ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.
ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -12
Question 1 |
1. ಇತ್ತೀಚೆಗೆ ಸುದ್ದಿ ಪತ್ರಿಕೆಗಳಲ್ಲಿ ಸುದ್ದಿಯಾಗಿದ್ದ ಉಮ್ಮತ್ತೂರು ಅರಣ್ಯಪ್ರದೇಶಕ್ಕೆ ಸಂಬಂಧಿಸಿದಂತೆ ಈ ಹೇಳಿಕೆಗಳನ್ನು ಗಮನಿಸಿ:
I) ಉಮ್ಮತ್ತೂರು ಅರಣ್ಯಪ್ರದೇಶ ಚಿತ್ರದುರ್ಗ ಜಿಲ್ಲೆಯಲ್ಲಿದೆ
II) ಈ ಅರಣ್ಯಪ್ರದೇಶವನ್ನು ಕೃಷ್ಣಮೃಗ ವನ್ಯಜೀವಿಧಾಮವನ್ನಾಗಿ ಘೋಷಿಸಲು ತೀರ್ಮಾನಿಸಲಾಗಿದೆ
III) ಇದು ರಾಜ್ಯದ ಏಕೈಕ ಕೃಷ್ಣಮೃಗ ವನ್ಯಜೀವಿಧಾಮವಾಗಲಿದೆ
ಮೇಲಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆ/ಹೇಳಿಕೆಗಳನು ಯಾವುವು?
ಹೇಳಿಕೆ ಒಂದು ಮಾತ್ರ ಸರಿ | |
ಹೇಳಿಕೆ ಎರಡು ಮಾತ್ರ ಸರಿ | |
ಹೇಳಿಕೆ ಒಂದು ಮತ್ತು ಎರಡು ಸರಿ | |
ಮೇಲಿನ ಎಲ್ಲಾ ಹೇಳಿಕೆಗಳು ಸರಿಯಾಗಿವೆ |
ಹೇಳಿಕೆ ಒಂದು ತಪ್ಪಾಗಿದೆ ಏಕೆಂದರೆ ಉಮ್ಮತ್ತೂರು ಅರಣ್ಯ ಚಾಮರಾಜನಗರ ಜಿಲ್ಲೆಯಲ್ಲಿದೆ. ಈ ಭಾಗವನ್ನು ಕೃಷ್ಣಮೃಗ ವನ್ಯಜೀವಿಧಾಮವಾಗಿ ಘೋಷಿಸಲು ರಾಜ್ಯ ವನ್ಯಜೀವಿ ಮಂಡಳಿ ಸಭೆಯು ಒಪ್ಪಿಗೆ ಸೂಚಿಸಿದೆ ಆದ್ದರಿಂದ ಹೇಳಿಕೆ ಎರಡು ಸರಿಯಾಗಿದೆ. ಹೇಳಿಕೆ ಮೂರು ತಪ್ಪು ಏಕೆಂದರೆ ಈ ನಿರ್ಧಾರದಿಂದಾಗಿ ರಾಜ್ಯದಲ್ಲಿ ಕೃಷ್ಣಮೃಗ ವನ್ಯಜೀವಿಧಾಮಗಳ ಸಂಖ್ಯೆ ಮೂರಕ್ಕೇರಲಿದೆ. ಸದ್ಯ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಮತ್ತು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಮೈದನಹಳ್ಳಿಯಲ್ಲಿ ಕೃಷ್ಣಮೃಗ ವನ್ಯಜೀವಿಧಾಮಗಳಿವೆ. ಈಗ ಉಮ್ಮತ್ತೂರು ಅರಣ್ಯವು ಕರ್ನಾಟಕದ ಮೂರನೇ ಕೃಷ್ಣಮೃಗ ವನ್ಯಜೀವಿಧಾಮಕ್ಕೆ ಪಾತ್ರವಾಗಲಿದೆ. ರಾಜ್ಯ ವನ್ಯಜೀವಿ ಮಂಡಳಿಯ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಮ್ಮತ್ತೂರು ಅರಣ್ಯವನ್ನು ಕೃಷ್ಣಮೃಗಧಾಮವಾಗಿ ಘೋಷಿಸಲು ಒಪ್ಪಿಗೆ ನೀಡಿದ್ದಾರೆ. ಸಭೆಯ ನಡಾವಳಿಗಳಿಗೆ ಸಹಿ ಹಾಕಿದ ಬಳಿಕ ಅಧಿಕೃತ ಆದೇಶ ಹೊರ ಬೀಳಲಿದೆ.
