ಜಗತ್ತಿನ ಅತಿ ದೊಡ್ಡ ಸಾಗರ ಸಂರಕ್ಷಿತ ಪ್ರದೇಶ (Marine Protected Area) ರಚಿಸದ ಅಮೆರಿಕ
ವಿಶ್ವದ ಅತಿದೊಡ್ಡ ಸಾಗರ ಸಂರಕ್ಷಿತ ಪ್ರದೇಶವನ್ನು ಅಮೆರಿಕಾದಲ್ಲಿ ರಚಸಿಲಾಗಿದೆ. ಪಾಪಾನೊಮ್ಮೌವ್ಕುಕಿ ಸಾಗರ ರಾಷ್ಟ್ರೀಯ ಸ್ಮಾರಕ (Papahanaumokuakea Marine National Monument)ಹೆಸರಿನ ಈ ಸಂರಕ್ಷಿತ ಪ್ರದೇಶವನ್ನು ಪ್ರಸ್ತುತ ಇರುವ ಹವಾಯಿ ರಾಷ್ಟ್ರೀಯ ಸ್ಮಾರಕ ಪ್ರದೇಶದ ವಿಸ್ತೀರ್ಣವನ್ನು ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮರವರು ವಿಸ್ತರಿಸಿದ್ದು ಜಗತ್ತಿನ ಅತಿ ದೊಡ್ಡ ಸಾಗರ ಸಂರಕ್ಷಿತ ಪ್ರದೇಶವೆನಿಸಿದೆ.
- ವಿಸ್ತರಣದ ನಂತರ ಪಾಪಾನೊಮ್ಮೌವ್ಕುಕಿ ಸಾಗರ ರಾಷ್ಟ್ರೀಯ ಸ್ಮಾರಕದ ವಿಸ್ತೀರ್ಣತೆ 582,578 ಚದರ ಮೀಟರಷ್ಟಿದ್ದು, ಮೂಲ ವಿಸ್ತೀರ್ಣತೆಗಿಂತ ನಾಲ್ಕುಪಟ್ಟು ಹೆಚ್ಚಾಗಿದೆ.
- ಈ ಪ್ರದೇಶದ ವಿಸ್ತರಣೆತೆಯಿಂದ ಸುಮಾರು 7000ಕ್ಕೂ ಹೆಚ್ಚು ಪ್ರಭೇದಗಳ ಸಂರಕ್ಷಣೆಗೆ ಅನುಕೂಲವಾಗಲಿದೆ. ಅಲ್ಲದೇ ಸಾಗರ ಆಮ್ಲೀಕರಣ ಮತ್ತು ತಾಪಾಮಾನ ನಿರ್ವಹಣೆಯಲ್ಲೂ ಪ್ರಮುಖ ಪಾತ್ರವಹಿಸಲಿದೆ.
- ಈ ಸಾಗರ ಸಂರಕ್ಷಿತ ಪ್ರದೇಶವೂ ಹವಳದ ಬಂಡೆಗಳಿಗೆ ಶಾಶ್ವತ ನೆಲೆ ಕಲ್ಪಿಸಲಿದೆ. ಅಲ್ಲದೇ ಅಪರೂಪದ ತಿಮಿಂಗಿಲ ಮತ್ತು ಸಮುದ್ರ ಆಮೆಗಳಂತಹ ಸಮುದ್ರ ಆಳದಲ್ಲಿ ಜೀವಿಸುವ ಜಲಜೀವಿಗಳ ವಾಸಕ್ಕೆ ಯೋಗ್ಯ ನೆಲೆಯಾಗಲಿದೆ.
- 2006ರಲ್ಲಿ ಮೊದಲ ಬಾರಿಗೆ ಜಾರ್ಜ್ ಬುಷ್ ಅವರು ಈ ಪ್ರದೇಶವನ್ನು ಸಾಗರ ಸಂರಕ್ಷಿತ ಪ್ರದೇಶವೆಂದು ಘೋಷಿಸಿದ್ದರು. ಆಗ ಇದನ್ನು ನಾರ್ಥ್ ವೆಸ್ಟರ್ನ್ ಐಲ್ಯಾಂಡ್ಸ್ ಮೆರೈನ್ ನ್ಯಾಷನಲ್ ಮೊನುಮೆಂಟ್ ಎಂದು ಹೆಸರಿಡಲಾಗಿತ್ತು. ತದನಂತರ ಇದನ್ನು ಪಾಪಾನೊಮ್ಮೌವ್ಕುಕಿ ಸಾಗರ ರಾಷ್ಟ್ರೀಯ ಸ್ಮಾರಕವೆಂದು ಮರುನಾಮಕರಣ ಮಾಡಲಾಯಿತು.
