ಪಿಡಿಓ ಮತ್ತು ಕಾರ್ಯದರ್ಶಿ ಸೇರಿ ಸುಮಾರು 1400ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವುದೆಂದು ತಿಳಿದು ಬಂದಿದೆ. ಕನ್ನಡದ ಮೊದಲ ಅಂತರ್ಜಾಲ ಆಧಾರಿತ ಸ್ಪರ್ಧಾತ್ಮಕ ಪರೀಕ್ಷ ತಾಣವಾಗಿರುವ ಕರುನಾಡು ಎಗ್ಸಾಂ ತಂಡ ಪಿಡಿಓ ಆಕಾಂಕ್ಷಿಗಳಿಗೆ ಅತ್ಯುತ್ತಮ ಗುಣಮಟ್ಟದ ಹಾಗೂ ಪರೀಕ್ಷೆಯಲ್ಲಿ ನಿರೀಕ್ಷಿಸಬಹುದಾದ ಪ್ರಶ್ನೋತ್ತರಗಳನ್ನು ಇಂದಿನಿಂದ ವೆಬ್ ಸೈಟ್ ನಲ್ಲಿ ಪ್ರಕಟಗೊಳ್ಳುಸುತ್ತಿದೆ.

ಗ್ರಾ ಪಂ ಅ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಕ್ವಿಜ್-9

Question 1

1. ಗ್ರಾಮ ಪಂಚಾಯತಿಯ ಯಾವುದೇ ಅಧ್ಯಕ್ಷ, ಉಪಾಧ್ಯಕ್ಷ ಅಥವಾ ಸದಸ್ಯನನ್ನು ತೆಗೆದು ಹಾಕಲಾದ ಸಂದರ್ಭದಲ್ಲಿ ಆತನು ಯಾವುದೇ ಪಂಚಾಯತ್ ಮುಂದಿನ ಎಷ್ಟು ವರ್ಷಗಳವರೆಗೆ ಸ್ಪರ್ಧಿಸಲು ಅನರ್ಹನಾಗಿರುತ್ತಾನೆ?

A
ನಾಲ್ಕು
B
ಐದು
C
ಆರು
D
ಹತ್ತು
Question 1 Explanation: 
ಆರು:

ಪಂಚಾಯತ್ ರಾಜ್ ಅಧಿನಿಯಮ 2015ರ ತಿದ್ದುಪಡಿಯ ಪ್ರಕಾರ 43ಎ ಪ್ರಕರಣಕ್ಕೆ ತಿದ್ದುಪಡಿ ತರಲಾಗಿ ಮುಂದಿನವುಗಳನ್ನು ಸೇರಿಸಿ ಸದಸ್ಯರನ್ನು ತೆಗೆದುಹಾಕಬಹುದಾಗಿದೆ. (I) ತನ್ನ ಕರ್ತವ್ಯಗಳನ್ನು ನಿರ್ವಹಿಸುವಾಗ ದುರ್ನಡತೆಯ ಅಥವಾ ತಲೆ ತಗ್ಗಿಸುವ ನಡೆತೆಯ ತಪ್ಪಿತಸ್ಥನಾಗಿದ್ದಾಗ (II) ಜಿಲ್ಲಾ ವೈದ್ಯಾಧಿಕಾರಿಯು ಪ್ರಮಾಣಿಕರಿಸಬಹುದಾದಂತೆ ಆ ಹುದ್ದೆಯನ್ನು ಹೊಂದಲು ವೈದ್ಯಕೀಯವಾಗಿ ಅಸಮರ್ಥನಾದ ಸಂದರ್ಭದಲ್ಲಿ (III) ದಿವಾಳಿ ಅಥವಾ ಅಸ್ವಸ್ಥಚಿತ್ತದವನಾದ ಸಂದರ್ಭದಲ್ಲಿ (IV) ಒಂದಾದ ಮೇಲೊಂದರಂತೆ ನಾಲ್ಕು ಸಭೆಗಳಿಗೆ ಗೈರುಹಾಜರಾದ ಸಂದರ್ಭದಲ್ಲಿ (V) ಮತ್ತು ಗ್ರಾಮ ಪಂಚಾಯತಿ ಕಾಮಗಾರಿಗಳಲ್ಲಿ ಆತ ಪಾಲುದಾರನಾದಾಗ ತೆಗೆದುಹಾಕಬಹುದಾಗಿದೆ (ಗಮನಿಸಿ: ಮೇಲಿನ ಅಂಶಗಳನ್ನು ಸರಿಯಾಗಿ ಓದಿಕೊಳ್ಳುವುದು). ಈ ರೀತಿ ಅರ್ನಹಗೊಂಡ ಯಾವುದೇ ಅಧ್ಯಕ್ಷ, ಉಪಾಧ್ಯಕ್ಷ ಅಥವಾ ಸದಸ್ಯನು ಅಧಿನಿಯಮದ 12ನೇ ಪ್ರಕರಣದಲ್ಲಿ ಹೇಳಿರುವಂತೆ ಯಾವುದೇ ಪಂಚಾಯತ್ ಗೆ ಮುಂದಿನ ಆರು ವರ್ಷಗಳವರೆಗೆ ಚುನಾವಣೆಗೆ ಸ್ಪರ್ಧಿಸಲು ಅನರ್ಹನಾಗಿರುತ್ತಾನೆ.