Question 2 |
2. ಇತ್ತೀಚೆಗೆ ಸುದ್ದಿಯಲ್ಲಿದ “ಸದರ್ನ್ ಬರ್ಡ್ ವಿಂಗ್” ಚಿಟ್ಟೆಗೆ ಸಂಬಂಧಿಸಿದಂತೆ ಯಾವ ಹೇಳಿಕೆಗಳು ಸರಿಯಾಗಿವೆ?
I) ಇದು ದೇಶದಲ್ಲಿ ಕಾಣಬಹುದಾದ ಚಿಟ್ಟೆಗಳ ಪೈಕಿ ಅತಿದೊಡ್ಡ ಚಿಟ್ಟೆ ಎನಿಸಿದೆ
II) ರಾಜ್ಯ ಸರ್ಕಾರ ಈ ಚಿಟ್ಟೆಯನ್ನು ನಾಡಚಿಟ್ಟೆಯನ್ನಾಗಿ ಘೋಷಿಸಿದೆ
III) ನಾಡ ಚಿಟ್ಟೆಯನ್ನು ಅಳವಡಿಸಿಕೊಂಡ ಮೊದಲ ರಾಜ್ಯ ಕರ್ನಾಟಕ
ಈ ಕೆಳಗೆ ಕೊಟ್ಟಿರುವ ಕೋಡ್ ಮೂಲಕ ಸರಿಯಾದ ಉತ್ತರವನ್ನು ಗುರುತಿಸಿ:
ಹೇಳಿಕೆ ಒಂದು & ಎರಡು ಸರಿ | |
ಹೇಳಿಕೆ ಒಂದು & ಮೂರು ಸರಿ | |
ಹೇಳಿಕೆ ಎರಡು & ಮೂರು ಸರಿ | |
ಮೇಲಿನ ಎಲ್ಲಾ ಹೇಳಿಕೆಗಳು ಸರಿ |
ಸದರ್ನ್ ಬರ್ಡ್ ವಿಂಗ್ ಚಿಟ್ಟೆ ದೇಶದಲ್ಲಿ ಕಾಣಬಹುದಾದ ಚಿಟ್ಟೆಗಳ ಪ್ರಭೇದಗಳಲ್ಲಿ ಅತಿ ದೊಡ್ಡ ಚಿಟ್ಟೆ ಆಗಿದೆ. ಈ ಚಿಟ್ಟೆಯನ್ನು ರಾಜ್ಯ ಚಿಟ್ಟೆಯನ್ನಾಗಿ ಅಳವಡಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಮಹಾರಾಷ್ಟ್ರದ ನಂತರ ಚಿಟ್ಟೆಯೊಂದನ್ನು ನಾಡ ಚಿಟ್ಟೆಯನ್ನಾಗಿ ಅಳವಡಿಸಿಕೊಳ್ಳಲಿರುವ ಎರಡನೇ ರಾಜ್ಯ ಕರ್ನಾಟಕ. Troides Minos ಇದು ಈ ಚಿಟ್ಟೆಯ ವೈಜ್ಞಾನಿಕ ಹೆಸರು.
Question 3 |
3. ರಾಜ್ಯ ಸರ್ಕಾರದ ನವೋದ್ಯಮ ನೀತಿ (ಸ್ಟಾರ್ಟ್ ಆಫ್ ಪಾಲಿಸಿ)ಗೆ ಸಂಬಂಧಿಸಿದಂತೆ ಹೇಳಿಕೆಗಳನ್ನು ಗಮನಿಸಿ:
I) ರಾಜ್ಯ ಸರ್ಕಾರ ಕರ್ನಾಟಕ ನವೋದ್ಯಮ ನೀತಿ 2015-2022 ಜಾರಿಗೆ ತಂದಿದೆ
II) ಇದರಡಿ ತಂತ್ರಜ್ಞಾನ ಹಾಗೂ ಉತ್ಪಾದನೆ ಆಧಾರಿತ ನವೋದ್ಯಮಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ
III) ಈ ನೀತಿಯಡಿ 200 ಕೋಟಿ ರೂ. ಮೊತ್ತದ "ನವೋದ್ಯಮ ನಿಧಿ' ಸ್ಥಾಪಿಸಲಾಗಿದೆ
ಮೇಲಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆಗಳು ಯಾವುವು?
