ ರೂಮೇನಿಯಾದ ಮೋನಿಕಾ ನಿಕ್ಯೂಲೆಸ್ಕೋ ಜೊತೆಗೂಡಿ ಕನೆಕ್ವಿಕಟ್ ಓಪನ್ ಮಹಿಳೆಯರ ಡಬಲ್ಸ್ನ ಪ್ರಶಸ್ತಿ ಗೆದ್ದುಕೊಂಡರು. ಸಾನಿಯಾ ಮತ್ತು ಮೋನಿಕಾ ಅವರು ಉಕ್ರೈನ್ನ ಕ್ಯಾಥೆರ್ನಾ ಬೊಂಡಾರೆಂಕೊ ಮತ್ತು ತೈವಾನ್ನ ಚುಯಂಗ್ ಚಿಯಾ ವಿರುದ್ಧ 7-5, 6-4 ಸೆಟ್ಗಳಿಂದ ಜಯ ದಾಖಲಿಸಿ ಪ್ರಶಸ್ತಿ ಬಾಚಿಕೊಂಡಿದ್ದಾರೆ.
Question 4 |
4.ಯಾವ ನಟಿ ದಕ್ಷಿಣ ಭಾರತದ ಮಹಿಳೆಯರಿಗಾಗಿರುವ ವಿಶ್ವಸಂಸ್ಥೆಯ ಸದ್ಭಾವನ ರಾಯಭಾರಿ (Goodwill Ambassador) ಆಗಿ ನೇಮಕಗೊಂಡಿದ್ದಾರೆ?
ಐಶ್ವರ್ಯ ಧನುಷ್ | |
ದೀಪಿಕಾ ಪಡುಕೋಣೆ | |
ಜಯಾ ಬಚ್ಚನ್ | |
ರಮ್ಯಾ |
ನಟ ರಜನೀಕಾಂತ್ ಅವರ ಹಿರಿಯ ಪುತ್ರಿ ಮತ್ತು ತಮಿಳು ನಟ ಧನುಷ್ ಪತ್ನಿ ಐಶ್ವರ್ಯ ಆರ್. ಧನುಷ್ ದಕ್ಷಿಣ ಭಾರತದ ಮಹಿಳೆಯರಿಗಾಗಿರುವ ವಿಶ್ವಸಂಸ್ಥೆಯ ಸದ್ಭಾವನ ರಾಯಭಾರಿಯಾಗಿ ನೇಮಕವಾಗಿದ್ದಾರೆ. ಐಶ್ವರ್ಯ ಅವರು ಮೂರು ತಮಿಳು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲಿ ಜನಪೋಕಾರಿ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದಾರೆ
Question 5 |
5.ದೇಶದಲ್ಲಿ ಕಾರ್ಡ್ ಮೂಲಕ ಪಾವತಿಯನ್ನು ಉತ್ತೇಜಿಸುವ ಸಲುವಾಗಿ ಶಿಪಾರಸ್ಸು ಮಾಡಲು ಕೇಂದ್ರ ಸರ್ಕಾರ ಯಾರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ?
ಅರವಿಂದ್ ಪಗಾರಿಯಾ | |
ರಘುರಾಮ್ ರಾಜನ್ | |
ರತನ್ ಪಿ ವಟಲ್ | |
ಉರ್ಜಿತ್ ಪಟೇಲ್ |
ನಗದು ವ್ಯವಹಾರವನ್ನು ಸ್ಥಿರಗೊಳಿಸಿ ಕಾರ್ಡ್ ಮೂಲಕ ಪಾವತಿಯನ್ನು ಉತ್ತೇಜಿಸಲು ಶಿಫಾರಸ್ಸು ಮಾಡುವಂತೆ ಕೇಂದ್ರ ಸರ್ಕಾರ 11 ಸದಸ್ಯರನ್ನು ಒಳಗೊಂಡ ಉನ್ನತಮಟ್ಟದ ಸಮಿಯನ್ನು ರಚಿಸಿದೆ. ಮಾಜಿ ಹಣಕಾಸು ಕಾರ್ಯದರ್ಶಿ ಮತ್ತು ಪ್ರಸ್ತುತ ನೀತಿ ಆಯೋಗದ ಸಾಮಾಜಿಕ ವಲಯಕ್ಕೆ ಪ್ರಧಾನ ಸಲಹೆಗಾರರಾಗಿರುವ ರತನ್ ಪಿ ವಟಲ್ ಅವರು ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಕಾರ್ಡ್ ಮತ್ತು ಡಿಜಿಟಲ್ ವಲಯದ ಮೂಲಕ ಪಾವತಿ ವ್ಯವಸ್ಥೆಯನ್ನು ಪ್ರೋತ್ಸಾಹಿಸಲು ಅಗತ್ಯ ಕ್ರಮಗಳನ್ನು ಶಿಫಾರಸ್ಸು ಮಾಡುವ ಹೊಣೆಗಾರಿಕೆಯನ್ನು ಸಮಿತಿಗೆ ನೀಡಲಾಗಿದೆ.