Question 2

2. ಗ್ರಾಮ ಪಂಚಾಯತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯ ಉದ್ದೇಶಕ್ಕಾಗಿ ಕರೆಯಲಾದ ಸಭೆಯು ಕೋರಂ ಇಲ್ಲದ ಕಾರಣ ಮುಂದಾಡಲಾಗಿದ್ದು, ಮುಂದೂಡಿದ ಎರಡನೇ ದಿನದಲ್ಲಿ ______?

A
ಕೋರಂ ಇದ್ದರೆ ಮಾತ್ರ ಚುನಾವಣೆ ನಡೆಸಬೇಕು
B
ಕೋರಂ ಸಿಗುವ ತನಕ ಮುಂದೂಡಬೇಕು
C
ಚುನಾವಣೆ ನಡೆಸಬಹುದು, ಇದಕ್ಕೆ ಕೋರಂ ಅಗತ್ಯವಿಲ್ಲ
D
ಜಿಲ್ಲಾಧಿಕಾರಿಗಳ ತೀರ್ಪಿಗೆ ಬದ್ದರಾಗಿರತಕ್ಕದ್ದು
Question 2 Explanation: 
ಚುನಾವಣೆ ನಡೆಸಬಹುದು, ಇದಕ್ಕೆ ಕೋರಂ ಅಗತ್ಯವಿಲ್ಲ:

ಪ್ರಕರಣ 53ರಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯ ಉದ್ದೇಶಕ್ಕಾಗಿ ಕರೆದ ಯಾವುದೇ ಸಭೆಯಲ್ಲಿ ಸಭೆಗೆ ಗೊತ್ತುಪಡಿಸಿದ ಸಮಯದಲ್ಲಿ ಕೋರಂ ಇಲ್ಲದಿದ್ದರೆ, ಅಧ್ಯಕ್ಷತೆ ವಹಿಸುವ ವ್ಯಕ್ತಿಯು ಮೂವತ್ತು ನಿಮಿಷಗಳ ತನಕ ಕಾಯತಕ್ಕದ್ದು ಮತ್ತು ಅಂಥ ಸಮಯದಲ್ಲಿ ಕೋರಂ ಇಲ್ಲದಿದ್ದರೆ, ಸಾರ್ವಜನಿಕ ರಜೆ ದಿನ ಅಲ್ಲದ ಕೆಲಸದ ದಿನದಂದು ಅಂಥ ಸಮಯಕ್ಕೇ ಸಭೆಯನ್ನು ಆತನು/ಆಕೆಯ ಮುಂದೂಡಬಹುದು ಮತ್ತು ಮುಂದೂಡಿದ ಎರಡನೇ ದಿನವೂ ಕೋರಂ ಇರದಿದ್ದರೆ, ಚುನಾವಣೆಯನ್ನು ನಡೆಸತಕ್ಕದ್ದು, ಇದಕ್ಕೆ ಕೋರಂ ಅಗತ್ಯ ಇರತಕ್ಕದ್ದಲ್ಲ.

