ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 4, 2016
Question 1 |
1.ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ಯಾವ ರಾಷ್ಟ್ರವನ್ನು “ಮಲೇರಿಯಾ ಮುಕ್ತ” ರಾಷ್ಟ್ರವೆಂದು ಘೋಷಿಸಿದೆ?
ಭಾರತ | |
ಶ್ರೀಲಂಕಾ | |
ಭೂತಾನ್ | |
ಬಾಂಗ್ಲದೇಶ |
ವಿಶ್ವ ಆರೋಗ್ಯ ಸಂಸ್ಥೆ ಶ್ರೀಲಂಕಾ ದೇಶವನ್ನು ಮಲೇರಿಯಾ ಮುಕ್ತ ರಾಷ್ಟ್ರವೆಂದು ಘೋಷಿಸಿದೆ. ಸೊಳ್ಳೆಯಿಂದ ಹರಡುವ ಈ ರೋಗವನ್ನು ಸಂಪೂರ್ಣವಾಗಿ ತಡೆಯುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆಯನ್ನು ಶ್ರೀಲಂಕಾ ಮಾಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಶಂಸಿದೆ. ಆರು ವರ್ಷಗಳ ಹಿಂದೆ ಶ್ರೀಲಂಕಾ ತೀವ್ರವಾಗಿ ಮಲೇರಿಯಾ ರೋಗಕ್ಕೆ ತುತ್ತಾಗಿತ್ತು, ಆದರೆ ಶ್ರೀಲಂಕಾ ಸರ್ಕಾರ ಕೈಗೊಂಡ ಹಲವು ಕ್ರಮಗಳಿಂದ ಕಳೆದ 3.5 ವರ್ಷಗಳಿಂದ ಯಾವುದೇ ಮಲೇರಿಯಾ ಪ್ರಕರಣಗಳು ಪತ್ತೆಯಾಗಿಲ್ಲ. ಆಗಾಗಿ ಶ್ರೀಲಂಕಾವನ್ನು ಮಲೇರಿಯಾ ಮುಕ್ತ ರಾಷ್ಟ್ರವೆಂದು ಘೋಷಿಸಲಾಗಿದೆ. ಈ ಹಿಂದೆ ಯುನೈಟೆಡ್ ಅರಬ್ ಎಮಿರೇಟ್ಸ್ (2007), ಮೊರೊಕ್ಕೊ (2010), ತರ್ಕಮೆನಿಸ್ತಾನ (2010) ಮತ್ತು ಮಾಲ್ಡೀವ್ಸ್ (2015) ರಲ್ಲಿ ಮಲೇರಿಯಾ ಮುಕ್ತ ರಾಷ್ಟ್ರಗಳೆಂದು ಘೋಷಿಸಲಾಗಿದೆ. ಭಾರತ 2030ಕ್ಕೆ ಮಲೇರಿಯಾ ಮುಕ್ತರಾಷ್ಟ್ರವನ್ನಾಗಿಸುವ ಗುರಿ ಹೊಂದಿದೆ.
Question 2 |
2. ಇತ್ತೀಚೆಗೆ ಭಾರತ ಚುನಾವಣಾ ಆಯೋಗ ಯಾವ ರಾಜಕೀಯ ಪಕ್ಷಕ್ಕೆ ರಾಷ್ಟ್ರೀಯ ಪಕ್ಷ ಸ್ಥಾನಮಾನ ನೀಡಿದೆ?
