ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 1, 2016

Question 1

1.ಪ್ರತಿಷ್ಠಿತ “ರಾಷ್ಟ್ರೀಯ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ (CSR)” ಪ್ರಶಸ್ತಿಯನ್ನು ಪಡೆದುಕೊಂಡ ಸಂಸ್ಥೆ ಯಾವುದು?

A
ಟೈಮ್ಸ್ ಫೌಂಡೇಶನ್
B
ಟಾಟಾ ಮೋಟಾರ್ಸ್ ಲಿಮಿಟೆಡ್
C
ಇನ್ಪೋಸಿಸ್ ಲಿಮಿಟೆಡ್
D
ವಿಪ್ರೋ ಲಿಮಿಟೆಡ್
Question 1 Explanation: 
ಟೈಮ್ಸ್ ಫೌಂಡೇಶನ್:

ಟೈಮ್ಸ್ ಗ್ರೂಫ್ ನ ಸಾಮಾಜಿಕ ಅಂಗಸಂಸ್ಥೆ ಟೈಮ್ಸ್ ಫೌಂಡೇಶನ್ ಪ್ರತಿಷ್ಠಿತ ರಾಷ್ಟ್ರೀಯ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ (Corporate Social Responsibility)”ಪ್ರಶಸ್ತಿಯನ್ನು ಪಡೆದುಕೊಂಡಿದೆ. ಸಿಎಸ್ಆರ್ ರಾಷ್ಟ್ರೀಯ ನಾಯಕತ್ವ ಪ್ರಶಸ್ತಿಯನ್ನು ವಿಶ್ವ ಸಿಎಸ್ಆರ್ ದಿನ ಮತ್ತು ವಿಶ್ವ ಸುಸ್ಥಿರ ಸಂಸ್ಥೆ ಜಂಟಿಯಾಗಿ ಕೊಡಮಾಡುತ್ತಿದೆ. ಟೈಮ್ಸ್ ಫೌಂಡೇಶನ್ ನ ದಕ್ಷಿಣ ಪ್ರಾದೇಶಿಕ ಮುಖ್ಯಸ್ಥೆ ಎಸ್.ಕಲಾದೇವಿ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.

Question 2

2.ಈ ಕೆಳಗಿನ ಯಾವ ಪ್ರಶಸ್ತಿ/ಪ್ರಶಸ್ತಿಗಳು ಸಂತ ಮದರ್ ತೆರೆಸಾ ಅವರಿಗೆ ಲಭಿಸಿವೆ?

I) ಪದ್ಮಶ್ರೀ ಪ್ರಶಸ್ತಿ

II) ರೇಮನ್ ಮ್ಯಾಗ್ಸೆಸೆ

III) ನೊಬೆಲ್ ಶಾಂತಿ ಪ್ರಶಸ್ತಿ

IV) ಭಾರತ ರತ್ನ

ಈ ಕೆಳಗೆ ನೀಡಿರುವ ಕೋಡ್ ಮೂಲಕ ಸರಿಯಾದ ಉತ್ತರವನ್ನು ಗುರುತಿಸಿ:

A
I & II
B
II & III
C
I, II & III
D
ಮೇಲಿನ ಎಲ್ಲವೂ
Question 2 Explanation: 
ಮೇಲಿನ ಎಲ್ಲವೂ:

