ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 30, 2016
Question 1 |
1.ಯಾವ ಬ್ಯಾಂಕ್ ಇತ್ತೀಚೆಗೆ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಸೌಲಭ್ಯ ನೀಡುವ “ಎಂಪವರ್” ಹೆಸರಿನ ಮೊಬೈಲ್ ಆಫ್ ಪರಿಚಯಿಸಿತು?
ಸಿಂಡಿಕೇಟ್ ಬ್ಯಾಂಕ್ | |
ಕೆನರಾ ಬ್ಯಾಂಕ್ | |
ವಿಜಯಾ ಬ್ಯಾಂಕ್ | |
ಭಾರತೀಯ ಸ್ಟೇಟ್ ಬ್ಯಾಂಕ್ |
ಕರ್ನಾಟಕ ಮೂಲದ ಕೆನರಾ ಬ್ಯಾಂಕ್ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಸೌಲಭ್ಯ ನೀಡುವ “ಎಂಪವರ್” ಹೆಸರಿನ ಮೊಬೈಲ್ ಆಫ್ ಪರಿಚಯಿಸಿದೆ. ಎಂಪವರ್’ (empower) ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್ನಿಂದ ಡೌನ್ಲೋಡ್ ಮಾಡಿಕೊಂಡು ಬ್ಯಾಂಕ್ ಖಾತೆಯ ವಿವರಗಳನ್ನು ಬಹಿರಂಗಪಡಿಸದೆ ಸುಲಭವಾಗಿ ಹಣ ರವಾನಿಸಬಹುದು. ಕೆನರಾ ಬ್ಯಾಂಕ್ನ ಗ್ರಾಹಕರಲ್ಲದವರೂ ಈ ಅಪ್ಲಿಕೇಷನ್ ನೆರವಿನಿಂದ ಇತರ ಬ್ಯಾಂಕ್ಗಳಲ್ಲಿನ ತಮ್ಮ ಖಾತೆಗಳ ಮೂಲಕ ಹಣಕಾಸು ಸೇವೆಗಳನ್ನು ನಿರ್ವಹಿಸಬಹುದಾಗಿದೆ.
Question 2 |
2.ಅಂತಾರಾಷ್ಟ್ರೀಯ ನಿರ್ಸಗ ಸಂರಕ್ಷಣ ಸಂಸ್ಥೆ (IUCN) ನೀಡುವ ಹೆರಿಟೇಜ್ ಹೀರೋಸ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಏಷ್ಯಾದ ಮೊದಲಿಗ ಯಾರು?
ಉಲ್ಲಾಸ್ ಕಾರಂತ್ | |
ಬಿಭೂತಿ ಲಹ್ಕರ್ | |
ಆಂಡ್ರ್ಯೂ ಥಾಮ್ಸನ್ | |
ಕೇವಿನ್ ಪೀಟರ್ |
ಪರಿಸರವಾದಿ ಮತ್ತು ಪರಿಸರ ಸಂರಕ್ಷಣಗಾರ ಭಾರತದ ಡಾ. ಬಿಭೂತಿ ಲಹ್ಕರ್ ಅವರು ಅಂತಾರಾಷ್ಟ್ರೀಯ ನಿರ್ಸಗ ಸಂರಕ್ಷಣ ಸಂಸ್ಥೆ ನೀಡುವ ಹೆರಿಟೇಜ್ ಹೀರೋಸ್ (Heritage Heroes) ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಆ ಮೂಲಕ ಈ ಪ್ರತಿಷ್ಠಿತ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಏಷ್ಯಾದ ಅದರಲ್ಲೂ ಅಸ್ಸಾಂನ ಮೊದಲಿಗರೆನಿಸಿದ್ದಾರೆ. ಪ್ರಶಸ್ತಿಯನ್ನು ವಿಶ್ವದಾದ್ಯಂತ ಪರಿಸರ ಸಂರಕ್ಷಣೆಗೆ ಅಗಾಧ ಕೊಡುಗೆ ನೀಡುವ ಪರಿಸರ ಸಂರಕ್ಷಣಗಾರರಿಗೆ ನೀಡಲಾಗುತ್ತಿದೆ. ಡಾ.ಬಿಭೂತಿ ಲಹ್ಕರ್ ಅವರು ಮಾನಸ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲ್ಲುಗಾವಲು, ಸಸ್ಯ ಮತ್ತು ಪ್ರಾಣಿ ಸಂಕುಲಗಳ ಸಂರಕ್ಷಣೆಗೆ ಸತತ ಎರಡು ದಶಕಗಳಿಂದ ಶ್ರಮಿಸುತ್ತಿದ್ದಾರೆ.
