ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 31, 2016
Question 1 |
1.2016 ಲಾಜಿಸ್ಟಿಕ್ ಸಾಧನೆ ಸೂಚ್ಯಂಕ (Logistic Performance Index)ದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?
23 | |
66 | |
35 | |
78 |
ವಿಶ್ವಬ್ಯಾಂಕ್ ಇತ್ತೀಚೆಗೆ ಹೊರತಂದಿರುವ 2016 ಲಾಜಿಸ್ಟಿಕ್ ಸಾಧನೆ ಸೂಚ್ಯಂಕದಲ್ಲಿ 160 ದೇಶಗಳ ಪೈಕಿ ಭಾರತ 35ನೇ ಸ್ಥಾನವನ್ನು ಪಡೆದುಕೊಂಡಿದೆ. “ಕನೆಕ್ಟಿಂಗ್ ಟು ಕಂಪ್ಲೀಟ್-2016” ಹೆಸರಿನಡಿ ಈ ವರದಿಯನ್ನು ಬಿಡುಗಡೆಗೊಳಿಸಲಾಗಿದೆ. ಈ ಸೂಚ್ಯಂಕವನ್ನು ವಿಶ್ವಬ್ಯಾಂಕ್ ಎರಡು ವರ್ಷಗಳಿಗೊಮ್ಮೆ ಬಿಡುಗಡೆಗೊಳಿಸುತ್ತಿದ್ದು, 2014 ರ ಸೂಚ್ಯಂಕದಲ್ಲಿ ಭಾರತ 54ನೇ ಸ್ಥಾನದಲ್ಲಿತ್ತು. 2016 ಸೂಚ್ಯಂಕದಲ್ಲಿ ಜರ್ಮನಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.
Question 2 |
2.ಭಾರತದ ಮೊದಲ ನದಿ ದ್ವೀಪ ಜಿಲ್ಲೆ ಎನಿಸಿರುವ “ಮಜುಲಿ (Majuli)” ಯಾವ ರಾಜ್ಯದಲ್ಲಿದೆ?
ಅಸ್ಸಾಂ | |
ಅರುಣಾಚಲ ಪ್ರದೇಶ | |
ಮಣಿಪುರ | |
ಸಿಕ್ಕಿಂ |
ಪ್ರಪಂಚದ ಅತಿದೊಡ್ಡ ದ್ವೀಪ ಪ್ರದೇಶ ಮಜುಲಿಯನ್ನು ಜಿಲ್ಲೆಯನ್ನಾಗಿ ಪರಿವರ್ತಿಸಲು ಅಸ್ಸಾಂ ಸರ್ಕಾರ ತೀರ್ಮಾನಿಸಿದ್ದು, ಸೆಪ್ಟೆಂಬರ್ 8 ರಿಂದ ಜಿಲ್ಲೆ ಸ್ಥಾನಮಾನವನ್ನು ಅಧಿಕೃತವಾಗಿ ಪಡೆದುಕೊಳ್ಳಲಿದೆ. ಆ ಮೂಲಕ ಭಾರತದ ಮೊದಲ ನದಿ ದ್ವೀಪ ಜಿಲ್ಲೆ ಎಂಬ ಖ್ಯಾತಿಗೆ ಮಜುಲಿ ಪಾತ್ರವಾಗಿದೆ. ಬ್ರಹ್ಮಪುತ್ರ ನದಿ ತಿರುವಿನಿಂದ ಮಜುಲಿ ದ್ವೀಪ ಪ್ರದೇಶ ಉಂಟಾಗಿದೆ. ಮಿಶಿಂಗ್ ಹೆಸರಿನ ಬುಡಕಟ್ಟು ಜನರು ಹೆಚ್ಚಾಗಿ ಈ ದ್ವೀಪ ಪ್ರದೇಶದಲ್ಲಿ ಕಂಡುಬರುತ್ತಾರೆ.
Question 3 |
3.ಉಜಲ (UJALA) ಯೋಜನೆಯಡಿ ಎರಡು ಕೋಟಿ ಎಲ್ಇಡಿ ಬಲ್ಬ್ ಗಳನ್ನು ವಿತರಿಸಿದ ಮೊದಲ ರಾಜ್ಯ ಯಾವುದು?
