ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 11, 2016
Question 1 |
1. ಕೇಂದ್ರ ಸಚಿವ ಸಂಪುಟವು “ಸರಕು ಮತ್ತು ಸೇವಾ ತೆರಿಗೆ ಮಂಡಳಿ”ಯನ್ನು ರಚನೆಗೆ ಒಪ್ಪಿಗೆ ಸೂಚಿಸಿದೆ. ಸಂವಿಧಾನದ ಯಾವ ಪರಿಚ್ಛೇದದಡಿ ಈ ಮಂಡಳಿ ರಚನೆಯಾಗಲಿದೆ?
278 | |
279ಎ | |
280 | |
281 |
ಕೇಂದ್ರ ಸಚಿವ ಸಂಪುಟವು ಸರಕು ಮತ್ತು ಸೇವಾ ತೆರಿಗೆ ಮಂಡಳಿ ರಚನೆಗೆ ಅನುಮೋದನೆ ನೀಡಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸರಕು ಮತ್ತು ಸೇವಾ ತೆರಿಗೆಗೆ ಜಾರಿಗೆ ಒಪ್ಪಿಗೆ ನೀಡಿದ ನಂತರ ಸಂಪುಟವು ಸರಕು ಮತ್ತು ಸೇವಾ ತೆರಿಗೆ ಮಂಡಳಿ ರಚನೆಗೆ ಸಹಮತ ವ್ಯಕ್ತಪಡಿಸಿದೆ. ಹೊಸ ತೆರಿಗೆ ನೀತಿ ಹೇಗೆ ಕಾರ್ಯ ನಿರ್ವಹಿಸುತ್ತದೆ, ಜಿಎಸ್’ಟಿ ತೆರಿಗೆ ದರ ಸೇರಿದಂತೆ ಬೇರೆ ಬೇರೆ ವಿಚಾರಗಳನ್ನು ನಿರ್ಧರಿಸುವ ಜವಾಬ್ದಾರಿ ಸರಕು ಮತ್ತು ಸೇವಾ ಮಂಡಳಿ (ಜಿಎಸ್ ಟಿ) ಮೇಲಿದೆ. ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಈ ಮಂಡಳಿಯ ನೇತೃತ್ವ ವಹಿಸಲಿದ್ದಾರೆ. ರಾಜ್ಯ ಕಂದಾಯ ಖಾತೆ ಸಚಿವ ಮತ್ತು ಹಣಕಾಸು ಸಚಿವರುಗಳನ್ನು ಈ ಮಂಡಳಿ ಒಳಗೊಂಡಿರಲಿದೆ. ಸಂವಿಧಾನದ 122ನೇ ತಿದ್ದುಪಡಿ ಮೂಲಕ ಹೊಸದಾಗಿ ಸೇರ್ಪಡೆಗೊಳಿಸಲಾಗಿರುವ ಪರಿಚ್ಛೇದ 279ಎ ಅಡಿಯಲ್ಲಿ ಈ ಮಂಡಳಿಯನ್ನು ಸ್ಥಾಪಿಸಲಾಗಿದೆ.
Question 2 |
2. 2016 ಯುಎಸ್ ಓಪನ್ ಟೂರ್ನಿಯ ಪುರುಷರ ಸಿಂಗಲ್ಸ್ ನಲ್ಲಿ ಪ್ರಶಸ್ತಿ ಗೆದ್ದವರು ಯಾರು?
ಸ್ಟಾನ್ ವಾವಿಂಕ್ರ | |
ನೊವಾಕ್ ಜೊಕೊವಿಕ್ | |
ರೋಜರ್ ಫೆಡರರ್ | |
ರಫೆಲ್ ನಡಾಲ್ |
ಸ್ವಿಸ್ ಆಟಗಾರ ಸ್ಟಾನ್ ವಾವ್ರಿಂಕಾ ಅವರು ಯುಎಸ್ ಓಪನ್ ಟೆನಿಸ್ ಪುರುಷರ ಫೈನಲ್ನಲ್ಲಿ ವಿಶ್ವದ ನಂಬರ್ ಒನ್ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಕ್ರನ್ನು ಮಣಿಸಿ ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಮೂರನೇ ಶ್ರೇಯಾಂಕದ ವಾವ್ರಿಂಕಾ ನೊವಾಕ್ರನ್ನು 6-7(1/7), 6-4, 7-5, 6-3 ಸೆಟ್ಗಳಿಂದ ಪರಾಭವಗೊಳಿಸಿ ತಮ್ಮ ಮೂರನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಪಡೆದರು. 1970ರಲ್ಲಿ 35 ವರ್ಷದ ಕೆನ್ ರೋಸ್ವಾಲ್ ನಂತರ ಪುರುಷರ ಫೈನಲ್ನಲ್ಲಿ ಈ ಪ್ರಶಸ್ತಿಗೆ ಪಾತ್ರರಾದ ಎರಡನೇ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ 31ರ ಹರೆಯದ ವಾವ್ರಿಂಕಾ ಪಾತ್ರರಾಗಿದ್ದಾರೆ.