ಅಮ್ ಆದ್ಮಿ ಪಕ್ಷ | |
ಎಐಎಡಿಎಂಕೆ | |
ಬಿಜು ಜನತಾ ದಳ | |
ಅಖಿಲ ಭಾರತ ತೃಣಮೂಲ ಕಾಂಗ್ರೆಸ್ |
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರೀಯ ಪಕ್ಷ ಸ್ಥಾನವನ್ನು ಭಾರತೀಯ ಚುನಾವಣಾ ಆಯೋಗ ನೀಡಿದೆ. ರಾಷ್ಟ್ರೀಯ ಪಕ್ಷದ ಸ್ಥಾನಮಾನ ಪಡೆಯಲು ಬೇಕಾದ ಮಾನದಂಡಗಳ ಪೈಕಿ ಒಂದನ್ನು (4 ಅಥವಾ ಅದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ರಾಜ್ಯ ಪಕ್ಷದ ಸ್ಥಾನಮಾನ ಪಡೆದಿರಬೇಕು) ಟಿಎಂಸಿ ಪೂರೈಸಿದೆ. ಹೀಗಾಗಿ ಚುನಾವಣಾ ಆಯೋಗ ಟಿಎಂಸಿಯನ್ನು ರಾಷ್ಟ್ರೀಯ ಪಕ್ಷವನ್ನಾಗಿ ಪರಿಗಣಿಸಲು ಒಪ್ಪಿಕೊಂಡಿದೆ. ಪ್ರಸ್ತುತ ಟಿಎಂಸಿ ಪಶ್ಚಿಮಬಂಗಾಳದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿದೆ ಹಾಗೂ ಈಶಾನ್ಯ ರಾಜ್ಯಗಳಾದ ತ್ರಿಪುರಾ, ಅರುಣಾಚಲ ಪ್ರದೇಶ ಮತ್ತು ಮಣಿಪುರದಲ್ಲಿ ಟಿಎಂಸಿ ರಾಜ್ಯ ಪಕ್ಷ ಎನಿಸಿಕೊಂಡಿದೆ. ಚುನಾವಣಾ ಆಯೋಗದ ಈ ನಿರ್ಧಾರದಿಂದ ತೃಣಮೂಲ ಕಾಂಗ್ರೆಸ್ 7ನೇ ರಾಷ್ಟ್ರೀಯ ಪಕ್ಷ ಎನಿಸಿಕೊಂಡಿದೆ. ಸದ್ಯ ಕಾಂಗ್ರೆಸ್, ಬಿಜೆಪಿ, ಬಿಎಸ್ಪಿ, ಎನ್ಸಿಪಿ, ಸಿಪಿಐ ಮತ್ತು ಸಿಪಿಎಂಗಳು ರಾಷ್ಟ್ರೀಯ ಪಕ್ಷದ ಮಾನ್ಯತೆ ಪಡೆದಿವೆ.
Question 3 |
3. ಈ ಕೆಳಗಿನ ಯಾವ ರಾಜ್ಯಗಳಲ್ಲಿ ಎಲ್ಲಾ ಹಳ್ಳಿಗಳು ಮೊಬೈಲ್ ಸೇವೆಯನ್ನು ಹೊಂದಿವೆ?
I) ಮಹಾರಾಷ್ಟ್ರ
II) ಕರ್ನಾಟಕ
III) ಛತ್ತೀಸ್ ಘರ್
IV) ಕೇರಳ
ಈ ಕೆಳಗೆ ನೀಡಿರುವ ಕೋಡ್ ಮೂಲಕ ಸರಿಯಾದ ಉತ್ತರವನ್ನು ಆಯ್ಕೆಮಾಡಿ:
I, II & III | |
II & IV | |
I & III | |
I, II, III & IV |
ಒಡಿಶಾ ರಾಜ್ಯ ಮೊಬೈಲ್ ಸೇವೆ ಇಲ್ಲದ ಅತಿ ಹೆಚ್ಚು ಹಳ್ಳಿಗಳನ್ನು ಹೊಂದಿರುವ ಮೂಲಕ ಮೊದಲ ಸ್ಥಾನದಲ್ಲಿದೆ. ಒಡಿಶಾದಲ್ಲಿ 10,398 ಹಳ್ಳಿಗಳು ಮೊಬೈಲ್ ಸೇವೆಯಿಂದ ವಂಚಿತವಾಗಿದೆ. ಎರಡನೇ ಸ್ಥಾನದಲ್ಲಿ ಜಾರ್ಖಂಡ್ ಇದ್ದು, 5,949 ಹಳ್ಳಿಗಳಿಗೆ ಮೊಬೈಲ್ ಸೇವೆ ನೀಡಬೇಕಿದೆ. ಮದ್ಯಪ್ರದೇಶ (5,926) ಮತ್ತು ಮಹಾರಾಷ್ಟ್ರ (4,792) ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿವೆ. ಕೇರಳ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಎಲ್ಲಾ ಹಳ್ಳಿಗಳು ಮೊಬೈಲ್ ಸೇವೆಯನ್ನು ಹೊಂದಿವೆ.
Question 4 |
4. 2016 ಜಿ-20 ರಾಷ್ಟ್ರಗಳ ಶೃಂಗಸಭೆ ಚೀನಾದ ಯಾವ ನಗರದಲ್ಲಿ ಇತ್ತೀಚೆಗೆ ಆರಂಭಗೊಂಡಿತು?