ಪಾಕಿಸ್ತಾನದ ಇಸ್ಲಮಾಬಾದ್ ನಲ್ಲಿ 19ನೇ ಸಾರ್ಕ್ ಸಮ್ಮೇಳನ
ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಒಕ್ಕೂಟ (SAARC) ರಾಷ್ಟ್ರಗಳ 19ನೇ ಸಮ್ಮೇಳನ ಪಾಕಿಸ್ತಾನದ ಇಸ್ಲಮಾಬಾದ್ ನಲ್ಲಿ ನವೆಂಬರ್ 9-10 ರಂದು ನಡೆಯಲಿದೆ. ಈ ಸಮ್ಮೇಳನದಲ್ಲಿ ಸಾರ್ಕ್ನ ಎಂಟು ರಾಷ್ಟ್ರಗಳ ನಾಯಕರು ಭಾಗವಹಿಸಲಿದ್ದಾರೆ. ಇದರ ಜೊತೆ ಸಾರ್ಕ್ ವೀಕ್ಷಣಾ ಸ್ಥಾನಪಡೆದಿರುವ ಒಂಬತ್ತು ರಾಷ್ಟ್ರಗಳು ಸಹ ಪಾಲ್ಗೊಳ್ಳಲಿವೆ. 18ನೇ ಸಾರ್ಕ್ ಸಮ್ಮೇಳನ 2014 ರಲ್ಲಿ ನೇಪಾಳದ ಕಠ್ಮಂಡುವಿನಲ್ಲಿ ಆಯೋಜಿಸಲಾಗಿತ್ತು. ಈ ಸಮ್ಮೇಳನದಲ್ಲಿ ಸಾರ್ಕ್ ರಾಷ್ಟ್ರಗಳ ನಡುವೆ ವ್ಯವಸ್ಥಿತ ಸಂಪರ್ಕ ಕಲ್ಪಿಸಿ ಸಾರಿಗೆ ಸೌಲಭ್ಯ ಅಭಿವೃದ್ದಿಪಡಿಸಲು ಹೆಚ್ಚು ಒತ್ತು ನೀಡಲಾಗಿತ್ತು.
ಸಾರ್ಕ್ ಬಗ್ಗೆ:
- ಸಾರ್ಕ್ ದಕ್ಷಿಣ ಏಷ್ಯಾದ ಒಂದು ಪ್ರಾದೇಶೀಕ ಹಾಗೂ ಭೌಗೋಳಿಕ-ರಾಜಕೀಯ ಒಕ್ಕೂಟವಾಗಿದೆ. ವಿಶ್ವದ ಶೇ 3% ವಿಸ್ತೀರ್ಣತೆ, ಶೇ 21% ವಿಶ್ವದ ಜನಸಂಖ್ಯೆಯನ್ನು ಇದು ಹೊಂದಿದೆ.
- ಬಾಂಗ್ಲದೇಶದ ಮಾಜಿ ಅಧ್ಯಕ್ಷರಾದ ಝಯಿರ್ ರೆಹಮಾನ್ ಅವರು 1980 ರಲ್ಲಿ ಸಾರ್ಕ್ ಒಕ್ಕೂಟದ ಕಲ್ಪನೆಯನ್ನ ಹುಟ್ಟುಹಾಕಿದರು. ಆನಂತರ 1985 ರಲ್ಲಿ ಸಾರ್ಕ್ ಒಕ್ಕೂಟವನ್ನು ರಚಿಸಲಾಯಿತು. ಇದರ ಮೊದಲ ಸಮ್ಮೇಳನ ಬಾಂಗ್ಲದೇಶದ ಡಾಕಾದಲ್ಲಿ ಡಿಸೆಂಬರ್ 1985ರಲ್ಲಿ ನಡೆಯಿತು. ಸಾರ್ಕ್ ಕೇಂದ್ರ ಕಚೇರಿ ನೇಪಾಳದ ಕಠ್ಮಂಡುವಿನಲ್ಲಿದೆ.
- ಬಾಂಗ್ಲಾದೇಶ, ಭೂತಾನ, ಭಾರತ, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ, ಮತ್ತು ಶ್ರೀಲಂಕಾ ಇದರ ಮೂಲ ಸದಸ್ಯ ರಾಷ್ಟ್ರಗಳಾಗಿದ್ದವು. 2006ರಲ್ಲಿ ಈ ಸಮೂಹದ ಎಂಟನೇ ಸದಸ್ಯನಾಗಿ ಅಫ್ಘಾನಿಸ್ತಾನವನ್ನು ಸೇರಿಸಿಕೊಳ್ಳಲಾಯಿತು.