ಹೇಳಿಕೆ ಒಂದು ಮಾತ್ರ | |
ಹೇಳಿಕೆ ಎರಡು ಮಾತ್ರ | |
ಹೇಳಿಕೆ ಎರಡು ಮತ್ತು ಮೂರು ಮಾತ್ರ | |
ಹೇಳಿಕೆ ಒಂದು ಮತ್ತು ಎರಡು ಮಾತ್ರ |
ಕರ್ನಾಟಕ ನವೋದ್ಯಮ ನೀತಿ 2015-2020 ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಈ ನೂತನ "ನವೋದ್ಯಮ ನೀತಿ' (ಸ್ಟಾರ್ಟ್ಅಪ್ ಪಾಲಿಸಿ) ಮೂಲಕ 2020ರ ವೇಳೆಗೆ ತಂತ್ರಜ್ಞಾನ ಆಧರಿತ 20 ಸಾವಿರ ಹಾಗೂ ಉತ್ಪಾದನೆ ಆಧರಿತ 6 ಸಾವಿರ ನವೋದ್ಯಮಗಳನ್ನು ಸ್ಥಾಪಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಜಾಗತಿಕ ಮಟ್ಟದಲ್ಲಿ ಪೈಪೋಟಿ ಎದುರಿಸುವಂತೆ ನವೋದ್ಯಮಗಳಿಗೆ ಉತ್ತೇಜನ ನೀಡಲು ತಂದಿರುವ ಈ ನೀತಿಯಡಿ 200 ಕೋಟಿ ರೂ. ಮೊತ್ತದ "ನವೋದ್ಯಮ ನಿಧಿ' ಸ್ಥಾಪಿಸಲಾಗಿದೆ.
Question 4 |
4.ಈ ಕೆಳಗಿನ ಯಾವ ಹೆಸರಿನಡಿ ಬೆಂಗಳೂರಿನಲ್ಲಿ ಅತಿದೊಡ್ಡ ಮಹಿಳಾ ಉದ್ಯಮಿಗಳ ಶೃಂಗಸಭೆ ನವೆಂಬರ್ ನಲ್ಲಿ ನಡೆಯಲಿದೆ?
ಥಿಂಕ್ ಬಿಗ್-2016 | |
ವುವೆನ್ ಪವರ್-2016 | |
ಬಿಗ್ ಸ್ಟೆಪ್-2016 | |
ವಿ ಫಸ್ಟ್-2016 |
ಬೆಂಗಳೂರಿನಲ್ಲಿ ಅತಿದೊಡ್ಡ ಮಹಿಳಾ ಉದ್ಯಮಿಗಳ ಶೃಂಗಸಭೆ 'ಥಿಂಕ್ ಬಿಗ್ 2016 (Think Big-2016)' ನವೆಂಬರ್ 14 ಮತ್ತು 15 ರಂದು ನಡೆಯಲಿದೆ. ಇಷ್ಟು ದೊಡ್ಡ ಪ್ರಮಾಣದ ಮಹಿಳಾ ಉದ್ಯಮಿಗಳ ಶೃಂಗಸಭೆ ನಡೆಯುತ್ತಿರುವುದು ಇದೇ ಮೊದಲು. ಈ ಶೃಂಗಸಭೆಯಲ್ಲಿ 45 ದೇಶಗಳ ಪ್ರತಿನಿಧಿಗಳು, ಉದ್ಯಮ ಕ್ಷೇತ್ರದ 300 ಮುಖ್ಯಸ್ಥರು ಸೇರಿದಂತೆ ಒಟ್ಟು 4,000 ಪ್ರತಿನಿಧಿಗಳು ಪಾಳ್ಗೊಳ್ಳಲಿದ್ದಾರೆ. ಉದ್ಯಮ ಕ್ಷೇತ್ರದ ಮಹಿಳೆಯರಿಗೆ ನೆರವಾಗಲು ವಿವಿಧ ಬ್ಯಾಂಕ್ಗಳ ಪ್ರತಿನಿಧಿಗಳೂ ಭಾಗವಹಿಸಲಿದ್ದಾರೆ.
