ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 28, 2016
Question 1 |
1.ಯಾವ ದೇಶದೊಂದಿಗೆ ಭಾರತ ಇತ್ತೀಚೆಗೆ ಸಾಂಪ್ರದಾಯಿಕ ಔಷಧ ಪದ್ದತಿ (Traditional Medicine System)ಗೆ ಸಂಬಂಧಿಸಿದ ಒಡಂಬಡಿಕೆಗೆ ಸಹಿ ಹಾಕಿದೆ?
ಜಪಾನ್ | |
ಮಯನ್ಮಾರ್ | |
ಭೂತಾನ್ | |
ನೇಪಾಳ |
ಸಾಂಪ್ರದಾಯಿಕ ಔಷಧ ಪದ್ದತಿ, ನವೀಕರಿಸಬಹುದಾದ ಇಂಧನ ಮತ್ತು ಸೇತುವೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪರಸ್ಪರ ಸಹಕಾರ ನೀಡುವ ಒಡಂಬಡಿಕೆಗೆ ಭಾರತ ಮತ್ತು ಮಯನ್ಮಾರ್ ಸಹಿ ಹಾಕಿದವು. ಭಾರತ ಪ್ರವಾಸದಲ್ಲಿರುವ ಮಯನ್ಮಾರ್ ಅಧ್ಯಕ್ಷ ಯು ಟಿನ್ ಕ್ಯಾವ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಡುವೆ ನಡೆದ ಮಾತುಕತೆ ಬಳಿಕೆ ಈ ಒಪ್ಪಂದಕ್ಕೆ ಸಹಿಹಾಕಲಾಯಿತು.
Question 2 |
2.ಅಂತಾರಾಷ್ಟ್ರೀಯ ಪರಮಾಣು ವಿರೋಧಿ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
ಜುಲೈ 20 | |
ಆಗಸ್ಟ್ 21 | |
ಆಗಸ್ಟ್ 29 | |
ನವೆಂಬರ್ 12 |
ಅಂತಾರಾಷ್ಟ್ರೀಯ ಪರಮಾಣು ವಿರೋಧಿ ದಿನವನ್ನು ಪ್ರತಿವರ್ಷ ಆಗಸ್ಟ್ 29 ರಂದು ಆಚರಿಸಲಾಗುತ್ತಿದೆ. ಡಿಸೆಂಬರ್2, 2009 ರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 64ನೇ ಅಧಿವೇಶನದ ನಿರ್ಣಯದಲ್ಲಿ ಆಗಸ್ಟ್ 29 ಅನ್ನು ಅಂತಾರಾಷ್ಟ್ರೀಯ ಪರಮಾಣು ವಿರೋಧಿ ದಿನವೆಂದು ಆಚರಿಸಲು ನಿರ್ಧರಿಸಲಾಯಿತು. ಆಗಸ್ಟ್ 29, 1991 ರಲ್ಲಿ ಸೋವಿಯತ್ ಒಕ್ಕೂಟದ ಸೆಮಿಪಲಟಿಸ್ಕ್ ಪರಮಾಣು ಪರೀಕ್ಷಾ ಕೇಂದ್ರವನ್ನು (Semipalatinsk Nuclear Test Site) ಮುಚ್ಚಿದರ ಸ್ಮರಣಾರ್ಥ ಈ ದಿನವನ್ನು ಅಂತಾರಾಷ್ಟ್ರೀಯ ಪರಮಾಣು ವಿರೋಧಿ ದಿನವೆಂದು ಆಚರಿಸಲಾಗುತ್ತಿದೆ.
Question 3 |
3.ಈ ಕೆಳಗಿನ ಯಾರು ಹಾಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರುಗಳ ಪೈಕಿ ಏಕೈಕ ಮಹಿಳಾ ನ್ಯಾಯಾಧೀಶರಾಗಿದ್ದಾರೆ?