Question 3 |
3.ಯಾವ ದೇಶದಲ್ಲಿ “2016 ಟೊಕಿಯೊ ಇಂಟರ್ ನ್ಯಾಷನಲ್ ಕಾನ್ಪೆರನ್ಸ್ ಆನ್ ಆಫ್ರಿಕನ್ ಡೆವಲಪ್ಮೆಂಟ್ (2016 Tokyo International Conference on African Development (TICAD)”ಅನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು?
ಜಪಾನ್ | |
ನೈಜೀರಿಯಾ | |
ಕೀನ್ಯಾ | |
ತಾಂಜಾನಿಯ |
6ನೇ ಟೊಕಿಯೊ ಇಂಟರ್ ನ್ಯಾಷನಲ್ ಕಾನ್ಪೆರನ್ಸ್ ಆನ್ ಆಫ್ರಿಕನ್ ಡೆವಲಪ್ಮೆಂಟ್ ಕೀನ್ಯಾದ ನೈರೋಬಿಯಲ್ಲಿ ಆಗಸ್ಟ್ 27-28 ರಂದು ನಡೆಯಿತು. ಇದೇ ಮೊದಲ ಬಾರಿಗೆ ಆಫ್ರಿಕಾದಲ್ಲಿ ಈ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಆರ್ಥಿಕ ವಿಭಿನ್ನತೆ ಮತ್ತು ಕೈಗಾರೀಕರಣದ ಮೂಲಕ ಆರ್ಥಿಕತೆ ಸುಧಾರಿಸುವುದು ಮತ್ತು ಗುಟಮಟ್ಟದ ಜೀವನಕ್ಕಾಗಿ ಆರೋಗ್ಯ ವ್ಯವಸ್ಥೆಯನ್ನು ಉತ್ತಮಪಡಿಸುವುದು ಈ ಸಮ್ಮೇಳನದ ಮೂಲ ತಿರುಳಾಗಿದೆ.
Question 4 |
4.ಈ ಕೆಳಗಿನ ಯಾವ ದೇಶ ಮುಂದಿನ ಏಷ್ಯನ್ ಟೆನ್ನಿಸ್ ಟೂರ್ ಟೂರ್ನಿಯ ಆತಿಥ್ಯವಹಿಸಲಿದೆ?
ಬಾಂಗ್ಲದೇಶ | |
ನೇಪಾಳ | |
ಭೂತಾನ್ | |
ಭಾರತ |
ಮುಂಬರುವ ಏಷ್ಯನ್ ಟೆನಿಸ್ ಟೂರ್ ಟೂರ್ನಿಯು ಭೂತಾನ್ನಲ್ಲಿ ನಡೆಯಲಿದೆ. ಇದರೊಂದಿಗೆ ಭೂತಾನ್ ಪ್ರತಿಷ್ಠಿತ ಟೂರ್ನಿಯ ಆತಿಥ್ಯ ವಹಿಸುತ್ತಿರುವ ಏಷ್ಯಾದ ನಾಲ್ಕನೇ ರಾಷ್ಟ್ರ ಎನಿಸಿದೆ. ಈ ಮೊದಲು ಭಾರತ, ಥಾಯ್ಲೆಂಡ್ ಮತ್ತು ಇರಾನ್ನಲ್ಲಿ ಟೂರ್ನಿ ನಡೆದಿತ್ತು. ಎಟಿಟಿ ಟೂರ್ನಿ ಸೆಪ್ಟೆಂಬರ್ 16ರಿಂದ 18 ರವರೆಗೆ ನಡೆಯಲಿದ್ದು, ಭೂತಾನ್ ನಲ್ಲಿ ಆಯೋಜನೆಯಾಗಿರುವ ಪ್ರಥಮ ಅಂತರರಾಷ್ಟ್ರೀಯ ಟೂರ್ನಿಯಾಗಿದೆ.
Question 5 |
5.ಭಾರತದ ಮೊದಲ ಜವಳಿ ವಿಶ್ವವಿದ್ಯಾಲಯ(Textile University) ಯಾವ ರಾಜ್ಯದಲ್ಲಿ ಸ್ಥಾಪನೆಯಾಗಲಿದೆ?