ಬೀಜಿಂಗ್ | |
ಶಾಂಘೈ | |
ಹಂಗ್ ಝೌ | |
ಹುಯಾನ್ |
ಜಿ–20 ದೇಶಗಳ ಎರಡು ದಿನಗಳ ಶೃಂಗಸಭೆಯು ಚೀನಾ ಹಂಗ್ ಝೌನಲ್ಲಿ ಸೆಪ್ಟೆಂಬರ್ 4 ರಂದು ಆರಂಭಗೊಂಡಿತು. ಕುಂಠಿತಗೊಂಡಿರುವ ಜಾಗತಿಕ ಆರ್ಥಿಕತೆ, ಆರ್ಥಿಕ ರಕ್ಷಣಾ ನೀತಿಯ ಏರಿಕೆ, ಜಾಗತಿಕ ವ್ಯಾಪಾರ ಮತ್ತು ಉದ್ಯೋಗ ಸೃಷ್ಟಿಯ ವಿಸ್ತರಣೆಗೆ ರಚನಾತ್ಮಕ ಸುಧಾರಣೆಗಳು, ಆವಿಷ್ಕಾರ, ಒಳಗೊಳ್ಳುವ ಬೆಳವಣಿಗೆ ಮತ್ತು ಹವಾಮಾನ ಆರ್ಥಿಕತೆ ಇವು ಶೃಂಗಸಭೆಯಲ್ಲಿ ಚರ್ಚೆಗೆ ಬರಲಿರುವ ಪ್ರಮುಖ ವಿಷಯಗಳಾಗಿವೆ.ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ಜಗತ್ತಿನ ಪ್ರಮುಖ ದೇಶಗಳ ನಾಯಕರು ಆರ್ಥಿಕ ಬೆಳವಣಿಗೆ ಮತ್ತು ವ್ಯಾಪಾರದ ವೃದ್ಧಿಗೆ ಅಗತ್ಯವಾದ ಪ್ರಯತ್ನಗಳ ಕುರಿತು ಸಮಾಲೋಚನೆ ನಡೆಸಲಿದ್ದಾರೆ.
Question 5 |
5. ವಿಶ್ವದ ಅಗ್ರಮಾನ್ಯ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಗ್ರ್ಯಾಂಡ್ ಸ್ಲಾಮ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ನಲ್ಲಿ 307ನೇ ಗೆಲುವು ಗಳಿಸಿ ಯಾರ ದಾಖಲೆಯನ್ನು ಅಳಿಸಿ ಹಾಕಿದರು?
ಮಾರ್ಟಿನಾ ನವ್ರಟಿಲೋವಾ | |
ಜೊಹಾನ್ನ ಲಾರ್ಸನ್ | |
ವಿಕ್ಟೋರಿಯಾ ಅಜೆರೆಕಾ | |
ವೀನಸ್ ವಿಲಿಯಮ್ಸ್ |
ವಿಶ್ವದ ಅಗ್ರಮಾನ್ಯ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿ ಯಮ್ಸ್ ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. 22 ಗ್ರ್ಯಾಂಡ್ ಸ್ಲಾಮ್ ಗಳ ಒಡತಿ ಸೆರೆನಾ ಅವರು ಗ್ರ್ಯಾಂಡ್ ಸ್ಲಾಮ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ನಲ್ಲಿ 307ನೇ ಗೆಲುವು ಗಳಿಸಿ ಟೆನಿಸ್ ದಂತಕತೆ ಮಾರ್ಟಿನಾ ನವ್ರಟಿಲೋವಾ ಅವರ ದಾಖಲೆ ಅಳಿಸಿ ಹಾಕಿದ್ದಾರೆ. ಅಷ್ಟೇ ಅಲ್ಲದೆ ಸ್ವಿಟ್ಜರ್ಲೆಂಡ್ನ ರೋಜರ್ ಫೆಡರರ್ ಹೆಸರಿನಲ್ಲಿರುವ ಸಾಧನೆಯನ್ನು ಸೆರೆನಾ ಸರಿಗಟ್ಟಿದ್ದಾರೆ. ಋತುವಿನ ಕೊನೆಯ ಗ್ರ್ಯಾಂಡ್ಸ್ಲಾಮ್ ಅಮೆರಿಕ ಓಪನ್ನ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ನಾಲ್ಕನೇ ಸುತ್ತು ಪ್ರವೇಶಿಸಿ ಸೆರೆನಾ ಈ ಸಾಧನೆ ಮಾಡಿದ್ದಾರೆ.
