ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 9, 2016

Question 1

1. ಇತ್ತೀಚೆಗೆ ನಡೆದ 9ನೇ ಕೃಷಿ ನಾಯಕತ್ವ ಶೃಂಗಸಭೆಯಲ್ಲಿ “ಅತ್ಯುತ್ತಮ ತೋಟಗಾರಿಕೆ ರಾಜ್ಯ (Best Horticulture State)” ಪ್ರಶಸ್ತಿ ಪಡೆದ ರಾಜ್ಯ ಯಾವುದು?

A
ಕೇರಳ
B
ಹರಿಯಾಣ
C
ಮಧ್ಯ ಪ್ರದೇಶ
D
ಕರ್ನಾಟಕ
Question 1 Explanation: 
ಹರಿಯಾಣ:

ಹರಿಯಾಣ ರಾಜ್ಯ ಅತ್ಯುತ್ತಮ ತೋಟಗಾರಿಕೆ ರಾಜ್ಯ ಪ್ರಶಸ್ತಿಗೆ ಭಾಜನವಾಗಿದೆ. ಇಂಡಿಯನ್ ಕೌನ್ಸಿಲ್ ಆಫ್ ಫುಡ್ ಅಂಡ್ ಅಗ್ರಿಕಲ್ಚರ್ (ICFA) ಈ ಪ್ರಶಸ್ತಿಯನ್ನು ನೀಡುತ್ತಿದೆ. ನವದೆಹಲಿಯಲ್ಲಿ ICFA ಪ್ರಾಯೋಜಕತ್ವದ 9ನೇ ಕೃಷಿ ನಾಯಕತ್ವ ಶೃಂಗಸಭೆಯಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ತೋಟಗಾರಿಕೆಯನ್ನು ಪ್ರೋತ್ಸಾಹಿಸಿ ರೈತರ ಆದಾಯವನ್ನು ಹೆಚ್ಚಿಸಲು ಹರಿಯಾಣ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಇದೇ ವೇಳೆ ಅತ್ಯುತ್ತಮ ಕೃಷಿ ರಾಜ್ಯ ಪ್ರಶಸ್ತಿಯನ್ನು ಒಡಿಶಾ ರಾಜ್ಯ ಪಡೆದುಕೊಂಡಿದೆ.

Question 2

2. ವಿಶ್ವದಲ್ಲೇ ಮೊದಲ ಬಾರಿಗೆ ಚಾಲಕ ರಹಿತ ಬಸ್ಸ್ ಸೇವೆಯನ್ನು ಯಾವ ದೇಶದಲ್ಲಿ ಆರಂಭಿಸಲಾಗಿದೆ?

A
ಸಿಂಗಾಪುರ
B
ಫ್ರಾನ್ಸ್
C
ಬ್ರೆಜಿಲ್
D
ಸ್ವಿಟ್ಜರ್ಲ್ಯಾಂಡ್
Question 2 Explanation: 
ಫ್ರಾನ್ಸ್:

ವಿಶ್ವದ ಮೊದಲ ಚಾಲಕ ರಹಿತ ಬಸ್ಸ್ ಸೇವೆಗೆ ಫ್ರಾನ್ಸ್ನ ಲಿಯಾನ್ ನಗರದಲ್ಲಿ ಚಾಲನೆ ನೀಡಲಾಗಿದೆ. ಮೊದಲ ಹಂತದಲ್ಲಿ ಎರಡು ವಿದ್ಯುತ್ ಚಾಲಿತ ಬಸ್ಸ್ ಗಳನ್ನು ಆರಂಭಿಸಲಾಗಿದ್ದು, ಲೇಸರ್ ಸಂವೇದಕಗಳು, ಸ್ಟೀರಿಯೋ ದೃಷ್ಟಿ ಮತ್ತು ಜಿಪಿಎಸ್ ಸೇರಿದಂತೆ ಅತ್ಯಾಧುನಿಕ ಉಪಕರಣಗಳನ್ನು ಇವುಗಳಿಗೆ ಅಳವಡಿಸಲಾಗಿದೆ. 15 ಜನ ಪ್ರಯಾಣಿಕರನ್ನು ಕರೆದೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿರುವ ಈ ಬಸ್ಸ್ ಗಳು ಗಂಟೆಗೆ 20 ಕಿ.ಮೀ ವೇಗದಲ್ಲಿ ಚಲಿಸಲಿವೆ.