Question 5 |
5. ರಾಜ್ಯ ಸರ್ಕಾರ ಇತ್ತೀಚೆಗೆ “ಕರ್ನಾಟಕ ವೈಮಾನಿಕ ನೀತಿ” _____ಗೆ ತಿದ್ದುಪಡಿ ತರಲು ನಿರ್ಧರಿಸಿದೆ?
2013-18 | |
2013-20 | |
2013-22 | |
2015-20 |
'ಕರ್ನಾಟಕ ವೈಮಾನಿಕ ನೀತಿ 2013-23'ಕ್ಕೆ ತಿದ್ದುಪಡಿ ಮಾಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ರಾಜ್ಯದಲ್ಲಿ 2013ರ ಫೆಬ್ರುವರಿ 13 ರಿಂದ 'ಕರ್ನಾಟಕ ವೈಮಾನಿಕ ನೀತಿ 2013-23' ಚಾಲನೆಯಲ್ಲಿದೆ. ಕರ್ನಾಟಕ ಕೈಗಾರಿಕಾ ನೀತಿ 2014-19ರಲ್ಲಿರುವ ಎಲ್ಲ ವಿನಾಯಿತಿಗಳು ಅಂಶಗಳು ವೈಮಾನಿಕ ನೀತಿ 2013-23ರಲ್ಲೂ ಇರುವುದರಿಂದ ವಿನಾಯಿತಿ ಮತ್ತು ಪ್ರೋತ್ಸಾಹ ನೀಡುವಾಗ ಗೊಂದಲ ಉಂಟಾಗಿದೆ. ಈ ಕಾರಣಕ್ಕೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ.
Question 6 |
6. ಇತ್ತೀಚೆಗೆ ರಾಜ್ಯಕ್ಕೆ ಸಂಬಂಧಿಸಿದಂತೆ ಸುದ್ದಿಪತ್ರಿಕೆಗಳಲ್ಲಿ ಪ್ರಕಟಗೊಂಡ ಈ ಕೆಳಕಂಡ ಹೇಳಿಕೆಗಳನ್ನು ಗಮನಿಸಿ:
I) ಕೊಪ್ಪಳ ಜಿಲ್ಲೆಯ ನವಿಲೆ ಬಳಿ ಹೊಸ ಅಣೆಕಟ್ಟು ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ
II) ಈ ಅಣೆಕಟ್ಟನ್ನು ಆಂಧ್ರಪ್ರದೇಶದ ಆರ್ಥಿಕ ಸಹಕಾರದಲ್ಲಿ ನಿರ್ಮಿಸಲಾಗುವುದು
III) ಈ ಯೋಜನೆಯ ವೆಚ್ಚವನ್ನು ಆಂಧ್ರ ಶೇ.35 ಹಾಗೂ ರಾಜ್ಯ ಸರ್ಕಾರ ಶೇ.65 ಭರಿಸಲಿವೆ
ಮೇಲಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆಗಳು ಯಾವುವು?