ಶಾಂತಿ ಧೂತೆ ಮದರ್‌ ತೆರೆಸಾ ಅವರಿಗೆ ಸೆಪ್ಟೆಂಬರ್‌ 4ರಂದು ಪೋಪ್‌ ಫ್ರಾನ್ಸಿಸ್‌ ಅವರು ಸಂತ ಪದವಿ ಪ್ರದಾನ ಮಾಡಲಿದ್ದಾರೆ.. ಮೆದುಳಿನಲ್ಲಿ ಕೀವು ತುಂಬಿ ಸಾವಿನ ಅಂಚಿನಲ್ಲಿದ್ದ ಬ್ರೆಜಿಲ್‌ನ ಸ್ಯಾಟೊಂಸ್‌ ಪಟ್ಟಣದ ನಿವಾಸಿಯೊಬ್ಬರು ಮದರ್ ತೆರೆಸಾ ಅವರನ್ನು ಪ್ರಾರ್ಥಿಸಿ ಪವಾಡ ಸದೃಶ್ಯ ರೀತಿಯಲ್ಲಿ ಗುಣಹೊಂದಿದ್ದರು. 2008ರಲ್ಲಿ ನಡೆದಿದ್ದ ಈ ಘಟನೆಯನ್ನೇ ಅವರ ಸಂತ ಪದವಿಗೆ ಪ್ರಮುಖ ಅಂಶವಾಗಿ ಪರಿಗಣಿಸಲಾಗಿದೆ. ಸಾಕಷ್ಟು ಪರಿಶೀಲನೆಯ ನಂತರ 2013ರಲ್ಲಿ ಈ ಘಟನೆ ಸತ್ಯ ಎಂದು ದೃಢಪಟ್ಟಿತ್ತು. ಇದನ್ನು ಆಧರಿಸಿ 2015ರ ಡಿಸೆಂಬರ್‌ನಲ್ಲಿ ತೆರೆಸಾ ಹೆಸರನ್ನು ಸಂತಪದವಿಗೆ ಪರಿಗಣಿಸಲು ಕ್ಯಾಥೊಲಿಕ್‌ ಧರ್ಮಸಭೆ ಅಂತಿಮ ಒಪ್ಪಿಗೆ ನೀಡಿತ್ತು. ವಿಶ್ವಕ್ಕೆ ಶಾಂತಿ ಸಾರಿದ ತೆರೆಸಾ ಅವರಿಗೆ 1962 ಪದ್ಮಶ್ರೀ ಪ್ರಶಸ್ತಿ, 1979 ನೊಬೆಲ್ ಶಾಂತಿ ಪ್ರಶಸ್ತಿ, 1980 ರಲ್ಲಿ ಭಾರತ ಸರ್ಕಾರದ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿ ಹಾಗೂ ರೇಮನ್ ಮ್ಯಾಗ್ಸೆಸ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ನೀಡಲಾಗಿದೆ.

Question 3

3.“ದಿ ಎನರ್ಜಿ ಅಂಡ್ ರಿಸೋರ್ಸ್ ಇನ್ಸ್ ಟಿಟ್ಯೂಟ್ (The Energy and Resource Institute)”ನ ನೂತನ ಚಾನ್ಸೆಲರ್ ಆಗಿ ಯಾರು ನೇಮಕಗೊಂಡರು?

A
ಅಶೋಕ್ ಚಾವ್ಲ
B
ಕರಣ್ ಸಿಂಗ್
C
ಮಹೇಂದ್ರ ಸಿಂಗ್
D
ಕುಮಾರ್ ರಜನೀಶ್
Question 3 Explanation: 
ಅಶೋಕ್ ಚಾವ್ಲ:

ಕೇಂದ್ರ ಮಾಜಿ ಹಣಕಾಸು ಕಾರ್ಯದರ್ಶಿ ಅಶೋಕ್ ಚಾವ್ಲ ಅವರು ಎನರ್ಜಿ ಅಂಡ್ ರಿಸೋರ್ಸ್ ಇನ್ಸ್ ಟಿಟ್ಯೂಟ್ ನ ನೂತನ ಚಾನ್ಸೆಲರ್ ಆಗಿ ನೇಮಕಗೊಂಡಿದ್ದಾರೆ. ಪ್ರಸ್ತುತ ಇವರು ಈ ಸಂಸ್ಥೆಯ ಅಧ್ಯಕ್ಷರಾಗಿ ಕಳೆದ ಫೆಬ್ರವರಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

Question 4

4.“ಅಲಿ ಬಾಂಗೋ ಒಂಡಿಂಬ (Ali Bongo Ondimba)” ರವರು ಯಾವ ದೇಶದ ನೂತನ ಅಧ್ಯಕ್ಷರಾಗಿ ಇತ್ತೀಚೆಗೆ ಆಯ್ಕೆಯಾದರು?

A
ಗಬಾನ್
B
ಇಥೋಪಿಯಾ
C
ಈಜಿಪ್ಟ್
D
ಸೊಮಾಲಿ
Question 4 Explanation: 
ಗಬಾನ್ (Gabon):

ಅಲಿ ಬಾಂಗೋ ಒಂಡಿಂಬ ರವರು ಇತ್ತೀಚೆಗೆ ನಡೆದ ಗಬಾನ್ ರಾಷ್ಟ್ರಧ್ಯಕ್ಷ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದರು. ಆ ಮೂಲಕ ಎರಡನೇ ಬಾರಿಗೆ ಗಬಾನ್ ರಾಷ್ಟ್ರದ ಅಧ್ಯಕ್ಷ ಸ್ಥಾನವನ್ನು ಖಾಯಂಗಳಿಸಿಗೊಂಡರು. ಒಂಡಿಂಬ ಅವರು ಗಬಾನ್ ರಾಷ್ಟ್ರಧ್ಯಕ್ಷರಾಗಿ ಏಳು ವರ್ಷಗಳ ಕಾಲ ಸೇವೆಸಲ್ಲಿಸಲಿದ್ದಾರೆ.