Question 6 |
6.“ದಪ್ಪು ನೃತ್ಯ (Dappu Dance)” ಯಾವ ರಾಜ್ಯದ ಪ್ರಸಿದ್ದ ನೃತ್ಯವಾಗಿದೆ?
ತೆಲಂಗಣ | |
ಕೇರಳ | |
ಮಧ್ಯ ಪ್ರದೇಶ | |
ಮಹಾರಾಷ್ಟ್ರ |
ದಪ್ಪು ನೃತ್ಯ ತೆಲಂಗಣ ರಾಜ್ಯದ ಪ್ರಸಿದ್ದ ಸಾಂಪ್ರದಾಯಿಕ ನೃತ್ಯ.
Question 7 |
7.ವಿವಿಎಸ್ ಲಕ್ಷಣ್ ಅವರು ಯಾವ ದೇಶದ ವಿರುದ್ದ ದಾಖಲಿಸಿದ್ದ 281 ರನ್ ಶತಮಾನದ ಬೆಸ್ಟ್ ಇನ್ನಿಂಗ್ಸ್ ಎಂದು ಗುರುತಿಸಲಾಗಿದೆ?
ಪಾಕಿಸ್ತಾನ | |
ಆಸ್ಟ್ರೇಲಿಯಾ | |
ಇಂಗ್ಲೆಂಡ್ | |
ದಕ್ಷಿಣ ಆಫ್ರಿಕಾ |
ಕಲಾತ್ಮಕ ಬ್ಯಾಟ್ಸ್ಮನ್ ವಿವಿಎಸ್ ಲಕ್ಷ್ಮಣ್ ಕೋಲ್ಕತಾದ ಈಡನ್ ಗಾರ್ಡನ್ಸ್ನಲ್ಲಿ 2001ರಲ್ಲಿ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ನಲ್ಲಿ ದಾಖಲಿಸಿದ್ದ 281 ರನ್ ಶತಮಾನದಲ್ಲಿ ದಾಖಲಾದ ಅತ್ಯುತ್ತಮ ಇನಿಂಗ್ಸ್ ಆಗಿ ಗುರುತಿಸಿಕೊಂಡಿದೆ. ಜನವರಿ 2000 ರಿಂದ ಹಲವು ಮಂದಿ ಬ್ಯಾಟ್ಸ್ಮನ್ಗಳ ದಾಖಲಿಸಿದ್ದ ಸ್ಮರಣಿಯ ಇನಿಂಗ್ಸ್ಗಳನ್ನು ಪರಿಗಣಿಸಲಾಗಿತ್ತು. ಇದರಲ್ಲಿ 37 ಮಂದಿ ಸದಸ್ಯರ ಸಮಿತಿಯು 2000 ಜನವರಿ 1ರಿಂದ ಇನಿಂಗ್ಸ್ಗಳನ್ನು ಆಯ್ಕೆಮಾಡಿತ್ತು. ಈ ಪೈಕಿ ಲಕ್ಷ್ಮಣ್ 2001, ಮಾರ್ಚ್ 11ರಿಂದ 15ರ ತನಕ ನಡೆದ ಎರಡನೆ ಟೆಸ್ಟ್ನ ಎರಡನೆ ಇನಿಂಗ್ಸ್ನಲ್ಲಿ ದ್ವಿಶತಕ ದಾಖಲಿಸಿದ್ದ ಇನ್ನಿಂಗ್ಸ್ ಬೆಸ್ಟ್ ಇನ್ನಿಂಗ್ಸ್ ಆಗಿ ಆಯ್ಕೆಯಾಗಿದೆ. 631 ನಿಮಿಷಗಳ ಕಾಲ ಕ್ರೀಸ್ನಲ್ಲಿ ತಳವೂರಿದ್ದ ಲಕ್ಷ್ಮಣ್ 452 ಎಸೆತಗಳನ್ನು ಎದುರಿಸಿ 44 ಬೌಂಡರಿಗಳ ಸಹಾಯದಿಂದ 281 ರನ್ ದಾಖಲಿಸಿದ್ದರು.