ಕರ್ನಾಟಕ | |
ಗುಜರಾತ್ | |
ಮಧ್ಯ ಪ್ರದೇಶ | |
ಜಾರ್ಖಂಡ್ |
ಗುಜರಾತ್ನ ಸೂರತ್ ನಲ್ಲಿ ದೇಶದ ಮೊದಲ ಜವಳಿ ವಿಶ್ವವಿದ್ಯಾಲಯ ಸ್ಥಾಪನೆಗೊಳ್ಳಲಿದೆ. ಸುಮಾರು ರೂ 800-900 ಕೋಟಿ ವೆಚ್ಚವನ್ನು ಗುಜರಾತ್ ಸರ್ಕಾರ ಇದಕ್ಕಾಗಿ ವ್ಯಯಿಸಲಿದ್ದು, ಮುಂದಿನ ವರ್ಷದ ಅಂತ್ಯಕ್ಕೆ ಕಾರ್ಯಾರಂಭ ಮಾಡಲಿದೆ. ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಂಶೋಧನೆ, ತಂತ್ರಜ್ಞಾನ ಮತ್ತು ನುರಿತ ನೌಕರ ಸಂಪನ್ಮೂಲ ಅಭಿವೃದ್ದಿ ಮಾಡುವ ಉದ್ದೇಶದೊಂದಿಗೆ ಈ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುತ್ತಿದೆ.
Question 6 |
6.ರಾಷ್ಟ್ರೀಯ ಕ್ರೀಡಾ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
ಆಗಸ್ಟ್ 26 | |
ಆಗಸ್ಟ್ 27 | |
ಆಗಸ್ಟ್ 29 | |
ಆಗಸ್ಟ್ 31 |
ರಾಷ್ಟ್ರೀಯ ಕ್ರೀಡಾ ದಿನವನ್ನು ಪ್ರತಿವರ್ಷ ಆಗಸ್ಟ್ 29 ರಂದು ಆಚರಿಸಲಾಗುತ್ತದೆ. ಹಾಕಿ ದಂತಕಥೆ ಮೇಜರ್ ಧ್ಯಾನ್ ಚಂದ್ ಅವರ ಹುಟ್ಟಹಬ್ಬವನ್ನು ಕ್ರೀಡಾದಿನವೆಂದು ಆಚರಿಸಲಾಗುವ ಮೂಲಕ ಗೌರವಸಲ್ಲಿಸಲಾಗುತ್ತಿದೆ. ಈ ದಿನದಂದು ರಾಷ್ಟ್ರಪತಿಗಳು ಕ್ರೀಡಾ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದವರಿಗೆ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ವಿತರಿಸುವರು.
Question 7 |
7.2015ನೇ ಸಾಲಿನ ಪ್ರತಿಷ್ಠಿತ ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?
ವಿವೇಕ್ ಸೇಠ್ | |
ಪದ್ಮ ಸಚ್ದೇವ | |
ದೀನನಾಥ ದೇಸಾಯಿ | |
ಸುಚಿತ್ರ ಭೂಷಣ್ |
ಖ್ಯಾತ ಡೊಗ್ರಿ ಭಾಷೆಯ ಕವಯತ್ರಿ ಮತ್ತು ಕಾದಂಬರಿಗಾರ್ತಿ ಪದ್ಮ ಸಚ್ದೇವ್ ಅವರಿಗೆ ಪ್ರತಿಷ್ಠಿತ 2015ನೇ ಸಾಲಿನ ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಸಚ್ದೇವ್ ಅವರ ಆತ್ಮಕತೆ ಚಿತ್-ಚೇಟೆ (Chit-Chete)ಗಾಗಿ ಈ ಪ್ರಶಸ್ತಿ ಆಯ್ಕೆಯಾಗಿದೆ. ಚಿತ್-ಚೇಟೆ ಕೃತಿಯನ್ನು ಡೊಗ್ರಿ ಭಾಷೆಯಲ್ಲಿ ರಚಿಸಲಾಗಿದ್ದು, 2007 ರಲ್ಲಿ ಪ್ರಕಟಗೊಂಡಿದೆ.
Question 8 |
8.ಯಾವ ರಾಜ್ಯದಲ್ಲಿ ಇತ್ತೀಚೆಗೆ ಪ್ರಧಾನಿ ಮೋದಿ ರವರು “ಸೌನಿ” ನೀರಾವರಿ ಯೋಜನೆಗೆ ಚಾಲನೆ ನೀಡಿದರು?