ಗುಜರಾತ್ | |
ಕರ್ನಾಟಕ | |
ತಮಿಳು ನಾಡು | |
ಆಂಧ್ರ ಪ್ರದೇಶ |
ಕೇಂದ್ರ ಸರ್ಕಾರದ “ಉನ್ನತ್ ಜ್ಯೋತಿ ಬೈ ಅಪರ್ಡಬಲ್ ಎಲ್ಇಡಿ ಬಲ್ಬ್ಸ್ ಫಾರ್ ಆಲ್” ಅಥವಾ ಉಜಲ ಯೋಜನೆಯಡಿ ಎರಡು ಕೋಟಿ ಎಲ್ಇಡಿ ಬಲ್ಬ್ ಗಳನ್ನು ವಿತರಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಗುಜರಾತ್ ಪಾತ್ರವಾಗಿದೆ. ಕೇವಲ 96 ದಿನಗಳಲ್ಲಿ 42 ಲಕ್ಷ ಕುಟುಂಬಗಳಿಗೆ ಬಲ್ಬ್ಸ್ ವಿತರಿಸುವ ಮೂಲಕ ಈ ಸಾಧನೆಗೈದಿದೆ.
Question 4 |
4.“ಪ್ರಕಂಪನ (Prakampana)-2016” ವಿಪತ್ತು ನಿರ್ವಹಣಾ ಅಭ್ಯಾಸ ಇತ್ತೀಚೆಗೆ ಎಲ್ಲಿ ಆರಂಭಗೊಂಡಿತು?
ಚೆನ್ನೈ | |
ವಿಶಾಖಪಟ್ಟಣಂ | |
ಕಾರವಾರ | |
ಮುಂಬೈ |
ಪ್ರಕಂಪನ ಹೆಸರಿನ ವಾರ್ಷಿಕ ಜಂಟಿ ವಿಪತ್ತು ನಿರ್ವಹಣಾ ಅಭ್ಯಾಸವನ್ನು ವಿಶಾಖಪಟ್ಟಣದ ಈಸ್ಟರ್ನ್ ನಾವಲ್ ಕಮಾಂಡ್ನಲ್ಲಿ ಆರಂಭಿಸಲಾಗಿದೆ. ಪ್ರಕಂಪನ ಎಂದರೆ ಸಂಸ್ಕೃತಿಯಲ್ಲಿ ಸೈಕ್ಲೋನ್ ಎಂದರ್ಥ. ಸೂಪರ್ ಚಂಡಮಾರುತ ಸಂದರ್ಭದಲ್ಲಿ ವಿಪತ್ತು ನಿರ್ವಹಣೆ ಮತ್ತು ಹೇಗೆ ಸಹಾಯ ಮಾಡಬೇಕು ಎನ್ನುವ ಬಗ್ಗೆ ತರಭೇತಿಯನ್ನು ಈ ಅಭ್ಯಾಸದಲ್ಲಿ ನೀಡಲಾಗುವುದು. ಭಾರತೀಯ ನೌಕಪಡೆ ಈ ಅಭ್ಯಾಸವನ್ನು ಆಯೋಜಿಸುತ್ತಿದೆ.
Question 5 |
5. “ದಿ ಅಸಸಿನೇಷನ್ ಆಫ್ ರಾಜೀವ್ ಗಾಂಧಿ: ಆನ್ ಇನ್ಸೈಡ್ ಜಾಬ್ (The Assassination of Rajiv Gandhi: An Inside Job)” ಪುಸ್ತಕದ ಲೇಖಕರು ಯಾರು?
ನೀನಾ ಗೋಪಾಲ್ | |
ಜೈರಾಮ್ ರಮೇಶ್ | |
ದಿಗ್ವಿಜಯ್ ಸಿಂಗ್ | |
ತರುಣ್ ಗುಪ್ತ |
ಖ್ಯಾತ ಪತ್ರಕರ್ತೆ ನೀನಾ ಗೋಪಾಲ್ ಅವರು “ದಿ ಅಸಸಿನೇಷನ್ ಆಫ್ ರಾಜೀವ್ ಗಾಂಧಿ: ಆನ್ ಇನ್ಸೈಡ್ ಜಾಬ್” ಪುಸ್ತಕದ ಲೇಖಕರು. ನೀನಾ ಗೋಪಾಲ್ ಗಲ್ಪ್ ಯುದ್ದ ಮತ್ತು ಕುವೈತ್ ವಿಮೋಚನೆಯನ್ನು ಪ್ರಕಟಿಸಿದ ಮೊದಲ ಮಹಿಳಾ ಪತ್ರಕರ್ತೆ. ಈ ಪುಸ್ತಕದಲ್ಲಿ ಲೇಖಕರು ರಾಜೀವ್ ಗಾಂಧಿ ಅವರ ಹತ್ಯೆಗೆ ಸಂಬಂಧಿಸಿದ ಒಳಸಂಚು ಮತ್ತು ಗಾಂಧಿ ಅವರನ್ನು ಯಾವ ಕಾರಣಕ್ಕೆ ಕೊಲ್ಲಲಾಯಿತು ಎನ್ನುವುದರ ಬಗ್ಗೆ ವಿವರಿಸಲಾಗಿದೆ.