Question 3

3. ರಿಯೋ ಪ್ಯಾರಾಲಿಂಫಿಕ್ಸ್ ಟಿ42 ಹೈಜಂಪ್ ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಆಟಗಾರ ಯಾರು?

A
ವರುಣ್ ಸಿಂಗ್
B
ಮರಿಯಪ್ಪನ್ ತಂಗವೇಲು
C
ಪ್ರದೀಪ್ ಶೆಟ್ಟಿ
D
ದೇವೇಂದ್ರ ಝಾರಿಯಾ
Question 3 Explanation: 
ಮರಿಯಪ್ಪನ್ ತಂಗವೇಲು

ಬ್ರೆಜಿಲ್ ನ ರಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಟಿ42 ಹೈಜಂಪ್ ನಲ್ಲಿ ಭಾರತದ ಮರಿಯಪ್ಪನ್ ತಂಗವೇಲು ಚಿನ್ನದ ಪದಕ ಗೆದ್ದಿದ್ದಾರೆ. ಆ ಮೂಲಕ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟರು. ಭಾರತದ ಮತ್ತೊಬ್ಬ ಕ್ರೀಡಾಪಟು ವರುಣ್ ಸಿಂಗ್ ಇದೇ ವಿಭಾಗದಲ್ಲಿ ಕಂಚು ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಹೈಜಂಪ್ ಸ್ಪರ್ಧೆಯಲ್ಲಿ ಮರಿಯಪ್ಪನ್ ತಂಗವೇಲು 1.89 ಮೀಟರ್ ದೂರ ಜಿಗಿದು ಚಿನ್ನದ ಗೆದ್ದಿದ್ದಾರೆ. ಇನ್ನು ಇದೇ ಸ್ಪರ್ಧೆಯಲ್ಲಿ ಭಾರತದ ವರುಣ್ ಸಿಂಗ್ ಭಾಟಿ 1.96 ಮೀಟರ್ ದೂರ ಜಿಗಿದು ಕಂಚು ಪದಕವನ್ನು ಗೆದ್ದು ದೇಶದ ಕೀರ್ತಿ ಹೆಚ್ಚಿಸಿದ್ದಾರೆ.

Question 4

4.ಈ ಕೆಳಗಿನ ಯಾವ ದೇಶದೊಂದಿಗೆ ಭಾರತ ಇತ್ತೀಚೆಗೆ “ಓಪನ್ ಸ್ಕೈ (Open Sky)” ಒಪ್ಪಂದಕ್ಕೆ ಸಹಿ ಮಾಡಿದೆ?

A
ಬ್ರೆಜಿಲ್
B
ಗ್ರೀಸ್
C
ಮೆಕ್ಸಿಕೊ
D
ಇರಾಕ್
Question 4 Explanation: 
ಗ್ರೀಸ್:

ಗ್ರೀಸ್ ಮತ್ತು ಭಾರತ ನಡುವೆ ಅಪರಿಮಿತಿ ವಿಮಾನ ಹಾರಾಟ ನಡೆಸುವ ಸಲುವಾಗಿ ಭಾರತ ಸರ್ಕಾರ ಗ್ರೀಸ್ ದೇಶದೊಂದಿಗೆ ಒಡಂಬಡಿಕೆಗೆ ಸಹಿಹಾಕಿದೆ. ಜೊತೆಗೆ ಮುಕ್ತ ಆಕಾಶ (Open Skies)ಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ವಾಯು ಸೇವೆ ಒಪ್ಪಂದಕ್ಕೂ ಸಹಿ ಮಾಡಿವೆ. ಆ ಮೂಲಕ ಭಾರತದ ಹೊಸ ನಾಗರಿಕ ವಿಮಾನಯಾನ ನೀತಿಯಡಿ ಒಪನ್ ಸ್ಕೈ ಒಪ್ಪಂದಕ್ಕೆ ಸಹಿ ಮಾಡಿದ ಮೊದಲ ದೇಶ ಗ್ರೀಸ್ ಆಗಿದೆ.