ಹೇಳಿಕೆ ಒಂದು & ಎರಡು ಸರಿ | |
ಹೇಳಿಕೆ ಎರಡು & ಮೂರು ಸರಿ | |
ಹೇಳಿಕೆ ಒಂದು & ಮೂರು ಸರಿ | |
ಮೇಲಿನ ಎಲ್ಲಾ ಹೇಳಿಕೆಗಳು ಸರಿ |
ಹೊಸಪೇಟೆ ಬಳಿ ಇರುವ ತುಂಗಭದ್ರಾ ಜಲಾಶಯದಲ್ಲಿ 32 ಟಿಎಂಸಿ ಹೂಳು ತುಂಬಿರುವುದರಿಂದ ಹೂಳು ತೆಗೆಯುವುದು ತಾಂತ್ರಿಕವಾಗಿ ಸಾಧುವಲ್ಲ ಎಂಬ ತೀರ್ಮಾನಕ್ಕೆ ಸರ್ಕಾರ ಬಂದಿದೆ. ಹೀಗಾಗಿ ಕೊಪ್ಪಳ ಜಿಲ್ಲೆಯ ನವಿಲೆ ಬಳಿ 35 ಟಿಎಂಸಿ ಸಾಮರ್ಥ್ಯದ ಮತ್ತೊಂದು ಜಲಾಶಯ ನಿರ್ಮಿಸಲಾಗುವುದು.ಆಂಧ್ರದ ಶೇ.35 ಹಾಗೂ ರಾಜ್ಯದ ಶೇ.65ರಷ್ಟುಅನುದಾನವನ್ನು ಜಂಟಿಯಾಗಿ ವಿನಿಯೋಗಿಸಲಾಗುವುದು. ಯೋಜನೆಗೆ ಸುಮಾರು 5 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ಅಂದಾಜು ಮಾಡಲಾಗಿದೆ.
Question 7 |
7. ರಾಜ್ಯದ ರೈತರಿಗೆ ಸಾಂತ್ವನ ಹೇಳಲೆಂದು “ರೈತ ಚೇತನ” ಹೆಸರಿನ ಸಹಾಯವಾಣಿಯನ್ನು ಆರಂಭಿಸಿರುವ ಕೃಷಿ ವಿಶ್ವವಿದ್ಯಾಲಯ ಯಾವುದು?
ಬೆಂಗಳೂರು ಕೃಷಿ ವಿವಿ | |
ಧಾರಾವಾಡ ಕೃಷಿ ವಿವಿ | |
ರಾಯಚೂರು ಕೃಷಿ ವಿವಿ | |
ಶಿವಮೊಗ್ಗ ಕೃಷಿ ವಿವಿ |
ಬೆಳೆಹಾನಿ ಮತ್ತಿತರ ಕಾರಣಗಳಿಂದ ಕಂಗೆಟ್ಟು ದಾರಿ ಕಾಣದೆ ಆತ್ಮಹತ್ಯೆಗೆ ಶರಣಾಗುತ್ತಿದ್ದ ರೈತರಿಗೆ ಸಾಂತ್ವನ ಹೇಳಲೆಂದು ಧಾರವಾಡ ಕೃಷಿ ವಿಶ್ವವಿದ್ಯಾಲಯ 2015ರ ಜುಲೈ 23ರಂದು "ರೈತ ಚೇತನ ಸಹಾಯವಾಣಿ' ಆರಂಭಸಿದೆ. ಆ ಮೂಲಕ ಕೃಷಿ ವಿಜ್ಞಾನಿಗಳು ಹಾಗೂ ತಜ್ಞರು ರೈತರೊಂದಿಗೆ ನೇರವಾಗಿ ಸಂವಾದ ನಡೆಸುವ ಅವಕಾಶವನ್ನೂ ಕಲ್ಪಿಸಿದೆ. ಸುಮಾರು 45 ಕೃಷಿ ವಿವಿ ಪ್ರಾಧ್ಯಾಪಕರು, ವಿಜ್ಞಾನಿಗಳು, ತಜ್ಞರು ಹಾಗೂ ಸಿಬ್ಬಂದಿ ಪಾಳಿ ಪ್ರಕಾರ ಕಾರ್ಯ ನಿರ್ವಹಿಸಿದ್ದಾರೆ. ಧಾರವಾಡದ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ ಈ ಸಾರ್ಥಕ ಕಾರ್ಯಕ್ಕೆ ಕೈ ಜೋಡಿಸಿದೆ. ಇದುವರೆಗೂ ಸುಮಾರು 7400ಕ್ಕೂ ಹೆಚ್ಚು ರೈತರಿಗೆ ಸಾಂತ್ವನ ಹೇಳಲಾಗಿದೆ.
Question 8 |
8. ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆಗಳು ಯಾವುವು?