Question 3 |
3. ಯಾವ ಎರಡು ದೇಶಗಳು ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಇತ್ತೀಚೆಗೆ “Joint Sea-2016” ನೌಕಾಭ್ಯಾಸವನ್ನು ಆರಂಭಿಸಿವೆ?
ಚೀನಾ ಮತ್ತು ರಷ್ಯಾ | |
ಜಪಾನ್ ಮತ್ತು ರಷ್ಯಾ | |
ಭಾರತ ಮತ್ತು ವಿಯಟ್ನಾಂ | |
ವಿಯಟ್ನಾಂ ಮತ್ತು ಜಪಾನ್ |
ಚೀನಾ ಮತ್ತು ರಷ್ಯಾ ದಕ್ಷಿಣ ಚೀನಾ ಸಮುದ್ರದಲ್ಲಿ ಜಂಟಿ ನೌಕಾಭ್ಯಾಸ “Joint Sea-2016” ಆರಂಭಿಸಿವೆ. ಉಭಯ ದೇಶಗಳ ನಡುವಿನ ಮೊದಲ ನೌಕಾಭ್ಯಾಸ ಇದಾಗಿದ್ದು, ಎರಡು ದೇಶಗಳ ಮಿಲಿಟರಿ ಮತ್ತು ರಾಜಕೀಯ ಸಂಬಂಧವನ್ನು ಬಲಗೊಳಿಸಲು ಇದು ವೇದಿಕೆಯಾಗಲಿದೆ ಎಂದು ಬಣ್ಣಿಸಲಾಗಿದೆ. ಎಂಟು ದಿನಗಳ ಕಾಲ ನಡೆಯಲಿರುವ Joint Sea-2016 ನೌಕಾಭ್ಯಾಸವು ದಕ್ಷಿಣ ಚೀನಾ ಸಮುದ್ರದ ಮೇಲೆ ಅಮೆರಿಕಾ ಶಕ್ತಿ ಕ್ರೋಢಿಕರಣ ಮಾಡುತ್ತಿರುವುದಕ್ಕೆ ಸೆಡ್ಡು ಹೊಡೆಯಲು ಆರಂಭಿಸಲಾಗಿದೆ ಎನ್ನಲಾಗಿದೆ./p>
Question 4 |
4. “ಮುರುಗಪ್ಪ ಗೋಲ್ಡ್ ಕಪ್” ಯಾವ ಕ್ರೀಡೆಗೆ ಸಂಬಂಧಿಸಿದೆ?
ಪುಟ್ಬಾಲ್ | |
ಕ್ರಿಕೆಟ್ | |
ಹಾಕಿ | |
ಗಾಲ್ಫ್ |
ಮುರುಗಪ್ಪ ಗೋಲ್ಡ್ ಕಪ್ ಹಾಕಿ ಕ್ರೀಡೆಗೆ ಸಂಬಂಧಿಸಿದ ಟೂರ್ನಿಯಾಗಿದೆ. ಇತ್ತೀಚೆಗೆ ನಡೆದ 90ನೇ ಅಖಿಲ ಭಾರತ ಮುರುಗಪ್ಪ ಗೋಲ್ಡ್ ಕಪ್ ನಲ್ಲಿ ರೈಲ್ವೇ ತಂಡ ಹಾಲಿ ಚಾಂಪಿಯನ್ ಇಂಡಿಯನ್ ಆಯಿಲ್ ಕಾರ್ಪೋರೇಷನ್ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.
