ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು.
ಕ್ವಿಜ್-18
Question 1 |
1. ಈ ಕೆಳಗಿನವುಗಳನ್ನು ಪರೀಕ್ಷಿಸಿ ಮತ್ತು ಸರಿಯಾದ ಎರಡು ಹೇಳಿಕೆಗಳನ್ನು ಗುರುತಿಸಿ
ಅ. ಅಂಡಮಾನ್ ಭಾರತದ ಒಂದು ರಾಜ್ಯವಾಗಿದೆ
ಆ. ಭಾರತದಲ್ಲಿ ರಾಷ್ಟ್ರಪತಿಯನ್ನು ಅಧ್ಯಕ್ಷ ಎಂದೂ ಕರೆಯಲಾಗುತ್ತದೆ
ಇ. ಕನಿಷ್ಟ 1/3 ರಷ್ಟು ಚುನಾಯಿತ ಸದಸ್ಯರು ಪಕ್ಷತ್ಯಾಗ ಮಾಡಿದರೆ ಆ ಪಕ್ಷತ್ಯಾಗ ನ್ಯಾಯಬದ್ಧ
ಈ. ದುಡಿಮೆಯ ಹಕ್ಕು ಭಾರತ ಸಂವಿಧಾನದ ಮೂಲಭೂತ ಹಕ್ಕಾಗಿದೆ
ಅ ಮತ್ತು ಆ | |
ಆ ಮತ್ತು ಈ | |
ಇ ಮತ್ತು ಈ | |
ಆ ಮತ್ತು ಇ |
Question 2 |
2. ಈ ಕೆಳಗಿನವುಗಳಲ್ಲಿ ಯಾವ ಎರಡು ಹೇಳಿಕೆಗಳು ಸರಿಯಾಗಿವೆ ಎಂದು ಪರೀಕ್ಷಿಸಿ
ಅ. ಬಜೆಟ್ ಅನ್ನುಮೊಟ್ಟ ಮೊದಲು ಲೋಕಸಭೆಯಲ್ಲಿ ಮಂಡಿಸಲಾಗುತ್ತದೆ
ಆ. ಭಾರತದ ರಾಷ್ಟ್ರಪತಿಗಳು ಅಮೆರಿಕದ ಅಧ್ಯಕ್ಷರಂತೆಯೇ ಅಧಿಕಾರ ಹೊಂದಿದ್ದಾರೆ
ಇ. ಕರ್ನಾಟಕದಲ್ಲಿ ಮತದಾನದ ವಯಸ್ಸು 18 ವರ್ಷಗಳು
ಈ. ಸಂಸತ್ತು ರಾಷ್ಟ್ರಪತಿಗಳ ಸಂಬಳವನ್ನು ತಡೆಹಿಡಿಯಬಹುದು
ಅ ಮತ್ತು ಇ | |
ಆ ಮತ್ತು ಈ | |
ಆ ಮತ್ತು ಇ | |
ಇ ಮತ್ತು ಈ |
Question 3 |
3. ಈ ಕೆಳಗಿನವುಗಳಲ್ಲಿ ಸರಿಯಾಗಿ ಹೊಂದಾಣಿಕೆಯಾಗದ ಎರಡು ಜೋಡಿಗಳನ್ನು ಗುರುತಿಸಿ
ಅ. ಕೇಂದ್ರ ಪಟ್ಟಿ-ನಗರಪಾಲಿಕೆ ಆಡಳಿತ
ಆ. ಭಾರತದ ರಾಷ್ಟ್ರಪತಿ-ಭಾರತದ ತ್ರಿಸೇನೆಯ ಪರಮೋಚ್ಛ ದಂಡನಾಯಕ
ಇ. ರಾಜ್ಯ ಪಟ್ಟಿ- ಭಾರತದ ಸೇನೆ
ಈ. ಭಾರತದ ಉಪ ರಾಷ್ಟ್ರಪತಿ-ರಾಜ್ಯಸಭೆಯ ಸಭಾಪತಿ
ಅ ಮತ್ತು ಈ | |
ಆ ಮತ್ತು ಇ | |
ಅ ಮತ್ತು ಇ | |
ಇ ಮತ್ತು ಈ |
Question 4 |
4. ಭಾರತವನ್ನು ಸಂಸದೀಯ ಪ್ರಜಾಪ್ರಭುತ್ವ ಎಂದು ಕರೆಯಲಾಗುತ್ತದೆ ಏಕೆಂದರೆ?