ಗುಜರಾತ್ | |
ರಾಜಸ್ತಾನ | |
ಪಂಜಾಬ್ | |
ಹರಿಯಾಣ |
ಸೌರಾಷ್ಟ್ರ ನರ್ಮದಾ ಅವತರಣ್ ಇರಿಗೇಷನ್ (ಸೌನಿ) ಯೋಜನೆಯ ಮೊದಲ ಹಂತಕ್ಕೆ ಪ್ರಧಾನಿ ಮೋದಿ ಅವರು ಗುಜರಾತ್ ನ ಜಾಮ್ ನಗರದ ಸನೊದರ ಬಳಿ ಚಾಲನೆ ನೀಡಿದರು. ಸೌನಿ ಯೋಜನೆ ಗುಜರಾತ್ನ ಬರಪೀಡಿತ ಪ್ರದೇಶವಾದ ಸೌರಾಷ್ಟ್ರ ಭಾಗದ ನೀರಿನ ಸಮಸ್ಯೆಗಳನ್ನು ಬಗೆಹರಿಸುವ ವಿವಿಧೋದ್ದೇಶ ಯೋಜನೆಯಾಗಿದೆ. ಸರ್ದಾರ್ ಸರೋವರ ಅಣೆಕಟ್ಟಿನಿಂದ ಹೆಚ್ಚಿನ ನೀರನ್ನು ಸೌರಾಷ್ಟ್ರ ಭಾಗದ 115 ಅಣೆಕಟ್ಟುಗಳಿಗೆ ಹರಿಸಿ ತುಂಬಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಸೌನಿ ಯೋಜನೆಯನ್ನು 2012ರಲ್ಲಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಘೋಷಿಸಲಾಗಿತ್ತು. ಸೌರಾಷ್ಟ್ರ ಭಾಗವು 11 ಜಿಲ್ಲೆಗಳನ್ನು ಒಳಗೊಂಡಿದ್ದು, ತೀವ್ರ ಮಳೆಯ ಕೊರತೆಯಿಂದ ಜಲಕ್ಷಾಮ ಎದಿರುಸುತ್ತಿರುವ ಭಾಗವಾಗಿದೆ.
Question 9 |
9.ಈ ಕೆಳಗಿನ ಯಾವ ರಾಜ್ಯದಲ್ಲಿ “2016 ಬ್ರಿಕ್ಸ್ ಕನ್ವೆನ್ಷನ್ ಆನ್ ಟೂರಿಸಂ (BRICS Convention on Tourism)”ಗೆ ಇತ್ತೀಚೆಗೆ ಚಾಲನೆ ನೀಡಲಾಯಿತು?
ತೆಲಂಗಣ | |
ಆಂಧ್ರ ಪ್ರದೇಶ | |
ಮಧ್ಯ ಪ್ರದೇಶ | |
ಮಹಾರಾಷ್ಟ್ರ |
ಮಧ್ಯಪ್ರದೇಶದ ಖಜುರಾಹೋ 2016 ಬ್ರಿಕ್ಸ್ ಕನ್ವೆನ್ಷನ್ ಆನ್ ಟೂರಿಸಂಗೆ ಚಾಲನೆ ನೀಡಲಾಯಿತು. ಸೆಪ್ಟೆಂಬರ್ 1 ರಿಂದ ಆರಂಭಗೊಂಡ ಎರಡು ದಿನಗಳ ಈ ಸಮ್ಮೇಳನದಲ್ಲಿ ಬ್ರಿಕ್ಸ್ ರಾಷ್ಟ್ರಗಳ ನಡುವೆ ಪ್ರವಾಸೋಧ್ಯಮ ಪ್ರೋತ್ಸಾಹಿಸುವ ಸಲುವಾಗಿ ಚರ್ಚೆ ನಡೆಯಲಿದೆ.
Question 10 |
10.ಭಾರತದ ಮೊದಲ ಮಿಲಿಟರಿ ಪರಂಪರೆಯ ವೆಬ್ ಸೈಟ್ ಅನ್ನು ಈ ಕೆಳಗಿನ ಯಾವ ಸಂಸ್ಥೆ ಆರಂಭಿಸಿದೆ?
Glory Foundation | |
Colors Foundation | |
Sports Coaching Foundation | |
New India Foundation |
ದೇಶದ ಮೊದಲ ಮಿಲಿಟರಿ ಪರಂಪರೆ ವೆಬ್ ಸೈಟ್ Colorsofglory.org ಅನ್ನು ಗ್ಲೋರಿ ಫೌಂಡೇಷನ್ ಆರಂಭಿಸಿದೆ. ದೇಶದ ಪ್ರಮುಖ ನಗರಗಳಲ್ಲಿ ದೇಶದ ಮಿಲಿಟರಿ ಇತಿಹಾಸ ಮತ್ತು ಪರಂಪರೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಈ ಸಂಸ್ಥೆ ಹಮ್ಮಿಕೊಳ್ಳಲಿದೆ.
ಧನ್ಯವಾದಗಳು ಸರ್
Very knowledge full information.. thank u Karunadu exams