Question 5

5. ಪ್ರತಿಷ್ಠಿತ ಸ್ಯಾಮ್ಸಂಗ್ 6 ರೆಡ್ ವಿಶ್ವ ಸ್ನೂಕರ್ ಚಾಂಪಿಯನ್ಷಿಪ್ ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಈ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಸ್ನೂಕರ್ ಯಾರು?

A
ಪಂಕಜ್ ಅಡ್ವಾಣಿ
B
ಆದಿತ್ಯಾ ಮೆಹ್ತ
C
ಗೀತ್ ಸೇತಿ
D
ಅಶೋಕ್ ಸಂಡಿಲಿ
Question 5 Explanation: 
ಪಂಕಜ್ ಅಡ್ವಾಣಿ:

ಪ್ರತಿಷ್ಠಿತ ಸ್ಯಾಂಗ್ಸಮ್ 6 ರೆಡ್ ವಿಶ್ವ ಸ್ನೂಕರ್ ಚಾಂಪಿಯನ್ಶಿಪ್ನಲ್ಲಿ ಪಂಕಜ್ ಅಡ್ವಾಣಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಈ ಟೂರ್ನಿಯ ಸೆಮಿಫೈನಲ್ನಲ್ಲಿ ಸೋಲುವ ಮೂಲಕ ಕಂಚಿನ ಪದವನ್ನು ಗೆಲ್ಲಲಷ್ಟೇ ಶಕ್ತರಾದರು. ಆದರೆ ಅಡ್ವಾಣಿ ಪ್ರತಿಷ್ಠಿತ ಟೂರ್ನಿಯಲ್ಲಿ ಪದಕ ಜಯಿಸಿದ ಭಾರತದ ಮೊದಲ ಸ್ನೂಕರ್ ಎನಿಸಿಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದರು.

Question 6

6. ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಅಂಕಿಅಂಶದ ಪ್ರಕಾರ ಜೂನ್ ತಿಂಗಳ ಅಂತ್ಯಕ್ಕೆ ಭಾರತದ ಒಟ್ಟಾರೆ ಟೆಲಿ ಸಾಂದ್ರತೆ ಎಷ್ಟಿದೆ?

A
89.0%
B
79.8%
C
83.20%
D
85.60%
Question 6 Explanation: 
83.20%:

ಭಾರತದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದ್ದು, ಜೂನ್ ಅಂತ್ಯದ ವೇಳೆಗೆ 103.5 ಕೋಟಿ ದಾಟಿದೆ ಎಂದು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹೇಳಿದೆ.ಮೇ ತಿಂಗಳ ಕೊನೆಯಲ್ಲಿ 1058.03 ಮಿಲಿಯನ್ ಇದ್ದ ಒಟ್ಟು ಟೆಲಿಕಾಂ ಗ್ರಾಹಕರು (ನಿಸ್ತಂತು ಮತ್ತು ವೈರ್ಲೈನ್) ಜೂನ್ ಕೊನೆಯಲ್ಲಿ 1059.86 ಮಿಲಿಯನ್ ನಷ್ಟಿತ್ತು. ಭಾರತದ ಟೆಲಿ ಸಾಂದ್ರತೆ ಇದರೊಂದಿಗೆ ಭಾರತದ ಒಟ್ಟಾರೆ ಟೆಲಿ ಸಾಂದ್ರತೆ ಮೇ ಕೊನೆಯಲ್ಲಿ 83.14 ರಿಂದ 83.20 ಹೆಚ್ಚಳ ಆಗಿದೆಯೆಂದು ಜೂನ್ ತಿಂಗಳ ಮಾಸಿಕ ವರದಿಯಲ್ಲಿ ತಿಳಿಸಿದೆ.

Question 7

7. ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದ ದೇಶದ ಸ್ವಚ್ಚ ಜಿಲ್ಲೆಗಳ ಪೈಕಿ ಬಯಲು ಪ್ರದೇಶ ವಿಭಾಗದಲ್ಲಿ ಈ ಕೆಳಗಿನ ಯಾವುದು ಅತ್ಯಂತ ಸ್ವಚ್ಚ ಜಿಲ್ಲೆ ಎನಿಸಿದೆ?