ನ್ಯಾ.ಆರ್ ಭಾನುಮತಿ | |
ನ್ಯಾ.ರೇಖಾ ದೋಷಿತ್ | |
ನ್ಯಾ.ಜಿ ರೋಹಿಣಿ | |
ನ್ಯಾ.ಟಿ ಮೀನಾ ಕುಮಾರಿ |
ಪ್ರಸ್ತುತ ಸುಪ್ರೀಂಕೋರ್ಟ್ನ 31 ನ್ಯಾಯಾಧೀಶರುಗಳ ಪೈಕಿ 28 ನ್ಯಾಯಾಧೀಶರುಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಇವರಲ್ಲಿ ನ್ಯಾ.ಆರ್ ಭಾನುಮತಿ ಅವರು ಏಕೈಕ ಮಹಿಳಾ ನ್ಯಾಯಾಧೀಶರಾಗಿದ್ದಾರೆ. ಆ ಮೂಲಕ ಸುಪ್ರೀಂಕೋರ್ಟ್ನಲ್ಲಿ ಮಹಿಳಾ ನ್ಯಾಯಾಧೀಶರ ಅನುಪಾತ ಶೇ 4% ಕ್ಕಿಂತಲೂ ಕಡಿಮೆ ಇದೆ. ಅಷ್ಟೇ ಅಲ್ಲದೇ ದೇಶದಲ್ಲಿರುವ 24 ಹೈಕೋರ್ಟಗಳಲ್ಲಿ 534 ಪುರುಷ ನ್ಯಾಯಾಧೀಶರಿದ್ದರೆ, ಮಹಿಳಾ ನ್ಯಾಯಾಧೀಶರ ಸಂಖ್ಯೆ ಕೇವಲ 61 ಇದೆ.
Question 4 |
4.ಯಾವ ರಾಜ್ಯ ಸರ್ಕಾರ ತನ್ನ ರಾಜ್ಯದ ಗ್ರಾಮೀಣ ಭಾಗದಲ್ಲಿ ಉದ್ಯಾನವನ ಮತ್ತು ಜಿಮ್ನಾಷೀಯಂಗಳನ್ನು ಸ್ಥಾಪಿಸುವುದಾಗಿ ಘೋಷಿಸಿದೆ?
ಕೇರಳ | |
ತಮಿಳುನಾಡು | |
ಪಂಜಾಬ್ | |
ಉತ್ತರ ಪ್ರದೇಶ |
ತಮಿಳುನಾಡಿನ ಗ್ರಾಮೀಣ ಪ್ರದೇಶದಲ್ಲಿ ಅಮ್ಮ ಉದ್ಯಾನವನ ಮತ್ತು ಅಮ್ಮ ಜಿಮ್ ಗಳನ್ನು ಸ್ಥಾಪಿಸುವುದಾಗಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಘೋಷಿಸಿದ್ದಾರೆ. ಹೊಸ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಂದು ಅಮ್ಮಾ ಪಾರ್ಕ್ ನಿರ್ಮಿಸಲಾಗುವುದು. ಅಮ್ಮಾ ಪಾರ್ಕ್ ಗಳಲ್ಲಿ ಶುದ್ದ ಕುಡಿಯುವ ನೀರು, ಶೌಚಾಲಯ, ಮಕ್ಕಳಿಗೆ ಆಟವಾಡಲು ಸೌಕರ್ಯ ಇರಲಿದೆ. ಇನ್ನು ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ 500 ಅಮ್ಮಾ ಜಿಮ್ ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದ್ದು, ಪ್ರತಿ ಜಿಮ್ಗೆ ರೂ 10 ಲಕ್ಷ ವ್ಯಯಿಸಲಾಗುವುದು.
Question 5 |
5.ಇಸ್ರೋ ಇತ್ತೀಚೆಗೆ ಈ ಕೆಳಗಿನ ಯಾವ ರಾಕೆಟ್ ಬಳಸಿ ವಿನೂತನ ತಂತ್ರಜ್ಞಾನದ ಸ್ಕ್ರಾಮ್ ಜೆಟ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಿತು?