Question 6 |
6.ಇತ್ತೀಚೆಗೆ ಏಕದಿನ ಪಂದ್ಯದ ಇನ್ನಿಂಗ್ಸ್ ಒಂದರಲ್ಲಿ 444 ರನ್ ಗಳಿಸಿ ವಿಶ್ವ ದಾಖಲೆ ನಿರ್ಮಿಸಿದ ದೇಶ ಯಾವುದು?
ಪಾಕಿಸ್ತಾನ | |
ಇಂಗ್ಲೆಂಡ್ | |
ನ್ಯೂಜಿಲ್ಯಾಂಡ್ | |
ಆಸ್ಟ್ರೇಲಿಯಾ |
ಪಾಕಿಸ್ತಾನ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 444 ರನ್ ಗಳಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದೆ. ಅಲೆಕ್ಸ್ ಹೇಲ್ಸ್ ಅವರ 171 ರನ್ ನೆರವಿನಿಂದ ಇಂಗ್ಲೆಂಡ್ ತಂಡ ಈ ಸ್ಕೋರ್ ಮಾಡಿದೆ. ಇದಕ್ಕೂ ಮುನ್ನ 2006 ರಲ್ಲಿ ನೆದರ್ಲೆಂಡ್ಸ್ ವಿರುದ್ಧ ಶ್ರೀಲಂಕಾ ತಂಡ 443/9 ಗಳಿಸಿದ್ದು ಏಕದಿಕ ಕ್ರಿಕೆಟ್ ನಲ್ಲಿ ಗರಿಷ್ಠ ಮೊತ್ತ ಎನಿಸಿತ್ತು.
Question 7 |
7.ಮೈಕೆಲ್ ಟೆಮೆರ್ (Michael Temer) ಯಾವ ದೇಶದ ನೂತನ ಅಧ್ಯಕ್ಷರಾಗಿ ನೇಮಕಗೊಂಡರು?
ಬ್ರೆಜಿಲ್ | |
ಕ್ಯೂಬಾ | |
ಸ್ವೀಡನ್ | |
ಇಂಡೋನೇಷಿಯಾ |
ಬ್ರೆಜಿಲ್ ನ ಮಾಜಿ ಉಪಾಧ್ಯಕ್ಷ ಮೈಕೆಲ್ ಟೆಮೆರ್ ಅವರು ದೇಶದ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬ್ರೆಜಿಲ್ನ ಅಧ್ಯಕ್ಷೆಯಾಗಿದ್ದ ದಿಲ್ಮಾ ರೂಸೆಫ್ ಅವರ ವಿರುದ್ದ ಮಂಡಿಸಲಾಗಿ ಪದಚ್ಯುತೆಯನ್ನು ಸಂಸತ್ತು ಅಂಗೀಕರಿಸಿದ ಕಾರಣ ದಿಲ್ಮಾ ರೂಸೆಪ್ ಅವರು ಹುದ್ದೆಯಿಂದ ವಜಾಗೊಂಡಿದ್ದರು. ಟೆಮೆರ್ ಅವರು 2018 ರಲ್ಲಿ ನಡೆಯಲಿರುವ ಚುನಾವಣೆ ತನಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರ.
Question 8 |
8.ಇತ್ತೀಚೆಗೆ ಪರಿವರ್ತಿತ ಡೀಸೆಲ್-ವಿದ್ಯುತ್ಚಾಲಿತ ಆಕ್ರಮಣಕಾರಿ ಜಲಾಂತರ್ಗಾಮಿಗಳನ್ನು ಖರೀದಿಸುವ ಸಲುವಾಗಿ ಪಾಕಿಸ್ತಾನ ಯಾವ ರಾಷ್ಟ್ರದೊಂದಿಗೆ ಒಪ್ಪಂದಕ್ಕೆ ಸಹಿಹಾಕಿತು?