A
ಸಿಂಧುದುರ್ಗ
B
ರತ್ನಗಿರಿ
C
ಥಾಣೆ
D
ನಾದಿಯಾ
Question 7 Explanation: 
ಸಿಂಧುದುರ್ಗ:

ಕೇಂದ್ರ ಸರ್ಕಾರ ಇತ್ತೀಚೆಗೆ ಕೈಗೊಂಡಿದ್ದ ಗ್ರಾಮೀಣ ಸ್ವಚ್ಚ ಸರ್ವೇಕ್ಷಣಾ ವರದಿಯನ್ನು ಬಿಡುಗಡೆಗೊಳಿಸಿದೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರ ಸಿಂಗ್ ತೋಮರ್ ವರದಿಯನ್ನು ಬಿಡುಗಡೆ ಮಾಡಿದರು. ಸಮೀಕ್ಷೆಯನ್ನು ಬಯಲು ಪ್ರದೇಶ ಹಾಗೂ ಗುಡ್ಡಗಾಡು ಪ್ರದೇಶ ಎಂದು ಎರಡು ಭಾಗಗಳಲ್ಲಿ ಪ್ರತ್ಯೇಕಿಸಿ ನಡೆಸಲಾಗಿದೆ. ಬಯಲು ಪ್ರದೇಶದ ವಿಭಾಗದಲ್ಲಿ ಟಾಪ್ 10 ಜಿಲ್ಲೆಗಳಲ್ಲಿ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆ ಮೊದಲ ಸ್ಥಾನ ಪಡೆದಿದೆ. ನಂತರದ ಸ್ಥಾನಗಳಲ್ಲಿ ಸತಾರಾ, ಕೊಲ್ಹಾಪುರ, ರತ್ನಗಿರಿ ಮತ್ತು ಥಾಣೆ (ಮಹಾರಾಷ್ಟ್ರ), ನಾದಿಯಾ, ಮಿಡ್ನಾಪುರ ಪೂರ್ವ, ಹೂಗ್ಲಿ (ಪ.ಬಂಗಾಳ), ಉಡುಪಿ (ಕರ್ನಾಟಕ) ಮತ್ತು ಚುರು (ರಾಜಸ್ಥಾನ) ಜಿಲ್ಲೆಗಳಿವೆ. ಇನ್ನು ಗುಡ್ಡಗಾಡು ಜಿಲ್ಲೆಗಳಲ್ಲಿ ಹಿಮಾಚಲ ಪ್ರದೇಶದ ಮಂಡಿ ಮೊದಲ ಸ್ಥಾನದಲ್ಲಿದೆ. ಇನ್ನುಳಿದಂತೆ ಈಶಾನ್ಯ ಮತ್ತು ಹಿಮಾಲಯ ತಪ್ಪಲಿನ ಕೆಲ ಜಿಲ್ಲೆಗಳಿವೆ. ಕರ್ನಾಟಕದ ಉಡುಪಿ ಜಿಲ್ಲೆ 8ನೇ ಸ್ಥಾನವನ್ನು ಗಳಿಸುವ ಮೂಲಕ ಟಾಪ್ 10ರಲ್ಲಿ ಕಾಣಿಸಿಕೊಂಡ ಏಕೈಕ ಜಿಲ್ಲೆಯಾಗಿದೆ.

Question 8

8. ಭಾರತದ ಉಪರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು ಅಗತ್ಯವಿರುವ ಕನಿಷ್ಠ ವಯಸ್ಸೆಷ್ಟು?

A
25
B
30
C
35
D
40
Question 8 Explanation: 
35 :

ಭಾರತದ ಉಪರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಲು ಕನಿಷ್ಠ 35 ವರ್ಷ ವಯಸ್ಸಾಗಿರಬೇಕು. ಭಾರತ ಸಂವಿಧಾನದ ಪರಿಚ್ಛೇದ 66ರ ಪ್ರಕಾರ ಭಾರತೀಯ ಪ್ರಜೆ ಆಗಿರಬೇಕು, ಯಾವುದೇ ಲಾಭದಾಯಕ ಹುದ್ದೆಗಳನ್ನು ಹೊಂದಿರಬಾರದು ಮತ್ತು ರಾಜ್ಯ ಸಭಾ ಸದಸ್ಯನಾಗಿ ನೇಮಕಗೊಳ್ಳಲು ಬೇಕಿರುವ ಎಲ್ಲಾ ಅರ್ಹತೆಯನ್ನು ಹೊಂದಿರತಕ್ಕದ್ದು.