Question 5 |
5. ಈ ಕೆಳಗಿನ ಯಾರು ರಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಷಾಟ್ಪುಟ್ ನಲ್ಲಿ ಬೆಳ್ಳಿ ಗೆಲ್ಲುವ ಮೂಲಕ ಪ್ಯಾರಾಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಭಾರತದ ಪ್ರಪ್ರಥಮ ಮಹಿಳೆ ಎಂಬ ದಾಖಲೆ ಬರೆದರು?
ದೀಪಾ ಮಲಿಕ್ | |
ಪೂಜಾ | |
ಕರಮ್ ಜ್ಯೋತಿ ದಲಲ್ | |
ಜ್ಯೋತಿ ಸಿಂಗ್ |
ರಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಷಾಟ್ಪುಟ್ ನಲ್ಲಿ ಬೆಳ್ಳಿ ಗೆಲ್ಲುವ ಮೂಲಕ ಭಾರತದ ದೀಪಾ ಮಲಿಕ್ ಇತಿಹಾಸ ನಿರ್ಮಿಸಿದ್ದಾರೆ. ಆ ಮೂಲಕ ದೀಪಾ ಮಲಿಕ್ ಪ್ಯಾರಾಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಭಾರತದ ಪ್ರಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರೊಂದಿಗೆ ರಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಪದಕಗಳ ಸಂಖ್ಯೆ ಮೂರಕ್ಕೇರಿದೆ. ಆರು ಪ್ರಯತ್ನಗಳಲ್ಲಿ 4.61 ಮೀಟರ್ ದೂರದ ಎಸೆತ ದೀಪಾ ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು. ಬಹರೈನ್ ನ ಫಾತಿಮಾ ನಿಧಾಮ್ ಚಿನ್ನ ಗೆದ್ದರೆ, ಗ್ರೀಸ್ ನ ದಿಮಿಟ್ರಾ ಕಂಚು ಪಡೆದರು.
Question 6 |
6. ಯಾವ ದೇಶದ ವೈದ್ಯರ ತಂಡ ವಿಶ್ವದಲ್ಲೇ ಮೊದಲ ಬಾರಿಗೆ ರೊಬೋಟ್ ಬಳಸಿ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ?
ಜಪಾನ್ | |
ಬ್ರಿಟನ್ | |
ಅಮೆರಿಕಾ | |
ಚೀನಾ |
ಬ್ರಿಟನ್ ವೈದ್ಯರ ತಂಡವೊಂದು ರೋಬೋಟ್ ಬಳಸುವ ಮೂಲಕ ಅತ್ಯಂತ ಕ್ಲಿಷ್ಟವಾದ ಕಣ್ಣಿನ ಸರ್ಜರಿಯನ್ನು ಯಶಸ್ವಿಯಾಗಿ ನಡೆಸಿದೆ. ಕಣ್ಣಿನ ಸರ್ಜರಿಯಲ್ಲಿ ರೋಬೋಟ್ ಬಳಕೆ ಮಾಡಿದ್ದು ವಿಶ್ವದಲ್ಲೇ ಇದೇ ಮೊದಲು. ವ್ಯಕ್ತಿಯೊಬ್ಬರ ಕಣ್ಣಿನ ಅಕ್ಷಿಪಟ (ರೆಟಿನಾ)ದಲ್ಲಿ ಪೊರೆ ಬೆಳೆಯಲು ಶುರುವಾಗಿತ್ತು. ಈ ಪೊರೆಯನ್ನು ರೆಟಿನಾವು ತನ್ನತ್ತ ಸೆಳೆದುಕೊಂಡಿದ್ದರಿಂದ ಅದು ಅಸಮ ರೂಪ ಪಡೆದುಕೊಂಡಿತ್ತು. ಈ ಪೊರೆಯು 1 ಮಿಲಿಮೀಟರ್ನ 100ನೇ ಒಂದು ಭಾಗದಷ್ಟು ತೆಳುವಾಗಿತ್ತು. ಈ ಪೊರೆಯನ್ನು ರೆಟಿನಾದಿಂದ ಬೇರ್ಪಡಿಸುವಾಗ, ರೆಟಿನಾಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕಿತ್ತು. ಇದುವರೆಗೆ ಲಭ್ಯವಿದ್ದ ತಂತ್ರಜ್ಞಾನದ ಅನ್ವಯ ಮೈಕ್ರೋಸ್ಕೋಪ್ನಲ್ಲಿ ಅಕ್ಷಿಪಟ ನೋಡಿಕೊಂಡು, ಲೇಸರ್ ಸ್ಕ್ಯಾನರ್ಗಳ ಮೂಲಕ ಶಸ್ತ್ರಚಿಕಿತ್ಸೆ ನಡೆಸಬೇಕಿತ್ತು. ಹೀಗೆ ಮಾಡುವಾಗ ನಾಡಿ ಬಡಿತದ ವೇಗವನ್ನು ಕಡಿಮೆ ಮಾಡಬೇಕಿತ್ತು. ಆದರೆ ಆಕ್ಸ್ಫರ್ಡ್ನಲ್ಲಿರುವ ಜಾನ್ ರ್ಯಾಡ್ಕ್ಲಿಫ್ ಆಸ್ಪತ್ರೆಯ ವೈದ್ಯರ ತಂಡ ರೋಬೋಟ್ ಅನ್ನು ಶಸ್ತ್ರಚಿಕಿತ್ಸೆಗಾಗಿ ಬಳಸಿಕೊಂಡು, ಈ ಸರ್ಜರಿಯನ್ನು ಸುಲಭವಾಗಿ ನಡೆಸಿದೆ.