Question 3

3. ಈ ಕೆಳಗಿನವುಗಳಲ್ಲಿ ಸರಿಯಾಗಿ ಹೊಂದಾಣಿಕೆಯಾಗದಿರುವುದನ್ನು ಗುರುತಿಸಿ:

A

ಪ್ರಕರಣ 58ಬಿ- ಮಾನವ ಘನತೆಗೆ ಕಳಂಕ ತರುವ ಪದ್ದತಿಗಳನ್ನು ಪ್ರತಿಬಂಧಿಸುವುದು ನಿಷೇಧಿಸುವುದು

B

ಪ್ರಕರಣ 58ಸಿ- ಜೀತ ಪದ್ದತಿಯನ್ನು ನಿರ್ಮೂಲನೆಗೊಳಿಸುವುದು

C

ಪ್ರಕರಣ 58ಡಿ- ಗ್ರಾಮ ಪಂಚಾಯತಿ ಸ್ವತ್ತನ್ನು ಪುನಃ ಸ್ವಾಧೀನ ಪಡೆಯುವುದು

D

ಪ್ರಕರಣ 58ಎಫ್- ಅಪಾಯಕಾರಿ ಕಲ್ಲುಗಣಿಕಾರಿಕೆ ನಿಷೇಧ

Question 3 Explanation: 
ಪ್ರಕರಣ 58ಸಿ- ಜೀತ ಪದ್ದತಿಯನ್ನು ನಿರ್ಮೂಲನೆಗೊಳಿಸುವುದು:

ಮೂಲ ಅಧಿನಿಯಮದ ಪ್ರಕರಣ 58ಕ್ಕೆ ತಿದ್ದುಪಡಿ ತಂದು ಪ್ರಕರಣ 58ರಡಿ ಹೊಸದಾಗಿ 58ಬಿ, 58ಸಿ, 58ಡಿ, 58ಇ ಮತ್ತು 58ಎಫ್ ಪ್ರಕರಣಗಳನ್ನು ಹೊಸದಾಗಿ ಸೇರಿಸಲಾಗಿದೆ. ಮೂಲ ಅಧಿನಿಯಮದ ಪ್ರಕರಣ 58-ಎ ಜೀತಗಾರಿಕೆ ಪದ್ದತಿ ಸಂಬಂಧ ವರದಿ ಸಲ್ಲಿಸುವುದು ಗ್ರಾಮ ಪಂಚಾಯತಿಯ ಕರ್ತವ್ಯವಾಗಿರುತ್ತದೆ. 58ಬಿ ಮಾನವ ಘನತೆಗೆ ಕಳಂಕ ತರುವ ಪಾರಂಪರಿಕ, ಸಾಮಾಜಿಕ ಮತ್ತು ಧಾರ್ಮಿಕ ಪದ್ದತಿಗಳನ್ನು ಪ್ರತಿಬಂಧಿಸುವುದು ಗ್ರಾಮ ಪಂಚಾಯತಿಯ ಕರ್ತವ್ಯ. 58ಸಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ಆಗದಂತೆ ತಡೆಯುವುದು ಗ್ರಾಮಪಂಚಾಯತಿ ಕರ್ತವ್ಯ. 58ಡಿ ಕಂದಾಯ ಭೂಮಿಯನ್ನು ಹೊರತುಪಡಿಸಿ ಒತ್ತುವರಿ ಮಾಡಿಕೊಂಡ ಗ್ರಾಮಪಂಚಾಯತಿ ಸ್ವತ್ತನ್ನು ಪುನಃ ಸ್ವಾಧೀನ ಪಡೆಯುವುದು ಪಂಚಾಯತಿ ಕರ್ತವ್ಯ. 58 ಎಫ್ ಅಪಾಯಕಾರಿ ಕಲ್ಲು ಗಣಿಗಾರಿಕೆ, ಕೊಳವೆ ಬಾವಿಗಳನ್ನು,ತೆರೆದ ಬಾವಿಗಳನ್ನು ತೋಡುವುದು ಮತ್ತು ಹೊಂಡಗಳನ್ನು ನಿರ್ಮಿಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾದರೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳುವುದು ಪಂಚಾಯತಿ ಕರ್ತವ್ಯ. [ಗಮನಿಸಿ ಈ ಮೇಲಿನ ಪ್ರಕರಣಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು]

Question 4

4. ಈ ಕೆಳಗಿನ ಯಾವ ಪ್ರಕರಣದಡಿ ಸ್ವಚ್ಚ ಪರಿಸರವನ್ನು ಕಾಪಾಡುವುದು ಗ್ರಾಮ ಪಂಚಾಯತಿಯ ಕರ್ತವ್ಯ ಆಗಿದೆ?