Question 6 |
6. ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಯಾವ ರಾಜ್ಯದ ಮದ್ಯ ಮತ್ತು ಮಾಧಕ ವಸ್ತು ವಿರೋಧಿ ಅಭಿಯಾನದ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ?
ಮಹಾರಾಷ್ಟ್ರ | |
ತೆಲಂಗಣ | |
ಕೇರಳ | |
ಗೋವಾ |
ಕೇರಳ ಸರ್ಕಾರ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ರವರನ್ನು ಮದ್ಯ ಮತ್ತು ಮಾಧಕ ವಸ್ತು ವಿರೋಧಿ ಅಭಿಯಾನದ ರಾಯಭಾರಿಯನ್ನಾಗಿ ನೇಮಕ ಮಾಡಿದೆ. ಈ ಅಭಿಯಾನದಡಿ ಮದ್ಯ ಮತ್ತು ಮಾಧಕ ವಸ್ತು ಸೇವೆನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಗುವುದು.
Question 7 |
7. “ಮುನ್ನು: ಎ ಬಾಯ್ ಫ್ರಮ್ ಕಾಶ್ಮೀರ್ (Munnu: A Boy From Kashmir)” ಪುಸ್ತಕದ ಲೇಖಕರು ಯಾರು?
ಮಲಿಕ್ ಸಜದ್ | |
ಅನುರಾಧ ರಾವ್ | |
ದಿನೇಶ್ ಠಾಕೂರ್ | |
ಸ್ವಾತಿ ಚತುರ್ವೇದಿ |
“ಮುನ್ನು: ಎ ಬಾಯ್ ಫ್ರಮ್ ಕಾಶ್ಮೀರ್” ಪುಸ್ತಕವನ್ನು ಮಲಿಕ್ ಸಜದ್ ಬರೆದಿದ್ದಾರೆ. ಸಂಘರ್ಷದಿಂದ ಕೂಡಿರುವ ಕಾಶ್ಮೀರದಲ್ಲಿ ಹುಟ್ಟಿ ಬೆಳದ ಹುಡುಗನೊಬ್ಬನ ಹೃದಯ ವಿದ್ರಾವಕ ಘಟನೆಯನ್ನು ಈ ಪುಸ್ತಕದಲ್ಲಿ ಚಿತ್ರಿಸಲಾಗಿದೆ.
Question 8 |
8. ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಪೆಲೆಟ್ ಗನ್ ಬದಲು ಪಾವಾ ಶೆಲ್ ಗಳನ್ನು ಬಳಸಲು ಒಪ್ಪಿಗೆ ನೀಡಿದೆ. ಪಾವಾ ಶೆಲ್ ಗಳನ್ನು ಈ ಕೆಳಗಿನ ಯಾವ ಸಂಸ್ಥೆ ಅಭಿವೃದ್ದಿಪಡಿಸಿದೆ?
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ | |
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟಾಕ್ಸಿಕಾಲಜಿ ರಿಸರ್ಚ್ | |
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಬಯಾಲಜಿ | |
ಇಂಡಿಯನ್ ಆರ್ಡಿನೆನ್ಸ್ ಫ್ಯಾಕ್ಟರಿ |
ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರದ ವೇಳೆ ಜನರನ್ನು ನಿಯಂತ್ರಿಸಲು ಪೆಲೆಟ್ ಗನ್ ಬದಲಿಗೆ ಪಾವಾ ಶೆಲ್ಸ್ ಬಳಸಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ. ಪಾವಾ ಶೆಲ್ಸ್ ಅಥವಾ ಪೆಲರ್ಗೊನಿಕ್ ಆಸಿಡ್ ವನಿಲಿಲ್ಲ್ ಅಮೈಡ್ (Pelargonic Acid Vanillyl Amide (PAVA)) ಮೆಣಸಿನಪುಡಿ ಆಧಾರಿತ ಗ್ರೆನೇಡ್ ಆಗಿದ್ದು, ನೊನಿವಮೈಡ್ (Nonivamide) ಎಂತಲೂ ಕರೆಯಲಾಗುತ್ತದೆ. ಪೆಲೆಟ್ ಗನ್ಗೆ ಹೋಲಿಸಿದರೆ ಇದು ಕಡಿಮೆ ಅಪಾಯಕಾರಿಯಾಗಿದ್ದು,ದೇಹಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರೀಯಲ್ ರಿಸರ್ಚ್ (CSIR)ನ ಅಂಗಸಂಸ್ಥೆಯಾದ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಟಾಕ್ಸಿಕಲಾಜಿ ಪಾವಾ ಸೆಲ್ ಅನ್ನು ಅಭಿವೃದ್ದಿಪಡಿಸಿದೆ. ಕೇಂದ್ರ ಸರ್ಕಾರ ಇತ್ತೀಚೆಗೆ ರಚಿಸಿದ್ದ ಟಿವಿಎಸ್ಎನ್ ಪ್ರಸಾದ್ ನೇತೃತ್ವದ ಸಮಿತಿಯ ಶಿಫಾರಸ್ಸಿನ ಮೇರೆಗೆ ಪಾವಾ ಶೆಲ್ ಬಳಸಲು ತೀರ್ಮಾನಿಸಲಾಗಿದೆ.