RH 560 | |
ATV 560 | |
SH 130 | |
SH 560 |
ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸ್ವದೇಶಿ ನಿರ್ಮಿತ ಸ್ಕ್ರಾಮ್ ಜೆಟ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಸೂಪರ್ ಸಾನಿಕ್ ಕಂಬಸ್ಚನ್ ರಾಮ್ ಜೆಟ್ ಅನ್ನೇ ಸ್ಕ್ರಾಮ್ ಜೆಟ್ ಎನ್ನಲಾಗುತ್ತದೆ. ಈ ಸ್ವದೇಶಿ ನಿರ್ಮಿತ ಎಂಜಿನನ್ನು ಇಸ್ರೋ RH 560 ರಾಕೆಟ್ ಬಳಸಿ ಪರೀಕ್ಷಿಸಿದೆ. ಈ ಎಂಜಿನ್ ವಾತಾವರಣದ ಆಮ್ಲಜನಕವನ್ನು ಬಳಸಿಕೊಂಡು ವಾಹಕವನ್ನು ಉಡಾಯಿಸುವಾಗ ಅದರ ಅರ್ಧದಷ್ಟು ತೂಕವನ್ನು ಕಡಿಮೆ ಮಾಡುತ್ತದೆ. ಕಕ್ಷೆಗೆ ಹೆಚ್ಚಿನ ತೂಕದ ಉಪಕರಣಗಳನ್ನು ಹೊತ್ತೊಯ್ಯಲು ಸಹಾಯ ಮಾಡುತ್ತದೆ. ಶಬ್ದಾತೀತ ವೇಗದಲ್ಲಿ ವಾಹಕಗಳನ್ನು ಉಡಾಯಿಸಲು ಸ್ಕ್ರಾಮ್ ಜೆಟ್ ಎಂಜಿನ್ ಸಹಾಯ ಮಾಡುತ್ತದೆ.
Question 6 |
6.2016 ಕನೆಕ್ವಿಕಟ್ ಓಪನ್ (Connecticut Open) ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ಪ್ರಶಸ್ತಿ ಗೆದ್ದವರು ಯಾರು?
ಎಲಿನಾ ಸ್ವಿಟೊಲಿನ | |
ಅಗ್ನಿಝ್ಕ ರಡ್ವನ್ಸ್ಕ | |
ಸೆರೆನಾ ವಿಲಿಯಮ್ಸ್ | |
ವಿಕ್ಟೋರಿಯಾ ಅಝೆರೆಕಾ |
ಅಗ್ರ ಶ್ರೇಯಾಂಕಿತ ಆಟಗಾರ್ತಿ ಅಗ್ನಿಝ್ಕ ರಡ್ವನ್ಸ್ಕ ಅವರು ಎಲಿನಾ ಸ್ವಿಟೊಲಿನ ಅವರನ್ನು 6-1, 7-6 (3) ಸೆಟ್ ನಿಂದ ಸೋಲಿಸುವ ಮೂಲಕ 2016 ಕನೆಕ್ವಿಕಟ್ ಓಪನ್ (Connecticut Open) ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ಪ್ರಶಸ್ತಿ ಗೆದ್ದುಕೊಂಡರು. ರಡ್ವನ್ಸ್ಕಗೆ ಇದು 19ನೇ ಪ್ರಶಸ್ತಿಯಾಗಿದೆ.
Question 7 |
7.ಇತ್ತೀಚೆಗೆ ನಿಧನರಾದ ಮೊಹಮ್ಮದ್ ಷಫಿ ಖುರೇಷಿ ಯಾವ ರಾಜ್ಯದ ಮಾಜಿ ರಾಜ್ಯಪಾಲ?
ಮಧ್ಯ ಪ್ರದೇಶ | |
ರಾಜಸ್ತಾನ | |
ಕೇರಳ | |
ಮಹಾರಾಷ್ಟ್ರ |
ಹಿರಿಯ ರಾಜಕಾರಣೆ ಮತ್ತು ಮಾಜಿ ಕೇಂದ್ರ ಸಚಿವ ಮೊಹಮ್ಮದ್ ಷಫಿ ಖುರೇಷಿ ನಿಧನರಾದರು. 1993 ರಿಂದ 1998 ರವರೆಗೆ ಖುರೇಷಿ ಮಧ್ಯ ಪ್ರದೇಶದ 19ನೇ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದರು.
Question 8 |
8.ದೇಶದಲ್ಲೇ ಅತಿ ಹೆಚ್ಚು ಅಭಯಾರಣ್ಯ ಮತ್ತು ರಾಷ್ಟ್ರೀಯ ಉದ್ಯಾನವಗಳನ್ನು ಹೊಂದಿರುವ ರಾಜ್ಯ ಯಾವುದು?