Question 7 |
7. ಇತ್ತೀಚೆಗೆ ನಿಧನರಾದ “ರಾಮ್ ಸೇವಕ್ ಶ್ರೀವತ್ಸವ” ರವರು ಯಾವ ಕ್ಷೇತ್ರದಲ್ಲಿ ಪ್ರಸಿದ್ದರಾಗಿದ್ದರು?
ಕ್ರೀಡೆ | |
ಶಾಸ್ತ್ರೀಯ ಸಂಗೀತಾ | |
ಪ್ರತಿಕೋದ್ಯಮ | |
ಸಿನಿಮಾ |
ಹಿರಿಯ ಪತ್ರಕರ್ತ ರಾಮ್ ಸೇವಕ್ ಶ್ರೀವತ್ಸವ ರವರು ವಯೋಸಹಜ ಅನಾರೋಗ್ಯದಿಂದ ನಿಧನರಾದರು. ಶ್ರೀವತ್ಸವ ಅವರು ತಮ್ಮ 30 ವರ್ಷಗಳ ವೃತ್ತಿ ಜೀವನದಲ್ಲಿ ದಿನ್ಮಾನ್, ದೈನಿಕ್ ಜಾಗರಣ್, ನವಭಾರತ್ ಟೈಮ್ಸ್ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿದ್ದರು. 1991ರಲ್ಲಿ ಟೈಮ್ಸ್ ಗ್ರೂಫ್ ನಿಂದ ನಿವೃತ್ತಿ ಹೊಂದಿದ್ದರು. ಆ ನಂತರ ಸುಲಭ್ ಇಂಟರ್ನ್ಯಾಷನಲ್ ಜೊತೆಗೂಡಿ ಸುಲಭ್ ಪತ್ರಿಕೆ ಯನ್ನು ಹೊರತಂದಿದ್ದರು.
Question 8 |
8. ಭಾರತೀಯ ಕರಾವಳಿ ಭದ್ರತಾಪಡೆ ಇತ್ತೀಚೆಗೆ ಸುಧಾರಿತ ಕರಾವಳಿ ಗಸ್ತು ನೌಕೆ “ಸಾರಥಿ”ಯನ್ನು ಎಲ್ಲಿ ಸೇರ್ಪಡೆಗೊಳಿಸಿತು?