Question 8 |
8.2016 ಬೆಲ್ಜಿಯಂ ಗ್ರಾಂಡ್ ಪ್ರಿಕ್ಸ್ ಫಾರ್ಮೂಲ ಓನ್ ರೇಸ್ ಗೆದ್ದವರು ಯಾರು?
ನಿಕೋ ರೊಸ್ಬರ್ಗ್ | |
ಲೆವಿಸ್ ಹ್ಯಾಮಿಲ್ಟನ್ | |
ಕೆವಿನ್ ಮ್ಯಾಗ್ನುಸೆನ್ | |
ಸೆಬಾಸ್ಟಿಯನ್ ವೆಟಲ್ |
ಜರ್ಮನಿಯ ಮರ್ಸಿಡೆಸ್ ಡ್ರೈವರ್ ನಿಕೋ ರೊಸ್ಬರ್ಗ್ ಅವರು 2016 ಬೆಲ್ಜಿಯಂ ಗ್ರಾಂಡ್ ಪ್ರಿಕ್ಸ್ ಫಾರ್ಮೂಲ ಓನ್ ರೇಸ್ ನಲ್ಲಿ ಪ್ರಥಮ ಸ್ಥಾನಗಳಿಸುವ ಮೂಲಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ರೊಸ್ಬರ್ಗ್ ಗೆ ಇದು ಮೊದಲ ಬೆಲ್ಜಿಯಂ ಗ್ರಾಂಡ್ ಪ್ರಿಕ್ಸ್ ಪ್ರಶಸ್ತಿ. ರೆಡ್ ಬುಲ್ ನ ಡೆನಿಯಲ್ ರಿಕ್ಕಿಯಾರ್ಡೊ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರೆ, ಲೆವಿಸ್ ಹ್ಯಾಮಿಲ್ಟನ್ ತೃತೀಯ ಸ್ಥಾನವನ್ನು ಪಡೆದುಕೊಂಡರು.
Question 9 |
9.ಭಾರತದ ಸಾಕತ್ ಮೈನೇನಿ ಅವರು ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
ಬ್ಯಾಡ್ಮಿಂಟನ್ | |
ಟೆನ್ನಿಸ್ | |
ಹಾಕಿ | |
ಪುಟ್ಬಾಲ್ |
ಸಾಕೇತ್ ಮೈನೇನಿ ಭಾರತದ ಟೆನ್ನಿಸ್ ಆಟಗಾರ. ಮೈನೇನಿ ಪ್ರತಿಷ್ಠಿತ ಅಮೆರಿಕ ಓಪನ್ ಟೆನಿಸ್ ಪಂದ್ಯಾವಳಿಯ ಪ್ರಧಾನ ಘಟ್ಟಕ್ಕೆ ಅರ್ಹತೆ ಪಡೆದಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದ ಅರ್ಹತಾ ಸುತ್ತಿನ ಮೂರನೇ ಸುತ್ತಿನ ಪಂದ್ಯದಲ್ಲಿ ಸರ್ಬಿಯಾ ಆಟಗಾರ ಪೆಡ್ಜಾ ಕ್ರಿಸ್ಟಿನ್ ಎದುರು ಆಕ್ರಮಣಕಾರಿ ಆಟವಾಡಿದ ಸಾಕೇತ್, 6-3, 6-0 ಸೆಟ್ಗಳ ಗೆಲುವಿನೊಂದಿಗೆ ಪ್ರಧಾನ ಹಂತಕ್ಕೆ ಅರ್ಹತೆ ಪಡೆದರು. ಯೂಕಿ ಬಾಬ್ರಿ ನಂತರ ಅಮೆರಿಕ ಓಪನ್ ಟೆನಿಸ್ ಪಂದ್ಯಾವಳಿಯ ಪ್ರಧಾನ ಘಟ್ಟಕ್ಕೆ ಅರ್ಹತೆ ಪಡೆದ ಎರಡನೇ ಆಟಗಾರ ಇವರು.
Question 10 |
10.ನಮ್ಚಿಕ್-ನಮ್ ಪುಕ್ (Namchik-Namphuk) ಕಲ್ಲಿದ್ದಲು ಪ್ರದೇಶ ಯಾವ ರಾಜ್ಯದಲ್ಲಿದೆ?
ಅರುಣಾಚಲ ಪ್ರದೇಶ | |
ಆಂಧ್ರ ಪ್ರದೇಶ | |
ಜಾರ್ಖಂಡ್ | |
ಪಶ್ಚಿಮ ಬಂಗಾಳ |
Mahesh
ಧನ್ಯವಾದಗಳು ಸರ್
Thanks