I) ರಾಮಥಾಳ್ ಮರೋಳ ಏತನೀರಾವರಿ ಯೋಜನೆ ಏಷ್ಯಾದ ಅತಿದೊಡ್ಡ ನೀರಾವರಿ ಯೋಜನೆಯಾಗಿದೆ
II) ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ 59 ,000 ಎಕರೆ ಭೂಮಿಗೆ ನೀರುಣಿಸುವ ಯೋಜನೆ ಇದಾಗಿದೆ
ಮೇಲಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆಯನ್ನು ಗುರುತಿಸಿ:
ಹೇಳಿಕೆ ಒಂದು ಮಾತ್ರ | |
ಹೇಳಿಕೆ ಎರಡು ಮಾತ್ರ | |
ಎರಡು ಹೇಳಿಕೆ ಸರಿ | |
ಎರಡು ಹೇಳಿಕೆ ತಪ್ಪು |
ರಾಮಥಾಳ್ ಮರೋಳ ಏತನೀರಾವರಿ ಯೋಜನೆ ಏಷ್ಯಾದಲ್ಲಿಯೇ ಅತಿದೊಡ್ಡ ಹನಿನೀರಾವರಿ ಯೋಜನೆಯಾಗಿದೆ. ಈ ಯೋಜನೆಯ ಕಾಮಗಾರಿ ಪೂರ್ಣಗೊಂಡಿದ್ದು, ಇದೇ ನವೆಂಬರ್ನಲ್ಲಿ ಉದ್ಘಾಟನೆಯಾಗಲಿದೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ 59 ,000 ಎಕರೆ ಭೂಮಿಗೆ ನೀರುಣಿಸುವ ಯೋಜನೆ ಇದಾಗಿದೆ. ಅಕ್ಟೋಬರ್ ತಿಂಗಳಿನಲ್ಲಿ ಪ್ರಯೋಗಾರ್ಥವಾಗಿ ನೀರು ಹರಿಸಲಾಗುವುದು.
Question 9 |
9. ರಾಜ್ಯದ ಛಾಯಾಗ್ರಾಹಕರೊಬ್ಬರು ಚಿತ್ರಿಸಿದ “'ಶಾರ್ಟ್ಟೋಡ್ ಸ್ನೇಕ್ ಈಗಲ್ ಫೀಡಿಂಗ್ ಸ್ನೇಕ್'” ಶೀರ್ಷಿಕೆಯ ಛಾಯಾಚಿತ್ರವು ಅಮೆರಿಕಾದ ಪ್ರತಿಷ್ಠಿತ ಪ್ರಶಸ್ತಿ ಆಯ್ಕೆಯಾಗಿದೆ. ಆ ಛಾಯಾಗ್ರಾಹಕರು ಯಾರು ಗುರುತಿಸಿ?
ಎಸ್. ತಿಪ್ಪೇಸ್ವಾಮಿ | |
ರುದ್ರೇಗೌಡ | |
ಉದಯ್ ಕುಮಾರ್ | |
ಮಹೇಶ್ ರಾಜ್ |
ಮೈಸೂರಿನ ವನ್ಯಜೀವಿ ಛಾಯಾಗ್ರಾಹಕ ಎಸ್.ತಿಪ್ಪೇಸ್ವಾಮಿ ಚಿತ್ರಿಸಿದ 'ಶಾರ್ಟ್ ಟೋಡ್ ಸ್ನೇಕ್ ಈಗಲ್ ಫೀಡಿಂಗ್ ಸ್ನೇಕ್ (Short-toed snake-eagle feeding snake )' ಶೀರ್ಷಿಕೆಯ ಛಾಯಾಚಿತ್ರವನ್ನು ಅಮೆರಿಕದ ಫೋಟೋಗ್ರಫಿ ಸೊಸೈಟಿಯು ವರ್ಷದ ಶ್ರೇಷ್ಠ ಚಿತ್ರವೆಂದು ಘೋಷಿಸಿದೆ. ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ವನ್ಯಜೀವಿ ವಿಭಾಗಗಳಲ್ಲಿ ಪ್ರಶಸ್ತಿ ಪಡೆದ 70 ದೇಶಗಳ ಛಾಯಾಗ್ರಾಹಕರಿಂದ ಪ್ರತಿ ವರ್ಷ ಛಾಯಾಚಿತ್ರಗಳನ್ನು ತರಿಸಿಕೊಳ್ಳಲಾಗುತ್ತದೆ. ನಂತರ ತೀರ್ಪುಗಾರರು ಹೆಚ್ಚು ಅಂಕ ನೀಡುವ ವನ್ಯಜೀವಿ ಛಾಯಾಚಿತ್ರವನ್ನು ವರ್ಷದ ಶ್ರೇಷ್ಠ ವನ್ಯಜೀವಿ ಛಾಯಾಚಿತ್ರ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಈ ಬಾರಿಯ ಸ್ಪರ್ಧೆಯಲ್ಲಿ ತಿಪ್ಪೇಸ್ವಾಮಿ ಅವರ ಚಿತ್ರ ಆಯ್ಕೆಯಾಗಿದೆ. ಅಕ್ಟೋಬರ್ ತಿಂಗಳಲ್ಲಿ ಅಮೆರಿಕದ ಟೆಕ್ಸಾಸ್ನಲ್ಲಿ ನಡೆಯುವ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುತ್ತದೆ.