ರಷ್ಯಾ | |
ಚೀನಾ | |
ಅಮೆರಿಕಾ | |
ಫ್ರಾನ್ಸ್ |
ಪಾಕಿಸ್ತಾನವು ಎಂಟು ಪರಿವರ್ತಿತ ಡೀಸೆಲ್-ವಿದ್ಯುತ್ಚಾಲಿತ ಆಕ್ರಮಣಕಾರಿ ಜಲಾಂತರ್ಗಾಮಿಗಳನ್ನು ಖರೀದಿಸುವ ಸಲುವಾಗಿ ಚೀನಾದೊಂದಿಗೆ ಒಪ್ಪಂದಕ್ಕೆ ಸಹಿಹಾಕಿದೆ. ಸುಮಾರು 500 ಕೋಟಿ ಅಮೆರಿಕನ್ ಡಾಲರ್ (ರೂ 34 ಸಾವಿರ ಕೋಟಿ) ಮೌಲ್ಯದ ಈ ಜಲಾಂತರ್ಗಾಮಿಗಳನ್ನು 2028ರ ವೇಳೆಗೆ ಚೀನಾದಿಂದ ಪಡೆದುಕೊಳ್ಳಲು ಪಾಕಿಸ್ತಾನ ಒಪ್ಪಂದ ಮಾಡಿಕೊಂಡಿದೆ. ಇದು ಚೀನಾದೊಂದಿಗೆ ಪಾಕಿಸ್ತಾನ ನಡೆಸಿರುವ ಅತಿ ದೊಡ್ಡ ಶಸ್ತ್ರಾಸ್ತ್ರ ಒಪ್ಪಂದವಾಗಿದೆ.
Question 9 |
9.ಇತ್ತೀಚೆಗೆ ಸುದ್ದಿಯಲ್ಲಿದ್ದ “ಅಸ್ಲಿ ತರಕ್ಕಿ (Asli Tarakki)” ಅಭಿಯಾನವನ್ನು ಕೇಂದ್ರದ ಯಾವ ಸಚಿವಾಲಯ ಜಾರಿಗೊಳಿಸಲಿದೆ?
ಕೇಂದ್ರ ಗ್ರಾಮೀಣಭಿವೃದ್ದಿ ಸಚಿವಾಲಯ | |
ಕೇಂದ್ರ ನಗರಾಭಿವೃದ್ದಿ ಸಚಿವಾಲಯ | |
ಕೇಂದ್ರ ಗೃಹ ಸಚಿವಾಲಯ | |
ಕೇಂದ್ರ ಹಣಕಾಸು ಸಚಿವಾಲಯ |
ಸ್ವಚ್ಚ ಭಾರತ ಮಿಷನ್ ಅಡಿ “ಅಸ್ಲಿ ತರಕ್ಕಿ” ಎಂಬ ಹೆಸರಿನ ನೂತನ ಅಭಿಯಾನವನ್ನು ಕೇಂದ್ರ ನಗರಾಭಿವೃದ್ದಿ ಸಚಿವಾಲಯ ಜಾರಿಗೊಳಿಸಲಿದೆ. ಮೊದಲ ಹಂತದಲ್ಲಿ ನ್ಯಾಷನಲ್ ಕ್ಯಾಪಿಟಲ್ ರಿಜನ್ ನ ಆರು ನಗರಗಳಲ್ಲಿ ಈ ಅಭಿಯಾನವನ್ನು ಅನುಷ್ಟಾನಗೊಳಿಸಿ, ನಂತರದ ದಿನಗಳಲ್ಲಿ ಇತರೆ ನಗರಗಳಲ್ಲಿ ಅಭಿಯಾನವನ್ನು ಆರಂಭಿಸಲಾಗುವುದು. ಈ ಅಭಿಯಾನದಡಿ ಉತ್ತಮ ಸಂವಹನ ಕೌಶಲ್ಯ ಮತ್ತು ನಾಯಕತ್ವ ಗುಣಹೊಂದಿರುವ 450 ಯುವ ಪುರುಷ ಮತ್ತು ಮಹಿಳೆಯರನ್ನು ಆಯ್ಕೆಮಾಡಿಕೊಳ್ಳುವ ಮೂಲಕ ಸ್ವಚ್ಚ ಭಾರತ ಮಿಷನ್ ಧ್ಯೇಯದ ಬಗ್ಗೆ ಅರಿವು ಮೂಡಿಸಲಾಗುವುದು.
Question 10 |
10.ಈಗಿನ “ದಕ್ಷಿಣ ಏಷ್ಯಾ ಪ್ರಾದೇಶಿಕ ರಾಷ್ಟ್ರಗಳ ಒಕ್ಕೂಟ (SAARC)ನ ಸೆಕ್ರಟರಿ ಜನರಲ್ ಯಾರು?
ಅರ್ಜುನ್ ಬಹದೂರ್ ಥಾಪ | |
ಅಬ್ದುಲ್ ಹಮೀರ್ ಖಾನ್ | |
ಥಾಮ್ಸನ್ ಡಿಸೋಜಾ | |
ಶಿವಚಂದ್ರ ನಾರಾಯಣ್ |
Super
Great work superb questions ಶರಣು ಶರಣಾರ್ಥಿ ನಿಮಗೆ ಹೀಗೆ ಮುಂದುವರೆಸಿ ಕ್ವಿಜ್ ದಯಾಮಾಡಿ
Very nice
Nice quations .