A
ಪ್ರಕರಣ 48
B
ಪ್ರಕರಣ 58ಇ
C
ಪ್ರಕರಣ 60ಎ
D
ಪ್ರಕರಣ 58ಎಫ್
Question 4 Explanation: 
ಪ್ರಕರಣ 58ಇ:

ಪ್ರಕರಣ 58ಇ ಅನ್ನು ಹೊಸದಾಗಿ ಸೇರ್ಪಡೆಗೊಳಿಸಲಾಗಿದೆ. ಸ್ವಚ್ಚ ಪರಿಸರವನ್ನು ಕಾಪಾಡುವುದು ಗ್ರಾಮ ಪಂಚಾಯತಿಯ ಪ್ರಮುಖ ಕರ್ತವ್ಯವಾಗಿದೆ. ಸ್ವಚ್ಚ ಪರಿಸರ ಕಾಪಾಡುವ ಸಲುವಾಗಿ ಬಯಲು ಬಹಿರ್ದೆಸೆ ಮುಕ್ತಗೊಳಿಸಿ ಮತ್ತು ತ್ಯಾಜ್ಯ ಮುಕ್ತವಾದ ಸ್ವಚ್ಚ ಪರಿಸರವನ್ನು ಉಂಟುಮಾಡುವುದು ಪಂಚಾಯತಿ ಕರ್ತವ್ಯವಾಗಿದೆ.

Question 5

5. ಗ್ರಾಮ ಪಂಚಾಯತಿಯಲ್ಲಿ ಯಾವುದೇ ಕಾಮಗಾರಿಗಳ ನಿರ್ವಹಣೆ ಅಥವಾ ಸರಕು ಅಥವಾ ಸೇವೆಗಳ ನಿರ್ವಹಣೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯ ಪಾರದರ್ಶಕತೆ ಅಧಿನಿಯಮ________ರ ಉಪಬಂಧಗಳೊಂದಿಗೆ ಅನುಸಾರವಾಗಿರತಕ್ಕದ್ದು?

A
1967
B
1973
C
1999
D
2001
Question 5 Explanation: 
1999:

ಪಂಚಾಯತ್ ಅಧಿನಿಯಮ 60ಕ್ಕೆ ತಿದ್ದುಪಡಿ ತರಲಾಗಿದ್ದು 60ಎ ಮತ್ತು 60ಬಿ ಪ್ರಕರಣಗಳನ್ನು ಸೇರ್ಪಡೆಗೊಳಿಸಲಾಗಿದೆ. ಪ್ರಕರಣ 60ಎ ಪ್ರಕಾರ ಗ್ರಾಮ ಪಂಚಾಯತಿಯಲ್ಲಿ ಯಾವುದೇ ಕಾಮಗಾರಿಗಳ ನಿರ್ವಹಣೆ ಅಥವಾ ಸರಕು ಅಥವಾ ಸೇವೆಗಳ ನಿರ್ವಹಣೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯ ಪಾರದರ್ಶಕತೆ ಅಧಿನಿಯಮ 1999ರ ಉಪಬಂಧಗಳೊಂದಿಗೆ ಅನುಸಾರವಾಗಿರತಕ್ಕದ್ದು.

Question 6

6. ಗ್ರಾಮ ಪಂಚಾಯತ್ ಸದಸ್ಯರ ಕರ್ತವ್ಯಗಳು ಮತ್ತು ಜವಾಬ್ದಾರಿಯನ್ನು ಪಂಚಾಯತ್ ರಾಜ್ ಅಧಿನಿಯಮದ ಯಾವ ಅಧ್ಯಾಯನದಡಿ ಉಲ್ಲೇಖಿಸಲಾಗಿದೆ?

A
ಅಧ್ಯಾಯ III
B
ಅಧ್ಯಾಯ IV
C
ಅಧ್ಯಾಯ IVಎ
D
ಅಧ್ಯಾಯ V
Question 6 Explanation: 
ಅಧ್ಯಾಯ IVಎ:

ಪಂಚಾಯತ್ ರಾಜ್ ಅಧಿನಿಯಮಕ್ಕೆ ಅಧ್ಯಾಯ IV ಕ್ಕೆ ತಿದ್ದುಪಡಿತರಲಾಗಿದ್ದು, ಅಧ್ಯಾಯ IVಎ ಸೇರ್ಪಡೆಗೊಳಿಸಲಾಗಿದೆ. ಇದರಡಿ ಗ್ರಾಮ ಪಂಚಾಯತ್ ಸದಸ್ಯರ ಕರ್ತವ್ಯಗಳು ಮತ್ತು ಜವಾಬ್ದಾರಿಯನ್ನು ವಿವರಿಸಲಾಗಿದೆ.