- ಆಸ್ಟ್ರೇಲಿಯಾ, ಚೀನಾ, ಯುರೋಪಿಯನ್ ಯೂನಿಯನ್, ಜಪಾನ್, ಇರಾನ್, ಮಾರಿಷಸ್, ಮಯನ್ಮಾರ್, ದಕ್ಷಿಣ ಕೊರಿಯಾ ಮತ್ತು ಅಮೆರಿಕಾ ಸಾರ್ಕ್ ನ ಒಂಬತ್ತು ವೀಕ್ಷಣಾ (Observer) ರಾಷ್ಟ್ರಗಳಾಗಿವೆ.
- ಅರ್ಜುನ್ ಬಹದ್ದೂರ್ ಥಾಪ ರವರು ಸಾರ್ಕ್ ನ ಪ್ರಸ್ತುತ ಸೆಕ್ರೆಟರಿ ಜನರಲ್ ಆಗಿದ್ದಾರೆ.
22ನೇ ದೆಹಲಿ ಪುಸ್ತಕ ಮೇಳ (Delhi Book Fair )ಆರಂಭ
ಇಪ್ಪತ್ತೆರಡನೇ ದೆಹಲಿ ಪುಸ್ತಕ ಮೇಳ ದೆಹಲಿಯ ಪ್ರಗತಿ ಮೈದಾನದಲ್ಲಿ ಆರಂಭಗೊಂಡಿತು. ಒಂಬತ್ತು ದಿನಗಳ ಕಾಲ ನಡೆಯಲಿರುವ ಈ ಮೇಳ ಸೆಪ್ಟೆಂಬರ್ 4 ರಂದು ಮುಕ್ತಾಯವಾಗಲಿದೆ. ಪ್ರಸ್ತಕ ಸಾಲಿನ ಪುಸ್ತಕ ಮೇಳದಲ್ಲಿ ಸರ್ವ ಶಿಕ್ಷಣ ಅಭಿಯಾನದಡಿ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಒತ್ತು ನೀಡಲಾಗಿದ್ದು, ಆ ಮೂಲಕ ಯುವ ಜನತೆಯಲ್ಲಿ ಓದುವ ಅಭ್ಯಾಸವನ್ನು ಪ್ರೋತ್ಸಾಹಿಸುವುದಾಗಿದೆ.
- ಇಂಡಿಯನ್ ಟ್ರೇಡ್ ಪ್ರಮೋಶನ್ ಆರ್ಗನೈಸೇಶನ್ (ITPO) ಈ ಪುಸ್ತಕ ಮೇಳವನ್ನು ಫೆಡರೇಷನ್ ಆಫ್ ಇಂಡಿಯನ್ ಪಬ್ಲೀಷರ್ಸ್ ಜೊತೆಗೂಡಿ ಆಯೋಜಿಸುತ್ತಿದೆ.
- ಕೇಂದ್ರ ಸರ್ಕಾರ ಕಳೆದ ಎರಡು ವರ್ಷಗಳಲ್ಲಿ ಹಮ್ಮಿಕೊಂಡಿರುವ ರಾಷ್ಟ್ರಮಟ್ಟದ ಅಭಿಯಾನಗಳನ್ನು ಈ ಮೇಳದಲ್ಲಿ ಪ್ರದರ್ಶಿಸಲಾಗುವುದು. ಕೇಂದ್ರ ಸರ್ಕಾರದ ಮಹತ್ವದ ಕಾರ್ಯಕ್ರಮಗಳಾದ ಸ್ವಚ್ಚ ಭಾರತ ಅಭಿಯಾನ, ಡಿಜಿಟಲ್ ಇಂಡಿಯಾ, ಸ್ಟಾರ್ಟ್ ಆಫ್ ಇಂಡಿಯಾ ಈ ಬಾರಿಯ ಪ್ರಮುಖ ಆಕರ್ಷಣೆಗಳಾಗಿವೆ.
- ಇವಲ್ಲದೇ ವಿವಿಧ ಬಗೆಯ ಕತೆ, ಕಾದಂಬರಿ, ಅಕಾಡೆಮಿ ಪುಸ್ತಕಗಳನ್ನು ಮೇಳದಲ್ಲಿ ಪ್ರದರ್ಶಿಸಲಾಗುವುದು.
- ಭಾರತದ ಮತ್ತು ವಿದೇಶದ ಪುಸ್ತಕ ಪ್ರಕಟಣಗಾರರು, ಪುಸ್ತಕ ವ್ಯಾಪಾರಿಗಳು, ವಿತರಕರು, ವಿದ್ಯಾ ಸಂಸ್ಥೆಗಳು ಮತ್ತು ನಿಯತಕಾಲಿಕೆ ಪ್ರಕಟಣಗಾರರು ಈ ಮೇಳದಲ್ಲಿ ಭಾಗವಹಿಸಲಿದ್ದಾರೆ.