Question 5

5.ಬಿಹಾರದಲ್ಲಿ ಗಂಗಾನದಿಯಲ್ಲಿ ಹೂಳು ತುಂಬಿರುವ ಬಗ್ಗೆ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ಇತ್ತೀಚೆಗೆ ಈ ಕೆಳಗಿನ ಯಾವ ಸಮಿತಿಯನ್ನು ರಚಿಸಿದೆ?

A
ಎ.ಕೆ.ಸಿನ್ಹಾ ಸಮಿತಿ
B
ಅಶೋಕ್ ಕುಮಾರ್ ಸಮಿತಿ
C
ಪ್ರಸಾದ್ ಕುಲಕರ್ಣಿ ಸಮಿತಿ
D
ಸತೀಶ್ ಚಂದ್ರ ಸಮಿತಿ
Question 5 Explanation: 
ಎ.ಕೆ.ಸಿನ್ಹಾ ಸಮಿತಿ:

ಬಿಹಾರದಲ್ಲಿ ಗಂಗಾನದಿಯಲ್ಲಿ ತುಂಬಿರುವ ಹೂಳನ್ನು ಅಧ್ಯಯನ ನಡೆಸುವ ಸಲುವಾಗಿ ಕೇಂದ್ರ ಸರ್ಕಾರ ಎ.ಕೆ.ಸಿನ್ಹಾ ನೇತೃತ್ವದ ತಜ್ಞರ ಸಮಿತಿಯನ್ನು ರಚಿಸಿದೆ. ಗಂಗಾ ನದಿಯಲ್ಲಿ ಹೂಳು ತುಂಬಿರುವ ಕಾರಣ ಬಿಹಾರದಲ್ಲಿ ಇತ್ತೀಚೆಗೆ ಪ್ರವಾಹ ಸೃಷ್ಟಿಯಾಗಿ ಅವಾಂತರ ಸೃಷ್ಟಿಸಿದ್ದ ಹಿನ್ನಲೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯು 10 ದಿನದೊಳಗೆ ತನ್ನ ಅಧ್ಯಯನದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ.

Question 6

6.ಇತ್ತೀಚೆಗೆ ನಿಧನರಾದ “ಕಾಶ್ಮೀರಿ ಲಾಲ್ ಝಾಕೀರ್” ಅವರು ಯಾವ ಭಾಷೆಯ ಪ್ರಸಿದ್ದ ಕವಿಯಾಗಿದ್ದಾರೆ?

A
ಡೊಗ್ರಿ
B
ಕಾಶ್ಮೀರಿ
C
ಉರ್ದು
D
ಹಿಂದಿ
Question 6 Explanation: 
ಉರ್ದು:

ಪ್ರಸಿದ್ದ ಉರ್ದು ಕವಿ, ಕಾದಂಬರಿಕಾರ ಮತ್ತು ಸಣ್ಣಕತೆಗಾರ ಕಾಶ್ಮೀರಿ ಲಾಲ್ ಝಾಕೀರ್ ಚಂಡೀಘರ್ನಲ್ಲಿ ನಿಧನರಾದರು. ಅಬ್ ಮುಜೆ ಸೊನೆ ದೊ, ತಿನ್ ಸಿಹ್ರೆ ಎಕ್ ಸವಾಲ್, ಎ ಘಜಲ್ ಅಂಥೋಲಜಿ” ಇವರ ಪ್ರಮುಖ ಕೃತಿಗಳಾಗಿವೆ.

Question 7

7.ಪ್ರಸಿದ್ದ “ಸೊಲಂಗ್ ಹಬ್ಬ(Solung Festival)” ಯಾವ ರಾಜ್ಯಕ್ಕೆ ಸಂಬಂಧಿಸಿದೆ?

A
ಅಸ್ಸಾಂ
B
ಜಾರ್ಖಂಡ್
C
ಅರುಣಾಚಲ ಪ್ರದೇಶ
D
ಸಿಕ್ಕಿಂ
Question 7 Explanation: 
ಅರುಣಾಚಲ ಪ್ರದೇಶ:

ಪ್ರಸಿದ್ದ ಸೊಲಂಗ್ ಹಬ್ಬ ಅರುಣಾಚಲ ಪ್ರದೇಶದಲ್ಲಿ ಆರಂಭಗೊಂಡಿತು. ಐದು ದಿನಗಳ ಕಾಲ ನಡೆಯುವ ಈ ಹಬ್ಬವನ್ನು ಪ್ರತಿವರ್ಷ ಸೆಪ್ಟೆಂಬರ್ ಮೊದಲ ವಾರದಲ್ಲಿ ಆಚರಿಸಲಾಗುತ್ತದೆ. ಕೃಷಿ ಆಧಾರಿತ ಈ ಹಬ್ಬವನ್ನು ಅರುಣಾಚಲ ಪ್ರದೇಶದ ಆದಿ ಬುಡಕಟ್ಟು ಜನಾಂಗ ಆಚರಿಸುತ್ತಾರೆ. ವಿವಿಧ ದೇವರುಗಳಿಗೆ ಪೂಜೆ ಪ್ರಾರ್ಥನೆ ಸಲ್ಲಿಸುವ ಮೂಲಕ ಉತ್ತಮ ಇಳುವರಿ ನೀಡುವಂತೆ ಬೇಡಿಕೊಳ್ಳುವುದು ಹಬ್ಬದ ವಾಡಿಕೆ.

Question 8

8.“ಸಾರ್ವಜನಿಕ ನಿಧಿ ನಿರ್ವಹಣಾ ವ್ಯವಸ್ಥೆ (Public Fund Management System)” ಜಾರಿಗೆ ತಂದ ಮೊದಲ ರಾಜ್ಯ ಯಾವುದು?

A
ಜಾರ್ಖಂಡ್
B
ಮಧ್ಯ ಪ್ರದೇಶ
C
ಗುಜರಾತ್
D
ಮಹಾರಾಷ್ಟ್ರ
Question 8 Explanation: 
ಜಾರ್ಖಂಡ್:

ದೇಶದಲ್ಲೇ ಮೊದಲ ಬಾರಿಗೆ ಸಾರ್ವಜನಿಕ ನಿಧಿ ನಿರ್ವಹಣಾ ವ್ಯವಸ್ಥೆಯನ್ನು ಜಾರ್ಖಂಡ್ ನಲ್ಲಿ ಜಾರಿಗೊಳಿಸಲಾಗಿದೆ. ರಾಜ್ಯದ ಎಲ್ಲಾ 32 ಟ್ರೆಷರಿಗಳನ್ನು ಕಂಪ್ಯೂಟರೀಕರಣಗೊಳಿಸಲಾಗಿದ್ದು, ಸೈಬರ್ ಟ್ರೆಷರಿಯನ್ನು

Question 9

9.ಭಾರತದ ಜಲಾಂತರ್ಗಾಮಿ ನೌಕೆಗಳ ಸಂಬಂಧಿಸಿದ ಮಾಹಿತಿಗಳ ದಾಖಲೆಗಳನ್ನು ಬಿಡುಗಡೆಮಾಡಿ ಸುದ್ದಿಯಲ್ಲಿದ್ದ ಪ್ರತಿಕೆ ಯಾವುದು?

A
ದಿ ನ್ಯೂರ್ಯಾಕ್ ಟೈಮ್ಸ್
B
ದಿ ಆಸ್ಟ್ರೇಲಿಯನ್
C
ದಿ ವಾಷಿಂಗಟನ್ ಪೋಸ್ಟ್
D
ದಿ ಸಿಡ್ನಿ ಹೆರಾಲ್ಡ್
Question 9 Explanation: 
ದಿ ಆಸ್ಟ್ರೇಲಿಯನ್:

ಭಾರತದ ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆಗಳ ಕುರಿತ ಸೂಕ್ಷ್ಮ ಮಾಹಿತಿಗಳುಳ್ಳ ದಾಖಲೆಗಳನ್ನು ಆಸ್ಟ್ರೇಲಿಯಾದ ಪತ್ರಿಕೆ “ದಿ ಆಸ್ಟ್ರೇಲಿಯನ್” ಪ್ರಕಟಿಸಿತ್ತು.

Question 10

10.ಈ ಕೆಳಗಿನ ಯಾವ ನಗರ ಆಫ್ರಿಕಾ ಖಂಡದಲ್ಲೇ ಅತಿದೊಡ್ಡ ನಗರವಾಗಿದೆ?

A
ಡರ್ಬನ್
B
ಲಗೊಸ್
C
ನೈರೋಬಿ
D
ಕೈರೋ
Question 10 Explanation: 
ಲಗೊಸ್:

ನೈಜೀರಿಯಾದ ಲಗೊಸ್ ನಗರ ಆಫ್ರಿಕಾ ಖಂಡದ ಅತಿದೊಡ್ಡ ನಗರವಾಗಿದೆ.

There are 10 questions to complete.

2 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 1, 2016”

  1. ಸಂತೋಷ್ ಗೌಡರ

    ಧನ್ಯವಾದಗಳು ಸರ್

Leave a Comment

This site uses Akismet to reduce spam. Learn how your comment data is processed.