ಉತ್ತರ ಪ್ರದೇಶ | |
ಕರ್ನಾಟಕ | |
ಮಧ್ಯ ಪ್ರದೇಶ | |
ಮಹಾರಾಷ್ಟ್ರ |
Question 9 |
9.ಯಾವ ವಿಶ್ವವಿದ್ಯಾಲಯಕ್ಕೆ 2015-16 ಮೌಲನ ಅಬ್ದುಲ್ ಕಲಾಂ ಅಜಾದ್ ಟ್ರೋಫಿ ಅನ್ನು ನೀಡಲಾಗಿದೆ?
ಪಾಟಿಯಾಲ ವಿಶ್ವವಿದ್ಯಾಲಯ | |
ಬೆಂಗಳೂರು ವಿಶ್ವವಿದ್ಯಾಲಯ | |
ದೆಹಲಿ ವಿಶ್ವವಿದ್ಯಾಲಯ | |
ಜವಹಾರ್ ಲಾಲ್ ನೆಹರೂ ವಿಶ್ವವಿದ್ಯಾಲಯ |
ಅತ್ಯುತ್ತಮ ಕ್ರೀಡಾ ಪ್ರದರ್ಶನಕ್ಕೆ ನೀಡಲಾಗುವ ಮೌಲನ ಅಬ್ದುಲ್ ಕಲಾಂ ಅಜಾದ್ ಟ್ರೋಫಿಯನ್ನು 2015-16ನೇ ಸಾಲಿಗೆ ಪಂಜಾಬ್ ನ ಪಾಟಿಯಾಲ ವಿಶ್ವವಿದ್ಯಾಲಯಕ್ಕೆ ನೀಡಲಾಗಿದೆ. ಸತತವಾಗಿ ನಾಲ್ಕನೇ ಬಾರಿ ಪಾಟಿಯಾಲ ವಿವಿ ಈ ಪ್ರಶಸ್ತಿಗೆ ಭಾಜನವಾಗಿದೆ.
Question 10 |
10.ಮಂಡಲ್ ಆಯೋಗವನ್ನು ರಚಿಸಿದ ವೇಳೆ ಭಾರತದ ಪ್ರಧಾನಿಯಾಗಿದ್ದವರು ಯಾರು?
ರಾಜೀವ್ ಗಾಂಧಿ | |
ಇಂದಿರಾ ಗಾಂಧಿ | |
ಮೊರಾರ್ಜಿ ದೇಸಾಯಿ | |
ವಿ ಪಿ ಸಿಂಗ್ |
ಮಂಡಲ್ ಆಯೋಗವನ್ನು 1978ರಲ್ಲಿ ಅಂದಿನ ಪ್ರಧಾನಮಂತ್ರಿ ಮೊರಾರ್ಜಿ ದೇಸಾಯಿ ಅವರು ರಚಿಸಿದರು. 1980ರಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ ಈ ಆಯೋಗ 3,743 ಹಿಂದುಳಿದ ಜಾತಿಗಳನ್ನು ಗುರುತಿಸಿತು. ಅಷ್ಟೇ ಅಲ್ಲ ಮೀಸಲಾತಿಯ ಪ್ರಮಾಣ ಹೆಚ್ಚಿಸಲು ಪ್ರಥಮ ಬಾರಿಗೆ ಶಿಫಾರಸು ಮಾಡಿತು. ಹಿಂದುಳಿದ ವರ್ಗಗಳಿಗೆ ಶೇ.27ರಷ್ಟು ಪ್ರತ್ಯೇಕ ಮೀಸಲು ನೀಡುವುದರೊಂದಿಗೆ ಒಟ್ಟು ಮೀಸಲು ಪ್ರಮಾಣವನ್ನು ಶೇ.49.5ಕ್ಕೆ ಹೆಚ್ಚಿಸಲು ಶಿಫಾರಸು ಮಾಡಿತು.ಮುಂದೆ ಪ್ರಧಾನಿಯಾದ ವಿ.ಪಿ.ಸಿಂಗ್ 1989ರಲ್ಲಿ ಮಂಡಲ್ ವರದಿ ಜಾರಿಗೊಳಿಸಿದರು. ಈ ಮೂಲಕ ಒಬಿಸಿ ವರ್ಗಕ್ಕೆ ಶೇ.27 ಪ್ರತ್ಯೇಕ ಮೀಸಲಾತಿ ನೀಡುವ ಪರಿಪಾಠ ಚಾಲನೆಗೆ ಬಂತು.
Thanks
ಧನ್ಯವಾದಗಳು ಸರ್
thank u
Thanks sir