ಗೋವಾ | |
ಚೆನ್ನೈ | |
ಕೊಚ್ಚಿ | |
ಮುಂಬೈ |
ಸುಧಾರಿತ ಕರಾವಳಿ ಗಸ್ತು ನೌಕೆ “ಸಾರಥಿ”ಯನ್ನು ಭಾರತೀಯ ಕರಾವಳಿ ಭದ್ರತಾಪಡೆ ತನ್ನ ಕಾರ್ಯಾಚರಣೆಗೆ ಸೇರ್ಪಡೆಗೊಳಿಸಿದೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಗೋವಾದ ಗೋವಾ ಶಿಪ್ಯಾರ್ಡ್ ಲಿಮೆಟೆಡ್ ನಲ್ಲಿ ಇದಕ್ಕೆ ಚಾಲನೆ ನೀಡಿದರು. ಸಾರಥಿಯನ್ನು ಗೋವಾ ಶಿಪ್ಯಾರ್ಡ್ ಲಿಮೆಟೆಡ್ ವಿನ್ಯಾಸ ಹಾಗೂ ಅಭಿವೃದ್ದಿಪಡಿಸಿದೆ. 105 ಮೀಟರ್ ಉದ್ದವಿರುವ ಈ ನೌಕೆ ಗಸ್ತು ಹೊಸ ಪೀಳಿಗೆಯ ಆತ್ಯಾಧುನಿಕ ಮತ್ತು ಸುಧಾರಿತ ಗಸ್ತು ನೌಕೆಯಾಗಿದೆ.
Question 9 |
9. 2016 ಡುರಾಂಡ್ ಕಪ್ ಪುಟ್ಬಾಲ್ ಟೂರ್ನಮೆಂಟ್ ನಲ್ಲಿ ಪ್ರಶಸ್ತಿ ಗೆದ್ದ ತಂಡ _____?
ಆರ್ಮಿ ಗ್ರೀನ್ | |
ನೆರೊಕ ಪುಟ್ಬಾಲ್ ಕ್ಲಬ್ | |
ಐಜ್ವಾಲ್ ಪುಟ್ಬಾಲ್ ಕ್ಲಬ್ | |
ಡಿಎಸ್ ಕೆ ಶಿವಾಜಿಯನ್ಸ್ |
ಆರ್ಮಿ ಗ್ರೀನ್ ಪುಟ್ಬಾಲ್ ತಂಡ 2016 ಡುರಾಂಡ್ ಕಪ್ ಪುಟ್ಬಾಲ್ ಟೂರ್ನಮೆಂಟ್ ನಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಪೆನಾಲ್ಟಿ ಶೂಟೌಟ್ ನಲ್ಲಿ ನೆರೊಕ ಪುಟ್ಬಾಲ್ ಕ್ಲಬ್ ತಂಡವನ್ನು 6-5 ರಿಂದ ಸೋಲಿಸುವ ಮೂಲಕ ವಿಜೇತರಾಗಿ ಹೊರಹೊಮ್ಮಿತು.
Question 10 |
10. ಜಗತ್ತಿನ ಅತಿ ಉದ್ದದ ಬುಲೆಟ್ ರೈಲು ಸಂಪರ್ಕ ವ್ಯವಸ್ಥೆ ಹೊಂದಿರುವ ದೇಶ ಯಾವುದು?
ಜಪಾನ್ | |
ದಕ್ಷಿಣ ಕೊರಿಯಾ | |
ಚೀನಾ | |
ಸ್ವೀಡನ್ |
ದೇಶಾದ್ಯಂತ 20 ಸಾವಿರ ಕಿ.ಮೀ. ಬುಲೆಟ್ ರೈಲು ಸಂಪರ್ಕ ಜಾಲವನ್ನು ನಿರ್ಮಿಸುವ ಮೂಲಕ ಚೀನಾ ಜಗತ್ತಿನ ಅತಿ ಉದ್ದದ ಬುಲೆಟ್ ರೈಲು ಸಂಪರ್ಕ ವ್ಯವಸ್ಥೆ ಹೊಂದಿರುವ ರಾಷ್ಟ್ರವೆನಿಸಿದೆ.ಝೆಂಗ್ಜೋವ್ನಿಂದ ಕ್ಸುಜೋವ್ ಪ್ರಾಂತ್ಯದ ನಡುವೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗ ಇತ್ತೀಚೆಗೆ ಉದ್ಘಾಟನೆಯಾಗಿದೆ. ಈ ಮಾರ್ಗದಲ್ಲಿ ಗಂಟೆಗೆ 300 ಕಿ.ಮೀ ವೇಗದಲ್ಲಿ ಬುಲೆಟ್ ರೈಲು ಚಲಿಸುತ್ತಿದ್ದು ಪ್ರಯಾಣ ಸಮಯದಲ್ಲಿ ಅರ್ಧದಷ್ಟು ಉಳಿತಾಯವಾದಂತಾಗಿದೆ.
Comment
ಧನ್ಯವಾದಗಳು ಸರ್
Nice…