ಅ. ಭಾರತವು ಬ್ರಿಟಿಷ್ ಸಂವಿಧಾನದಿಂದ ತನ್ನ ಸಂವಿಧಾನವನ್ನು ಎರವಲು ಪಡೆದಿದೆ
ಆ. ಮಂತ್ರಿ ಮಂಡಲವು ಸಂಸತ್ತಿಗೆ ಜವಾಬ್ದಾರಿಯಾಗಿದೆ
ಇ. ಭಾರತವು ಬ್ರಿಟಿಷ್ ಸಾಮ್ರಾಜ್ಯದ ಅಂಗವಾಗಿದ್ದು ಕಾಮನ್ವೆಲ್ತ್ ದೇಶವಾಗಿದೆ
ಈ. ಭಾರತದಲ್ಲಿ ಸಂಸತ್ತು ಶಾಸನದ ಪರಮೋಚ್ಛ ಅಧಿಕಾರವನ್ನು ಹೊಂದಿದೆ
ಸರಿಯಾದ ಎರಡು ಕಾರಣಗಳನ್ನು ಗುರುತಿಸಿ:
ಅ ಮತ್ತು ಇ | |
ಆ ಮತ್ತು ಈ | |
ಅ ಮತ್ತು ಆ | |
ಇ ಮತ್ತು ಈ |
Question 5 |
5. “ಭಾರತದ ಸಂವಿಧಾನವು ಕಠಿಣ (Rigid) ಸ್ವಭಾವದ್ದಾಗಿದೆ”-ಈ ಹೇಳಿಕೆಯಲ್ಲಿ ಕಠಿಣ/ಗಡಸುತನಕ್ಕೆ ಎರಡು ಮುಖ್ಯ ಕಾರಣಗಳನ್ನು ಗುರುತಿಸಿ
ಅ. ಸಂವಿಧಾನ ರಚನೆಯ ಸಂದರ್ಭದಲ್ಲಿ ಗಡಸು ವಿಧಾನಗಳನ್ನು ಅಳವಡಿಸಿಕೊಂಡಿದ್ದರಿಂದ
ಆ. ಸಂವಿಧಾನವು ಸುಮಾರು 65 ವರ್ಷಗಳಷ್ಟು ಹಳೆಯದಾಗಿದೆ
ಇ. ಸಂವಿಧಾನ ತಿದ್ದುಪಡಿಯ ವಿಧಾನ ಕಠಿಣವಾಗಿದೆ
ಈ. ಸಂವಿಧಾನವು ದೀರ್ಘವೂ ಸವಿವರವೂ ಆಗಿದೆ
ಅ ಮತ್ತು ಆ | |
ಇ ಮತ್ತು ಈ | |
ಅ ಮತ್ತು ಇ | |
ಆ ಮತ್ತು ಈ |
Question 6 |
6. ಈ ಕೆಳಗಿನವುಗಳಲ್ಲಿ ಸರಿಯಾಗಿ ಹೊಂದಾಣಿಕೆ ಇಲ್ಲದ್ದು ಯಾವುದು?
ವ್ಯಾಸ ಮಹರ್ಷಿ – ಮಹಾಭಾರತ | |
ಚೋಳರು – ತಂಜಾವೂರು | |
ಅಶೋಕ – ಮಸ್ಕಿ | |
ಆರ್ಯಭಟ – ಹರ್ಷವರ್ಧನ |
Question 7 |
7. ಈ ಕೆಳಗಿನವುಗಳಲ್ಲಿ ಸರಿಯಾಗಿ ಹೊಂದಾಣಿಕೆ ಇರುವುದನ್ನು ಗುರುತಿಸಿ
ಆರ್ಯ ಸಮಾಜ – ರಾಮಕೃಷ್ಣ ಪರಮಹಂಸ | |
ಹರಪ್ಪ – ಸರ್ ಜಾನ್ ಮರ್ಷಲ್ | |
ಇಂಗ್ಲೀಷ್ ಮಾಧ್ಯಮ – ಮೆಕಾಲೆ | |
ಉಪನಿಷತ್ತುಗಳು – ಮ್ಯಾಕ್ಸ್ ಮುಲ್ಲರ್ |
Question 8 |
8. ಭಾರತದ ಸಂವಿಧಾನದ 370 ನೇ ವಿಧಿ ಯಾವ ರಾಜ್ಯಕ್ಕೆ ಸಂಬಂಧಿಸಿದ್ದಾಗಿದೆ?
ಜಮ್ಮು ಮತ್ತು ಕಾಶ್ಮೀರ | |
ತೆಲಂಗಾಣ | |
ಅರುಣಾಚಲ ಪ್ರದೇಶ | |
ಲಕ್ಷದ್ವೀಪ |
Question 9 |
9. ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರನ್ನು ನೇಮಕ ಮಾಡುವವರು ಯಾರು?
ಭಾರತದ ಸಂಸತ್ತು | |
ಭಾರತದ ಬಾರ್ ಕೌನ್ಸಿಲ್ | |
ಭಾರತದ ರಾಷ್ಟ್ರಪತಿ | |
ಕೇಂದ್ರ ಸರ್ಕಾರದ ಸಂಪುಟ |
Question 10 |
10. ಭಾರತದ ರಾಷ್ಟ್ರಪತಿಗಳ ಚುನಾವಣೆಯ ವಿಧಿಗಳನ್ನು ತಿದ್ದುಪಡಿ ಮಾಡಲು ಈ ವಿಧಾನವನ್ನು ಅನುಸರಿಸಲಾಗುತ್ತದೆ
ಲೋಕಸಭೆಯ ಸರಳ ಬಹುಮತದ ಮೂಲಕ | |
ಎರಡೂ ಸದನಗಳಲ್ಲಿ ಸರಳ ಬಹುಮತದ ಮೂಲಕ | |
ಎರಡೂ ಸದನಗಳಲ್ಲಿ 2/3 ಬಹುಮತದ ಮೂಲಕ | |
ಎರಡೂ ಸದನಗಳಲ್ಲಿ 2/3 ಬಹುಮತ ಮತ್ತು ಅರ್ಧಕ್ಕಿಂತ ಹೆಚ್ಚಿನ ರಾಜ್ಯಗಳ ಶಾಸನ ಸಭೆಗಳಲ್ಲಿ ಬಹುಮತದ ಮೂಲಕ |
ಎರಡೂ ಸದನಗಳಲ್ಲಿ 2/3 ಬಹುಮತದ ಮೂಲಕ
well knowladge
Super