Question 9

9. ಇತ್ತೀಚೆಗೆ ಬಿಡುಗಡೆಗೊಂಡ “ಸಿಕ್ಸ್ ಮೆಷಿನ್ (Six Machine)” ಯಾವ ಕ್ರಿಕೆಟ್ ಆಟಗಾರನ ಆತ್ಮಚರಿತ್ರೆ?

A
ಕ್ರಿಸ್ ಗೇಲ್
B
ವಿರಾಟ್ ಕೊಹ್ಲಿ
C
ಬ್ರೆಂಡಮ್ ಮ್ಯಾಕಲಂ
D
ರಿಕಿ ಪಾಂಟಿಂಗ್
Question 9 Explanation: 
ಕ್ರಿಸ್ ಗೇಲ್:

ವೆಸ್ಟ್ ಇಂಡೀಸ್ನ ಸ್ಪೋಟಕ ಬ್ಯಾಟ್ಸಮನ್ ಕ್ರಿಸ್ ಗೇಲ್ ಅವರ ಆತ್ಮ ಚರಿತ್ರೆ “ಸಿಕ್ಸ್ ಮೆಷಿನ್” ಬಿಡುಗಡೆಗೊಂಡಿದೆ. ಈ ಪುಸ್ತಕದಲ್ಲಿ ಕ್ರಿಸ್ ಗೇಲ್ ತಮ್ಮ ವೈಯುಕ್ತಿಕ ಮತ್ತು ವೃತ್ತಿ ಜೀವನದ ವಿವಿಧ ಮಜಲುಗಳನ್ನು ಇದರಲ್ಲಿ ಬಣ್ಣಿಸಲಾಗಿದೆ. ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಸಮ್ಮುಖದಲ್ಲಿ, ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಈ ಆತ್ಮ ಚರಿತ್ರೆಯನ್ನು ಬಿಡುಗಡೆಗೊಳಿಸಿದರು.

Question 10

10. ಜೋಳ ಮುಖ್ಯ ಆಹಾರ ಪದಾರ್ಥವಾಗಿರುವ ಪ್ರದೇಶ ಸಾಮಾನ್ಯವಾಗಿ ಕಂಡು ಬರುವ ಕಾಯಿಲೆ ಯಾವುದು?

A
ಪೆಲ್ಲಾಗ್ರ
B
ಬೆರಿ-ಬೆರಿ
C
ಇರುಳು ಕುರುಡು
D
ಸ್ಕರ್ವಿ
Question 10 Explanation: 
ಪೆಲ್ಲಾಗ್ರ:

ಜೋಳವನ್ನು ಮುಖ್ಯ ಆಹಾರವನ್ನಾಗಿ ಬಳಸುವ ಪ್ರದೇಶದಲ್ಲಿ ಪೆಲ್ಲಾಗ್ರ ಕಾಯಿಲೆ ಸಾಮಾನ್ಯವಾಗಿ ಕಂಡುಬರುತ್ತದೆ. ಪೆಲ್ಲಾಗ್ರ ವಿಟಮಿನ್ B3 ಕೊರತೆಯಿಂದ ಬರುವ ಕಾಯಿಲೆ. ಜೋಳದಲ್ಲಿ ವಿಟಮಿನ್ B3 ಇದ್ದರೂ, ಮಾನವ ದೇಹ ಸುಲಭವಾಗಿ ಹೀರಿಕೊಳ್ಳುವ ರೂಪದಲ್ಲಿ ಇಲ್ಲದಿರುವುದರಿಂದ ಪೆಲ್ಲಾಗ್ರಕ್ಕೆ ಕಾರಣವಾಗಿದೆ.

There are 10 questions to complete.

4 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 9, 2016”

  1. suryakant m magadum

    Very nice

  2. Santhosh kumar

    Super sir

Leave a Comment

This site uses Akismet to reduce spam. Learn how your comment data is processed.