Question 10 |
10. ರಾಜ್ಯ ಸರ್ಕಾರದ ಉದ್ದೇಶಿತ ಮೇಕೆದಾಟು ಅಣೆಕಟ್ಟು ಯೋಜನೆಗೆ ಸಂಬಂಧಿಸಿದಂತೆ ಹೇಳಿಕೆಗಳನ್ನು ಗಮನಿಸಿ:
I) ಇದು 50 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಅಣೆಕಟ್ಟು ಯೋಜನೆಯಾಗಿದೆ
II) ಕುಡಿಯುವ ನೀರಿನ ಪೂರೈಕೆ ಮಾತ್ರ ಈ ಯೋಜನೆಯ ಉದ್ದೇಶವಾಗಿದೆ
III) ಕರ್ನಾಟಕ ಸರ್ಕಾರ, ಬೆಂಗಳೂರು ಜಲಮಂಡಳಿ, ಬಿಬಿಎಂಪಿ ಇದಕ್ಕೆ ಆರ್ಥಿಕ ನೆರವು ನೀಡುತ್ತಿವೆ
ಈ ಮೇಲಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆಗಳು ಯಾವುವು?
ಹೇಳಿಕೆ ಒಂದು ಮಾತ್ರ | |
ಹೇಳಿಕೆ ಎರಡು ಮಾತ್ರ | |
ಹೇಳಿಕೆ ಮೂರು ಮಾತ್ರ | |
ಎಲ್ಲಾ ಹೇಳಿಕೆಗಳು ಸರಿ |
ಮೇಕೆದಾಟು ಯೋಜನೆಯಡಿ 67 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಒಂದೇ ಅಣೆಕಟ್ಟು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಬೆಂಗಳೂರು ನಗರಕ್ಕೆ ಕುಡಿಯಲು ಹಾಗೂ 300 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಉದ್ದೇಶಕ್ಕೆ ಈ ಜಲಾಶಯ ನಿರ್ಮಿಸಲಾಗುವುದು. ನೀರಿನ ಕೊರತೆ ಎದುರಾದಲ್ಲಿ ತಮಿಳುನಾಡಿಗೆ ವಾರ್ಷಿಕವಾಗಿ ಬಿಡುಗಡೆ ಮಾಡಬೇಕಾದ 192 ಟಿಎಂಸಿ ನೀರು ಹರಿಸಲು ಇದರಿಂದ ಅನುಕೂಲವಾಗಲಿದೆ. ಕರ್ನಾಟಕ ಸರ್ಕಾರ, ಬೆಂಗಳೂರು ಜಲಮಂಡಳಿ, ಬಿಬಿಎಂಪಿ ಆರ್ಥಿಕ ನೆರವು ನೀಡಲಿವೆ.
Comment
ಧನ್ಯವಾದಗಳು ಸರ್
Thanks sir
Dounload opstion kodi sir
ಡೌನ್ ಲೋಡ್ ಆಗತ ಇಲ್ಲ ಸಾರ್
Download option beku sir
Sir dowenleod point kodii