Question 7

7. ಗ್ರಾಮ ಪಂಚಾಯತಿಯಲ್ಲಿ ಪ್ರತಿ ಎಷ್ಟು ವರ್ಷಗಳಿಗೊಮ್ಮೆ ತೆರಿಗೆ ಪರಿಷ್ಕರಣೆಯನ್ನು ಮಾಡುವುದು ಕಡ್ಡಾಯ?

A
ಮೂರು ವರ್ಷ
B
ನಾಲ್ಕು ವರ್ಷ
C
ಐದು ವರ್ಷ
D
ಆರು ವರ್ಷ
Question 7 Explanation: 
ನಾಲ್ಕು ವರ್ಷ:

ಗ್ರಾಮ ಪಂಚಾಯತಿಯಲ್ಲಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ತೆರಿಗೆ ಪರಿಷ್ಕರಣೆಯನ್ನು ಮಾಡುವುದು ಕಡ್ಡಾಯವಾಗಿದೆ. ಪರಿಷ್ಕರಣೆ ಮೇಲೇ ಶೇ10% ತೆರಿಗೆಯನ್ನು ಹೆಚ್ಚಿಸಬಹುದು.

Question 8

8. ಯಾವುದೇ ವ್ಯಕ್ತಿ ಗ್ರಾಮ ಪಂಚಾಯತಿ ಪ್ರದೇಶದೊಳಗೆ ನಿಷೇಧಿತ ಕೆಲಸವನ್ನು ಮಾಡಿ ಸಾಬೀತಾದರೆ ಎಷ್ಟು ರೂ ವರೆಗೆ ಜುಲ್ಮಾನೆ ವಿಧಿಸುವುದು?

A
ರೂ 100
B
ರೂ 200
C
ರೂ 400
D
ರೂ 500
Question 8 Explanation: 
ರೂ 500:

ಪಂಚಾಯತ್ ರಾಜ್ ಪ್ರಕರಣ 110ರಡಿ ಗ್ರಾಮ ಪಂಚಾಯತಿಯಲ್ಲಿ ನಿಷೇಧಿತ ಕೆಲಸಗಳನ್ನು ಮಾಡಿ ಸಾಬೀತಾದರೆ ಮೂಲ ಅಧಿನಿಯಮದಲ್ಲಿ ರೂ 100 ದಂಡ ವಿಧಿಸಬಹುದಾಗಿತ್ತು. 2015ರಲ್ಲಿ ಈ ಪ್ರಕರಣಕ್ಕೆ ತಿದ್ದುಪಡಿ ತರಲಾಗಿದ್ದು, ಒಂದು ನೂರು ರೂಪಾಯಿ ಬದಲಿಗೆ ಗ್ರಾಮ ಪಂಚಾಯತಿಗೆ ರೂ ಐದು ನೂರು ರೂಪಾಯಿಗಳ ಆಡಳಿತಾತ್ಮಕ ವೆಚ್ಚವನ್ನು ಸಂದಾಯ ಮಾಡತಕ್ಕದ್ದು.

Question 9

9. ರಾಜ್ಯ ವಸತಿ ಯೋಜನೆಗಳಡಿ ಆಯ್ಕೆಯಾದ ಫಲಾನುಭವಿಗಳನ್ನು ಅನುಮೋದಿಸುವ ಜಾಗೃತಿ ಸಮಿತಿಯ ಅಧ್ಯಕ್ಷರು ಯಾರು?

A
ತಾಲ್ಲೂಕು ಪಂಚಾಯತಿ ಅಧ್ಯಕ್ಷರು
B
ಸ್ಥಳೀಯ ಶಾಸಕರು
C
ಜಿಲ್ಲಾ ಪಂಚಾಯತ್ ಅಧ್ಯಕ್ಷರು
D
ಕಾರ್ಯನಿರ್ವಹಣಾದಿಕಾರಿ
Question 9 Explanation: 
ಸ್ಥಳೀಯ ಶಾಸಕರು:

ಗಮನಿಸಿ: ರಾಜ್ಯ ಸರ್ಕಾರದ ವಸತಿ ಯೋಜನೆಗಳಡಿ ಗ್ರಾಮ ಪಂಚಾಯತಿ ಗ್ರಾಮ ಸಭೆಯಲ್ಲಿ ಆಯ್ಕೆಮಾಡಿದ ಫಲಾನುಭವಿಗಳನ್ನು ಜಾಗೃತಿ ಸಭೆಯಲ್ಲಿ ಅನುಮೋದನೆಗೆ ಮಂಡಿಸಲಾಗುವುದು. ಜಾಗೃತಿ ಸಭೆಯ ಅಧ್ಯಕ್ಷತೆಯನ್ನು ಆಯಾ ತಾಲ್ಲೂಕಿನ ಶಾಸಕರು ವಹಿಸಿರುತ್ತಾರೆ. ಫಲಾನುಭವಿ ಅನರ್ಹರೆಂದು ಸಮಿತಿಯ ಗಮನಕ್ಕೆ ಬಂದರೆ ಅಂತಹ ಫಲಾನುಭವಿಯನ್ನು ಜಾಗೃತಿ ಸಮಿತಿಯಲ್ಲಿ ತೆಗೆದುಹಾಕಬಹುದು ಆದರೆ ಹೊಸ ಫಲಾನುಭವಿಯನ್ನು ಸೇರಿಸುವ ಅಧಿಕಾರ ಸಮಿತಿಗೆ ಇಲ್ಲ.

Question 10

10. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ (MGNREGA) ವರ್ಷಕ್ಕೆ ಕನಿಷ್ಟ ಎಷ್ಟು ಸಾಮಾಜಿಕ ಲೆಕ್ಕ ತಪಾಸಣೆ ನಡೆಸಬೇಕು?

A
ಒಂದು
B
ಎರಡು
C
ಮೂರು
D
ನಾಲ್ಕು
Question 10 Explanation: 
ಎರಡು:

ಸಾಮಾಜಿಕ ಲೆಕ್ಕ ತಪಾಸಣೆಯನ್ನು MGNREGA ಕಾಯಿದೆ ಕಲಮು 17 ರಲ್ಲಿ ಉಲ್ಲೇಖಿಸಲಾಗಿದೆ. ಪ್ರತಿ ಗ್ರಾಮಪಂಚಾಯತಿಯಲ್ಲಿ ಪ್ರತಿ 6 ತಿಂಗಳಿಗೊಮ್ಮೆ ಕನಿಷ್ಟ ಒಂದು ಸಾಮಾಜಿಕ ಲೆಕ್ಕ ಪರಿಶೋಧನೆ ನಡೆಸುವುದು ಕಡ್ಡಾಯ. ಅಂದರೆ ವಾರ್ಷಿಕವಾಗಿ ಎರಡು ಸಾಮಾಜಿಕ ಲೆಕ್ಕ ತಪಾಸಣೆಯನ್ನು ನಡೆಸಬೇಕು. ಸಾಮಾಜಿಕ ಲೆಕ್ಕ ತಪಾಸಣೆಯಲ್ಲಿ ಯೋಜನೆಯಲ್ಲಿ ಆಗಿರುವ ಕಾಮಗಾರಿಗಳನ್ನು ಪರಿಶೀಲಿಸುವುದು ಮತ್ತು ಅವುಗಳ ಸಂಪೂರ್ಣ ವಿವರಣೆಯನ್ನು ಗ್ರಾಮ ಸಭೆಯಲ್ಲಿ ಓದಿ ಹೇಳಲಾಗುವುದು. ಇದರಿಂದ ಅನುಷ್ಟಾನದಲ್ಲಿ ಪಾರದರ್ಶಕತೆ ತರುವುದು ಉದ್ದೇಶವಾಗಿದೆ.

There are 10 questions to complete.

ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

 

19 Thoughts to “ಗ್ರಾ ಪಂ ಅ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಕ್ವಿಜ್-9”

  1. raghu

    Sir Pdo kwiZ 1 to 4 beku

    1. Karunaduexams

      Raghu 1-4 quizzes website allide..Website alli top alli Quiz section ge hogi PDO quiz mele click maadi yella quizzes sigutte

  2. vijay

    Sir quesation number 7have some confusion… its for 2year once…

    1. Karunaduexams

      No Vinay once in 4 years..it’s pakka

      1. raghav

        sir is this once in two years??

  3. krishna

    This is useful questions….

  4. ಸಂತೋಷ್ ಗೌಡರ

    ಧನ್ಯವಾದಗಳು ಸರ್

  5. Vishwa Sasimath

    Download madodu hege sir

    1. Anonymous

      Download madalu elli click Madi anta quiz admele ede nodi

  6. tkhimmarajaa

    thannks some very difacalt and analasice qns send me sir

  7. hareesh

    Good questions sir… Thnku

  8. Terige parishkarane 1 year bari

  9. raghu

    ya i got .. very usefull.. thank u sir

  10. Thipperudra. N c

    Super questions

  11. Chandru

    Thank you sir

Leave a Comment

This site uses Akismet to reduce spam. Learn how your comment data is processed.