Question 9 |
9. ಇತ್ತೀಚೆಗೆ ನಿಧನರಾದ “ನಳಿನಿಧಾರ್ ಭಟ್ಟಚಾರ್ಯ”ರವರು ಯಾವ ರಾಜ್ಯದ ಪ್ರಸಿದ್ದ ಕವಿ ಆಗಿದ್ದಾರೆ?
ಅಸ್ಸಾಂ | |
ಕೇರಳ | |
ಮಧ್ಯ ಪ್ರದೇಶ | |
ಗುಜರಾತ್ |
ಅಸ್ಸಾಮಿ ಭಾಷೆಯ ಪ್ರಸಿದ್ದ ಕವಿ, ವಿಮರ್ಶಕ ಮತ್ತು ಪ್ರಬಂಧಕಾರ ನಳಿನಿಧಾರ್ ಭಟ್ಟಚಾರ್ಯ ನಿಧನರಾದರು. 95 ವರ್ಷದ ಭಟ್ಟಚಾರ್ಯ ವಯೋಸಹಜಮಾನದ ಕಾಯಿಲೆಯಿಂದ ಬಳಲುತ್ತಿದ್ದರು. ಅಸ್ಸಾಂ ಸಾಹಿತ್ಯ ಸಭಾ ಅವರಿಗೆ ಸಾಹಿತ್ಯಚಾರ್ಯ ಬಿರುದನ್ನು 2010 ರಲ್ಲಿ ನೀಡಿ ಗೌರವಿಸಿತ್ತು. ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದ್ದ ಅವರಿಗೆ 1983 ರಲ್ಲಿ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ, 1991 ರಲ್ಲಿ ಭಾರತೀಯ ಭಾಷಾ ಪರಿಷದ್ ಪ್ರಶಸ್ತಿ, 2002 ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು 2006 ರಲ್ಲಿ ಅಸ್ಸಾಂ ವ್ಯಾಲಿ ಸಾಹಿತ್ಯ ಪ್ರಶಸ್ತಿಗಳು ಲಭಿಸಿವೆ.
Question 10 |
10. 2016 ಇಟಾಲಿಯನ್ ಗ್ರ್ಯಾನ್ ಫ್ರಿ ಫಾರ್ಮೂಲಾ-1 ಚಾಂಪಿಯನ್ಷಿಪ್ ನಲ್ಲಿ ಪ್ರಶಸ್ತಿ ಗೆದ್ದವರು ಯಾರು?
ಸೆಬಾಸ್ಟಿಯನ್ ವೆಟಾಲ್ | |
ನಿಕೊ ರೋಸ್ಬರ್ಗ್ | |
ಲೂಯಿಸ್ ಹ್ಯಾಮಿಲ್ಟನ್ | |
ಸರ್ಜಿಯೊ ಪೆರೆಜ್ |
ಮರ್ಸಿಡೀಸ್ ತಂಡದ ನಿಕೊ ರೋಸ್ಬರ್ಗ್ ಇಟಾಲಿಯನ್ ಗ್ರ್ಯಾನ್ ಪ್ರಿ ಫಾರ್ಮುಲಾ-1 ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಎತ್ತಿಹಿಡಿದಿದ್ದಾರೆ.ಇದೇ ತಂಡದ ಲೂಯಿಸ್ ಹ್ಯಾಮಿಲ್ಟನ್ ಎರಡನೇ ಸ್ಥಾನ ಗಳಿಸಿದರೆ, ಫೆರಾರಿ ತಂಡದ ಸೆಬಾಸ್ಟಿಯನ್ ವೆಟಲ್ ಮೂರನೇಯವರಾಗಿ ಸ್ಪರ್ಧೆ ಕೊನೆಗೊಳಿಸಿದರು.
Super questions
Supr
Supr
nice
ಧನ್ಯವಾದಗಳು ಸರ್